ಗೌರವವೆಂಬ ಬಯಕೆ!! ಗೌರವವಿಲ್ಲ ಎಂಬ ನೋವು
ನಾವು ಅದರಲ್ಲೂ ಈ ದೇಸದವರು, ನಮಗೆ ಉವರು "ಗೌರವ ಕೊಡಲಿಲ್ಲ, ಮರ್ಯಾದೆಯಾಗಿ ಮಾತಾಡಿಸಲಿಲ್ಲ, ಬೆಲೆ ತೋರಲಿಲ್ಲ" ಅಂತ ನೊಂದುಕೊಳ್ಳುವುದು ಮಾಮೂಲಿ.
ಅದರಲ್ಲೂ ಹರೆಯ ಹಚ್ಚಾದಂತೆ, ಈ ಗೋಳು ಇನ್ನೂ ಹೆಚ್ಚು.
"ನಾನು ನಿನಗಿಂತ ಹರೆಯದಲ್ಲಿ ಹೆಚ್ಚು, ದೊಡ್ಡವನು ಅದಕ್ಕೆ ಗೌರವ ಕೊಡು" ಅಂತ ಬಾಯಿಬಿಟ್ಟು ಹೇಳುವ ಗರುವದ ಹಂಬಲಿಗರು(ಗೌರವಾಪೇಕ್ಷಿಗಳು) ಇದ್ದಾರೆ. ![]()
"ನಮ್ಮ ಭಾರತಕ್ಕೆ ಎಲ್ಲಿಲ್ಲದ ಗೌರವವಂತೆ, ಏಕೆಂದರೆ ನಾವು ಸಿಕ್ಕಾಪಟ್ಟೆ ಹಳೆಯ ನಾಡಂತೆ.
ಅಮೆರಿಕೆ ಬಹಳ ಎಳೆಸು ನಾಡಂತೆ,. ಅದಕ್ಕೆ ಅದಕ್ಕೆ ಕೊಂಚವೂ ಗೌರವ, ಮರ್ಯಾದೇ ತೋರದೇ, ಅದನ್ನು ಹಳೀತಾ ಇರಬೇಕಂತೆ" ಅಂತ ಕೇಳಿ ಕೇಳಿ, ಕಿವಿ ತೂತು ಬಿದ್ದುಹೋಗಿದೆ. ( ನನ್ನ ಹತ್ರ ಒಬ್ಬ ಅಮೆರಿಕೆ ಕಂಡರೆ ದೊಡ್ಡದಾಗಿ ಕತ್ತಿ ಮಸೆಪರೊಬ್ಬರಿದ್ದಾರೆ
)
ಒಟ್ಟಿನಲ್ಲಿ ನನ್ನ ಉಂಕು ಇನ್ತೇ.
"ಒಂದು ಸರಕು ಹಳೆಯದು, ಹೆಚ್ಚು ಹಳೆಯದು ಎಂದು ಹೆಚ್ಚು ಹೆಚ್ಚು ಗೌರವ, ಮರ್ಯಾದೆಯನ್ನು ತೋರುವುದರಲ್ಲಿ ಏನು ಹುರುಳಿದೆ?"
ಇದಕ್ಕೆ ಸುಮ್ಮನೆ "ಅದು ನಮ್ಮ ಸಂಸ್ಕೃತಿ, ಅದಕ್ಕೆ" ಎಂಬ ಮರುಮಾತು ಸಲ್ಲದು!
ಹಳೆಯದರ ಮೇಲೆ ಎರಕ, ಒಲವು, ಕನಿಕರ ಬೇಕಾದರೆ ಇರಲಿ!!
=========================================================
ಗೌರವ/ಬೆಲೆ ಆ ಸರಕಿನ ತಿರುಳ ಮೇಲೆ ನಿಂತಿದೆ .
ತಿರುಳಿಲ್ಲದ್ದೂ ಅದು ಎನಿತೇ ಹಳೆಯದಾಗಲಿ, ಅದಕ್ಕೆ ಬೆಲೆ/ಗೌರವ ತಗ್ಗೇ ತಗ್ಗವುದು.!!

- mahesha ರವರ ಬ್ಲಾಗ್
- Login or register to post comments
- 461 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಗೌರವವೆಂಬ ಬಯಕೆ!! ಗೌರವವಿಲ್ಲ ಎಂಬ ನೋವು
ಸರಕಿನ ಬಗ್ಗೆ ನಿಮ್ಮ ಮಾತು ಒಪ್ಪಿದೆ. ಅದರೆ ಜನರ ಮಟ್ಟಿಗೆ, ಪ್ರಾಯಕ್ಕೆ ಬೆಲೆ ಕೊಡಬೇಕು.
ಉ: ಗೌರವವೆಂಬ ಬಯಕೆ!! ಗೌರವವಿಲ್ಲ ಎಂಬ ನೋವು
ಓಸುಗರ ನೀಡದೇ ತೀರ್ಪಿಯ್ಯಬಾರದು
ಅದಕ್ಕೇ ಬರಿ ಹರೆಯಕ್ಕೆ ಯಾಕೆ ಬಲೆಕೊಡಬೇಕು? ನನ್ನದು ಅದೇ ಕೇಳ್ಮೆ.
ತುಸು ಮಲ್ಲಗೆ ಗಡಿಬಿಡಿ ಮಾಡದೆ, ಓದಿನೋಡಬೇಕು. ಇದೆಲ್ಲವನ್ನು ನಾನು ಬಿಡಿಬಿಡಿಯಾಗಿ ಕೇಳಿದ್ದೇನೆ.
ತಿರುಳಿರುವ ಮಂದಿ ಕಿರಿಯರಾದರೇನು, ಹಿರಿಯರಾದರೇನು, ಅವರಿಗೆ ಗೌರವ, ಬೆಲೆ ತನ್ತಾನೆ ಸುಲ್ಲುತ್ದೆ.!!!!
======================================
ಉ: ಗೌರವವೆಂಬ ಬಯಕೆ!! ಗೌರವವಿಲ್ಲ ಎಂಬ ನೋವು
ಪ್ರಾಯದವರು ತಿರುಳಿಲ್ಲದವರಾದರೂ ಗೌರವ ಕೊಡಬೇಕು ಎನ್ನುವುದು ನನ್ನ ಅಭಿಪ್ರಾಯ. ಯಾಕೆ ಎಂದರೆ ನನ್ನಲ್ಲಿ ಉತ್ತರವಿಲ್ಲ. ಇದೇನಿದ್ದರೂ ಭಾವನಾತ್ಮಕ ನಿರ್ಧಾರ. ಇಲ್ಲಿ ಲಾಜಿಕ್ ಬೇಡವೆಂದು ನನ್ನನಿಸಿಕೆ.
ಉ: ಗೌರವವೆಂಬ ಬಯಕೆ!! ಗೌರವವಿಲ್ಲ ಎಂಬ ನೋವು
ಓಸುಗರವಿಲ್ಲವೇ... ಹಂಗಾದರೆ ...
ಅನಿಸಿಕೆಗಳು ಒಬ್ಬರಿಗಿಂತ ಒಬ್ಬರಿಗೆ ಬೇರೆಬೇರೆ. ಒಬ್ಬರ/ಒಂದು ಗುಂಪಿನ "ಭಾವನಾತ್ಮಕ ನಿರ್ಧಾರ"ಅನ್ನು ಎಲ್ಲರಿಗೂ ಕಡ್ಡಾಯ ಮಾಡಿದರೆ, ಅದು ಅನಿಸಿಕೆ-ಸಲಿಗೆಯನ್ನು ಮೊಟಗುಗೊಳಿಸಿದಂತೆ.
======================================
ಸಲಿಗೆ = freedom.