ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › mahesha ರವರ ಬ್ಲಾಗ್

ಕನ್ನಡಕ್ಕೆ ಹೇಗೆ ಸಂಸ್ಕೃತ ಸುಂದರ, ಸುಲಲಿತ, ಸುಶ್ರಾವ್ಯವಲ್ಲ!!!

August 12, 2007 - 1:52am — mahesha

ಎಗ್ಗಿಲ್ಲದೇ, ಬೇಕಾಬಿಟ್ಟಿ ಸಕ್ಕದದ ಒರೆಗಳ ಬಳಕೆಯನ್ನು ಹಿಂದಿನವರೂ ತಪ್ಪೆಂದಿದ್ದಾರೆ ( ಕವಿರಾಜಮಾರ್ಗ, ಶಬ್ದಮಣಿದರ್ಪಣ ನೋಡಿರಿ ), ಈಗಿನ ನುಡಿಕಲಿಗಳು ಹೇಳುತ್ತಿದ್ದಾರೆ ( ಶಂಕರಭಟ್ಟ, ಕಾಡದೇವನೂರ(?) )!!

ಕವಿರಾಜಮಾರ್ಗ ಪದ್ಯ(೫೧-೬೧) : ಈ ಹನ್ನೊಂದು ಪದ್ಯಗಳಲ್ಲಿ ಬಿಡಿಸಿ ಬಿಡಿಸಿ ಕನ್ನಡದಲ್ಲಿ ಎಂತಹ ಸಕ್ಕದದ ಪದಗಳು ಬರಬಹುದು, ಎಂತವು ಬರಬಾರದು, ಯಾಕೆ ಮುಂತಾದವುಗಳನ್ನು ಕೊಟ್ಟಿದೆ.

ಅದರಲ್ಲಿ( ಪದ್ಯಗಳನ್ನು ಬರೆದಿಲ್ಲ )
೫೧)ಕನ್ನಡಕ್ಕೆ ಹೊಂದಿಕೆಯಾಗುವಂತಹ ಒರೆಗಳನ್ನು ಅರಿತು ಬೆರೆಸಬೇಕು. ಇದಕ್ಕೆ ಅವರು ಹೇಳು ಓಸುಗರ ತಿಳಿವು,/ಅರ್ಥ ಕೆಡುವುದು, ಅಲ್ಲದೇ ಕಣ್‌ಕಮಲ, ಮುಖತಾವರೆ( ಈಗಿನ ಕಲಿಕಾ-ಕೇಂದ್ರ, ಅಗಲೀಕರಣ ಮುಂತಾದವು ಕನ್ನಡದ ಸೊಗಡನ್ನು ಮುರಿದಿವೆ, ವೆಂಕಟಸುಬ್ಬಯ್ಯನವರೂ ಇದನ್ನೇ ಹೇಳಿದ್ದಾರೆ) ಇಂತವು ಹೇಳಲೂ ತಿಳಿಯಲೂ ಹೊಂದಿಕೆ ತೋರುವುದಿಲ್ಲ. ಅಂದರೆ ಸಂಸ್ಕೃತದ ಬಳಕೆ ಕನ್ನಡದಲ್ಲಿ ’ಸುಲಲಿತ’ವಲ್ಲ. ( ಸುಲಲಿತ ಅಂದರೆ ಸಲೀಸಾಗಿ ತಿಳಿಯುವಂತಹದ್ದು ಅಲ್ವಾ? ಸಂಸ್ಕೃತ ಕನ್ನಡಕ್ಕಿಂತ ಸುಲಲಿತವೇ? ). ನಿಮಗಸ್ಟು ಸುಲಲಿತವಾಗಿ ಸಕ್ಕದ ಬರುವುದಾದರೇ( ಏಕೆಂದರೆ ಇವರಿಗೆ ಸಕ್ಕದ ಸುಲಲಿತ ಅಂತ ಅವರೇ ಹೇಳಿಕೊಂಡಿದ್ದಾರೆ )

೫೨/೫೩/೫೪/೫೫)ಇದು ಸುಶ್ರಾವ್ಯದ ಬಗ್ಗೆ ಹೇಳುವುದು. ಕನ್ನಡದಲ್ಲಿ ಅಹರಹಃ, ಉಚ್ಛೈಃ, ನೀಚೈಃ, ಮುಹುರ್ಮುಹುಃ, ಇತಸ್ತತಃ, ಪುನಃಪುನಃ, ಈಷತ್ ಮುಂತಾದ ಸಕ್ಕದದ ಒರೆಗಳ ಬಳಕೆಗಳನ್ನು "ಅಸಹಾಯಗಳು"( ಸಹಿಸಲಾರದವು, ತಾಳಲಾರದವು, ಕೇಳಲು ಕರ್ಕಶವಾದವು ) ಎಂದು ಹೇಳಿದೆ. ಅಂದರೆ ಇಲ್ಲಿ ಸುಶ್ರಾವ್ಯತೆ ಬಿದ್ದು ಹೋಯಿತು. ಕನ್ನಡವು ಇಂಪಾಗಿಸಲು ಹಲವು ಬಿರುಸು ಸಂಸ್ಕೃತದ ಒರೆಗಳನ್ನು ಮೆದು ಮಾಡಿದೆ

ಇಂತಹ ಒರಟು ಸಕ್ಕದದ ಒರೆಗಳನ್ನು ಬಳಸುವದರಿಂದ ಮಾತಿನ ಚೆಲುವು, ಕಬ್ಬದ ಚೆಲುವುಗೆಡುವುದೆಂತು ಹಿಂದಿನಿಂದಲೂ ಹೇಳಿದ್ದಾರೆ. ಸಂಸ್ಕೃತವೂ ಸುಶ್ರಾವ್ಯವಲ್ಲ. ( ಸುಶ್ರಾವ್ಯ ಅನ್ನೋ ಪದದಲ್ಲೇ ಎಷ್ಟು ಕರ್ಕಶ(ಶ್ರ,ವ್ಯ) ವ್ಯಂಜನಗಳಿವೆ.)
ಸಂಸ್ಕೃತ = ಸಕ್ಕದ
ಕರ್ಕಶ = ಕಕ್ಕಸ
ಪತಿವ್ರತೆ = ಹದಿಬದೆ

ಪದ್ಯ ನೋಡಿ

ಈ ಮೇಲಿನ ಒರೆಗಳ ಪಟ್ಟಿಕೊಟ್ಟು...

ಬೆರೆಸಿರೆ ಕನ್ನಡದೊಳ್ ಬಂ
ಧುರಮಾಗದು ಕಾವ್ಯರಚನೆ ಪೇೞ್ದೊಡೆ ಪೀನಂ
ಪರುಷತರಮಕ್ಕುಮೊತ್ತುಂ
ಗರಡೆಯ ಮದ್ದಳೆಯ ಜರ್ಝರ ಧ್ವನಿಗಳವೋಲ್

"ಬೆರೆಸಿದ್ದರೆ ಕನ್ನಡದಲ್ಲಿ ಬಂಧುರ/ಚೆಲುವಾಗದು, ಕಾವ್ಯರಚನೆ ಹೇಳಿದರೆ ಪೀನ/ದಪ್ಪಗೆ ಪರುಷತರ/ಕರ್ಕಶವಾಗಿ/ಒರಟಾಗಿ ಇರುವುದು, ಒತ್ತಿ ಬಾರಿಸುವ ಕರಡೆ(ಕರಡಿ) ವಾದ್ಯ, ಮದ್ದಳೆಯ ಜರ್ಝರ ಸದ್ದಂತೆ"

ಸುಶ್ರಾವ್ಯತನವಿಲ್ಲ

೫೩) ಯಾವು ಸುಲಲಿತವಲ್ಲವೋ, ಸುಶ್ರಾವ್ಯವೂ ಅಲ್ಲವೋ ಅಂದು ಹೇಗೆ ಸುಂದರವಾದ ನುಡಿಯಾಗುವುದು? ಇಲ್ಲಿ ನೀವು ಹೇಳಿರುವ ನುಡಿಚೆಲುವು/ಭಾಷಾಸೌಂದರ್ಯವೇನು?

ಇದೇ ಮಾತನ್ನು ಹಲವು ಕನ್ನಡದ ಕವಿಗಳು ಹೇಳಿದ್ದಾರೆ.

ನೀವು ಈ ಮಾತುಗಳನ್ನು ಹಳಿತ/ಹಂಗಿಸಿಕೆ ಅಂತ ಎಣಿಸದೇ, ಮುನಿಸದೇ, ಬರೀ ಅರಿಮೆ/ಮಾಹಿತಿಯಾಗಿ ಪಡೆಯಿರೇಂದು ಕೋರಿಕೆ.

ಪದ್ಯಗಳು ಬೇಕಿದ್ದರೆ ಹೇಳಿ ಸೇರಿಸುವೆನು!

~.~
  • mahesha ರವರ ಬ್ಲಾಗ್
  • Login or register to post comments
  • 442 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 12, 2007 - 3:21pm — ಸಂಗನಗೌಡ

ಉ: ಕನ್ನಡಕ್ಕೆ ಹೇಗೆ ಸಂಸ್ಕೃತ ಸುಂದರ, ಸುಲಲಿತ, ಸುಶ್ರಾವ್ಯವಲ್ಲ!!!

ಸಂಗನಗೌಡ's picture

Quote:
ಪತಿವ್ರತೆ - ಹದಿಬದೆ

ಕನ್ನಡದಲ್ಲಿ ಗರತಿ Smiling

ಸಿಂಪಿ ಲಿಂಗಣ್ಣರ "ಗರತಿಯ ಬಾಳ ಸಂಹಿತೆ", ತುಂಬಾ ಚೆಲುವಿದೆ.

ಅದರಲ್ಲಿ ಬರುವ ಕೆಲವು ಮಂದಿಪದ ಹಾಡುಗಳು,

ತಾವರೆ ಗಿಡ ಹುಟ್ಟಿ ದೇವರಿಗೆ ನೆರಳಾದೆ|
ನಾ ಹುಟ್ಟಿದ ಮನೆಗೆ ಎರವಾದೆ|ಹಡೆದವ್ವ|
ನೀ ಕೊಟ್ಟ ಮನೆಗೆ ಹೆಸರಾದೆ.

ಅತ್ತಿ ಮಾವನಿಗಂಜಿ, ಸುತ್ತೇಳು ನೆರೆಗಂಜಿ|
ಮತ್ತೆ ನಲ್ಲನ ದನಿಗಂಜಿ|ನಡೆದರ|
ಎಂತ ಉತ್ತಮರ ಮಗಳೆಂದ.

ಮಡದೀನ ಬಡಿದಾನ, ಮನದಾಗ ಮರಗ್ಯಾನ|
ಒಳಗೋಗಿ ಸೆರಗ ಹಿಡಿಯೂತ|ಕೇಳ್ಯಾನ|
ನಾ ಹೆಚ್ಚೋ ನಿನ್ನ ತವರ್‍ಹೆಚ್ಚೋ.

-------------------------

ತೊಟ್ಟಿಲದೊಳಗೊಂದು ತೊಳೆದ ಮುತ್ತನು ಕಂಡೆ,
ಹೊಟ್ಟೆ ಮೇಲಾಗಿ ಮಲಗ್ಯಾನ|ಕಂದೈಗ|
ಮುತ್ತೀನ ದಿಟ್ಟಿ ತಗದೇನ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 12, 2007 - 11:35pm — Sunil Jayaprakash

ಉ: ಕನ್ನಡಕ್ಕೆ ಹೇಗೆ ಸಂಸ್ಕೃತ ಸುಂದರ, ಸುಲಲಿತ, ಸುಶ್ರಾವ್ಯವಲ್ಲ!!!

Sunil Jayaprakash's picture

ಪತಿವ್ರತೆ - ಹದಿಬದೆ, ಕನ್ನಡದಲ್ಲಿ ಗರತಿ

"ಹದಿಬದೆಯ ಧರ್ಮ" ಎಂಬ ಒಂದು ಕನ್ನಡ ಗ್ರಂಥವಿದೆ. ೧೭ನೇ ಶತಮಾನದಲ್ಲಿ, ಮೈಸೂರು ಸಂಸ್ಥಾನದ, ಮಹಾರಾಣಿಯ ಗೆಳತಿಯಾಗಿದ್ದ, ಸಂಚಿ ಹೊನ್ನಮ್ಮ ಎಂಬುವಳು ಬರೆದದ್ದು. (ಬಹುಶಃ ರಾಜರಿಗೆ ಮದುವೆಯಾದಾಗ, ರಾಣಿಯೊಂದಿಗೆ ಅವಳ ಗೆಳತಿಯಾದ ಸಂಚಿಹೊನ್ನಮ್ಮಳೂ ಮೈಸೂರು ಅರಮನೆ ಸೇರಿದ್ದಳು ಅಂತ ಕಾಣತ್ತೆ. ಇವಳಿಗೆ ಸಾಹಿತ್ಯದಲ್ಲಿ ತುಂಬಾ ಆಸಕ್ತಿ ಇದ್ದುದನ್ನು ಕಂಡು ರಾಜರು ವಿಶೇಷ ಮರ್ಯಾದೆ ನೀಡಿದ್ದರಂತೆ). ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು, ಕಣ್ಣುಕಾಣದ ಗಾವಿಲರು ಎಂಬ ಪದ್ಯ ಬರೋದು ಈ ಗ್ರಂಥದಲ್ಲಿಯೇ. "ಹದಿಬದೆಯ ಧರ್ಮ" ಕನ್ನಡದ ಓರ್ವ ಹೆಂಗಸು ಬರೆದಿರುವ ಹಳೆಯ ಗ್ರಂಥವಾದ್ದರಿಂದ, ಅದರಲ್ಲಿ ಸರಳವಾದ ಅಪರೂಪವಾದ ಕನ್ನಡ ಪದಗಳು ಇರಬಹುದು ಅಂತ ತಂದಿಟ್ಟುಕೊಂಡು ಓದುತ್ತಾ ಇದ್ದೆ. ನನ್ನ ಒಬ್ಬರು ಅತ್ತಿಗೆ ಅದನ್ನು, "ನಿನಗ್ಯಾಕೊ ಹದಿಬದೆಯ ಧರ್ಮ" ಅಂತ ನನ್ನಿಂದ "ಎರವಲು" ಪಡೆದು ಅವರು ಓದತೊಡಗಿದ್ದಾರೆ Eye-wink

@ಬರಹದ ಬಗ್ಗೆ,
ಸದರಿ ಬರಹಕ್ಕೆ ಕಾಮೆಂಟಾಗಿ ವಿಜಯಮ್ಮನವರ ಬ್ಲಾಗಿನ ಒಂದು ಕಾಮೆಂಟನ್ನು ಇಲ್ಲಿ ಓದಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 13, 2007 - 3:29pm — Khavi

ಉ: ಕನ್ನಡಕ್ಕೆ ಹೇಗೆ ಸಂಸ್ಕೃತ ಸುಂದರ, ಸುಲಲಿತ, ಸುಶ್ರಾವ್ಯವಲ್ಲ!!!

Khavi's picture

ಸಂಗನರೆ,

ಗರತಿ ಪದಗಳ ತೆರದಿ, ಜೋಗುಳದ ಪದಗಳು ಉಂಟು.
ಎಲ್ಲರೂ ಬಲ್ಲ ಈ ಕೆಳಗಿನ ಪದ ನೋಡಿ.

"ಕನ್ನಡಕೆ ಹೋರಾಡು ಕನ್ನಡದ ಕಂದ,
ಕನ್ನಡವ ಕಾಪಾಡು ನನ್ನ ಆನಂದ,
ಜೋಗುಳದ ಹರಕೆಯಿದು ಮರೆಯದಿರು ಚಿನ್ನ,
ಮರೆತೆಯಾದರೆ ನನ್ನ ಮರೆತಂತೆ ನನ್ನ"

ಎಂತು ಸೊಗಸಾಗಿದೆಯಲ್ಲವೆ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 13, 2007 - 4:37pm — Khavi

ಉ: ಕನ್ನಡಕ್ಕೆ ಹೇಗೆ ಸಂಸ್ಕೃತ ಸುಂದರ, ಸುಲಲಿತ, ಸುಶ್ರಾವ್ಯವಲ್ಲ!!!

Khavi's picture

ತಪ್ಪು ತಿದ್ದು :
"ಮರೆತೆಯಾದರೆ ನೀನು ಮರೆತಂತೆ ನನ್ನ" ಎಂದು ಓದುವುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 13, 2007 - 3:51pm — mahesha

ಉ: ಕನ್ನಡಕ್ಕೆ ಹೇಗೆ ಸಂಸ್ಕೃತ ಸುಂದರ, ಸುಲಲಿತ, ಸುಶ್ರಾವ್ಯವಲ್ಲ!!!

mahesha's picture

ಈ ಬಗ್ಗೆ ಹುರುಪಿರವವರು ಕವಿರಾಜಮಾರ್ಗ, ಶಬ್ದಮಣಿದರ್ಪಣ, ಶಂಕರಭಟ್ಟರ "ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ"/"ಕನ್ನಡ ಬರಹವನ್ನು ಸರಿಪಡಿಸೋಣ" ಮುಂತಾದ ಹೊತ್ತಗೆಗಳನ್ನು ನೋಡಬಹುದು.!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2008 - 11:38am — kannadakanda

ಉ: ಕನ್ನಡಕ್ಕೆ ಹೇಗೆ ಸಂಸ್ಕೃತ ಸುಂದರ, ಸುಲಲಿತ, ಸುಶ್ರಾವ್ಯವಲ್ಲ!!!

kannadakanda's picture

ಮಱೆತೆಯಾದರೆ ನೀನು ಮಱೆತಂತೆ ನನ್ನ
ಯಾಕಲ್ಲ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ-ಸಕ್ಕದದ ಬಳಕೆ ಹೇಗಿರಬೇಕು?
  • ಕನ್ನಡ ಉಳಿಸಲು ಆಡುಮಾತು-ಬರಹದಲ್ಲಿ ಬಲುಕಡಮೆ ಸಂಸ್ಕೃತವನ್ನು ಬಳಸಿ!
  • ಕನ್ನಡದಲ್ಲಿ ದೂರ
  • ಇಂಗಲೀಸನಲ್ಲಿರುವ ಬಿನ್ನಣದ/ವಿಙ್ಞ್ನಾನದ ಬರಹಗಳು ಕನ್ನಡದಲ್ಲಿ ಏಕೆ ಬರೆಯಬೇಕು?
  • ಸಂಸ್ಕೃತ ಪ್ರಚಾರದ ಸೋಗಿನಲ್ಲಿ ಕರ್ನಾಟಕದಲ್ಲೇ ಕನ್ನಡವನ್ನು ಬೈಯೋದು, ಕೀಳೆನ್ನೋದು ಸರಿಯೇ? ನ್ಯಾಯವೇ?
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ರೀ ಮತ್ತು ಸಾರೀ ಮತ್ತು ಸುರೆ
  • ಚಂದ ಮಾಮಾ
  • ಅರಳೀ ವೃಕ್ಷದ ವಾತಾನುಕೂಲ ಕಕ್ಷ
  • ಸತ್ಯಹರಿಶ್ಚ೦ದ್ರದ ವೀರಭಾಹು ಇನ್ನಿಲ್ಲ.......................
  • ಭಾಷೆ ಒಂದು means of communication ಅಷ್ಟೆ
  • ಛಾಯಾಚುಂಬನ
  • ಹಾಗೇ ಸುಮ್ ಸುಮ್ನೆ.... :)
  • ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
  • ರಾಜರಲ್ಲೊಬ್ಬ ರತ್ನ
  • ಕುಡುಕರ ರಾಜ್ಯ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಛಾಯಾಚುಂಬನ
    July 19, 2008 - 4:37am
  • anivaasi
    ಉ: ಅವನು ಇವನು ನೀಲುಗಳು
    July 19, 2008 - 4:35am
  • sushil
    ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
    July 19, 2008 - 1:46am
  • venkatesh
    ಉ: ಲ೦ಡನ್ ಪ್ರವಾಸಕಥನ ಭಾಗ ೧೧: ಓಡುವ ಟ್ಯೂಬಿನಿ೦ದ ದಿನವೂ ಧುಮುಕುವ ಕೆ೦ಪು ನಿಲುವ೦ಗಿಯಾಕೆ!
    July 19, 2008 - 12:36am
  • ಗಣೇಶ
    ಉ: ಕಾಯ್
    July 19, 2008 - 12:00am
  • hamsanandi
    ಉ: ಛಾಯಾಚುಂಬನ
    July 18, 2008 - 11:31pm
  • hamsanandi
    ಉ: ಕಾಯ್
    July 18, 2008 - 11:18pm
  • srinivasps
    ಉ: ದೇವೇ....ಗೌಡ ಯಾಕೆ?
    July 18, 2008 - 11:17pm
  • ಗಣೇಶ
    ಉ: ದೇವೇ....ಗೌಡ ಯಾಕೆ?
    July 18, 2008 - 11:12pm
  • ಗಣೇಶ
    ಉ: ದೇವೇ....ಗೌಡ ಯಾಕೆ?
    July 18, 2008 - 11:01pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 13 ಅತಿಥಿಗಳು ಆನ್ಲೈನ್ ಇರುವರು.


ನೀವು ಮಾಡುವ ಕರ್ಮ (ಕೆಲಸ) ಮುಖ್ಯವಾಗಿಲ್ಲದೇ ಇರಬಹುದು, ಆದರೆ ಕರ್ಮ ಮಾಡುವುದು ಅತ್ಯಂತ ಅಗತ್ಯ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator