ನಾವು ಬುಧ್ಧಿವಂತಿಕೆಯನ್ನು ನಮ್ಮ ದೇವರಾಗಿಸಿಕೊಳ್ಳಬಾರದು; ಬುಧ್ಧಿವಂತಿಕೆಗೆ ಶಕ್ತಿಶಾಲಿ ಸ್ನಾಯುಗಳಿರ ಬಹುದು, ಆದರೆ ಯಾವುದೇ ವ್ಯಕ್ತಿತ್ವವಿಲ್ಲ.

— ಅಲ್‌ಬರ್ಟ್ ಐನ್‌ಸ್ಟೀನ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಪಾಕಿಸ್ತಾನಿ

ನೆನ್ನೆ ನಾನು ಮತ್ತು ನನ್ನ ಗೆಳೆಯನೊಬ್ಬ ಇಲ್ಲಿರುವ ಸರ್‍ಕಿಟ್ ಸಿಟಿಗೆ ಅವನಿಗೆ ಲ್ಯಾಪ್ಟಾಪ್ ಖರೀದಿಸಿಲು ಹೋಗಿದ್ದೆವು. ಹೋಗುವಾಗ ನಮಗೆ ನಮ್ಮ ಪರಿಚಯದೊಬ್ಬರು ಅಲ್ಲಿಯ ತನಕ ಡ್ರಾಪ್ ಇತ್ತರು. ಇಲ್ಲಿ ಸಂಜೆಯ ಮೇಲೆ ೪ಡಿಗ್ರಿಯ ವರೆಗೂ ಚಳಿ.

ಲ್ಯಾಪ್ಟಾಪನ್ನು ಕೊಂಡು ಮರಳಲು ನಮಗೆ ಎರಡು ಬಸ್ಸುಗಳನ್ನು ಹಿಡಿಯಬೇಕಿತ್ತು ಹಾಗು ನಮಗಷ್ಟು ಸರಿಯಾಗಿ ಯಾವ ಯಾವ ಸ್ಟಾಪುಗಳಲ್ಲಿ ಇಳಿಯಬೇಕೆಂದು ತಿಳಿದಿರಲಿಲ್ಲ. ಮರುಳುವಾಗ ನಮ್ಮ ಹಾದಿಯ ಕಡೆಗೆ ನಿಂತಿದ್ದ ಒಂದು ಬಸ್ಸನ್ನು ಹತ್ತಿದೆವು. ನಮಗೆ ಅದು ನಾವು ಇಳಿಯಬೇಕಿದ್ದ ಸ್ಟಾಪಲ್ಲಿ ನಿಲ್ಲುವುದೇ ಎಂಬ ಸಂಶಯವಿತ್ತು. ಆದರೆ ನಾನು ಹಲವು ಸರತಿ ಬಸ್ಸಲ್ಲಿ ಭೇಟಿ ಮಾಡಿದ್ದ ಒಬ್ಬ ಹುಡುಗ ಲಕ್ಕಿಲಿ ಕೂತಿದ್ದ. ಅವನನ್ನು ನೋಡಿ ನನಗೆ ತುಸು ಸಂಶಯ ಕಡಮೆಯಾಯಿತು. ನನ್ನನ್ನು ಕಂಡು ಆತ ಗ್ರೀಟ್ ಮಾಡಿದ.

ಬಸ್ಸಲ್ಲಿ ಕೂತು ಇಬ್ಬರಿಗೆ ತೆರಬೇಕಿದ್ದ ಮೂರುವರೆ ಡಾಲರ್‍ ಚಿಲ್ಲರೆ ಇಲ್ಲದೇ ತಡಕಾಡುತ್ತಿದ್ದೆ. ನನ್ನ ಬಳಿ ಐದು ಡಾಲರ್‍ ಬಿಲ್ ಇತ್ತು. ಅವನು ನನಗೆ ಮೂರುವರೆ ಡಾಲರ್‍ ’ಕೊಟ್ಟು ಹೇಗು ಸಿಗ್ತೀವಲ್ಲ, ಕೊಡಿ’ ಎಂದ. ನನಗೆ ತುಸು ಅಚ್ಚರಿಯಾದರೂ ಸಮಯ ಸಂದರ್ಭದಿಂದ ಆ ದುಡ್ಡನ್ನು ಬಸ್ ಡ್ರೈವರ್‍ಗೆ ಕೊಟ್ಟು, ಅವನಿಗೆ ಐದು ಡಾಲರ್‍ರನ್ನು ಕೊಟ್ಟೆ. ಮೊದಲಿಗೆ ಬೇಡವೆಂದೂ ನನ್ನ ಒತ್ತಾಯಕ್ಕೆ ಈಸಿಕೊಂಡು, ಅವನು ಮರಳಿ ಒಂದು ಡಾಲರ್‍ ಕೊಟ್ಟು ’ನಿಮಗೆ ನಾನು ೫೦ ಸೆಂಟ್ಗಳನ್ನು ಆಮೇಲೆ ಕೊಡ್ತೀನಿ’ ಎಂದ. ಇಲ್ಲಿಯ ವರೆಗೂ ನನ್ನ ಗೆಳೆಯ ಅವನಿಗೆ ತ್ಯಾಂಕ್ಸ್ ಮೇಲೆ ತ್ಯಾಂಕ್ಸ್ ಹೇಳಿದ್ದ.

ನಡುವೆ ಮಾತಾಡುವಾಗ ಅವನು ಪಾಕಿಸ್ತಾನದವನು. ನಮ್ಮ ಸಮೀಪದಲ್ಲೇ ವಾಸವಾಗಿದ್ದಾನೆಯೆಂದು ತಿಳಿಯಿತು. ಅವನು ಪಾಕಿಸ್ತಾನಿಗ ಎಂದು ತಿಳಿದು ನನ್ನ ಗೆಳೆಯನ ಮುಖದಲ್ಲೇ ಬದಲಾವಣೆಯಾಗಿ ತೆಲುಗಲ್ಲಿ ’ವೀಡ್ತೋ ಏಂಟಿ. ಊರ್‍ಕೆ ಉಂಡು’(ಇವನ ಜತೆ ಏನು, ಸುಮ್ಮನಿರು) ಎಂದು ಗದರಿಸಿದ. ಅವನು ತಾನು ಇಲ್ಲಿ ಕೆಲಸವಿಲ್ಲದೆ ಇರುವುದಾಗಿ, ನಂಟಸ್ತನದ ಕಾರಣ ವೀಸಾದಿಂದ ಬಂದಿರುವುದಾಗಿ ಹೇಳಿಕೊಂಡ. ನನ್ನ ಜತೆ ಇವನು ಹಲವು ಸರತಿ ಹಿಂದೆ ಮಾತಾಡಿದ್ದ.

ನಮ್ಮ ಸ್ಟಾಪ್ ಬಂತು. ಮತ್ತೊಂದು ಬಸ್ ಹಿಡಿಯಬೇಕು. ಅದಕ್ಕೂ ಮೂರುವರೆ ಡಾಲರ್‍ ಬೇಕು. ನನ್ನ ಬಳಿ ಈಗ ಇಪ್ಪತ್ತು ಡಾಲರಿನ ಒಂದು ಬಿಲ್ ಇದೆ. ಅವನು ನನ್ನ ಸ್ಥಿತಿ-ನೋಡಿ ’ತಗೊಳ್ಳಿ ಈ ಐದು ಡಾಲರ್‍ರು. ಮುಂದಿನ ಸರತಿ ಈಯ್ಯಿರಿ’ ಎಂದ. ನಾನು ’ಇರಪ್ಪ ಬರ್‍ತೀನಿ’ ಎಂದು ಓಡಿ ಹೋಗಿ ಒಂದು ಮಫ್ಫಿನ್ ಕೊಂಡುಕೊಂಡು, ಅದರಿಂದ ಚಿಲ್ಲರೆ ಪಡೆದು ಅವನಿಗೆ ,ಚಿಲ್ಲರೆ ಸಿಕ್ಕಿತು ಪರವಾಗಿಲ್ಲ, ಎಂದೆ. ಬಸ್ ಬಂತು, ನಮ್ಮ ಸ್ಟಾಪು ಬಂತು, ನಾವಿಳಿದೆವು.

ನನ್ನ ಗೆಳಯ ’ಚೂಡು ದೊಂಗ ನಾ ಕೊಡಕ ಪಾಕಿಸ್ತಾನಿ. ..ಅಜಲದಲಕಜಲಕಸಜದಲ’ ( ನೋಡು, ಕಳ್ಳ ನನ್ ಮಗ ಪಾಕಿಸ್ತಾನಿ ) ಎಂದು ಪಾಕಿಸ್ತಾನವನ್ನು, ಪಾಕಿಸ್ತಾನಿಗಳನ್ನು ವಿವಿಧವಾಗಿ ಬೈದ. ನಾನು ಸುಮ್ಮನೆ ಕೇಳಿಸಿಕೊಂಡು ಮನೆಗೆ ಬಂದೆ.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಪಾಕಿಸ್ತಾನಿ

msudan86's picture

:)

ಉ: ಪಾಕಿಸ್ತಾನಿ

kalpana's picture

ಹೀಗೆ ಬಸ್ನಲ್ಲಿ, ಟ್ರೈನ್ನಲ್ಲಿ ಸುತ್ತುತ್ತಾ ಇರಿ, ವೆರೈಟಿ ಜನ ಪರಿಚಯ ಆಗ್ತಾರೆ :-) ಒಂದು ಮಾತು ಗಮನಿಸಿದ್ದೀರ? ಕನ್ನಡದವರು ಇಲ್ಲದ ಕಡೆ, ನಾರ್ತಿಗಳು ನಿಮ್ಮ ಪರಮ ಸ್ನೇಹಿತರಾಗುತ್ತಾರೆ. ಭಾರತೀಯರು ಇಲ್ಲದ ಕಡೆ ಪಾಕಿಗಳು, ಮತ್ತು ಇವರ್ಯಾರೂ ಇಲ್ಲದ ಕಡೆ ಬಿಳಿಯರು/ಕರಿಯರು ನಿಮಗೆ ಒಳ್ಳೆಯವರಾಗುತ್ತಾರೆ. ಒಟ್ಟಿನಲ್ಲಿ, ನಾವು ನಮ್ಮ "ಒಳಗಣ್ಣು" ತೆರೆದರೆ ಎಲ್ಲರೂ ಮಿತ್ರರೆ, ಇದು ತಿಳಿಗಣ್ಣರಿಗೆ ನಾನು ಹೇಳಿಕೊಡಬೇಕಾಗಿಲ್ಲ :-)

~ಕಲ್ಪನ

ಉ: ಪಾಕಿಸ್ತಾನಿ

anil.ramesh's picture

ಮಹೇಶ,
>>ಸರ್‍ಕಿಟ್ ಸಿಟಿ
ಅಮೆರಿಕದಲ್ಲಿ ಸರ್‍ಕಿಟ್ ಸಿಟಿ ತುಂಬಾ Famous ಅಲ್ವಾ?

ನಾನು ಕ್ಯಾಮೆರಾವನ್ನು ಅಲ್ಲಿಂದಲೇ ತರಿಸಿದ್ದು...

-ಅನಿಲ್.

--------------------------------------------------------
ಈ ಬ್ಲಾಗಿನಲ್ಲಿ ಸರ್‍ಕಿಟ್ ಸಿಟಿ ಬಗ್ಗೆ ಪ್ರಸ್ತಾಪ ಆಗಿರೋದ್ರಿಂದ ಈ ಕಮೆಂಟ್.

ಉ: ಪಾಕಿಸ್ತಾನಿ

hariharapurasridhar's picture

http://www.hariharap...
ಅಂತೂ ಮಹೇಶ್ ನಡೆದ ಘಟನೆಗಳನ್ನು ಯಥಾವತ್ತಾಗಿ ಬರೆದಿರುತ್ತಾರೆ. ಅವರ ಅಂತರ್ಯದಲ್ಲಿ ಏನಿದೆ, ಎಂಬುದನ್ನು ಬ್ರಹ್ಮನೇ ಬಲ್ಲ!

ಉ: ಪಾಕಿಸ್ತಾನಿ

hamsanandi's picture

Circuit City ಈಗ bancruptcy proceedings ನಲ್ಲಿದೆ

-ಹಂಸಾನಂದಿ
ಹರಿದಾಸ ಸಂಪದ:- http://haridasa.in/