ಕಂನಡ ಸಂಗಗಳು ಯಾಕೆ ಇಷ್ಟೊಂದು?
ನಾನು ಊ ಕನ್ನಡದ ಸಂಗದಲ್ಲಿಲ್ಲ ಅಂದ್ರೆ ನೀವು ನಂಬಲ್ಲ, ಆದ್ರು ಅದು ದಿಟ. ನನಗೆ ಕನ್ನಡ ಸಂಗಗಳನ್ನು ಸೇರಬಾರದು ಅಂತ ಹಟವಿಲ್ಲ. ಆದ್ರೂ ಸೇರಕ್ಕೆ ಆಗಿಲ್ಲ.
ನಾನು ಬೆಂಗಳೂರಿಗೆ ಬಂದ ಮೇಲೆ, ಅದೂ ಸಂಪದದಲ್ಲಿ ಬರೆಯ-ತೊಡಗಿದ ಮೇಲೆ, ನಂನಂನು ಹಲವರು ತಂಮ ಕಂನಡ ಕೂಟಕ್ಕೆ ಕರೆದುದುಂಟು, ನಾನು ಒಂದೆರಡು ಸರತಿ ಹೋಗಿದ್ದೂ ಉಂಟು. ಎಲ್ಲರ ಮಾತೂ ಒಂದೇ ಅದರ ಸಾರ ಹೀಗಿದೆ
"ಕನ್ನಡವು ಅತಿ ಪ್ರಾಚೀನವಾದ, ಅದ್ಭುತ, ಸಂಪದ್ಭರಿತ ಭಾಷೆ. ಕನ್ನಡವು ನಮ್ಮ ಮಾತೃಭಾಷೆ, ಅದಕ್ಕೆ ನಾವು ಕನ್ನಡದ ಸೇವೆ ಮಾಡಬೇಕು. ಕನ್ನಡರಿಗರು ಎಲ್ಲ ರಂಗದಲ್ಲೂ ಮುಂದೆ ಬರಬೇಕು..."
ಈ ಮಾತುಗಳನ್ನು ಕೇಳಿದೇಟಿಗೆ "ಅಯ್ಯೋ ಮಾರಾಯ, ಕನ್ನಡ ಬಲು ಹಳೆಯ, ತುಂಬುಸಿರಿಯ, ಸೋಜಿಗದ ನುಡಿ. ಅದು ನಮ್ಮ ತಾಯ್ನುಡಿ, ಅದಕ್ಕೆ ನಾವು ಕನ್ನಡಕ್ಕೆ ದುಡಿಯಬೇಕು.. ಹೀಗೆ ಹೇಳು, ಕನ್ನಡ ಅಂತ ಕನ್ನಡಕ್ಕಿಂತ ಹೆಚ್ಚು ಸಂಸ್ಕೃತದ ಒರೆಗಳನ್ನು ತಪ್ಪು ತಪ್ಪಾಗಿ "ಅದುಬುತ, ಮಾತ್ರುಬಾಶೆ, ಸಂಪತ್‌ಬರಿತ" ಅಂತ ಹೇಳಬೇಡ" ಎಂದು ಹೇಳೋಣ ಅನ್ನಿಸಿಬಿಡ್ತದೆ.
ನನಗೆ ಸಂಸ್ಕೃತದ ಮೇಲೆ ಹಗೆಯಿಲ್ಲ, ಆದರೆ ಏನೋ ದೊಡಸ್ತಿಕೆ ಎಂದು ತಪ್ಪು ತಪ್ಪು ಸಂಸ್ಕೃತೋಚ್ಚಾರಣೆಗೆ ಇರುಸುಮುರುಸು. ಹಾಗಂತ ನಾನು ಬಲು ಚಂನಾಗಿ ಸಂಸ್ಕೃತ ಉಲಿಯಲಾರುವೆ ಎಂದಲ್ಲ. ತಕ್ಕ ಮಟ್ಟಿಗೆ ಬರುವುದು.
ಆದ್ರೆ ಇರಲಿ ಮುಂದೆ ನೋಡೋಣ ಅಂತ ಸುಮ್ನೆ ಕುಳಿತು, ಎಲ್ಲದಕ್ಕೂ ಸುಮ್ಮನಿದ್ದು ಬರುವೆ. ಮುಂದಿನ ಸರತಿ ಹೋದಾಗಲೂ ಇದೇ, ಇದನ್ನು ಬಿಟ್ರೇ ಕಾವೇರಿ ಹೆಸರಲ್ಲಿ ತಮಿಳರನ್ನು ಜರಿಯುವುದು, ಮತ್ತು ರಾಜಕೀಯ ರಾಜಕೀಯ ರಾಜಕೀಯ!!.
ಕೊನೆಗೆ ನಾನು ಏನೋ ಒಂದು ಕುಂಟುನೆವಗಳನ್ನು ಹೇಳಿ ತಪ್ಪಿಸಿಕೊಂಡು ಬರಬೇಕು.
ನನಗೆ ಬೇಸರವಾದ ಸಂಗತಿಯೆಂದರೆ ಈ ಹಲವು ಸಂಗಗಳಿಗೆ ಕನ್ನಡ ಸಾಹಿತ್ಯದಲ್ಲಾಗಲಿ, ಕನ್ನಡ ವ್ಯಾಕರಣದಲ್ಲಾಗಲಿ ಇಲ್ವೇ ಕನ್ನಡ ಇತಿಹಾಸದಲ್ಲಾಗಲಿ ಆಸಕ್ತಿ/ಹುರುಪು ತೀರಾ ಕಡಮೆ. ಇವರಿಗೆ ಗೊತ್ತಿರುವವರು "ರಾಜಕುಮಾರ, ಕುವೆಂಪು" ಈಸೇ. ನನಗೂ ಈ ಇಬ್ಬರು ನಮ್ಮ ಕನ್ನಡಕ್ಕೆ ದೊಡ್ಡ ಹಿರಿಮೆ ತಂದವರು, ಎಂದು ಗೊತ್ತು, ಆದರೆ ಇನ್ನೂ ಹಲವು ಮಂದಿ ಇದ್ದಾರಲ್ಲ, ಅವರ ಬಗ್ಗೂ ತುಸು ತಿಳಿಯಬೇಕಲ್ಲ.
"ಕವಿರಾಜಮಾರ್ಗ" ಅಂತ ಇದೆ ಅಂತ ಗೊತ್ತು, ಆದರೆ ಅದರ ಒಂದು ಪದ್ಯವನ್ನೂ ಓದಿಲ್ಲ. ಪುಲಿಕೇಶ ಎಲ್ಲೋ ಕೇಳಿದ್ದೇನೆ. ಇನ್ನು ಆಂಡಯ್ಯ, ರಾಘವಾಂಕ, ಇವರೆಲ್ಲ ಎಲ್ಲಿ ಗೊತ್ತಿರುವುದು.
ಈ ಅಲ್ಲಿಇಲ್ಲಿ ಕಂನಡ ಮಾತಾಡೋ ಬೆಂಗಳೂರಲ್ಲಂತೂ ಒಂದು ಮಣ ಕಂನಡ ಸಂಗಗಳು. ಊ ಸರ್ಕಲ್ಲಲ್ಲೂ, ಕಂನಡ ಸಂಗದ ಚಿತ್ರಪಟಗಳು, ಕಂನಡ ತೆಕ್ಕೆ/ಬಾವುಟಗಳು. ಇರಲಿ ಒಳ್ಳೇದು.
ಆದರೆ ....
============================
ಇದು ನಂನ ಒಳನಿಸಿಕೆ. ಊ ಗುಂಪನ್ನು ಕುರಿತಲ್ಲ.

- mahesha ರವರ ಬ್ಲಾಗ್
- Login or register to post comments
- 338 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: