ಕನ್ನಡದಿಂದ ಸಕ್ಕದಕ್ಕೆ ಒರೆಗಳು
ಮೇಲಿನ ಕೊಂಡಿಯಲ್ಲಿ ನೋಡುತ್ತಾ ಹೋದರೆ, ನಮಗೆ ಕನ್ನಡ-ತಮಿಳು-ತೆಲುಗು ಮುಂತಾದ ದ್ರಾವಿಡ-ನುಡಿಗಳಿಂದ ಸಕ್ಕದಕ್ಕೆ ಹೋಗಿವೆ ಎಂದು 'ಹೇಳಲಾದ'(probably) ಒರೆಗಳು ಸಿಗುವುವು.
ಹುರುಪಿರುವವರು ನೋಡಿ.. ಬಹಳ ಚೆನ್ನಾಗಿದೆ.
ನನಗೆ ಕಣ್ಣರಳಿಸಿದ್ದು
ಕಿಕ್ಕರಿಸು, ಕಿಕ್ಕರಿ, ಕಿಕ್ಕಿಂದ, ಕಿಸ್ಕಿಂದ = ಒತ್ತೊತ್ತಾದ, ಬಲು ಪಕ್ಕಪಕ್ಕ ಇರುವ...
ಇದರಿಂದ ಕಿಶ್ಕಿಂಧ ಬಂದಿದೆ ಎಂದು ಹೇಳಲಾಗಿದೆ ![]()
ಕಿಕ್ಕಿರಿ ಪಕ್ಕ ಕನ್ನಡದ ಒರೆ !!

- mahesha ರವರ ಬ್ಲಾಗ್
- Login or register to post comments
- 701 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು
ಸಕ್ಕದದಲ್ಲಿ ಕಿಷ್ಕಿಂಧ ಅಲ್ಲವೇ? ಸಂಸ್ಕೃತಕ್ಕೂ ’ಮಹಾಪ್ರಾಣ ಬೇಡ ’ ನಿಯಮ ಅನುಸರಿಸುತ್ತಿದ್ದೀರಾ ಹೇಗೆ?
ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು
ಅದು ಕಿಷ್ಕಿಂಧವೋ, ನನಗೆ ಇಂಗ್ಲೀಸಿಂದ ಓದಿಕೊಂಡಾಗ ಗೊತ್ತಾಗಲಿಲ್ಲ. ತಿಳಿಸಿದಕ್ಕೆ ನನ್ನಿ!!
ಅಂದಹಾಗೆ , 'ಷ' ಮಹಾಪ್ರಾಣವಲ್ಲ.
ನಾನು ಕಿಶ್ಕಿಂಧ ಅಂತ ಬರೆದಿವ್ನಿ.!! ಮಹಾಪ್ರಾಣ 'ಧ'ಗೆ ಯಾವ ತೊಂದರೆಯಾಗಿಲ್ಲ 
ಇಲ್ಲಿ ತಪ್ಪು 'ಷ' ಬಂದುಬಿಟ್ಟಿದೆ.
======================================
ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು
ಹೌದಲ್ಲ...’ಷ’ವನ್ನು ಮಹಾಪ್ರಾಣ ಮಾಡಿಬಿಟ್ಟೆ ನನಗರಿವಿಲ್ಲದೆಯೇ ..:-|
ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು
ಅಯ್ಯೋ ಬುದ್ದಿ...
ಇರಲಿ ಬಿಡಿ, ಯಾಕೆ :-| ಎಂದು ನೊಂದುಕೊಳ್ಳವಿರಿ.
ನಗುನಗುತ ನಲಿ ನಲಿ ಏನೇ ಆಗಲಿ - ಅಂತ ಬಂಗಾರದ ಮನುಸ್ಯ ಹೇಳವ್ನೆ
======================================
ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು
ನನಗೇನೋ ಸಂಸ್ಕೃತದ ಕಿಷ್ಕಿಂದೆಗೂ, ಕನ್ನಡದ ಕಿಕ್ಕಿಂದಕ್ಕೂ ಸಂಬಂಧವೇ ಇಲ್ಲವೆಂದು ತೋರುತ್ತೆ. ಇದು ಪದಗಳ ಹೋಲುವಿಕೆಯಿಂದ, ಆಡುಮಾತಿನಲ್ಲಿ, ನಾವು ಕಿಕ್ಕಿಂದಾ ಪಟ್ಟಣ (ಯಾವುದೋ ಕಿಕ್ಕಿರಿದ ಜಾಗ ಎಂದು ಹೇಳುವುದನ್ನು) ಎಂಬುದನ್ನು ಕಿಷ್ಕಿಂದಾ ಪಟ್ಟಣವೆಂದು ಸಂಸ್ಕೃತಕ್ಕೆ ತಿರುಗಿಸಿದ್ದೇವೆ ಎನ್ನಿಸುತ್ತೆ.
ಏಕೆಂದರೆ, ಕಿಷ್ಕಿಂದೆ, ಕಿಷ್ಕಿಂದಾ ಪಟ್ಟಣ ಎಂದು ಬಹಳ ಕಿರಿದಾದ, ಜನದಟ್ಟಣೆಯುಳ್ಳ ಜಾಗಗಳಿಗೆ ವಿಶೇಷಣವಾಗಿ ಉಪಯೋಗಿಸುವುದು ಕನ್ನಡದಲ್ಲಿ ಮಾತ್ರ (ನನಗೆ ತಿಳಿದ ಮಟ್ಟಿಗೆ).
ರಾಮಾಯಣದಲ್ಲಿ, ಕಿಷ್ಕಿಂದೆ ಕಿರಿದಾಗಿತ್ತು ಎನ್ನುವ ವಿವರಣೆಗಳು ಬಂದಿರುವುದೂ ಕಾಣೆ.
-ಹಂಸಾನಂದಿ
ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು
ಹಂಸಾನಂದಿ,
ನಿಮಗೇ ಹಾಗೆ ಅನ್ನಿಸಲಿ. ನಿಮ್ಮ ಅನ್ನಿಸನ್ನು ಮಾರುಪಾಟು ಮಾಡಿಕೋಬೇಡಿ...
ಆದರೆ burrow ಮತ್ತು ಎಮೂ ನೋಡಿದೋರು. ಅದು ಕನ್ನಡ ಕಿಸ್ಕಿಂದದಿಂದಲೇ ಹೋಗಿರೋದು ಎಂದು ಅಂದುಕೋತಾರೆ.
burrow ಮತ್ತು ಎಮೂ ಅವರ ಒರೆಗಂಟು ಅಂದರೆ ಸ್ಯಾನೆ ತೂಕ ಐತೆ ಅದಕ್ಕೆ!!
======================================
ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು
ಷ ಒಂದೇ ಅಲ್ಲ ಸ್ವಾಮಿ, ಶ, ಷ, ಸ, ಹ ಗಳೆಲ್ಲವೂ ಮಹಾಪ್ರಾಣಗಳೇ. ಏಕೆಂದರೆ ಇವುಗಳನ್ನೆಲ್ಲ ಉಚ್ಚರಿಸುವಾಗ ಸ್ವಲ್ಪ ಉಸಿರು ಹೊಱಗೆ ಬಿಡುತ್ತೇವೆ(ವರ್ಗೀಯ ಮಹಾಪ್ರಾಣಗಳಂತೆ). ಅಂದರೆ ಖ, ಘ, ಛ, ಝ, ಠ, ಢ, ಥ, ಧ, ಫ, ಭ ಗಳನ್ನು ಉಚ್ಚರಿಸುವಾಗ ಕೂಡ.
ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು
ಶ ಷ ಸ ಹ ಗಳನ್ನು ಮಹಾಪ್ರಾಣ ಹೇಗೆ ಹೇಳ್ತೀರಿ...?
ಇವನ್ನೂ ಮಹಾಪ್ರಾಣಗಳು ಎಂದು ಹೇಳಿರಿ ಹೊತ್ತಗೆ ಯಾವುದು?
=====================================
ಮಾಯ್ಸ!
ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು
ಲಘುಸಿದ್ಧಾಂತಕೌಮುದೀ. ಅದಲ್ಲದೇ ಮಹಾಪ್ರಾಣದ ಕಲ್ಪನೆ. ಖ, ಘ, ಛ, ಝ, ಠ, ಢ, ಥ, ಧ, ಫ, ಭ, ಶ, ಷ, ಸ, ಹ ಉಚ್ಚರಿಸುವಾಗ ಸ್ವಲ್ಪಮಟ್ಟಿನ ಉಸಿರು ಹೊಱಗೆ ಹೋಗುತ್ತದೆ. ಆದ್ದರಿಂದ ಇವೆಲ್ಲ ಮಹಾಪ್ರಾಣಗಳು. ಉಚ್ಚರಿಸಿ ನೋಡಿ. ವರ್ಗಾಣಾಂ ಪ್ರಥಮತೃತೀಯಪಞ್ಚಮಾ ಯಣಶ್ಚಾಲ್ಪಪ್ರಾಣಾ: ವರ್ಗಾಣಾಂ ದ್ವಿತೀಯಚತುರ್ಥೌ ಶಲಶ್ಚ ಮಹಾಪ್ರಾಣಾ:|| ವರ್ಗದ ಮೊದಲ, ಮೂಱನೆಯ, ಐದನೆಯ ಅಕ್ಷರಗಳು ಹಾಗೂ ಯಣ್ ಅಂದರೆ ಯ, ವ, ರ, ಲ ಗಳು ಅಲ್ಪಪ್ರಾಣಗಳು, ವರ್ಗದ ಎರಡನೆ ನಾಲ್ಕನೆಯ ಹಾಗೂ ಶಲ್ ಎಂದರೆ ಶ, ಷ, ಸ, ಹ ಗಳು ಮಹಾಪ್ರಾಣಗಳು. ಅನುಮಾನವಿದ್ದರೆ ananthakrishna.ks@gmail.com ಅಥವಾ ೯೧-೮೨೭೪-೨೬೧೧೮೨ಗೆ ಕರೆ ಮಾಡಿ.
ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು
ಸರಿ.. ವರ್ಗೀಯ ಮಹಾಪ್ರಾಣಗಳು ಕನ್ನಡದಲ್ಲಿ ಇಲ್ಲ... ಆದರಿಂದ ಅವನ್ನ ಪಕ್ಕಕ್ಕೆ ಇಡೋಣ..
ಇನ್ನು ಶ, ಷ,ಗಳು ಕನ್ನಡ ಒರೆಗಳಲ್ಲಿ ಇಲ್ಲ
ಬಱೀ ಸ ಮತ್ತು ಹ ಇವೆರಡು ಕನ್ನಡದಲ್ಲಿರುವ ಮಹಾಪ್ರಾಣವೆಂದು ತಿಳಿಯಬೋದು..
ಆದ್ರೆ ಮೂಲದ್ರಾವಿಡ( ಕನ್ನಡ ಮತ್ತು ತಮಿೞಿನ ಬೇರು) ಅಲ್ಲಿ ಸ ಮತ್ತು ಹ ಇಲ್ಲ.. ಚ ಮತ್ತು ಪ ಇವೆ....!!
ಪಚ್ => ಹಸಿರು
ಉಯ್ => ಉಸಿರು
ಕರಾಮಾ ಮತ್ತು ಶಬ್ದಮಣಿದರ್ಪಣಗಳು ಸ, ಮತ್ತು ಹ ಅನ್ನು ಮಹಾಪ್ರಾಣ ಎಂದಿವೆ ಎಂದು ನನಗೆ ಅನ್ನಿಸ್ತಿಲ್ಲ.. ನೀವು ಹೇಳೋದು ಸಂಸ್ಕೃತ ವ್ಯಾಕರಣ ಕನ್ನಡದ್ದಲ್ಲ...
=====================================
ಮಾಯ್ಸ!
ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು
ನಮ್ಮ ಹಳ್ಳಿ ಕಡೆ ಬೆಳೆ 'ಕಟಾವು' ಆಯ್ತು ಅಂತಾರೆ..
ಕಟಾವು = ಬೆಳೆದಿರುವ ಬೆಳೆಯನ್ನು ಕತ್ತರಿಸಿವುದು.
'ಕಟಾವು' ಇಂದ ಇಂಗ್ಲೀಸಿನ 'cut' ಆಗಿದಿಯೆ?
ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು
ಇನ್ನು ಕೆಲವು ಇರಬಹುದಾದ ಒರೆಗಳು. ಇದ್ದೇ ಇದೆ ಅಂತ ಅಲ್ಲ.
ಸಕ್ಕದದ ಕುಕ್ಕುರ ಕನ್ನಡದಿಂದಾ?
"ಕುರ ಕುರ ಕುರಾ" ಅಂತ ನಾಯಿಗೆ ಕೂಳು ಹಾಕುವಾಗ ಕರೆಯುವುದನ್ನು ಕೇಳಿರುವವರಿಗೆ ತಿಳಿದಿರುತ್ದೆ.
http://dsal.uchicago.edu/cgi-bin/philologic/getobject.pl?c.0:1:1804.burrow
ಕುರೆ Ka. kure an imitative sound; kure kure a sound used in calling a dog.
ಕುರಕುರ => ಕರ್ಕುರ => ಕುಕ್ಕುರ
==== ಗಾರ್ದಭ ======
ಕಱ್ತೆ (ಕರ್ತೆ) => ಕತ್ತೆ ( ಕನ್ನಡ )
ಕಱ್ತೆ => ಗಾಡದಿ ( ತೆಲುಗು ) ( ಱ => ಡ )
ಕಱ್ತೆ => ಗಾರ್ದಿ ( ಗೊಂಡ )
ಕಱ್ತೆ => ಗಾರ್ದೆ(ಕುವಿ) => ಗಾರ್ದವೆ => ಗಾರ್ದಭ? ( ಎ => ವೆ )
http://dsal.uchicago.edu/cgi-bin/philologic/getobject.pl?c.0:1:1370.burrow
ಇದು ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂತೆ ಇದ್ದರೂ, ಉಲಿ ಮಾರ್ಪಾಟುಗಳು ಹೀಗೆ.
=====ಲಾಕ್ಷ(wax)
ಅರಕ್ => ಅರಗು ( ಕನ್ನಡ )
ಅರಕ್ => ಅರಕ್ಕ => ರಾಕ್ಕ => ರಾಕ್ಷ => ಲಾಕ್ಷ
http://dsal.uchicago.edu/cgi-bin/philologic/getobject.pl?c.0:1:202.burrow
ಗಮನ: ರ => ಲ
)
ಸರಿರ (ವೇದ) => ಸಲಿಲ( ಪಾಣಿನಿಯ ಬಳಿಕ)
ರಮಣ => ರಾಮಣ್ಯ => ಲಾವಣ್ಯ ( ಲವಣದಿಂದ ಲಾವಣ್ಯವಲ್ಲ
=====ಅಲಸ( ಆಲಸ್ಯ )
ಅಲ( ಕನ್ನಡ ) = ಅಲವು ( ಅಣಿವು )
ಅಲ => ಅಲಸು => ಅಲಸ.( ಸೋಮಾರಿ, ಆಗದವನು )
http://dsal.uchicago.edu/cgi-bin/philologic/getobject.pl?c.0:1:239.burrow
====ಕವರಿ=>ಕಾವೇರಿ====
http://dsal.uchicago.edu/cgi-bin/philologic/getobject.pl?c.0:1:1333.burrow
ಕವರಿ => ಕವರಿ => ಚವರಿ( ಹೆಣೆದ ಜಡೆ )
ಕವರಿ => ಕವೆರಿ => ಕವೇರಿ => ಕಾವೇರಿ ( ಇದು ನನ್ನ ಉಂಕು )
ಕಾವೇರಿ ಹೊಳೆ ಹೆಣೆದ ಜಡೆಯಂತೆ ಇದೆ, ಮೂರು ಕಡೆ ತಿಟ್ಟು(island) ಮಾಡಿದೆ...( ಗವನಿಸಿ ). ಜಡೆಯಂತೆ ಮುರಿದು, ಮತ್ತೆ ಕೂಡಿ, ಮತ್ತೆ ಮುರಿದು(ಸೀಳಿ), ಮತ್ತೆ ಕೂಡುವುದು.
======= ಖಳ
ಕಳ್(to seal) => ಕಳ( thief ) =>ಖಳ
ಕಳ್ => ಕಳ್ಳ( thiff)
http://dsal.uchicago.edu/cgi-bin/philologic/getobject.pl?c.0:1:1378.burrow
==ಕಾನನ
ಕಾ/ಕಾನು/ಕಾನ ( ಕನ್ನಡ, ಕಾಡು ) => ಕಾನನ
http://dsal.uchicago.edu/cgi-bin/philologic/getobject.pl?c.0:1:1424.burrow
=====ಕಾಕ (crow )
ಕಾಕೆ/ಕಾಕಿ/ಕಾಗೆ/ಕಾಗಿ => ಕಾಕ
http://dsal.uchicago.edu/cgi-bin/philologic/getobject.pl?c.0:1:1431.burrow
======ಕ್ಷಾರ
ಕಾರ(ಕನ್ನಡ alkali ) => ಕ್ಷಾರ
http://dsal.uchicago.edu/cgi-bin/philologic/getobject.pl?c.0:1:1472.burrow
=====ಕಾಲ( ಕರಿಯ )
ಕಾೞ್ => ಕಾಳ್ => ಕಾಲ
ಕಾಱ್/ಕಾರ್ = black ; ಕಾರ್ಮೋಡ
http://dsal.uchicago.edu/cgi-bin/philologic/getobject.pl?c.0:1:1500.burrow
ಕಾಲಭೈರವ
====ಕೀಚಕ( ಟೊಳ್ಳಾದ ಬಿದಿರು )
ಕಿಚು => ಒಂದ ಬಗೆಯ ಸದ್ದು; ಕಿಚ್ಚುಗುಟ್ಟು
ಕೀಚಕ => ಸದ್ದು ಮಾಡುವ ಬಿದಿರು
http://dsal.uchicago.edu/cgi-bin/philologic/getobject.pl?c.0:1:1521.burrow
======ಕುಟಜ
ಕುಟಚ = ಒಂದ ಬಗೆಯ ತೊಗಟೆ/ಹುಲ್ಲು?
ಕುಟಚ => ಗುಡಸು => ಗುಡಸಲು/ಗುಡಿಸಿಲು( ಕನ್ನಡ )
ಕುಟಚ => ಕುಟಜ
http://dsal.uchicago.edu/cgi-bin/philologic/getobject.pl?c.0:1:1657.burrow
==== ಕುಟುಂಬ
http://dsal.uchicago.edu/cgi-bin/philologic/getobject.pl?c.0:1:1662.burrow
ಮಿಕ್ಕಿದ್ದು ನೋಡೋಣ ಮುಂದೆ..
ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು
ಅಣಿವು ಅಲ್ಲ ದಣಿವು!
======================================