ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › mahesha ರವರ ಬ್ಲಾಗ್

ನಮ್ಮ ಕನ್ನಡವ್ಯಾಕೆ ಹಿಂಗೆ?

May 10, 2007 - 10:26am — mahesha

ನಾವು ಆಡು ಮಾತಲ್ಲಿ ಬಳಸುವ "ಅವುದು, ಮಾಡಬವುದು, ಮಾಡವ್ನೆ, ಮಾಡವ್ರೆ, ಮಾಡಿವ್ರಿ, ಮಾಡವ್ಳೆ, ಮಾಡಯ್ತೆ" ಇದರ ಬಗ್ಗೆ ಉನ್ನಿಸ್ತಾ ಇದ್ದೇನು.

ಹೇಗೆ ಬಡಗಲಲ್ಲಿ ಪ => ಹ ಆಯಿತೋ, ನಮ್ಮ ಕಡೆ ಪ=>ವ ಆಗಿದೆ. ಅಂತ ನನ್ನ ಅನಿಸಿಕೆ

ಅಪ್ಪುದು => ಅಹುದು => ಹೌದು
ಅಪ್ಪುದು => ಅವುದು

ಮಾಡಬರ್ಪುದು => ಮಾಡಬಪ್ಪುದು
ಬಪ್ಪುದು => ಬಹುದು
ಬಪ್ಪುದು => ಬವುದು ( ಮಾಡಬವುದು )

ಮನೆಗೆ ಪೋಗು => ಮನೆಗೆ ಹೋಗು
ಮನೆಗೆ ಪೋಗು => ಮನಗೆ ವೋಗು

ಇನ್ನೊಂದು ನಮ್ಮಲ್ಲಿ ಇದೆ => ಅದೆ/ಅಯತೆ/ಐತೆ, ಇವೆ = ಅವೆ. ಹಾಗೆ ಇದ್ದಾನೆ = ಅದಾನೆ. ಇದ್ದೀನಿ => ಅದೀನಿ, ಹೀಗೆ ಇ ಬದಲು ಅ ಬಂದಯತೆ.
ಹೀಗೆ
ಅದೆ/ಅಯತೆ/ಐತೆ, ಅವೆ, ಅವನೆ, ಅವಳೆ, ಅವರೆ, ಇವು ಇದೆ, ಇವೆ, ಇಹನು, ಇಹಳು, ಇಹರು ಗಳಿಗೆ ಸಮ.

'ಇಹನೆ' ಒರೆಯಲ್ಲಿ, ಇ ಬದಲು ಅ, ಮತ್ತು ಹ ಬದಲು ವ ಬಂದರೆ ಅವನೆ ಆಗುವುದು.

ಮಾಡಿ + ಇಹನೆ = ಮಾಡಿಹನೆ
ಮಾಡಿ + ಅವನೆ = ಮಾಡವನೆ

ಮಾಡಿ + ಇಹರೆ = ಮಾಡಿಹರೆ
ಮಾಡಿ + ಅವರೆ = ಮಾಡವರೆ.

ಮಾಡಿ + ಇವೆ = ಮಾಡಿವೆ
ಮಾಡಿ + ಅವೆ = ಮಾಡವೆ.

ಇಂತಹ ಪ,ಬ,ಮ ಗಳ ಬದಲು, ವ ಬರುವುದನ್ನು ಕೇಶೀ ರಾಜನೂ ಹೇಳಿದ್ದಾನೆ.
ಮಳೆ + ಪಳ್ಳಿ = ಮಳೆವಳ್ಳಿ
ಮುಂದು + ಪರಿ = ಮುಂದುವರಿ
ಬಲೆ + ಪಣ್ಣು = ಬಲೆವಣ್ಣು
ಮೂರ್‍ + ಪತ್ತು = ಮೂರ್ವತ್ತು => ಮುವ್ವತ್ತು
ನಲ್ + ಪಗಲು = ನಲ್ವಗಲು

ಆದುದರಿಂದ,
ಅವುದು, ಮಾಡಬವುದು, ಮಾಡವನೆ, ಮಾಡವರೆ, ಮಾಡವೆ, ಮಾಡಯತೆ. ಇವೆಲ್ಲ ಸರಿಯೇ. ಪಕ್ಕ ಕನ್ನಡವೇ. ಏಕೆಂದರೆ ಇವು ನಿಕ್ಕುವ ನಮ್ಮ ಒಂದು ಕಟ್ಟಳೆಯನ್ನು ಪಾಲಿಸುತ್ತದೆ.

===========================================================
ಮಾಡಕ್ಕೆ/ಮಾಡಕ್ಕಿಲ್ಲ

ಮಾಡು + ಅಕ್ಕೆ = ಮಾಡಕ್ಕೆ
ಮಾಡಕ್ಕಿ + ಇಲ್ಲ = ಮಾಡಕ್ಕಿಲ್ಲ.

"ಮಾಡು"(verb root) ಇದನ್ನು ನಾವು ನೇರ noun ಆಗೇ ಬಳಸಬವುದು.
ಮಾದರಿ.
೧)ಬಾಳು( to live/life) ೨) ಹಾಡು( to sing/song) ಮುಂ......

ಹಾಗೆ ಎಲ್ಲ verb root ಗಳಿಗೆ 'ಅಕ್ಕೆ' ಸೇರಿಸದರೆ, ಅದು ಓಸುಗರ/reason ಹೇಳುವುದು

ಮಾಡಕ್ಕೆ => 'ಮಾಡುವುದು ಓಸುಗರ"
ಕುಡಿಯಕ್ಕೆ => 'ಕುಡಿಯುವುದಕ್ಕೆ ಓಸುಗರ"

ಇವು ಕೂಡ ಒಂದು ಕಟ್ಟಳೆಯಂತೆ ಸರೀತವೆ.
===========================================================

ವ್ಯಾಕರಣ ಅಂದರೆ ನಮ್ಮ ನುಡಿಯನ್ನು ಹೀಗೇ ಎಂದು ಹೇಳಲು ನಾವು ಕಂಡುಕೊಂಡ ಕಟ್ಟಳೆಗಳು. ಆದುದರಿಂದ ನಮ್ಮ ಕಡೆ ಬಲು ಹೆಚ್ಚು ಮಂದಿ ಆಡು ಈ ಬಗೆಗಳನ್ನು ಕನ್ನಡದ ವ್ಯಾಕರಣದ ಒಂದು ಪಾಲೆಂದೇ ಎಣಿಸಬೇಕು.

ಇಂತ ಇನ್ನು ಹಲವು ಗಮನಿಕೆಗಳು ಅವೆ. ಮುಂದೆ ಹಾಕ್ತೀನಿ.

~.~
  • mahesha ರವರ ಬ್ಲಾಗ್
  • Login or register to post comments
  • 345 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 10, 2007 - 3:17pm — kishorpatwardhan

ಉ: ನಮ್ಮ ಕನ್ನಡವ್ಯಾಕೆ ಹಿಂಗೆ?

kishorpatwardhan's picture

Quote:
ವ್ಯಾಕರಣ ಅಂದರೆ ನಮ್ಮ ನುಡಿಯನ್ನು ಹೀಗೇ ಎಂದು ಹೇಳಲು ನಾವು ಕಂಡುಕೊಂಡ ಕಟ್ಟಳೆಗಳು. ಆದುದರಿಂದ ನಮ್ಮ ಕಡೆ ಬಲು ಹೆಚ್ಚು ಮಂದಿ ಆಡುವ ಈ ಬಗೆಗಳನ್ನು ಕನ್ನಡದ ವ್ಯಾಕರಣದ ಒಂದು ಪಾಲೆಂದೇ ಎಣಿಸಬೇಕು.

ಒಪ್ಪಿದೆ. ಬಹು ಸೊಗಸಾಗಿದೆ. ಯೋಚಿಸಬೇಕಾಗಿರುವ ವಿಷಯ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 11, 2007 - 6:05am — anivaasi

ಉ: ನಮ್ಮ ಕನ್ನಡವ್ಯಾಕೆ ಹಿಂಗೆ?

anivaasi's picture

Quote:
ವ್ಯಾಕರಣ ಅಂದರೆ ನಮ್ಮ ನುಡಿಯನ್ನು ಹೀಗೇ ಎಂದು ಹೇಳಲು ನಾವು ಕಂಡುಕೊಂಡ ಕಟ್ಟಳೆಗಳು.

ನಾನಂದುಕೊಂಡದ್ದು ವ್ಯಾಕರಣ ಭಾಷೆ ಹೀಗಿರಬೇಕು ಎಂಬ ಕಟ್ಟಳೆಗಿಂತ ಭಾಷೆ ಹೀಗೆ ಬಳಕೆಯಲ್ಲಿದೆ ಎಂಬ ವಿವರಣೆ ಅಂತ. ವ್ಯಾಕರಣಕಾರರನ್ನು ಕೇಳಿ ಯಾರೂ ಮಾತಾಡುವುದಿಲ್ಲ. ಆದರೆ ವ್ಯಾಕರಣಕಾರರು ಸದಾ ಜನರಾಡುವ ಮಾತನ್ನು ಕೇಳುತ್ತಿರಬೇಕಾಗುತ್ತದೆ. ನುಡಿಬಳಕೆ ಬದಲಾದರೆ, ವ್ಯಾಕರಣಕಾರರು ಕರುಬುವುದು ಬಿಟ್ಟು ಬದಲಾದುದನ್ನು ವಿವರಿಸಬೇಕಾಗತ್ತೆ. ವಿಜ್ಙಾನದ ಕೆಲಸವೂ ಅದೇ ಅಲ್ಲವೆ?! ಮೋಬೈಲ್ ಎಸ್‌ಎಮ್‌ಎಸ್‌ನಿಂದ ಆಂಗ್ಲ ಭಾಷೆಯ ಸ್ಪೆಲ್ಲಿಂಗ್‌ಗೆ ಏನಾಗಿದೆ ನೋಡಿ!
Quote:
'ಇಹನೆ' ಒರೆಯಲ್ಲಿ, ಇ ಬದಲು ಅ, ಮತ್ತು ಹ ಬದಲು ವ ಬಂದರೆ ಅವನೆ ಆಗುವುದು.

"ಹೋಗುವುದು" ಒರೆಯಲ್ಲಿ, ಗು ಬದಲು ರು, ಮತ್ತು ಹೋ ಬದಲು ಬ ಬಂದರೆ ಬರುವುದು ಆಗುವುದು ! (ತಮಾಷೆಗೆ!)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 11, 2007 - 10:42am — mahesha

ಉ: ನಮ್ಮ ಕನ್ನಡವ್ಯಾಕೆ ಹಿಂಗೆ?

mahesha's picture

ಅನಿವಾಸಿಗಳೇ

ವ್ಯಾಕರಣ ಅಂದರೆ ನಮ್ಮ ನುಡಿಯನ್ನು ಹೀಗೇ ಎಂದು ಹೇಳಲು

ಅಂದರೆ

ಭಾಷೆ ಹೀಗೆ ಬಳಕೆಯಲ್ಲಿದೆ ಎಂಬ ವಿವರಣೆ ಅಂತ.

ಅಂತವೇ

ವ್ಯಾಕರಣ ಭಾಷೆ ಹೀಗಿರಬೇಕು

ಅಂತ ಅಲ್ಲ.

"ಹೇಗೇ ಎಂದು ಹೇಳು" = describe ಅಂತವೇ!!
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಂದಿರೆಯ ಸೀರೆ!
  • ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!
  • 'ಇಂಡಿಯಾ' ಕನ್ನಡದ ಒರೆಯೇ/ಪದವೇ!!?
  • ಕಾವೇರಿ ಶಾಪವೋ, ವರವೋ!
  • ೧೨ ಊರುಗಳ ಹೆಸರು ಸರಿಪಡಿಸಿಕೆಗೆ ಅಂತೂ ಕೊನೆ ಬಂತು!
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 23 ಅತಿಥಿಗಳು ಆನ್ಲೈನ್ ಇರುವರು.


ಜಗತ್ತಿನಲ್ಲಿ ಗ್ರಹಿಸಲು ಅತ್ಯಂತ ಕಷ್ಟಕರವಾದ ವಿಷಯವೆಂದರೆ ಆದಾಯ ತೆರಿಗೆ!

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator