ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › mahesha ರವರ ಬ್ಲಾಗ್

ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

May 11, 2007 - 3:50pm — mahesha

ನನಗೆ ಅಶೋಕರ http://sampada.net/article/3969#comment-6857 ಓದಿ, ಹಿಂಗನ್ನಿಸಿತು.

ಕನ್ನಡದ ತರ್ಜುಮೆಯನ್ನು ಓದುವುದಕ್ಕಿಂತ ನನಗೆ ಇಂಗ್ಲೀಸಲ್ಲೇ ಓದಿಕೊಳ್ಳುವುದು ಆರಾಮು. Sad

ಆದೇಕೋ ಗೊತ್ತಿಲ್ಲ ನಮ್ಮ ಬರೆವಣಿಗೆಯನ್ನು ಮೆಲ್ಲಗೆ ಮತ್ತು ಬಹಳ ಹೊತ್ತು ಓದಿದರೆ ಸರಿಯಾಗಿ ತಿಳಿಯುವುದು. ಕನ್ನಡೈಸಿದ( ಸಕ್ಕದಿಸದ Smiling ) terminologyಗಳನ್ನು ತಿಳಿಯಲು ನಾವು ಒಂದು ಒರೆಗಂಟು ಹಿಡಿದಿರಬೇಕು.

ಇದಲ್ಲದೆ ಕನ್ನಡದಲ್ಲಿ science ಓದಕ್ಕೆ ನಮಗೆಲ್ಲ ( ಬಹಳರಿಗೆ ) ತುಂಬಾ ತ್ರಾಸವೇ. Terminologyಗಳು ಸಲೀಸಾಗಿ ತಲೆಗಿಳಿಯೋದೇ ಇಲ್ಲ.

ಕನ್ನಡದಲ್ಲಿ science ಬರಹಗಳನ್ನು ಹೇಗೆ ಸಲೀಸಾಗಿ ಬರೆಯಬಹುದು ಎಂದು ಶಂಕರ ಬಟ್ಟರ "ಕನ್ನಡ ಬರಹವನ್ನು ಸರಿಪಡಸೋಣ" ಹೊತ್ತಗೆಯಲ್ಲಿ ಹಲವು ಸಲಹೆಗಳನ್ನು ನೀಡಿಹರು.

science ಬರೆಪುಗಳ ಬಗ್ಗೆ ನನ್ನ ಕೆಲವು ಮನವಿಯಂತ ಸಲಹೆಗಳು ಇವು

೧. ತುಸು ಸರಳವಾಗಿ, ಬರೆಯಲು ಮೊಗಸಬೇಕು. ದೊಡ್ಡ ದೊಡ್ಡ ಸಾಲುಗಳು ಕಡಮೆಯಾಗಿ, ಚಿಕ್ಕಚೊಕ್ಕ ಸಾಲುಗಳಿರಲಿ

೨. terminologyಯನ್ನು ಕನ್ನಡೈಸಲು ಹೆಣಗಿ, ಹೆಂಗೆ ಹೆಂಗೋ ಒರೆಗಳನ್ನು ತುಂಬಬಾರದು.. ಅಲ್ಲಿ "ಜೈವಿಕ ಇಂಧನ" ಇದು ಏನು ಎಂದು ತಿಳಿಯಲು ನನಗೆ ಮೊದಲು ಕಷ್ಟವಾಯಿತು. ಅದರ ಬದಲು bio-fuel, ಅಂತ ನೇರ ಇಂಗ್ಲೀಸನ್ನೇ ಬಳಸಿದರೆ ಒಳಿತು. ( ಸಕ್ಕದಕ್ಕೆ ಮೊರೆ ಹೋಗುವ ಬದಲು )

೩. ಪಾಮೆಣ್ಣೆ ಇದು ತಾಳೆಯೆಣ್ಣೆ( palm = ತಾಳೆ ) ಇಂತ ಬಳಕೆಗಳು, ( ಇಂಗ್ಲೀಸು + ಕನ್ನಡ ದಿಂದ ಸಂಧಿಸಮಾಸ ) ಸಲೀಸಾಗಿ ತಿಳಿಯಲ್ಲ.
ಹಾಗೆ ಏಕಬೆಳೆ ( ಸಕ್ಕದ + ಕನ್ನಡ ದಿಂದ ಸಂಧಿಸಮಾಸ ) = ಒಂದೇ ಬಳೆಯನ್ನು ಬಳೆಯುವುದರಿಂದ/ ಒಂದು ಪಸಲು ತಗೆಯುವದರಿಂದ ಇದು ಆರಾಮಾಗಿ ತಿಳಿಯುವುದು. ( ನಮ್ಮ ರೈತರೂ ಹಿಂಗೇ ಮಾತಾಡೋದು )

೪. ಹಾಗಿಂದ ಹಾಗೆ ( ಯಥಾವತ್ತು ) ತರ್ಜುಮೆ ಬೇಡ. "ಹಸಿರಾಗುತ್ತಿದೆ ಸ್ಯಾನ್‍ಫ್ರಾನ್ಸಿಸ್ಕೋ ನಗರ!" ಇದು ನನಗೆ ಮೊದಲಿಗೆ ಆ ಊರು ಹಸಿರು ಬಣ್ಣಕ್ಕೆ ತಿರುಗುತ್ತಿದೆಯೇನೋ ಎಂದು ಅನ್ನಿಸಿಸಿತು. ಅದಕ್ಕೆ ಬದಲು "ಪ್ಲಾಸ್ಟಿಕ್ ಇಲ್ಲದ ಊರಾಗುತ್ತಿರುವ ಸ್ಯಾನ್ ಫ್ರಾನ್ಸಿಸ್ಕೊ" ಎಂದು ಹೆಸರಿಟ್ಟಿದ್ದರೆ ಚಂದ.

೫. terminolgy ಗಳಿಗೆ ದೊಡ್ಡ ದೊಡ್ಡ ಸಮಾಸದ ಒರೆಗಳು ಬೇಡ.
ಮಾದರಿ :
"ಸ್ಮೃತಿಕೋಶದೋಷನಿವಾರಕತಂತ್ರಾಂಶ",
"ಸ್ವಯಂಚಾಲಿತವಾಹನದ್ವಾರನಿರ್ಮಾಣ",
"ಜಲೋತ್ಪತ್ತವಿದ್ಯುನ್ನಿರ್ವಾಹಕಘಟಕಾಧಿಕಾರಿ" Smiling,
"ಪ್ರಸವವೇದನಾನಿವಾರಕಔಷಧನಿಪುಣೋತ್ತಮ"

ಇವು ಪುಂಗಿದಂತಿದ್ದರೂ( exaggeration ) ಅಂತವು ಇದೆ. "ವೃತ್ತ ಆರಕ್ಷಕ ನಿರೀಕ್ಷಾಧಿಕಾರಿ"

೬. ಹೆಚ್ಚು ದೊಡ್ಡ paragraphಗಳು ಬೇಡ. ಬದಲಿಗೆ pointಗಳಲ್ಲಿ.

೭. ಹೆಚ್ಚು ಗೋಚಲು-ಸಾಲುಗಳು(complex sentences) ಬೇಡ.

ಇವು ನನ್ನ ಅನಿಸಿಕೆಗಳು.

~.~
  • mahesha ರವರ ಬ್ಲಾಗ್
  • Login or register to post comments
  • 860 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 11, 2007 - 7:58pm — ASHOKKUMAR

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

ASHOKKUMAR's picture

ಮಹೇಶರ ಪ್ರತಿಕ್ರಿಯೆ ಇಷ್ಟು ತಡವಾಯಿತೇಕೆ ಎನ್ನುವುದೇ ನನಗರ್ಥವಾಗದ ವಿಷಯ. ಅವರ ಸಲಹೆಗಳನ್ನು ಅನುಸರಿಸುತ್ತೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 11, 2007 - 9:40pm — kishorpatwardhan

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

kishorpatwardhan's picture

ಬಹಳ ಒಳ್ಳೆಯ ವಿಷಯವನ್ನು ಚರ್ಚೆಗೆ ಎತ್ತಿಕೊಂಡಿದ್ದೀರಿ.

ನಾನೂ ಈ ಬಗ್ಗೆ ತುಂಬ ಯೋಚಿಸಿದ್ದಿದೆ. ನಾನು ಶಾಲೆಯಲ್ಲಿದ್ದಾಗ ಕನ್ನಡ ಮೀಡಿಯಮ್ ಓದಿದ್ದು. ಹೈಸ್ಕೂಲ್ ಕೂಡ ಕನ್ನಡದಲ್ಲೇ ಓದಿದೆ. ಮತ್ತೆ ಪಿ.ಯು.ಸಿ. ಗೆ ಬಂದಾಗ ಇಂಗ್ಲಿಷ್. ಅಲ್ಲಿ ವಿಜ್ಞಾನದ ಎಲ್ಲ ವಿಷಯಗಳಲ್ಲೂ ಕಡಿಮೆ ಅಂಕ ಬರಲು ನಾನು ಕನ್ನಡ ಮೀಡಿಯಮ್ ನಲ್ಲಿ ಓದಿದ್ದೇ ಕಾರಣ ಅಂತ ತುಂಬ ದಿನ ಅಂದುಕೊಂಡಿದ್ದೆ. ಆದರೆ ಈಗ ಕನ್ನಡ ಮಾಧ್ಯಮದಲ್ಲಿ ಇದ್ದ inefficient ಪಠ್ಯಪುಸ್ತಕಗಳೇ ನನ್ನ ಕೆಟ್ಟ performance ಗೆ ಕಾರಣ ಎಂದು ಗೊತ್ತಾಗಿದೆ. ವಿಜ್ಞಾನವನ್ನು ಯಾವತ್ತೂ ಕನ್ನಡದಲ್ಲಿ ಎಷ್ಟು ಚೆನ್ನಾಗಿ ಹೇಳಿಕೊಡಬಹುದೋ ಅಷ್ಟು ಚೆನ್ನಾಗಿ ಹೇಳಿಕೊದುವುದಿಲ್ಲ. ಎಲ್ಲಕ್ಕಿಂತ ಹೆಚ್ಚು ಸಮಸ್ಯೆ ಬರುವುದು technical term ಗಳ ಬಳಕೆಯಲ್ಲಿ. ನಮ್ಮ ಒಬ್ಬ ರಸಾಯನ ಶಾಸ್ತ್ರದ ಮೇಷ್ಟ್ರು normality ಯನ್ನು ’ನಾರ್ಮಲತೆ’ ಅನ್ನುತ್ತಿದ್ದರು. ನಾವು ಅದನ್ನು ’ನಾರುವ ಮಲ’ ಅಂತ ಹೇಳಿಕೊಂಡು ನಗುತ್ತಿದ್ದೆವೇ ವಿನಃ ಅದರ ನಿಜವಾದ ಅರ್ಥ ಆಗಿರಲೇ ಇಲ್ಲ. Mitochondria ವನ್ನು ಇನ್ನೊಬ್ಬರು”ಮಿತಕೇಂದ್ರ’ ಅಂತ ಹೇಳಿಕೊಟ್ಟಿದ್ದರು. ವೇಗಕ್ಕೂ ಜವಕ್ಕೂ ಏನು ವ್ಯತ್ಯಾಸ ಎಂದು ಕೇಳುತ್ತಿದ್ದ ನಮ್ಮ physics ಮೇಷ್ಟ್ರು”ಬಸ್ಸು ಎಷ್ಟು ವೇಗವಾಗಿ ಹೋಗುತ್ತಿದೆ’ ಎನ್ನುವುದು ತಪ್ಪು;”ಬಸ್ಸು ಎಷ್ಟು ಜವದಿಂದ ಹೋಗುತ್ತಿದೆ’ ಎನ್ನುವುದು ಸರಿ ಅಂತ ಹೇಳಿಕೊಟ್ಟಿದ್ದರು. velocity ಮತ್ತು speed ಗೆ ನಾವು ಅನುಕೂಲವಾಗುವ ಎರಡು ಶಬ್ದಗಳನ್ನು substitute ಮಾಡಿಕೊಂಡಿರುವ ವಿಷಯ ಹಾಗೂ ಸಂಸ್ಕೃತದಲ್ಲೂ ಅವಕ್ಕೆ ಅಷ್ಟು precise ಆದ ಅರ್ಥಗಳಿಲ್ಲ ಎಂಬ ಸತ್ಯ ಬಹುಶಃ ಅವರಿಗೆ ಗೊತ್ತೇ ಇರಲಿಲ್ಲ.

ಈ globalizationನ ಯುಗದಲ್ಲಿ ನಾವು ಈ ಬಂಧನಗಳಿಂದ ಇನ್ನೂಹೊರಬರದೇ ಇದ್ದರೆ ನಮಗೆ ಉಳಿಗಾಲವಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 11, 2007 - 10:30pm — Sunil Jayaprakash

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

Sunil Jayaprakash's picture

ಕಿಶೋರ್ ಪಟವರ್ಧನರೆ,

...ಸಂಸ್ಕೃತದಲ್ಲೂ ಅವಕ್ಕೆ ಅಷ್ಟು precise ಆದ ಅರ್ಥಗಳಿಲ್ಲ ಎಂಬ ಸತ್ಯ ಬಹುಶಃ ಅವರಿಗೆ ಗೊತ್ತೇ ಇರಲಿಲ್ಲ.

ಸರಿಯಾದ ಪಾಯಿಂಟ್ ಹಾಕಿದಿರಿ. ನನಗನ್ನಿಸುತ್ತೆ ಇದಕ್ಕೆ ಬಹುದೊಡ್ಡ ಕಾರಣ. ಇಂಗ್ಲೀಷ್ ಪದಗಳಿಗೆ ಮಾತ್ರ ಬೇಡವಾದ ಮಡಿವಂತಿಕೆ ತೋರಿಸಿ, ಎಗ್ಗಿಲ್ಲದೆ ಮುಂದಾಲೋಚನೆಯಿಲ್ಲದೆ, ಹುಚ್ಚಾಪಟ್ಟೆ ಸಂಸ್ಕೃತ ಪದಗಳನ್ನು ಪಂಡಿತರುಗಳು ಕನ್ನಡದ ಹೆಸರಿನಲ್ಲಿ ತುರುಕಿರುವುದು, ತುರುಕುತ್ತಿರುವುದು. ಈ ಮನಸ್ಥಿತಿ ಹಿಂದೆಯೂ ಇತ್ತು, ಈಗಲೂ ಇದೆ. ನೋಡಿ, ಇಂಗ್ಲೀಷಿನ cache ಕನ್ನಡದಲ್ಲಿ ಸಿದ್ಧಸ್ಮೃತಿಕೋಶ ಅಂತೆ. ಇಂತ ತಲೆಬುಡವಿಲ್ಲದ ಅನುವಾದಗಳಿಂದಾಗಿ ಕನ್ನಡಿಗರಿಗೆ ಕಂಪ್ಯೂಟರ್ ತುಂಬಾ ಕಷ್ಟವೆನಿಸಿದರೆ ಅದು ಪಂಡಿತರೆನಿಸಿಕೊಂಡವರು ಈಗ ಮಾಡುತ್ತಿರುವ ತಪ್ಪೇ ಕಾರಣವಾಗುತ್ತದೆ. ಹಿಂದೆ ಅಪ್ಲೈಡ್ ಸೈನ್ಸ್, ಗಣಿತ ಕಷ್ಟವಾಯಿತು ಈಗ ಅವುಗಳ ಜೊತೆಗೆ ಕಂಪ್ಯೂಟರ್ ಕಲಿಕೆಯೂ ಕಷ್ಟವಾಗುತ್ತದೆ. ಕೆಲವರಿಗೆ ಇದು ತಿಳಿದು ಈಗೀಗ ಕನ್ನಡದ್ದೇ ಸರಳವಾದ ಪದಗಳನ್ನು ಬಳಸುತ್ತಿದ್ದಾರೆ. ಆದರೆ ಕೆಲವರು ಇದರ ಕೆಟ್ಟ ಪರಿಣಾಮಗಳನ್ನು ತಿಳಿದಿದ್ದರೂ ಕೂಡ ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳುವುದಕ್ಕೋಸ್ಕರ ಹಾಗು ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸುವುದಕ್ಕೋಸ್ಕರ ಸಂಸ್ಕೃತದಲ್ಲಿಯೇ ಕಾನ್ಸೆಪ್ಟುಯಲೈಸೇಷನ್ ಮಾಡಿ ಅದನ್ನು ಕನ್ನಡದಲ್ಲಿ ಹೆಸರಿನಲ್ಲಿ ತುರುಕುತ್ತಲೇ ಇರುತ್ತಾರೆ. ಆದರೆ ವಿಚಿತ್ರವೆಂದರೆ ಪಂಡಿತರುಗಳು ಮಾತ್ರ ಯಾವುದೇ ಸಂಕೋಚವಿಲ್ಲದೆ ಎಗ್ಗಿಲ್ಲದೆ ಇಂಗ್ಲೀಷ್ ಬಳಸುತ್ತಾರೆ, ಆದರೆ ಒಬ್ಬ ಸಾಮಾನ್ಯ ಕನ್ನಡಿಗನ ಮೇಲೆ ಇಂಗ್ಲೀಷ್ ಬಳಸಬೇಡ ಎನ್ನುತ್ತಾ ಅನವಶ್ಯಕವಾಗಿ ಸಂಸ್ಕೃತವನ್ನು ಹೇರುತ್ತಾರೆ. ಸರಳವಾದ ಸಂಸ್ಕೃತ ಪದಗಳಿದ್ದರೆ ಓಕೆ, ಆದರೆ ಪಂಡಿತರುಗಳು ಬಳಸುವ ಪದಗಳು ಎಂಥವು ಯಪ್ಪಾ.....ಒಮ್ಮೆ ನಾಲ್ಕನೆಯ ಇಯತ್ತೆಯ ಗಣಿತ ಪುಸ್ತಕ ತಿರುವಿ ಹಾಕಿದರೆ ತಿಳಿಯುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 12, 2007 - 6:29am — hamsanandi

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

hamsanandi's picture

Quote:
.....ಒಮ್ಮೆ ನಾಲ್ಕನೆಯ ಇಯತ್ತೆಯ ಗಣಿತ ಪುಸ್ತಕ ತಿರುವಿ ಹಾಕಿದರೆ ತಿಳಿಯುತ್ತೆ.

ಹೌದೇನು? ಪರಿಸ್ಥಿತಿ ಅಷ್ಟು ವಿಪರೀತಕ್ಕೆ ಹೋಗಿದೆಯೇ? ನಾನೂ ಏಳರತನಕ ಕನ್ನಡದಲ್ಲೇ ಓದಿದವನು. ಆಗ ಅಷ್ಟು ವಿಚಿತ್ರವಾಗಿರಲಿಲ್ಲ ಅನ್ನಿಸುತ್ತೆ. ಈಗಿನ ಯಾವ ಪುಸ್ತಕಗಳನ್ನೂ ನಾನು ನೋಡಿಲ್ಲ. ಹಾಗಾಗಿ, ಅದರ ಬಗ್ಗೆ ಮಾತಾಡಲಾರೆ.

ಎರಡೂ ಕಡೆಯ ವಿಪರೀತ (extrimism) ಒಳ್ಳೇದಲ್ಲ. ಹೇಗೆ ಸಿದ್ಧಸ್ಮೃತಿಕೋಶ, ಯಾದೃಚ್ಚಿಕ, ಕುಕ್ಕುಟ ಉದ್ಯಮ, ಧೂಮ್ರಶಕಟವಾಹನ ಮೊದಲಾದವು ನನಗೆ ತೀರಾ ಅಸಂಬದ್ಧವಾಗಿ ತೋರುತ್ತೋ ಹಾಗೇ ಒರೆಗಂಟು, ಒಡರ್ಚು, ಮಾರುಲಿ, ಏಡು ಮೊದಲಾದ ಪದಗಳೂ (ಇವುಗಳ ಅರ್ಥ ತಿಳಿಯಲಿಕ್ಕೂ ಹಲವರು ಒರೆಗಂಟು = dictionary = ಪದಕೋಶವನ್ನೇ ನೋಡಬೇಕಾಗುತ್ತೆ!) ಕನ್ನಡದವೇ ಆದರೂ ಅಷ್ಟೇ ದೂರವಾಗಿ ಕಾಣುತ್ತವೆ! ಅದೇನೇ ಇರಲಿ, ಇದು ನನ್ನ ವೈಯಕ್ತಿಕ ಅಭಿಪ್ರಾಯ.

ಹೊಸ ಪಾರಿಭಾಷಿಕ ಪದಗಳನ್ನು ಹುಟ್ಟಿಸುವಾಗ ಕನ್ನಡದ ಹಳೆಯ ಪದಗಳನ್ನು ಹೆಕ್ಕಿತೆಗೆದರೆ ಅದು ಒಳಿತೇ. ಆದರೆ, ದಿನನಿತ್ಯದ ಆಡುಮಾತಿನ ಉಪಯೋಗಿಸುವ ಪದಗಳನ್ನೂ ನಾವು ಪಂಪ ರನ್ನರ ಕಾಲದ ಪದಗಳಿಂದಲೇ, ಅಥವ University of Chicago ನ ದ್ರಾವಿಡ ಭಾಷಾ "ಒರೆಗಂಟ"ನ್ನು ಹುಡುಕಿ, ಬದಲಾಯಿಸಿಕೊಳ್ಳುವಂತಹ ಕೆಲಸ ನಾನು ಮಾಡಲಾರೆ. Eye-wink ನನಗೆ ಮಾತಾಡುವಾಗ ಸಂಸ್ಕೃತದ್ದೇ ಆಗಿದ್ದರೂ, ಸೂರ್ಯನೇ ನೇಸರಿಗಿಂತ ಹತ್ತಿರ! ನನಗೆ ನೇಸರು ಏನಿದ್ದರೂ ಕವಿತೆಯಲ್ಲಿ ಚಂದ ಕಾಣುತ್ತೆ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 12, 2007 - 12:40pm — shreekant.mishrikoti

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

shreekant.mishrikoti's picture

ಹಂಸಾನಂದಿಯವರು ಹೇಳುವ ಮಾತಿಗೆ ನನ್ನ ೧೦೦% ಸಹಮತಿ ಇದೆ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 12, 2007 - 12:12pm — mahesha

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

mahesha's picture

ಸುನಿಲ,

ಹಳೆ-ಕೆಲ-ನೆಪ್ಪುಗಳು ಬಂದುವು.

ನನ್ನ ಗೆರೆ ಅದೇನು ಚನ್ನಿತ್ತೋ, ನಮ್ಮ ತಾತ(ಅಜ್ಜಿ+ಅಮ್ಮ) ಪಟ್ಟು ಹಿಡಿದು ನಮ್ಮ ಮನೆಗೆ ದೂರವಾದ ಇಂಗ್ಲೀಸ್ ಸ್ಕೂಲಿಗೆ ಕೆಜಿ ಮಟ್ಟದಿಂದ ನನ್ನ ಸೇರಿಸಿದರು. ನಮ್ಮಪ್ಪ ಆಗ 'ಕಸಾಪ'ದಲ್ಲಿ ಇದ್ರು. ಅವರಿಗೆ ನಮ್ಮಜ್ಜನ ಮೇಲೆ ಕೆಂಡಂತೆ ಸಿಟ್ಟು ಬಂದಿತ್ತಂತೆ.

ನಂಗೆ ಕನ್ನಡದಲ್ಲಿ ಕಡಮೆ ಎಣಿಕೆ ಬಂದ್ರೇ ಆಯ್ತು, ನಮ್ಮಪ್ಪ ಸ್ಯಾನೆ ಸಿಡಿಮಿಡಿ ಮಾಡಿತಿದ್ರು. ಅದಕ್ಕೆ ನಾನು ಯಾವಾಗಲು ಕನ್ನಡದಲ್ಲಿ out of out ತೆಗೆಬೇಕಂತ, ಕನ್ನಡದ textbook ಪಾಠ ಪಾಠ ಉರು ಹೊಡೀತಿದ್ದೆ. Smiling ಹಂಗಿಂದ ಹಂಗೆ text bookಇಂದ ನೇರ answer sheetಗೆ ಇಳಿಸ್ತಿದ್ದೆ. ಆಹಾ ಹಳೇ ನೆನೆಪು!!

ಆ ಮೇಲೆ ನನ್ ತಮ್ಮನ್ನ ನಮ್ಮ ತಗೊಂಡು ಹೋಗಿ ಕನ್ನಡ ಮೀಡಿಯಂ ಹಾಕಿದ್ರು. ಅವನಿಗೆ ಹೈಸ್ಕೂಲಲ್ಲಿ ನಾನು science, maths ಹೇಳಿಕೊಡಬೇಕಾಗಿ ಬಂತು. Smiling

ಅವರ ಪತ್ರಹರಿತು( ಎಲೆಹಸಿರು, Chlorophyll)[ಪತ್ರ ಹರಿದು ಹೋಯ್ತು ಅಂತ ಅಂದುಕೊಂಡ್ರು ತಪ್ಪಲ್ಲ Smiling ], ವಕ್ರೀಭವನ( ಬೆಳಕುಬಾಗು, refraction ), ಪ್ರತಿಫಲನ( ಕನ್ನಡಿತನ reflection ) ಇವೆಲ್ಲ ನನಗೆ ಹೇಳಕ್ಕೆ ಆಗದೇ ನಗೆ ಬರುತ್ತಿತ್ತು. ಕೊನೆಗೆ ಇದರಿಂದ ಬಿಡುಗಡೆಗಾಗಿ ನಾನು ತಲೆಯೋಡಿಸಿದ್ದು ಬೇರೆ ವಿಸಯ ಬಿಡು. Smiling

ನನ್ ತಮ್ಮ ದೊಡ್ಡದಾಗಿ ೧೦ನೇ ತನಕ ಕನ್ನಡಸೇವೆ Smiling ಮಾಡಿ ಬಂದು, ೧ puc science(PCMB) ಇಂಗ್ಲೀಸು ಮೀಡಿಯಂ ತಗೊಂಡ. ಅವನ ಹತ್ರ ಇದ್ದ ಪತ್ರಹರಿತು, ವಕ್ಕರಿಸಿದ್ದ ವಕ್ರೀಭವನ, ಪಕ್ಕದ ಪ್ರತಿಫಲನ ಮಂಗಮಾಯ!! ಅವನಿಗೆ ಸಲೀಸಾಗಲೀ ಅಂತ ನಾನು ಅವನ ಹೈಸ್ಕೂಲ್ science, maths ಹೊತ್ತಗೆಗಳನ್ನೆಲ್ಲ ಜಾಲಾಡಿ, ಒಂದು ಒರೆಗಂಟು ಮಾಡಿಕೊಟ್ಟಿದ್ದೆನು. ಅದರೆ ಅದೂ ಅವನಿಗೆ ಹೆಚ್ಚು ನೆರವಾಗದಿದ್ದು ನನಗೊಂದು ನೋವೇ Sad

ಈಗ 'ದೊಡ್ಡಿ'ಯಲ್ಲಿ ಡಿಪ್ಲೊಮೊ ದಂಡಯಾತ್ರೆಯಲ್ಲಿ ತೊಡಗಿದ್ದಾನೆ Smiling.
======================================
ಕನ್ನಡ ಮೀಡಿಯಮ್ಮಲ್ಲಿ ಓದೋರೆಲ್ಲ, ಮುಂದುವರಿಯಲ್ಲ ಅಂತ ಅಲ್ಲ. ಆದರೆ ಇಂಗ್ಲೀಸು ಮೀಡಿಯಮ್ಮವರು ಪಾಟಿ ಬರಲ್ಲ, ಬರಕ್ಕಾಗಲ್ಲ, ಅಂತ statistics ಹೇಳುತ್ತದೆ.

ಇಲ್ಲಿ "ಮುಂದುವರಿ" ಅಂದರೆ number people graduation in science or professional courses ಅಂತ ಇಟ್ಟುಕೊಳ್ಳೋಣ.

ನನ್ನ ಒಳನಿಸಿಕೆ "ಇಂದು ಮಕ್ಕಳು ಕನ್ನಡ ಮೀಡಿಯಂ ಅಂತ ಹೆಸರಿನ ಸಕ್ಕದ ಮೀಡಿಯಮ್ಮಲ್ಲೇ ವಿಗ್ನಾನ, ಗಣಿತ ಓದ್ತಾ ಇರೋದು, ದಿಟವಾದ ಕನ್ನಡ ಮೀಡಿಯಮ್ಮಲ್ಲಿ ಇನ್ನೂ ಸರಕಾರ ಕಲಿಸಕ್ಕೆ ತೊಡಗೇ ಇಲ್ಲ" Sad

ಸರಕಾರದ 'ಪಠ್ಯಪುಸ್ತಕ'ಗಳು ಇಂಟರ್ನೆಟ್ಟಲ್ಲೇ ಸಿಗುವುದು. ಹುಡುಕಿ ಓದಬೋದು. ನಾನು ಈಗಿನ ಹತ್ತನೇ ಕ್ಲಾಸಿನ ಕನ್ನಡ ಓದ್ತಾ ಇದ್ದೀನಿ. ಮೊದಲನೇ ಪಾಠ ನೋಡಿ ಚೆನ್ನಾಗಿದೆ. ನಯಸೇನ ಅಂಡಯ್ಯ ಎಲ್ಲ ಬತ್ತಾರೆ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 12, 2007 - 12:19pm — mahesha

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

mahesha's picture

ತಿದ್ದುಪಡಿ
ಮೀಡಿಯಮ್ಮವರು ಪಾಟಿ = ಮೀಡಿಯಮ್ಮವರ ಪಾಟಿ

number people graduation in science or professional courses = number of people graduating in science or professional courses.

ಅಂತ ಅಂದುಕೊಳ್ಳಿರಿ.. ತಪ್ಪಿಗಾಗಿ ಅಳಲು Sad
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 12, 2007 - 1:11pm — kishorpatwardhan

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

kishorpatwardhan's picture

ಸಂಸ್ಕೃತವನ್ನು ಹೇಗ ನಮ್ಮಮೇಲೆ ಮೇಷ್ಟ್ರುಗಳು ಹೇರುತ್ತಿದ್ದರು ಅನ್ನುವುದಕ್ಕೆ ಇನ್ನೊಂದು ಉದಾಹರಣೆ:

’ಮಳೆ ಬರುತ್ತದೆ’ ಅನ್ನುವುದು ತಪ್ಪು; ’ಮಳೆ ಬೀಳುತ್ತಿದೆ’ ಅಂತ ಸರಿಯಾಗಿ ಮಾತಾಡಿ - ಇದು ನಮ್ಮ ಸಂಸ್ಕೃತ ಹೇಳಿಕೊಟ್ಟ ಮೇಷ್ಟರೊಬ್ಬರ ನಿಲುವು.
’ಯಾಕೆ ತಪ್ಪು? ’ ಅಂತ ಕೇಳಿದ್ದಕ್ಕೆ ’ವರ್ಷಾ ಪತತಿ’ ಅನ್ನುವುದು ಸರಿಯೇ ಹೊರತು ’ವರ್ಷಾ ಆಗಚ್ಛತಿ’ ಅಲ್ಲ ಎಂಬ ವಾದ ಅವರದ್ದು.

ಸಣ್ಣವರಿದ್ದಾಗಿಂದ ಮಾತಾಡಿಕೊಂಡು ಬಂದ ’ಮಳೆ ಬಂತೋ ಮಹರಾಯ’ ಅನ್ನುವುದರಲ್ಲಿ ಇರುವ ಸಹಜತೆ ಇದರಲ್ಲಿ ಎಲ್ಲಿಂದ ಬರಬೇಕು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 12, 2007 - 1:35pm — mahesha

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

mahesha's picture

ಅಲಲಾ! ಕಿಶೋರ್‍

ಬಲು ಒಪ್ಪವಾದ ಮಾದರಿ.!

ಇನ್ನೋ ಹುಡುಕಿ ಬೇಕಾದನಿತ್ತು ಇವೆ.

"ಸಭೆಯನ್ನುದ್ದೇಶಿಸಿ ಎರಡು ಮಾತಾಡಬೇಕೆಂದು...." "ಸಭಾಂ (ಪ್ರತಿ) ವದಂತು" Smiling
ಆದರೆ
ನಾವು ಮಾಮೂಲಾಗಿ ಹೇಳುವುದು "ಅವರಿಗೆ ಹೇಳು"(೪ನೇ ವಿಬಕ್ತಿ) ಆದುದರಿಂದ "ಸಭೆಗೆ ಎರಡು ಮಾತಾಡಬೇಕು" ಇದು ಕನ್ನಡದಲ್ಲಿ ಸರಿ ಅಲ್ವಾ!!

ಗೃಹಪ್ರವೇಶ = ಇಲ್ಲಿ 'ಮನೆಗೆ ಹೊಗುವುದೋ', 'ಮನೆಯೇ ಹೊಗುವುದೋ'? Smiling (ಹೊಗು =to enter )
ಕರತಾಡನ = ಇಲ್ಲಿ 'ಕೈಗೆ ಹೊಡೆಯುವುದೋ', 'ಕೈಯಿಂದ ಹೊಡೆಯುವುದೋ', 'ಕೈಯಲ್ಲಿ ಹೊಡೆಯುವುದೋ' ?

ಈ ಒರೆಗಳನ್ನು ಕೇಳಿ, ಕೇಳಿ ಅಲುವಾಟವಿರುವವರಿಗೆ ಓಕೆ, ಹೊಸದಾಗಿ ಕೇಳಿದರೆ ಮೇಲಿನ ಗೊಂದಲ ಎದ್ದೇ ಏಳುವುದು.!!!

ಇಲ್ಲೊಬ್ಬರು "ವಂದಿಸುತ್ತೇವೆ" ತಪ್ಪು "ವಂದಿಸಿಕೊಳ್ಳುತ್ತೇವೆ" ಸರಿ ಎಂದು ಗೊಡವೆ ತೆಗೆದಿದ್ರು.

ಅವರ ಮಾತು ಹೀಗೆ.
"ವಂದತೇ" ಇದು ಅಸ್ಮೈ( ಪರಸ್ಮೈಗೆ ಇದುರು ). ಅದಕ್ಕೆ ಅದು "ತಾನೇ ಮಾಡಿಕೊಳ್ಳುವ ಕ್ರಿಯೆ" ಅದಕ್ಕೆ "ವಂದಿಸಿಕೊಳ್ಳು" ಸರಿ ಅಂತ. Smiling

======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 13, 2007 - 2:43pm — kishorpatwardhan

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

kishorpatwardhan's picture

’ಸಭೆಯನ್ನುದ್ದೇಶಿಸಿ ಮಾತಾಡುವುದು ’ ಕನ್ನಡದ ವ್ಯಾಕರಣಕ್ಕೆ ವಿರುದ್ಧವಲ್ಲ...

ಮಹೇಶರೇ,

ನೀವು ’ಸಭೆಯನ್ನುದ್ದೇಶಿಸಿ ಮಾತಾಡುವ’ ಬಗ್ಗೆ ನೀವು ಎತ್ತಿರುವ ತಕರಾರು ನನಗೆ ಒಪ್ಪಿಗೆಯಿಲ್ಲ.
ಸಭೆಯನ್ನು (ಎರಡನೇ ವಿಭಕ್ತಿ) ’ಕುರಿತು’ ಮಾತನಾಡುವುದು ಎಂಬ ಪ್ರಯೋಗ ಕನ್ನಡದ್ದೇ..ಯಾಕೆಂದರೆ ’ಕುರಿತು’ ಅಚ್ಚಗನ್ನಡದ ಒರೆಯೇ! ’ಕುರಿತು’ ಪದ ಎರಡನೇ ವಿಭಕ್ತಿಯ ಜೊತೆಯಲ್ಲೇ ಬಳಕೆಯಾಗುವುದು.

ಹಾಗಾಗಿ ಇಲ್ಲಿ ಸಂಸ್ಕೃತ ವ್ಯಾಕರಣದ ಹೇರಿಕೆ ನನಗೆ ಕಾಣಲಿಲ್ಲ.

ಹಾಂ; ಕನ್ನಡದಲ್ಲೂ ಇಂಗ್ಲಿಷ್ನಲ್ಲಿರುವ ಹಾಗೆ spoken ಹಾಗೂ formal ಎಂಬ ವಿಧಗಳಿವೆ ತಾನೆ? ಹಾಗೆ spoken ಕನ್ನಡದಲ್ಲಿ ’ಕುರಿತು” ಎಂಬ ಶಬ್ದದ ಉಪಯೋಗ ಅಷ್ಟಾಗಿ ಕಾಣುವುದಿಲ್ಲ. ಆದರೆ ಸಭೆ ಸಾಮಾನ್ಯವಾಗಿ ಒಂದು formal event ಆಗಿರುವುದರಿಂದ ಅದನ್ನು ಕುರಿತು ಎರಡು ಮಾತಾಡಿದರೆ ತಪ್ಪೇನಿಲ್ಲ. ಸಭೆಗೆ ಮಾತಾಡುವುದೇ ಅಷ್ಟೊಂದು ಸರಿಯಾಗಲಿಕ್ಕಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 13, 2007 - 4:34pm — mahesha

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

mahesha's picture

ನಾನು ಹೇಳುದ್ದು...

ನಿಮ್ಮ ಹಿಂದಿನ ಕಮೆಂಟಲ್ಲಿ ಆಡುಮಾತಲ್ಲಿ "ಮಳೆ ಬಂತು" ಮತ್ತು "ಮಳೆ ಬಿತ್ತು" ಇದು ಹೇಗೆ ಅಸಹಜ ಎಂದು ಹೇಳಿದಿರಿ.

ನಾನು ಅದೇ ಗುಂಗಿನಲ್ಲಿ..... ಇದನ್ನು ಮುಂದಿಟ್ಟೆನು.

ನಾವು ಎಂದೂ "ಅವರನ್ನು ಕುರಿತು ಹೇಳು", "ನನ್ನನ್ನು ಉದ್ದೇಶಿಸಿ ಮಾತಾಡು" ಅಂತ ಆಡು ಮಾತಲ್ಲಿ ಹೇಳಲ್ಲ ಅಲ್ವಾ!!
ನಾನು ಇದು ವರೆಗೂ ಯಾರಿಗೂ "ನನ್ನನ್ನು ಕುರಿತು ಹೇಳು", "ಅವನನ್ನು ಉದ್ದೇಶಿಸಿ ಮಾತಾಡು" ಅಂತ ಆಡುಮಾತಲ್ಲ ಹೇಳೇ ಇಲ್ಲ.

ನಾನು ಹೇಳಿರುವ ಬಳಕೆಗಳು "ನನಗೆ ಹೇಳು", "ಅವನೊಡ/ಅವನ ಜೊತೆ ಮಾತಾಡು". ಮಂಗಳೂರವರು "ಅವನಲ್ಲಿ ಹೇಳು" ಇಸ್ಟು.

.
.
.

ಇನ್ನು ಕುರಿತು ಬಗ್ಗೆ....

ಕುಱಿ = to target. ಕುಱಿತು = after targeting. ಇದು ’ಪ್ರತಿ’ ಯಂತೆ ಅವ್ಯಯವಲ್ಲ , ಒಂದು ಕ್ರಿಯಾರೂಪ
ಕನ್ನಡದಲ್ಲಿ ’ಇವರನ್ನು ಕುರಿಯಿರಿ’ ಅಂದರೆ "ಇವರನ್ನು ಉದ್ದೇಶಿಸಿ" ಎಂದು. ಕರಾಮಾ ದಲ್ಲಿ ಈ ದಾತುವಿನ ಬಳಕೆಗಳಿವೆ.

ನಾನು ಹೇಳಬಯಸಿದ ತಿರುಳು
ಕನ್ನಡದಲ್ಲಿ "ಅವನನ್ನು ಕುರಿತು ಹೇಳು", "ಅದನ್ನು ಕುರಿತು ಹೊಡೆ" ಇವು ಸಹಜವಲ್ಲ. ಕನ್ನಡದಲ್ಲಿ ಏನಿದ್ದರು "ಅವನಿಗೆ ಹೇಳು", "ಅವನಿಗೆ ಹೊಡೆ" ಇವೇ ಸಹಜ, ಮಂದಿಯ ಬಾಯಿಲ್ಲಿರುವುದು.

Formal, Informal ಇವು ಗುಂಪಿನಂದ ಗುಂಪಿ, ಮಂದಿಯಿಂದ ಮಂದಿಗೆ ಬೇರೆ ಬೇರೆ.

ನಾವು ಕಾವೇರಿಸೀಮೆಯವರು "ಅಡ್ಡಬಿದ್ದೆ, ಕೈಜೊಡಿಸ್ದೆ" ಈ ಬಗೆಯಲ್ಲಿ ’ನಮಸ್ಕಾರ’ ಹೇಳೋದು ಹೆಚ್ಚು. ಆದರೆ ಇದನ್ನೇ ನಾನು ಬಂದು ಬೆಂಗಳೂರಲ್ಲಿ ಹೇಳಿದರೆ ಅದು ಅವರಿಗೆ formal ಅನಿಸಲ್ಲ.
ಇಂತಾ ಮಾದರಿಗಳು ಸಾವಿರಾರಿವೆ.

ಜೊತೆ ಯಾವುದೋ ಒಂದು ಪಂಗಡ formal ಅಂದುದಕ್ಕೆ ಅದು ಎಲ್ಲರಿಗೂ formal ಆಗಬೇಕಾಗಿಲ್ಲ.

"ಅವರನ್ನು ಕುರಿತು ಮಾತಾಡು" ಇದು ಸಹಜವಾದ ಕನ್ನಡವಂತೂ ನನ್ನ ನೋಟದಲ್ಲಿ ಅಲ್ಲ, ಅದು ವ್ಯಾಕರಣದಂತೆ ಇದ್ದರೂ ಕೂಡ.!!
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 13, 2007 - 10:22pm — kishorpatwardhan

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

kishorpatwardhan's picture

ಹೌದು.. ನಿಮ್ಮ ಮಾತು ಅರ್ಥ ಆಯಿತು.

ನಾನು ಹೇಳಿದ್ದು ಇಷ್ಟೇ: ಮಳೆ ಬೀಳುವುದು ಮತ್ತು ಮಳೆ ಬರುವುದು - ಎರಡೂ ವ್ಯಾಕರಣಬದ್ಧ ಪ್ರಯೋಗಗಳೇ. ಹಾಗೇ ಸಭೆಯನ್ನು ಕುರಿತು ಮಾತಾಡುವುದೂ ವ್ಯಾಕರಣಬದ್ಧವೇ.

ಆದರ ” ಸಭೆಗೆ ಮಾತಾಡುವುದು ’ ಎಂಬ ಪ್ರಯೋಗದ ಬದಲಿಗೆ ’ಸಭಿಕರ ಜೊತೆಗೆ ಮಾತಾಡುವುದು” ಅಥವಾ ’ಜನಗಳ / ಮಂದಿಯ ಜೊತೆಗೆ ಮಾತಾಡುವುದು’ ಹೆಚ್ಚು ಸಹಜ ಅನ್ನಿಸುತ್ತದೆ. ಸಾಮಾನ್ಯವಾಗಿ ಚತುರ್ಥೀ ವಿಭಕ್ತಿಯನ್ನು ನಾವು ಮಾತಲ್ಲಿ ಬಳಸುವುದು ’ಅವನಿಗೆ ಹೇಳಿದೆ’ ಅಂತಲೋ ಅಥವಾ ’ಅವರಿಗೆ ಹೇಳಿದೆ” ಅಂತಲೋ ಹೇಳುವಾಗ. ಆದರೆ ’ಮಾತಾಡು’ ಎಂಬುದನ್ನು ಬಳಸುವಾಗ ಬಹುಶಃ ’ಅವನ ಜೊತೆ’ ಅಥವಾ ’ಅವರ ಜೊತೆ ಮಾತಾಡಿದೆ’ ಅಂತಲೇ ಅನ್ನುವುದು.

ಇದಕ್ಕೆ ನೀವೇನಂತೀರಿ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 14, 2007 - 10:59am — mahesha

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

mahesha's picture

ಓ ಹಾಗಾ...

ಸರಿಸರಿ... ಈಗ ತಿಳಿಯಾಯ್ತು.

"ಮಾತಾಡು" => "ಸಬೆಯ ಜೊತೆ ಮಾತಾಡು" ಸರಿ
"ಹೇಳು" => "ಸಬೆಗೆ ಹೇಳು" ಸರಿ..

ನನ್ನಿ ನಿಮಗೆ...

ಒಟ್ಟಿನಲ್ಲಿ "ಅವರನ್ನು ಕುರಿತು ಮಾತಾಡು" ಇದು ಸಹಜವಲ್ಲ ಅಂತ ಇಬ್ಬರೂ ಒಪ್ಪಿಬಿಟ್ಟಿದ್ದೇವೆ, ಅಲ್ವಾ! Smiling
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 27, 2007 - 12:27am — ಸತೀಶ

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

ಸತೀಶ's picture

ನಿಮ್ಮ ಮಾತನ್ನು ನಾನೂ ಒಪ್ಪುತ್ತೇನೆ. ಕನ್ನಡದಲ್ಲಿ ಬರುವ ತಾಂತ್ರಿಕ ಪದಗಳು (technical terms) ಅರ್ಥಮಾಡಿಕೊಳ್ಳಲು ಮತ್ತು ನೆನಪಿಟ್ಟುಕೊಳ್ಳಲು ಬಲು ಸಾಹಸ ಪಡಬೇಕು.....ಆದರೆ ಇದಕ್ಕೆ ಇನ್ನೂ ಹಲವಾರು ಕಾರಣಗಳಿವೆ. ಕನ್ನಡ ಬಾಷೆಯ ಬಗ್ಗೆ ಇರುವ ತಾತ್ಸಾರ ಒಂದು ಪ್ರಮುಖ ಕಾರಣ. ಜರ್ಮನ್, ಪ್ರೆಂಚ್, ಸ್ಪ್ಯಾನಿಷ್ ಭಾಷೆಗಳನ್ನು ನೋಡಿದಾಗ...ನಾವಿನ್ನೂ ಹಿಂದಿದ್ದೇವೆಯೋ ಎನಿಸುತ್ತದೆ. ಕನ್ನಡದ ಬಗ್ಗೆ ನಮ್ಮ ಈ ಅಭಿಪ್ರಾಯಗಳಿಗೆ ಆಂಗ್ಲ ಭಾಷೆಯ influence ಕೂಡಾ ಕಾರಣ. ಹಲವಾರು ಬಾಷೆಗಳ ಭಾರತದಲ್ಲಿ ಇದೆ ಒಂದು ದೊಡ್ಡ ತೊಂದರೆ. ಆದರೆ ನಾವು ಜಪಾನ್, ಚೀನಾ, ಪ್ರಾನ್ಸ್ ....ದೇಶಗಳ ಸಾಧನೆ ನೋಡಿದರೆ...ನಮ್ಮ ತನವನ್ನು (ಭಾಷಾಭಿಮಾನ) ಉಳಿಸೆಕೊಳ್ಳಬೇಕು/ ಬೆಳೆಸಿಕೊಳ್ಳಬೇಕು ಅನ್ಸುತ್ತೆ....ಏನಂತೀರ..? ಆದರೆ ಇದರ ಸಾಫಲ್ಯಕ್ಕೆ ಕಲೆ/ಸಾಹಿತ್ಯದ ಜೊತೆಗೆ ಕನ್ನಡದಲ್ಲಿ ವಿಜ್ಞಾನವೂ ಹೆಚ್ಚು ಹೆಚ್ಚು ಜನಪ್ರಿಯವಾಗಬೇಕು...ಆಗ ಈ ತೊಂದರೆ ನಿವಾರಣೆ ಆಗಬಹುದು ಅನ್ನೂ ಅಭಿಪ್ರಾಯ ನಂದು....
ಉದಾ: http://www.isac.gov.in/kannada/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 13, 2007 - 5:42pm — ASHOKKUMAR

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

ASHOKKUMAR's picture

Quote:
ನಾನೂ ಈ ಬಗ್ಗೆ ತುಂಬ ಯೋಚಿಸಿದ್ದಿದೆ. ನಾನು ಶಾಲೆಯಲ್ಲಿದ್ದಾಗ ಕನ್ನಡ ಮೀಡಿಯಮ್ ಓದಿದ್ದು. ಹೈಸ್ಕೂಲ್ ಕೂಡ ಕನ್ನಡದಲ್ಲೇ ಓದಿದೆ. ಮತ್ತೆ ಪಿ.ಯು.ಸಿ. ಗೆ ಬಂದಾಗ ಇಂಗ್ಲಿಷ್. ಅಲ್ಲಿ ವಿಜ್ಞಾನದ ಎಲ್ಲ ವಿಷಯಗಳಲ್ಲೂ ಕಡಿಮೆ ಅಂಕ ಬರಲು ನಾನು ಕನ್ನಡ ಮೀಡಿಯಮ್ ನಲ್ಲಿ ಓದಿದ್ದೇ ಕಾರಣ ಅಂತ ತುಂಬ ದಿನ ಅಂದುಕೊಂಡಿದ್ದೆ. ಆದರೆ ಈಗ ಕನ್ನಡ ಮಾಧ್ಯಮದಲ್ಲಿ ಇದ್ದ inefficient ಪಠ್ಯಪುಸ್ತಕಗಳೇ ನನ್ನ ಕೆಟ್ಟ performance ಗೆ ಕಾರಣ ಎಂದು ಗೊತ್ತಾಗಿದೆ.

ಶಾಲೆಯಲ್ಲಿ ನಿಮ್ಮ ಅಂಕಗಳ ಬಗ್ಗೆ ಬರೆದಿಲ್ಲ. ಬಹುಶ: ನೀವು ಚೆನ್ನಾಗಿಯೇ ಮಾಡುತ್ತಿರಬಹುದು. ಕಾಲೇಜಿನಲ್ಲಿ ನೀವು ಅಷ್ಟು ಚೆನ್ನಾಗಿ ಅಂಕ ಗಳಿಸದಿದ್ದರೆ,ಅದಕ್ಕೆ ಬೇರೆ ಕಾರಣಗಳಿರಬಹುದು. ಆದರೆ ಅದಕ್ಕೆ ಶಾಲೆಯ ಕೆಟ್ಟ ಪುಸ್ತಕಗಳು ಕಾರಣ ಎನ್ನುವುದು ನಿಮಗೆ ಯಾಕೆ/ಹೇಗೆ ಮನವರಿಕೆಯಾಯಿತು? ವಿವರಿಸಬಹುದೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 13, 2007 - 10:10pm — kishorpatwardhan

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

kishorpatwardhan's picture

ಹೌದು; ಹೈಸ್ಕೂಲಲ್ಲಿ ಒಳ್ಳೆಯ ಅಂಕಗಳೇ ಬಂದಿದ್ದವು. ಸುಮಾರು 80 ಶೇಕಡಾ. ಆದರೆ ಮೊದಲ ವರ್ಷದ ಪಿ .ಯು .ಸಿ . ಯಲ್ಲಿ ಇಂಗ್ಲಿಷ್ ನಲ್ಲಿ ಫಿಸಿಕ್ಸ್, ಕೆಮಿಸ್ಟ್ರಿ ಇತ್ಯಾದಿ ಓದುವಾಗ ನನಗೆ ಹಿಂದೆ ಓದಿದ್ದ ಯಾವುದೇ ವಿಷಯಗಳನ್ನೂ ಹೊಸ ವಿಷಯಗಳ ಜೊತೆಗೆ relate ಮಾಡಲಾಗಲಿಲ್ಲ. ಹಾಗಾಗಿ ಒಂದು ಅರ್ಥದಲ್ಲಿ ಇನ್ನೊಮ್ಮೆ ಅದೇ ಹಳೆಯ ವಸ್ತುವನ್ನು ಇಂಗ್ಲಿಷ್ ನಲ್ಲಿ ಓದಬೇಕಾಗಿ ಬಂತು. ಮತ್ತೆ ಹೊಸ ವಿಷಯಗಳನ್ನು ಓದುವುದೆಲ್ಲಿ? ಬಹುಶಃ ಆಗ ನನ್ನ ಜೊತೆಗಿದ್ದ ಅನೇಕರ ಗೋಳು ಕೂಡ ಇದೇ ಆಗಿತ್ತು.

ಶಾಲೆ / ಹೈಸ್ಕೂಲಿನಲ್ಲಿ ಕನ್ನಡ ಪಠ್ಯಪುಸ್ತಕಗಳಲ್ಲಿ ಪಾರಿಭಾಷಿಕ (?) (technical) ಶಬ್ದಗಳ ಬಳಕೆ, definitions ಎಲ್ಲ ತುಂಬ ಗೊಂದಲಮಯವಾಗಿದ್ದವು. ಉದಾಹರಣೆಗೆ ’ಬಲ”ಅಂದರೆ force; ’ಶಕ್ತಿ”ಅಂದರೆ energy ಅಂತ ಬರೆದಿರುತ್ತಿತ್ತು. ಅವೆರಡೂ ಅಚೀಚೆ ಯಾಕಾಗಬಾರದು ಎನ್ನುವುದಕ್ಕೆ ಉತ್ತರ ಇರಲಿಲ್ಲ. ಸಂಸ್ಕೃತದಲ್ಲಿ ’ಬಲ’ ಮತ್ತು”ಶಕ್ತಿ ’ಹೆಚ್ಚು ಕಡಿಮೆ ಒಂದರ ಬದಲಿಗೆ ಇನ್ನೊಂದು substitute ಮಾಡಬಹುದಾದ ಶಬ್ದಗಳು. ಹಾಗಾಗಿ ನಮಗೆ force ಮತ್ತು energy - ಎರಡೂ ಸರಿಯಾಗಿ ಅರ್ಥ ಆಗಲಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 13, 2007 - 10:26pm — ASHOKKUMAR

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

ASHOKKUMAR's picture

ಅಂದರೆ ನಿಮ್ಮ ಸಮಸ್ಯೆ ಮಾಧ್ಯಮ ಬದಲಾದುದಲ್ಲವೇ? ಪಠ್ಯಪುಸ್ತಕಗಳು ಕಳಪೆಯಾಗಿದ್ದಕ್ಕೆ ಹೀಗಾಗಿದ್ದರೆ, ಅದರ ಪ್ರಭಾವ ಹೈಸ್ಕೂಲಲ್ಲೇ ಆಗುತ್ತಿತ್ತು. ನೀವು ಹೇಳುವ energy,force ಸರಿಯಾದ ಅರ್ಥ english ಮಾಧ್ಯಮದವರಿಗೂ ಆಗುವುದು ನಿಧಾನವಾಗಿಯೇ. (ಹಾಗೆಯೇ speed and velocity ಕೂಡಾ). ಕೆಲವೊಮ್ಮೆ ನಾವು ಇತರ ವಿಷಯಗಳ ಬಗ್ಗೆ ಆಸಕ್ತಿ ವಹಿಸುವುದು ಹೆಚ್ಚಾಗಿ (ಉದಾ: ಚಿತ್ರಕಲೆ) ಹೀಗಾಗುವುದು ಇದೆ. ಮಾಧ್ಯಮ, ಪುಸ್ತಕಗಳ ಗುಣಮಟ್ಟ, ಅಧ್ಯಾಪಕರು (ಸರಿಯಾಗಿ) ಕಲಿಸದೆ ಇರುವುದು ನೆಪವೂ ಆಗುವುದಿದೆ.
ಅಂದ ಹಾಗೆ ನೀಲ್ ಹಾರ್ವೆಯ ಬಗ್ಗೆ ನೀವು ಬರೆದ ಕಿರು ಲೇಖನದಲ್ಲಿ ಯಾವ ರೀತಿ, ಒಳ್ಳೆಯ ವಿಜ್ಞಾನ ಬರಹ ಬರವಣಿಗೆಯ ಅಂಶಗಳನ್ನು ಅಳವಡಿಸಿದೀರಿ? (ಆ ಬರಹ ನನಗೆ ಹುಡುಕಿದರೂ ಸಿಗಲೊಲ್ಲದು).

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 14, 2007 - 6:31pm — kishorpatwardhan

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

kishorpatwardhan's picture

ಹಾಂ, ಆ ಬರಹ ವಿಲಿಯಂ ಹಾರ್ವೇ ಬಗ್ಗೆ ಅಲ್ಲ; ಭೇಲ ನ ಬಗ್ಗೆ.
ಬರೆಯಲು ಮೊದಲುಮಾಡಿದೊಡನೆ ಈ ಗೊಂದಲಗಳು ಆರಂಭವಾದ್ದರಿಂದಲೇ ಅದಿನ್ನೂ ಮುಂದುವರೆದಿಲ್ಲ!!
ನಾನೂ ವಿಜ್ಞಾನವನ್ನು ಕನ್ನಡದಲ್ಲಿ ಬರೆಯುವ ಮಟ್ಟಿಗೆ ತೀರ ಹೊಸಬ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 14, 2007 - 7:14pm — mahesha

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

mahesha's picture

ಕಿಶೋರ್‍...

ನೀವು ವಿಗ್ನಾನದ ಕುರಿತು ಬರೆಯಿರಿ. ನಮಗೆ, ಕನ್ನಡಕ್ಕೆ ಅಂತವು ಬೇಕು.

ನಿಮ್ಮ ಹುರುಪು ತಣ್ಣಾಗಾಲು ಈ ಎಳೆ ಓಸುಗರ(ಕಾರಣ)ವೆಂದು ತಿಳಿಯಬೇಡಿರಿ. ಅದಕ್ಕೆ ನಾನು ಶಂಕರಭಟ್ಟರ "ಕನ್ನಡ ಬರಹವನ್ನು ಸರಿಪಡಿಸೋಣ"ದಲ್ಲಿ ವಿಗ್ನಾನ ಬರಹಗಳ ಬಗ್ಗೆ ಓದಿಕೊಳ್ಳಬೇಕು ಎಂದು ಹೇಳಿದ್ದು.

ನಾವು ಬರೆಯುವುದು ಯಾತಕ್ಕೆ? ಇನ್ನೊಬ್ಬರು, ಅದರಲ್ಲೂ ಹೆಚ್ಚಿನವರು ಅದನ್ನು ಓದಿ ತಿಳಿಯಲೆಂದಲ್ವಾ!! ಬರೆದುದು ಬರಿ ಪಂಡಿತರಿಗಾಗಿ ಅಂದರೆ, ಏನು ಮಾಡಕ್ಕೆ ಆಗಲ್ಲ.

ಶಂಕರಭಟ್ಟರ ಹೊತ್ತಗೆಯಲ್ಲಿ ಒಂದು ಸನ್ನಿವೇಶ ಇದೆ. ಒಬ್ಬರು ಸುಧಾಕ್ಕೆ ಒಂದು ವಿಗ್ನಾನ ಬರಹ ಬರೆದುಕೊಟ್ಟರಂತೆ. ಸುಧಾದವರು "ಸಾರ್‍ ಇದು ಬಹಳ ಸಂಸ್ಕೃತಮಯವಾಗಿ, ಓದುಗರಿಗೆ ಅರಿಯಲು ಕಸ್ಟವಾಗುತ್ತೆ. ತುಸು ಸರಳವಾಗಿ ಬರೆಯಿರಿ" ಎಂದು ಕೋರಿದರಂತೆ.
ಅದಕ್ಕೆ ಆವಯ್ಯ, "ಕಲಗಚ್ಚು ಅತಿ ಸರಳ, ಅದ್ಯಾವುದೋ ತಿಂಡಿ ಬಲು ಕಸ್ಟ, ಮಾಡಕ್ಕೆ, ನಿಮಗೆ ಕಲಗಚ್ಚು ಬೇಕು ಅಂದರೆ ಅದನ್ನೇ ಕುಡಿಯಿರಿ, ನಾನು ಕಲಗಚ್ಚು ಬರೆಯಲ್ಲ" ಅಂದು ಸೆಟೆದರಂತೆ.

ನೋಡಿ, ಅವರಿಗೆ ವಿಗ್ನಾನವನ್ನು ಕನ್ನಡದಲ್ಲಿ ಮಂದಿಗೆ ತಿಳಿಯುವುದಕ್ಕಿಂತ ತಮ್ಮ ಬರಹದ "ಪ್ರೌಢಿಮೆ, ದರ್ಜೆ, ಮಟ್ಟ, ಶ್ರೇಷ್ಠತೆ" ಹೆಚ್ಚಾಗಿ ಹೋಯಿತು. ಹೀಗೆ ಬರೆದವರು ಬೇಕಾಸ್ಟ ಮಂದಿ ಇದ್ದಾರೆ ಅಲ್ವಾ!!

ಆದೇ ಶಿವರಾಮ ಕಾರಂತರು ಮಕ್ಕಳಿಗಾಗಿ, ಬಲು ಸರಳಗನ್ನಡದಲ್ಲಿ ವಿಗ್ನಾನ ಹೊತ್ತಗೆಗಳನ್ನು ಬರೆದಿಹರಂತೆ.!!

ನೀವು ಬರೆಯಿರಿ, ಆದರೆ yet another ಪಂಡಿತರ ವಿಗ್ನಾನದ ಹೊತ್ತಗೆ ಬರೆದರೆ, ಮಾಮೂಲಿ ಮಂದಿಗೆ ಏನು ಯೂಜ್ಸು, ಅಲ್ವಾ!!
==========================================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2007 - 8:16pm — kishorpatwardhan

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

kishorpatwardhan's picture

ಅಶೋಕ ಮತ್ತು ಮಹೇಶರೇ,
ನಾನು ಅಂದು ಶುರು ಮಾಡಿದ ಬರಹ ಇಂದು ಪೂರ್ಣಗೊಡಿದೆ:
ಅದು ಇಲ್ಲಿದೆ:
http://www.sampada.net/blog/kishorpatwardhan/08/05/2007/3929

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 14, 2007 - 6:45pm — kishorpatwardhan

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

kishorpatwardhan's picture

ನಾನು ವಿಜ್ಞಾನವನ್ನು ಕನ್ನಡದಲ್ಲಿ ಚೆನ್ನಾಗಿ ಬರೆಯಬಲ್ಲೆ ಅಂತ ಎಲ್ಲೂ ಹೇಳಿಕೊಂಡ ನೆನಪು ನನಗಿಲ್ಲ.
ಬಹುಶಃ ನಾನು ಚೆನ್ನಗಿ ಬರೆಯಲಾರೆ ಕೂಡ. ಅದಕ್ಕೇ ನಾನು ಬರೆದಿರುವ ಆಯುರ್ - ವಿಜ್ಞಾನದ ಬಗೆಗಿನ ಪುಸ್ತಕ ಇಂಗ್ಲಿಷ್ ನಲ್ಲಿರುವುದು!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 14, 2007 - 11:06am — mahesha

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

mahesha's picture

ಕಿಶೋರ್‍

ನಿಮ್ಮಂತ ಹಲವು ಕನ್ನಡ ಮೀಡಿಯಮ್ಮಿಗರು Smiling ಹೇಳಿಕೊಂಡಿದ್ದಾರೆ.

ಅದಕ್ಕೆ "moral of the story" ಏನಂದರೆ
೧) ಕನ್ನಡಮೀಡಿಯಮ್ಮಲ್ಲಿ ಇಂಗ್ಲೀಸ್ ಒರೆಗಳನ್ನು ಸೈನ್ಸು, ಮ್ಯಾತ್ಸು ಗಳಿಗೆ ಬಳಸಲು ಬಿಡಬೇಕು. ಇಲ್ಲ ಪೀಯೂಸಿ, ಡಿಗ್ರೀ ಮುಂದಿನದ್ದನ್ನು ಕನ್ನಡದಲ್ಲೇ ತರಬೇಕು
೨) ಕನ್ನಡಮೀಡಿಯಮ್ಮು ಎಂದು ಸಕ್ಕದಿಸಿದ ಕನ್ನಡ, ಗೋಜಲು ಕನ್ನಡದಲ್ಲಿ ಕಲಿಸುವುದಕ್ಕಿಂತ, ಸರಳವಾದ, ಆಡುಗನ್ನಡಕ್ಕೆ ಹತ್ತಿರವಾದ ಕನ್ನಡದಲ್ಲಿ ಕಲಿಸಬೇಕು
೩) ಇದ್ಯಾವುದು ಆಗದಿದ್ದರೆ, ನಮ್ಮ ಮಕ್ಕಳನ್ನು ಇಂಗ್ಲೀಸ್ ಮೀಡಿಯಮ್ಮಲ್ಲಿ ಓದಿಸಿಕೊಳ್ಳಬೇಕು Smiling. ಅವರು ಮುಂದೆ ಆರಾಮಾಗಿ ಪೀಯೂಸಿ, ಡಿಗರಿ ಮಾಡುವ ಸಲುವಾಗಿ!

ನಮ್ಮ ಮನೆ ನೆರೆಹೊರೆಯಲ್ಲಂತೂ ಕನ್ನಡ ಮೀಡಿಯಮ್ಮಲ್ಲಿ ಓದೋರು ಬೂತಾಗಾಜಿನಿಂದ ಹುಡುಕಿದರೂ ಕಾಣರು, ಎಲ್ಲರೂ ಇಂಗ್ಲೀಸ್!!! Smiling
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 13, 2007 - 8:56pm — mahesha

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

mahesha's picture

ತಡಕ್ಕೆ ಹೇಳಲಾಗದ ಆಯಾ ಓಸುಗರಗಳ ಇದ್ದುವು ಸಾರ್. Smiling

ನನ್ನ ಮನವಿಯಂತ ಸಲಹೆಯನ್ನು ಪಡೆದುದಕ್ಕೆ, ನನ್ನಿ

======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 11, 2007 - 9:55pm — hpn

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

hpn's picture

ನಿನ್ನ ಲೇಖನ ಓದೋದೂ ಕಷ್ಟವಾಗಿ ಹೋಗಿದೆ ನನಗೆ. burrow's dravidian ‌etimology ಹಿಡಿಯದಿದ್ದರೆ ನೀ ಬರೆದದ್ದು ಅರ್ಥವಾಗೋದೇ ಇಲ್ಲ. ಅತ್ತ ಆ extremityಯಾದರೆ ಇತ್ತ ಈ extremity. Sticking out tongue

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 11, 2007 - 11:21pm — Sunil Jayaprakash

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

Sunil Jayaprakash's picture

ಹರಿ, ನಾನು ಮಹೇಶನ ಪರವಾಗಿ ಮಾತನಾಡುತ್ತಿದ್ದೇನೆ ಎಂದು ತಿಳಿಯಬೇಡ. ಆದರೆ ಎರಡು ಮಾತು.

೧. ಮಹೇಶ ಬರೆದ ಯಾವ ಲೇಖನ ನಿನಗೆ ಓದಲು ಕಷ್ಟವಾಯಿತು. ಮಹೇಶ ಬಳಸುವುದು ಈಗಲೂ ಕೂಡ ಬಳಕೆಯಲ್ಲಿರುವ, ಆದರೆ ಬರೆಯಲು ನಾವು ಮುಜುಗರ ಪಟ್ಟುಕೊಳ್ಳುವ ಪದಗಳನ್ನು. ಒಂದು ವೇಳೆ ಮಹೇಶ ಬರೆಯುವ ಕನ್ನಡವನ್ನು ಓದಲು ನಿನಗೆ ನಿಜಕ್ಕೂ ಕಷ್ಟವೇ ಆಗಿದ್ದರೆ ಅದು ನೀನೇ ಹೇಳಿದಂತೆ ಅದು ನಿನ್ನ ವೈಯಕ್ತಿಕ ಪ್ರಾಬ್ಲಮ್ಮು. ಅದು ಎಲ್ಲರಿಗೂ ಅನ್ವಯಿಸಬೇಕಿಲ್ಲ. ನನಗಂತೂ ಮಹೇಶನ ಬರಹಗಳಲ್ಲಾಗಲೀ ಅಥವಾ ಹಾಗೆ ನೋಡಿದರೆ ಅಶೋಕ್‌ಕುಮಾರ್ ಅವರ ಲೇಖನದಲ್ಲೇ ಆಗಲಿ ಯಾವ ಸಮಸ್ಯೆಯೂ ಕಾಡಿಲ್ಲ. ಆದರೆ ನಮ್ಮೆಲ್ಲರ ತುಡಿತವಿರುವುದು ನಮ್ಮದೇ ಸರಳವಾದ ಕನ್ನಡವನ್ನು ಹೆಚ್ಚು ಹೆಚ್ಚು ಬಳಸುವುದರಲ್ಲಿ. ಈ ವಿಚಾರದಲ್ಲಿ ಅಶೋಕ್ ಅವರಿಗೂ ಮಹೇಶನಿಗೂ ಒಮ್ಮತ ಮೂಡಿರುವುದನ್ನು ಇದೇ ಎಳೆಯಲ್ಲಿಯೇ ನೀನು ಗಮನಿಸು. ಸುಮ್ಮನೆ ಯಾವುದೋ ಬರಹದ ಬಗ್ಗೆ "ತೇಲಿಬಿಡುವ ರೀತಿಯಲ್ಲಿ" ಮತ್ತೆಲ್ಲೋ ಪ್ರಸ್ತಾಪ ಮಾಡುವುದು ಸರಿಯಲ್ಲ.
೨. "ಅತ್ತ ಆ extremityಯಾದರೆ ಇತ್ತ ಈ extremity" ಎಂಬ ನಿನ್ನ ಮಾತಿಗೆ ಉದಾಹರಣೆ ಸಹಿತ ನಾನು ಎಂದೋ ಉತ್ತರವನ್ನಿತ್ತಿದ್ದೇನೆ. ಮತ್ತೊಮ್ಮೆ ಓದಿ ನೋಡು.
೨.೧ ನಿನಗೆ extreme ಅನಿಸಿದ ಮಾತ್ರಕ್ಕೆ ಒಂದು ವಿಷಯ ಎಲ್ಲರಿಗೂ extreme ಆಗಬೇಕಿಲ್ಲ. ಸಂಪದದಲ್ಲಿಯೇ ಎಷ್ಟೋ ಜನರು ಚರ್ಚಿಸುತ್ತಿರುವುದನ್ನು ನೀನು ಗಮನಿಸಿರಬಹುದು. ಕನ್ನಡದಲ್ಲಿಯೇ ಇರುವ ಎಷ್ಟೋ ಸರಳವಾದ ಪದಗಳನ್ನು ಬಳಸುವ ಕಡೆಗೆಯೇ ಹೆಚ್ಚು ಜನರ ತುಡಿತವಿರುವುದು. ಪಾಂಡಿತ್ಯ ಪ್ರದರ್ಶನ ಮುಖ್ಯವಲ್ಲ, ಸಾಮಾನ್ಯನಿಗೂ ತಿಳಿಯುವ ನುಡಿಯಲ್ಲಿ ಜ್ಞಾನದ ಹರಿವು ಮುಖ್ಯ.
೨.೨ ಒಂದು ವೇಳೆ extremeಗಳಲ್ಲಿಯೇ ಒಂದನ್ನು ಆಯ್ಕೆ ಮಾಡಬೇಕಾಗಿ ಬಂದಾಗ, ಕನ್ನಡಿಗರಾಗಿ ನಾವು ಕನ್ನಡದ extreme ಬಳಸಬೇಕೇ ಹೊರತು ಬೇರೆನುಡಿಯ extreme ಅನ್ನಲ್ಲ. ಅಷ್ಟಕ್ಕೂ ಒಂದು ಹೊಸವಿಚಾರವನ್ನು ಒಂದು ಸಮುದಾಯ ಬರಮಾಡಿಕೊಳ್ಳಬೇಕಾಗಿ ಬಂದಾಗ ನುಡಿಯಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರಬೇಕಾಗುತ್ತದೆ. ನೀನೇ ಗಮನಿಸಿದಂತೆ "ನನ್ನಿ" ಎಂಬ ಪದವನ್ನು ಈಗೀಗ ಸಂಪದದಲ್ಲಿಯೇ ಹೆಚ್ಚು ಹೆಚ್ಚು ಜನರು ಬಳಸುತ್ತಿದ್ದಾರೆ. ಇದನ್ನು ಯಾರಾದರೂ ಬೇರೆಯವರ ಮೇಲೆ ಹೇರಿದ್ದರೆ ? ಇದು ಎಕ್ಸ್‌ಟ್ರೀಂ ಆಗಿದ್ದರೆ ಯಾರೂ ಇದನ್ನು ಬಳಸುತ್ತಲೇ ಇರಲಿಲ್ಲ.

ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದು, ಎಷ್ಟೋ ಜನರಲ್ಲಿ ಒಮ್ಮತ ಮೂಡಿದ್ದರೂ ಕೂಡ ಅದನ್ನು ಲೆಕ್ಕಿಸದೆ, ಪದೇ ಪದೇ ಅದೇ ವಿಚಾರವನ್ನು ಚರ್ಚೆಗೈಯುವುದು ತರವಲ್ಲ.

ಎಲ್ಲರಿಗೂ ಕುಚೇಷ್ಟೆಗೆ
ಸರಳ ಕನ್ನಡವನ್ನು ಎಕ್ಸ್‌ಟ್ರೀಂ ಎಂದುಕೊಳ್ಳಬೇಡಿ ಐಸ್‌ಕ್ರೀಂ ಎಂದುಕೊಳ್ಳಿ. ಸಿರಿಗನ್ನಡಂ ಗೆಲ್ಗೆ, ಸವಿಗನ್ನಡಂ ಬಾಳ್ಗೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 11, 2007 - 11:56pm — ASHOKKUMAR

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

ASHOKKUMAR's picture

Quote:
ಸರಳ ಕನ್ನಡವನ್ನು ಎಕ್ಸ್‌ಟ್ರೀಂ ಎಂದುಕೊಳ್ಳಬೇಡಿ ಐಸ್‌ಕ್ರೀಂ ಎಂದುಕೊಳ್ಳಿ.

ನೆನಪಿಟ್ಟುಕೊಳ್ಳಬೇಕಾದ ಮಾತಿದು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 12, 2007 - 11:00am — mahesha

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

mahesha's picture

ಸುನಿಲ ನನ್ನಿ...

HPN,

ನಾನು ಅಶೋಕರಿಗೆ ಹೇಳಿದ ಮಾತನ್ನು, ಅಶೋಕರೇ ಒಪ್ಪಿಕೊಂಡಿರುವಾಗ( ಪಾಸಿಟಿವ್ ಆಗಿ ತೆಗೆಗುಕೊಂಡಾಗ Smiling ), ನೀವು ನನ್ನ ಮೇಲೆ ಸುಮ್ಮನೆ ಹಾಯ್ದಂತೆ ಅನ್ನಿಸಿತು.

ಇನ್ನೊಂದು ಸಂಗತಿ, ಕನ್ನಡದ್ದೇ ಆದ ಒರೆಗಳು ಒಬ್ಬರಿಗೆ ತಿಳಿಯವು ಅಂದರೆ ಅದು ಅವರ ಕೊರತೆಯೇ!! ಅವರು ಕನ್ನಡದಲ್ಲಿ ಇನ್ನು ತಿಳಿಯಲು ಒರೆಗಳಿವೆ, ಹೊರತು, ಹಾಗೆ ಬರೆದ ಬರಹಗಾರನ ಕೊರತೆಯಲ್ಲ!

ಆದರೆ ಒಬ್ಬರಿಗೆ ಸಕ್ಕದದ ಒರೆಗಳನ್ನು ಕನ್ನಡದ ಬರಹದಲ್ಲಿ ತಿಳಿಯಲಾರದು ಅಂದರೆ ಅದು ಅವರ ಕೊರತೆಯಲ್ಲ. ಅದು ಬರೆದವನ ಕೊರತೆ. ಬರಹಗಾರನಿಗೆ ನೆಟ್ಟಗೆ ಕನ್ನಡದ ಒರೆಗಳು ಗೊತ್ತಿರದೇ, ಬೇರೆ ನುಡಿಯ ಒರೆಗಳಿಗೆ ಮೊರೆಹೋಗಿರುವುದು, ಓದುಗಾರನಿಗೆ ಈ ಕೆಳಗಿನ ಐಬುಗಳನ್ನು ಏಳಬಹುವು(ಬರ್ಪುವು).
೧)ಅವನಿಗೆ ಕನ್ನಡದ ಒರೆಗಳು ತಿಳಿಯವು. ಮಾದರಿ 'ಹೊಡೆತ' ಗೊತ್ತಿಲ್ಲ, ಆದರೆ 'ಪ್ರಹಾರ' ಗೊತ್ತು. ( ಇದು ಪಾಪ ಅವರ ಅರಿಯದೇ ಮಾಡಿದ್ದು. ಆದುದರಿಂದ ಕೆಟ್ಟತನವಲ್ಲ )
೨)ಅವನಿಗೆ ಕನ್ನಡದ ಒರೆಗಳು ಕೀಳೆಂಬ ಅನ್ನಿಸು. 'ಉಚ್ಚೆ'ಗಿಂತ 'ಮೂತ್ರ' ಮೇಲು ಎಂದಂತೆ.
೩)ಅವನಿಗೆ ಹೊರನುಡಿ ಬರೆಗಳನ್ನು ತುರುಕಿ, ತನ್ನ 'ಪಾಂಡಿತ್ಯ ಪ್ರದರ್ಶನ' ಮಾಡಬೇಕೆಂಬ ಹಂಬಲ( ಸುನಿಲನ ಮಾತು ). ಇದೂ ಕೂಡ ಕನ್ನಡದ ಒರೆಗಳು ಕೀಳೆಂಬ ಅನ್ನಿಸೇ. 'ಪಾಂಡಿತ್ಯ ಪ್ರದರ್ಶನ'ಕ್ಕೆ ಕನ್ನಡದ್ದೇ ಒರೆಗಳನ್ನು ಬಳಸಬಹುದು.
"ಅಡಿಯಡಿಗೆ ಅರಸರಸಿ ಕಾಯಲು ತಾವೇನು ಅರಸರೇ?"

ಒಟ್ಟಿನಲ್ಲಿ ಕನ್ನಡದಲ್ಲಿ ಕನ್ನಡದ್ದೇ ಆದ ಒರೆಗಳ ಬಳಕೆಯನ್ನು ಹಳಿಯುವುದು, ಅದಕ್ಕೆ ಇದಿರಾಡುವುದು, ಕನ್ನಡಕ್ಕೆ ಇದಿರಾಡಿದಂತೆ, ಸಲ್ಲದು!!
ಆದರೆ ಕನ್ನಡದಲ್ಲಿ ಹೊರ-ಒರೆಗಳನ್ನು ತಗ್ಗಿಸಲು ಮೊಗಸುವುದು, ಕನ್ನಡಕ್ಕೆ ಬಲ ತರುವ ಸಂಗತಿ, ಅದು ಸಲ್ಲುವುದು!
( ಇದು ನನ್ನ ಒಳನಿಸಿಕೆ )
======================================
( ಒಳ = private )

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 12, 2007 - 11:24am — ಸಂಗನಗೌಡ

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

ಸಂಗನಗೌಡ's picture

ನಿಮ್ಮ ಒಳ ಅನಿಸಿಕೆ ಸರಿ ಇದೆ.
ನೀವು ಕಿಟೆಲ್ ಎರಡನೆ ಹುಟ್ಟು. Smiling ನಗೆಚಟಾಕಿಗೆ ಅಂದೆ ದೊರೆ, ತಪ್ಪು ತಿಳಿಬೇಡಿರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 12, 2007 - 11:34am — mahesha

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

mahesha's picture

ಸಂಗನ

ನಂಗ್ಯಾಕಪ್ಪ ಸುಮ್ ಸುಮ್ಮನೆ ಮುನಿಸು, ನಿಮ್ ಮ್ಯಾಲೆ.

ನಾನು ಎರಡೇ ಕಿಟ್ಟಲ್ಲೋ, ಮೂರನೇ ಅವನೋ. "ಆವಯ್ಯನ ಎಡಗಾಲ ಎಕ್ಕಡಕ್ಕೂ ಸಮಕ್ಕಿಲ್ಲ" ನಾನು Sad.

ಆವಯ್ಯನ್ ನೋಡಿ, ಎಲ್ಲಿಂದಲೋ ಬಂದು, ನಮ್ಮ ಕನ್ನಡಕ್ಕೆ ಏನೆಲ್ಲಾ ಮಾಡವ್ನೆ. Smiling
========================================

"ಎಡಗಾಲ ಎಕ್ಕಡಕ್ಕೂ ಸಮಕ್ಕಿಲ್ಲ "- ಇದು ಒಂದು Idiom. ಇದು ಒಬ್ಬರ ಮೇಲಿರುವ ಗೌರವ ತೋರಿಸಲು ಹೇಳುವಂತದ್ದು.!! ಇದನ್ನು ಹಾಗಿಂದ ಹಾಗೆ ಒರೆಯೊರೆಯಾಗಿ ತಿಳಿಯಬಾರದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 12, 2007 - 12:49pm — ವೈಭವ

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

ವೈಭವ's picture

ಮಹೇಶ,

..."ಅಡಿಯಡಿಗೆ ಅರಸರಸಿ ಕಾಯಲು ತಾವೇನು ಅರಸರೇ?"...

ಇದು ನಿನ್ನ ಹುಡುಕೇ? ಓದಿದಾಗ ನನಗೆ ಬಬ್ರುವಾಹನದ ಹಾಡು ನೆನೆಪಾಯಿತು Smiling

'..ಬಡ ಬಡ ಶಿಖಂಡಿಯೆಂದಡಿಗಡಿಗೆ ನುಡಿಯಬೇಡಲೋ ಮೂಡ..." Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 12, 2007 - 1:01pm — mahesha

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

mahesha's picture

ವೈಬವಣ್ಣ ಅಡ್ಡಬಿದ್ದೆ.. !!

ಅದು ನನ್ನ ನೆಗಳ್ಚು (ನೆಗೞ್ಚು )Smiling

ಇಲ್ಲೊಂದು ಇದೆ "ಚಿನ್ನಾರಿ ಮುತ್ತ"ದ್ದು

"ಕಣ್ಣಿನೊಂದು ಹೊರಳಿನಲ್ಲಿ ಮಿಂಚಿನಲಗ ಮಸೆಯುವ" Smiling ( ದೊಡ್ಡರಂಗೇಗೌಡ್ರುದ್ದು ಅಲ್ವಾ? )
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 12, 2007 - 12:45pm — ವೈಭವ

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

ವೈಭವ's picture

"...ಸರಳ ಕನ್ನಡವನ್ನು ಎಕ್ಸ್‌ಟ್ರೀಂ ಎಂದುಕೊಳ್ಳಬೇಡಿ ಐಸ್‌ಕ್ರೀಂ ಎಂದುಕೊಳ್ಳಿ. ಸಿರಿಗನ್ನಡಂ ಗೆಲ್ಗೆ, ಸವಿಗನ್ನಡಂ ಬಾಳ್ಗೆ...."

ಎಕ್ಸ್‌ಟ್ರೀಂ ಆರ ಆಗ್ಲಿ, ಐಸ್‌ಕ್ರೀಂ ಆರ ಆಗ್ಲಿ... ನಂಗೆ ಅದೇ ಬೋ ಇಷ್ಟ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 12, 2007 - 5:38pm — muralihr

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

muralihr's picture

CorrectUU Smiling:)Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 26, 2007 - 11:34pm — kishorpatwardhan

ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!

kishorpatwardhan's picture

ಮಹೇಶ ಮತ್ತು ಅಶೋಕರಿಗೆ:
ನನ್ನ ಕನ್ನಡದಲ್ಲಿ ಸೈಂಸ್ ಬರವಣಿಗೆಯ ಇನ್ನೊಂದು ಪ್ರಯೋಗ ಇಲ್ಲಿದೆ:
http://www.sampada.net/article/4160

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡಿಗರಿಗೆ ಕಷ್ಟವಾದ ಕನ್ನಡ!!
  • ಕವನ ಸಂಕಲನ
  • ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ