ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › mahesha ರವರ ಬ್ಲಾಗ್

ಚುರುಮುರಿಯಲ್ಲಿ ಬೈರಪ್ಪ

June 8, 2007 - 11:47am — mahesha

http://churumuri.wordpress.com/2007/06/08/churumuri-exclusive-sl-bhyrapp...

ಆವರಣದ ಬಗ್ಗೆ ಮಾತುಕತೆ!

ಆವರಣ ಬೈರಪ್ಪನವರ ಕಾದಂಬರಿ. ಅದರ ಬಗ್ಗೆ ಅವರು ಮಾತಾಡಿದ್ದಾರೆ.

ಹತ್ತುಪದ ತುಂಬಿವೆ!Smiling

  • ಭೈರಪ್ಪ
~.~
  • mahesha ರವರ ಬ್ಲಾಗ್
  • Login or register to post comments
  • 1610 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 8, 2007 - 2:32pm — ವೈಭವ

ಉ: ಚುರುಮುರಿಯಲ್ಲಿ ಬೈರಪ್ಪ

ವೈಭವ's picture

ಅವರ ಮಾತು ಕೇಳಿ ಬೇಸರವಾಯಿತು

೧) ಪ್ರಶ್ನೆ ಕೇಳುವವರು ಕನ್ನಡದಲ್ಲೇ ಕೇಳಿದ ಪ್ರಶ್ನೆಗೆ ಭೈರಪ್ಪ ಇಂಗ್ಲೀಸ್ ನಲ್ಲಿ ಮಾರುಉಲಿದರು Sad ಕನ್ನಡದಲ್ಲಿ ಮಾತಾಡಕ್ಕ ನಾಚಿಕೆನಾ?)
೨) ಮುಸ್ಲಿಮರು ಅವರ ಧರ್ಮವನ್ನು question ಮಾಡೇ ಇಲ್ಲ ಅಂದ್ರು

ಅ) ಭೈರಪ್ಪನವರಿಗೆ ಸೂಫಿ ಸಂತರ ಬಗ್ಗೆ ಗೊತ್ತಿಲ್ಲವೆ ? ಗೊತ್ತಿದ್ರೂ ಜಾಣ ಕುರುಡೇ?
ಆ) ಕಬೀರ್ ಮತ್ತು ಇನ್ನಿತರ ದಾಸ ಸಂತರ ಬಗ್ಗೆ ಗೊತ್ತಿಲ್ಲವೆ?
ಇ) ಬಡಗಣ ಕನ್ನಡ ನಾಡಿನಲ್ಲಿ ಮುಸ್ಲಿಮರು ಮತ್ತು ಲಿಂಗಾಯಿತರು ಒಟ್ಟಿಗೆ ದರ್ಗಾದಲ್ಲಿ ಪೂಜೆ ಮಾಡುವುದು ಇವರಿಗೆ ಗೊತ್ತಿಲ್ಲವೆ ?
ಈ) ಎಷ್ಟೊ ಕಡೆ ಗಣಪತಿ ಕೂರಿಸುವುದಕ್ಕೆ ಮುಸ್ಲಿಮರು ದುಡ್ಡು ಮತ್ತು ದುಡಿಮೆ ಕೊಟ್ಟಿಲ್ಲವೆ ?
ಉ) ಸೈಕಲ್ ರಿಪೇರಿ ಮಾಡಕ್ಕೆ ನಮಗೆ ಮುಸ್ಲಿಮರೇ ಬೇಕಲ್ಲವೆ
ಊ) ಇವರಿಗೆ ಸಂತ ಶಿಶುನಾಳ ಶರೇಫ, ಬಿಸ್ಮಿಲ್ಲ ಖಾನ್ ರವರ ಬಗ್ಗೆ ಗೊತ್ತಿಲ್ಲವೆ ? ಅಮೇರಿಕದ ಆಸೆ ತೋರಿದರೂ ಬಿಸ್ಮಿಲ್ಲ ಖಾನ್ ನನಗೆ ವಿಶ್ವನಾಥನೆ ಬೇಕು, ಗಂಗಾ ನದಿ ದಡ ಬೇಕು, ಗಂಟೆ ನಾದ ಕೇಳ್ತಾ ಇರಬೇಕು ಅಂತ ಹೇಳಿದ್ದರು.... ಇವೆಲ್ಲ ಭೈರಪ್ಪನವರಿಗೆ ಗೊತ್ತಿಲ್ಲವೆ ?

ಎ) ನಮ್ಮ ಮೈಸೂರು ಸೀಮೆಯಲ್ಲಿ ನಜೀರ್ ಸಾಬ್ ಅಂತ ಒಬ್ಬರು ಇದ್ದರು.. ಅವ್ರಿಗೆ 'ನೀರ್ ಸಾಬ್" ಅಂತಾನೆ ಇದ್ದರು... ಈಗಲೂ ಜನರಿಗೆ ಅವರ ಮೇಲೆ ತುಂಬಾ ಗೌರವ. ಅಷ್ಟೊಂದು ಕೆಲಸ ಮಾಡಿದ್ದಾರೆ.

ಇನ್ನೂ ಹೀಗೆ ಎಶ್ಟೊಂದು ಬರೀಬಹ್ದು....

ಒಳ್ಳೆಯವರು ಕೆಟ್ಟವರು ಎಲ್ಲ ಕಡೆ ಇರ್ತಾರೆ....ಹಾಗಂತ ಒಂದು ಧರ್ಮಕ್ಕೆ ಸೇರಿರುವ ಎಲ್ಲರ ಮೇಲೂ ಗೂಬೆ ಯಾಕೆ ಕೂರಿಸಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 2:34pm — mahesha

ಉ: ಚುರುಮುರಿಯಲ್ಲಿ ಬೈರಪ್ಪ

mahesha's picture

ಆ ಮಾತುಕತೆ ನಡೆಸಿದವರು 'vijayatimes' ಸುದ್ದಿಗಾರ ಅಂತೆ. ಅದಕ್ಕೆ ಅದು ಇಂಗ್ಲೀಸಲ್ಲಯ್ತೆ!
- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 3:00pm — prapancha

ಉ: ಚುರುಮುರಿಯಲ್ಲಿ ಬೈರಪ್ಪ

prapancha's picture

ಸ೦ದರ್ಶನಕಾರರು ಸ೦ದರ್ಶನದ ಆದಿಯಲ್ಲೇ ಹೇಳಿದರು, ಈ ಸ೦ದರ್ಶನ ಜಾಗತಿಕ ಓದುಗರಿಗಾಗಿ ಎ೦ದು. ಆದ್ದರಿ೦ದ ಬೈರಪ್ಪನವರು English ನಲ್ಲೇ ಮಾತನಾಡಿದ್ದು ಒಳ್ಳೆಯದಾಯಿತು. ನಾನು ನನ್ನ ಕನ್ನಡೇತರ ಸ್ನೆಹಿತರ ಜೊತೆ ಹ೦ಚಿಕೊಳ್ಳಲು ಸಾದ್ಯವಾಯಿತು ಕ್ಕೊಡ Smiling.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 3:12pm — ವೈಭವ

ಉ: ಚುರುಮುರಿಯಲ್ಲಿ ಬೈರಪ್ಪ

ವೈಭವ's picture

ಗೊತ್ತು... ನೀವು ಗಮನಿಸಲಿಲ್ಲ ಅನ್ಸುತ್ತೆ... ಒಂದು ಪ್ರಶ್ನೆ ಕನ್ನಡದಲ್ಲೇ ಇತ್ತು... ಆಗ ನಾನು ಭೈರಪ್ಪನವರು ಕನ್ನಡದಲ್ಲಿ ಉತ್ತರಿಸುವರು ಎಂದು ಎಣಿಸಿದ್ದೆ.. ನನ್ನ ಎಣಿಕೆ ತಪ್ಪಾಯಿತು...

ಇನ್ನೊಂದು ನನಗನ್ನಿಸಿದ್ದು... ಭೈರಪ್ಪನವರು ಇಂಗ್ಲೀಷ್ ನಲ್ಲಿ ಮಾತಡುವುದಕ್ಕೆ ಬಹಳ ಹೆಣಗಿದರು ಅನ್ನಿಸಿತು.,,,ಅದರ ಬದಲು ಕನ್ನಡದಲ್ಲೆ ಸಲೀಸಾಗಿ ಮಾತಾಡಿ 'english' ಸಬ್ ಟೈಟಲ್ ಕೊಡಬಹುದಿತ್ತು... ಇದರಿಂದ ಕನ್ನಡಿಗರಲ್ಲದವರು ಕನ್ನಡ ಕೇಳುತ್ತಿದ್ದರು.. ಕನ್ನಡದ ಹಿರಿಮೆ ಇನ್ನು ಹೆಚ್ಚುತ್ತಿತ್ತು.

-------------------
ಇನ್ನು 'ಆವರಣ' ವನ್ನು 'ಮುಚ್ಚು' 'ಮುಸುಕು' ಅನ್ನಬಹುದಿತ್ತು. ಒಟ್ಟಿನಲ್ಲಿ ಭೈರಪ್ಪನವರಿಗೆ ಈಗೀಗ ಕನ್ನಡಕ್ಕಿಂತ ಸಂಸ್ಕ್ರುತವೇ ಹೆಚ್ಚು 'ಪ್ರಿಯ' ಅನ್ಸುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 3:51pm — mahesha

ಉ: ಚುರುಮುರಿಯಲ್ಲಿ ಬೈರಪ್ಪ

mahesha's picture

ಆವರಣದಲ್ಲಿ ಮುನ್ನಡಿಯಲ್ಲಿ ಹೇಳಿರುವಂತೆ "ಆವರಣ", "ನಿಕ್ಷೇಪ" ಇವೆಲ್ಲ ಬೌದ್ದರ ಒರೆಗಳಂತೆ.!!

"ಮುಸುಕು" ಬಹಳ ಚನ್ನಾಗಿದೆ ಒರೆ.
- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 5:03pm — phmd

ಉ: ಚುರುಮುರಿಯಲ್ಲಿ ಬೈರಪ್ಪ

phmd's picture

The first thing that is to be understood is that the issue-AVARANA is no more restricted to Karnataka/Kannada,since most of the works of Sri S L Bhairappa are already converted to many Bharateeya languages.

As you have noted the names of great persons like -santa Shishunaala Sharif, etc. All Hindus have accepted them.

But no muslim(99%) remembers Sai baba or Shishunaal Sharif.. They only know about Bin Laden or Karim lala Telgi or Afzal Guru or Daood ibrahim...

Thecocept of Hindu-Muslim Bhai-Bhai, as told by Mahatma Gandhi(so called)has been accepted byevery hindu.But, tell me name of a single group of Muslims who tell Muslim-Hindu Bhai Bhai..

All Muslims first tell ---"You all Hindus first have to become Muslims, then only we are Bhai Bhai.."

If I am wrong, then tell me the reason---
Why the bloody Bin Laden, attacked America?

Why an educated Afzal Guru(infact a bastard) attacked the Bharat's Parliament (which is ofcourse a secular country by its inherent nature)?

If you want to build a great Rashtra then you should do it on the basis of truth..

In our text books, we all have seen the criticism of Hindu-beleifs like- Idol Worship, giving the reason of Secularism..

Show me a single text book which has told that "Burkha", weekly bathing,etc are bad things....

LETS BUILD OUR NATION ON THE BASIS OF TRUTH SOTHAT NEXT GENERATION CAN LIVE HERE WITH PRIDE.....
"BHAARAT MATA KEE JAI"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 8:53pm — muralihr

ಉ: ಚುರುಮುರಿಯಲ್ಲಿ ಬೈರಪ್ಪ

muralihr's picture

ಸ್ವಾಮಿ ! ಮೊದಲು ನೀವು ಕನ್ನಡದಲ್ಲಿ ತಾಳ್ಮೆಯಿ೦ದ ನುಡಿಯಿರಿ.
"ಭಾರತ್ ಮಾತಾ ಕೀ ಜಯ್ !! " -- ಇವೆಲ್ಲಾ ಬೇಕೇ ??
ಬರೀ ಭಾರತಕ್ಕೆ ಮಾತ್ರ ಏಕೆ ಎಲ್ಲರಿಗೂ ಜಯವಾಗಲಿ.

ಸರ್ವೇ ಭವ೦ತು ಸುಖಿನ :
ಸರ್ವೇ ಸ೦ತು ನಿರಾಮಯ :
ಸರ್ವೇ ಭದ್ರಾಣಿ ಪಶ್ಯ೦ತು
ಮಾ ಕಶ್ಚಿದ್ ದು:ಖ ಮಾಪ್ನುಯಾತ್ !
ತಪ್ಪಿದ್ದರೆ ತಿದ್ದಿ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 11, 2007 - 6:14pm — phmd

ಉ: ಚುರುಮುರಿಯಲ್ಲಿ ಬೈರಪ್ಪ

phmd's picture

Prasad

Sir may I know how to respond in Kannada?
where to type ?Should we use Baraha Software?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2007 - 1:33pm — ಶ್ರೀನಿವಾಸ ವೀ. ಬ೦ಗೋಡಿ

ಉ: ಚುರುಮುರಿಯಲ್ಲಿ ಬೈರಪ್ಪ

ಶ್ರೀನಿವಾಸ ವೀ. ಬ೦ಗೋಡಿ's picture

ನೀವು Baraha IME ಯನ್ನು ಕನ್ನಡ ಬರೆಯಲು ಬಳಸಬಹುದು. ಇದನ್ನು ಇಲ್ಲಿ೦ದ download ಮಾಡಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 2:56pm — prapancha

ಉ: ಚುರುಮುರಿಯಲ್ಲಿ ಬೈರಪ್ಪ

prapancha's picture

ಕೊ೦ಡಿಗಾಗಿ ದನ್ಯವಾದಗಳು. ಇದು ನಿಜವಾಗಿಯೂ Exclusive, ಈ ಸ೦ದರ್ಶನ ಬೈರಪ್ಪನವರ ಒಳ ಮನಸ್ಸನ್ನ ಬಿಚ್ಚಿಟ್ಟಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 4:02pm — muralihr

ಉ: ಚುರುಮುರಿಯಲ್ಲಿ ಬೈರಪ್ಪ

muralihr's picture

ಇಲ್ಲಿ ಭೈರಪ್ಪನವರುಹಿ೦ದೂಗಳು ತಮ್ಮ ಮೂಡ ನ೦ಬಿಕೆಗಳಿ೦ದ ಹೊರಗೆ ಬ೦ದಿದ್ದಾರೆ.
ಮುಸ್ಲಿಮ್ ಜನಾ೦ಗದವರು ಬರೋದಕ್ಕೆ ಆಗುತ್ತಿಲ್ಲಾ , ಕಾರಣ ಅವರ ಶಾಸ್ತ್ರಗಳನ್ನು Criticize ಮಾಡುವ
ಅಧಿಕಾರ ಯಾರಿಗೂ ಇಲ್ಲಾ ಅ೦ದಿದ್ದಾರೆ. ಆದರೆ ಕೆಲವು ದಿನದ ಹಿ೦ದೆ ಪಾಕಿಸ್ತಾನ ದ ಒಬ್ಬ ಮಹಿಳೆ ಬುರ್ಖಾ ಪದ್ದತಿಯನ್ನು
ಠೀಕಿಸಿ ಒ೦ದು ನಾಟಕವನ್ನು "ಬುರ್ಖಾವಗನ್ಜಾ" ಬರೆದಿದ್ದಾಳೆ. ಬುರ್ಖಾ ವನ್ನು ಹೆ೦ಗಸರ ಮುಖದ ಮೇಲೆ ಹೊರೆಸಿ
ತಾವು ಪರದೆಯ ಹಿ೦ದೆ ಮಾಡುವ ಕೆಲಸವನ್ನ್ ಬೀದಿಗೆಳೆದಿದ್ದಾಳೆ.
http://www.ajoka.org.pk/ajoka/burqa.asp
ಆದರೆ ಅವಳನ್ನು Arrest ಮಾಡಿ ತು೦ಬಾ ಚಿತ್ರ ಹಿ೦ಸೆಯನ್ನಿಟ್ಟ ಇಮಾಮ್ಮ ಗಳು , ಅವಳು ಹೇಳುತ್ತಿರುವ ಸತ್ಯವನ್ನು ಕೇಳಲು ತಯಾರಿಲ್ಲಾ.
ಈಕೆಯ ಹೆಸರು Shahid Nadeem ಶಹೀದ್ ನದೀಮ್.
http://www.ajoka.org.pk/ajoka/news_cuttings.asp

ಭೈರಪ್ಪನವರು ಮಾಡಿರುವ ಕೆಲಸ ಮತ್ತು ಈಕೆ ಮಾಡಿರುವ ಕೆಲಸವೆರಡು ಒ೦ದೇ.
ನಾವು ಭೈರಪ್ಪನವರ ಬರವಣಿಗ ಯನ್ನು ನಮ್ಮ ದೇಶದ ಪರಿಸ್ಥಿತಿಗೆ ಮಾತ್ರ ನೋಡದೆ ಆ ಧರ್ಮದ ವಿಚಾರಗಳು
ಯಾವ ರೀತಿ ಮನಸ್ಸನ್ನು ಛಿದ್ರಗೊಳಿಸಿದೆ ಎನುಉವುದು ಮುಖ್ಯ.
ನೀವು ದಯವಿಟ್ಟೂ ಈಕೆಯು ಬರೆದ ನಾಟಕಗಳ ಪರಿಚಯವನ್ನು ಓದಿ.
ಭೈರಪ್ಪನವರು ಆವರಣದಲ್ಲಿ Highlight ಮಾಡಿರುವ ಎಲ್ಲಾ ವಿಚಾರಗಳು ಪದ್ದತಿಗಳ
ಬಗ್ಗೆ ಇವಳು ಬಿಡಿ ಬಿಡಿಯಾಗಿ ನಾಟಕ ಬರೆದಿದ್ದಾಳೆ.
Moan Ke Naam (ಭೈರಪ್ಪನವರು ಆವರಣದಲ್ಲಿ ಅಮೀರನು ಎರಡನೇ ಮದುವೆಯಾದ ಹುಡುಗಿಗೂ ಚಿಕ್ಕ ವಯಸ್ಸು)
Maternal and child mortality is a major health issue in Pakistan which ranks among the most badly countries in the world. Besides the unavailability of facilities, a vital factor is the lack of awareness about the issue and the need to plan and prepare for safe and smooth child-birth.

Ajoka’s new play “ Maon Ke Naam” addresses this issue in an innovative and effective manner.

KALA MAINDA BHES (ಆವರಣದಲ್ಲಿ ರಾಜಕುಮಾರನು ಒಬ್ಬ ಪೀರ ಬಳಿ ಯಿರುತ್ತಾನೆ. )

. It’s about a small village in Cholistan where the villagers are being exploited by a "Peer" who has control of the only source of water in the village - the well. All this changes when a stranger comes into the village wanting to help the people by making them aware of the Peer’s tyranny.

“Mainoon Kari Kareenday Ni Mae” (They are honor-killing me O Mother!) is a fictional account of proceedings of a Panchayat of men sitting on Judgment of their own women, who are accused of violating the tribal code of honor, But the fact is that reality in our society is much stranger and shocking than fiction, as we have learnt for the cases such as the murder of Samia Sarwar and Meerwala gang rape.
(ಇದು ಕಾದ೦ಬರಿಯ ಪೂರ್ತಿ ಕಾಣುವ ದೃಶ್ಯ)
"Dukhini" is about the evil practice of trafficking of Bangladeshi women to Pakistan these women are lured, deceived. abducted from poor rural areas of Bangladesh and brought to Pakistan. mostly through India. They are sold in Pakistan as wives, maids or prostitutes, sometimes through open auction. Being illegal entrants, they have no legal protection. They are in fact vulnerable to exploitation by police and law enforcing authorities, They are unable to return to Bangladesh because they have no travel documents or proofs of identity. They are condemned to live a life of suffering, humiliation and insecurity in a foreign land.

ಮುಲ್ಲರ ಅಧಿಕಾರದ ಬಗ್ಗೆ ಆವರಣದಲ್ಲಿ ಚರ್ಚೆಯಾಗಿರುವ ವಿಷಯ.
Bulleh Shah" (1680-1758) lived in the times of the downfall of the Mughal Empire, Characterised by internecine conficts, rebellions, civil and religious strife and total ideological and political chaos, times essentially not much different for the present day South Asia. Bullah Shah was a beacon of hope and humanism, His powerful voive called for tolerance and love, while there was bigotism and hatred all around. He promted a relationship With dog which was non oppressive and enabled poople to be religious and yet respect other people's beliefe. He wrote about Comon People,their sufferings, their hopes. He did not see any conflict between his mystic beliefs and his devotion to music and dance. His condemnation of the misuse of religion by clerics and opportunists was total and attracted"fatwas" of "kufr" on several occasions. When he dies, the mullahs of Kasur refused to allow him be buried in the city graveyard. He was buried outside the city but today his grave is the centre of the city of Kasur. The city has moved to where Bulleh Shah Was Buried. That is the verdict of history and the living proof of the power of the mystics who preached love and sided with the people.
********************************************************************************************
Burqavaganza" is a satirical play, which uses Burqa as a metaphor for double standards and cover-ups in the society. The play shows all characters (men and women) wearing burqas, including politicians, terrorist leaders and policemen. Issues addressed include gender discrimination, religious extremism, terrorism, love marriage and media programmes promoting intolerance. It had been made very clear in the brochure of the play and before and after the play that the theme of the play was not critical of any one's religious beliefs or dress preference, but about the hypocrisy and double standards and the feudal/tribal mindset. The audience loved the play and it got very good press reviews. The play had been staged in collaboration with the Lahore Arts Council and the Executive director of the Council greeted the cast at the end of the play. On great public demand the play was again staged on 18 April at the Panjpani Indo-Pak Theatre Festival at Arts Council, Lahore.

3. The capitulationist stand taken by the Government in the face of MMA onslaught is very disappointing and disturbing. Instead of telling the fanatic MMA members not to intimidate theatre groups and the arts councils, he arbitrarily announced a ban on the play and promised further action. The speaker did not prevent the members from using defamatory language against two leading theatre practitioner Shahid Nadeem and Madeeha Gauhar. Reporting of the remarks can incite fanatics to further harass Ajoka, Arts Council and other artists in the country. It is disturbing that the Government of President Musharraf is taking a weak-kneed and apologetic stand on the continuous challenge by the pro-Taliban elements. The Government inaction over Jamia Hafsa stand off, Islami Jamiat attacks in Punjab University and moral policing in the NWFP have not only damaged government's credibility and ability to establish its writ, it has also emboldened the fanatics to spread their tentacles. The Government has totally failed to punish those who are challenging its writ and intimidating students and artists. It has also miserably failed to protect those are being intimated and attacked by the pro-Taliban elements.

ಈಗ ಹೇಳಿ ಭೈರಪ್ಪನ೦ತವರು ಮುಸ್ಲಿಮ್ ಸಮಾಜದಲ್ಲಿ (ಪಾಕಿಸ್ತಾನ, ಬಾ೦ಗ್ಲಾ) ಅದೆಷ್ಟು ಜನ ಬೇಕು ಅ೦ತಾ ??

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 4:19pm — ವೈಭವ

ಉ: ಚುರುಮುರಿಯಲ್ಲಿ ಬೈರಪ್ಪ

ವೈಭವ's picture

ಮುರಳಿ,
ಹಿಂದೂ , ಮುಸ್ಲಿಂ ಎರಡರಲ್ಲೂ ಕಂದಾಚಾರ ಇವೆ ಅಂತೆ ಎಲ್ಲರೂ ಒಪ್ಕೊತಾರೆ.
ಆದ್ರೆ ಬೈರಪ್ಪನವರು ಹಿಂದೂಗಳೂ ಅವುಗಳಿಂದ ಹೊರಗೆ ಬಂದಿದ್ದಾರೆ ಹೇಳ್ತಾರೆ...ಇದು ಸುಳ್ಳು
ಇದಕ್ಕೆ ಈ ಉರಿಯುತ್ತಿರುವ/ ಜ್ವಲಂತ ಉದಾ ಗಮನಿಸಿ:-
೧) ಕೇರಳದಲ್ಲಿ ಯಾರೊ ಗುಡಿಯೊಳಗೆ ಬಂದ್ರೂ ಅಂತ 'ಶುದ್ಧಿ' ಮಾಡಿದ್ರಂತೆ.
೨) ಕೆಲವು ಗುಡಿಗಳೊಳಗೆ ಹಿಂದೂ ಹೆಂಗಸರಿಗೆ ಒಳಗೆ ಬಿಡೊಲ್ಲ. ಅದಕ್ಕೆ ಹುಚ್ಚು ಕಾರಣ ಕೊಡ್ತಾರೆ.
ಹೀಗೆ ಇನ್ನು ಹೇಳ್ಬಹುದು

ನಾನು ಹೇಳೋದು ಇಶ್ಟೂ
ಎಲ್ಲ ಧರ್ಮದಲ್ಲೂ ಇನ್ನೂ ಕಂದಾಚಾರ ಇವೆ.... ನಾವು ಕಡಿಮೆ ನೀವು ಹೆಚ್ಚು ಕಂದಾಚಾರ ಇಟ್ಕೊಂಡಿದೀವಿ ಅನ್ನೋದ್ರಲ್ಲಿ ಅರ್ಥ ಇಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 4:46pm — mahesha

ಉ: ಚುರುಮುರಿಯಲ್ಲಿ ಬೈರಪ್ಪ

mahesha's picture

ವೈಬವ...

ನೀನು ಇಂತಹ ವಿಚಾರ ಎತ್ತಿದ್ದು ಒಂದು ಒಳ್ಳೆಯ ಸಂಗತಿ.

ಬೈರಪ್ಪನವರು ಆ ತಮ್ಮ ಮಾತಲ್ಲಿ "ಆವರಣದ ತಿರುಳ ಬಗ್ಗೆ, ಅದರ ಹಿಂದಿನ ಸಿದ್ಧಾಂತಗಳ ಹುರುಳು, ಆಧ್ಯಾತ್ಮದ ಬಗ್ಗೆ ಹೆಚ್ಚು ಮಾತುಕತೆಯೇ ನಡೆಯಲಿಲ್ಲ. ಬದಲಿಗೆ 'ಆವರಣ' ಸುತ್ತ ಬರೀ ರಾಜಕೀಯದ ಮಾತುಕತೆಗಳೇ ಬಲು ನಡೆದು ಹೋಯಿತು" ಎಂದಿದ್ದಾರೆ ಅಲ್ವಾ!!

'ಆವರಣ'ದ ಸುತ್ತ, ರಾಜಕೀಯ, ತಮ್ತಮ್ಮ ಒಳಹಗೆ ಬರೆಸದೇ, ಇಂತಹ ಮಾತುಗಳು ದಿಟವಾಗಿಯೂ ಒಳ್ಳೇದು.
- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 5:09pm — prapancha

ಉ: ಚುರುಮುರಿಯಲ್ಲಿ ಬೈರಪ್ಪ

prapancha's picture

ವೈಬವರೇ,
ಹಿ೦ದೂ ದರ್ಮದಲ್ಲಿ ಕ೦ದಾಚಾರವಿಲ್ಲ ಎ೦ದು ಬೈರಪ್ಪನವರೂ ಹೇಳಲಿಲ್ಲ, ಮುರಳಿಯವರೂ ಹೇಳಲಿಲ್ಲ.
ಆದರೆ ಇವರುಗಳು ಹೇಳಿದ್ದು ಹಿ೦ದೂ ದರ್ಮವು critisism ಗೆ ಯಾವಾಗಲೂ ಮುಕ್ತವಾಗಿರುತ್ತದೆ. ಇತರೆ ದರ್ಮಗಳ೦ತೆ ಶತಮಾನಗಳ ಆಚರಣೆಗಳನ್ನ ಯಾರೂ ಪ್ರಶ್ನಿಸಬಾರದು ಎನ್ನುತ್ತಿಲ್ಲ!. ನಿಮಗೆ ತಿಳಿದ೦ತೆ ಹಿ೦ದೂ ದರ್ಮದಲ್ಲಿ ಅದೆಷ್ಟೋ ಮೂಡ ನ೦ಬಿಕೆಗಳಿದ್ದವು ಸತಿ ಸಹಗಮನ, ಬಾಲ್ಯ ವೀವಾಹ ಮು೦ತಾದವು, ಅವುಗಳನ್ನೆಲ್ಲ ತೊಡೆದು ಆಕಿಲ್ಲವೇ?.
ಇನ್ನು ಕೇರಳದ ದೇವಸ್ಥಾನದ ವಿಶಯ, ದೇವಸ್ಥಾನವು ಬಸ್ ನಿಲ್ದಾಣ, ರೈಲು ನಿಲ್ದಾಣ ಗಳ೦ತೆ ಸಾರ್ವಜನಿಕ ಸ್ತಳವೇ? ಅಥವ ಇವು ಒ೦ದು ಪ್ರವಾಸಿ ತಾಣವೆ? ಅಲ್ಲಿ ಹೋಗ ಬೇಕಾದರೆ ಶ್ರದ್ದೆ ಇರಬೇಕು, ನ೦ಬಿಕೆ ಇರಬೇಕು. ಇಲ್ಲಿ ದರ್ಶನ ಕೇಳುತ್ತಿರುವುದು ಕ್ರಿಶ್ಚಿಯನ್ನರು, ಬಾರತದ ಕ್ರಿಶ್ಚಿಯನ್ನರು ಮೊದಲು ಹಿ೦ದೂಗಳೇ, ಅವರು ದರ್ಮವನ್ನ ಬಿಟ್ಟು ಹೋಗುವಾಗ ಹಿ೦ದು ದರ್ಮದಲ್ಲಿ ನ೦ಬಿಕೆ ಇಲ್ಲ ಎ೦ದೇ ತಾನೆ ಹೋಗಿರುವುದು? ನ೦ಬಿಕೆ ಇಲ್ಲದ ಮೇಲೆ ಈಗೇಕೆ ದರ್ಶನ?.
ನನ್ನ ಅನಿಸಿಕೆಯಷ್ಟೇ! ತಪ್ಪಿದ್ದರೆ ಕ್ಷಮಿಸಿ Smiling
ದನ್ಯವಾದಗಳೊ೦ದಿಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 5:35pm — mahesha

ಉ: ಚುರುಮುರಿಯಲ್ಲಿ ಬೈರಪ್ಪ

mahesha's picture

religion = ದರ್ಮ. ,ಮತ
lifestyle = ಜೀವನ ಕ್ರಮ

ಈ ಅರ್ತದಲ್ಲಿ ನಾನು ಹೇಳಿದ್ದು.

Religion—sometimes used interchangeably with faith or belief system—is commonly defined as belief concerning the supernatural, sacred, or divine, and the moral codes, practices and institutions associated with such belief. In its broadest sense some have defined it as the sum total of answers given to explain humankind's relationship with the universe.

Lifestyle is a way of living based on identifiable patterns of behaviour based on an individual’s choice, influenced by the individual’s personal characteristics, their social interactions, and socioeconomic and environmental factors.A person's pattern of living as expressed in his or her activities, interests, and opinions.

"ಹಿಂದು" ಬಗ್ಗೆ ನಂಗೆ ಇನ್ನೂ ಗೊಂದಲ!...

ಇಂಗ್ಲೀಶು ಜಾಸ್ತಿ ಬಳಸಿದ್ದಕ್ಕೆ ಮನ್ನಿಸಿರಿ!
- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 5:58pm — ವೈಭವ

ಉ: ಚುರುಮುರಿಯಲ್ಲಿ ಬೈರಪ್ಪ

ವೈಭವ's picture

ಹೋಗಿದ್ದರೂ ಅದು ಅವರ ತಾತನೋ ...ಮುತ್ತಾತನೋ ಹಾಗೆ ಮಾಡಿರಬಹುದು.

ಅಪ್ಪ ಹಾಕಿದ್ದ( ಅಥವ ತಾತ) ಮರಕ್ಕೆ ನೇಣು ಹಾಕೋ ಬೇಕು ಅಂತೇನೂ ಇಲ್ಲ ಅಲ್ವ.....ಒಬ್ಬ ೨, ೩ ನೇ ಕ್ರಿಶ್ಚಿಯನ್ ತಲೆಮಾರಿನ ಒಬ್ಬ ಮನುಸ್ಯನಿಗೆ ಆ ದರ್ಮದ ಬಗ್ಗೆ ಅಸಯ್ಯ್ ಹುಟ್ಟಿರಬಹುದು... ಅವನಿಗೆ ನಿಜಕ್ಕೂ ಹಿಂದೂ ದರ್ಮದ ಬಗ್ಗೆ ಗೌರವ ಹುಟ್ಟಿರಬಹುದು... ಇದನ್ನೆಲ್ಲ ನೋಡದೆ ನೀವು ಗುಡಿಯೊಳಗೆ ಬರಬೇದಿ ಎಂದು ಹೇಳುವುದು ಒಳ್ಳೆ 'ಪ್ರಜಾಪ್ರಭುತ್ವದ' ( democratic) ಅಲ್ಲ.. ಹೀಗೆ ಮುಸ್ಲಿಂ ದರ್ಮದಲ್ಲೂ anti-democratic ನಿಲುವುಗಳು ಇರಬಹುದು. ಇವೆ.

ಅದನ್ನೆ ನಾನು ಹೇಳ್ತಾ ಇರೋದು ಹೀಗೆ ನಾವು ಚರ್ಚೆ ಮುಂದುವರೆಸಿಕೊಂಡು ಹೋಗಬಹುದು.
ಅದರ ಬದಲು ಎರಡು ದರ್ಮದಲ್ಲೂ anti-democratic ನಿಲುವುಗಳಿವೆ ಎಂದು ಒಪ್ಪಿಕೊಳ್ಳವುದು ಒಳಿತು.

' ಎಲ್ಲ ಮನುಸ್ಯರು ಒಂದೇ ' ಅನ್ನುವ ತತ್ವಕ್ಕೆ ಜಾಸ್ತಿ importacne ಕೊಡಬೇಕು....ಇನ್ನೆಲ್ಲ "ತ್ವ' ( ಹಿಂದುತ್ವ,ಮುಸ್ಲಿಮತ್ವ) ಗಳು ನನ್ನ ಮಟ್ಟಿಗೆ 'ಹೊತ್ತು ಕಳೆಯುವ' ಸಾದನಗಳು( time pass)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 6:09pm — mahesha

ಉ: ಚುರುಮುರಿಯಲ್ಲಿ ಬೈರಪ್ಪ

mahesha's picture

ವೈಬವ...

ಯಾಕೆ ದೇವರನ್ನು ನಾಲ್ಕು ಗೋಡೆಗಳ ನಡುವೆ ಕೂಡು ಹಾಕಿ ಗುಡಿ ಕಟ್ತಾರೋ. ಕಟ್ಟಿ ಬರಿ ಕೆಲವರಿಗೆ ಹೊಗಲು ಬಿಡುವರು.

ವೀರಶೈವರಲ್ಲಿ ಇರುವ ಹಂಗೆ
"ಸ್ಥಾವರಕ್ಕೆ ಕಳಿಯಿಂಟು ಜಂಗಮಕ್ಕೆ ಕಳಿಯಿಲ್ಲ" ಎಂಬಂತೆ, ದೇವರು ಯಾವಾಗಲು ಜಂಗಮ/ನಿಂತಲ್ಲಿ ನಿಲ್ಲದೇ ಮನೆ ಮನೆಗೆ ಬರಬೇಕು. ಇದೇ ಅಲ್ವಾ ಮಲೆ ಮಾದಪ್ಪ ಮಾಡಿದ್ದು!!

- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 6:05pm — muralihr

ಉ: ಚುರುಮುರಿಯಲ್ಲಿ ಬೈರಪ್ಪ

muralihr's picture

ಇರಲಿ , ಅದಕ್ಕೆ ನೀವು ಪ್ರತಿಭಟನೆ ಮಾಡಬಹುದು , ಠೀಕೆ ಮಾಡಬಹುದು. ಯಾರು ನಿಮ್ಮನ್ನು ತಡೆಯುವುದಿಲ್ಲಾ. ಪೋಲಿಸ್ complaint ಕೊಡಬಹುದು. ಆದರೆ ನೀವು ಪಾಕಿಸ್ತಾನಕ್ಕೆ ಹೋಗಿ ಅಥವಾ ಇರಾನ್ ಗೆ ಹೋಗಿ ಖುರಾನ್ ಬಗ್ಗೆ Negative comment ಮಾಡಿದರೆ ನಿಮ್ಮ ಕತ್ತು ಕೀಳುತ್ತಾರೆ. ನೀವು ಭಗವದ್ಗೀತೆಯ ಬಗ್ಗೆ ನಿಮ್ಮದೇ Criticism ಬರೆಯಬಹುದು. ಆದರೆ ಖುರಾನ್ ಬಗ್ಗೆ ನೀವು Critic ಆಗುವುದಕ್ಕೆ ಆ ಧರ್ಮ ಬಿಡುವುದಿಲ್ಲಾ. ಕಾರಣ ಅದು ಪವಿತ್ರ.

ಗೀತೆಯಲ್ಲಿ ಕೊನೆಯ ಮಾತು "ಅರ್ಜುನ ! ನೀನು ನಿನ್ನ ಇಷ್ಟದ೦ತೆ ಮಾಡೂ .. ನಾನು ಹೇಳಿದ್ದನ್ನು ಹೇಳಿದ್ದೇನೆ". ಶ್ರಿ ರ೦ಗರು ಭಗವದ್ಗೀತೆಯ ಬಗ್ಗೆ ಒ೦ದು ಪುಸ್ತಕ ಬರೆದಿದ್ದಾರೆ. ಅದರಲ್ಲಿ ಹಿ೦ದೂ ಧರ್ಮ್ ದ ಮಾತೇ ಇಲ್ಲಾ. ಅದೊ೦ದು ಸಮಾಜ್ ಶಾಸ್ತ್ರದ೦ತೆ ಬರೆದಿದ್ದಾರೆ. ಹೀಗೆ ಕೆಲವರು ಗೀತೆಯನ್ನು ತೆಗಳಿದ್ದಾರೆ, ಕೆಲವರು ಹೊಗಳಿದ್ದಾರೆ.. ಎಲ್ಲರಿಗೂ ತಮ್ಮ ತಮ್ಮ ಅಭಿಪ್ರಾಯವನ್ನು ಹೇಳುವ ಧಾರ್ಮಿಕ ಸ್ವಾತ೦ತ್ರ್ಯವನ್ನು ನಮ್ಮ ಸಮಾಜದಲ್ಲಿ ಅ೦ದಿನಿ೦ದ ಇದೆ.

ಆಮೇಲೆ ಎಲ್ಲೂ ಕುರುಡ ಕುರುಡಾಗಿ ಧರ್ಮವನ್ನು ಮಾಡೂ ಅ೦ತಾ ಹೇಳಿಲ್ಲಾ.(ಆದರೂ ಹೆಚ್ಚಾಗಿ ಕುರುಡ ಕುರುಡಾಗಿ ಆಚರ್ಣೆಯನ್ನು ಮಾಡುತ್ತಾರೆ.) ನೀವು ಯಾವುದೇ ಹಿ೦ದೂ ಆಚಾರ್ಯರ ಧಾರ್ಮಿಕ ಪುಸ್ತಕ ತೆಗೆದರೆ ನಿಮ್ಮ ಕಣ್ಣಿಗೆ ಕಾಣಿಸುವ ಪದ - ಸತ್ಯ, ಪ್ರಜ್ನೆ, ವಿವೇಕ, ಮನಸ್ಸು , ಪರಿಗ್ರಹ, ಪ್ರಾಣ, ಇ೦ದ್ರೀಯಾ, ಸ೦ಯಮ, ಜಾಗೃತ,ದು:ಖ ನಿವಾರಣೆ, ಶಾ೦ತಿ, .... ಅದು ವ್ಯಕ್ತಿಯನ್ನು ಪ್ರಚೋದಿಸುತ್ತದೆ.
ಆದರೆ ಮಿಕ್ಕ ಧರ್ಮಗಳೂ ಗು೦ಪುಗಳನ್ನು ಕಟ್ಟಿ ಯುದ್ಧ ಕಲಹ ಗಳನ್ನು ಮಾಡಿರುವುದು ಇತಿಹಾಸ.
ಅದಕ್ಕೆ ಹಿ೦ದೂ ಧರ್ಮ ಯಾವತ್ತು ಒ೦ದು ಗು೦ಪಿನ ಧರ್ಮವಾಗಲಿಲ್ಲಾ.... ವ್ಯಕ್ತಿಯ ಧರ್ಮವಾಯಿತು.
ಆದರಿ೦ದ ಹಿ೦ದೂಗಳಿಗೆ ದೇವಸ್ಥಾನ , ಶಾಸ್ತ್ರ ಇತ್ತ್ಯಾದಿ ಮುಖ್ಯವೆನಿಸಲಿಲ್ಲಾ.
ಹಾಡು ಮತ್ತು ಕುಣಿತವೇ ಧರ್ಮವಾಯಿತು.
ಆದರೆ ಅಲ್ಲಿ ಮಹಮ್ಮದ ಹಾಡ ಬೇಡಿ ಅ೦ದರೆ ಅಲ್ಲಿ ಯಾರು ಹಾಡಲಿಲ್ಲಾ.

"Music is Haram" ಎ೦ದು ಕರೆದವರು ,http://www.themuslimwoman.com/beware/MusicisHaram.htm
ಸೌ೦ದರ್ಯ ಪ್ರಜ್ಞ್ನೆ ಯನ್ನು ಹೊ೦ದುವುದಾದರು ಹೇಗೆ ?
ಅದಕ್ಕೆ ಪಾಪ ಅವರು ಅರೇಬಿ ದೇಶ ಬಿಟ್ಟು ಇಲ್ಲಿ ಭಾರತದಲ್ಲಿ ಸ೦ಗೀತವನ್ನು ಕಲಿತು ಸೂಫಿ ಎ೦ದು ಕರೆದುಕೊ೦ಡರು.
ನಮ್ಮಲ್ಲಿ ಸ೦ಗೀತದಿ೦ದ ದೇವರನ್ನು ದರ್ಶನ ಮಾಡಿದವ್ರು೦ಟು ಅನ್ನುವ ಕಥೆಯಿದೆ.
ಈ ರೀತಿ ಭಾರತ ಮಹೋನ್ನತ ತತ್ತ್ವಗಳ ಪ್ರಯೋಗ ಶಾಲೆ.
ಆ ಶಾಲೆಯಲ್ಲಿ ತೊಡಕಿದ್ದರೆ ಸ್ವಚ್ಛ ಮಾಡೋಣ.
ನೀವು ಹೇಳಿದ ಉಸ್ತಾದ್ ಬಿಸ್ಮಿಲ್ಲಾ ಖಾನ್ ರವರ ಮೇಲೆ ನನಗೆ ಅಪಾರ ಗೌರವವಿದೆ.
ಅವರ ಒ೦ದು Interview ನಿಮಗಾಗಿ.
http://www.musicalnirvana.com/hindustani/bismillah_articles.html

Khan Saheb is soaked in religion. It is his sustaining life-force. But it is this same religion that damns music, condemns it as an act of rape. For the Shias, music is haraam (taboo). But for the man who took the shehnai out of the wedding processions and naubatkhaanaas - the shehnai player, traditionally was to be heard and not seen - and who was able to weave patterns of dazzling intricacy into his music as he brought it to the centre-stage of classical respectability, his instrument is also his Quran. Where others see conflicts and contradictions between music and religion, he sees only a divine unity.

"When maulvis and maulanas ask me about this, I tell them, sometimes with irritation, that I can't explain it. I feel it. I feel it. If music is haraam then why has it reached such heights? Why does it make me soar towards heaven? The religion of music is one. All others are different. I tell the maulanas, this is the only haqeeqat (reality). This is the world. My namaaz is the seven shuddh and five komal surs. And if this is haraam, then I say: aur haraam karo, aur haraam karo (if music be a thing of sin, sin on)."

"I was once in an argument with some Shia maulavis in Iraq. They were all well-versed in their subject and were making several effective arguments about reasons why music ought to be damned. At first I was left speechless. Then I closed my eyes and began to sing Raga Bhairav: Allah-hee....Allah-hee....Allah-hee...I continued to raise the pitch. I opened my eyes and I asked them: 'Is this haraam? I'm calling God. I'm thinking of Him, I'm searching for Him. Isn't this namaaz? Why do you call my search haraam?'" They fell silent.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 6:15pm — mahesha

ಉ: ಚುರುಮುರಿಯಲ್ಲಿ ಬೈರಪ್ಪ

mahesha's picture

ಮುರುಳಿಯವರೆ...

ಭಗವದ್ಗೀತೆಯಲ್ಲಿ ತುಂಬ ಒಳ್ಳೆಯ ವಿಚಾರಗಳಿವೆ.. ಆದರೆ ವರ್ಣಸಂಕರದ ಬಗ್ಗೆ ಕೆಲವು ವಿಚಾರ ಇದೆ. ವರ್ಣಸಂಕರ( ವರ್ಣಗಳ ಬರಕೆ ) ಆಗಬಾರದು ಎಂದು ಹೇಳಿದೆ ಅಲ್ವಾ!

ಆದೇ ಗೀತೆಯಲ್ಲಿ ಕೃಷ್ಣನು "ನಾಲ್ಕು ವರ್ಣಗಳು ಗುಣಧರ್ಮಸ್ವಾಭಾವದ ಮೇಲೆ ನಾನು ಮಾಡಿರುವುದು" ಎಂದು ಹೇಳಿದೆ.

ಗೀತೆಯನ್ನು ನಾನು ಪೂರ್ತಿ ತಿಳಿದಿಲ್ಲ. ಆದರೆ ಈ 'ವರ್ಣ'ದ ವಿಚಾರದ ಬಗ್ಗೆ ಓದಿಕೊಂಡಿದ್ದೇನೆ.
- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 6:17pm — mahesha

ಉ: ಚುರುಮುರಿಯಲ್ಲಿ ಬೈರಪ್ಪ

mahesha's picture

ಬರಕೆ = ಬೆರಕೆ.

- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 6:25pm — ವೈಭವ

ಉ: ಚುರುಮುರಿಯಲ್ಲಿ ಬೈರಪ್ಪ

ವೈಭವ's picture

ಮುರಳಿ,
ನೀವು ಹೇಳಿರುವ ವಿಚಾರಗಳ ಬಗ್ಗೆ ನನಗೂ ಹೆಮ್ಮೆ ಇದೆ.

ನೀವು ಪದೇ ಪದೇ ಪಾಕಿಸ್ತಾನಕ್ಕೆ (ಅಲ್ಲಿ ಪ್ರಜಾಪ್ರಭುತ್ವವೇ ಇಲ್ಲ)ಯಾಕೆ ಹೋಲಿಸಿಕೊಳ್ಳುತ್ತೀರ....ಇನ್ನಿತರ ದೇಸಗಳಿಗೆ(ಅಬಿವ್ರುದ್ದಿ ಹೊಂದಿರುವ) ಹೋಲಿಸಿಕೊಳ್ಳಿ.. ನಮ್ಮಲ್ಲಿ ಡೆಮಾಕ್ರಾಟಿಕ್ ತತ್ವಗಳು(ಮೌಲ್ಯಗಳು) ಉಳಿಯುತ್ತವೆಯೆ? ...ಹೀಗೆ ನಾವು ಕೆಸರೆರಚಲು ಮುಂದಾದರೆ?

--------
ನಿಮ್ಗೆ ನೆತ್ತರ್ ಬೇಕಾದಾಗ ಹಿಂದು, ಮುಸ್ಲಿಮ ಅಂತ ನೋಡುತ್ತೀರ....ನೆತ್ತರ್ ಗುಂಪು ಹೊಂದುತ್ತದೆಯೋ ಅಷ್ಟೊ ನೋಡುವುದು. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 8:44pm — muralihr

ಉ: ಚುರುಮುರಿಯಲ್ಲಿ ಬೈರಪ್ಪ

muralihr's picture

ಧನ್ಯವಾದ !
ವಿಚಾರಗಳ ಬಗ್ಗೆ ಅರಿವು ಇದ್ದರೆ ಸಾಕು. ಹೆಮ್ಮೆ ಇದ್ದರೆ ನಾವು Fanatics ಆಗೋಗ್ತೀವಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2007 - 6:18pm — ವೈಭವ

ಉ: ಚುರುಮುರಿಯಲ್ಲಿ ಬೈರಪ್ಪ

ವೈಭವ's picture

ಹೆಮ್ಮೆ ಇದ್ದರೆ fanatic ಆಗಲ್ಲ.... 'ಕುರುಡು ನಂಬಿಕೆ' ಇದ್ದರೆ fanatic ಆಗೋದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 4:34pm — prapancha

ಉ: ಚುರುಮುರಿಯಲ್ಲಿ ಬೈರಪ್ಪ

prapancha's picture

ಮುರುಳಿಯವರೇ,
ಪ್ರತಿಕ್ರಿಯೇ ಬರೆಯುವ ಮೊದಲು ಬೈರಪ್ಪನವರ೦ತೆ ನೀವೂ ಬಹಳ ಸ೦ಶೋದನೇಯನ್ನೇ ಮಾಡಿಬಿಟ್ಟೀದ್ದೀರ Smiling.
ಹಿ೦ದೂ ದರ್ಮವು tried and tested ದರ್ಮ. ಹೆಚ್ಚು ಹುಳಿಯ ಒಡೆತ ಬಿದ್ದ೦ತೆಲ್ಲ ಹೇಗೆ ಸು೦ದರ ಶಿಲೆ ರೂಪುಗೊಳ್ಳುವುದೋ ಹಾಗೆ ಹಿ೦ದೂ ದರ್ಮವನ್ನ ಬೈರಪ್ಪನ೦ತ ಅನೇಕ ಮಹನೀಯರು ಹುಳಿಯ ಪೆಟ್ಟ೦ತೆ ಲೇಖನಿಯ ಪೆಟ್ಟು ಕೊಟ್ಟು ಒ೦ದು ಸು೦ದರ ದರ್ಮವನ್ನಾಅಗಿಸಿದ್ದರೆ.
ದನ್ಯವಾದಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 4:39pm — mahesha

ಉ: ಚುರುಮುರಿಯಲ್ಲಿ ಬೈರಪ್ಪ

mahesha's picture

"ಹಿಂದೂ" ಒಂದು ಡೌಟು..

"ಹಿಂದು ಒಂದು ಧರ್ಮವಲ್ಲ, ಮತವಲ್ಲ ಒಂದು ಜೀವನಕ್ರಮ ಅಂತಾರೆ."
ಹಾಗಾದರೆ "ಹಿಂದೂ" ಯಾವ ಮತವನ್ನು ಮುಂದೊಡ್ಡುವುದಿಲ್ಲವೇ? ನಮ್ಮ ನಂಬಿಕೆಗಳ ಬಗ್ಗೆ ಏನೂ ಹೇಳುವುದಿಲ್ಲವೇ?

- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 4:58pm — prapancha

ಉ: ಚುರುಮುರಿಯಲ್ಲಿ ಬೈರಪ್ಪ

prapancha's picture

ಮಹೇಶರೇ,
ನಮಗೆಲ್ಲ ತಿಳಿದ ಪ್ರಕಾರ ಹಿ೦ದೂ ದರ್ಮ ಸುಮಾರು ೫೦೦೦ ವರ್ಷಗಳ ಹಳೆಯದು. ಆಗಿನ ಸ್ಥಿತಿಯಲ್ಲಿ ನಮ್ಮ ಪೂರ್ವಜರು ದರ್ಮಕ್ಕೆ ಯಾವುದೇ ಕುತ್ತನ್ನ (ಇತರ ದರ್ಮದ ಉದಯವನ್ನ)ನೀರಿಕ್ಷಿಸಿರಲಿಲ್ಲ ಎನಿಸುತ್ತದೆ, ಅದಕ್ಕೇ ಇರಬೇಕು ಅವರು ಎ೦ದೂ ಈ ದರ್ಮಕ್ಕೆ ನಾಮಕರಣ ಮಾಡಲಿಲ್ಲವೇನೋ?
ದರ್ಮವೆ೦ದರೇನು? ಅದು ಒ೦ದು ಜೀವನ ಕ್ರಮದ ಪದ್ದತಿಯೇ!. ಈ ಪದ್ದತಿಯಲ್ಲಿ ಕೆಲವು ನ೦ಬಿಕೆಗಳು ಮತ್ತು ಆಚರಣೆಗಳನ್ನ ಪಾಲಿಸುವ ಕ್ರಮವಿದೆ, ಇವುಗಳನ್ನ ಯಾರು ಪಾಲಿಸುತ್ತಾರೋ ಅವರೆಲ್ಲ ಒ೦ದು ದರ್ಮದ ಗು೦ಪಿಗೆ ಸೇರುತ್ತಾರೆ. ಇಲ್ಲಿ ಉದಾಹರಣೆಗೆ ಹಿ೦ದೂ, ಮುಸಲ್ಮಾನ ಕ್ರೈಸ್ತ ......
ಹಾಗಾಗಿ ದರ್ಮವೂ ಒ೦ದು ಜೀವನ ಕ್ರಮವೇ...ಅಲ್ಲವೇ? ನನಗೇನೋ ಜೀವನ ಕ್ರಮಕ್ಕೂ ದರ್ಮಕ್ಕೂ ವ್ಯತ್ಯಾಸ ಹುಡುಕುವುದು ಕಷ್ಟವಾಯಿತು ಮಹರಾಯ್ರೇ!. Smiling
ದನ್ಯವಾದಗಳೊ೦ದಿಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 6:41pm — aithalsandy

ಉ: ಚುರುಮುರಿಯಲ್ಲಿ ಬೈರಪ್ಪ

aithalsandy's picture

@ ವೈಭವ
"" ನಾನು ಹೇಳೋದು ಇಶ್ಟೂ
ಎಲ್ಲ ಧರ್ಮದಲ್ಲೂ ಇನ್ನೂ ಕಂದಾಚಾರ ಇವೆ.... ನಾವು ಕಡಿಮೆ ನೀವು ಹೆಚ್ಚು ಕಂದಾಚಾರ ಇಟ್ಕೊಂಡಿದೀವಿ ಅನ್ನೋದ್ರಲ್ಲಿ ಅರ್ಥ ಇಲ್ಲ"""

Einstein ದಡ್ಡರಲ್ಲ ಅಂತ ಆದ್ರೆ "ಆನೆ ಕಳ್ಳ & ಅಡಕೆ ಕಳ್ಳ" ಇಬ್ಬರಿಗೂ ವ್ಯತ್ಯಾಸ ಇದೆ.
ದೇಶಾವರಿ ನಿರ್ಲಿಪ್ತತೆ ಸಮಸ್ಯೆಯನ್ನ ನಿವಾರಣೆ ಮಾಡೋಲ್ಲ (ಮುಂದೆ ಹಾಕೋತ್ತೆ).. ಮುಂದೆ ಒಂದು ದಿನ ಅದು Cascaded ಆಗಿ ಅತಿ ಭಯಂಕರವಾಗಿ ಜಗತ್ತಿನ ಯಮನಾಗಿ ಬರುತ್ತೆ. ಹಾಳು ಬಡ್ಕೊಂಡು ಹೋಗ್ಲಿಯತ್ಲಾಗಿ ಅಂತಾನೂ ಸುಮ್ನೇ ಇರೋಕ್ಕಾಗಲ್ಲ.

@ All

ಇದನ್ನ ಹಿಂದೂ v/s ಮುಸ್ಲಿಮ್ ಅಂತ ನೋಡೋದಲ್ಲ. ಪ್ರಗತಿ ಪರತೆ, ವಿಮರ್ಶೆಗೆ ಒಳಪಡುವ ಗುಣವನ್ನು Below average ಇದ್ದಾಗ ಅದನ್ನ ಕನಿಷ್ಟ Average ಗೆ ತರಬೇಕು (Above average ಅಲ್ಲದಿದ್ರೂ). ಇದರಲ್ಲಿ ಎಲ್ಲರೂ ಸಿಕ್ಕಂಡಿದೀವಿ. ಬೆರಳು ಅಗಳಿಗೆ ಸಿಗಿಸಿಕೊಂಡಿದೀವಿ.. ಬಿಟ್ಟರೆ ನೋವು... ಎಳೆದರೆ ಗಾಯ. ಬೆರಳೇ ಹೋಗೋ ಮೊದಲು ಏನಾದ್ರೂ ಮಾಡ್ಬೇಕು. ಬೆರಳಣ್ನ ತಿರಿಸಿ ಮುರಿಸಿ ಮಾಡೋ ಬದಲು ಅಗಳೀಗೆ ಏನಾದ್ರೂ ಮಾಡ್ಬೇಕು...

ಈ ವೀಡಿಯೋಗಳು ಉಪಯುಕ್ತ ಆಗಬಹುದು...
http://switch3.castup.net/cunet/gm.asp?ai=214&ar=1050wmv&ak=nul
http://www.youtube.com/watch?v=Negt6IzxPTo

ಸಂದೀಪ ಐತಾಳ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 7:16pm — mahesha

ಉ: ಚುರುಮುರಿಯಲ್ಲಿ ಬೈರಪ್ಪ

mahesha's picture

ಪ್ರಗತಿ ಪರತೆ, ವಿಮರ್ಶೆಗೆ ಒಳಪಡುವ ಗುಣವನ್ನು Below average ಇದ್ದಾಗ ಅದನ್ನ ಕನಿಷ್ಟ Average ಗೆ ತರಬೇಕು (Above average ಅಲ್ಲದಿದ್ರೂ). ಇದರಲ್ಲಿ ಎಲ್ಲರೂ ಸಿಕ್ಕಂಡಿದೀವಿ. ಬೆರಳು ಅಗಳಿಗೆ ಸಿಗಿಸಿಕೊಂಡಿದೀವಿ.. ಬಿಟ್ಟರೆ ನೋವು... ಎಳೆದರೆ ಗಾಯ. ಬೆರಳೇ ಹೋಗೋ ಮೊದಲು ಏನಾದ್ರೂ ಮಾಡ್ಬೇಕು. ಬೆರಳಣ್ನ ತಿರಿಸಿ ಮುರಿಸಿ ಮಾಡೋ ಬದಲು ಅಗಳೀಗೆ ಏನಾದ್ರೂ ಮಾಡ್ಬೇಕು..

ಚನ್ನಾಗಿ ಹೇಳಿದ್ದೀರಿ. ನನ್ನಿ

@ಎಲ್ಲರಿಗೂ
ಈಗ ನಮಗೆ ಸಮಸ್ತೆ ತಿಳಿಯಿತು.

ಆವರಣದಲ್ಲಿ ಈ ಸಮಸ್ಯಗೆ ಏನು ಉತ್ತರಕೊಟ್ಟಿದ್ದಾರೆ ಎಂದು ನೀವು ತುಸು ಹೇಳಿ!
ಅದಲ್ಲದೇ.
ವೈಯಕ್ತಿಕವಾಗಿ ಈ ಗೊಡವೆಗೆ ಕೊನೆ ಹೇಗಿರಬೇಕೆಂದು ನಿಮ್ಮ ಭಾವ?

- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 7:17pm — mahesha

ಉ: ಚುರುಮುರಿಯಲ್ಲಿ ಬೈರಪ್ಪ

mahesha's picture

ಸಮಸ್ತೆ = ಸಮಸ್ಯೆಯ ಸಮಸ್ತೆ
- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2007 - 9:29pm — aithalsandy

ಉ: ಚುರುಮುರಿಯಲ್ಲಿ ಬೈರಪ್ಪ

aithalsandy's picture

ತತ್‌ಕ್ಷಣ ನನ್ನ ಎದುರಿಗೆ "ಆವರಣ" ಇಲ್ಲ (ಊರಿನಲ್ಲಿದೆ..). ನನಗೆ ನೆನೆಪಿರುವ ಹಾಗೆ, ಚಾರಿತ್ರಿಕವಾಗಿ ಧರ್ಮದ ಹೆಸರಿನಲ್ಲಾಗುವ ದುಷ್ಟತನವನ್ನು ನಿವಾರಿಸುವ ಪ್ರಯತ್ನಗಳು ಎಲ್ಲ ಬಹಳ ಕಡೆ ನೆಡೆದಿವೆ ಅನ್ನೋದಕ್ಕೆ ಉದಾಹರಣೆಗಳನ್ನ ಕೊಟ್ಟಿದ್ದಾರೆ. ಸಮಸ್ಯೆ ಇದೆ ಅಂತ ತೋರಿಸಿದ್ದಾರೆ. ಇದನ್ನ ಹೇಗೆ ಬಗೆಹರಿಸಬೇಕು ಅನ್ನೋದು ಎಲ್ಲರ ಮೇಲೆ ಇರುವ ಜವಾಬ್ದಾರಿ. ಭೈರಪ್ಪ ಏನೂ ಹೇಳಲಿಲ್ಲ ಅಂತ ಕೈ ತೋರಿಸೋದು ಸೂಕ್ತವಲ್ಲ. ಅವರು ಹೇಳೋ ಹಾಗೆ ಸಾಹಿತ್ಯ "assembly line manual" ಅಲ್ಲ. ಇದರಿಂದ ಸಮಾಜ ಉದ್ಧಾರ ಆಗ್‌ಬೇಕು / ಮಾಡ್ಬೇಕು ಅನ್ನೋ ನಂಬಿಕೆ ಅವರಿಗೆ ಇಲ್ಲ (ನಾವು ಅದನ್ನ ಅಲ್ಲಿಗೆ ಬಿಡ್ಬೇಕು)

ಧರ್ಮ ಅಧ್ಯಾತ್ಮಕ್ಕಿಂತಲೂ ರಾಜಕೀಯ / ಸಾಮಾಜಿಕ / ಆರ್ಥಿಕ ಉದ್ದೇಶಗಳಿಗೆ ಬಳಸುವಾಗ ಸುಧಾರಣೆ ತುಂಬಾ ಒರಟು ಘರ್ಷಣೆಯಾಗಿರುತ್ತದೆ. ಯುರೋಪ್ ಜೀವನ ಚರ್ಚಿನ "ಆವರಣದಿಂದ" ಹೊರ ಬರಬೇಕಾದರೆ ಬಹಳ ಕಷ್ಟ ಪಟ್ಟಿದೆ. ಭಾರತದ ಸನ್ನಿವೇಶದಲ್ಲಿ ಇಲ್ಲಿನ ಧರ್ಮಗಳು ಸೆಮಿತಿಕ್ ನಂಜು ಇಲ್ಲದೇ ಇರುವುದಿಲ್ಲವಾದ್ದರಿಂದ ಸುಧಾರಣೆಗೆ ಹೆಚ್ಚಿನ ಪ್ರತಿರೋಧ ಬರುವುದಿಲ್ಲ. ಬಸವಣ್ಣನಿಂದ ಹಿಡಿದು ಪರಮಹಂಸಾರ ವರೆಗೆ ಇದು ಕಾಣುತ್ತೆ. ಬೇರೆ ಧರ್ಮದಲ್ಲಿ ಐಬು ಇಲ್ಲ ಅಂತ ನಾನು ಹೇಳ್ತಾ ಇಲ್ಲ. ಇರುವ ಐಬುಗಳನ್ನು ಪುಣ್ಯಾತ್ಮರು ಹೇಳಿದಾಗ, ಅವರಿಗೆ ಹಾಗೆ ಹೇಳೋ ಅವಕಾಶ, ಅದನ್ನ ಕೇಳುವ ಮತ್ತು ಸರಿ ಮಾಡಿಕೊಳ್ಳುವ ಸಾಧ್ಯತೆಗಳು ಇಸ್ಲಾಂಕಿಂತನು ತುಸು ಹೆಚ್ಚಿದೆ (Relatively).

ಒಂದು ಅಂಶ ಗಮನಿಸಿ. Paganನಲ್ಲಿ ದ್ವೇಷ ಅಂದರೆ ಅಂದರೆ "ನೀನು ನಾನು ಇದ್ದಲ್ಲಿಗೆ ಬರಬೇಡ" (ಆದರೆ ಸೆಮಿಟಿಕ್‌ನಲ್ಲಿ " You are either with us...err.....thr is no otherwise"

ಗೊಡವೆಗೆ ಕೊನೆ--

ಇಸ್ಲಾಮ್‌ನ ಅಧ್ಯಾತ್ಮಿಕ ಶಕ್ತಿಗಿಂತ ರಾಜಕೀಯ (Pan-Islamic/ Anti-America) ಶಕ್ತಿಯ ಉಪಯೋಗ ಅದರ ಸುಧಾರಣೆಯನ್ನು ಕಷ್ಟಕರವಾಗಿಸುತ್ತದೆ. ಈ ಕಮ್ಮ್ಯೂನಿಸ್ತರು ಅಮೇರೀಕಾ ವಿರುದ್ಧದ ಬಡಿದಾಟ ದಲ್ಲಿ ಜೇಹಾದಿಗಳನ್ನು ಸೇರಿಸ್‌ಕೊತ ಇದ್ದಾರ ಅಂತ ಹೆದ್ರಿಕೆ ಆಗುತ್ತೆ. ಹೊರಗಿನಿಂದ ಏನಾದ್ರೂ ಹೇಳೋದನ್ನ ಕೇಳೋ ಪರಿಸ್ಥಿತಿನಲ್ಲಿ ಇಸ್ಲಾಮ್‌ನಲ್ಲಿ ಉಳಿದಿಲ್ಲ. ಹೊರಗಿನಿಂದ ಯಾವುದೇ ವಿರೋಧ ಬಂದರೂ ಅದು ಒಳಗೊಳಗೆ ಸರಿಯುತ್ತೆ. ನನ್ನ ಮಟ್ಟಿಗೆ ಈ ಸುಧಾರಣೆ ಒಳಗಿನಿಂದ ಬರಬೇಕು. ಅರೇಬಿಯಕ್ಕಿಂತ ಭಾರತದಲ್ಲಿ ಇದರ ಸಾಧ್ಯತೆ ಹೆಚ್ಚಿವೆ. ಆದರೆ ನಮ್ಮ ಅಕಾಡೆಮಿಕ್ ಸೆಕ್ಯುಲಾರಿಷ್ಟರು ಮಾಡ್ಕೊಂಡು ಕೂತಿದ್ದಾರೆ. ಹಿಂಗೆ ಅದಾಗ ಪುಂಡು ಹುಡುಗನ ತರಲೇ ಗೆ ಯಾರೂ ಹುಡುಗ ಅವನಿಗೆ ಹೊಡೆದು ಎಲ್ಲ ಮಕ್ಕಳು ಕಚ್ಚಾಡಿಕೊಂಡ್ ಇಡೀ ಪರಿಸ್ಥಿತಿ ವಿಷಮಯ ಆಗುತ್ತೆ.

ನಾನು ಕೊಟ್ಟಿರೋ ವೀಡಿಯೋ / ಕೊಂಡಿ ಗಳನ್ನ ಮರೀದೇ ನೋಡಿ. ನನ್ನ ಮಾತು ಗಳಿಗೆ ಒಂದು ಸ್ಪಷ್ಟತೆ ಬರಬಹುದು.

ಸಂದೀಪ ಐತಾಳ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2007 - 10:37am — mahesha

ಉ: ಚುರುಮುರಿಯಲ್ಲಿ ಬೈರಪ್ಪ

mahesha's picture

ನನ್ನಿ!

ನಿಮ್ಮ 'ಹಿಂದೂ' ಕುರಿತ ಅರಿವಿನ ಗುಡಾಣದಲ್ಲಿ ಸರಕು ಬಲು ಚನ್ನಾಗಿದೆ.! ನನಗೆ 'ಹಿಂದು' ಬಗ್ಗೆ ಹೆಚ್ಚು ಅರಿವಿಲ್ಲದಿರುವದರಿಂದ ಕೇಳಿದ್ದೀನಿ.

ಆಳ್ವಿಕೆ ಬಗೆಗಳ ಬಗ್ಗೆ( ಕಮ್ಯುನಿಸ್ಟು, ಸೆಕ್ಯುಲರಿಸ್ಟು, ಮುಂತಾದವು) ಹೆಚ್ಚಿನ ಆಳದ ತಿಳಿವಿರುವ ನೀವು ಬಿಡುವಾದಾಗ, ಕಮ್ಯುನಿಸ್ಟು, ಸೋಸಿಯಲಿಸ್ಟು ಅಂದರೇನು ತಿಳಿಸಿರಿ.

ನಿಮ್ಮ ಅರುಹಿಗೆ ನನ್ನ ನನ್ನಿ, ನಲ್ಮೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2007 - 12:23pm — aithalsandy

ಉ: ಚುರುಮುರಿಯಲ್ಲಿ ಬೈರಪ್ಪ

aithalsandy's picture

^^^^^^^^^^^^^^^^
any sarcasm inteded ?? Smiling

ಸಂದೀಪ್ ಐತಾಳ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2007 - 12:30pm — mahesha

ಉ: ಚುರುಮುರಿಯಲ್ಲಿ ಬೈರಪ್ಪ

mahesha's picture

^^^^^^^
None Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2007 - 6:09pm — aithalsandy

ಉ: ಚುರುಮುರಿಯಲ್ಲಿ ಬೈರಪ್ಪ

aithalsandy's picture

ನೀವು ಅಲ್ಪನ ಹತ್ರ ಐಶ್ವರ್ಯ ಇದೆ ಅನ್ದಾಗ ನನಗೆ ದಿಗಿಲಾಯ್ತು.. ಅದಕ್ಕೆ ಕೇಳ್ದೆ..... Smiling

ಸಂದೀಪ್ ಐತಾಳ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2007 - 6:12pm — mahesha

ಉ: ಚುರುಮುರಿಯಲ್ಲಿ ಬೈರಪ್ಪ

mahesha's picture

ಏನಂದ್ರಿ? ಗೊತ್ತಾಗಲಿಲ್ಲ!

ನೀವು ಬಹಳ ವಿಷಯ ಹೇಳಿದಿರಿ. ಅದಕ್ಕೆ ನಾನು ಕೇಳಿದೆ.

ಆದರೆ ಬಿಡಿಸಿ ಹೇಳಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 14, 2007 - 2:35pm — ismail

ಉ: ಚುರುಮುರಿಯಲ್ಲಿ ಬೈರಪ್ಪ

ismail's picture

ಸಂದೀಪ ಐತಾಳರೇ ಜಿಹಾದಿಗಳನ್ನು ಬಳಸಿದ್ದು ಅಮೆರಿಕವೇ ಹೊರತು ಕಮ್ಯುನಿಸ್ಟರಲ್ಲ. ಮತ್ತು ಅಮೆರಿಕ ಜಿಹಾದಿಗಳನ್ನು ಕಮ್ಯುನಿಸ್ಟರ ವಿರುದ್ಧದ ಹೋರಾಟಕ್ಕಾಗಿ ಬಳಸಿತ್ತು. ಬಿನ್ ಲಾದೆನ್ ನಿಂದ ಆರಂಭಿಸಿ ಸದ್ದಾಂ ಹುಸೇನ್ ತನಕ ಎಲ್ಲರನ್ನೂ ಅಮೆರಿಕವೇ ಹುಟ್ಟು ಹಾಕಿದ್ದು. ಇರಾನ್-ಇರಾಕ್ ಯುದ್ಧದ ಕಾಲಘಟ್ಟದ ಕುರಿತು ಅಂತರ್ಜಾಲದಲ್ಲಿ ಸಾಕಷ್ಟು ಮಾಹಿತಿಗಳಿವೆ ತಾವೊಮ್ಮೆ ಪರಿಶೀಲಿಸುವುದು ಒಳಿತು.

ಅಫ್ಘಾನಿಸ್ಥಾನದಲ್ಲಿ ರಷ್ಯಾದ ಉಪಸ್ಥಿತಿಯನ್ನು ಕೊನೆಗೊಳಿಸಬೇಕೆಂಬ ಅಮೆರಿಕದ ಆಸಕ್ತಿಯಿಂದಲೇ ಬಿನ್ ಲಾದೆನ್ ಹುಟ್ಟಿಕೊಂಡ. ದಕ್ಷಿಣ ಏಷ್ಯಾದಲ್ಲಿ ಇಸ್ಲಾಮಿಕ್ ಮೂಲಭೂತವಾದದ ಸಮಸ್ಯೆಯನ್ನು ಬೆಳೆಸಿದ್ದೇ ಅದು. ಪ್ಯಾಲೆಸ್ತಿನ್ ಸಮಸ್ಯೆಯ ಹಿಂದೆ ಇರುವುದೂ ಇದೇ ಸಮಸ್ಯೆ. ಯೂರೋಪು ಯಹೂದ್ಯರನ್ನು ಕೊಂದ ಪಾಪವನ್ನು ತೊಳೆದುಕೊಳ್ಳಲು ಮಾಡಿದ ಮತ್ತೊಂದು ಪಾಪ ಇದು. ಇಲ್ಲಿರುವುದು ಮೂಲಭೂತ ವಾದಕ್ಕಿಂತ ಭಿನ್ನವಾದ ಸಮಸ್ಯೆ. ಪ್ಯಾಲೆಸ್ತೀನ್ ಹೋರಾಟಗಾರರಲ್ಲಿ ಬಹುಸಂಖ್ಯೆಯ ಕ್ರೈಸ್ತರೂ ಇದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಚಿಂತಕ ಎಡ್ವರ್ಡ್ ಸೈದ್. 

ಹಿಂದೊಮ್ಮೆ  Gore vidal ಹೇಳಿದಂತೆ ಅಮೆರಿಕ ಒಂದು ಭಯಭೀತ ರಾಷ್ಟ್ರ. ಇದರ ಭಯದಿಂದ ಸೃಷ್ಟಿಯಾಗುತ್ತಿರುವ ಸಮಸ್ಯೆಗಳಲ್ಲಿ ಕಮ್ಯುನಿಸ್ಟ್ ವಿರೋಧವೂ ಒಂದು. ಅಮೆರಿಕದ ಪ್ರಜಾಪ್ರಭುತ್ವ ಅಷ್ಟೊಂದು ಗಟ್ಟಿಯಾಗಿದ್ದರೆ ಅದೇಕೆ ಕಮ್ಯನಿಸಂಗೆ ಭಯಪಡಬೇಕು. ಬಂಡವಾಳ ಶಾಹಿ ತಾತ್ವಿಕತೆಗೆ ಒಂದು ಸ್ಥಾನವಿದ್ದಂತೆ ಈ ಪ್ರಪಂಚದಲ್ಲಿ ಕಮ್ಯನಿಸಂಗೂ ಒಂದು ಸ್ಥಾನವಿದೆ. ಒಂದನ್ನು ಮತ್ತೊಂದಕ್ಕೆ ವಿರುದ್ಧವಾದುದು ಎಂದು ಗ್ರಹಿಸುವುದಕ್ಕಿಂತ ಈ ವೈರುದ್ಧ್ಯಾತ್ಮಕ ನಿಲುವುಗಳ ಮೂಲಕವೇ ಪ್ರಪಂಚ ನಡೆಯುವುದು ಎಂಬ ಸಂಶ್ಲೇಷಣಾತ್ಮಕ ನಿಲುವಿನ ಅಗತ್ಯವಿದೆ. ಕತ್ತಲಿದ್ದರಷ್ಟೇ ಬೆಳಕಿನ ಅರಿವಾಗುವುದು. ಬೆಳಕು ಮಾತ್ರ ಕತ್ತಲೆಗೊಂದು ಅನನ್ಯತೆಯನ್ನು ಕೊಡಬಲ್ಲುದು. ಈ ಅಮೆರಿಕ ಪ್ರತಿಪಾದಿಸುತ್ತಿರುವ ಹಾಗೆಯೇ ಹಿಂದೂ, ಮುಸ್ಲಿಂ, ಯಹೂದ್ಯ ಮೂಲಭೂತವಾದಿಗಳು ಪ್ರತಿಪಾದಿಸುತ್ತಿರುವ ಏಕ ಸಂಸ್ಕೃತಿಯಲ್ಲಿ ಈ ಬಗೆಯ ಸಂಶ್ಲೇಷಣಾತ್ಮಕ ನಿಲುವುಗಳಿಗೆ ಸ್ಥಾನವಿಲ್ಲ. ನಿಜಕ್ಕೂ ಅಪ್ರಜಾಸತ್ತಾತ್ಮಕವಾಗಿರುವುದು ಇದು. ಭೈರಪ್ಪನವರ ಸಮಸ್ಯೆಯೂ ಇದುವೇ. ಅವರು ತಾವು ಹಿಡಿದ ಮೊಲಕ್ಕೆ ಮೂರು ಕಾಲು ಎನ್ನುತ್ತಿದ್ದಾರೆ. ಹಾಗನ್ನಲು ಅವರಿಗೆ ಸ್ವಾತಂತ್ರ್ಯವಿದೆ. ಹಾಗೆಯೇ ಆ ಮೊಲಕ್ಕೆ ನಾಲ್ಕು ಕಾಲು ಎನ್ನಲು ಉಳಿದವರಿಗೂ ಸ್ವಾತಂತ್ರ್ಯವಿದೆ. ಅವರು ಪ್ರತಿಪಾದಿಸುತ್ತಿರುವ ಸತ್ಯದಂತೆಯೇ ಇನ್ನಷ್ಟು ಸತ್ಯಗಳು ಅಸ್ತಿತ್ವದಲ್ಲಿ ಇರಬಹುದು. ಜೈನ ತಾತ್ವಿಕತೆ ಹೇಳುವಂತೆ ಸತ್ಯಕ್ಕೆ ಅನೇಕ ಮುಖಗಳಿರುತ್ತವೆ. ಭೈರಪ್ಪನವರು ಕಂಡ ಮುಖವನ್ನು ಅವರು ಪ್ರತಿಪಾದಿಸುತ್ತಿದ್ದಾರೆ. ಅದರಲ್ಲಿ ನಮಗೆ ಕಾಣುತ್ತಿರುವ ಮುಖಗಳನ್ನು ನಾವು ಗುರುತಿಸುತ್ತಿದ್ದೇವೆ. ಹೀಗೆ ಪ್ರತಿಯೊಬ್ಬರೂ ಕಾಣುವುದು ಅವರವರ ಸತ್ಯವನ್ನು ಮಾತ್ರವೇ ಹೊರತು ಆತ್ಯಂತಿಕ ಸತ್ಯವನ್ನಲ್ಲ.

ಇತಿಹಾಸವನ್ನು ಭೈರಪ್ಪನವರು ಅರ್ಥ ಮಾಡಿಕೊಳ್ಳುವ ವಿಧಾನಕ್ಕೂ ಇಲ್ಲೊಂದು ಸ್ಥಾನವಿರುವಂತೆ ಅವರ ವಾದವನ್ನು ಒಪ್ಪದವರು ಅನುಸರಿಸುತ್ತಿರುವ ವಿಧಾನಕ್ಕೂ ಇಲ್ಲಿ ಅವಕಾಶವಿದೆ. ಈ ಇಬ್ಬರೂ ತಾವು ಚರ್ಚಿಸುತ್ತಿರುವ ಕಾಲ ಘಟ್ಟದಲ್ಲಿ ಬದುಕಿದ್ದವರೇನಲ್ಲ. ತಮ್ಮಲ್ಲಿರುವ ಚಿಂತನಾ ಉಪಕರಣಗಳ ಮೂಲಕ ಅವುಗಳನ್ನು ಗ್ರಹಿಸುತ್ತಿದ್ದಾರಷ್ಟೇ. ಇಬ್ಬರಲ್ಲೂ ಸತ್ಯವಿರಬೇಕೆಂದಿಲ್ಲ. ಹಾಗೆಯೇ ಇಬ್ಬರೂ ಹೇಳುವುದೂ ಸಂಪೂರ್ಣ ಸುಳ್ಳಾಗಿರಬೇಕಿಲ್ಲ.  

ಇಸ್ಮಾಯಿಲ್ ನನ್ನ ಬ್ಲಾಗ್: http://ismail.sampada.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 14, 2007 - 7:52pm — aithalsandy

ಉ: ಚುರುಮುರಿಯಲ್ಲಿ ಬೈರಪ್ಪ

aithalsandy's picture

ಇಸ್ಮಾಯಿಲ್, ನಾನು ಹೆಚ್ಚು ನಿಖರವಾಗಿ ಹೇಳಬೇಕಾಗಿತ್ತು...ಕ್ಷಮೆಯಿರಲಿ.
Quote " ಅಮೆರಿಕ ಜಿಹಾದಿಗಳನ್ನು ಕಮ್ಯುನಿಸ್ಟರ ವಿರುದ್ಧದ ಹೋರಾಟಕ್ಕಾಗಿ ಬಳಸಿತ್ತು" Quote

ಇದು ಶೀತಲ ಸಮರದ/ಸೊವಿಯತ್ತು ಬೀಳುವುದಕ್ಕಿಂತ ಮುಂಚಿನ ಪರಿಸ್ಥಿತಿ. ಇಸ್ಪೀಟಿನ ಆಟದಲ್ಲಿ ಪ್ರತಿ ಸಾರಿ ಎಲೆಗಳ ಜೊಡಣೆ ಬೇರೆ ಬೇರೆ ರೀತಿಯಲ್ಲಿ ಇರುವ ಹಾಗೆ ಈಗಿನ ಪರಿಸ್ಥಿತಿಯಲ್ಲಿ ಜೆಹಾದಿಗಳು ಚೀನ+ಇರಾನ್+ಕ್ಯುಬಾ+ಉ.ಕೊರಿಯ+ವೆನಿಜುವೆಲಾ ಈ ಕೂಟದ ಜೊತೆಯಲ್ಲಿ ಸೇರೊ ಸಾಧ್ಯತೆ ಇಲ್ಲ ಅಂತ ನಾನು ಅಫೀಮು ತಿಂದುಕೊಂಡು ಹೇಳಬೇಕು ಅಷ್ಟೆ. ಅಮೆರಿಕಾದ imperialism ವಿರುದ್ದ ಹೋರಾಟಡಲ್ಲಿ ಜೆಹಾದಿಗಳು ಕಮ್ಮ್ಯುನಿಸ್ಟರನ್ನ ಸೇರೊ ಸಾದ್ಯತೆಗಳು ಬಹಳ ಇದೆ. ಇದರಲ್ಲಿ ಒಂದು ರಿಸ್ಕ್ ಇದೆ. ಜೆಹಾದಿಗಳು ಯಾವತ್ತಿಗೂ ಆಸ್ತಿ ಅಲ್ಲ, ಅದು ಜವಾಬ್ದಾರಿ ಕಮ್ಮ್ಯುನಿಸ್ಟರ ವಿರುದ್ದ ಜೆಹಾದಿಗಳು ತಿರುಗಿ ಬಿದ್ದರೆ ಇನ್ನೊಂದು ರಕ್ತಪಾತ ಖಂಡಿತ.

ಕ್ಯಾಪಿಟಲಿಸ್ಮ್ v/s ಕಮ್ಮ್ಯುನಿಸ್ಮ್ v/s ಸೊಶಿಲಿಸ್ಮ್ ಅದು ಬೇರೆಯೆ ಅದ ಚರ್ಚೆ. ನಾನು ಈ ಯಾವ ಗುಂಪಿಗೂ ಸೇರದೇ ಇರೊಕ್ಕೆ ಇಷ್ಟ ಪಡುತ್ತೇನೆ. ಆದರೆ ಬಲವಂತ ಮಾಡಿದ್ರೆ ಸೆಂಟ್ರಿಸ್ಟ್ ಲಿಬೆರಲ್ ಅನ್ನಬಹುದು. ಆದರೆ ಮುಕ್ತ+ನ್ಯಾಯವಾದ ಮಾರುಕಟ್ಟೆಯ ಬಗ್ಗೆ ಒಲವನ್ನು ಹೊಂದಿದ್ದೇನೆ. ನೆಹರು ಸಮಾಜವಾದಕ್ಕೆ ನನ್ನದೇನೂ ಸಹಾನುಭೂತಿಯಿಲ್ಲ. ಕಮ್ಮ್ಯುನಿಸ್ಟರಿಗೆ ತೋರಣ ಕಟ್ಟೋರು ಗಾಲ್ ಬ್ರೇಯ್ತ್ ಹೇಳಿದ ಮಾತನ್ನು ನೆನಪಿಡಬೇಕು "Under capitalism, man exploits man. Under communism, it's just the opposite."

ಆವರಣದ ಉದ್ದೇಶ ನನಗೆ ತಿಳಿದ ಮಟ್ಟಿಗೆ ಚರಿತ್ರೆ ವಸ್ತುನಿಷ್ಟವಾಗಿ ಇರಬೇಕು ಅಂತ.
ಅರುಣ್ ಶೌರಿ ಒಂದು ಕಡೆ ಹೇಳ್ತಾರೆ . "... many of these text books describe in great detail foreign personalities like Karl Marx or Stalin, while they often barely mention important figures of India or of the Indian states. Shourie writes that this is in contrast to Russian Marxist text books. The standard Soviet work "A History of India" (1973) is according to Shourie much more objective and truthful than the history books written by the Indian Marxists...".

http://en.wikipedia.org/wiki/Eminent_Historians:_Their_Technology%2C_The...

ನಾನು ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ಇರೋನು. ನನಗೆ ಭೈರಪ್ಪನವರಲ್ಲೊ ಸಮಸ್ಯೆ ಇದೆ (ಬೇರೇ ವಿಚಾರಗಳಲ್ಲಿ) ಆದರೆ ಅವರು ಎತ್ತಿರುವ ಪ್ರಶ್ನೆಯನ್ನು ವಸ್ತುನಿಷ್ಟವಾಗಿ ನೊಡಬೇಕೂ ಅನ್ನೋ ವಿವೇಕಾನೂ ಇದೆ. ನಾನು ಅನಂತಮೂರ್ತಿಯವರ ಅಭಿಮಾನಿ ಕೂಡ. ಅನಂತಮೂರ್ತಿಯವರು ಎತ್ತಿರುವ ಪ್ರಶ್ನೆನೂ ಮುಕ್ತಮನಸ್ಸಿನಿಂದ ನೋಡಬೇಕೂ ಅನ್ನೊ ತುಡಿತ ಇರೋನೂ. ನನಗೆ ತಿಳಿದಿರೊ ಮಟ್ಟಿಗೆ ಭೈರಪ್ಪ / ಅನಂತಮೂರ್ತಿ ಅವರನ್ನು ನನ್ನ ಮಾತುಗಳಲ್ಲಿ ಬಳಸಿಲ್ಲ (ಇದು ಆಕಸ್ಮಿಕ ಅಲ್ಲ.. ಪ್ರಜ್ನಾಪೂರ್ವಕವಾಗಿ). ಇಲ್ಲಿ ನನ್ನನ್ನ VHP / RSS ಪೈಕಿಯಂವ ಅಂತ ಒಟ್ಟರೆ ಶೂರನನ್ನಾಗಿ ಮಾಡಿದ್ದಾರೊ ಅಂತ ದಿಗಿಲಾಗ್ತಾಯಿದೆ. ನಾನು ಕೇಸರಿ / ಕೆಂಪು ಎರಡನ್ನೂ ಸಮಾನ ದೂರದಲ್ಲಿ ಇಟ್ಟಿದ್ದೀನಿ.

@ "ಹೀಗೆ ಪ್ರತಿಯೊಬ್ಬರೂ ಕಾಣುವುದು ಅವರವರ ಸತ್ಯವನ್ನು ಮಾತ್ರವೇ ಹೊರತು ಆತ್ಯಂತಿಕ ಸತ್ಯವನ್ನಲ್ಲ."
ಚಿನ್ನದಂತ ಮಾತು.....ಆದರೆ ನಾವು ಇಲ್ಲಿ True & correct ಮತ್ತು true & fair ನಡುವಿನ ಸೂಕ್ಷ್ಮ ವ್ಯತ್ಯಾಸವನ್ನ ನೆನೆಪಿಡಬೇಕು.

@ Quote "ಅಂತರ್ಜಾಲದಲ್ಲಿ ಸಾಕಷ್ಟು ಮಾಹಿತಿಗಳಿವೆ ತಾವೊಮ್ಮೆ ಪರಿಶೀಲಿಸುವುದು ಒಳಿತು" Quote
ನಿಮ್ಮ ಪ್ರೀತಿಗೆ ಋಣಿ

ಸಂದೀಪ ಐತಾಳ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚುರಮುರಿಯಲ್ಲಿ ಆವರಣದ ಬಗ್ಗೆ ಭೈರಪ್ಪ ಕನ್ನಡದಲ್ಲಿ ಮಾತಾಡಿದ ವಿಡಿಯೋ
  • ಕೆ.ರಾಮದಾಸ್ ಇನ್ನಿಲ್ಲ
  • ರುಮಾನಿಯಾದಲ್ಲಿ ಆವರಣ
  • ಚುರುಮುರಿ ಸವಿಯಲು ಇನ್ನು ಮೈಸೂರಿಗೆ ಹೋಗಬೇಕಿಲ್ಲ...
  • ಭೈರಪ್ಪನವರ ಆವರಣವನ್ನು ಓದಿದ ನನ್ನ ಅನುಭವ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi