ಕನ್ನಡದಲ್ಲಿ ’ಹೇಳಿ ಕೇಳಿ’
’ಹೇಳಿ ಕೇಳಿ’ ಅನ್ನು ನುಡಿಗಟ್ಟಿನ ಅರಿತ ಏನು?
ಈ ಹಾಡಲ್ಲಿ ಹುಡುಕಿ
ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲಿ ಬೇಸಗೆ ಕಾಲ
ಇನ್ನೆಲ್ಲಿ ನನಗೆ ಉಳಿಗಾಲ
ನಾ ನಿನ್ನ ಕನಸಿಗೆ ಚಂದಾದಾರನು
ಚಂದಾ ಬಾಕಿ ನೀಡಲು ಬಂದೇ ಬರುವೆನು
ನಾ ನೇರ ಹೃದಯದ ವರದಿಗಾರನು
ನಿನ್ನ ಕಂಡ ಕ್ಶಣದಲೇ ಮಾತೇ ಮರೆವೆನು
ಕ್ಶಮಿಸು ನೀ ಕಿನ್ನರಿ ನುಡಿಸಲೇ ನಿನ್ನನು
’ಹೇಳಿ ಕೇಳಿ’ ಮೊದಲೇ ಚೂರು ಪಾಪಿ ನಾನು
ನಿನ್ನ ಮನದ ಕವಿತೆ ಸಾಲ ಪಡೆವ ನಾನು ಸಾಲಗಾರ
ಕನ್ನ ಕೊರೆದು ದೋಚಿಕೊಂಡ ನೆನೆಪುಗಳಿಗೆ ಪಾಲುಗಾರ
ನನ್ನದೀ ವೇದನೆ ನಿನಗೆ ನಾ ನೀಡೆನು
’ಹೇಳಿ ಕೇಳಿ’ ಮೊದಲೇ ಚೂರು ಕಳ್ಳ ನಾನು
’ಹೇಳಿ ಕೇಳಿ’ = ?
ಒಂದೂ ಮಹಾಪ್ರಾಣವಿಲ್ಲದ ಕವಿತೆ ಅದಕ್ಕೆ ಇಂಪಾಗಿದೆ ![]()

- mahesha ರವರ ಬ್ಲಾಗ್
- Login or register to post comments
- 274 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಕನ್ನಡದಲ್ಲಿ ’ಹೇಳಿ ಕೇಳಿ’
"ಹೇಳಿ ಕೇಳಿ" ಅಲ್ಲ
"ಹೇಳೀ-ಕೇಳೀ" ಅದು .
ಎಲ್ರಿಗೂ ಗೊತ್ತಿರೋ ಹಾಗೆ , ಈಗಾಗಲೇ ನಿಚ್ಚಳ(ಸ್ಪಷ್ಟ)ವಾಗಿರುವಂತೆ ಅಂತ ಅರ್ಥ ...
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಕನ್ನಡದಲ್ಲಿ ’ಹೇಳಿ ಕೇಳಿ’
ಹೇಳಿ ಕೇಳಿ = ಈಗಾಗಲೆ ಎಲ್ಲರೂ ತಿಳಿದಿರುವಂತೆ, ಈಗಾಗಲೆ ಹೆಸರುವಾಸಿಯಾಗಿರುವಂತೆ.
ಜಯಂತ ಕಾಯ್ಕಿಣಿ ಸಕ್ಕತ್.....ಒಂದ್ಸಲ ಅವರಿಗೆ ಅಡ್ಡಬೀಳಬೇಕು ಅನ್ನಿಸ್ತಾ ಇದೆ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು