ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ
ಈ ಸಂಗತಿ ನಮ್ಮ ಪಕ್ಕದ ಎರಡು ರಾಜ್ಯಗಳಿಗೆ ಚನ್ನಾಗಿ ಹೊಂದುವುದು.
ನಾವು ಕನ್ನಡದೊರು, ನಾವಾಯ್ತು ನಮ್ ಮನೆ, ಕನ್ನಡ ನೆಲವಾಯ್ತು. ನಮ್ಮ ಸಿಟ್ಟುಪಟ್ಟು ಏನಿದ್ರೂ ನಮ್ಮ ಮನೆಯೊಳಕ್ಕೆ ಬಂದು ಗೊಡವೆ ಮಾಡೊರ ಮೇಲೆ ಅಷ್ಟೇ. ನಾವು ಕಾಸರಗೋಡು, ನೀಲಗಿರಿ, ಇಂತ ನೆಲಗಳನ್ನು ಬಿಟ್ಟಾಯ್ತು, ಸುಮ್ನೆ ಯಾಕೆ ಮತ್ತೆ ತರಲೆ ಅಂತ, ಅದರ ಬಗ್ಗೆ ತುಟಿಕ್-ಪಿಟಿಕ್ ಅಂದೇ ಇರೋ ಮಂದಿ.
ಆದ್ರೆ ನಮ್ ಬಡಗಕ್ಕೆ ಇರೋ ರಾಜ್ಯದವರಿಗೆ ಅದ್ಯಾಕೋ ನಮ್ ನೆಲದ ಮೇಲೇ ಹೊಂಚುಗಣ್ಣು. ಒಂದು ಮಹಾರಾಷ್ಟ್ರ ಅಂತ ಈಟುದ್ದಗಲ ರಾಜ್ಯ. ಇನ್ನೊಂದು ಗೋವೆ ಅಂತ ಪುಟಾಣಿ ರಾಜ್ಯ. ಇವರಿಬ್ರೂ ನಮ್ಮ ನಲೆದ ಬಗ್ಗೆ ಗೊಡವೆ ತಗೆದಿದ್ದಾರೆ. ಆದ್ರೆ ಇವರು ಏನೋ ಅಶ್ವಮೇಧಯಾಗ, ದಿಗ್ವಿಜಯ ಮಾಡೊರ ಹಂಗೆ ಆಡಿಕೊಂಡು ನಮ್ಮ ಕೂಟ ಗೊಡವೆಗೆ ನಿಂತಿಹರಾದ್ರು, ಅವರವರ ನೆಲಗಳಲ್ಲೇ ಅವರವರ ನುಡಿನಡೆ ಉಳಿಸಿಕೊಳ್ಳುವದರಲ್ಲಿ ತಿಣುಕಾಡ್ತಿದ್ದಾರೆ. ನಾವು ಕನ್ನಡದೊರು ಬಿಡಿ, ಬೇರೆಯೊರ ನೆಲವೂ ನಮಗೆ ಬೇಡ, ನಮ್ಮದೇ "ಎತ್ತು ಏರ್ಗೀಳೀತು, ಕ್ವಾಣ ನೀರ್ಗೀಳೀತು" ಅನ್ನೋ ಪಾಡು ಆಗಿದೆ.
ಮಹಾರಾಷ್ಟ್ರದಲ್ಲಿ ಮರಾಟಿ ಎಲ್ಲಿದೆ? ನಮ್ಮ ಕನ್ನಡನೆಲದಲ್ಲಿ ನಾವು ಇದು ಕನ್ನಡ, ಇದು ತೆಲುಗು, ಇದು ತಮಿಳು, ಇದು ಅದು, ಇದು ಇದು ಅಂತ ಬೇರೆ ಬೇರೆಯಾಗಿ ಕಾಣುವ ಹಾಗೇ ನುಡಿಗಳ ನಡುವೆ ಗಡಿಗೆರೆ ಇದ್ದೇ ಇದೆ. ಆದ್ರೆ ಅಲ್ಲಿ ಏನಾಗಿ ಹೋಗಿದೆ ಅಂದ್ರೆ, ಎಲ್ಲಾ ಅಂದ್ರೆ ಹಲವು ಮರಾಟಿ ಮಂದಿ ಹಿಂದಿ ಮಾತಾಡ್ತಾರೋ, ಮರಾಟಿ ಮಾತಾಡ್ತಾರೋ, ಅವರಿಗೆ ಹೇಳಕ್ಕೆ ಆಗಲ್ವಂತೆ. ಮಾರಾಷ್ಟ್ರದಲ್ಲಿ ಹಳ್ಳಿ ಹಳ್ಳಿಯಲ್ಲೂ ಅಚ್ಚಕಟ್ಟಾಗೇ ಹಿಂದಿ ಮಾತಾಡ್ತಾರಂತೆ, ಇನ್ನು ಹಿಂದಿ ಮತ್ತು ಮರಾಟಿ ಒಂದೇ ಲಿಪಿಯಲ್ಲಿ ಬರೆಯೋದ್ರಿಂದ ಇನ್ನೂ ಸಲೀಸು, ಒಂತೆರ ಮಹಾಮರಾಟರ ಮಾಮೂಲಿ ಮಾತೇ ಹಿಂದಿ ಆಗಿ ಹೋಗಿದೆಯಂತೆ. ಇದು ಬರೀ ಮುಂಬಯಿ, ಪುಣೆ, ಅಂತ ದೊಡ್ಡದೊಡ್ಡ ಹೊಳಲುಗಳಲ್ಲಿ ಅಲ್ಲ, ಸಣ್ಣಪುಟ್ಟ ಊರು ಕೇರಿ ಪಾಡು ಹಿಂಗೇ ಅಂತೆ. ಇದಕ್ಕೆ ಕನ್ನಡಿ ಹಿಡಿದಂತೆ, ಬಾಲಿವುಡ್ನ ಹಿಂದಿಹೊಡೆತಕ್ಕೆ ಮಹಾರಾಷ್ಟ್ರದಂತ ದೊಡ್ಡರಾಜ್ಯದ ನುಡಿ ಮರಾಠಿ ಸಿನಿಮ ಮಣ್ಣು ಮುಕ್ಕಿದೆ. ಈ ಮರಾಟಿ ಸಿನಿಮಕ್ಕಿಂತ, ನಮ್ಮ ಮಳಯಾಳಿ ಸಿನಿಮವೇ ಹೆಚ್ಚು ದುಡ್ಡು ಮಾಡ್ತದಂತೆ.
ಇನ್ನು ಗೋವೆ ಇವರು ಹಾಗೇ, ತಮ್ಮ ನೆಲದಲ್ಲಿ ಕೊಂಕಣಿಯನ್ನು ಗಟ್ಟಿ ಮಾಡೇ ಇಲ್ಲ. ಇನ್ನೂ ಗೋವೆಯಲ್ಲಿ ಕೊಂಕಣಿ ಯಾವ ಲಿಪಿಯಲ್ಲಿ ಬರೆಯಬೇಕು ಅನ್ನೋ ಗೊಡವೇ ತೀರೇ ಇಲ್ಲ. ಅಲ್ಲಿ ಮರಾಟಿಯೂ ಒಂದು ನುಡಿಯಾಗಿರುವದರಿಂದ, ಅಲ್ಲಿ ಸರಕಾರದ ಹೆಚ್ಚು ಕೆಲಸ ಮರಾಟಿಯಲ್ಲೇ ನಡೆಯೋದು. ಇನ್ನು ಕೊಂಕಣಿ ಸಿನಿಮ ಗಿನಿಮ, ಇಲ್ವೇ ಇಲ್ಲ.
ಆದ್ರೆ ಇವರಿಬ್ರಿಗೂ ನಮ್ಮ ಕನ್ನಡದ ನೆಲಬೇಕು ಅಂತ ಗೊಡವೆ ತೆಗೆದಿರೋದ್ರಿಂದ, ನಮ್ಮ ಕನ್ನಡದವರಿಗೆ ಬಲು ನೆರವೇ ಆಗಿದೆ. ಹೇಗೆ ಗೊತ್ತಾ? ಹೀಗಾದ್ರು ನಾವು ಅವರು ಬೇರೆ ಬೇರೆ ಅನ್ನೋದು ನಮ್ಮ ಕನ್ನಡದೊರಿಗೆ ಅರಿತವಾಗ್ತದೆ. ಹಾಗೇ, ನಮ್ಮ ನೆಲವನ್ನು ಕಸಿದುಕೊಳ್ತಾರೆ ಎಂಬ ಅಂಜಿಕೆಯಿಂದಾದ್ರು, ನೆಲದ ಮೇಲೆ ಎಚ್ಚರ ಇರ್ತದೆ. ಅದಕ್ಕೆ ಇರಬೇಕು, ನಾವು ನಮ್ಮ ಹಿತ್ತಿಲು, ಅಂಗಳಗಳಿಗೆ ಈಗೀಗ ಸಿಕ್ಕಾಪಟ್ಟೆ ಎಚ್ಚರ, ಒತ್ತು ಕೊಟ್ಟು ಕಾಪಾಡ ತೊಡಗಿರೋದು.
ಒಟ್ನಲ್ಲಿ, ತಮ್ಮನೆ ಹಿತ್ಲು ಹಾಳಾದ್ರೂ, ನಮ್ಮನಯೆ ಬೇಲಿ ಮುಚ್ಚಕ್ಕೆ ನೆರವಾದ ಇವರಿಗೆ ನಾವು ಕನ್ನಡದೊರು ನನ್ನಿ ಹೇಳ್‌ಬೇಕು. ![]()

- mahesha ರವರ ಬ್ಲಾಗ್
- Login or register to post comments
- 448 hits
- Email this blog





RSS:
ಪ್ರತಿಕ್ರಿಯೆಗಳು
ಉ: ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ
ರಾಜ್ಯದ ಎಲ್ಲ ಗಡಿಗಳಲ್ಲೂ ಮೊದಲು ಕನ್ನಡ ಶಾಲೆಗಳನ್ನು ಸರಿಯಾಗಿ ನಡೆಸಬೇಕು...
) ಕೆಲಸಗಳು ನಡೀಬೇಕು... ಹೀಗಾದರೆ ಮಾತ್ರ ಅಲ್ಲಿ ಕನ್ನಡ ಉಳಿಯುತ್ತೆ...
ಅವರಿಗೆ ಎಲ್ಲವೂ ಕನ್ನಡದಲ್ಲಿ ಸಿಗುವ ಹಾಗೆ ಮಾಡಬೇಕು...
ಸರಕಾರ ಅಲ್ಲಿಯ ಎಲ್ಲ ಸಮಸ್ಯೆಗಳಿಗೆ ದನಿ ಕೊಡಬೇಕು, ಅಲ್ಲಿಯ ಯುವ ಜನರಿಗೆ ಉದ್ಯೋಗ ಸಿಗುವಂತಾಗಬೇಕು...
ಇಲ್ಲದಿದ್ದರೆ ಅವರು ಪಕ್ಕದ ರಾಜ್ಯಗಳಿಗೆ ಒಲಸೆ ಹೋಗ ಬೇಕಾಗುತ್ತೆ...
ಅವರಿಗೆ ಕನ್ನಡ ಸರಕಾರ ಹತ್ತಿರವಿದೆ ಅನಿಸಬೇಕು... ಅಯ್ಯ ಬೆಂಗಳೂರಿನಲ್ಲಿರೋರಿಗೆ ನಮ್ಮ ಚಿಂತೆ ಇಲ್ಲ ಅನ್ನೋ ಹಾಗೆ ಆಗಬಾರದು.
ಆವಾಗಾವಗ ಅಲ್ಲಿ ಕನ್ನಡ ಉಳಿಸೋ (ಬೆಳೆಸೋ
ಉ: ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ
ಕನ್ನಡದೊರು ಪಕ್ಕ ರಾಜ್ಯಕ್ಕೆ ಹೋಗಲಿ, ಆದ್ರೆ ಪಕ್ಕದೊರು ಇಲ್ಲಿಗೆ ಬರೆದಿದ್ದರೆ ಸೈ!
ಉ: ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ
ಮಹಾರಾಷ್ಟ್ರದಲ್ಲಿ ಎಲ್ಲರೂ ಹಿಂದಿ ಮಾತಾಡುತ್ತಾರೆ ಅನ್ನೋದು ನಿಜ ಅಲ್ಲ. ನನ್ನ ಮರಾಠಿ ಗೆಲೆಯರೆಲ್ಲ ಜೊತೆಯಾದಾಗ ಮರಾಠಿ ಅನ್ನೇ ಮಾತಾಡೋದು. ಮುಂಬಯಿ, ಪುಣೆ ಬಿಟ್ಟರೆ ಬೇರೆ ಊರು ಹಳ್ಲಿಗಳಲ್ಲಿ ಮರಾಠಿಯೇ ಇಂದಿಗೂ ಅವರ ನುಡಿ. ಎಲ್ಲರಿಗೂ ಹಿಂದಿ ಬರೋದಿಲ್ವಂತೆ. ಅವರಿಗೂ ಹಿಂದಿ ಮರಾಠಿಯನ್ನು ನುಂಗಿಹಾಕೋ ಬಗ್ಗೆ ಸಿಟ್ಟು ಇದೆ.
ಆದರೆ ಮರಾಠಿ ಸಿನಿಮಾ-ನಾಟಕ ಸ್ವಲ್ಪ ಹೊಡೆತ ತಿಂದಿರೋದಂತೂ ನಿಜ.
ಇದೆಲ್ಲಾ ಒಳ್ಳೆಯದೇ ಆದರೆ ನಮ್ಮ ಬೆಳಗಾವಿ ಮೇಲೆ ಮರಾಠಿಗರು ಕಣ್ಣು ಹಾಕಿರೋದು ಚೆನ್ನಾಗಿಲ್ಲ.
ಮೇಲೆ ಮಹಾರಾಷ್ಟ್ರ- ಗೋವೆ, ಪಕ್ಕಕ್ಕೆ ಆಂಧ್ರ, ಕೆಲಗಡೆ ತಮಿಳುನಾಡು ಬರೀ ಕಾಟಗಳೇ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ
ಬಹುಶಃ ಮುಂಬಯಿ, ಠಾಣೆ ಜಿಲ್ಲೆಗಳು , ಮತ್ತು ವಿದರ್ಭದ ಭಾಗಗಳು ( ನಾಗ್‍ಪುರ್ ಇತ್ಯಾದಿ) ಗಳಲ್ಲಿ ಮಾತ್ರ ಹಿಂದೆ ನಡೆಯುತ್ತೆ. ಪುಣೆ ನಗರದ ಕೆಲವು ಕಡೆ ಹಿಂದೆ ನಡೆಯುತ್ತಾದರೂ, ಅಲ್ಲಿ ಇನ್ನೂ ಮರಾಠಿ ಸಂಸ್ಕೃತಿ ಜೀವಂತವಾಗಿದೆ.
ಮರಾಠಿಯಲ್ಲಿ ಸಿನೆಮಾರಂಗ ಹಿಂದಿಯ ಹೊಡೆತದಿಂದ ಹಿಂದೆ ಬಿದ್ದಿರಬಹುದು. ಆದರೆ, ಮರಾಠಿ ನಾಟಕಗಳು ಪುಣೆಯಲ್ಲಿ ಬಹಳ ಚೆನ್ನಾಗಿ ನಡೆಯುತ್ತವೆ. ವರ್ಷದ ಮುನ್ನೂರರವತ್ತೈದು ದಿನವೂ ನಾಟಕಳು ನಡೆಯುವ ಊರದು. ಮತ್ತೆ, ಅಲ್ಲಿನ ಮರಾಠಿ ಮಂದಿಗೆ ತಮ್ಮ ಭಾಷೆಯ ಬಗ್ಗೆ ಬಹಳ ಕಾಳಜಿ ಮತ್ತು ಹೆಮ್ಮೆ ಎರಡೂ ಇದೆ.
-ಹಂಸಾನಂದಿ
ಉ: ಪಕ್ಕದ ಮನೆಯವರ ಅಂಗಳವನ್ನು ಹಂಬಲಿಸಿಕೊಂಡು, ತಮ್ಮ ಮನೆಯ ಹಿತ್ತಿಲು ಕಳೆದುಕೊಳ್ಳುವ ಪೆದ್ದುಜಾಣ್ಮೆ
ನಿಮಗೆ ಸರಿಕ೦ಡ೦ತೆ ಮಾಡಿ, ಆದರೆ ಕಾಸರಗೋಡಿನವನದ್ದು ಕನ್ನಡಾಭಿಮಾನವಲ್ಲ, ಏನಿದ್ದರೂ ತನ್ನ ಬ೦ಧುಗಳ ಜೊತೆ ಇರುವ ಹ೦ಬಲವಷ್ಟೇ ಎನ್ನುವುದು ಯಾವ ಜಾಣತನ?
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು