ವ್ಯಾಕರಣದಿಂದ ಬಯಸಿದ ಮುಕ್ತಿ ದೊರೆಯುವುದು
ವ್ಯಾಕರಣದಿನ್ ಆಕಾಂಕ್ಷಿಪ ಮುಕ್ತಿಯಕ್ಕುಂ ![]()
ಶಬ್ದಮಣಿದರ್ಪಣದ ಈ ಪದ್ಯ!
ವ್ಯಾಕರಣದಿಂದೆ ಪದಮಾ
ವ್ಯಾಕರಣದ ಪದದಿನರ್ಥಮರ್ಥದೆ ತತ್ವಾ|
ಲೋಕಂ ತತ್ವಾಲೋಕದಿ
ನಾಕಾಂಕ್ಷಿಪ ಮುಕ್ತಿಯಕ್ಕುಮಿದೆ ಬುಧರ್ಗೆ ಫಲಂ||
ವ್ಯಾಕರಣದಿಂದೆ ಪದಂ, ಆ ವ್ಯಾಕರಣದದ ಪದದಿನ್ ಅರ್ಥಂ, ಅರ್ಥದೆ ತತ್ವಾಲೋಕಂ( ತತ್ವ + ಆಲೋಕಂ ) , ತತ್ವಾಲೋಕದಿನ್ ಆಕಾಂಕ್ಷಿಪ ಮುಕ್ತಿ ಅಕ್ಕುಂ ಇದೆ ಬುಧರ್ಗೆ ಫಲಂ
ವ್ಯಾಕರಣದಿಂದ ಪದಸಿದ್ಧಿಯಾಗುವುದು, ಪದಸಿದ್ಧಿಯಿಂದ ಅರ್ಥಜ್ಞಾನ ಬರುವುದು. ಅರ್ಥಜ್ಞಾನದಿಂದ ತತ್ವವಿಚಾರ ತಿಳಿಯುವುದು. ತತ್ವಜ್ಞಾನದಿಂದ ಮುಕ್ತಿ ದೊರೆತುಕೊಳ್ಳಬಹುದು. !!
ಚೆನ್ನಾಗಿ ವ್ಯಾಕರಣ ಕಲಿತವರಿಗೆ ಮುಕ್ತಿ easy ಆಗಿ ಸಿಗುತ್ತಂತೆ!! ![]()

- mahesha ರವರ ಬ್ಲಾಗ್
- Login or register to post comments
- 315 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ವ್ಯಾಕರಣದಿಂದ ಬಯಸಿದ ಮುಕ್ತಿ ದೊರೆಯುವುದು
ಯಾವುದರಿಂದ ಮುಕುತಿ? ಯಾಕೆ? ಹೇಗೆ?
ಉ: ವ್ಯಾಕರಣದಿಂದ ಬಯಸಿದ ಮುಕ್ತಿ ದೊರೆಯುವುದು
ಒಳ್ಳೆಯ ಕೇಳ್ಮೆ !
ಇಲ್ಲಿ ಒಂದು ಸಂಗತಿ ಗಮಸಿಸಬೇಕು.
೧) ಶಬ್ದಮಣಿದರ್ಪಣದ ಕೇಶಿರಾಜ ಜಿನಿಗ. ಜಿನ-ದರುಮದಲ್ಲಿ ಮುಕುತಿ ಅಂದ್ರೆ ಏನೋ, ನಂಗಂತೂ ಗೊತ್ತಿಲ್ಲ.
೨) ಇಲ್ಲಿ "ಬಯಸಿದೆ ಮುಕುತಿ" ಎಂದು ಹೇಳಿದ್ದಾನೆ. ಹಾಗಂದ್ರೆ? ಅದೂ ಗೊತ್ತಿಲ್ಲ.
"ಬುರ್ಧಗೆ ಫಲಂ" ಅಂದ್ರೆ ಪಂಡಿತರು ಗೊಂದಲಗಳನ್ನು ತೀರಿಸಲು ವ್ಯಾಕರಣವನ್ನು ಬಳಸಬಹುದು ಎಂದಿರಬಹುದು!
ಒಟ್ಟಿನಲ್ಲಿ "ವ್ಯಾಕರಣದಿಂದ ಪದಜ್ಞಾನ, ಪದಜ್ಞಾನದಿಂದ ತತ್ವ/ವಿಚಾರ ಜ್ಞಾನ, ವಿಚಾರಜ್ಞಾನದಿಂದ ಮುಕುತಿ" ಅಂತ ನಿಟ್ಟೂರು ನಂಜಯ್ಯ ಬರೆದಿದ್ದಾರೆ.
- ಮಾಯ್ಸ !!
ಉ: ವ್ಯಾಕರಣದಿಂದ ಬಯಸಿದ ಮುಕ್ತಿ ದೊರೆಯುವುದು
ಗಮಸಿಸಬೇಕು. = ಗಮನಿಸಬೇಕು
- ಮಾಯ್ಸ !!
ಉ: ವ್ಯಾಕರಣದಿಂದ ಬಯಸಿದ ಮುಕ್ತಿ ದೊರೆಯುವುದು
ಸ್ವರ್ಗದಲ್ಲಿ ವ್ಯಾಕರಣ ಪಂಡಿತರೇ ತುಂಬಿರುತ್ತಾರೋ?

ಸಂಪದಿಗರು ವ್ಯಾಕರಣಪ್ರಿಯರು-ಮುಕ್ತಿ ಸಿಗುತ್ತೆ ಎಲ್ಲರಿಗೂ.
*ಅಶೋಕ್
ಉ: ವ್ಯಾಕರಣದಿಂದ ಬಯಸಿದ ಮುಕ್ತಿ ದೊರೆಯುವುದು
[quote ] ಸ್ವರ್ಗದಲ್ಲಿ ವ್ಯಾಕರಣ ಪಂಡಿತರೇ ತುಂಬಿರುತ್ತಾರೋ?
ಸಂಪದಿಗರು ವ್ಯಾಕರಣಪ್ರಿಯರು-ಮುಕ್ತಿ ಸಿಗುತ್ತೆ ಎಲ್ಲರಿಗೂ.
*ಅಶೋಕ್
ಅಯ್ಯೋ ಅಶೋಕರೆ, ಮೊದಲ ವೈಯಾಕರಣಿ ಪಾಣಿನಿಯನ್ನು ಸಿಂಹ ಕೊಂದು ತಿಂದಿತಂತೆ! ಸದ್ಯದ ಸಂಪದದ ವ್ಯಾಕರಣಪ್ರಿಯರಿಗೆ ಆ ಸ್ಥಿತಿ ಬರುವುದಿಲ್ಲ ಸದ್ಯ! ಏಕೆಂದರೆ, ಇರುವ ಮೂರು ಮತ್ತೊಂದು ಸಿಂಹಗಳೆಲ್ಲ ಗುಜರಾತಿನ ಗಿರ್ ನಲ್ಲಿವೆ
-ಹಂಸಾನಂದಿ