ಘನಗಂಭೀರ ಕವಿತ್ವ
ನಾನೊಂದು ಪದ್ಯ ಬರೆಯ ತೊಡಗಿದೆ
ಘನಗಂಭೀರಪದಲಾಲಿತ್ಯಪೂರ್ಣ
ಯಮಕ-ಗಮಕ-ಅಳಂಕಾರಯುಕ್ತ
ಸುಸಂಸ್ಕೃತಕಾವ್ಯವಿಶೇಷಕ್ಕೆ ಪ್ರಯತ್ನದಿಂ ||ನಾನೊಂದು ಪದ್ಯ ಬರೆಯ ತೊಡಗಿದೆ||
ಸುಕೋಮಲ ಶೃಂಗಾರರಸಯುಕ್ತ
ಸುಮಧುರ ಸ್ವರಗಾಯನ ಯೋಗ್ಯ
ವರವೀಣಾವಾಣಿ ಕೃಪಾಪೋಷಿತ
ನೀಳ ಸಮಾಸ ಚಮತ್ಕಾರಗರ್ಭಿತ ||ನಾನೊಂದು ಪದ್ಯ ಬರೆಯ ತೊಡಗಿದೆ||
ರೋಚಕ ವಿಗ್ರಹಾಸಾಧ್ಯ ಸಂಧಿಗಳಿಂ
ಕೇಶವುದುರಿ ಬೋಳುತಲೆಯಾಗಿಸುವ
ಅರ್ಥಗಹನಕಾಠಿಣ್ಯಪ್ರದರ್ಶನ ಆಸೆಯಿಂ
ಕನ್ನಡ ಸಂಸ್ಕೃತ ಪ್ರಾಕೃತ ಕಲಸುಮೇಲೊಗರದಿಂ ||ನಾನೊಂದು ಪದ್ಯ ಬರೆಯ ತೊಡಗಿದೆ||
.
.
.
.
ಈಗ ಬರೆದ ಪದ್ಯ ನನಗೇ ಅರ್ಥ ಆಗ್ತಾ ಇಲ್ಲ. ಅದಕ್ಕೆ ಮುಂದೆ ಬರೆಯಕ್ಕೆ ಆಗ್ತಾ ಇಲ್ಲ ![]()
![]()
-ಮಾಯ್ಸ ![]()

- mahesha ರವರ ಬ್ಲಾಗ್
- Login or register to post comments
- 543 hits
- Email this blog





RSS:
ಪ್ರತಿಕ್ರಿಯೆಗಳು
ಉ: ಘನಗಂಭೀರ ಕವಿತ್ವ
ಚೆನ್ನಾಗಿದೆ
ಈ ತರಹ ಪ್ರಯತ್ನದಲ್ಲಿ ನೀವು ಅಚ್ಚಕನ್ನಡದ ದ್ವಿತೀಯಾಕ್ಷರ ಪ್ರಾಸ ಬಿಟ್ಟುಬಿಟ್ಟಿರಲ್ಲ?
-ಹಂಸಾನಂದಿ
ಉ: ಘನಗಂಭೀರ ಕವಿತ್ವ
ನಿಜ ಹಂಸಾನಂದಿಯವರೆ ನನಗೂ ಆದಿಪ್ರಾಸವಿಲ್ಲವಲ್ಲ ಅನ್ನಿಸಿತು.
ಮತ್ತು ಅದು ಅಚ್ಚಕನ್ನಡದ್ದು ಹೌದ? ಇತರ ನುಡಿಗಳಲ್ಲಿ ಇಲ್ಲವ? ಹೌದಾದರೆ ಅದೊಂದು ಹೆಗ್ಗಳಿಕೆಯ ವಿಷಯವಲ್ಲವೆ?
ಇಲ್ಲೊಬ್ಬ ಆಸ್ಟ್ರೇಲಿಯಾದ ಬರಹಗಾರನಿಗೆ ನಾನು ಆದಿಪ್ರಾಸದ ಬಗ್ಗೆ ಹೇಳಿದೆ. ಅವನಿಗೆ ಅರ್ಥವಾಗಲು ಸ್ವಲ್ಪ ಹೊತ್ತು ಹಿಡಿಯಿತು.
ನಂತರ ಅವನು ಇಂಗ್ಲೀಷಲ್ಲಿ ಹಾಗೆ ಬರೆಯುತ್ತೇನೆ ಎಂದು ಹೊರಟು ಸುಸ್ತಾದ. ನಮಗೆ ಕನ್ನಡದಲ್ಲಿ ಸುಲಭವೆನಿಸುವ ಆದಿಪ್ರಾಸ ಬೇರೆ ನುಡಿಯಲ್ಲಿ ಕಷ್ಟವೆಂದು ನನಗೆ ಅಚ್ಚರಿಯಾಯಿತು. ಅದಕ್ಕೆ ನುಡಿಯ ಚರಿತ್ರೆಯೇ ಎಷ್ಟು ಕಾರಣವಾಗುತ್ತದೆ ಎಂದೂ ಚರ್ಚಿಸಿದೆವು!
ಸೊಗಸಾಗಿದೆ ಮಹೇಶರೆ, ನಿಮ್ಮ ತುಂಟತನದ ಪದ್ಯ(ಗಳು)!
ಉ: ಘನಗಂಭೀರ ಕವಿತ್ವ
ನನಗೂ ಆದಿಪ್ರಾಸವಿಲ್ಲವಲ್ಲ ಅನ್ನಿಸಿತು.
ನಾನು ಹೇಳಿದ್ದು ೨ನೇ ಅಕ್ಷರದ ಪ್ರಾಸ; ಇದು ಆದಿ ಪ್ರಾಸಕ್ಕಿಂತ ಬೇರೆ. ಆದಿಪ್ರಾಸ (ಮೊದಲ ಅಕ್ಷರದ ಪ್ರಾಸ) ಕನ್ನಡದಲ್ಲಿ ಹಳೆಯ ರಚನೆಗಳಲ್ಲಿ ಕಂಡು ಬರುವುದಿಲ್ಲ ಅನ್ನಿಸುತ್ತೆ. ಅದು ನವೋದಯದ ಬೆಳವಣಿಗೆ ಇರಬಹುದು. ಹೆಚ್ಚು ಬಲ್ಲವರು ತಿಳಿಸಿ.
ಎರಡನೇ ಅಕ್ಷರದ ಪ್ರಾಸ ನೀವು ಕವಿರಾಜಮಾರ್ಗದಿಂದ ಹಿಡಿದು, ಮಂಕುತಿಮ್ಮನ ಕಗ್ಗದವರೆಗೂ ನೋಡಬಹುದು. ಇದರಲ್ಲಿ ಪ್ರತಿ ಸಾಲಿನ ಎರಡನೇ ಅಕ್ಷರ ಒಂದೇ ಆಗಿರುತ್ತೆ. ಉದಾಹರಣೆಗೆ
ಶ್ರೀ ವಿಶದವರ್ಣೆ ಮಧುರಾ
ರಾವೋಚಿತೆ ಚತುರಚಿರಪದರಚನೆ ಚಿರಂ
ದೇವಿ ಸರಸ್ವತಿ ಹಂಸೀ
ಭಾವದಿ ಕೂರ್ತು ನೆಲೆಗೊಳ್ಗೆ ಮನ್ಮಾನಸದೊಳ್ (ಕವಿರಾಜ ಮಾರ್ಗ - ಎರಡನೆ ಅಕ್ಷರ ವ)
ಗಜಮುಖನೆ ಮೆರೆವೇಕದಂತನೆ
ನಿಜಗುಣಾನ್ವಿತ ಪರಶುಧಾರಿಯೆ
ರಜತಗಿರಿಗೊಡೆಯನ ಕುಮಾರನೆ ವಿದ್ಯೆವಾರಿಧಿಯೆ
ಅಜನು ಹರಿರುದ್ರಾದಿಗಳು ನೆರೆ
ಭಜಿಸುವರನವರತ ನಿನ್ನನು
ತ್ರಿಜಗವಂದಿತ ಗಣಪ ಮಾಳ್ಪುದು ಮತಿಗೆ ಮಂಗಳವ (ಕುಮಾರವ್ಯಾಸ - ಎರಡನೆ ಅಕ್ಷರ ಜ)
ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು
ತನ್ನಂತೆ ಪರರ ಬಗೆದಡೆ ಕೈಲಾಸ
ಬಿನ್ನಾಣವಕ್ಕು ಸರ್ವಜ್ಞ! (ಸರ್ವಜ್ಞ - ಎರಡನೇ ಅಕ್ಷರ ನ)
ಗೆಜ್ಜೆ ಕಾಲ್ಗಳ ದನಿಯ ತೋರುತ
ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ
ಸಜ್ಜನ ಸಾರುವ ಪೂಜೆಯ ವೇಳೆಗೆ
ಮಜ್ಜಿಗೆಯೊಳಗಿನ ಬೆಣ್ಣೆಯಂತೆ (ಪುರಂದರ ದಾಸ - ಎರಡನೇ ಅಕ್ಷರ ಜ)
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲಸಕ್ಕರೆಯಾಗು ದೀನದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ (ಡಿ.ವಿ.ಜಿ )
ಇದು ಎಲ್ಲ ದ್ರಾವಿಡ ಭಾಷೆಗಳಲ್ಲಿಯೂ ಇದೆ. ಅಷ್ಟೇ ಅಲ್ಲದೆ, ಈ ಭಾಷೆಯವರು ಬರೆದಿರುವ ಸಂಸ್ಕೃತ ರಚನೆಗಳಲ್ಲೂ ಕಂಡುಬರುತ್ತದೆ (ಉದಾಹರಣೆಗೆ ತ್ಯಾಗರಾಜ ಪುರಂದರ ದಾಸ ದೀಕ್ಷಿತರು ಮೊದಲಾದವರು ಮಾಡಿರುವ ಸಂಸ್ಕೃತದ ಸಂಗೀತ ರಚನೆಗಳಲ್ಲಿ ದ್ವಿತೀಯಾಕ್ಷರ ಪ್ರಾಸ ಇದೆ). ಆದರೆ, mainstream ಸಂಸ್ಕೃತದಲ್ಲಿ ನನಗೆ ತಿಳಿದ ಮಟ್ಟಿಗೆ ಇದಿಲ್ಲ್ಸ್ ಎನಿಸುತ್ತೆ.
-ಹಂಸಾನಂದಿ
ಉ: ಘನಗಂಭೀರ ಕವಿತ್ವ
ಹಂಸಾನಂದಿ
ನೀವು ಹೇಳಿದ ಪ್ರಾಸವು ನಂಗೆ ತಡವಾಗಿ ತಲೆಗಿಳಿಯಿತು...
ನಮ್ಮ ಗೋವಿನ ಹಾಡಲ್ಲೇ ಇದೆ!
ಧರಣಿ ಮಂಡಲ ಮಧ್ಯದೊಳಗೆ
ಮರೆಯುತಿಹ ಕರ್ನಾಟದೇಶದೊಳ್
ಇರುವ ಕಾಳಿಂಗನೆಂಬ ಗೊಲ್ಲನು
ಪರಿಯನಾನೆಂತು ಪೇಳ್ವೆನು ( ಎರಡನೇ ಅಕ್ಕರ ರ )
ಎಳೆಯ ಮಾವಿನ ಮರದ ಕೆಳಗೆ
ಕೊಳನನೂದುತ ಗೊಲ್ಲಗೌಡನು
ಬಳಸಿ ನಿಂದ ತುರುಗಳನ್ನು
ಬಳಿಗೆ ಕರೆದನು ಹರುಷದಿ ( ಎರಡನೇ ಅಕ್ಕರ ಳ )
ಗಂಗೆ ಬಾರೆ ಗೌರಿ ಬಾರೆ
ತುಂಗಭದ್ರೆ ನೀನು ಬಾರೆ ( ಎರಡನೇ ಅಕ್ಕರ ಙ್ಗ )
ಕಾಮಧೇನು ನೀನು ಬಾರೆಂದು
ಪ್ರೇಮದಿಂದಲಿ ಕರೆದನು ( ಮ )
ಗೊಲ್ಲ ಕರೆದಾ ಧ್ವನಿಯು ಕೇಳಿ
ಎಲ್ಲ ಪಶುಗಳು ಬಂದುವಾಗ
ಚೆಲ್ಲಿಸೂಸಿ ಪಾಲ ಕರೆಯಲು
ಅಲ್ಲಿ ತುಂಬಿತು ಬಿಂದಿಗೆ ( ಎರಡನೇ ಅಕ್ಕರ ಲ )
ಪುಣ್ಯಕೋಟಿ ಎಂಬ ತುರುವು
ತನ್ನ ಕಂದ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
ಚನ್ನದಿ ತಾ ಬರುತಿರೇ ( ಎರಡನೇ ಅಕ್ಕರ ನ )
ಮೇಲೆ ಬಿದ್ದು ಬೀಳಹೊಯ್ವೆನು
ನಿನ್ನ ಹೊಟ್ಟೆಯ ಸೀಳಿಬಿಡುವೆನು
ಎನುತ ಕೋಪದಿ ಹಾರಿ
ಕೂಳ ಬಗ್ಗನು ಕೂಗಲು ( ನ, ಲ )
.
.
.
ತಬ್ಬಲಿಯು ನೀನಾದೆ ಕರುವೇ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರ ಋಣ ತೀರಿತೆಂದು
ತಬ್ಬಿ ಅತ್ತಿತು ಕಂದನ ( ಎರಡೆನ ಅಕ್ಕರ ಬ್ಬ )
ಈ ಹಾಡು ಸುಮಾರು ತರ ಇದೆ. ನಂಗೆ ತಿಳಿದಿರುವುದು ಇದು!
ಉ: ಘನಗಂಭೀರ ಕವಿತ್ವ
ನನ್ನಿ!
ಉ: ಘನಗಂಭೀರ ಕವಿತ್ವ
ಹಂಸಾನಂದಿ,
ಈಗಲೇ ಈ ಪದ್ಯ ನನಗೆ ತಲೆಗೆಳಿಯುತ್ತಿಲ್ಲ, ಇನ್ನೂ ನೀವು ಹೇಳಿದ ಎರಡನೇ ಅಕ್ಕರ ಪ್ರಾಸ ಇವೆಲ್ಲ ಹಾಕೋದು ಹೇಗೆ?
ಮುಂದಿನ ಸರತಿ ಮೊಗಸ್ತೀನಿ..
ನನ್ನಿ!
ಉ: ಘನಗಂಭೀರ ಕವಿತ್ವ
ಮಹೇಶ, ಸಖತ್ ನಗು ಬಂತಪ್ಪಾ. ನಕ್ಕೂ ನಕ್ಕೂ ಹೊಟ್ಟೆ ಇನ್ನೂ ಹಸಿಯತೊಡಗಿತು. ಸೂಪ್ರ್... :ಚಪ್ಪಾಳೆಯ ಮೇಲೆ ಚಪ್ಪಾಳೆ:
ಉ: ಘನಗಂಭೀರ ಕವಿತ್ವ
ನನ್ನಿ!
ಉ: ಘನಗಂಭೀರ ಕವಿತ್ವ
ಮಹೇಶ,
ತುಂಬಾ ಚೆನ್ನಾಗಿದೆ.... ಇವತ್ತು ಆಫೀಸಿನಲ್ಲಿ ಕೆಲಸ ಜಾಸ್ತಿಯಾಗಿತ್ತು....
ಆವಾಗ ಇದನ್ನು ಓದಿದೆ... ನಗು ಬಂತು, ಮನಸ್ಸು ಸ್ವಲ್ಪ ತಿಳಿಯಾಗಿ (refresh) ಮತ್ತೆ ಹುರುಪು ತುಂಬಿತು..
ಎಲ್ಲವನ್ನು ಹೇಳಿ... ಏನು ಹೇಳಿಲ್ಲದಂತೆ ಓದುಗರ ಕಲ್ಪನೆಗೆ ಬಿಟ್ಟುಬಿಡುವುದರಿಂದ ಅದರ ಮರ್ಮವನ್ನು ಅರಿತರೂ
ತಾವು ಬಗೆದುದನ್ನ ಯಾವ ರೀತಿಯಲ್ಲಿ ಹೇಳಬೇಕು ಅನ್ನುವ ಗೊಂದಲ ಓದುಗನಲ್ಲೇ ಉಳಿಯುತ್ತೆ..
ಕನ್ನಡದಲ್ಲಿ ಅತಿ ಹೆಚ್ಚೆ ಆಯಿತು ಅನ್ನುವಷ್ಟು ಸಕ್ಕದ ಬೆರೆತಿರುವುದನ್ನು ತುಂಬಾ ಉದಾಹರಣೆ ಸಮೇತವಾಗಿ ನಿರೂಪಿಸುತ್ತದೆ ಈ ಕವಿತೆ.
ಹಾಗೂ ಅದರ ಅತೀಯಾದ ಬಳಕೆಯು ಯಾವರೀತಿಯ ಪರಿಣಾಮ ಕೊಡಬಲ್ಲದು ಎನ್ನುವುದನ್ನು ತನ್ನ ಮೂಲಕವೇ ಕೂಡ ತಿಳಿಸುತ್ತದೆ...
ಊಟದಲ್ಲಿ ಉಪ್ಪಿನಕಾಯಿಯಂತೆ ಬಂದರೆ ಮಾತ್ರ ಸಕ್ಕದವು ಕನ್ನಡಕ್ಕೆ ಚೆನ್ನಾಗಿ ಸಲ್ಲುವುದು...
ಅದು ಬಿಟ್ಟು ಉಪ್ಪಿನಕಾಯಿಯೇ ಊಟವಾದರೆ ಏನಾದೀತು? ... ತಿಂದವರೇ ಬಲ್ಲರು... ಅಲ್ಲವೇ?
ಉ: ಘನಗಂಭೀರ ಕವಿತ್ವ
ನಲ್ಮೆಯ ನನ್ನಿ!!
ಉ: ಘನಗಂಭೀರ ಕವಿತ್ವ
ದ್ವಿತೀಯಾಕ್ಷರ ಪ್ರಾಸದ, ಭಾಮಿನಿ ಷಟ್ಪದಿಗೆ ಹೋಲುವ ಕೆಲವನ್ನು ವಿಚಿತ್ರಾನ್ನದ ೪೦ನೆ ಸಂಚಿಕೆಯಲ್ಲಿ ನಾನು ರಚಿಸಿ ಪ್ರಸ್ತುತಪಡಿಸಿದ್ದೆ. ಇಲ್ಲಿವೆ ಅವು, ನಿಮಗಾಗಿ (ವಿವರ/ಹಿನ್ನೆಲೆಗೆ ವಿಚಿತ್ರಾನ್ನ ೪೦ನೆ ಸಂಚಿಕೆ ನೋಡಿ).
==========
ಛಂದಸ್ಸು ಮಾಪಕ ತಂತ್ರಾಂಶದ ಬಗ್ಗೆ ಈಮೈಲನ್ನು ಓದಿದ ಒಬ್ಬ ಸಾಫ್ಟ್‌ವೇರ್ ಇಂಜನಿಯರ್(ಪ್ಲಸ್ ಸಾಹಿತ್ಯಾಭಿಮಾನಿ)ಗೆ ಮನದಲ್ಲಿ ಅನಿಸಿದ್ದು:
ಅಂದು ಕಲಿತಿಹ ವಿದ್ಯೆಯದು ಚಿ
ಕ್ಕಂದಿನಂದಿನ ನೆನೆವೆ ದಿನಗಳ
ಛಂದ ಕಲಿಸಿದ ಪಂಡಿತರ ಬಿಳಿ ಕಚ್ಚೆಪಂಚೆಯನು...
ಇಂದು ನೋಡುವೆ ಮತ್ತೆ ಗುರುಲಘು
ಎಂದುಕೊಳ್ಳುತ ಯಗಣ ರಗಣಗ
ಳಿಂದ ಪರಿಕಿಪ ಗಣಕವಿವರದ ವಿದ್ಯುದಂಚೆಯನು...
ಈ ಛಂದಸ್ಸು ಮಾಪಕ ಸಾಫ್ಟ್‌ವೇರ್ ಬಿಡುಗಡೆಯಾದ ಮೇಲೆ ಇದುವರೆಗೆ ಅಂತರ್ಜಾಲದಲ್ಲಿ ಮುಕ್ತ ಛಂದಸ್ಸಿನ ಕವನಗಳನ್ನು ಬರೆಯುತ್ತಿದ್ದವರೆಲ್ಲ ಛಂದೋಬದ್ಧ ಕಾವ್ಯರಚನೆಗೆ ತೊಡಗುತ್ತಾರೆ:
ಅಡಗಿ ಕುಳಿತಿಹನೆನ್ನ ತನುವೊಳು ಮೈ
ಬಡಿದೆಬ್ಬಿಸಿದೆನು ಮಲಗಿರ್ಪ ಕವಿಯನು
ಪೊಡಮಡುತಲಿ ವಾಗ್ದೇವಿಗೆ ಅಕ್ಷರಾಲಂಕಾರ ಪೂಜೆಯನು...
ಎಡವಿ ಬೀಳದೆ ನಡೆವ ಶಕ್ತಿಯ
ನೀಡೆನಗೆ ಛಂದಸ್ಸಿನ ನಿಯಮವೆಲ್ಲವ
ಬಿಡದೆ ಪಾಲಿಸುವಂತೆ ಸರಸತಿ ನಿನ್ನ ಬೇಡುವೆನು...
ಎಲ್ಲರೂ ಛಂದೋಬದ್ಧ ಕವನಗಳನ್ನು ಏಕ್‌ದಂ ಬರೆದು (ಐ ಮೀನ್, ಬರಹದಲ್ಲಿ ಟೈಪಿಸಿ) ಛಂದಸ್ಸು ಮಾಪಕ ತಂತ್ರಾಂಶದ ಪರೀಕ್ಷೆ ಪಾಸು ಮಾಡಿಸಿ ಪ್ರಕಟಣೆಗೆ ಸಂಪಾದಕರ ಈಮೈಲ್ ವಿಳಾಸಕ್ಕೆ ಕಳಿಸತೊಡಗಿದರೆ ಅವರ ಗತಿ ?
ಬರಹವೆಂಬೀ ಕನ್ನಡದ ಲಘು
ವರವಿರುವುದರಿಂದ ಕೇಳೈ
ಹರಿದುಬರುತಿದೆ ಕಾವ್ಯಧಾರೆಯು ವಿದ್ಯುದಂಚೆಯಲಿ...
ಕೊರೆಯುತಿಹ ಕವಿಮನದ ಗೆಳೆಯರು
ಬರಿಯ ಕೀಬೋರ್ಡಿಂದ ಬರೆಯುವ
ಪರಿಯ ನೋಡುತ ಛಲವ ಮೆಚ್ಚುವೆ ಎನ್ನ ಮನದಲ್ಲಿ...
ನನಗೆ ಮಾತ್ರ ಪದ್ಯಕ್ಕಿಂತ ಗದ್ಯವೇ ಒಳ್ಳೆಯದಾದ್ದರಿಂದ (ಗದ್ಯಂ ಹೃದ್ಯಂ ಎಂದ ಮುದ್ದಣ ಇನ್ಸಿಡೆಂಟಲಿ ನಮ್ಮ ಕಾರ್ಕಳ ತಾಲೂಕಿನ ನಂದಳಿಕೆಯವನು) ನಾನು ಪದ್ಯ ಬರೆಯದೆ ವಿಚಿತ್ರಾನ್ನದ ಅಡಿಗೆಯಲ್ಲೇ ತೃಪ್ತನಾಗುತ್ತೇನೆ. ಏಕೆಂದರೆ:
ರನ್ನ ಬರೆದಿಹ ಪಂಪ ಬರೆದಿಹ ಸಿರಿ
ಗನ್ನಡದಿ ಘನ ಕಾವ್ಯ ಬರೆಯುವ
ಉನ್ನತದ ಆಸೆಯೇ ಬೇಡೆನಗೆ ತುರಾಯಿ ಹಾರಗಳು...
ಪೆನ್ನು ಬಳಸದೆ pun ಬರೆವೆನು ದಟ್ಸ್
ಕನ್ನಡದಲಿ ಅಡಿಗಡಿಗೆ ಮಾಡುತ ವಿಚಿ
ತ್ರಾನ್ನ ಬಡಿಸುತ ಕಳೆದೆ ನಾ ನಲ್ವತ್ತು ವಾರಗಳು...
=================
ಉ: ಘನಗಂಭೀರ ಕವಿತ್ವ
ಮಾಯ್ಸ,
:)

ಮನ್ನಿಸು ನಾನು ಇದನ್ನ ನೋಡಿರಲಿಲ್ಲ.... ಅರಿತ ಆಗ್ಡೆ ಇದ್ರೂ ಸಿಕ್ಕಾಪಟ್ಟೆ ನಗು
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಘನಗಂಭೀರ ಕವಿತ್ವ
^^
ಸಂಸ್ಕತ ದ್ವೇಷಿ
ಸಭ್ಯತೆ ಇದ್ರೆ ಒಡನೆಯೇ ಓಡಿಹೋಗಿ ಸಂಸ್ಕೃತ ಪಂಡಿತರಿಂದ ಅರ್ಥಗಹನ ಮಾಡಿಕೊಳ್ಳಿ. ಅರ್ಥ ಆಗಲ್ಲ ಅನ್ನೋ ಪಾಮರ!
ಕನ್ನಡ ಏಕೀಕರಣಕ್ಕೆ ಧಕ್ಕೆ ಮಾಡ್ತಾ ಇದ್ದೀರ. ಉತ್ತರ ದಕ್ಷಿಣ ಪೂರ್ವ ಪಶ್ಚಿಮದ ಎಲ್ಲ ಕನ್ನಡಿಗರಿಗೂ ಅರ್ಥವಾಗಲೇ ಬೇಕಾದ ಸಸಂಸ್ಕೃತವಾಕ್ಯಪೂರಿತ ಕಾವ್ಯ!!
( ಹಿಂಗೆ ನಿಮಗೆ ವಿಕಾಸ ಎಗಡೆ ಅನ್ನೋದು ಆಮೇಲೆ )
ಉ: ಘನಗಂಭೀರ ಕವಿತ್ವ
ಇಲ್ಲೊಂದು ನಾಲಕ್ ಶಬ್ದ ಬದಲಿ ಮಾಡಿದ್ರೆ ದೇಶಾದ್ಯಂತ ಇರೋ ಸಂಸ್ಕೃತ ಪಂಡಿತರು , ಸಂಸ್ಕೃತ ಪರಿವಾರದ ಭಾಶೆಗಳವರೂ ಅರ್ಥ ಮಾದ್ಕೊಂದು ದೇಶದ ಏಕೀಕರಣಾನೂ ಆಗಿಬಿಡ್ತದೆ !
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಘನಗಂಭೀರ ಕವಿತ್ವ
"ವಿಶ್ವವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರೀ, ಜಯ ಭಾರತೀ"
ಉ: ಘನಗಂಭೀರ ಕವಿತ್ವ
ಸಾರ್ ಎಂತಹ ಐಡಿಯ..
ಕರ್ನಾಟಕ ಏಕೀಕರಣಕ್ಕೆ ಕಾರಣೀಭೂತರಾದ ಸುಸಂಸ್ಕೃತ ಸಂಸ್ಕೃತ ಪಂಡಿತರಿಂದ ಭಾರತೈಕೀರಣ.
ನಮ್ಮ ಭಾರತ ಒಕ್ಕೂಟದ ಒಕ್ಕಟ್ಟಿಗೂ ಇವರೆ ಆಧಾರಸ್ತಂಭ. ಅಹೋರಾತ್ರಿ ಭಾಷಾಸಾಮರಸ್ಯದ ಚಿಂತರು ದ್ಯೋತಕರು
ಉ: ಘನಗಂಭೀರ ಕವಿತ್ವ
ನಾವು ಸಂಸ್ಕ್ರುತ ಪರಿವಾರಕ್ಕೆ ಸೇರಿಲ್ಲ ಸದ್ಯ
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು