ನಾಯಕ ಮತ್ತು ಖಳನಾಯಕ
ನನಗೆ ತುಂಬಾ ದಿನಗಳಿಂದ ಈ ನಾಟಕ, ಸಿನಿಮ, ಕಾವ್ಯ, ಕಾದಂಬರಿಯ ರಚನೆಯ ಒಳಹಿನ ಬಗ್ಗೆ ಕುತೂಹಲವಿತ್ತು. ಅದು ಹೇಗೆ ಅಷ್ಟು ಚನ್ನಾಗಿ ಕತೆಕಟ್ಟಿ, ಆ ಕತೆಯನ್ನು ವರ್ಣನೆ ಸನ್ನಿವೇಶಗಳಿಂದ ತುಂಬುವರು ಎಂಬ ಆಸಕ್ತಿಯ ಯೋಚನೆ ನನ್ನ ತಲೆ ಕೊರೆಯುತ್ತಿತ್ತು. ಅದಕ್ಕೆ ಸಂಬಂಧವಾಗಿ ನಾನು ಅನೇಕ ಸರತಿ ಹಲವು ಬಗೆಯ ಯೋಚನೆಗಳನ್ನು ನಡೆಸಿದ್ದೆ, ಏನೇನೋ ಹೊಳೆದಿದ್ದವು.
ಹೀಗೆ ಯೋಚಿಸಿಕೊಂಡು ನಾನು ಕೆಳಗಣ ಲಾಜಿಕ್ಕನ್ನು ಹಲ ಕತೆಗಳಿಗೆ ಬಳಸಿದೆ. ನನಗೇ ಸೋಜಿಗವಾಗುವ ಹಾಗೆ ಒಳ್ಳೆಯದು ಎಂದು ತಮಗೆ ಬೇಕಾದುದನ್ನೆಲ್ಲ ಹೇಳಿರುವುದು ಕಂಡುಬಂತು.
ನಮ್ಮಲ್ಲಿ ಬಹುಜನ ಆಕರ್‍ಷಕವಾದ ಕತೆಗಳಲ್ಲಿ ಸಾಮಾನ್ಯ ಒಬ್ಬ ನಾಯಕ ಮತ್ತು ಒಬ್ಬ ಖಳನಾಯಕನು, ಇಲ್ವೇ ಒಂದು ಕೂಳಗುಂಪು ಇದ್ದೇ ಇರುತ್ತದೆ. ಅದರಲ್ಲಿ ನಾಯಕ ಒಳ್ಳೆಯವನು ಎಂದು ತೋರಿಸಲು ಸಮಾಜದಲ್ಲಿ ಒಳ್ಳೆಯದು ಎಂದು ಗುರುತಿಸಲ್ಪಡುವ ಕೆಲಸಗಳನ್ನು ಅವನಿಂದ ನಡೆಸಲಾಗುವುದು. ಹಾಗೇ ಖಳನಾಯಕನನ್ನು ಕೆಟ್ಟವನು ಎಂದು ತೋರಲು ಅವನಿಂದ ಸಮಾಜದಲ್ಲಿ ಹೆಚ್ಚಿನ ಮಂದಿಯಿಂದ ಕೆಟ್ಟದ್ದು ಎಂದು ಹೇಳಲ್ಪಡುವ ಕೆಲಸಗಳನ್ನು ಮಾಡಿಸಲಾಗುವುದು. ಕೊನೆಗೆ ಒಳ್ಳೆಯವನಾದ ನಾಯಕ, ಕೆಟ್ಟವನಾದ ಖಳನಾಯಕನನ್ನು ಸೋಲಿಸಿ, ಸಾಯಿಸಿ, ಒಳ್ಳೆಯದಕ್ಕೇ ಜಯವೆಂದು ’ಒಳ್ಳೆಯದು’ ಯಾವುದೆಂದರೆ ನಾಯಕ ಆ ಕೃತಿಯಲ್ಲಿ ಮಾಡಿದ್ದು ಎಂದು ತೋರಿಸಲಾಗುವು. ಈ ಒಳ್ಳೆಯದು ಎಂಬುದನ್ನು ಮೊದಲೇ ಹೆಚ್ಚಿನವರು ಅನುಮೋದಿಸಿರುವುದರಿಂದ, ಅದನ್ನು ಅವರಿಗೆ ಆಪ್ಯಾಯಮಾನವಾಗುವುದು.
ಮಹಾಭಾರತದಲ್ಲಿ ನಾಯಕರಾದ ಪಾಂಡವರು, ಕೃಷ್ಣರ ನಾಯಕರ ’ಒಳ್ಳೆಯ’ ಸದ್ಗುಣಗಳನ್ನು ಕೌರವರ ಕ್ರೂರತನದಿಂದ ಮೆರಗುಗೊಳಿಸುವುದು. ದುಶ್ಯಾಸ ದ್ರೌಪದಿಯ ಸೀರೆ ಎಳೆದುದು, ದುರ್‍ಯೋಧನ ಆಕೆಗೆ ತನ್ನ ತೊಡೆ ತೋರಿಸುವುದು, ಮುಂತಾದವು ಕೊನೆಗೆ ಅವರನ್ನು ಪಾಂಡವರು ಕೊಂದುದಕ್ಕೆ ಸಮರ್‍ಥನೆಯಾಗುವುದು. ನಾಯಕರ ಪಾತ್ರಗಳ ಸದ್ಗುಣ ಸನ್ನಿವೇಶಗಳಿಗಿಂತ ಖಳನಾಯಕರ ದುರ್‍ಗುಣ ಸನ್ನಿವೇಶಗಳು ಹೆಚ್ಚಾಗಿ ಮತ್ತು ಬಹುಅಬ್ಬರವಾಗಿ ಇರುತ್ತದೆ.
ಗಜನಿ ಸಿನಿಮದಲ್ಲೂ ಖಳನಾಯಕನನ್ನು ಕಿಂಚಿತ್ತೂ ಮನುಶ್ಯತ್ವವೇ ಇಲ್ಲದೇ ಪರಮ ಕ್ರೂರಿಯನ್ನಾಗಿ ತೋರಿಸಿ, ಅದರ ಮುಖೇನ ನಾಯಕನು ಅವನನ್ನು ಸೇಡಿಗೆ ಕೊಲ್ಲುವುದು ಪರಮ ಸಾಧುಕಾರ್ಯವೆಂದೂ, ಸರಿಯೆಂದೂ ನಮಗೆ ಅನ್ನಿಸುವುದು.
ಇಂತಹ ಯಾವ ಕೃತಿಯಲ್ಲೂ ಖಳನಾಯಕನ ಅಬ್ಬರ ಕ್ರೂರವಿಲ್ಲದೇ ನಾಯಕನ ಯಾವ ಸದ್ಗುಣಕ್ಕೂ ಮೆರೆಗಿಲ್ಲ.
ಇದೇ ಲಾಜಿಕ್ಕನ್ನು ಬಳಸಿ ನಮ್ಮ ಸಮಾಜದಲ್ಲಿ ಕೆಲವರು ಬೇಕೆಂದೇ ತಮಗೆ ಬೇಕಾದ ’ಒಳ್ಳೆಯದು, ಸದ್ಗುಣ’ಗಳನ್ನು ಪ್ರಚಾರ ಮಾಡಲು ಅವರೇ ಕೆಲವು ಖಳನಾಯಕರನ್ನು ಬಿಟ್ಟಿರುತ್ತಾರೆ, ಹುಟ್ಟಿಸುತ್ತಾರೆ, ಇಲ್ಲವೇ ಒಬ್ಬನನ್ನು ಹಿಡಿದು ಅವನಿಗೆ ಖಳನ ಪಟ್ಟ ಕೊಡುತ್ತಾರೆ. ಈ ’ಖಳ’ ಎಂಬುದಿಲ್ಲದೇ ಪ್ರಚಾರ ಮಾಡಬೇಕಾದ ’ಸದ್ಗುಣ, ಧರ್ಮ, ನೀತಿ’ಗೆ ಉತ್ತೇಜನ, ಮೆರಗು, ಅಬ್ಬರವಿಲ್ಲ.
ಇದು ಒಂದು ಬಗೆಯಲ್ಲಿ ಕಪ್ಪು ಪರದೆಯ ಮೇಲೆ ಒಂದು ಬಿಳಿಚುಕ್ಕಿಯಿಟ್ಟು, ಬಿಳಿಚುಕ್ಕಿಯನ್ನು ಮೆರೆಸುವಂತೆ. ಆ ಬಿಳಿಚುಕ್ಕಿಯ ಮೆರಗಿಗಾಗೇ ಹಿಂದಣ ಮೊದಲು ಕಪ್ಪುಪರದೆಯನ್ನು ರಚಿಸಲಾಗಿ, ಬಳಿಕ ಅದಲ್ಲಿ ಬಿಳಿಚುಕ್ಕಿಯನ್ನು ತಂದು, ಬಿಳಿಚುಕ್ಕಿಯನ್ನು ಹೊಳೆಸಿದಂತೆ.
=========================================================================
ಏನೋ.. ನನಗೇ ಕೆಲವು ಸರತಿ ನನ್ನ ಯೋಚನೆಗಳೇ ಅರ್ಥವಾಗಲ್ಲ .. ಇನ್ನ ಇದನ್ನು ನಾನು ಬರೆದುದನ್ನು ಓದಿದವರಿಗೆ ಅದೆಷ್ಟು ತಿಳಿಯುವುದೋ.! ಒಳ್ಳೆಯದಿದು ಎಂದು ಜನರನ್ನು ಯಾಮಾರಿಸುವುದು ಸುಲಭ ಬಿಡಿ, ದಡ್ಡ ಮಂದಿ ನಾವು :)
- mahesha's blog
- Login or register to post comments
- 401 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ನಾಯಕ ಮತ್ತು ಖಳನಾಯಕ
ಏನ್ರಿ..I must reduce myself to zero ಅಂತ ಗಾಂಧಿಜಿ ತರ ನಿಮ್ಮ ಪ್ರೊಫೈಲಿನ ಚಿತ್ರದಿಂದ ಹೇಳ್ತಾ ಇದೀರ! :) ಇದು ನಿಮ್ಮ ಹೊಸ ವರುಷದ ರೆಸೊಲ್ಯೂಶನ್ನಾ ಹೇಗೆ? ತಮಾಷೆಗೆ ಕೇಳಿದ್ದು :)
ಉ: ನಾಯಕ ಮತ್ತು ಖಳನಾಯಕ
:)
ಉ: ನಾಯಕ ಮತ್ತು ಖಳನಾಯಕ
ರಾವಣನಿಲ್ಲದಿದ್ದಲ್ಲಿ ರಾಮನಿಗೂ, ಕಂಸನಿಲ್ಲದಿದ್ದಲ್ಲಿ ಕೃಷ್ಣನಿಗೂ, ಕೌರವರಿರಲಿಲ್ಲದಿದ್ದಲ್ಲಿ ಪಾಂಡವರಿಗೂ ಯಾವ ಘನತೆಯೂ ಇರುತ್ತಿರಲಿಲ್ಲ
ಬಹುಷ: ಬ್ರಿಟಿಷರಿಲ್ಲದಿದ್ದಲ್ಲಿ ಗಾಂಧೀಜಿಯವರ ಹೆಸರೂ ಕೇಳಿಬರುತ್ತಿರಲಿಲ್ಲವೇನೋ
ಒಳ್ಳೆಯ ಯೋಚನೆ ಮಹೇಶ್
ನಾನೂ ಕೆಲವೊಮ್ಮೆ ಹೀಗೆ ಯೋಚಿಸುತ್ತೇನೆ
ರೂಪ
ಉ: ನಾಯಕ ಮತ್ತು ಖಳನಾಯಕ
ಹೌದು. ಬ್ರಿಟಿಷರಿಂದಲೇ ಗಾಂಧಿ ಮಹಾತ್ಮರಾಗಿದ್ದು ಎಂಬ ನಿಮ್ಮ ಅಂಬೋಣ ಸಮಂಜಸ ಎನ್ನಿಸಬಹುದು.
ಉ: ನಾಯಕ ಮತ್ತು ಖಳನಾಯಕ
ಆದರೆ ನನ್ನನ್ನು ಹೆಚ್ಚು ಕಾಡುವುದು ವಾಮನಾವತಾರದ ಕತೆ. ಬಲಿ ಚಕ್ರವರ್ತಿ ಎಷ್ಟು ಒಳ್ಳೆಯ ರಾಜನಾಗಿದ್ದ ಎನ್ನುವುದಕ್ಕೆ ತುಳು ಪಾದ್ದನಗಳಲ್ಲಿ ಪುರಾವೆ ಸಿಗುತ್ತದೆ. ಆದರೆ ಬಲಿಯನ್ನು ಕೊಂದ ವಾಮನ ಅವತಾರಿ ವಿಷ್ಣು ಗೆ ಇಲ್ಲಿ ನಾಯಕ ಪಟ್ಟ.
ಉ: ನಾಯಕ ಮತ್ತು ಖಳನಾಯಕ
ನನಗೆ ತಿಳಿದಂತೆ ಬಲಿಯ ಕೊಲೆ ಆಗಲಿಲ್ಲ. ಬಲಿಯನ್ನು ವಿಷ್ಣು ಪಾತಾಳಕ್ಕೆ ದಬ್ಬುತ್ತಾನೆ- ಪಾತಾಳದ ಅರಸನನ್ನಾಗಿ ಮಾಡುತ್ತಾನೆ. ಸದಾ ಕಾಲ ಬಲಿಯ ದ್ವಾರಪಾಲಕನಾಗಿರುವುದಾಗಿಯೂ ವರ ಕೊಡುತ್ತಾನೆ (ಒಂದು ರೀತಿ house arrest :) ), ಮತ್ತು ಪ್ರತೀ ವರ್ಷವೂ ಭೂಮಿಗೆ ಬರಲು ಅವಕಾಶ ಕೊಡುತ್ತಾನೆ (parole). ಇದು ಬಲಿ ಸ್ವರ್ಗವೆಲ್ಲಾ ತನ್ನದಾಗಬೇಕೆಂದು ದುರಾಸೆಪಟ್ಟ ಫಲ. ಆದರೂ ಅವನು ಭೂಮಿಯಾಳಿದ ಬಗೆಗೆ ಮೆಚ್ಚಿ, ಅಮರತ್ವವನ್ನು ಕೊಡುತ್ತಾನೆ. (ತುಳುನಾಡಿನಲ್ಲಿ ಹೇಗೆ ಎಂದು ನನಗೆ ತಿಳಿದಿಲ್ಲ. ಆದರೆ ಇದು ನಾನು ಓದಿರುವ/ಕೇಳಿರುವ ಕಥೆ)
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ನಾಯಕ ಮತ್ತು ಖಳನಾಯಕ
ಬಲಿ ಒಬ್ಬ ಅಸುರ. ಅ’ಸುರ’ ಅಂದರೆ ಕೆಟ್ಟವನು. ಆಸುರೀಶಕ್ತಿ=ದುಷ್ಟಶಕ್ತಿ.
ದ್ರಾವಿಡನುಡಿಕಾರರಾದ(ಅನಾರ್ಯರು, ಅಸುರರು) ಕನ್ನಡಿಗರು, ತುಳುವರು, ಮಲಯಾಳಿಗಳಲ್ಲಿ ಇಂದಿಗೂ ಬಲೀಂದ್ರನ ಪೂಜೆ ಇದೆ. ಆದರೆ ಇದು ಉತ್ತರಿಂಡಿಯದಲ್ಲಿ ಇದ್ದ ಹಾಗೆ ಕಾಣಿಸದು
ಇಲ್ಲೂ ಬಲೀಂದ್ರನ ಪಾತ್ರದಿಂದ ಒಂದೆರಡು ಹೊಲಸೆನಿಸುವ ಕೆಲಸ ಮಾಡಿಸಿದರಾಯ್ತಲ್ಲ.. ಆಗ ವಾಮನನೇ ಧರ್‍ಮಸಂಸ್ಥಾಪಕ ತ್ರಿವಿಕ್ರಮ.! ( ಪುರಾಣಗಳಲೆಲ್ಲ ಆರ್ಯ ಜನಾಂಗದವರು ಅನಾರ್ಯ ಜನಾಂಗದವರಾದ ದ್ರಾವಿಡರು, ನಾಗರು, ಮುಂತಾದವರನ್ನು ಕೊಂದ ಕತೆಗಳೇ ತಾನೆ )
ಉ: ನಾಯಕ ಮತ್ತು ಖಳನಾಯಕ
:D
flame-bait ಗೆ ಪ್ರಯತ್ನ :p
ಪ್ರಹ್ಲಾದನ ಕಥೆ ಹೇಗೋ? ಅವನ ಕೈಲೂ ಸ್ವಲ್ಪ ಹೊಲಸು ಕೆಲಸ ಮಾಡಿಸ ಬಹುದಿತ್ತಲ್ಲ? ಹಾಗೇ ವಿಭೀಷಣ? ನಾಗರ ವಾಸುಕಿ, ಶೇಷನ ಪಾತ್ರಗಳು ಚೆನ್ನಾದ ಸ್ಥಾನದಲ್ಲೇ ಇದ್ದಾರಲ್ಲ?
ಹೋಗಲಿ ವರುಣ, ಭಾಗ ಮುಂತಾದ ಅಸುರರಿಗೆ ಹೇಗೆ ವೈದಿಕ ಆಚರಣೆಗಳಲ್ಲಿ ಸ್ಥಾನ ಇದೆ?
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ನಾಯಕ ಮತ್ತು ಖಳನಾಯಕ
ನಿಮ್ಮ ಪರವಾಗಿ ನಾನೇ ನಿರ್‍ವಾಹಕರ ಸೂಚನೆಗೆ ತಂದಿದ್ದೀನಿ. ’flame-bait ಗೆ ಪ್ರಯತ್ನ’ ಅವರ ವಿವೇಚನೆಗೆ ಬಿಟ್ಟಿದ್ದು.!