ನಿನ್ನ ನೆನೆಪು
ಇರಿದ ಎದೆಯ
ಬಿರಿದ ಗಾಯದ
ಉರಿವ ನೋವು
.....................ನಿನ್ನ ನೆನಪು
ಹದ್ದು ಮೀರಿದ
ಕದ್ದು ಹೋಗಿಹ
ಮುದ್ದು ಮುತ್ತು
.....................ನಿನ್ನ ನೆನಪು
ಬಿಳಿಯ ಹಾಳೆಯ
ಬಳಿಯ ಪೆಂನಿನ
ಹಳೆಯ ಓಲೆ
.....................ನಿನ್ನ ನೆನಪು
ನಿದ್ದೆ ಬಾರದ
ಮುದ್ದೆ ಸೇರದ
ಒದ್ದೆ ಕಣ್ಣು
.....................ನಿನ್ನ ನೆನಪು
ಇದ್ದು ಇರದಿಹ
ಒದ್ದು ಕೊರೆದಿಹ
ಮದ್ದು ನಂಜು
.....................ನಿನ್ನ ನೆನಪು
ನೆಂದು ನೆನೆದಿಹ
ತಂದು ತೊರೆದಿಹ
ಒಂದು ಕರಿಕೊಡೆ
.....................ನಿನ್ನ ನೆನಪು
-ಮಾಯ್ಸ
- mahesha's blog
- Login or register to post comments
- 758 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ನಿನ್ನ ನೆನೆಪು
"..ನಿದ್ದೆ ಬಾರದ
ಮುದ್ದೆ ಸೇರದ
ಒದ್ದೆ ಕಣ್ಣು
.....................ನಿನ್ನ ನೆನಪು..."
ಮುದ್ದೆ ಸೇರದ ಅಂದ್ರೆ ರಾಗಿ ಮುದ್ದೆ ಸೇರದ ಅಂತನಾ. ಯಾಕೆ ಉಪ್ಪೇಸ್ರ ಸಾರಿಗೆ ಸರಿಯಾಗಿ ಉಪ್ಪು,ಉಳಿ, ಕಾರ ಹಾಕಬೇಕಿತ್ತು :) :) :)
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ನಿನ್ನ ನೆನೆಪು
:)
=====================================
ಮಾಯ್ಸ!
ಉ: ನಿನ್ನ ನೆನೆಪು
ಚೆನ್ನಾಗಿದೆ ಮಯ್ಸಾ ..
ಉ: ನಿನ್ನ ನೆನೆಪು
ನನ್ನಿ ಹೇಮೀ
=====================================
ಮಾಯ್ಸ!
ಉ: ನಿನ್ನ ನೆನೆಪು
ಅರೆ ವಾಹ್....ತುಂಬ ಸ್ಪಷ್ಟವಾಗಿ ನೆರಾಗೆ ತಾಕುತ್ತಿದೆ ನಿಮ್ಮ ಕವನ... :-)
ಉ: ನಿನ್ನ ನೆನೆಪು
>>ಇರಿದ ಎದೆಯ
ಬಿರಿದ ಗಾಯದ
ಉರಿವ ನೋವು
.....................ನಿನ್ನ ನೆನಪು<<
ಈ ಸಾಲು ಹಿಡಿಸಿತು. ಪ್ರಾಸಕ್ಕಾಗಿ ಜಾಸ್ತಿಯೇ ತ್ರಾಸ ಪಟ್ಟಂತಿದೆ..:)