Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › mahesha ರವರ ಬ್ಲಾಗ್

ನನ್ನ ವೋಟು.

May 5, 2008 - 9:47am — mahesha

ನಮ್ ಪಜೀತಿ ದೇಶದಾಗೆ, ಎಲ್ಲಾದರಲ್ಲೂ ಎಡವಟ್ಟೋ ಎಡವಟ್ಟು.

ಮೊಂನೆ ಎಲೆಕ್ಕಶಂನಾಗೆ ವೋಟು ಹಾಕಕ್ಕೆ ಅಂತ ಗುರುತಿನ ಚೀಟಿ ಮಾಡಿಸಕ್ಕೆ ನಂಮೂರಿಗೆ ವೋದೆ. ನನ್ ತಂಮ ’ಅಂಣ ನಾನ್ ವೋಗಿ ನೋಡ್ ಬತ್ತೀನಿ, ನೀನ್ ಮನೆಲೇ ಇರು’ ಅಂದು ವೋದ. ಅವನು ಇದು ಮೊದಲನೇ ಸಲ ವೋಟು ಹಾಕಕ್ಕೆ ಇರೋದು.

ಹೋಗಿ ಬಂದು ಯೇಳ್ತಾನೆ... "ಅಂಣ ವೋಟಿನ್ ಲಿಸಿಟ್ಟನಲ್ಲಿ ನನ್ ಒಬ್ಬನದೇ ಯೆಸರು ಇರೋದು... ನಿಂದು, ಅಪ್ಪಂದು ಅಂಮಂದು ಯೆಸರೇ ಇಲ್ಲ.. ನನ್ ಯೆಸರಂನೂ ತಪ್ ತಪ್ಪ ಬರೆದವರೆ ನೋಡು" ಎಂದು ಗುರುತಿನ ಚೀಟಿ ತೋರಿಸಿದ.

ನನ್ ಗೆಳೆಯನ ಗುರುತಿನ ಚೀಟಿಯಾಗೆ ಲಿಂಗ = ಹೆಂಗಸು ಅಂತ ಆಗದೆ. ಅವನು ವೋಗಿ ’ಏನರೀ ಯಿಂಗಾ ಮಾಡದು.... ನಾನ್ ಈ ಚೀಟಿ ತೋರಿಸಿಕಂಡು ಯೆಂಗೆ ತಿರುಗಾಡಲಿ" ಅಂದನಂತೆ.. ಅದಕ್ಕೆ ಆ ಆಪೀಸರರು "ರೀ ಒಂದ್ ಅರಜಿ ಬರೆದು ಕೊಡಿ, ಒಂದು ತಿಂಗಳ ಒಳಗೆ ಸರಿಪಡಿಸಿತೀವಿ" ಅಂದರಂತೆ..

ಸರಿ ಇತ್ತ ನಾನು ನಮ್ ಅಪ್ಪಂಗೆ "ಅಪ್ಪೋ ಇದೇನ್ ಇದು.. ನಾನ್ ಯೆಂಗ್ ವೋಟ್ ಆಕಲಿ.. ಈ ದಪ" ಅಂದೆ.. ಅದಕ್ಕೆ ನಮ್ ತಂದೆ "ಲೇ, ಏನ್ ಆಗಕ್ಕಿಲ್ಲ ಸುಮ್ಮಕಿರು.. ವೋಟುಗಟ್ಟೆಗೆ ವೋದಾಗ ನಾನ್ ಯೇಳಿ ಆಕಸುತೀನಿ.." ಅಂದರು... ಅದೂ ದಿಟವೇ ಕಳೆದ ಸಲವೂ ನಾನ್ ನಮ್ ಅಪ್ಪನ ಜೊತೆ ವೋಗೇ ವೋಟಾಗಿದ್ದೂ.. ಅವರೊಂದು ಪಕಶಕ್ಕೆ ನಾನೊಂದು ಪಕಶಕ್ಕೆ, ನಮ್ ಅಂಮ ಇಂನೊಂದ ಪಕಶಕ್ಕೆ Smiling... ಆದರೆ ಗೆದ್ದುದು ನಾನ್ ವೋಟು ಆಕಿದೋರೇ! Smiling

ಈ ಸರತಿ.. ಯಾರಿಗೆ ವೋಟು ಆಕೋದು.. ಅಂನೋದು ನಂಗೆ ತಲೆ ನೋವು. ಬೀಜೀಪಿಗಂತೂ ಎಂದೂ ಆಕಕ್ಕಿಲ್ಲ.. ಮೊದಲೇ ತಮಿೞಂಮ ಜಯಜಯಲಲಿತಾ ಜೊತೆ ಸೇರಿದ್ದೋರು, ಯೇಳಕ್ಕಾಗಲ್ಲ ಮುಂದೂ ಸೇರಿಕಳ್ಳೊರು... ಮುಂದಿನ ಎಂಪಿ ಎಲೆಕ್ಕಶನ್ನಾಗೆ, ಜಯಲಲಿತಾ ಬೆಂಬಲದಿಂದ ಇವರು ಪಟ್ಟಕ್ಕೆ ಬಂದರೇ, ನಾವ್ ಗೋತಾ! ಅವರು ಕೋಮುವಾದಿ, ಆ ವಾದಿ, ಈ ವಾದಿ, ಇವೆಲ್ಲ ನಂಗೆ ಬೇಕಾಗಿಲ್ಲ.. ನಮ್ ಊರಾಗೆ ಈ ಪಕಶದಿಂದ ನಿಂತಿರೋ ವಯ್ಯನ ಯೆಸರೇ ಹಲವರು ಕೇಳೇ ಇಲ್ಲವಂತೇ!

ಇಂನು ಕಾಂಗರೆಸ್ಸು.. ಇವರಿಗೆ ಆಕಬೋದು... ಎಸ್‌.ಎಂ.ಕಿರಿಶಣ ಮತ್ತೆ ವಾಪಸ್ ಬಂದಿರೋದರಿಂದ ನಮ್ ಊರೋನೇ ಆಗಿರೋದರಿಂದ, ಕಾಂಗರೆಸ್ಸು ಬಂದರೆ, ನಮ್ ಊರಿಗೆ ಒಳ್ಳೇ ದುಡ್ಡು ಬತ್ತದೆ. ಆದರೂ.. ಇವರೂ ತಮಿಳಪ್ಪ ಕರುಣಾನಿದಿ ತಾಳಕ್ಕೆ ಕುಣಿಯೋ ಆಸಾಮಿಗಳೇ.. ಅಲ್ವ..! ಅದರೂ ಇವರು ತುಸು ವಾಸಿ.

ಇಂನು ನಮ್ ತೆನೆವೊತ್ತೆ ಹೆಂಗಸಿನ ಪಕಶ ಜಾತಿಇಲ್ಲದ ಗವುಡರ ದಳ. ಇದಕ್ಕೂ ಆಕಬೋದು... ಚಲುವರಾಯಸಾಮಿ ಚಂನಾಗೇ ರೋಡು ಗೀಡು ಮಾಡವರೆ.... ಆದರೂ.. ಇವರಿಗೆ ನಮ್ ಈ ಸಲ ಪುಲ್ ಮೆಜಾರಿಟಿ ಬತ್ತದಾ ಅಂತ ಅಯಿಬು...!!

ಇಂನು ಮಿಕ್ಕ ಆನೆ, ಸಯಿಕಲ್ಲು ಮುಂತಾದ ಪಕಶಗಳು .. ನೋಡಣ...

ಏನೇ ಆದರೂ, ಕಳೆದ ಸರತಿ ಅಂತ ಮತ್ತೆ ಎಡವಟ್ಟಿನ ಅಸೆಂಬಲಿ ಬಂದು, ಮತ್ತೆ ಸಂಮಿಶರ ಗಿಂಮಿಶರ ಅಂತ ಕಯ್ ಹಿಡಿದು, ಆಮೇಲೆ ಕಾಲ್ ಎಳೆಯೋದೆಲ್ಲ ಚಂದಾಕಿರಕ್ಕಿಲ್ಲ.. ಒಂದು ಪಕಶ ಬಂದು ಅಯಿದು ವರುಶ ಇರಲಪ್ಪ.. ದೇವ!

ಯಾರಿಗೆ ಬೇಕು ಈ ಹಾಳು ಎಲೆಕ್ಕಶನ್ ಗಲಾಟೆ!

Ornamental seperator
  • mahesha ರವರ ಬ್ಲಾಗ್
  • Login or register to post comments
  • 186 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 5, 2008 - 8:47pm — ವೈಭವ

ಉ: ನನ್ನ ವೋಟು.

ವೈಭವ's picture

ಮಾಯ್ಸ,

ಕೆಲವು ಸಂಗತಿಗಳು
--> ಕೆಲವು ದಿನಗಳ ಹಿಂದೆ ಡೆಕನ್ ಹೆರಾಲ್ಡಿನಲ್ಲಿ ಓದಿದ್ದೆ. ಈ ಜೆಡಿಎಸ್ಸಿನವರು ಬೆಂಗಳೂರಿನ ಈಜಿಪುರದಲ್ಲಿ ತಮಿಳಿನಲ್ಲಿ ಚುನಾವಣೆಯ ಪ್ರಚಾರ ಮಾಡಿದ್ದಾರೆಂದು ವರದಿಯಾಗಿದೆ.
--> ಈಗತಾನೆ ಟಿವಿ-೯ ನೋಡುತ್ತಿದ್ದೆ. ಚಿಕ್ಕಬಳ್ಳಾಪುರದ 'ಬಾಗೇಪಲ್ಲಿ'ಯ ಚುನಾವಣ ಪ್ರಾಚಾರ ಕೂಟದಲ್ಲಿ ಬಿಜೆಪಿಯವರು (ವೆಂಕಯ್ಯನಾಯ್ಡು, ಸಾಯಿಕುಮಾರ್) ತೆಲುಗಿನಲ್ಲಿ ಬಾಶಣ ಮಾಡುವುದನ್ನ ಟಿವಿ-೯ ರವರು ವಿಡಿಯೊ ಸಮೇತ ತೋರಿಸಿದರು.

ಇನ್ನು ಕಾಂಗ್ರೆಸ್ ನ ದರಮ್ ಸಿಂಗ್ ಕನ್ನಡಕ್ಕಿಂತ ಉರ್ದು/ಹಿಂದಿಯ ಬಕುತ. ಇನ್ನು ಇವ್ರಿಂದ ಕನ್ನಡ ಏಳಿಗೆಯಾಗುತ್ತಾ???

ಯಾರಗಪ್ಪ ವೋಟ್ ಹಾಕೋದು.?? ಕನ್ನಡಕ್ಕೆ ದುಡಿಯುವ ಪಕುಶಗಳನ್ನು ಹುಡ್ಕುದ್ರು ಸಿಗ್ತಾಯಿಲ್ಲ. Sad

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಝೆನ್ ಕತೆ ೧೪ ಪ್ರತಿ ಕ್ಷಣ ಝೆನ್
  • ಗುರುತಿನ ಚೀಟಿ-ಝೆನ್ ಕಥೆ
  • ಒಲವು ಬೆಸುಗೆ ಬಾಳು
  • ಅವಳ ಪ್ರೀತಿ......... ಅವಳದೇ ರೀತಿ......
  • ಮಿನ್ನೋಲೆ.ಸಂಪದ.ನೆಟ್
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಘೃತಮುಮಂ ತೈಲಮುಮಂ
  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 17, 2008 - 2:00pm
  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 19 ಅತಿಥಿಗಳು ಆನ್ಲೈನ್ ಇರುವರು.

ಸೂರ್ಯನ ಎಳೆಬಿಸಿಲಿನಲ್ಲಿ ಬದುಕಿರಿ, ಸಮುದ್ರವನ್ನೇ ಈಜಿರಿ, ಕಾನನದ ತಂಗಾಳಿಯನ್ನು ಸೇವಿಸಿರಿ...

— ಎಮರ್ಸನ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator