ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ.
ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ
ಸಹಸ್ರನಾಮ ತತ್ತುಲ್ಯಂ ರಾಮನಾಮಂ ವರಾನನೇ
ತಪ್ಪಿದ್ರೆ ತಿದ್ದಿ..
ಇಲ್ಲಿ.. ಗೊಂದಲ ಇರೋದು..
ರಾಮ ಅಂದ್ರೆ ಅರಿತ?
ರಾಮಾ ಅಂದ್ರೆ ಅರಿತ?
"ಸಿರಿರಾಮ ರಾಮ ರಾಮನೆಂದು ಹೇ ರಮೇ ರಾಮೇ ಮನನಲಿಸುವವಳೇ
ಸಾವಿರಹಸರುಗಳ ಸಮವಾ ರಾಮನ ಹೆಸರು ಓ ಚಂದದ ಮೊಗದವಳೇ"

- mahesha ರವರ ಬ್ಲಾಗ್
- Login or register to post comments
- 587 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

RSS:
ಪ್ರತಿಕ್ರಿಯೆಗಳು
ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ.
'ರಾಮೇ ಮನನಲಿಸುವವಳೇ' ಎನ್ನುವ ಬದಲು 'ರಾಮನ ಮನನಲಿಸುವವಳೇ' ಅ೦ತ ಇದ್ರೆ ಹೆ೦ಗೆ...ಬಲ್ಲವನು ನಾನಲ್ಲ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ.
ಮಾರಾಯ್ರೇ.. ಹೇಗೆ ಶಿವ, ಪಾರ್ವತಿಗೆ ಹೇಳಿರೋದು..
ಅಲ್ಲಿ ಮನೋರಮೇ ಅಂದ್ರೇ ಶಿವನ ಮನವನ್ನು ನಲಿಸುವ ಗಿರಿಜೇ
ಅಲ್ಲೇ ರಾಮೇ ಅಂತ ಕರೆದಿರೋದು ಪಾರ್ವತಿಯನ್ನೇ!!
ತುಸು ನಕ್ಕಿದಕ್ಕೆ ಮುನಿಸಿಕೋಬೇಡಿ.. !
ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ.
ಮಾರಾಯ್ರೇ.. ಹೇಗೆ ಶಿವ, ಪಾರ್ವತಿಗೆ ಹೇಳಿರೋದು
ಇದು
ಮಾರಾಯ್ರೇ.. ಹೀಗೆ ಶಿವ, ಪಾರ್ವತಿಗೆ ಹೇಳಿರೋದು
ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ.
ಬಲೇ ಪಟ್ಟು ಗುರೂ!
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ.
"ರಾಮ' ಅನ್ನೋ ಪದಕ್ಕೆ ಕೆಲವೊಂದು ಜನ ಸ್ವತಃ ರಾಮನಿಗಿನ್ತ ಹೆಚ್ಚು ಬೆಲೆ ಕೊಡ್ತಾರೆ. "ರಾಮ" ಅನ್ನೋ ಪದದಲ್ಲಿ ಅನ್ತಾದ್ದೇನಿರಬಹುದು?!
ರಮೇ ರಾಮೇ ...ಸ್ವಲ್ಪ ಬಿಡಿಸ್ತೀರ?
ಈ ಸಂದರ್ಭದಲ್ಲಿ ಒಂದು ಕಥೆ ನನಪಿಗೆ ಬರುತ್ತ ಇದೆ.
ಅಮರನಾಥದಲ್ಲಿ ನಾವು ಕಾಣುವ ಹಿಮದ ಲಿಂಗ.... ಅಂದಿನ ( ಪೂರ್ಣ ಲಿಂಗವಾದ ದಿನ) ದಿನವೇ ಶಿವ ಪಾರ್ವತಿಗೆ ಈ ಸ್ರಿಶ್ಟಿ ಯ ರಹಸ್ಯ ವನ್ನು ಹೇಳಿದ್ದನನ್ತೆ! ಕೆಲವರ ಪ್ರಕಾರ ಶಿವ ತನ್ನ ಮನೋರಮೆಗೆ ಅಲ್ಲಿ/ಅಂದೇ ರಾಮ ಮಂತ್ರವನ್ನು ಉಪದೇಶಿದ್ದ ಅಂತೆ!.
ಎಷ್ಟು ನಿಜಾನೋ ಗೊತ್ತಿಲ್ಲ!
ಅರಿತ ಅಂದ್ರೆ ಏನು....ಅರ್ಥ ಎಂದೇ?
ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ.
ಅರಿತ = ತಿಳಿವು..meaning.. ಅದು ಅರ್ಥಕ್ಕೆ ಸಮವೇಯೆಂದು ತಿಳಿಯದು
ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ.
ಮಹೇಶರೆ,
ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ
ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ
"ಸಿರಿರಾಮ ರಾಮ ರಾಮನೆಂದು ಹೇ ರಮೇ ರಾಮೇ ಮನನಲಿಸುವವಳೇ
ಸಾವಿರಹಸರುಗಳ ಸಮವಾ ರಾಮನ ಹೆಸರು ಓ ಚಂದದ ಮೊಗದವಳೇ"
ರಮೇ - ಎಂದರೆ ರಮೆ/ಲಕುಮಿಯಲ್ಲ; ರಮ್ ಧಾತುವಿನ ಉತ್ತಮ ಪುರುಷ ಏಕವಚನ ಕ್ರಿಯಾರೂಪ=ನಲಿವೆ,ಸಂತಸಪಡುವೆ ಎಂದರ್ಥ.
ರಾಮೇ - ಎಂದರೆ ಸಪ್ತಮೀ ವಿಭಕ್ತಿ ಏಕವಚನ = ರಾಮನಲ್ಲಿ
ರಮೇ ರಾಮೇ = ರಾಮನಲ್ಲಿ (ರಾಮನಾಮದಲ್ಲಿ) ನಲಿಯುವೆ ಎಂದರ್ಥ.
ಆದ್ದರಿಂದ ತಾತ್ಪರ್ಯವು:
ಎಲೈ ಮನೋರಮೆಯೇ, ಶ್ರೀರಾಮ ರಾಮ ರಾಮ ಎಂದು ರಾಮನ(ನಾಮದ)ಲ್ಲೇ ನಲಿಯುತಿಹೆ
ಸುಂದರಮೊಗದವಳೇ, ಒಂದು ರಾಮ ನಾಮ (ವಿಷ್ಣುವಿನ) ಸಾವಿರ ನಾಮಗಳಿಗೆ ಸರಿಸಾಟಿ!
ಎಂದಾಗುತ್ತದೆ. (ಈ ಶ್ಲೋಕ ವಿಷ್ಣುಸಹಸ್ರನಾಮ ಫಲಶ್ರುತಿಯಲ್ಲಿದೆ)
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ.
ಬೆನಕರೆ,
ಬಲು ನನ್ನಿ!!
ನನಗೆ ರಾಮೇ ಅಂದ್ರೆ ರಾಮನಲ್ಲಿ ಎಂದು ಅನ್ನಿಸಿತ್ತು. ಆದ್ರೆ ರಮೇ ರಾಮೇ ಇವೆರಡೂ ಸಂಬೋದನೆಗಳೇ ಎಂದು ಅಂದುಕೊಂಡೆನು...
ನೀವು ಚನ್ನಾಗಿ ಬಿಡಿಸಿದ್ದೀರಿ.. ತುಂಬ ನೆರವಾಯ್ತು.
ರಾಮೇ ಮನೋರಮೇ = ರಾಮನಲ್ಲಿ ಮನವನ್ನು ನಲಿಸುತಿಹಳೇ.. ಇದು ಬಲು ಚಲುವಾಗಿದೆ..
ಸಹಸ್ರನಾಮ ತತ್ತುಲ್ಯಂ = ಸಾವಿರಹೆಸರುಗಳಿಗೆ ಸರಿಸಾಟಿ
ರಾಮನಾಮಃ ಅಲ್ವಾ? ಯಾಕೆ ವಿಸರ್ಗ ಇಲ್ಲ ಶ್ಲೋಕದಲ್ಲಿ?
ಮುಂದಿನ ವಕಾರದಿಂದ ಸಂಧಿಯಾಗಿದೆಯೇ?
ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ.
ಮಹೇಶರೆ,
’ನಾಮ’ ಎಂಬುದು ಸಕ್ಕದದಲ್ಲಿ ನ ಕಾರಾಂತ ನಪುಂಸಕಲಿಂಗ -> ನಾಮನ್ ಎಂಬುದು ಅದರ ಪ್ರಕೃತಿರೂಪ.
ಆದ್ದರಿಂದ ಈ ಕೆಳಗಿನಂತೆ ಸುಬಂತರೂಪಗಳನ್ನು ಹೊಂದುತ್ತದೆ:
ನಾಮ ನಾಮನೀ ನಾಮಾನಿ
ಹೇ ನಾಮನ್ ಹೇ ನಾಮನೀ ಹೇ ನಾಮಾನಿ
...... ಇತ್ಯಾದಿ
ಆದ್ದರಿಂದ ರಾಮನಾಮ, ಸಹಸ್ರನಾಮ ಎಂಬ ಪದಗಳು ವ್ಯಾಕರಣಶುದ್ಧವಾಗಿವೆ.
ರಾಮಸ್ಯ ನಾಮ -> ರಾಮನಾಮ
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ.
ರಮೇ ಎಂಬುದು ರಮಿಸುವವಳು, ನಲಿಸುವವಳು ಎಂಬ ಅರ್ಥ ಸುಮಾರಾಗಿ ತಿಳಿದಿತ್ತು. ಅದನ್ನು ಸರಿಯಾಗಿ ತಿಳಿಹೇಳಿದ್ದಕ್ಕೆ ಧನ್ಯವಾದಗಳು ಬೆನಕರೆ.
ರಾಮನಿಗೆ ಹೆಸರಿಡುವ ಸಂದರ್ಭದಲ್ಲಿ,. ಇವನು ಎಲ್ಲರಿಗೂ ನಲಿವುಂಟುಮಾಡುವನು, ಅದಕ್ಕೆಂದೇ ಇವನಿಗೆ ರಾಮ ಎಂದು ಹೆಸರಿಡು ಎಂದು ವಸಿಷ್ಟರು ದಶರಥನಿಗೆ ಹೇಳುವ ಸನ್ನಿವೇಶವನ್ನು ವಾಲ್ಮೀಕಿರಾಮಾಯಣದ ಬಾಲಕಾಂಡದಲ್ಲೆಲ್ಲೊ ನೋಡಿದ ನೆನಪು.
-ಹಂಸಾನಂದಿ
ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ.
ಸರಿ..
ಆದ್ರೆ ನನ್ನ ಗೊಂದಲ ಹೀಗೆ..
ರಾಜನ್ ಧಾತು ಸಮಾಸದಿಂದ ಅಕಾರಾಂತವಾಗುವುದು
ರಾಜನ್, ಮಹಾರಾಜಃ, ಮೃಗರಾಜಃ
ಹೀಗೇ ಅಲ್ವಾ ನಾಮನ್ ಒರೆ?
ಖ್ಯಾತನಾಮಃ ಸರಿಯೋ ಖ್ಯಾತನಾಮ ಸರಿಯೋ?
ಸಮಾಸದಲ್ಲಿ ಹೀಗಾಗುವುದುಂಟೆಂದು ನನ್ನ ಗೊಂದಲ ಹಿಗ್ಗಿದೆ.
ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ.
ಮಹೇಶರೆ,
ನಿಮ್ಮ ಪ್ರಶ್ನೆ ಸರಿಯಾಗಿದೆ!
ಆದರೆ ಅದಕ್ಕೆ ಉತ್ತರವೂ ಇದೆ:
ಸಮಾಸಲಿಂಗ-೧:
ಸಮಾಸಪದದ ಲಿಂಗವು ಉತ್ತರಪದದ ಲಿಂಗವೇ ಆಗಿರುವುದು ಸಾಮಾನ್ಯ ನಿಯಮ.
ಅಂದರೆ, ರಾಜ್ಞಃ ಪುತ್ರಃ -> ರಾಜಪುತ್ರಃ ಆಗುತ್ತದೆ; ರಾಜಪುತ್ರನ್ ಅಲ್ಲ.
ಅಂತೆಯೇ, ಗೌರ್ಯಾಃ ಪುತ್ರಃ -> ಗೌರೀಪುತ್ರಃ ಆಗುತ್ತದೆ; ಗೌರೀಪುತ್ರಾ ಅಲ್ಲ.
ಸಮಾಸಲಿಂಗ-೨:
ಪಾಣಿನಿಯ "ರಾಜಾಹಸ್ಸಖಿಭ್ಯಷ್ಟಚ್" ಸೂತ್ರದಂತೆ
ಸಮಾಸದ ಉತ್ತರಪದದಲ್ಲಿ ರಾಜನ್-ಅಹಸ್-ಸಖಿ ಶಬ್ದಗಳು ಬಂದಾಗ,
ಅವಕ್ಕೆ "ಟಚ್" ಪ್ರತ್ಯಯವು ಸೇರಿ, ಸಮಾಸದ ಲಿಂಗವು ಅ ಕಾರಾಂತ ಪುಲ್ಲಿಂಗವಾಗುತ್ತದೆ!
ಉದಾ: ಮೃಗಾನಾಂ ರಾಜಾ -> ಮೃಗರಾಜಃ, ದೇವಾನಾಂ ಸಖಾ -> ದೇವಸಖಃ
ಬೇರೆ ಯಾವುದೇ ಪದಗಳಿಗೆ ಈ ಸೂತ್ರ ಅನ್ವಯವಾಗದ ಕಾರಣ, ನಾಮನ್ ಪದವು ಅ ಕಾರಾಂತವಾಗದೆ, ಹಾಗೆಯೇ ಉಳಿಯುತ್ತದೆ.
ಆದ್ದರಿಂದ ರಾಮಸ್ಯ ನಾಮ -> ರಾಮನಾಮ.
ಸಮಾಸಲಿಂಗ-೩:
ಮೇಲೆ ನೋಡಿದ ಎರಡೂ ಉತ್ತರಪದದ ಅರ್ಥವೇ ಮುಖ್ಯವಾದ ತತ್ಪುರುಷ ಸಮಾಸಗಳು.
ಅನ್ಯಪದದ ಅರ್ಥವೇ ಪ್ರಧಾನವಾಗುವ ಬಹುವ್ರೀಹಿ ಸಮಾಸದ ಲಿಂಗವು ಉತ್ತರಪದ ಅಥವಾ ಪೂರ್ವಪದದ ಲಿಂಗವಾಗಿರದೆ,
ಸಮಾಸವು ತೋರಿಸುವ ಅನ್ಯಪದದ ಲಿಂಗವಾಗಿರುತ್ತದೆ! ಅಂದರೆ,
ತ್ರೀಣಿ ಅಂಬಕಾನಿ ಯಸ್ಯ ಸಃ -> ತ್ರ್ಯಂಬಕಃ
ತ್ರೀಣಿ-ಮೂರು(ನಪುಂ)
ಅಂಬಕ-ಕಣ್ಣು(ನಪುಂ)
ತ್ರ್ಯಂಬಕ-ಮುಕ್ಕಣ್ಣ(ಪುಲ್ಲಿಂಗ)!!
ಹಾಗೆಯೇ, ಖ್ಯಾತನಾಮಃ -> ಖ್ಯಾತಂ ನಾಮ ಯಸ್ಯ ಸಃ (ಯಾವನ ಹೆಸರು ಪ್ರಸಿದ್ಧವೋ ಅವನು!)
ಹೀಗಾಗಿ, ನಾಮವನ್ನು ತೋರುವ "ರಾಮನಾಮ" ಸರಿ! ಪ್ರಸಿದ್ಧಪುರುಷನನ್ನು ತೋರುವ "ಖ್ಯಾತನಾಮಃ" ಸರಿ!!

ಬೆನಕರೆ ತುೞಿಲು...
ಬಲು ನೆರವಾಯ್ತು...
"ರಾಜಾಹಸ್ಸಖಿಭ್ಯಷ್ಟಚ್" ಈ ಸೂತ್ರವೇ ನನ್ನ ಗೊಂದಲಕ್ಕೆಡೆ ಮಾಡಿದ್ದು. ಈ ಸೂತ್ರದಡಿ 'ನಾಮನ್' ಬರಕ್ಕಿಲ್ಲ ಅಂತ ತಿಳಿಸಿದ್ದು ಬಾಳಿಕೆಗೆ ಬಂತು..
'ರಾಮನಾಮಃ' ಅಂದ್ರೆ 'ರಾಮ ಎಂದು ಹೆಸರುಳ್ಳವನು', ( ಆನಂದಕೊಡುವ, ನಲಿಸುವ ಹೆಸರುಳ್ಳವನು )
'ರಾಮನಾಮ' ಅಂದ್ರೆ 'ರಾಮ ಎಂಬ ಹೆಸರು' ( ನಲಿವು ಎಂಬ ಹೆಸರು )
'ಖಾತ್ಯನಾಮಃ' ಅಂದ್ರೆ 'ಹೆಸರಾಂತನು'
'ಖಾತ್ಯನಾಮ' ಅಂದ್ರೆ 'ಹೆಸರಾಂತ ಹೆಸರು.'
ಈ ಬೇರ್ಪು ತುಸು ಟಕ್ಕನೆ ಹೊಳೆಯಲಿಲ್ಲ..
ಸಕ್ಕದದ ನುಣುಪು(ಸೂಕ್ಷಮತೆ) ಬಲು ಹಿರಿದು, ದುಡಿಮೆಯಿಲ್ಲದೇ ಅರಿಯಲು ಬಲು ಎಡರೇ..
ನೀವು ಹೇಳಿಕೊಟ್ಟಿದಕ್ಕೆ ನನ್ನಿ!!
ಈಗ ಇಡೀ ಶ್ಲೋಕ ಹುಗೂರವಾಯ್ತು..
ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ.
ಒಂದು ಒಳ್ಳೆಯ ಓದನ್ನು ನೀಡಿದ್ದಕ್ಕಾಗಿ ಬೆನಕರಿಗೆ ಮತ್ತು ಮಹೇಶನಿಗೆ ನೂರು ನನ್ನಿ.
ಉ: ಈ ಶ್ಲೋಕ ಬಿಡಿಸಲು ನೆರವಾಗಿ.. ಶ್ರೀರಾಮ ರಾಮ ರಾಮೇತಿ.
ಅಡ್ಡಿಯಿಲ್ಲ...
ಆದ್ರೆ ನೀನು ನನಗೆ ಹೇಳಿದ ನನ್ನಿಗಳೆಲ್ಲ ಬೆನಕರಿಗೇ ಹೋಗಬೇಕು.. ಅವರಿಗೆ ಈ ಗೋಜಲನ್ನು ಬಿಡಿಸಿದ್ದು.