ಕನ್ನಡ ಮತ್ತು ಸಂಸ್ಕೃತ ನಡುವಣ ಹೋಲಿಕೆ - ವರ್ಣಮಾಲೆ - ಸ್ವರಗಳು
ನನಗೆ ಕನ್ನಡದ ಸೊಲ್ಲರಿಮೆಯ ಒಳಹು ಚನ್ನಾಗಿ ಅರಿಯಲು ಶಂಕರಬಟ್ಟರ ಹೊತ್ತಗೆಗಳು ನೆರವಾಗಿವೆ. ಆದರೆ ಸಂಸ್ಕೃತದ ವ್ಯಾಕರಣದ ಹಿನ್ನೆಲೆ ಶಂಕರಬಟ್ಟರ ಮಾತುಗಳನ್ನು ತಿಳಿಯಾಗಿ ಅರಿಯಲು ಇಂಬಾಗಿವೆ. ಅವರ ಮಾತುಗಳನ್ನು ಸಂಸ್ಕೃತದ ವ್ಯಾಕರಣಾಂಶಗಳಿಗೆ ಹೋಲಿಸೇ ಹೇಳಿರುವುದು ಇನ್ನೂ ಸುಲಭವೇ ಆಯಿತೆನಗೆ.
ಮೊದಲಿಗೆ ವರ್ಣಮಾಲೆಯಲ್ಲಿ ಸ್ವರಗಳು
ಸಂಸ್ಕೃತದ ವರ್ಣಮಾಲೆಯನ್ನು ಪಾಣಿನಿಯ ಮಾಹೇಶ್ವರ ಸೂತ್ರಗಳಾಧಾರದಲ್ಲಿ ರಚಿಸಿಲಾಗಿದೆ. ಹಾಗೋ ಆ ಮಾಹೇಶ್ವರ ಸೂತ್ರಗಳು ಸಂಸ್ಕೃತದ ಸಂಧಿನಿಯಮಳನ್ನಾಧಿರಿಸವೆ.
ಮಾಹೇಶ್ವರ ಸೂತ್ರಗಳು ಅಇಉಣ್, ಋಲೃಕ್, ಏಓಙ್, ಐಔಚ್ ಮುಂತಾದವು.
ಸಂಸ್ಕೃತದಲ್ಲಿರುವ ಸ್ಫಷ್ಟ ಸಂಧಿ ನಿಯಮಗಳು ಅದರ ವರ್ಣಮಾಲೆಗೆ ಆಧಾರ
ಅ + ಅ = ಆ ( ರಾಮಾನುಜ )
ಇ + ಇ = ಈ ( ಗಿರೀಶ )
ಉ + ಉ = ಊ ( ಗುರೂಪದೇಶ )
ಋ + ಋ = ೠ ( ಮಾತೄಣ )
ಲೃ + ಲೃ = ಲೄ (?)
ಅ + ಇ = ಏ ( ಮಹೇಶ )
ಅ + ಏ = ಐ ( ಏಕೈಕ )
ಅ + ಉ = ಓ ( ಮಹೋನ್ನತ )
ಅ + ಓ = ಔ ( ಮಹೌಘ )
ಆದುದರಿಂದ ಸಂಸ್ಕೃತದ ಸ್ವರಗಳನ್ನು ಅ, ಆ, ಇ, ಈ ಉ, ಊ ಋ, ೠ, ಲೃ, ಲೄ ಏ, ಐ ಓ ಔ ಎಂದು ಕ್ರಮವಾಗಿಸಿರುವುದು ಸಂಸ್ಕೃತಭಾಷೆ ಲಕ್ಷಣಕ್ಕೆ ಬಹು ಸೂಕ್ತವಾಗಿದೆ. ಇಂತಹ ಸೂತ್ರ ಮಾಡಿದ ಪಾಣಿನಿ ಶ್ರೇಷ್ಠನೇ ಸರಿ. ಹ್ರಸ್ವ ಎ ಮತ್ತು ಒ ಗಳ ಸಂಸ್ಕೃತದಲ್ಲಿ ಇಲ್ಲ. ಅದು ಅದರ ಲಕ್ಷಣ.
ಕನ್ನಡದ ಸ್ವರಗಳ ಓರಣೆಗೆ ಈ ಕ್ರಮ ಮತ್ತು ಆಧಾರ ವೈಜ್ಞಾನಿಕವೇ?
ಕನ್ನಡದಲ್ಲಿ ಸಂಧಿನಿಯಮಗಳು ಸಂಸ್ಕೃತದಷ್ಟು ಸ್ಫಷ್ಟವಾಗಿಲ್ಲ.. ಅದರಲ್ಲೂ ಆಗಮ ಸಂಧಿಯೆಂಬುದು ಬಲು ಗೋಜಲು.!
ಅ + ಅ = ಅ ( ಈಗ + ಅಲ್ಲಿ = ಈಗಲ್ಲಿ )
ಇ + ಇ = ಇ ( ಇಲ್ಲಿ + ಇಲ್ಲಿ = ಇಲ್ಲಿಲ್ಲಿ )
ಉ + ಉ = ಉ ( ಹೆಚ್ಚು + ಉರಿ = ಹೆಚ್ಚುರಿ )
ಋ( ಒಂದೂ ಕನ್ನಡದ ಪದದಲ್ಲಿ ಋ ಇಲ್ಲ )
ಲೃ ( ಒಂದೂ ಕನ್ನಡದ ಪದದಲ್ಲಿ ಲೃ ಇಲ್ಲ )
ಅ + ಇ = ಇ ( ಈಗ + ಇಲ್ಲಿ = ಈಗಿಲ್ಲಿ )
ಅ + ಉ = ಉ ( ಈಗ + ಉಂಟು = ಈಗುಂಟು )
ಹೀಗೆ..
ಸಂಸ್ಕೃತದ ಸ್ವರ ಸಂಧಿಗಳಿಗಿಂತ ಕನ್ನಡದ ಸ್ವರಸಂಧಿಗಳು ವಿಭಿನ್ನ...
ಹಾಗೂ ಐ ಮತ್ತು ಔ ಗಳು ಕನ್ನಡದಲ್ಲಿ ಯಾಕೆ ಬೇಕೆಂಬ ಪ್ರಶ್ನೆಯೂ ಬರುವುದು. ಐ=ಅಯ್ ಮತ್ತು ಔ=ಅವ್ ಎಂದೇ ಉಲಿಯುವುವೆಲ್ಲ!
ಕನ್ನಡದಲ್ಲಿ ಎ ಮತ್ತು ಒಗಳ ಹ್ರಸ್ವರೂಪಗಳಿವೆ. ಇವನ್ನು ಬಿಟ್ಟರೆ ಕನ್ನಡ ಭಾಷೆಯ ’ಒ’ಡಲು ಹರಿದಂ’ತೆ’!
ಕನ್ನಡದಲ್ಲಿ ಸ್ವರಗಳನ್ನು ಸಂಸ್ಕೃತದ ಹಾಗೆ ಓರಣೆ ಮಾಡಿದರೆ ಏನು ಪ್ರಯೋಜನ?
ಪ್ರಯೋಜವೊಂದೇ ಸಂಸ್ಕೃತದಿಂದ ಎರವಲು ಬಂದ ಸಂಧಿ ಪದಗಳನ್ನು ತಿಳಿಯಲು ಸುಲಭ. ಅಂದರೆ ಸಂಸ್ಕೃತದ ಸಂಧಿನಿಯಮಗಳನ್ನು ಕನ್ನಡಕ್ಕಾಗಿ ತಿಳಿಯಲು ಸುಲಭ.
ಹಾಗಾದರೆ ಕನ್ನಡದ ಸಂಧಿನಿಯಮಕ್ಕೆ ಅನುಕೂಲವಾಗುವ ಹಾಗೆ ಓರಣೆ ಮಾಡಲು ಬರುವುದೇ?
ಬರುವುದಿಲ್ಲ. ಕನ್ನಡದ ಸ್ವರ ಸಂಧಿಗಳಲ್ಲಿ ಎರಡು ಸ್ವರಗಳು ಸೇರಿ ಮತ್ತೊಂದು ಸ್ವರವನ್ನು ಹುಟ್ಟುಹಾಕುವುದಿಲ್ಲ. ಸಂಸ್ಕೃತದಲ್ಲಿ ಅ + ಇ = ಏ ಆದಹಾಗೆ ನಡೆಯುವುದಿಲ್ಲ.
ಸರಿ. ಸಂಸ್ಕೃತದ ಕ್ರಮದಿಂದ ಉಪಯೋಗವಿಲ್ಲ. ಕನ್ನಡದ ಸಂಧಿನಿಯಮಗಳನುಗುಣವಾಗುವ ಓರಣೆ ಮಾಡಲು ಬರುವುದಿಲ್ಲ? ಮತ್ತೇನು ಮಾಡೋಣ?
ಬಲು ಸುಲಭ!
ಕನ್ನಡದಲ್ಲಿ ಅಯ್ದು ಸ್ವರಗಳಿವೆ. ಇ ಎ, ಉ ಒ ಅ ( ಅವು ನಾಲಗೆಯಲ್ಲಿ ಹುಟ್ಟುವ ಜಾಗಗಳನುಗುಣವಾಗಿ ) ಮತ್ತು ಆ ಅಯ್ದು ಸ್ವರಗಳಿಗೆ ಉದ್ದನೆಯ ರೂಪಗಳಿವೆ ಈ, ಏ, ಊ, ಓ, ಆ ಅಷ್ಟೆ.!
ಈಗ ಕನ್ನಡದಲ್ಲಿ ಸ್ವರಗಳೆಷ್ಟು ಅಯ್ದು ಮತ್ತು ಅವುಗಳ ಉದ್ದನೆಯ ರೂಪಗಳು ಅಯ್ದು!
ಇಲ್ಲಿ ಹೋಲಿಕೆಯನ್ನಷ್ಟೇ ಬರೆದಿದ್ದೀನಿ.. ಇದರ ಉದ್ದೇಶ ಕನ್ನಡ ಒಳಹನ್ನು ತಿಳಿಯುವುದು ಹೊರತು. ಲಿಪಿಕ್ರಾಂತಿ ಪದಕ್ರಾಂತಿಯನ್ನು ಒತ್ತಾಯಿಸುತ್ತಿಲ್ಲ. ಒತ್ತಾಯ ಮಾಡುವವರು ಮಾಡುತ್ತಿದ್ದಾರೆ. ಅದಕ್ಕೆ ಸಮರ್ಥನೆಯೂ ಇದೆ.
- mahesha's blog
- Login or register to post comments
- 307 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಕನ್ನಡ ಮತ್ತು ಸಂಸ್ಕೃತ ನಡುವಣ ಹೋಲಿಕೆ - ವರ್ಣಮಾಲೆ - ಸ್ವರಗಳು
ಮಹೇಶ್ ರವರೇ, ಡಿಸೆಂಬರ್ ೫/೬ ರ ವಿ.ಕ ನೋಡಿ. ಸಧ್ಯ ಇರುವ ವ್ಯಾಕರಣ ಎಷ್ಟು ವೈಜ್ಞಾನಿಕ ಎಂಬುದನ್ನು ವಿವರಿಸಿದ್ದಾರೆ. ಪಾಣಿನಿ ಯ ವ್ಯಾಕರಣಾಂಶಗಳು ಕನ್ನಡಕ್ಕೆ ಸೂಕ್ತವಾದವಂತೆ.
ಉ: ಕನ್ನಡ ಮತ್ತು ಸಂಸ್ಕೃತ ನಡುವಣ ಹೋಲಿಕೆ - ವರ್ಣಮಾಲೆ - ಸ್ವರಗಳು
>> ಕನ್ನಡದ ಸ್ವರ ಸಂಧಿಗಳಲ್ಲಿ ಎರಡು ಸ್ವರಗಳು ಸೇರಿ ಮತ್ತೊಂದು ಸ್ವರವನ್ನು ಹುಟ್ಟುಹಾಕುವುದಿಲ್ಲ. ಸಂಸ್ಕೃತದಲ್ಲಿ ಅ + ಇ = ಏ ಆದಹಾಗೆ ನಡೆಯುವುದಿಲ್ಲ
ಮಂದಮತಿಯನ್ನು ಮನ್ನಿಸಿರಿ. ಅರಿವಿಗೆ ಬರಲಿಲ್ಲ.
ಉ: ಕನ್ನಡ ಮತ್ತು ಸಂಸ್ಕೃತ ನಡುವಣ ಹೋಲಿಕೆ - ವರ್ಣಮಾಲೆ - ಸ್ವರಗಳು
ಗುರುಬಾಳಿಗರೇ ಮೆಲ್ಲತಲೆಯಲ್ಲ ನೀವು..
ನಾನು ಅದನ್ನು ಹೆಚ್ಚು ಬಿಡಿಸಿ ಹೇಳಿಲ್ಲ ಎಂದು ಅನ್ನಿಸುತ್ತದೆ.
ಸಂಸ್ಕ್ರುತದಲ್ಲಿ ಗಮನಿಸಿರಿ
ಅ + ಇ = ಏ ( ಅ ಮತ್ತು ಇ ಸೇರಿ, ಅ ಮತ್ತು ಇ ಇವೆರಡೂ ಅಲ್ಲದ ಹೊಸದಾದ, ಬೇರೆಯದೇ ಆದ ಏ ಬಂತು )
ಹಾಗೆ
ಅ + ಉ = ಓ
ಅ + ಏ = ಐ
ಅ + ಓ = ಔ
ಆದರೆ ಕನ್ನಡದಲ್ಲಿ ಹೀಗೆ ಎಲ್ಲೂ ಆಗಲ್ಲ.
ಅ + ಇ = ಇ ( ಈಗಿಲ್ಲಿ )
ಅ + ಉ = ಉ ( ಈಗುರಿದಿದೆ )
ಈ ಬಗೆಯಲ್ಲಿ ಕನ್ನಡ ಮತ್ತು ಸಂಸ್ಕ್ರುತದಲ್ಲಿ ಎರಡು ಸ್ವರಗಳು ಒಂದಕ್ಕೊಂದು ಎದುರಾದರೆ ನಡೆಯುವ ಸಂದಿ ಬೇರೆ ಬೇರೆ.!