ಕೊನೆಯ ಮಾತು
ಬದುಕು ಅಂದ ಮೇಲೆ ಬದಲಾವಣೆ ಬೇಕು.
ಬದಲಾವಣೆ ಅಂದ ಮೇಲೆ ಕೆಲವು ಹೊಸತು ಬರುವುದು, ಹಲವು ಹಳತು ಹೋಗುವುವು ಹಾಗೇ ಕೆಲವು ಹಳತು ಹೊಸತಾಗಿ ಉಳಿಯುವುವು.
ಹಾಗೆ ನಮ್ಮ ಬದುಕಿನ ಬದಲಾವಣೆಯ ಹಂತ ಹಂತಕ್ಕೂ ಇಂತವು ಆಗುತ್ತಲೇ ಇರುವುವು.
ಈಗ ನನ್ನ ಬದುಕಿನ ಮಾರ್ಪಿನ ಹಂತ..... ಅದಕ್ಕೀ ಕೊನೆಯ ಮಾತುಗಳು....
೧) ತನ್ನ ಗುರುತಿನ ಪ್ರಶ್ನೆ ಎಲ್ಲರಿಗೂ ಇರುವುದು. ನನ್ನ ಗುರುತು ಹೇಗೇ ಇರಲಿ ಅದು ನನ್ನದು, ತನ್ನ ನಂಬಿಕೆಗಳನ್ನು, ಗುರುತನ್ನು ಉಳಿಸಿಕೊಳ್ಳಲು ಹೋರಾಡುವ ಮಂದಿ ಮತ್ತು ಒಂದು ಸಮಾಜದಲ್ಲಿ ಉನ್ನತ, ಮೇಲ್ಮಟ್ಟದ ಗುರುತು ಇಂದು ಹಲವರ ಮಾತಿನಂತೆ ಆ ಸೊ ಕಾಲ್ಡ್ ’ಸಂಸ್ಕೃತಿ’ಗೆ ಜೋತು ಬಿದ್ದು ಅದು ತನ್ನ ಗುರುತನ್ನಾಗಿಸಿಕೊಳ್ಳಲು ಎಳಸಿ.. ಅದೇ ಸರಿಯಾದುದು ಎಂಬ ಕಟ್ಟರ್ ಮಂದಿ.
ಇವುಗಳ ಗದ್ದಲದಲ್ಲಿ ಯಾವಾಗಲೂ ಗೆಲುವು ಎಂದು ಜಯಘೋಷ ಮಾಡೋದು ’ಉನ್ನತ’ ಎಂದು ಹಲವರು ಹೇಳಿ ಜೋತು ಬಿದ್ದ ಮಂದಿ. ಆದರೆ ದಿಟವಾಗಲು ಗೆಲುವು ಅವರದಾಗಿರಲ್ಲ.
೨) ನಾವು ಎಶ್ಟು ಏನನ್ನೇ ಓದಿದ್ದರೂ, ನಮಗೆ ಏನು ಅನ್ನಿಸಿದ್ದರು.. ಹಲವು ಸಂಗತಿಗಳ ಸರಿತಪ್ಪುಗಳು ಎಂದು ತೀಮಾರ್ನವಾಗವು. ಆದರೂ ಎಲ್ಲದರಲ್ಲಿ ಸರಿತಪ್ಪು ಹುಡುಕುವ ಮಂದಿಯಿಂದ ಮಾಮೂಲಿ ಮಂದಿಯ ’ತಪ್ಪು’ಅನ್ನು ಮಾಡಿದವರಾಗಿ, ಕಶ್ಟಪಡುವುದು ಎಂದೂ ತಪ್ಪಲ್ಲ.
೩) ಹಲವು ಸರತಿ, ಹಾಲೆಂದು ಬೇರೆಯವರು, ಹೆಚ್ಚಿನವರು ನೀಡುವುದು, ಕುಡಿಯುವುದು ಹಾಲಗಿರಲ್ಲ.. ಅದನ್ನು ತಿಳಿದೂ ಅದೇ ’ಹಾಲ’ನ್ನು ಕುಡಿಯುವುದರ ಬದಲು ಎಲ್ಲೆಡೆ ಸಲ್ಲುವ, ಸಿಕ್ಕುವ ’ನೀರು’ಕುಡಿಯುವುದೇ ಲೇಸು.. ಎಶ್ಟೇ ಆದರೂ ಹಾಲಿಲ್ಲದೇ ಬದುಕಬೋದು, ನೀರಿಲ್ಲದೇ ಇಲ್ಲ. ಏನು ಮಾಡೋಣ.. ಹಾಲುಕುಡಿಯುವ ಬಯಕೇ, ಆದರೆ ಹಾಲಿನ ಹೆಸರಿನಲ್ಲಿ ಬೇರೇನು ಕೊಡುವರಲ್ಲ.
೪) ಗೆಳೆಯರು ಬರುವರು ಹೋಗುವರು. ಉಳಿಯುವವರು ಉಳಿಯುವರು. ಗೆಳೆತನ, ಒಲವು ಎಂಬುದು ೨-ವೇ ಆಗಿರಬೇಕು. ಎಂದು ೧-ವೇ ಆಯಿತೋ ಅಂದೇ ಆ ’ವೇ’ಅನ್ನು ನಾವು ಮುಚ್ಚಿಬಿಟ್ಟು.. ಅದು ಇನ್ನು ಇಲ್ಲ ಎಂದು ನೆಮ್ಮದಿಪಡಬೇಕು.
ಒಟ್ಟಿನಲ್ಲಿ...
ಕೆಲವನ್ನು ಮುಗಿಸುವ ಹೊತ್ತು ಬಂದಿದೆ... ಮುಗಿಸಿ ಬಿಡುವೆನು...
ಒಳ್ಳೇದಾಗಲಿ!

- mahesha ರವರ ಬ್ಲಾಗ್
- Login or register to post comments
- 327 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಕೊನೆಯ ಮಾತು
ಅಯ್ಯೋ ಬರೆಯೋದು ನಿಲ್ಲಿಸ ಬೇಡಿ.
ಉ: ಕೊನೆಯ ಮಾತು
ಯಾಕೆ ಮಹೇಶ್ ಏನಾಯ್ತು ?
http://thereda-mana.blogspot.com/
ರೂಪ
ಉ: ಕೊನೆಯ ಮಾತು
ಇಲ್ಲಿ ಬರೆಯದಿದ್ದರೂ ಆಗಾಗ ಇಣುಕುತ್ತಿರಿ (ಇಣುಕುತ್ತಿರುತ್ತೀರಿ ಎಂಬ ಅನುಮಾನ ನನ್ನದು
)
ಬೇಕಾದಾಗ ಬಂದು ಬರೆಯಲೇ ಬಹುದಲ್ಲ...
ಆಯಿತು... ಸುತ್ತಾಡಿಕೊಂಡು ಬನ್ನಿ... ಬರುವಿರಾದರೆ...
ಉ: ಕೊನೆಯ ಮಾತು
ಮಹೇಶರೆ,
ಹಾಗೇ ಕೆಲವು ಹಳತಾದವು ಹೊಸರೂಪದಲ್ಲಿ ಮತ್ತೆ ಮತ್ತೆ ಮರಳುವುದು!
ಮತ್ತೆ ಮರಳುವಾಗ ಪೂರ್ತಿ ಜೋಶ್ ನಲ್ಲಿ ಬನ್ರೀ
)
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/
ಉ: ಕೊನೆಯ ಮಾತು
--
ನನ್ನ ಬ್ಲಾಗ್:
ಪರಿವೇಶಣ | PariveshaNa