ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › mahesha ರವರ ಬ್ಲಾಗ್

ಕನ್ನಡಿಗರು ಹಳೆಗನ್ನಡವನ್ನು ಯಾಕೆ ಓದಬೇಕು, ಅದರ ಬಗ್ಗೆ ಯಾಕೆ ಹೆಮ್ಮೆ ಪಡಬೇಕು?

August 10, 2007 - 11:19am — mahesha

ಕೆಲವರು ಹಳೆಗನ್ನಡ, ನಡುಗನ್ನಡದ ಬಗ್ಗೆ ಮೂಗು ಮುರಿಯುತ್ತಾರೆ, ಅದರ ಬಗ್ಗೆ ತಾತ್ಸಾರ, ಉಡಾಫೆಯ ಭಾವವನ್ನೂ ತೋರಿಸುತ್ತಾರೆ. ಮೊನ್ನೆ ಒಬ್ಬರು ಹಳೆಗನ್ನಡವನ್ನು ಓದುವುದು "ಅರ್ಥಹೀನ ಶ್ರಮ"ಎಂದು ಹೀಯಾಳಿಸಿಬಿಟ್ಟರು. ಹಿಂದೆ ಒಂದು ಸುದ್ದಿ ಪೇಪರಿನ ಒಂದು ಬರಹದಲ್ಲಿ "ಹಳೆಗನ್ನಡ ಸಾಹಿತ್ಯದಲ್ಲಿ ಬದುಕಿಗೆ ಬೇಕಾದುದು ಏನೂ ಇಲ್ಲ" ಎಂದು ಒಬ್ಬ ಮಹಾಶಯ ದೊಡ್ಡ ಸುಳ್ಳುಹೇಳಿದ್ದರು. ಹೀಗೆ ಮತ್ತೊಬ್ಬರು ಹಳೆಗನ್ನಡ "ಬೂಸಾ" ಎಂದಿದ್ದರಂತೆ. ಈ ಅಂತೆ-ಕಂತೆಗಳನ್ನು ನಾವೆಲ್ಲ ಓದಿಕೊಂಡಿದ್ದೀವಿ. ಆದರೆ ಹೀಗೆ ಬರೆದ ಹಲವರು ಹಳೆಗನ್ನಡ ಓದಿಲ್ಲ ಎಂದು ತಿಳಿದಾಗ ನಮಗೆ ಬಲು ಸಂಕಟವಾಗುವುದು. ಹಳೆಗನ್ನಡದ ಬಗ್ಗೆ ಅರಿಯದೇ ಹೀಗೆ ಹಗುರವಾಗಿ ಮಾತಾಡುವುದು ತಪ್ಪಲ್ವಾ! ಹಳೆಗನ್ನಡವಿಲ್ಲದೇ ಹೊಸಗನ್ನಡ ಹೇಗೆ ಇರಲು ಸಾಧ್ಯ? ಇವೊತ್ತು ನಮ್ಮ ಹೊಸಗನ್ನಡ ಇಷ್ಟು ಚೆಲುವಾಗಿದೆ ಅಂದರೆ ಅದರ ಬೇರಾದ ಹಳೆಗನ್ನಡ, ನಡುಗನ್ನಡ ಇದಕ್ಕೆ ಎಷ್ಟು ಸತ್ವವನ್ನು ಕೊಟ್ಟಿರಬೇಕು?

ಹಳೆಗನ್ನಡದಲ್ಲಿ ಏನೇನಿದೆ? ಅದು ನಮ್ಮ ಕನ್ನಡ ಭಾಷೆಯ ಸೊಗಡನ್ನು, ಅದರ ಬೆಳವಣಿಗೆಯನ್ನು, ಹೇಳೇ ಹೇಳುವುದು. ಇದಲ್ಲದೇ ಹಳೆಗನ್ನಡ ನೀಡುವ ಬೆಲೆಬಾಳುವ ಅರಿವೆಂದರೆ, ನಮ್ಮ ಕನ್ನಡ ನಾಡಲ್ಲಾದ ರಾಜಕೀಯ, ಧಾರ್ಮಿಕ ಕೋಲಾಹಲಗಳು, ಚಳುವಳಿಗಳು, ಹೋರಾಟಗಳು, ಜಂಜಾಟಗಳು. ಇದೂ ಅಲ್ಲದೇ ಕೆಲವು ಹಳಗನ್ನಡ ಕಬ್ಬಗಳೂ ನಮ್ಮ ಉಡುಗೆ-ತೊಡುಗೆ-ಅಡುಗೆ ಹೇಗಿತ್ತು? ನಮ್ಮ ಕನ್ನಡ ನಾಡಲ್ಲಿ ಏನೇನು ಹಣ್ಣು-ಹಂಪಲು-ಹೂಗಾಯಿಗಳಿವೆ/ಇತ್ತು? ನಮ್ಮ ಕನ್ನಡದ ಜನರ ಬದುಕು ಹೇಗಿತ್ತು, ಅವರ ನಡೆ-ನುಡಿ ಹೇಗಿತ್ತು? ಕನ್ನಡದಲ್ಲಿ ಎಂತೆಂತ ಕವಿಕೋಗಿಲೆಗಳು, ರಸ ಋಷಿಗಳು, ಧೀರ ನಾಡಾಳುಗಳು, ವ್ಯಾಕರಣ-ಗಣಿತ-ವಿಜ್ಞಾನ-ವೈದ್ಯ-ಜ್ಯೋತಿಷ್ಯ-ಸಂಗೀತ ಚದುರ ಕಲಿಗಳಿದ್ದರು? ಜೈನ-ವೈದಿಕ-ಲಿಂಗಾಯತ-ಜಾನಪದ ಮುಂತಾದ ನಂಬಿಕೆಗಳು ಕನ್ನಡ ನೆಲದಲ್ಲಿ ಹೇಗೆ ಇದ್ದವು?"ಕರ್ಣಾಟ ಬಲ" ಎಂದು ಮೆರೆದ ಕನ್ನಡ ಸೇನೆಯ ವೀರಾಳುಗಳು ಹೇಗಿದ್ದರು, ಅವರಿಗಾಗಿ ಎದ್ದು ವೀರಗಲ್ಲುಗಳೂ, ಅವರ ಹೆಣದ ಜೊತೆ ಮಹಾಸತಿಯರ ಮಾಸ್ತಿಗಲ್ಲುಗಳು ಹೇಗಾದವು?............. ಹೀಗೆ ಸಾವಿರಾರು ಪ್ರಶ್ನೆಗಳಿಗೆ ಉತ್ತರಗಳು.

ಹೀಗೆ ನಮ್ಮ ಇಡೀ ಕನ್ನಡ ಜನಾಂಗದ, ಕನ್ನಡ ದೇಶದ, ಕನ್ನಡ ರಾಷ್ಟ್ರದ, ಕನ್ನಡ ಸಂಸ್ಕೃತಿ/ನಡಾವಳಿಯ, ಬೇರುಗಳನ್ನು ತಿಳಿಯಲು ಇರವ ಅಮೂಲ್ಯ ಸಿರಿಯೇ ನಮ್ಮ ಹಳೆಗನ್ನಡ. ಅದರಲ್ಲೂ ಲೆಕ್ಕವಿಲ್ಲದಷ್ಟು ವಿಸ್ಮಯ ರಚನೆಗಳು ಈಗಾಗಲೇ ಹಾಳಾಗಿ ಹೋಗಿವೆ. ಉಳಿದು ಸಿಕ್ಕ ಕಾವ್ಯ ಅರ್ಧಕ್ಕಿಂತ ಕಡಮೆ ಎಂದೇ ಹೇಳಬೇಕು.

ಈಗ ಸಿಕ್ಕಿರುವ ಕನ್ನಡದ ಕಾವ್ಯಗಳಲ್ಲಿ ಅತಿ ಹಳೆಯದು "ಕವಿರಾಜಮಾರ್ಗಂ". ಈ ಸುಮಾರು ಕ್ರಿ.ಶ. ಎಂಟನೇ ಶತಮಾನದ ಕಾಲದ್ದು. ಈ ಕಾಲದಲ್ಲಿ ಭಾರತದಲ್ಲೇ ಇಂತಹ ಬರೀ ಕನ್ನಡ ಮತ್ತು ಸಂಸ್ಕೃತ/ಪ್ರಾಕೃತದಲ್ಲಿ ಇತ್ತೆನ್ನಬಹುದು. ಇದು ಎಂತಹ ಹೊತ್ತಗೆ, ಇದರ ಗುರಿ, ತಿರುಳುಗಳು ಸೋಜಿಗ ಹುಟ್ಟಿಸುವಂತಹದ್ದು. ಈ ಕಾವ್ಯದಲ್ಲೇ

"ಕಾವೇರಿಯಿಂದಮಾ ಗೋ-
ದಾವರಿವರಮಿರ್ಪ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಸು
ಧಾವಳಯವಿಲೀನವಿಶದ ವಿಷಯ ವಿಶೇಷಂ"

ಇರ್ಪ ಅಂದರೆ ಇರುವ. ಹಾಗಾದರೆ ಈ ಪದ್ಯವು ನಮ್ಮ ಕನ್ನಡ(ನಾಡು) ಕವಿರಾಜಮಾರ್ಗದ ಹೊತ್ತಲ್ಲಿ ಕಾವೇರಿಯಿಂದ ಗೋದಾವರಿಯ ವರೆಗೆ ಇತ್ತು ಎಂದು ಹೇಳುವುದು. ಆ ನಾಡಿನ ಹೆಸರೇ ’ಕನ್ನಡ’, ನುಡಿಯ ಹೆಸರೂ "ಕನ್ನಡ", ಆ ನಾಡಿನ ಜನರರು "ಕನ್ನಡರು". ಅಂತಹ ಹಿರಿನಾಡನ್ನು ಕನ್ನಡ ಜನರು ಈ ಭೂಮಿಯಲ್ಲೇ ವಿಶೇಷವಾದ ವಿಷಯ(ಪ್ರಾಂತ್ಯ) ಎಂದು ಭಾವಿಸಿದ್ದರು; ಎಂದು ಹೇಳುವುದು. ಇದು ಎಂತಹ ಹೆಮ್ಮೆ ತರುವುದು ನಮ್ಮಲ್ಲಿ.

ಹೀಗೆ ಒಂದು ಜನಾಂಗದ ಬಗ್ಗೆ, ಒಂದು ನಾಡಿನ ಬಗ್ಗೆ ಹೀಗೆ ಹೆಮ್ಮೆಯಿಂದ ಹೇಳಿಕೊಂಡಿರುವ ಜಗತ್ತಿನ ಕೃತಿಗಳಲ್ಲಿ, ಇದೇ ಅತಿ ಹಳೆಯದಂತೆ. ಈ ಕಾವ್ಯದಲ್ಲೀ ಕವಿ ತನಗಿಂತ ಹಿಂದಿನ ಎಂಟು ಕವಿಗಳ ಹೆಸರು ಹೇಳುವನು. ಅಂದರೆ ಎಂಟನೇ ಶತಮಾನದ ಹೊತ್ತಿಗೆ ನಿಶ್ಚಿತವಾಗಿ ಕನ್ನಡ ನುಡಿ ಮೇಲ್ಮಟ್ಟ ತಲುಪಿ, ಕಾವ್ಯಾ ಭಾಷೆಯಾಗಿ ಬಿಟ್ಟಿತ್ತು.

ಇನ್ನು ಪಂಪ, ರನ್ನ, ಪೊನ್ನ. ಚಾವುಂಡರಾಯ, ಮುಂತಾದವರು; ನಡುಗನ್ನಡದ ನೇಮಿಚಂದ್ರ, ಜನ್ನ, ಕೇಶೀರಾಜ, ಹರಿಹರ, ರಾಘವಾಂಕ, ಕುಮಾರವ್ಯಾಸ, ಚಾಮರಸ, ಬಸವಣ್ಣರು; ಅಚ್ಚಕನ್ನಡದ( ಸಂಸ್ಕೃತದ ತತ್ಸಮ-ಪದಗಳನ್ನು ಬಳಸದೇ ಬರೆದ ಕಬ್ಬಗಳು ) ಆಂಡಯ್ಯ, ನಯಸೇನರು, ಇಂತಹ ಹಿರಿಯದಾದ ಉನ್ನತ ಕಾವ್ಯಪರಂಪರೆ ನಮ್ಮದು.

ಇಂತಹ ಮಹತ್ವದ ಅರಿವು ಹೊತ್ತಿರುವ ಹಳಗನ್ನಡದಲ್ಲಿ ಏನು ಇಲ್ಲವಾ? ಅದನ್ನು ಓದುವುದು ಅರ್ಥಹೀನ ಶ್ರಮವೇ?

ಕನ್ನಡಿಗರಾದ ನಾವು ಇದರ ಬಗ್ಗೆ ಉಡಾಫೆ, ತಾತ್ಸಾರ ತೋರುವುದು ಸರಿಯೇ? ಯೋಚಿಸಿರಿ.
========================================================
ಇದನ್ನು ನಾನು ನನ್ನ ಗೆಳೆಯ ಸೇರಿ ಬಲು ಹಿಂದೆ ಬರೆದಿದ್ದ ಪ್ರಬಂಧ! ಎಂದು ಬರೆದುದು ಎಂದು ಮರೆತು ಹೋಗಿದೆ.

~.~
  • mahesha ರವರ ಬ್ಲಾಗ್
  • Login or register to post comments
  • 461 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 10, 2007 - 12:38pm — keshav

ಉ: ಕನ್ನಡಿಗರು ಹಳೆಗನ್ನಡವನ್ನು ಯಾಕೆ ಓದಬೇಕು, ಅದರ ಬಗ್ಗೆ ಯಾಕೆ ಹೆಮ್ಮೆ ಪಡಬೇಕು?

keshav's picture

ತುಂಬ ಚೆನ್ನಾಗಿ ಬರೆದಿದ್ದೀರಿ, ಥ್ಯಾಂಕ್ಸ್.
ಕೇಶವ

Visit my blog:
http://kannada-nudi.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 10, 2007 - 12:55pm — mahesha

ಉ: ಕನ್ನಡಿಗರು ಹಳೆಗನ್ನಡವನ್ನು ಯಾಕೆ ಓದಬೇಕು, ಅದರ ಬಗ್ಗೆ ಯಾಕೆ ಹೆಮ್ಮೆ ಪಡಬೇಕು?

mahesha's picture

ಥ್ಯಾಂಕ್ಸ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 21, 2008 - 12:12pm — kannadakanda

ಉ: ಕನ್ನಡಿಗರು ಹಳೆಗನ್ನಡವನ್ನು ಯಾಕೆ ಓದಬೇಕು, ಅದರ ಬಗ್ಗೆ ಯಾಕೆ ಹೆಮ್ಮೆ ಪಡಬೇಕು?

kannadakanda's picture

ನಾಡಾದಾ ಅಲ್ಲ. ನಾಡದಾ ಸರಿ. ಛಂದಸ್ಸಿಗೂ ಸರಿ. ಅರ್ಥಕ್ಕೂ ಸರಿ. ನಾಡಾಗಲಿಲ್ಲ. ನಾಡಿತ್ತು ಆಗ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
  • ಹಳೆಗನ್ನಡ ಆಸಕ್ತರಿಗೆ ಸಿಹಿಸುದ್ದಿ
  • ನಮ್ಮ ಕನ್ನಡವನ್ನು develop ಮಾಡಿ.
  • ೧೨ ಊರುಗಳ ಹೆಸರು ಸರಿಪಡಿಸಿಕೆಗೆ ಅಂತೂ ಕೊನೆ ಬಂತು!
  • ಕನ್ನಡ ಬೆಳೆಯುತ್ತಿರುವುದು ನೋಡಿದರೆ ಖುಶಿ ಆಗುತ್ತದೆ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒದ್ದಾಡುವ ನೆನಪುಗಳು..
  • ಅಪ್ಪಣೆ ಕೊಟ್ಟರೆ ಕೆನ್ನೇಲಿ ಗಾಯ..!
  • ನನ್ನ ಮುದ್ದು ಕೋತಿಗೆ !
  • ಅಮ್ಮ ನ ನೆನಪು ಮತ್ತು ಫಾರಿನ್ನು .:)
  • ಓದಿದ್ದು ಕೇಳಿದ್ದು ನೋಡಿದ್ದು-3
  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • shashikannada
    ಉ: ಕನ್ನಡ ಭಾಷೆ ಎಷ್ಟು ಹಳೆಯದು?
    August 30, 2008 - 6:26pm
  • spruhi
    ಉ: ಅಮ್ಮ ನ ನೆನಪು ಮತ್ತು ಫಾರಿನ್ನು .:)
    August 30, 2008 - 6:21pm
  • spruhi
    ಉ: ಕನ್ನಡ ಮಾತಾಡಿ, ಮಜಾ ಮಾಡಿ
    August 30, 2008 - 6:16pm
  • cmariejoseph
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 5:56pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:48pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:39pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:35pm
  • csomsekraiah
    ಉ: ಬಿಡುಗಡೆಯ ನಂತರದ ಬೇಡಿಗಳು (೩)
    August 30, 2008 - 5:12pm
  • ಸಂಗನಗೌಡ
    ಉ: ಬಾ ತಬ್ಬಿಕೋ :-)
    August 30, 2008 - 5:01pm
  • cmariejoseph
    ಉ: ಒಂದು ನಾಯಿ ಕತೆ
    August 30, 2008 - 5:00pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 51 ಅತಿಥಿಗಳು ಆನ್ಲೈನ್ ಇರುವರು.


ಮುಕ್ತ ಮನಸ್ಸು ಖಾಲಿ ಆಕಾಶದಂತೆ. ಹೊರಗಡೆ ವಿಶಾಲ ಮತ್ತು ಒಳಗಡೆ ಶೂನ್ಯ. ಅದರಲ್ಲಿ ಅಂಟುತನ ಇಲ್ಲವೇ ಇಲ್ಲ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator