ಶಾಲ್ಮಲೆಯ ಮಲಟೀಕ್ಯಾಸ್ಟು
ಮಲಟೀಕ್ಯಾಸ್ಟು Multicast ಅನ್ನೋ ಪದವನ್ನು ಯಾರೂ ಹೇಸಿಗೆಯಾಗೋ ಬಗೆಯಲ್ಲಿ ಬಿಡಿಸಬಾರದು.
ಮಲಟೀಕ್ಯಾಸ್ಟು ಅಂದರೆ ಒಂದು ಸರವರಿಂದ ಒಂದು ಗುಂಪಿನ ಕ್ಲಯೆಂಟುಗಳಿಗೆ ಒಂದೇ ಡೇಟವನ್ನು ಒಂದೇ ಹೊತ್ತಲ್ಲಿ ಹರಿಸುವುದು. ಸಾಮಾನಿಯ ವಿಡಿಯೊ ಮತ್ತು ಆಡಿಯೊಗಳನ್ನ ಮಲಟೀಕ್ಯಾಸ್ಟು ಮಾಡುವವರು.
ನಾನು ಈ ಬಗ್ಗೆ ಊ(ಏನೋ) ಒಂದು ಆರಯ್ಯು ನಡೆಸಿ ತೋಱಿಸಬೇಕಿತ್ತು. ಅದಕ್ಕಾಗಿ ಕೋಡಿಂಗ್ ಮುಗಿಸಿ ಎರಡು ಮಡಿಲೆಣಿಗಳನ್ನ/ಲ್ಯಾಪ್ಟಾಪುಗಳನ್ನ ನನ್ನ ಸರವರಿಗೆ ಜೋಡಿಸಿ ಮಲಟೀಕ್ಯಾಸ್ಟು ಸುರು ಮಾಡಿದ್ದೆ. ಮಲಟೀಕ್ಯಾಸ್ಟಿಗೆ ನಾನು ಆಯಿದುಕೊಂಡ ಹಾಡು ನಮ್ಮ ನೆಚ್ಚಿನ ’ಗುಪ್ತಗಾಮಿನಿ ಶಾಲ್ಮಲಾ".
ಪ್ಯಾಕೆಟುಗಳ ಹರಿವು ಎಲ್ಲ ಸರಿಯಾಗೇ ಇತ್ತು. ಆದರೂ ನನಗೆ ಹಾಡೇ ಕೇಳಿಸ್ತಾ ಇರಲಿಲ್ಲ.. ನಾನು ಏನೋ ಆಗಿದೆ ಅಂತ ತಲೆ ಕೆರೇತಾ ಇವಳ ’ಗುಪ್ತಗಮನ’ ಹೇಗೆ ಪತ್ತೆ ಹಚ್ಚೋದು ಅಂತ ಕೂತಿದ್ದೆ. ಆಗ ನಮ್ಮ ಓಜೆಗಾರ/ಮ್ಯಾನೇಜರ್ ಬಂದು ನೋಡಿ, ಸುಮ್ಮನೇ ಒಂದು ಮಡಿಲೆಣಿಯ ಸದ್ದು ಹೆಚ್ಚು ಮಾಡಿದರೂ ಆ "ದುಂ ಎನುತ ಬಳಕುವವಳು" ಎಂದು ಶಾಲ್ಮಲೆ ಬಂದಳು... ನಾನು ನನ್ನ ಪೆದ್ದಿಗೆ ಪೆಚ್ಚಾಗಿ ಇನ್ನೊಂದು ಮಡಿಲೆಣಿಯ ಸದ್ದು ಹೆಚ್ಚಿಸಿದೆ.. ಅಲ್ಲಿ "ಕನಸಿನಲ್ಲಿ ತುಳುವವಳು.. ಸುಪ್ತ ಮೋಹಿನಿ" ಯಾಗಿದ್ದಳು....
ನಮ್ಮ ಓಜೆಗಾರ ಎಸ್ಟು ನಲಿವುಪಟ್ಟರು ಅಂದರೆ ಈ ಕುಶಿಗೆ ನಿನಗೊಂದು ಅವುತಣದೂಟ ಎಂದರು.. ಅವರಿಗೂ ಶಾಲ್ಮಲೆ ’ಗುಪ್ತಗಮನ’ ಅಸ್ಟು ಹಿಡಿಸಿದಳೇ ಎಂದು ನನ್ನ ತಲೇ ಎತ್ತಲೋ ಇತ್ತು. ಅವರು ಬೇಗ ಒಂದು ವಿಡಿಯೋ ತೋರಿಸು ಎಂದರು. ವಿಡಿಯೋ ಅಂತ ನಾನು ನನ್ನ ಎಣಿ/ಕಂಪಯೂಟರಲ್ಲಿ ಹುಡುಕಿದರೆ ’ಹಚ್ಚೇವು ಕನ್ನಡದ ದೀಪಕ್ಕೆ’ ಯಾವುದೇ ಒಂದು ಪುಟ್ಟಹುಡುಗಿ ಕುಣಿಯುವ ವಿಡಿಯೋ ಸಿಕ್ಕತ್ತು. ಅದೂ ಯಾವ ತೊಂದರೆ ಇಲ್ಲದೇ ಮಲಟೀಕ್ಯಾಸ್ಟು ಮಾಡಿದೆವು...
ಏನೇ ಆದರೂ ನನಗೆ ಶಾಲ್ಮಲೆ ’ದುಂ ಎನುತ’ ಬಂದುದು ಇನ್ನೂ ಹಾಗೇ ಮಯ್ಯಿನಿಮಿರಿಸಿ ತಲೆಯಲ್ಲಿ ಜುಂ ಎನ್ನಿಸುತ್ತಿದೆ... ಆ ತಪ್ತಕಾಮಿನಿಯ ತಾಪ ಪ್ರಬಾವವಿರಬೇಕು ![]()

- mahesha ರವರ ಬ್ಲಾಗ್
- Login or register to post comments
- 419 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಶಾಲ್ಮಲೆಯ ಮಲಟೀಕ್ಯಾಸ್ಟು
ಮಹೇಶರೇ,

ಅದು "ಮಲ'ಟೀಕ್ಯಾಸ್ಟು ಆಗಿರೋದು ನೀವು ಉಪಯೋಗಿಸುವ ಭಾಷೆಯಲ್ಲಿ ಮಾತ್ರ. ನನಗೆ ಬರುವ (ಸಾಮಾನ್ಯವಾಗಿ ಉಪಯೋಗಿಸುವ) ಭಾಷೆಯಲ್ಲಿ ನೇರವಾಗಿ ಮಲ್ಟಿಕ್ಯಾಸ್ಟ್ ಅಂತಾನೆ ಉಪಯೋಗಿಸಬಹುದು. ನೀವು ನಮ್ಮ್ ಭಾಷೆ ಉಪಯೋಗಿಸಿ ನೋಡಿ
ಅಂದ ಹಾಗೆ ನಿಮ್ಮ ಬರಹವನ್ನ್ ಕಷ್ಟ ಪಟ್ಟು ಅರ್ಥ ಮಾಡ್ಕೊಂಡೆ. ಸಾಮಾನ್ಯ ಕನ್ನಡದ ಆವೃತ್ತಿಯೊಂದನ್ನು ಒದಗಿಸಿದ್ರೆ (ನಿಮ್ಮ ಭಾಷೆಯದರ ಜೊತೆಯಲ್ಲಿ), ನಮ್ಮಂಥವರಿಗೆ ಕೊಂಚ ಅನುಕೂಲವಾಗುತ್ತೆ.
ನನ್ನಿ
ಉ: ಶಾಲ್ಮಲೆಯ ಮಲಟೀಕ್ಯಾಸ್ಟು
ಅಯ್ಯೋ ಯಾಕೆ ಕಸಟಪಡಕ್ಕೆ ಹೋದಿರಿ.. ಪಾಪಾ!!
ಇಂನು ಅರಿತ ಮಾಡಿಕೊಂಡ ಬಳಿಕ ಇಂನೊಂದು ಆವುರ್ತಿ ಯಾಕೆ?
ನನ್ನಿ ದಣಿವುಪಟ್ಟಿದಕ್ಕೆ!
=====================================
ಮಾಯ್ಸ!
ಉ: ಶಾಲ್ಮಲೆಯ ಮಲಟೀಕ್ಯಾಸ್ಟು
ವಾಹ್ ಪರವಾಗಿಲ್ವೇ. ಮಹೇಶ ಒಂದು ಡೌಟು. ನೀನು ಈ ಮಲ್ಟಿಕ್ಯಾಸ್ಟನ್ನು ಮಲಟೀಕ್ಯಾಸ್ಟು ಅಂತ ಬಳಸುವ ಹಾಗೆ, ಸಾಮಾನ್ಯವನ್ನು ಸಾಮಾನಿಯ ಎನ್ನುವ ಹಾಗೆ, ಗುಪ್ತಗಾಮಿನಿಯನ್ನು "ಗುಪುತಗಾಮಿನಿ" ಅಂತ ಯಾಕನ್ನಲ್ಲ, ತಪ್ತಗಾಮಿನಿಯನ್ನು "ತಪುತಗಾಮಿನಿ" ಅಂತೆ ಯಾಕನ್ನಲ್ಲ, ಶಾಲ್ಮಲೆಯನ್ನು "ಶಾಲುಮಲೆ" ಅಂತ ಯಾಕನ್ನಲ್ಲ ? ಈ ರೀತಿ ಒಂದೊಂದು ಕಡೆ ಒಂದೊಂದು ರೀತಿಯ ಬಳಕೆಗಳನ್ನು ಏಕೆ ಮಾಡುತ್ತೀಯಾ ?
ಉ: ಶಾಲ್ಮಲೆಯ ಮಲಟೀಕ್ಯಾಸ್ಟು
ಸರಿಯಾಗಿ ಹಿಡಿದ್ರಿ
ಠಕ್ಕ ಸಿಕ್ಕ !!!
ಉ: ಶಾಲ್ಮಲೆಯ ಮಲಟೀಕ್ಯಾಸ್ಟು
ಮೇಲಿನ್ನ ನನ್ನ ಮಾತು ಸುನೀಲರ ಪ್ರತಿಕ್ರಿಯೆಗೆ ಅನ್ವಯಿಸಿದ್ದು.