ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಸಂಪದ ಫೌಂಡೇಶನ್ನಿಗೆ ನೆರವಾಗಿ

ಸಂಪದ › Sampada Blogs › mahesha ರವರ ಬ್ಲಾಗ್

ಸಂಸ್ಕೃತವಿಲ್ಲದ ಕನ್ನಡ ಜಾಳು

April 5, 2007 - 1:09pm — mahesha

ಇಂದಿನ ವಿಜಯ ಕರ್ನಾಟಕದಲ್ಲಿ ಬಂದ ಸುದ್ದಿ. ನಮ್ಮ ಕಣ್ದೆರೆಯುವ ಮಾಹಿತಿ.

ಸಂಸ್ಕೃತವಿಲ್ಲದೆ ಕನ್ನಡ ಜಾಳು 

"
ಕಸ್ತೂರಿ ಕನ್ನಡದ ಕಸ್ತೂರಿ ಪರಿಮಳ ಸಂಸ್ಕೃತದಿಂದ.
ಕನ್ನಡದ ಆರ್ಪು, ಚೆಲುವು ಸಂಸ್ಕೃತದಿಂದ.
ಕನ್ನಡದಲ್ಲಿ ಒಳ್ಳೆಯದು ಏನಿದೇ, ಬಂದುದೆಲ್ಲ ಸಂಸ್ಕೃತದಿಂದ.
ಒಟ್ಟಿನಲ್ಲಿ ಕನ್ನಡ ಜಾಳು. ಸಂಸ್ಕೃತ ತಿರುಳು "

ಇದು ಅಲ್ಲಿರುವ ಒಟ್ಟು ಅನಿಸಿಕೆ.

~.~
  • mahesha ರವರ ಬ್ಲಾಗ್
  • Login or register to post comments
  • 1433 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 5, 2007 - 3:32pm — Sunil Jayaprakash

ಟಿ: ಸಂಸ್ಕೃತವಿಲ್ಲದ ಕನ್ನಡ ಜಾಳು

Sunil Jayaprakash's picture

ಕನ್ನಡ ಜಾಳೋ ಅಥವಾ ಹಾಗೆಂದು ತಿಳಿದುಕೊಂಡಿರುವ ಮನಸ್ಸುಗಳು ಜಾಳೋ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2007 - 3:39pm — mahesha

ಸಂಸ್ಕೃತದಿಂದಲೇ ಕನ್ನಡಕ್ಕೆ ಬಾಳು !:)

mahesha's picture

ಆ ದೊಡ್ಡತಲೆಗಳಂತೆ ಕನ್ನಡವನ್ನು ಬೆಳಸಲು ಸಂಸ್ಕೃತವನ್ನು ಉಳಿಸಲೇಏಏಏಏ ಬೇಕಂತೆ. Laughing out loud.
ಅಂದರೆ ಸಂಸ್ಕೃತ ಸತ್ತರೆ, ಕನ್ನಡವೂ ಬೆಳಯಲ್ಲ ಅಂತೆ Laughing out loud.
======
Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2007 - 7:20pm — sharathchandra

Re: ಸಂಸ್ಕೃತದಿಂದಲೇ ಕನ್ನಡಕ್ಕೆ ಬಾಳು !:)

sharathchandra's picture

yes,its right.samskritada adhyayana madiddaga matra idara sathyate gotthaguttade.kevala kannadakkaste alla ella dravida bhashegaligu samskritave moola.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2007 - 7:23pm — hpn

ಉ: ಸಂಸ್ಕೃತದಿಂದಲೇ ಕನ್ನಡಕ್ಕೆ ಬಾಳು!

hpn's picture

ದಯವಿಟ್ಟು ಕನ್ನಡದಲ್ಲಿ ಬರೆಯಿರಿ. ಕನ್ನಡದಲ್ಲಿ ಬರೆಯಲು ನಿಮಗೆ ಬೇಕಾದ ಸಹಾಯ ಪುಟಗಳು ಲಭ್ಯವಿದೆ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2007 - 10:50pm — Sunil Jayaprakash

ಕನ್ನಡಕ್ಕೆ ಸಂಬಂಧಪಟ್ಟ ಇಂದಿನ ಮೂರು ದುಃಖದ ಸುದ್ದಿಗಳು

Sunil Jayaprakash's picture

ಕನ್ನಡಕ್ಕೆ ನೇರವಾಗಿ ಸಂಬಂಧಪಟ್ಟಂತೆ ಇಂದು ಮೂರು ಸುದ್ಧಿ ಓದಲು ಸಿಕ್ಕಿತು. ಮೂರೂ ಕೂಡ ಬೇಸರ ತರಿಸಿದಂತಹವುಗಳೇ.

೧. ತೇಜಸ್ವಿಯವರ ಸಾವು. ತೇಜಸ್ವಿಯವರ ಬಗ್ಗೆ ಅಧಿಕಾರಯುತವಾಗಿ ಮಾತನಾಡುವ ವಿಷಯಗಳು ನನ್ನಲ್ಲಿ ಖಂಡಿತವಾಗಿಯೂ ಸದ್ಯಕ್ಕೆ ಇಲ್ಲ. ಆದರೆ ಅವರು ಬದುಕಿದ್ದಾಗ ಅವರ ಎಲ್ಲಾ ಬರಹಗಳನ್ನು ಓದಲಾಗಲಿಲ್ಲ ಎಂಬ ಕೊರಗು ಇನ್ನುಮುಂದೆ ಕಾಡಬಹುದು. ಆದರೆ ಗಟ್ಟಿಮನಸ್ಸು ಮಾಡಿದ್ದೇನೆ. ಕೊರಗಬಾರದು. ಕೊರಗೀ ಕೊರಗೀ ಬರೇ ಶೋಕಾಚರಣೆಯಲ್ಲಿಯೇ ಕಾಲ ಕಳೆದರೆ ಏನೂ ಸಾಧಿಸಿದಂತಾಗುವುದಿಲ್ಲ. ನಾನು ಕಳೆದ ವರ್ಷ ನನ್ನ ಕನ್ನಡದ ಓದಿನ್ನು ಕುರಿತು ಪಂಚವಾರ್ಷಿಕ ಯೋಜನೆಯೊಂದನ್ನು ಹಾಕಿಕೊಂಡಿದ್ದೆ. ಆ ಯೋಜನೆ ಪ್ರಕಾರ ನಾನು ಈ ತಿಂಗಳಿನಿಂದ ತೇಜಸ್ವಿಯವರ ಎಲ್ಲಾ ಬರಹಗಳನ್ನು ಓದಬೇಕಿತ್ತು.

೨. ಪ್ರಜಾವಾಣಿಯಲ್ಲಿನ ಒಂದು ಸುದ್ದಿ. ಈ ಸುದ್ದಿಯನ್ನು ಮುಖಪುಟದಲ್ಲಿ ಹಾಕುವ ಅಗತ್ಯ ಏನಿತ್ತು ಎಂದು ಇನ್ನೂ ನನಗೆ ಅರ್ಥವಾಗಿಲ್ಲ. ಕನ್ನಡ ಎಂಬುದನ್ನು ಕೇವಲ ನುಡಿ ಎಂದು ಬಗೆಯುವವರು ಈ ಸುದ್ದಿಯ ಸೈಡ್ ಎಫೆಕ್ಟುಗಳನ್ನು ಕುರಿತು ಯೋಚಿಸಿದರೆ ತಿಳಿಯುವುದು. ನಮ್ಮ ಪತ್ರಿಕೆಗಳ ಸೃಜನಶೀಲತೆಯನ್ನು ಮೆಚ್ಚಬೇಕಾದ್ದೇ.

೩. ಮೇಲಿನ ವಿ.ಕ.ದ ತಲೆಗೆಟ್ಟ ಸುದ್ಧಿ. ಸಾವಿರ ಬಾರಿ ಹೇಳಿದ್ದನ್ನೇ ಹೇಳಿದ ಮಾತ್ರಕ್ಕೆ ಸುಳ್ಳು ಸತ್ಯವಾಗುವುದಿಲ್ಲ. ಸಂಸ್ಕೃತ ಮತ್ತು ದ್ರಾವಿಡ ಭಾಷೆಯ ಯಾವುದಾದರೊಂದು ಭಾಷೆಯನ್ನು (ಕನ್ನಡವನ್ನೇ ತಿಳಿಯೋಣ) ಚೆನ್ನಾಗಿ ಅಭ್ಯಾಸ ಮಾಡಿದರೆ ಮೊದಲ ನೋಟಕ್ಕೇ ತಿಳಿಯುತ್ತದೆ. ಎರಡರ ಮೂಲಗಳು ಬೇರೆ ಬೇರೆ ಎಂಬುದಾಗಿ. ನನಗೆ ಕೆಲವೊಮ್ಮೆ ಅನಿಸುತ್ತದೆ, ಆಂಡಯ್ಯನ ಕಬ್ಬಿಗರ ಕಾವದಂತಹ ಕಾವ್ಯಗಳು ಟ್ರೆಂಡ್ ಸೆಟ್ಟರ್ ಆಗಬೇಕಿತ್ತು ಎಂಬುದಾಗಿ, ಆದರೆ ಆತನ ಉದ್ದೇಶ ಕನ್ನಡಿಗರ ಮೇಲಿನ ಅಪವಾದವನ್ನು ಹೋಗಲಾಡಿಸುವುದಷ್ಟೇ ಆಗಿತ್ತು. ಬಟ್, ಆದರೆ ಹಾರ್ಡ್ ಫಾಕ್ಟರ್ ಅವನೊಬ್ಬ ಜೈನನಾಗಿದ್ದ. ಬಹುಶಃ ವೈದಿಕನೊಬ್ಬ ಆ ಕಾಲಕ್ಕೆ ಕನ್ನಡದಲ್ಲಿ ಅಂತಹ ಕಾವ್ಯ ರಚಿಸಿದ್ದರೆ ಅದರ ಕಥೆಯೇ ಬೇರೆಯಾಗುತ್ತಿತ್ತೋ ಏನೋ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2007 - 10:24pm — ವೈಭವ

ಉ: ಕನ್ನಡದಿಂದಲೆ ಸಂಸ್ಕೃತದ ಬಾಳು

ವೈಭವ's picture

ಆದರೆ ನಿಜ ಏನು ಅಂದ್ರೆ ಕನ್ನಡದಿಂದಲೇ ಸಂಸ್ಕೃತ ಉಳಿದಿರೋದು. ಕನ್ನಡದಲ್ಲಿ ಸಂಸ್ಕೃತ ಪದಗಳನ್ನು ತುರುಕಿ ಅದನ್ನು ಉಳಿಸಲಾಗಿದೆ. 

so ಕನ್ನಡವಿಲ್ಲದೆ ಸಂಸ್ಕೃತ ಜಾಳೋ ಜಾಳು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2007 - 11:16pm — Sunil Jayaprakash

ಉ: ಇದಪ್ಪ ವರಸೆ

Sunil Jayaprakash's picture

"ಸಂಸ್ಕೃತವಿಲ್ಲದ ಕನ್ನಡ ಜಾಳು ಜಾಳು"

-- ಅಹಂಕಾರದ ಪರಮಾವಧಿ ಏಕೆಂದರೆ ಅಹಂಕಾರ ಪರಮಾವಧಿ ಎರಡೂ ಸಂಸ್ಕೃತ. ಕನ್ನಡಿಗರ ಕಾಪಿಗೆ(ಕನ್ನಡದ ಕಾಪು+ಇಗೆ ಕಣ್ರಪ್ಪಾ Eye-wink ) ಕಬ್ಬಿಗರ ಕಾವನ್ ಇದ್ದೇ ಇದೆ. ಕಾಪು = ರಕ್ಷಣೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2007 - 11:23pm — sharathchandra

Re:

sharathchandra's picture

ಆಂಡಯ್ಯನಂತಹ ಒಬ್ಬ ಕವಿಯ ಉದಾಹರಣೆಯನಿಟ್ಟುಕೊಂಡು ವಾದ ಮಾಡುವುದು ತಪ್ಪಾಗುತ್ತದೆ.ದ್ರಾವಿಡ ಭಾಷೆಗಳ ಮೇಲಿನ ಸಂಸ್ಕ್ರತದ ಪ್ರಭಾವ  Linguistics (ಭಾಷಾಶಾಸ್ತ್ರ)ದ ಅದ್ಯಯನ ಮಾಡಿರುವ ಎಲ್ಲರಿಗೂ ವಿದಿತ ಸಂಗತಿ.ಕುವೆಂಪು,ಬಿಎಂಶ್ರೀ,ಭ್ವೆರಪ್ಪ,ಎಲ್ಲರ ಅಭಿಪ್ರಾಯವೂ ಇದೆ.ಸಂಸ್ಕ್ರತದ ತಳಪಾಯವಿಲ್ಲದೆ,ಕನ್ನಡಾದಿ ಯಾವುದೇ ದ್ರಾವಿಡ ಭಾಷೆಗಳ ಕಟ್ಟಡ ನಿಲ್ಲಲು ಸಾದ್ಯವಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2007 - 11:33pm — hpn

ಸಂಸ್ಕೃತವಿಲ್ಲದ ಕನ್ನಡ ಜಾಳು

hpn's picture

ನಿಮ್ಮ ಮಾತು ಒಪ್ಪುವಂತಾದ್ದು. ಎಷ್ಟೊ ಪರ್ಯಾಯ ಪದಗಳಿಲ್ಲದ ಪದಗಳು ಸಂಸ್ಕೃತದಿಂದ ಬಂದದ್ದೆ.

ಒಟ್ಟಾರೆ ಯಾವುದು ಮೇಲು ಯಾವುದಿಲ್ಲದೆ ಯಾವುದಿಲ್ಲ ಎಂಬ ಡಿಬೇಟು ಯಾಕೆ ಎಂಬುದೇ ಅರ್ಥವಾಗೋದಿಲ್ಲ. ಭಾಷೆಯಲ್ಲಿರುವ ಪದಗಳು ಯಾವ ಭಾಷೆಯಿಂದ ಬಂದರೇನು 'ನಮ್ಮ ಭಾಷೆಯ ಪದ'ವೇ ಆಗುತ್ತದಷ್ಟೆ? ಹರಿಯಾಣದಿಂದ ಹಿರಿಯೂರಿಗೆ ವಲಸೆ ಬಂದು ಕನ್ನಡ ಕಲಿತವ, ದಿನನಿತ್ಯ ಕನ್ನಡ ಮಾತನಾಡುವವ ಕನ್ನಡಿಗನೇ ಅಗ್ತಾನೆ - ಹಾಗೆಯೇ ಸಂಸ್ಕೃತದ ಪದಗಳು ಕನ್ನಡಕ್ಕೆ ಬಂದ ಮೇಲೆ ಕನ್ನಡ ಪದಗಳೆ ಎಂಬುದು ನನ್ನ ಅಭಿಪ್ರಾಯ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2007 - 11:54pm — sharathchandra

ಕನ್ನಡಕ್ಕಾಗಿ ಸಂಸ್ಕ್ರತ!!!

sharathchandra's picture

ಬಹುಶಃ,ಇಂದಿನ ಕನ್ನಡ ಭಾಷೆಯ ಅಬದ್ಡ ಬಳಕೆಗೆ ಸಂಸ್ಕ್ರತದ ಜ್ನಾನವಿಲ್ಲದಿರುವುದೂ ಒಂದು ಕಾರಣ.ಸಂಸ್ಕ್ರತದ ಅದ್ಯಯನ ನಮ್ಮಲ್ಲಿ ಭಾಷೆಯ ಅರಿವನ್ನು ಹೆಚ್ಚಿಸುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 6, 2007 - 6:21am — bigerck

Re: ಕನ್ನಡಕ್ಕಾಗಿ ಸಂಸ್ಕ್ರತ!!!

bigerck's picture

ಉತ್ಪ್ರೆಕ್ಸೆ ಯಾರೇ ಮಡಿದ್ರು ಚೆನ್ನಾಗಿರಲ್ಲಾ.

ಇಲ್ಲಿ ದೊಡ್ಡವರು ಹೇಳೂ ಒಂದು ಮಾತು ನೆನಪಾತದೆ, ಬೇರೆಯವರ ಸಂಸ್ಕ್ರಿತಿ ಗೌರವಿಸು ಅದರೆ ನಿನ್ನ ಸಂಸ್ಕ್ರಿತಿ ಪಾಲಿಸು ಅಂತಾ.

ನಿಮ್ಮಯ ಚಂದ್ರಶೇಖರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 5, 2008 - 11:49am — kpbolumbu

ಉ: ಸಂಸ್ಕೃತವಿಲ್ಲದ ಕನ್ನಡ ಜಾಳು

kpbolumbu's picture

Quote:
ಸಂಸ್ಕೃತ ಪದಗಳು ಕನ್ನಡಕ್ಕೆ ಬಂದ ಮೇಲೆ ಕನ್ನಡ ಪದಗಳೇ ಎಂಬುದು ನನ್ನ ಅಭಿಪ್ರಾಯ

ಹರಿಯ ಮಾತನ್ನು ನಾನೂ ಒಪ್ಪುತ್ತೇನೆ.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 6, 2007 - 9:30am — ಸಂಗನಗೌಡ

ಇಂಗ್ಲೀಷ್ ಇಲ್ಲದ ಕನ್ನಡ ಎಮ್ಟಿ, ಎಮ್ಟಿ!!

ಸಂಗನಗೌಡ's picture

ಇನ್ನೊಂದು ನೂರು ವರ್ಷ ಆದ್ ಮೇಲೆ ಈ ಮಾತನ್ನ ಬಹುಶ ಎಲ್ಲರೂ ಒಪ್ಪೋಕೆ ಸುರು ಮಾಡ್‍ತಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 6, 2007 - 10:00am — hamsanandi

ಸಂಸ್ಕೃತ ವಿರೋಧ ಮತ್ತು ಕನ್ನಡ

hamsanandi's picture

ಸಂಪದ ಸಂಸ್ಕೃತ ವಿರೋದಿ ವೇದಿಕೆಯಾಗದಿರಲೆಂಬ ಆಶಯ ನನ್ನದು.

ಕನ್ನಡಕ್ಕೆ ಸಂಸ್ಕೃತ ಹಾಸುಹೊಕ್ಕಾಗಿ ಸೇರಿದೆ, ಅಂದ ಮಾತ್ರಕ್ಕೆ ಸಂಸ್ಕೃತ ಉಳಿದಿರುವುದು ಕನ್ನಡದಿಂದ ಎಂದೇನೂ ಅಲ್ಲ. ಭಾರತದ ಎಲ್ಲ ಪ್ರಮುಖ ಭಾಷೆಗಳೂ (ತಮಿಳು ಸಹಿತ) ಸಂಸ್ಕೃತದಿಂದ ಬೇರೆಬೇರೆ ಮಟ್ಟಗಳಲ್ಲಿ ಪ್ರಭಾವ ಹೊಂದಿಯೇ ಇವೆ.

ನಾವು ಕನ್ನಡ ಪರವಾಗಿರಲು ಸಂಸ್ಕೃತ ವಿರೋಧಿಯಾಗಬೇಕಾಗಿಲ್ಲ. ಕನ್ನಡದಲ್ಲಿ ದಿನನಿತ್ಯ ಉಪಯೋಗಿದುವ ಸಂಸ್ಕೃತ ಪದಗಳನ್ನು ಬಿಡಲೂಬೇಕಾಗಿಲ್ಲ Smiling

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 6, 2007 - 1:51pm — hpn

ಉ: ಸಂಪದ ಸಂಸ್ಕೃತ ವಿರೋಧಿಯಾಗದಿರುವುದು ಹೇಗೆ?

hpn's picture

ಸಂಸ್ಕೃತ ಬಲ್ಲವರು ಕೆಲವರು ಬಂದು ಇಲ್ಲಿ ಕಾಮೆಂಟ್ ಹಾಕಿದರೆ ಸಂಪದದಲ್ಲಿ ಸಂಪೂರ್ಣ ಸಂಸ್ಕೃತ ವಿರೋಧ ಕಾಣದು. ನನಗೆ ಕಂಡುಬಂದಂತೆ ಮೂರ್ನಾಲ್ಕು ಸದಸ್ಯರು ಕೆಲವು ತಿಂಗಳಿಂದ ಬರೇ ಇದರ ಬಗ್ಗೆಯೇ ಮಾತನಾಡುತ್ತ ಬಂದಿದ್ದಾರೆ. ಸಂಸ್ಕೃತ ಮೇಲೋ, ಕನ್ನಡ ಮೇಲೋ, "ಸಂಸ್ಕೃತವಿಲ್ಲದ ಕನ್ನಡ" - ಇವೆಲ್ಲ ಈಗಿನ ಸಮಯಕ್ಕೆ ಅಪ್ರಸ್ತುತವೆನಿಸುತ್ತದೆ.

ತಮಾಷೆಯೆಂದರೆ ಈ ಬಗ್ಗೆ ಹಿಂದೆಯೂ ಸಾಕಷ್ಟು ಬಾರಿ ವಾದ-ವಿವಾದಳ ಸರಣಿ ನಡೆದು ಕೊನೆಗೆ ಯಾವುದೂ ಎಲ್ಲಿಯೂ ಹೋಗದೆ ಮುಗಿದಿದೆ. Sticking out tongue
ಹಳ್ಳಿಯೊಂದರಲ್ಲಿ ಕನ್ನಡ ಬಳಸುತ್ತಿರುವವ ಸಂಸ್ಕೃತ ಎಷ್ಟರ ಮಟ್ಟಿಗೆ ಕನ್ನಡದಲ್ಲಿ ಹಾಸುಹೊಕ್ಕಾಗಿದೆ, ಎಷ್ಟಿದೆ ಎಂಬುದೆಲ್ಲ ತಲೆಕೆಡಿಸಿಕೊಳ್ಳುತ್ತಾನೆಯೆ?
ಏರ್ ಕಂಡೀಶನ್ಡ್ ಆಫೀಸಿನಲ್ಲಿ ಕಂಪ್ಯೂಟರ್ ಮುಂದೆ ಕುಳಿತ ನಮ್ಮೆಲ್ಲ ಟೆಕಿ ಓದುಗರಿಗೆ ಮಾತ್ರ ಈ ಬಗ್ಗೆ ಚಿಂತೆ ಮತ್ತು ತಲೆನೋವು.

ಚರ್ಚೆಗೆ ತಲೆಯ ಮೇಲೆ ಹಾದು ಹೋಗುವಷ್ಟು ವಿಷಯಗಳಿದ್ದಾಗಲೂ ಮತ್ತೆ ಮತ್ತೆ ಈ ಕನ್ನಡ-ಸಂಸ್ಕೃತ ವಾದ ವಿವಾದ ಸರಣಿಗಳು ಏಕೆ ತಲೆ ಎತ್ತುತ್ತವೆ ಎಂಬುದು ನಿಜಕ್ಕೂ ಅರ್ಥವಾಗದ ವಿಷಯ.
--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 6, 2007 - 4:18pm — Sunil Jayaprakash

ಟಿಪ್ಪಣಿ: ಸಂಪದ ಸಂಸ್ಕೃತ ವಿರೋಧಿಯಾಗದಿರುವುದು ಹೇಗೆ?

Sunil Jayaprakash's picture

ಸಂಸ್ಕೃತ ಬಲ್ಲವರು ಕೆಲವರು ಬಂದು ಇಲ್ಲಿ ಕಾಮೆಂಟ್ ಹಾಕಿದರೆ ಸಂಪದದಲ್ಲಿ ಸಂಪೂರ್ಣ ಸಂಸ್ಕೃತ ವಿರೋಧ ಕಾಣದು.

ಕನ್ನಡದಲ್ಲಿ ಕಾನ್ಸೆಪ್ಚುಯಲೈಸೇಷನ್ ಬಗ್ಗೆ ಬರೆದಾಗ, ಅದು ಸಂಸ್ಕೃತ ವಿರೋಧ ಎಂದು ಬಗೆಯುವುದಾದರೆ ಅದು ಅವರವರ ಪೂರ್ವಾಗ್ರಹ ಪೀಡಿತ ಮನಸ್ಸಿನ ಪ್ರತಿಬಿಂಬವಷ್ಟೇ ಹೊರತು ಬೇರೇನೂ ಅಲ್ಲ ಎಂದು ಈಗಾಗಲೇ ಹೇಳಿದ್ದೇನೆ. ಅಂದ ಹಾಗೆ ನಾನೇನೂ ಸಂಸ್ಕೃತ ಬರದವನಲ್ಲ.

ಹಳ್ಳಿಯೊಂದರಲ್ಲಿ ಕನ್ನಡ ಬಳಸುತ್ತಿರುವವ ಸಂಸ್ಕೃತ ಎಷ್ಟರ ಮಟ್ಟಿಗೆ ಕನ್ನಡದಲ್ಲಿ ಹಾಸುಹೊಕ್ಕಾಗಿದೆ, ಎಷ್ಟಿದೆ ಎಂಬುದೆಲ್ಲ ತಲೆಕೆಡಿಸಿಕೊಳ್ಳುತ್ತಾನೆಯೆ? ಏರ್ ಕಂಡೀಶನ್ಡ್ ಆಫೀಸಿನಲ್ಲಿ ಕಂಪ್ಯೂಟರ್ ಮುಂದೆ ಕುಳಿತ ನಮ್ಮೆಲ್ಲ ಟೆಕಿ ಓದುಗರಿಗೆ ಮಾತ್ರ ಈ ಬಗ್ಗೆ ಚಿಂತೆ ಮತ್ತು ತಲೆನೋವು.

ಏಕೆಂದರೆ ಹಳ್ಳಿಯೊಂದರಲ್ಲಿ ಶುದ್ಧ ಕನ್ನಡ, ದೈವ ಕನ್ನಡ, ಅಸಂಸ್ಕೃತ, ಮೇಲು ಕನ್ನಡ, ಕೀಳು ಕನ್ನಡ ಎಂಬ ಭಾವನೆ ಇಲ್ಲ. ಅವರಿಗೆ, ತಮಗೆ ಬರುವ ಕನ್ನಡದಲ್ಲಿ "ಮಾತನಾಡಲು, ಪ್ರಶ್ನೆ ಕೇಳಲು, ಪ್ರಶ್ನೆಗೆ ಉತ್ತರಿಸಲು" ಯಾವ ಮುಜುಗರವೂ ಇಲ್ಲ. ಆದರೆ ಏರ್ ಕಂಡೀಶನ್ಡ್ ಆಫೀಸಿನಲ್ಲಿ ಕಂಪ್ಯೂಟರ್ ಮುಂದೆ ಕುಳಿತ ಟೆಕಿ ಮಂದಿಗೆ ಕನ್ನಡವೆಂಬುದು ಕೇವಲ ಒಂದು ನುಡಿ. ಕನ್ನಡದಲ್ಲಿ ಮಾತನಾಡಿದರೆ ಮುಜುಗರ. ಟೆಕಿಗಳು ತುಂಬಾ ತುಂಬಾ ಓಪನ್. ಕನ್ನಡದಲ್ಲಿ ಮಾತನಾಡಲೇಬೇಕಾದ ಸನ್ನಿವೇಶ ಬಂದರೆ ಟೆಕಿಗಳು ಬಳಸುವುದು ಇಂಗ್ಲೀಷ್ ಲಿಂಗೋ ಅಥವಾ ಹಿಂದಿ ಲಿಂಗೋ ಅಥವಾ ಸಂಸ್ಕೃತ ಛಾಪಿರುವ ಕನ್ನಡ. ಏಕೆಂದರೆ ಪೂರ್ತಿ ಕನ್ನಡ ಮಾತನಾಡಿದರೆ ನಾನೊಬ್ಬ ಗುಗ್ಗು ಎನಿಸಿಕೊಳ್ಳಬೇಕಾಗುತ್ತದೆ ಎಂಬ ಕೀಳರಿಮೆ ಬೆಳೆಸಿಕೊಂಡಿರುತ್ತಾರೆ. ಇವೆಲ್ಲ ಗ್ರೌಂಡ್ ರಿಯಾಲಿಟೀಸ್. ಇವುಗಳನ್ನು ಗಣನೆಗೆ ತೆಗೆದುಕೊಳ್ಳದೆ ಸುಮ್ಮನೆ ಚರ್ಚೆಗೆ ಸಂಬಂಧಪಡದವುಗಳನ್ನು ಹರಿಬಿಡುವುದು ಚರ್ಚೆಯನ್ನು ಬೇರೆಡೆಗೊಯ್ಯುವ ತಂತ್ರವಷ್ಟೇ. ಇಲ್ಲಿ ನಡೆಯುತ್ತಿರುವುದು ಕನ್ನಡ ಮೇಲು, ಸಂಸ್ಕೃತ ಮೇಲು ಎಂಬುದರ ಬಗ್ಗೆಯಲ್ಲ ಬದಲಾಗಿ "ಸಂಸ್ಕೃತವಿಲ್ಲದ ಕನ್ನಡ ಬರೀ ಜಾಳು" ಎಂದು ತಿಳಿದಿರುವ ಮನಸ್ಥಿತಿಯ ಬಗ್ಗೆಯಷ್ಟೇ. ಇದರ ಬಗ್ಗೆ ಏನಾದರೂ ಆಧಾರ ಸಮೇತ ಹೇಳುವುದಾದರೆ ಹೇಳಿ. ಚರ್ಚೆಗೆ ಸಂಬಂಧಪಡದ ವಿಷಯಗಳನ್ನು ತುರುಕುವುದು ಬೇಡ.

ನನಗೆ ಕಂಡುಬಂದಂತೆ ಮೂರ್ನಾಲ್ಕು ಸದಸ್ಯರು ಕೆಲವು ತಿಂಗಳಿಂದ ಬರೇ ಇದರ ಬಗ್ಗೆಯೇ ಮಾತನಾಡುತ್ತ ಬಂದಿದ್ದಾರೆ

ಇಲ್ಲಿ, ನೀನು ಏನು ಹೇಳಲು ಬಯಸಿದ್ದಿಯೋ, ಅರ್ಥವಾಗಲಿಲ್ಲ. ಕಡೇಪಕ್ಷ ನಾನು ಕಳೆದ ಕೆಲವು ತಿಂಗಳಿನಿಂದ ಮಾಡುತ್ತಿರುವುದು ಕನ್ನಡದಲ್ಲಿ ಕಾನ್ಸೆಪ್ಚುಯಲೈಸೇಷನ್. ನಾನು ಬರೆದಿರುವ ಹಿಂದಿನ ಲೇಖನಗಳನ್ನು ಓದಿರುವ ಮಂದಿಗೆ ಇದೇನು ತಿಳಿಯದ ವಿಷಯವೇನಲ್ಲ. ಅವುಗಳನ್ನು ಓದಿ ಅವುಗಳಲ್ಲಿ ಇರಬಹುದಾದ ತಪ್ಪುಗಳನ್ನು ಪಟ್ಟಿಮಾಡದೆ ಸುಮ್ಮನೆ "ಇಂಥವನು ಸಂಸ್ಕೃತ ವಿರೋಧಿ" ಅಂತಲೋ ಅಥವಾ "ಸಂಪದವನ್ನು ಸಂಸ್ಕೃತ ವಿರೋಧಿ ವೇದಿಕೆ" ಮಾಡುತ್ತಿದ್ದಾರೆ ಎಂತಲೋ ಸುಮ್ಮನೆ ಹರಿದುಕೊಂಡರೆ ಅದು ವಸ್ತುಸ್ಧಿತಿಯನ್ನು ಅರ್ಥಮಾಡಿಕೊಳ್ಳದೇ ಭಾಷಣಗೈಯುವವರ ಬಂಡ್ವಾಳಿಲ್ಲದ ಬಡಾಯಿಯಂತೆ. ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ ಎಂಬ ಎಳೆಯಲ್ಲಿಯೇ ಕನ್ನಡದ ಕಾನ್ಸೆಪ್ಚುಯಲೈಸೇಷನ್ ಹೇಗೆ ಮಾಡಬಹುದು ಎಂಬುದರ ಬಗ್ಗೆ ತಿಳಿಸಿದ್ದೇನೆ.

ಯಾರೋ ಹೇಳಿದ್ದರು. ಸಂಸ್ಕೃತವನ್ನು ಯಾರೂ ಹೇರುತ್ತಿಲ್ಲ ಎಂಬುದಾಗಿ. ಕೋಳಿ ಸಾಕಾಣಿಕೆಯನ್ನು ಕುಕ್ಕುಟ ಉದ್ಯಮ ಎಂದು ಕರೆಯುವುದರಲ್ಲಿ ಯಾವ ರೀತಿಯ ಭಾರತೀಯತೆ, ದೈವತ್ವ, ಸೌಜನ್ಯತೆಯಿದೆ ಎಂಬುದು ನನಗೆ ಹೊಳೆಯುವುದಿಲ್ಲ. ಯಾವ ಕೋಳಿ ಸಾಕುವವನೂ ಕೋಳಿಯನ್ನು ಕುಕ್ಕುಟ ಎಂದು ಕರೆಯುವುದಿಲ್ಲ. ಹಾಗೆಯೇ ಯಾದೃಚ್ಛಿಕ, ಬಂಧಮುದ್ರಿಕೆ, ಸಿದ್ಧಸ್ಮೃತಿಕೋಶ, ವಕ್ರಾವರಣ, ಪ್ರತ್ಯೇಕ ಸ್ಮರಣ ವ್ಯವಸ್ಥೆ, ಸ್ಮರಣ ಕೋಷ್ಟಕ ದಂತಹ ಕನ್ನಡಿಗರು ಉಚ್ಚರಿಸದ ಕಷ್ಟವಾದ ಸಂಸ್ಕೃತ ಪದಗಳನ್ನು ಬಲವಂತವಾಗಿ ತುರುಕುತ್ತಿರುವವರೂ ಟೆಕಿಗಳೇ ಎಂಬುದು ನೆನಪಿರಲಿ. ಇಂತಹ ವಿಷಯಗಳನ್ನು ಓದುಗರ ಮುಂದಿಟ್ಟು ಹೀಗಲ್ಲ ಹೀಗೂ ಸರಳವಾಗಿ ಕನ್ನಡದಲ್ಲಿ ಹೇಳಬಹುದು ಎಂದ ಮಾತ್ರಕ್ಕೆ "ಅದ್ಯಾರೋ ಮೂರ್ನಾಕು ಸದಸ್ಯರು" ಸಂಸ್ಕೃತ ವಿರೋಧಿಗಳಾಗುವುದಿಲ್ಲ.

ಸಂಸ್ಕೃತದ ಅತಿ ವ್ಯಾಮೋಹವಿರುವವರಿಗೆ ಕನ್ನಡದ ಏಳಿಗೆ ಸಹಿಸಲು ಆಗದಿದ್ದರೆ ಅದು ಕನ್ನಡದವರ ತಪ್ಪಲ್ಲ. ಕನ್ನಡಿಗರು ಒಂದು ವೇಳೆ ತಂತ್ರಜ್ಞಾನದಲ್ಲಿ ಹಿಂದೆ ಬಿದ್ದರೆ ಅದು ಸಂಸ್ಕೃತದ ಬಲವಂತದ ಹೇರಿಕೆಯಿಂದಲೇ ಆಗುವುದು. ಕನ್ನಡಿಗರು ಕಂಪ್ಯೂಟರ್, ಸಿ.ಡಿ. ಹಾರ್ಡ್ ಡಿಸ್ಕ್, ಕೇಷ್ ಇವುಗಳನ್ನು ಯಾರ ಅಪ್ಪಣೆಯಿಲ್ಲದೆಯೂ ಬಳಸುತ್ತಾರೆ. ಆದರೆ ಸಂಸ್ಕೃತದ ಮಂದಿ ಬಿಡುವುದಿಲ್ಲ. ಅವರಿಗೆ ಬಂಧಮುದ್ರಿಕೆ, ಸಿದ್ಧಸ್ಮೃತಿಕೋಶ, ಸ್ಮರಣ ಕೋಷ್ಟಕ ಇಂತಹವುಗಳೇ ಬೇಕು.

ಕನ್ನಡದ ಬಗ್ಗೆ ಬರೆದ ಮಾತ್ರಕ್ಕೆ ಒಬ್ಬನನ್ನು ಕಾರಣವಿಲ್ಲದೆ, "ಸಂಸ್ಕೃತ ವಿರೋಧಿ" ಎಂಬ ಹಣೆಪಟ್ಟಿ ಕಟ್ಟುವ ಮನಸ್ಥಿತಿಯನ್ನು ನಾವುಗಳು "ಪ್ರಬುದ್ಧತೆಯ ದಿವಾಳಿತನ" ಎಂದು ಅರ್ಥಮಾಡಿಕೊಳ್ಳಬೇಕಾಗುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 6, 2007 - 5:56pm — ವೈಭವ

Re: ಟಿಪ್ಪಣಿ: ಸಂಪದ ಸಂಸ್ಕೃತ ವಿರೋಧಿಯಾಗದಿರುವುದು ಹೇಗೆ?

ವೈಭವ's picture

ಇಲ್ಲಿ ಯಾರು ಸಂಸ್ಕೃತವನ್ನು ವಿರೋಧಿಸುವುದಾಗಲಿ ಅಥವ ಅದರ credibility ಯನ್ನು ಪ್ರಶ್ನಿಸುತ್ತಿಲ್ಲ ಅನ್ಕೊಂಡಿದ್ದೀನಿ. ಸಂಸ್ಕೃತದಿಂದ ಕನ್ನಡಕ್ಕೆ ಸಹಾಯವಾಗಿರಬಹುದು. ಅಂದ ಮಾತ್ರಕ್ಕೆ ಸಂಸ್ಕೃತವಿಲ್ಲದ ಕನ್ನಡ ಜಾಳು ಅಂದ್ರೆ ಒಪ್ಕಳಕ್ಕಾಗಲ್ಲ. ಈ ನಿಲುವನ್ನು ಮಾತ್ರ ವಿರೋಧಿಸ್ತಾ ಇರೋದು(ಮುಂದೊಂದು ದಿನ ಇಂಗ್ಲಿಷ ಇಲ್ಲದ ಕನ್ನಡ ಜಾಳು ಅನ್ನಬಹುದು:)).

ಅಚ್ಚ ಕನ್ನಡದ ಪದಗಳನ್ನು ಹುಡುಕುವಿಕೆ ಸಂಸ್ಕೃತವಿರೋಧಿ ಕೆಲಸವಲ್ಲ. ಕನ್ನಡಕ್ಕೆ ಸ್ವಂತಿಕೆ ಇದೆ ಅನ್ನೋದನ್ನು ಕೆಲವರು ಸದಸ್ಯರು ತೋರಿಸ್ತಾ ಇದ್ದಾರೆ. ಅದನ್ನು ಸಂಸ್ಕೃತವಿರೋಧಿ ಅಂತ ಹೇಳಿದ್ರೆ ಅದು ತಪ್ಪಾಗುತ್ತೆ. ಎಲ್ಲರಿಗೂ ಸಂಸ್ಕೃತ ಭಾಷೆ ಬಗ್ಗೆ ಗೌರವವಿದೆ ಎಂದು ಭಾವಿಸುತ್ತೇನೆ. ಕನ್ನಡದಲ್ಲಿ ಸಂಸ್ಕೃತ ಪದಗಳನ್ನು ಬಳಸವುದು ಬಿಡುವುದು ಅವರವರ ವೈಯಕ್ತಿಕ ನಿಲುವು(ಅವರವರ ಕಷ್ಟ ಅಥವ ಇಷ್ಟ).

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 6, 2007 - 6:00pm — hpn

ಉದ್ವೇಗ, ವಾದವಿವಾದಗಳ ಸರಪಳಿ ಬೇಡ

hpn's picture

ಕಾಮೆಂಟುಗಳು ಬರೇ ವೈಯಕ್ತಿಕವಾಗಿ ದೂಷಣೆಗಳತ್ತ ಹೊರಟಿವೆ. ಬರೇ ಉದ್ವೇಗ ನಿನ್ನದು. ಕಾಮೆಂಟುಗಳನ್ನ ವೈಯಕ್ತಿಕವಾಗಿ ತೆಗೆದುಕೊಂಡು ಪೇಜುದ್ದ ಕಾಮೆಂಟು - ಬರಿ, ಬರಿ Eye-wink
--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 6, 2007 - 6:30pm — Sunil Jayaprakash

Re: ಉದ್ವೇಗ, ವಾದವಿವಾದಗಳ ಸರಪಳಿ ಬೇಡ

Sunil Jayaprakash's picture

ಇಲ್ಲಿರುವ ವಿಷಯವನ್ನು ಅರಿಯದ, ತಪ್ಪು ಒಪ್ಪುಗಳನ್ನು ಹೇಳದ, ಬರಿ ಜಾರಿಕೆ ನಿನ್ನದು. ಸರಿ, ಜಾರಿಕೆಯ ಕಾಮೆಂಟುಗಳನ್ನು ಬರಿ, ಬರಿ Eye-wink

ಆಧಾರ ಸಮೇತ ಯಾರಾದರೂ ಏನಾದರೂ ಹೇಳಿದರೆ ಒಪ್ಪಬಹುದು. ನನ್ನ ಲೇಖನಗಳಲ್ಲಿ ಹಾಗು ಕಾಮೆಂಟುಗಳಲ್ಲಿರುವ ವಿಷಯಗಳ ಸರಿ ತಪ್ಪುಗಳ ವಿಶ್ಲೇಷಣೆ ಮಾಡದೆ, ನನ್ನ ವೈಯಕ್ತಿಕ ಗುಣಗಳ ವ್ಯಾಖ್ಯಾನ!!!!!!!!! ನಡೆಯಲಿ, ನಡೆಯಲಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 6, 2007 - 6:45pm — hpn

ಉದ್ವೇಗ, ವಾದವಿವಾದಗಳ ಸರಪಳಿ ಬೇಡ

hpn's picture

ಅರೆರೆ, ಮತ್ತದೇ ಉದ್ವೇಗ! ಉದ್ವೇಗ ಚರ್ಚೆ ನಡೆಸೋದಿಲ್ಲ, ಜಗಳ ತರುತ್ತೆ!

ಪ್ರತಿಯೊಬ್ಬರಿಗೂ ತಮ್ಮದೇ ಆದ ತಪ್ಪು ಒಪ್ಪುಗಳಿರುತ್ವೆ. ಅವಕ್ಕೆ ಏನೇ ಆಧಾರ ತಿರುಚಿಯಾದರೂ ಕೊಡಬಹುದು. ತಿರುಚದೆ ಕೊಟ್ಟರೂ ನಂಬಿಕೆಯಾಗದು. ವಾದ-ವಿವಾದವಷ್ಟೆ ಉಳಿಯುವುದು. ಉದ್ವೇಗಕ್ಕೊಳಗಾದ್ರೆ ವಾದ-ವಿವಾದ ಜಗಳವಾಗಿ ಅಂತ್ಯಗೊಳ್ಳುವುದಷ್ಟೆ. ವಸ್ತುನಿಷ್ಟ ಚರ್ಚೆಯಾಗೋದಿಲ್ಲ. Eye-wink

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 6, 2007 - 9:30pm — mahesha

"ಅಹಂಕಾರದ ಪರಮಾವಧಿ".

mahesha's picture

ಸುನಿಲ,

ನಿನ್ನ ಮರುಮಾತು ಬಹಳ ಸರಿ ಮತ್ತು ತಿಳಿ.

ನಮ್ಮನ್ನು, ನಮ್ಮದನ್ನು, ನಮ್ಮ ನಡೆನುಡಿಯನ್ನು ಜಾಳೆಂದುದು ಪೊಳ್ಳು ಮೇಲರಿಮೆಯಿಂದ ಹೊರತು ಬೇರಾವ ದಿಟವಾದ ಕಾರಣದಿಂದಲ್ಲ.

ಯಾವ ನುಡಿಯೂ ಜಾಳಲ್ಲ, ಸಂಸ್ಕೃತವೂ ಜಾಳಲ್ಲ. ಆದರೆ ಸಂಸ್ಕೃತದ ದುರಭಿಮಾನ ಅದರ ಮಟ್ಟ ಕೇಳಗಿಳಿಸುತ್ತದೆ.

ಆದರೆ ತಮ್ಮ ಪೊಳ್ಳು ಮೇಲರಿಮೆಯಿಂದ ಇನ್ನೊಂದನ್ನು ಕೀಳೆಂದು ಕಾಣುವುದು ನೀನು ಹೇಳಿದಂತೆ "ಅಹಂಕಾರದ ಪರಮಾವಧಿ".

ನಮ್ಮ ನೆಲದಲ್ಲೇ ನಿಂತು, ಉಂಡು, ಮಕ್ಕಳುಮರಿ ಮಾಡಿ, ಆ ಮಕ್ಕಳುಮರಿಗಳೂ ಉಂಡು... ನಮ್ಮ ನುಡಿಯನ್ನೇ ಜಾಳೆನ್ನುವರು. ಇದು ಇವರು ಕಲಿತ ಸಂಸ್ಕೃತದ ಸಂಸ್ಕಾರ!!?!!! Sad

ನನ್ನ ಕೆಂಗಣ್ಣು "ಸಂಸ್ಕೃತವಿಲ್ಲದ ಕನ್ನಡ ಜಾಳು" ಈ ಮಾತಿನ ಬಗ್ಗೆ, ಸಂಸ್ಕೃತದ ಕುರಿತಲ್ಲ.

ಕನ್ನಡವೇ ತಿರುಳು ಬಾಳು ಕನ್ನಡಿಗರಿಗೆ. "ಉಪ್ಪುಂಡ ನೆಲಕ್ಕೆ ಎರಡು ಬಗೆಯಬೇಡ" ಇದು ಕನ್ನಡದ ನೀತಿ!!!

ಕೂಳಿತ್ತ ಕೈ ಕೀಳೇ, ಜಾಳೇ? Sad
======
Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 8, 2007 - 2:28pm — ಸಂಗನಗೌಡ

Re: ಟಿಪ್ಪಣಿ: ಸಂಪದ ಸಂಸ್ಕೃತ ವಿರೋಧಿಯಾಗದಿರುವುದು ಹೇಗೆ?

ಸಂಗನಗೌಡ's picture

Quote:
ಯಾದೃಚ್ಛಿಕ, ಬಂಧಮುದ್ರಿಕೆ, ಸಿದ್ಧಸ್ಮೃತಿಕೋಶ, ವಕ್ರಾವರಣ, ಪ್ರತ್ಯೇಕ ಸ್ಮರಣ ವ್ಯವಸ್ಥೆ, ಸ್ಮರಣ ಕೋಷ್ಟಕ ಇತ್ಯಾದಿ

ಯಪ್ಪಾ, ಇದು ಕನ್ನಡ ಅನ್ನೋದಾದರೆ, ನಮಗೆ ಇಂಗ್ಲೀಸೇ ಇರಲಿ, ಏನ್ ತೊಂದರೆ ಇಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 8, 2007 - 10:02pm — mahesha

ನಮಗೆ ಇಂಗ್ಲೀಸೇ ಇರಲಿ

mahesha's picture

ಏನ್ ಸಂಗನ, ಹಿಂಗೆ ಅಂದ್ರಿ.!

ಇಂಗ್ಲೀಸ್ ಇದ್ದೇ ಇದೆ. ’ಇರಲಿ’ ಏನ್ ಬಂತು....!!

ಅದ್ ಸರಿ!! "ಯಾದೃಚ್ಛಿಕ, ಬಂಧಮುದ್ರಿಕೆ, ಸಿದ್ಧಸ್ಮೃತಿಕೋಶ, ವಕ್ರಾವರಣ, ಪ್ರತ್ಯೇಕ ಸ್ಮರಣ ವ್ಯವಸ್ಥೆ, ಸ್ಮರಣ ಕೋಷ್ಟಕ ಇತ್ಯಾದಿ" ಹಿಂಗೆ ಅಂದರೆ ಏನ್ರಿ?

======
Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 6, 2007 - 10:58am — Sunil Jayaprakash

ಕನ್ನಡ ಮತ್ತು ಸಂಸ್ಕೃತ ವಿರೋಧಿ

Sunil Jayaprakash's picture

ನನಗೆ ಒಂದು ವಿಷಯ ಅರ್ಥವೇ ಆಗುವುದಿಲ್ಲ. ಕೆಲವರು ಕನ್ನಡದ ಪರವಾಗಿ ಮಾತನಾಡುವಾಗ "ಇವರುಗಳು ಸಂಸ್ಕೃತ ವಿರೋಧಿಗಳು ಎಂದು ಯಾರಿಗಾದರೂ ಭಾಸವಾಗುತ್ತದೆಯೇ" ? ಹಾಗೆ ಬೇರೆಯವರ ಬಗ್ಗೆ ನಮಗೆ ಅನಿಸುವುದೇ ಆದರೆ ಅದು ಕನ್ನಡದ ಬಗೆಗಿನ ನಮ್ಮ ಪೂರ್ವಾಗ್ರಹ ಪೀಡಿತ ಬಗೆ ಮತ್ತು ಕನ್ನಡವನ್ನು ಕುರಿತಾದ ನಮ್ಮ ಅರಿಮಯಿಕೆ ಎಂದು ತಿಳಿಯಿರಿ. ಎಲ್ಲರೂ ಒಪ್ಪಬಹುದಾದ ಮಾತೆಂದರೆ ಸಂಸ್ಕೃತದ ಪ್ರಭಾವ ಎಲ್ಲಾ ಭಾಷೆಯ ಮೇಲೂ ಇದ್ದೇ ಇದೆ. ಆದರೆ ನಮ್ಮ ಆಕ್ಷೇಪಗಳಿರುವುದು ಎರಡಕ್ಕೆ.

೧. ಸಂಸ್ಕೃತವಿಲ್ಲದ ಕನ್ನಡ ಜಾಳು ಜಾಳು. ಸುಮ್ಮನೆ ಏನೇನೋ ಊಹಿಸಿ ಕಲ್ಪನೆಗೆ ಬಂದ ಹಾಗೆ ಮಾತುಗಳನ್ನು ಹರಿಬಿಡುತ್ತಾ ಹೋದರೆ ಏನೂ ಸಾಧಿಸಿದಂತಾಗುವುದಿಲ್ಲ.
೨. ಕನ್ನಡದ ಮೂಲ ಸಂಸ್ಕೃತ - ಇದರ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳಾಗಿವೆ. ಅವುಗಳ ಮೇಲೆ ಸ್ವಲ್ಪ ಕಣ್ಣುಹಾಯಿಸುವುದು ಒಳ್ಳೆಯದು.

ಸಂಸ್ಕೃತದ ಪ್ರಭಾವವಿದೆ ಎಂದೂ ಹೇಳುವುದಕ್ಕೂ ಸಂಸ್ಕೃತದಿಂದ ಬಂದಿದೆ ಎನ್ನುವುದಕ್ಕೂ ತುಂಬಾ ವ್ಯತ್ಯಾಸಗಳಿವೆ. ಇದು ಸಂಖ್ಯಾಬಲದ ಅಥವಾ ಪಡೆನುಡಿಗಳನ್ನು (ಅಥವಾ ಅನ್ಯಭಾಷಾ ಪದಗಳನ್ನು ನಮ್ಮದಾಗಿಸುವ) ಕುರಿತಾದ ಡಿಬೇಟ್ ಅಲ್ಲ.

ಅಲ್ಲ ಕನ್ನಡದಲ್ಲಿ ಎಷ್ಟೋ ಸಂಸ್ಕೃತ ಪದಗಳಿವೆ ಎಂಬುದನ್ನು ಒಪ್ಪವವರು "ಸಂಸ್ಕೃತದಲ್ಲಿಯೂ ಕನ್ನಡ ಪದಗಳಿವೆ" ಎಂದು ಹೇಳಿದರೆ ಯಾಕೆ ಉರಿದುಬೀಳುತ್ತಾರೋ ತಿಳಿಯದು. ಪದ, ಗುಣ, ನೀರು, ಪರ್ವು(ಪರ್ವ) ಹೀಗೆ. ಕನ್ನಡವನ್ನು ಅರಿಯದೆ ಕೇವಲ ಸಂಸ್ಕೃತವನ್ನು ಮಾತ್ರವೇ ಅರ್ಧಂಬರ್ಧ ಓದಿಕೊಂಡು ಸಂಸ್ಕೃತವೇ ಸರ್ವಭಾಷಾಜನನಿ ಎನ್ನುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ. ಕೆಲವರಿಗೆ ಕನ್ನಡ ಎಂದರೆ ನೆನಪಾಗುವುದು ಹಳಗನ್ನಡ ಸಾಹಿತ್ಯವೊಂದೇ. ಸಂಸ್ಕೃತದ ಮೇಲೆ ಹಿಡಿತ ಸಾಧಿಸುವವರೂ ಕೂಡ ಒಪ್ಪುವ ಮಾತು, ಸಂಸ್ಕೃತದ ಪ್ರಭಾವ ಎಲ್ಲ ಭಾಷೆಯ ಮೇಲೂ ಇದೆ ಆದರೆ ಸಂಸ್ಕೃತವೇ ಸರ್ವಭಾಷಾಜನನಿ ಅಲ್ಲ ಎಂಬುದನ್ನು. ಸುಮ್ಮನೆ ಯಾವುದೋ ತೆವಲಿಗೆ ಕನ್ನಡವು ಜಾಳು ಎಂದು ತೆಗಳುವುದು ಆಗಲೇ ಹೇಳಿದ ಹಾಗೆ ಅಹಂಕಾರವಲ್ಲದೆ ಬೇರೇನೂ ಅಲ್ಲ.

ಕನ್ನಡವನ್ನು ತೆಗಳುವುದರಲ್ಲಿಯೇ ಸಂಸ್ಕೃತದ ಶ್ರೇಷ್ಠತೆ ಇದೆಯೇ ? ಸಂಸ್ಕೃತವನ್ನು ಹಾಗೆಯೇ ಹೊಗಳುವುದಕ್ಕೆ ಆಗುವುದಿಲ್ಲವೇ ? ಸಂಸ್ಕೃತದ ಮೂಲಕ ಇಡೀ ಜಗತ್ತಿಗೆ ಸಿಕ್ಕಿರಬಹುದಾದ ಜ್ಞಾನದ ಮೂಲಕ ಸಂಸ್ಕೃತವನ್ನು ಹೊಗಳಿದರೆ ಆಗದೇ ? ಸುಮ್ಮನೆ ಮಾತಿನ ತೀಟೆ ತೀರಿಸಿಕೊಳ್ಳುವುದಕ್ಕಾಗಿ ಕನ್ನಡವನ್ನು ಏಕೆ ತೆಗಳಬೇಕು ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 8, 2007 - 10:10pm — ಶ್ರೀನಿಧಿ

ಕನ್ನಡ ಮತ್ತು ಸಂಸ್ಕೃತ ಮತ್ತದೇ ಚರ್ಚೆ

ಶ್ರೀನಿಧಿ's picture

ಮತ್ತದೇ ಚರ್ಚೆ. ನಾನು ಈ ವಿಚಾರವಾಗಿ ಮಾತಾಡಬಾರದು, ಚರ್ಚೆ ಅನವಶ್ಯಕವಾಗಿ ಮುಂದುವರಿಸಬಾರದು ಎಂದು ನಿಶ್ಚಯಿಸಿಕೊಂಡಿದ್ದೆ. ಆದರೆ ನೋಡಿದರೆ ಈ ಬಗೆಯ ಚರ್ಚೆಗಳು ಬಗೆಹರಿಯುವ ರೀತಿಯದ್ದಲ್ಲ ಎನ್ನಿಸುತ್ತಿದೆ. ಆದ್ದರಿಂದ ನನ್ನ ವಾದವನ್ನೂ ಇಟ್ಟರೆ ಏನೂ ಕೆಡುಕಾಗುವುದಿಲ್ಲ, ವಾದ ಅನಗತ್ಯವಾಗುವುದಿಲ್ಲ ಎಂದು ಭಾವಿಸಿದ್ದೇನೆ. ಈ ರೀತಿಯ ಚರ್ಚೆಗಳನ್ನು ನೋಡಿ ಬೇಸರವಾಗಿದ್ದವರಲ್ಲಿ ನಾನು ಕ್ಷಮೆ ಕೋರುತ್ತೇನೆ.

ಸಂಸ್ಕೃತದ ದ್ವೇಷಕ್ಕಿಂತ ನನಗೆ ಯಾಕೋ ಭಾಷೆಯ ಮೇಲಿನ ಮಡಿವಂತಿಕೆ ಕಂಡಿತು ನನಗೆ. ಹೊಸ ಹೊಸ ಸಂಸ್ಕೃತ ಪದಗಳ , ಜನಪದಕ್ಕೆ ತಿಳಿಯದ ಶಬ್ದಗಳನ್ನು ಉಪಯೋಗಿಸದೆ ಇರುವ ಬಗೆಗೆ ನನ್ನ ಸಮ್ಮತಿಯೂ ಇದೆ. ಆದರೆ ಸದ್ಯಕ್ಕೆ ಕನ್ನಡಭಾಷೆಯಲ್ಲಿ ಸೇರಿಹೋಗಿರುವ ಪದಗಳನ್ನು ತೆಗೆದು ಭಾಷೆಯನ್ನು ಶುದ್ಧಮಾಡಬೇಕು ಎನ್ನುವುದು ಅತಿರೇಕ ಎನಿಸುತ್ತದೆ. ಸಂಸ್ಕೃತವಿಲ್ಲದೇ ಇರುವ ಕನ್ನಡ ಬರೀ ಜಾಳು ಎಂದು ಒಪ್ಪುವುದು ಕಷ್ಟ. ಆದರೂ ಸಂಸ್ಕೃತದ ಸೋಂಕೂ ಇಲ್ಲದ ಕನ್ನಡ ಬೇಕೆಂದರೆ ಪಳೆಗನ್ನಡ ಆಡುಮಾತಿಗೂ, ಬರವಣಿಗೆಯಲ್ಲೂ ಉಪಯೋಗಿಸಬೇಕು. ಎಲ್ಲಾ ರೀತಿಯ ಸಮಾಸ-ಸಂಸ್ಕೃತ ಸಂಧಿಗಳು-ಹೆಚ್ಚಿರುವ ಅಕ್ಷರಗಳು ಅಳಿಸಬೇಕು. ಒಟ್ಟಿನಲ್ಲಿ ಕನ್ನಡದ ವ್ಯಾಕರಣ ಮತ್ತೊಮ್ಮೆ ಹೊಸದಾಗಿ ಬರೆಯಬೇಕು. ಇದಕ್ಕಿಂತ ಸಂಸ್ಕೃತದಲ್ಲಿರುವ ವ್ಯಾಕರಣ ಪ್ರಕಾರವನ್ನು ನಮ್ಮ ಭಾಷೆಗೆ ಆಳವಡಿಸಿಕೊಳ್ಳುವವುದು ಸುಲಭ ಅಲ್ಲವೇ? ಇದು ನಡೆದಿದ್ದೂ ಹಾಗೆಯೇ. ಇದರಿಂದಾಗಿ ಸಂಸ್ಕೃತ ಕನ್ನಡದ ಬೆಳವಣಿಗೆಗೆ ಇಂಬು ಕೊಟ್ಟಿದೆ ಎಂದರೆ ತಪ್ಪಿಲ್ಲ.

ನನ್ನಂತಹ ಸಾಮಾನ್ಯ ಜನರು ಬರೆಯುವ ಬಗೆಗೆ ಹೇಳಬೇಕೆಂದರೆ, ಬರೆಯುವಾಗಲೂ ನಾನು ನನಗೆ ತಕ್ಷಣ ಹೊಳೆಯುವ ಶಬ್ದಗಳನ್ನು ಹಾಕಿ ಬರೆದರೇ ಮಾತ್ರ ನನ್ನ ಮನಸ್ಸಿನಲ್ಲಿರುವುದು ಹೊರಹಾಕಲು ಸಾಧ್ಯ. ಹೀಗೆ ಬರೆಯುವಾಗ ಎಷ್ಟೋ ಬಾರಿ ಇಂಗ್ಲಷ ಅಥವಾ ಸಂಸ್ಕೃತ ಶಬ್ದಗಳೂ ಸೇರುವುದುಂಟು. ಬರೆಯುವ ವಿಷಯದ ಬಗೆಗೆ ಯೋಚಿಸುವುದು ಬಿಟ್ಟು ಶಬ್ದಗಳ ಬಗೆಗೇ ಯೋಚಿಸುತ್ತಾ ಹೋದರೆ ಹಟ ಮಾಡಿ ಬರೆದ ಶಬ್ದಗಳ ಗುಂಪಾಗುತ್ತದೆ. ಬರೀ ನಿಘಂಟನ್ನೇ ಆಧರಿಸಿರುವ ಬರವಣಿಗೆಯಲ್ಲಿ ಯಾವುದೇ ಸತ್ವ ಇರುವುದಿಲ್ಲ. ಅದಕ್ಕೂ ಮಿಗಿಲಾಗಿ ಹೋಗಿ ಹಳೆಗನ್ನಡದ ನಿಘಂಟಿನಲ್ಲಿರುವ ಶಬ್ದಗಳನ್ನೇ ಉಪಯೋಗಿಸಬೇಕು, ಅದರಲ್ಲಿರುವ ಶಬ್ದಗಳೇ / ಅಕ್ಷರಗಳೇ ಇಂದಿನ ಕಾಲದಲ್ಲೂ ಎಲ್ಲರಿಗೂ ಸಮ್ಮತವಾದದ್ದು ಎಂದರೆ ಏನೆನ್ನುವುದು?ಇದೇ ವಿಚಾರವಾಗಿ burrow ನಿಘಂಟಿನ ಉಪಯೋಗ ಅಗತ್ಯಕ್ಕಿಂತ ಹೆಚ್ಚಾಗಿದೆ ಎನಿಸುತ್ತಿದೆ. ಈ ನಿಘಂಟು ಹಳೆಗನ್ನಡ-ತಮಿಳು-ಹಳೆತೆಲುಗು (??) ಭಾಷೆಗಳಲ್ಲಿ ಬರೆದ ಶಬ್ದಗಳ ಅರ್ಥ ತಿಳಿಯಲು ಉಪಯೋಗಿಸಿ, ನಮ್ಮ ಶಬ್ದಗಳು ಬೆಳೆದು ಬಂದ ರೀತಿ ಅಧ್ಯಯನ ಮಾಡಲು ಉಪಯೋಗಿಸಲು ಒಳ್ಳೆಯ ಸಾಧನ. ಅದನ್ನು ಬಿಟ್ಟು ಸದ್ಯದ ಜನಪದದಲ್ಲಿ ಹಾಸುಹೊಕ್ಕಾಗಿರುವ ಪದಗಳ ಅರ್ಥ ತಿರುಚಲು - ಕೆಲವು ಶಬ್ದಗಳು ಸತ್ತಿವೆ ಎಂದು ಹಲುಬಲು - ಹೊಸ ಶಬ್ದಗಳನ್ನು ಹುಟ್ಟಿಸಲು ಉಪಯೋಗಿಸುವುದು ಸರಿಯಲ್ಲ ಎಂದು ನನ್ನ ಭಾವನೆ.

ಈ ಎಲ್ಲಾ ಮಾತುಗಳ ಬಗೆಗೆ ಯೋಚಿಸುತ್ತಿದ್ದಾಗ ನೆನಪಿಗೆ ಬಂದದ್ದು ಕವಿರಾಜಮಾರ್ಗ. ಸ್ವಲ್ಪ ಕೆದಕಿದಾಗ ಸಿಕ್ಕದ್ದು ಕೆ.ವಿ ಸುಬ್ಬಣ್ಣ ಅವರ ಪ್ರಬಂಧ.

Quote:

ಆ ಕಾಲಕ್ಕಿನ್ನೂ ಕನ್ನಡದಲ್ಲಿ ಪ್ರಮಾಣಗ್ರಂಥವಿರಲಿಲ್ಲ ಎಂಬುದೇ ಅಲ್ಲದೆ ಬೇರೆ ವಿಶಿಷ್ಟ ಕಾರಣಗಳಿಂದಾಗಿಯೂ ಭಾಷೆಯಲ್ಲಿ ದೋಷಗಳು ಹೆಚ್ಚಿಕೊಂಡಿವೆ ಎನ್ನುವುದು ಗ್ರಂಥದ ಅಭಿಪ್ರಾಯ. ಆ ಕಾರಣಗಳೆಂದರೆ-೧. ಅಸಂಖ್ಯವಾದ ದೇಸಿ(ಉಪಭಾಷಾ)ಭಿನ್ನತೆಗಳು; ೨. ಪಳಗನ್ನಡದ ಬಳಕೆ; ೩.ಸಂಸ್ಕೃತದ ಸಹಯೋಗ. ಅವುಗಳನ್ನು ಹೀಗೆ ವಿವರಿಸಲಾಗಿದೆ:

1.

ಅಸಂಖ್ಯ ದೇಸಿ: `ದೋಸಂ ಇನಿತು ಎಂದು ಬಗೆದು ಉದ್ಭಾಸಿಸಿ ತರಿಸಂದು ಕನ್ನಡಂಗಳೊಳ್ ಎಂದುಂ ವಾಸುಗಿಯುಂ ಅರಿಯಲಾರದೆ ಬೇಸರಿಸುಗುಂ ದೇಸಿ ಬೇರೆಬೇರಪ್ಪುದರಿಂ'(೪೬). ದೇಸಿ ಬೇರೆಬೇರೆಯಾಗಿರುವುದರಿಂದ ಈ ಹಲವು ಕನ್ನಡಗಳಲ್ಲಿ ದೋಷಗಳು ಎಷ್ಟಿವೆ ಎನ್ನುವುದನ್ನು ನಿಶ್ಚಯಿಸಿ ಕಾಣಿಸಿ ಹೇಳಲು ಹಲವು ನಾಲಗೆಯುಳ್ಳ ವಾಸುಕಿಯೂ ಬೇಸರಿಸಿಯಾನು.) ಹೀಗಿದ್ದರೂ ಸತತವಾಗಿ ಬಂದಿರುವ ಹಳೆಯ ಕಾವ್ಯಗಳನ್ನು ಪರಿಶೀಲಿಸಿ, ನನಗೆ ತಿಳಿದುವನ್ನು ಬುಧಜನಕ್ಕೆ ಹೇಳುತ್ತೇನೆ-ಎನ್ನುತ್ತದೆ ಮುಂದಿನ ಪದ್ಯ-೪೭)
2.

ಪಳಗನ್ನಡ ಬಳಕೆ: `ನೆಲೆಸಿದ ಕಾವ್ಯಂ ಕಾವ್ಯಕ್ಕೆ ಲಕ್ಷಣಂ ಸತತಂ ಎಂದೆ ಪಳಗನ್ನಡಮಂ ಪೊಲೆಗೆಡಿಸಿ ನುಡಿವರ್ ಆಗಮಬಲಹೀನರ್, ದೇಸಿಯಲ್ಲ ಇದು ಎಂದು ಅರಿದಿರ್ದು'(೪೮). `ದೊರೆಕೊಂಡಿರೆ ಸೊಗಯಿಸುಗುಂ ಪುರಾಣ-ಕಾವ್ಯ-ಪ್ರಯೋಗದೊಳ್ ತತ್ಕಾಲಂ, ವಿರಸಂ ಕರಮ್ ಅವು ದೇಸಿಗೆ, ಜರದ್ವಧೂ-ವಿಷಯ-ಸುರತ-ರಸ-ರಸಿಕತೆವೋಲ್'(೫೦). (ಪ್ರತಿಷ್ಠೆಗೊಂಡಿರುವ ಹಿಂದಿನ ಕಾವ್ಯಗಳೇ ಮುಂದಿನವಕ್ಕೆ ಮೇಲ್ಪಂಕ್ತಿಗಲು ಎಂದುಕೊಂಡು, ಶಾಸ್ತ್ರದ ಬಲವಿಲ್ಲದಂಥ ಜನರು, `ಪಳಗನ್ನಡ'ಮಾತುಗಳನ್ನೇ ಬಳಸಿ ಹೊಲೆಗೆಡಿಸುತ್ತಾರೆ, ಅದು ಪ್ರಚಲಿತವಾದ ದೇಸಿಯಲ್ಲವೆಂದು ತಿಳಿದಿದ್ದರೂ.... ಅಂಥ ಹಳೆಯ ಮಾತುಗಳು ಆ ಕಾಲದ ಹಳೆಯ ಕಾವ್ಯಗಳಲ್ಲಿ ಸೊಗಸಾಗಿಯೇ ಇರುತ್ತವೆ, ಆದರೆ ಹೊಸಕಾಲದ ದೇಸಿಯ ಜೊತೆ ಪ್ರಯೋಗಿಸಿದಾಗ ಮುಪ್ಪಾಗಿರುವ ವಧುವಿನ ಜೊತೆ ಸುರತವಾಡಿದಂತೆ ತುಂಬ ವಿರಸವೆನಿಸುತ್ತವೆ.)
3.

ಸಂಸ್ಕೃತದ ಸಹಯೋಗ: `ಸಮಸಂಕೃತಂಗಳೊಳ್ ಸೈತು ಅಮರ್ದಿರೆ ಕನ್ನಡಮನ್ ಅರಿದು ಪೇಳ್ಗೆ....'(೫೧); ಅದನ್ನು ಬಿಟ್ಟು ಹೊಂದಿಕೆಯಾಗದ ರೀತಿಯಲ್ಲಿ) `ಬೆರೆಸಿರೆ ಕನ್ನಡದೊಳ್ ಬಂಧುರಮಾಗದು ಕಾವ್ಯರಚನೆ; ಪೇಳ್ದೊಡೆ ಪೀನಂ ಪುರುಷತರಂ ಅಕ್ಕು ಅದು, ಒತ್ತುಂಗರಡೆಯ ಮದ್ದಳೆಯ ಜರ್ಝರ ಧ್ವನಿಗಳ ವೋಲ್'(೫೩); `ವಿದಿತ ಸಮ ಸಂಸ್ಕೃತೋದಿತ-ಪದಂಗಳೊಳ್ ಪುದಿದು ಬೆರೆಸಿ ಬರೆ ಕನ್ನಡದೊಳ್ ಮುದಮನ್ ಅವುತರ್ಕುಂ, ಅತಿಶಯ-ಮೃದಂಗ-ಸಂಗೀತಾದಿ ಮಧುರ-ರವಂಬೋಲ್'(೫೫); `ತರಿಸಂದು ಆಸಕ್ಕದಮುಮನ್ ಅರಿಯದೆ ಕನ್ನದಮುಮಂ ಸಮಾಸೋಕ್ತಿಗಳೊಳ್ ಕುರಿತು ಬೆರೆಸಿದೊಡೆ ವಿರಸಂ, ಮರುಗುವ ಪಾಲ್ಗೆ ಅಳೆಯ ಪನಿಗಳಂ ಬೆರೆಸಿದ ವೋಲ್'(೫೮); `..........ಸಮಾಸೋಕ್ತಿಯೊಳ್ ಒಂದಾಗಿರೆ ಸಕ್ಕದಂಗಳಂ ಕನ್ನದಮುಂ ಸುಂದರಮಕ್ಕುಂ ಕವಿಪದಮೊಂದಿದವೋಲ್ ಕನಕರಚನೆಯೊಳ್ ಮಣಿನಿಕರಂ'(೬೧). ಕನ್ನಡವು ಸಮಸಂಸ್ಕೃತ ಪದಗಳಲ್ಲಿ ಹೊಂದಿ ಅದನ್ನು ಅಪ್ಪಿಕೊಂಡಹಾಗೆ, ತಿಳಿದು ರಚಿಸಲಿ; ಅರಿವಿಲ್ಲದೆ ಬೆರೆಸಿದರೆ ಕನ್ನಡದ ಕಾವ್ಯ ರಚನೆ ಹಿತವಾಗದು ಮತ್ತು ಅದು ಒತ್ತು ಕರಡೆ ಮದ್ದಳೆಗಳ ಬಡಿತದ ಹಾಗೆ ತುಂಬ ಕರ್ಕಶವಾಗುತ್ತದೆ. ಸಮಸಂಸ್ಕೃತಪದಗಳಲ್ಲಿ ಹೊಂದಿ ಬಂದಾಗ ಅವು ಮೃದಂಗಾದಿ ಮೇಳವುಳ್ಳ ಮಧುರ ಸಂಗೀತದಂತೆ ಸಂತೋಷವನ್ನೇ ಕೊಡುತ್ತವೆ. ಅರಿವಿಲ್ಲದೆ ಹಟದಿಂದ ಸಂಸ್ಕೃತ ಕನ್ನಡಗಳನ್ನು ಸಮಾಸೋಕ್ತಿಗಳಲ್ಲಿ ಬೆರೆಸಿದರೆ, ಕುದಿಯುವ ಹಾಲಿಗೆ ಮಜ್ಜಿಗೆಯ ಹನಿಗಳನ್ನು ಬೆರೆಸಿದಂತೆ, ವಿರಸವುಂಟಾಗುತ್ತದೆ. ಸಮಾಸೋಕ್ತಿಗಳಲ್ಲಿ ಸಂಸ್ಕೃತ ಕನ್ನಡಗಳು ಹೊಂದು ಒಂದಾಗಿ ಬಂದರೆ, ಬಂಗಾರದ ಕುಸುರಿಯಲ್ಲಿ ಹೊಂದಿಕೊಂಡ ಮಣಿಗಳ ಹಾಗೆ, ಕವಿತ್ವವು ಸುಂದರವಾಗುತ್ತದೆ.)

http://www.kannadasaahithya.com/uniarc/index.php?layout=main&cslot_1=324 > ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು, ಅಂತರ್ಜಾಲದಲ್ಲಿರುವ ಮೂರನೇ ಭಾಗ - ಕೆ. ವಿ ಸುಬ್ಬಣ್ಣ

ಕುತೂಹಲಕಾರಿಯೆಂದರೆ ಕವಿರಾಜಮಾರ್ಗ ಬರೆದ ಶ್ರೀವಿಜಯನೂ ಜೈನ. ಆದ್ದರಿಂದ "ಕಬ್ಬಿಗರ ಕಾವ"ಕ್ಕೆ ಅದು ಜೈನ ಬರೆದ ಕಾವ್ಯ ಎಂದು ಬೆಲೆ ಕೊಡಲಿಲ್ಲ ಎನ್ನುವುದು ಎಲ್ಲಿಯೋ ತಾಳೆಯಾಗದ, ವೈದಿಕ ಸಂಸ್ಕೃತಿಯ ಮೇಲಿನ ದ್ವೇಷದ (ನಿಜ ಆಶಯ ಹಾಗಿಲ್ಲದಿರಬಹುದು!!) ಮಾತು ಎನ್ನಿಸುತ್ತದೆ.

ವಿ ಸೂ : ಕಾಂಮೆಂಟ್ ಸ್ವಲ್ಪ ದೊಡ್ಡದಾಯಿತೇನೋ. ಆದರೂ ಭಾಷೆ-ವ್ಯಾಕರಣಗಳ ಮೇಲೆ ಮತ್ತೊಂದು ಲೇಖನ ಬರೆಯುವದಕ್ಕಿಂತ ಹೀಗೇ ಹಾಕುವುದು ಸರಿ ಎನ್ನಿಸಿತು. ಮತ್ತೊಮ್ಮೆ - ಕ್ಷಮೆ ಇರಲಿ.

------------------------------------------------------------------------------------------------------------

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 9, 2007 - 5:16pm — Sunil Jayaprakash

ಜ್ಞಾನದ ತುಡಿತವನ್ನು ತುಂಬಿಸದ ನುಡಿ ಜಾಳು ನುಡಿ

Sunil Jayaprakash's picture

ಶ್ರೀನಿಧಿಯವರೇ,

"ಸುಮ್ಮನೆ ಮಾತಿನ ತೆವಲಿಗೆ ಏನನ್ನೋ ಬಡಬಡಾಯಿಸಿ, ನಂತರ ಯಾರಾದರೂ ಅದಕ್ಕೆ ವಿರುದ್ಧವಾಗಿ ಆಧಾರಸಮೇತ ವಸ್ತುನಿಷ್ಟವಾಗಿ ಬರೆದು ಏನನ್ನಾದರೂ ನಿರೂಪಿಸಿದಾಗ, ಅದನ್ನು ಒಪ್ಪಿಕೊಳ್ಳಲು ಇಗೋ ಅಡ್ಡಬಂದು ತಮ್ಮ ಆಪಾದನೆಯನ್ನು ಹಿಂದೆಗೆದುಕೊಳ್ಳಲಾಗದೆ, ವೈಯಕ್ತಿಕ ಮಟ್ಟದಲ್ಲಿ ದೂಷಣೆಗಳನ್ನು ಮಾಡಿ ಚರ್ಚೆಯನ್ನು ಬೇರೆಡೆಗೊಯ್ಯುವ ಯತ್ನಗಳೇ ಅನೇಕ ಬಾರಿ ನಡೆಯುವ ಅಂತರ್ಜಾಲದಲ್ಲಿ", ನಿಮ್ಮ ಉತ್ತರ ಬೆಳ್ಳಿಯ ರೇಖೆಯಂತೆ ಮೂಡಿಬಂದಿತು. ನಿಮ್ಮ ಉತ್ತರಕ್ಕೆ ತುಂಬಾ ಸವಿಯೊದಗು. ನಾನು ಕೆ.ವಿ.ಸುಬ್ಬಣ್ಣ ಅವರ ಪ್ರಬಂಧವನ್ನು ಓದಿದ್ದೆನು. ಅದನ್ನು ಮತ್ತೊಮ್ಮೆ ನೆನಪಿಸಿದ್ದಕ್ಕಾಗಿ ಸವಿಯೊದಗು. ಹೇಳಲು ಏನೂ ವಿಷಯವೇ ಇಲ್ಲದೆ ಸುಮ್ಮನೆ ಮಾತನಾಡಬೇಕು ಅಂತ ಏನೇನೋ ಕಲ್ಪಿಸಿಕೊಂಡು ಬರೆದ ಟಿಪ್ಪಣಿಗಳ ಮಧ್ಯೆ ನಿಮ್ಮ ಟಿಪ್ಪಣಿ ಓದುಗರಿಗೆ ಹರ್ಷವನ್ನುಂಟು ಮಾಡಿರಬಹುದು. ನನಗಂತೂ ನಿಮ್ಮ ಟಿಪ್ಪಣಿ ಇಷ್ಟವಾಯಿತು.

@ಎಲ್ಲರೂ,
ಸ್ವಂತ ಆಲೋಚನೆಗಳಿಂದ ಕೂಡಿದ, ವಾದಕ್ಕಾಗಿ ವಾದ ಎನ್ನುವಂತಲ್ಲದ, ವೈಯಕ್ತಿಕ ಮಟ್ಟದ ದೂಷಣೆಗಳಿಲ್ಲದ, ವಸ್ತುನಿಷ್ಟವಾಗಿರುವ, ತಪ್ಪು ಒಪ್ಪುಗಳ ಬಗ್ಗೆ ಸ್ಪಷ್ಟವಾದ ಪರಿಕಲ್ಪನೆಯಿರುವ ಹಾಗು ಸ್ವಂತ ಅನುಭವಗಳ ಹಿನ್ನೆಲೆಯಿಂದ, ಕನ್ನಡದ ಒಳಿತಿಗಾಗಿ ನಮ್ಮ ಹಿರಿಯರು ಹೇಗೆ ಕೆಲಸವನ್ನು ಮಾಡಿದ್ದಾರೆ ಮತ್ತು ಮುಂದೆ ನಾವು ಹೇಗೆ ಮಾಡಬಹುದು ಎಂಬುದನ್ನು ಜ್ಞಾನದ ತುಡಿತವನ್ನು ತುಂಬಿಸುವ ನುಡಿ ಎಂಬ ಲೇಖನದಲ್ಲಿ ನಿರೂಪಿಸಿದ್ದೇನೆ. ಪ್ರೌಢವಯಸ್ಕರೂ, ಮನಸ್ಕರೂ ಆದ ಗೆಳೆಯರು, ವೈಯಕ್ತಿಕ ಮಟ್ಟದ ದೂಷಣೆಗಿಳಿಯದೆ, ಅವುಗಳನ್ನು ತಪ್ಪು ಎಂದು ನಿರೂಪಿಸಿದರೆ ಚರ್ಚೆಯನ್ನು ಮುಂದುವರಿಸಬಹುದು. ಅಥವಾ ಕನ್ನಡವು ಜಾಳಲ್ಲ ಎಂಬುದನ್ನು ಒಪ್ಪುವಿರಾದರೆ ಮುಂದುವರಿಸುವುದು ಬೇಡ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದಿಂದ ಸಕ್ಕದಕ್ಕೆ ಒರೆಗಳು
  • ಥೈ ಥಕ್ಕ ಥೈ
  • ಕನ್ನಡದ ಆಪು ಮತ್ತು ಇಂಗ್ಲೀಸ off ಎರಡು ಒಂದೇ
  • ಆ ಅಕೋ, ಅಗೋ, ಅದೋ
  • ಅಚ್ಚಕನ್ನಡದ ನೆಚ್ಚನ ಒರೆಗಳು
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಜೋಹದ್ (ನಂದುವಾಲಿ ನದಿ ಪ್ರದೇಶ), ರಾಜಸ್ಥಾನ

(ಚಿತ್ರ: Farhad Contractor.)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಮುಂಬಯಿ ಮುಖಗಳು ಭಾಗ ೧.....
  • ಗುಟ್ಟು - ಸ್ಫೂರ್ತಿ ಸೆಲೆ ೬
  • ಕಣ್ಣೀರು - ಸ್ಫೂರ್ತಿ ಸೆಲೆ ೫
  • ಜೀವನ - ಸ್ಫೂರ್ತಿ ಸೆಲೆ ೪
  • ಸಾಲ - ಸ್ಫೂರ್ತಿ ಸೆಲೆ ೩
  • ಸಂತೋಷ - ಸ್ಫೂರ್ತಿ ಸೆಲೆ ೨
  • ಹಣ - ಸ್ಫೂರ್ತಿ ಸೆಲೆ ೧
  • ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
  • ಮನಸ್ಸಿಗೂ ಅಂಗಿ. . ?
  • ನಿನ್ನ ನಗುವಿಗೆ ನನ್ನ ಕನಸನರ್ಪಿಸುವೆ..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಹಸಿವು - ಮಾಯ್ಸನ ಕಂತೆ ೧೨
    August 8, 2008 - 2:20am
  • anivaasi
    ಉ: ಮನಸ್ಸಿಗೂ ಅಂಗಿ. . ?
    August 8, 2008 - 2:15am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:13am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:06am
  • kalpana
    ಉ: Abroad ಅನ್ನೋ ಮಾಯೆ...
    August 8, 2008 - 12:11am
  • kannada.kanteerava
    ಉ: ಕನ್ನಡ ಮಾತನಾಡದ ಶಾಸಕ
    August 7, 2008 - 11:33pm
  • Rajeshwari
    ಉ: ಸ೦ಪದದಲ್ಲಿ ಜಾಣೆಯರು
    August 7, 2008 - 10:59pm
  • Jayalaxmi.Patil
    ಉ: ಮುಂಬಯಿ ಮುಖಗಳು ಭಾಗ ೧.....
    August 7, 2008 - 10:33pm
  • hamsanandi
    ಉ: ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
    August 7, 2008 - 9:56pm
  • shreedevikalasad
    ಉ: ಮನಸ್ಸಿಗೂ ಅಂಗಿ. . ?
    August 7, 2008 - 9:09pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 74 ಅತಿಥಿಗಳು ಆನ್ಲೈನ್ ಇರುವರು.


ಕಲ್ಪನೆ ಮತ್ತು ಕನಸುಗಳು ಬರಿಯ ತಿಳುವಳಿಕೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ.

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator