ಕತ್ತಲ ಕನಸು

ಆಹಾ! ಎಂತಹ ಕನಸು
ನಾನು ನೀನು ಇಬ್ಬರೇ
ಬೆಚ್ಚಗೆ ಮರದ ಕೆಳಗೆ
ಪಚ್ಚೆತಳಿರ ನೆಳಲೊಳಗೆ
ಆಹಾ! ಆ ತಂಗಾಳಿಗೆ
ಹಾರುವ ನಿನ್ನಾ ಕೂದಲು
ಮುಂಗುರುಳು ಹಾಗು
ನನ್ನಾ ತೇಲುವ ಮನಸ್ಸು
ಆಹಾ! ನಿನ್ನಾ ಸವಿನುಡಿಗೆ
ತುಡಿದು ಮಿಡಿದ
ತುಂಬುಒಲುಮೆಯ
ನನ್ನೀ ಪುಟ್ಟಎದೆ
ಹಾ ಹ! ಕನಸು ಬರೀ ಅದು
ಹುಸಿ ಹಗಲುಗನಸು
ಈ ತಣ್ಣನೆಯ ಕಗ್ಗತ್ತಲ
ಒಂಟಿ ಕೋಣೆಯಲ್ಲಿ !
- mahesha's blog
- Login or register to post comments
- 343 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಕತ್ತಲ ಕನಸು
ಮಹೇಶ,
ಕವನ ಚೆನ್ನಾಗಿದೆ.
-ಅನಿಲ್.
ಉ: ಕತ್ತಲ ಕನಸು
ಮಾಯ್ಸ
ಚೆನ್ನಾಗಿದೆ ಚೆನ್ನಾಗಿದೆ :)
ರಾಕೇಶ್ ಶೆಟ್ಟಿ :)
ಉ: ಕತ್ತಲ ಕನಸು
ಆಹಾ ! ಎಂತ ಅಧ್ಬುತ ಕವನ
ಕನಸಿನಲ್ಲೂ ನನ್ನ ಬಡಿದೆಬ್ಬಿಸಿ
ಬೆಚ್ಚಗಿನ ಮುದನೀಡಿದೆ
ನನ್ನನ್ನೇ ಮರೆಸುವಂತೆ !
ಶಹಭಾಷ್ ಮಹೇಶ
:)
ಯಾರು ಏನೆ ಹೇಳಿದರೂ ನಿನ್ನ ಮನಸ್ಸಿನಂತೆ ನಡೆ
ಅರವಿಂದ್
http://aravindnimmav...
http://abhimanihudug...
ಉ: ಕತ್ತಲ ಕನಸು
ಆಹಾ ! ಎಂತ ಅಧ್ಬುತ ಕವನ
ಕನಸಿನಲ್ಲೂ ನನ್ನ ಬಡಿದೆಬ್ಬಿಸಿ
ಬೆಚ್ಚಗಿನ ಮುದನೀಡಿದೆ
ನನ್ನನ್ನೇ ಮರೆಸುವಂತೆ !
ಶಹಭಾಷ್ ಮಹೇಶ
:)
ಯಾರು ಏನೆ ಹೇಳಿದರೂ ನಿನ್ನ ಮನಸ್ಸಿನಂತೆ ನಡೆ
ಅರವಿಂದ್
http://aravindnimmav...
http://abhimanihudug...
ಉ: ಕತ್ತಲ ಕನಸು
ಏನ್ರಿ ಅರವಿಂದ್
ಕನಸಿನಿಂದ ಗಾಬರಿಯಾಗಿ ಎದ್ದಿದ್ದಿರಾ? ;) ಒಂದೇ ಕಾಮೆಂಟ್ ಎರಡು ಸರಿ ಹಾಕಿದ್ದಿರಾ? :)
ರಾಕೇಶ್ ಶೆಟ್ಟಿ :)
ಉ: ಕತ್ತಲ ಕನಸು
ಏನು ಮಾಡೋದು ರಾಕೇಶ
ಕೆಲವು ಸಾರ್ತಿ ಹಾಗಾಗುತ್ತೆ, ಅಂತರ್ಜಾಲದ ಮಹಿಮೆನ ಬಲ್ಲವರಾರು ? :)
ಯಾರು ಏನೆ ಹೇಳಿದರೂ ನಿನ್ನ ಮನಸ್ಸಿನಂತೆ ನಡೆ
ಅರವಿಂದ್
http://aravindnimmav...
http://abhimanihudug...