ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ಇದು ನನ್ನ ಅನಿಸಿಕೆ.. ನಾನು ಸೇರಿರುವ/ಸೇರಿಸಿರುವ ಮತದ ಬಗ್ಗೆ ನನ್ನ ಅನಿಸಿಕೆ.. ಇದು ಯಾರ ಹಳಿತವೂ, ಮೂದಲಿಕೆಯೂ ಅಲ್ಲ.. ಮುನಿಸು ಸಿಡುಕು ಬೇಡ...!!
ಒಳ್ಳೆಯದನ್ನು ಗೆಲ್ಲಿಸಲು, ಕೆಟ್ಟದನ್ನು ಸೋಲಿಸಲು, ಹಲವು ದಾರಿಗಳಿವೆ. ಆ ಹಲದಾರಿಗಳನ್ನು ಹಲಮಂದಿ ಹೇಳಿ ಹೋಗಿದ್ದಾರೆ.
"ಅಂಗುಲಿಮಾಲನಂತಹ ಕೂಳನನ್ನು ಮಾರ್‍ಗೊಳಿಸಿದ ಬುದ್ದ"ನೇ ಮಾದರಿ.
ಆದರೆ ಈ ದೀಪಾವಳಿಯ ಹಿಂದಿರುವ ಎರಡು ಕತೆಗಳು ನನಗೆ ದಿಟವಾಗಲೂ ಸರಿಗಾಣದು. ಅದರಲ್ಲೂ ಕೊಡುಗೈ ಬಲಿಯನ್ನು, ಅವನ್ನ ಒಳ್ಳೆತನನ್ನೇ ಬಳಸಿ ಅವನನ್ನು ಕೊಂದುದು, ಮಾದರಿಯಲ್ಲ. ಇನ್ನೊಂದು ನರಕನನ್ನು ಕ್ರುಶ್ಣನು ಕೊಂದನೆಂದು.
ನಾವು ತೆಂಕುಗನ್ನಡನಾಡಿನ ಮಂದಿಗೆ ಬಲಿಪಾಡ್ಯಮಿಯೇ ದೊಡ್ಡದು ದೀವಳಿಗೆಯಂದು( ಹಲವರಿಗೆ ಅಂತ ನನ್ನ ಅನಿಸು). ನಮ್ಮ ದೊರೆಯಾಗಿದ್ದ ಬಲಿಯು ಬಂದು ನಮ್ಮ ದನಕರುಗಳನ್ನು, ತನ್ನ ನಾಡಿಗರನ್ನು ನೋಡಿ ಹೋಗುವನು, ಅದಕ್ಕೆ ನಾವು ಅವನನ್ನು ಬೆಳಕು ಬೆಳಗಿ ಬರಮಾಡುವೆವು. ಯಾರೂ ವಾಮನನ ಪೂಜೆ ಅಂದು ಮಾಡುವುದು ನಮ್ಮ ಕಡೆ ಕಾಣೆನು.
ನಮ್ಮ ಕತೆಗಳಲ್ಲಿ, ಒಬ್ಬರ ಒಳ್ಳೆಯತನವನ್ನು ಬಳಸಿ ಅವರಿಗೆ ಕೇಡು ಬಗೆಯುವ ಹಲವು ಕತೆಗಳುಂಟು(ಮಹಾಬಾರತದ ತುಂಬ ಇದೆ ). ಆದರೆ.. ಅದನ್ನು ವಿಜೃಂಬಿಸಿ ಹಬ್ಬಮಾಡುವುದು, ಸಾಧುತನಕ್ಕಿಂತ ಕುಟಿಲತನವನ್ನೇ ಮೆರೆಸುವಂತೆ ಎಂದು ಎನ್ನ ಅನಿಸು.
ಈ ಬಗೆಯ ಕತೆಗಳು( ಒಬ್ಬರ ಒಳ್ಳೆತನವನ್ನೇ ಬಳಸಿ, ಅವರಿಗೆ ಕೇಡುಬಗೆಯುವುದು) ಬೇರೆ ದರುಮಗಳಲ್ಲೂ ಇವೆಯೇ?(ಜಿನ, ಬೌದ್ದ.. ಮುಂತಾದವು ). ಇಲ್ಲ ಇದು ಬರೀ ನಮ್ಮ ದರುಮದಲ್ಲಿ ಇರೋದೇ?
ಅರಿಮೆಯಲ್ಲಿ ತಪ್ಪುಗಳಿರೆ ಮನ್ನಿಪು!

- mahesha ರವರ ಬ್ಲಾಗ್
- Login or register to post comments
- 848 hits
- Email this blog





RSS:
ಪ್ರತಿಕ್ರಿಯೆಗಳು
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ಹೇಗಾದರೂ ಕೊಲ್ಲಲಿ, ಆದರೆ ದುಷ್ಟರು ಯಾರು ಎಂಬುದು ಮೂಲ ಪ್ರಶ್ನೆ ಅಲ್ಲವೆ? ಅದು ನಾವು ತಳೆಯುವ ನಿಲುವಿನ ಜತೆ ತಳಕು ಹಾಕಿಕೊಂಡಿರತ್ತೆ. ಅಂದು, ಇಂದೂ, ಎಂದೆಂದೂ...
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ನೀವು ಸರಿಯಾಗಿ ಜಾಡು/ಡೆ ಹಿಡಿದ್ರಿ...
ಇರಲಿ... ಮಂದಿಗೆ ಇದೆಲ್ಲ ಬೇಕಾ?
ದೀಪಾವಳಿ ಅಂತ ೫ ನಾಳು ಡಮ ಡಮ ಡಮಾರ್ ಅಂತ ತಲೆಚಿಟ್ಟು ಹಿಡಿಸಿದ್ರೆ, ಅವರಿಗೆ ಕುಶಿ.
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ಮಯೇಸ್, ನಿಮ್ಮ ಪ್ರಾಬ್ಲೆಮ್ಮು ಸರಿಯಾಗಿ ಅರ್ತಾಗ್ಲಿಲ್ಲ. ವಸಿ ಬಿಡಿಸಿ ನಮ್ಗೂ ಗೊತ್ತಾಗೋಂಗೆ ಏಳಿ ಪಿಲೀಜ್...
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
"ನಮ್ಮ ಕತೆಗಳಲ್ಲಿ, ಒಬ್ಬರ ಒಳ್ಳೆಯತನವನ್ನು ಬಳಸಿ ಅವರಿಗೆ ಕೇಡು ಬಗೆಯುವ ಹಲವು ಕತೆಗಳುಂಟು(ಮಹಾಬಾರತದ ತುಂಬ ಇದೆ ). ಆದರೆ.. ಅದನ್ನು ವಿಜೃಂಬಿಸಿ ಹಬ್ಬಮಾಡುವುದು, ಸಾಧುತನಕ್ಕಿಂತ ಕುಟಿಲತನವನ್ನೇ ಮೆರೆಸುವಂತೆ ಎಂದು ಎನ್ನ ಅನಿಸು."
ನಾನು ಕೇಳ್ಪಟ್ಟದನ್ನು ಹೇಳುವೆ...
ಶತ್ರುಗಳನ್ನು ಸದೆ ಬಡೆಯುವುದಲ್ಲಿ ಹಲವು ನೀತಿಗಳಿವೆ/ಬಗೆಗಳಿವೆ -
೧> ಕೆಟ್ಟವರು/ಶತ್ರು ಏನೇ ಮಾಡಲಿ, ನಾನು ಧರ್ಮವಾಗಿ ಸದೆ ಬಡಿಯುತ್ತೇನೆ - ಇದನ್ನು ಬೃಹಸ್ಪತಿನೀತಿ ಎನ್ನುವರು
೨> ಶತ್ರು ನ್ಯಾಯವಾಗಿ ಯುದ್ಧ ಮಾಡಿದಲ್ಲಿ, ನ್ಯಾಯಯುತವಾಗಿ ಯುದ್ಧ ಮಾಡುವುದು.
ಶತ್ರು ಅನ್ಯಾಯ ಮಾಡಿದಲ್ಲಿ/ಅನ್ಯಾಯಕ್ಕೆ ಸಹಕರಿಸಿದ್ದಲ್ಲಿ, ಅನ್ಯಾಯದಿಂದಲೇ ಗೆಲ್ಲುವುದು - ಇದನ್ನು ಶುಕ್ರ ನೀತಿ ಎನ್ನುವರು.
೩> ಶತ್ರು ಹೇಗೆ ಯುದ್ಧ ಮಾಡಲಿ, ಅನ್ಯಾಯದಿಂದಲೇ ಗೆಲ್ಲುವುದು. - ಇದನ್ನು ಕುಟಿಲ/ಕಣಕ ನೀತಿ ಎನ್ನುವರು
ಮಹಾಭಾರತ ದಲ್ಲಿ ಕೃಷ್ಣ ಶುಕ್ರ ನೀತಿ ಯನ್ನು ಪಾಲಿಸಿದ...
-ಶ್ರೀ
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ಶ್ರೀನಿವಾಸ ಅವ್ರೇ ನೀವು ಬಳಿಯಲ್ಲಿ ಯಾವ್ಯಾವ ಕೆಟ್ಟ ಗುಣಗಳನ್ನು ಗುರ್ತಿಸಿದಿರಿ?...
ನನ್ನ ಪ್ರಕಾರ ದಾನ ಬೇಡಿದ ಸಂದರ್ಭದಲ್ಲಿ ಆ ವಾಮನ ಇಡೀ ಒಂದು ಸಮುದಾಯಕ್ಕೆ (ಬೇಕಿದ್ರೆ ನೀವು ಒಂದು ಜಾತಿ ಅಂತ ಓದಿಕೊಳ್ಳಿ! ) ಕೆಟ್ಟ ಹೆಸರು ತಂದ.
ಸವಿತೃ
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ಶ್ರೀನಿವಾಸ ಅವ್ರೇ ನೀವು ಬಳಿಯಲ್ಲಿ ಯಾವ್ಯಾವ ಕೆಟ್ಟ ಗುಣಗಳನ್ನು ಗುರ್ತಿಸಿದಿರಿ?...
ನನ್ನ ಪ್ರಕಾರ ದಾನ ಬೇಡಿದ ಸಂದರ್ಭದಲ್ಲಿ ಆ ವಾಮನ ಇಡೀ ಒಂದು ಸಮುದಾಯಕ್ಕೆ (ಬೇಕಿದ್ರೆ ನೀವು ಒಂದು ಜಾತಿ ಅಂತ ಓದಿಕೊಳ್ಳಿ! ) ಕೆಟ್ಟ ಹೆಸರು ತಂದ.
ಸವಿತೃ
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ಸವಿತೃ ಅವರೇ,
ನಾನು ಬಲಿಯ ಕಥೆಯ ಬಗ್ಗೆ ಮರುಲಿಯಲಿಲ್ಲ, "ಮಹಾಭಾರತದ ತುಂಬ ಇದೆ" ಎಂಬುದಕ್ಕೆ ಉತ್ತರಿಸಿದೆ.
ನಾನು ಬಲಿ ಕಥೆಯನ್ನು ಮೂಲ ರೀತಿಯಲ್ಲಿ ಓದಿಲ್ಲ ಹಾಗಾಗಿ ನಾನು ಅದರ ಬಗ್ಗೆ ಮಾತಾಡಲು ಇಚ್ಚಿಸುವುದಿಲ್ಲ...
ಹೆಚ್ಚು ಜನರಿಗೆ ಮೂಲ ಕೃತಿಗಳ ಬಗ್ಗೆ ತಿಳಿದಿಲ್ಲ, ಹಾಗಾಗಿ ತಪ್ಪ ತಿಳುವಳಿಕೆಯನ್ನು ಹೊಂದಿದ್ದಾರೆ ಎಂದು ಮಾತ್ರ ಹೇಳಬಲ್ಲೆ.
ನನಗೆ ಇತ್ತೀಚಿಗೆ ತಿಳಿದು ಬಂದಂತೆ, ವಾಲ್ಮೀಕಿ ರಾಮಾಯಣದಲ್ಲಿ ಅಗಸನ ಕಥೆಯೇ ಇಲ್ಲವಂತೆ...ಇದು ಎಷ್ಟು ಜನರಿಗೆ ತಿಳಿದಿದೆ???
--ಶ್ರೀ
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ಬಲಿಯ ಕಥೆ ವಿಷ್ಣು ಪುರಾಣದಲ್ಲಿ ಬರುತ್ತದೆ ಅಲ್ಲವೇ?
ಅಲ್ಲಿ ಏನಾದರು ಉತ್ತರಗಳಿವೆಯೇ, ಇಂದ್ರನನ್ನು/ಇಂದ್ರ ಪದವಿಯನ್ನು ರಕ್ಷಿಸುವುದನ್ನು ಬಿಟ್ಟು ಅಥವಾ ಬಲಿ ಅಹಂಕಾರಿಯಗಿದ್ದ ಎಂಬುದನ್ನು ಬಿಟ್ಟು??
ವಿಷ್ಣು ಪುರಾಣ ಬರೆದವರು ಯಾರು??? ಶುಕ ಮಹಾಮುನಿಗಳೇ??
--ಶ್ರೀ
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ನೀವು ಹೇಳಿದಂತೆ ಬಲಿಯನ್ನು ಬಲಿಹಾಕಲು ಕಾರಣ ಇಂದ್ರ ಪದವಿ ಮೇಲೆ ಕಣ್ಣು ಇಟ್ಟಾನು ಎಂಬ ಭಯ.
ಈ ಬಲಿ ಅಹಂಕಾರಿಯಾಗಿದ್ದ ಬಗ್ಗೆ ನಾನು ಓದಿಲ್ಲ. ಅಹಂಕಾರಿಯಾಗಿದ್ದರೂ ತಪ್ಪೇನು?! ಅವನು ಯಾರಿಗೆ ಏನೂ ಮೋಸ ಮಾಡದಿದ್ದಾಗ?. ಅಲ್ಲದೆ ಅವ್ನು ಏನೂ ಇಂದ್ರನನ್ನು ಒದ್ದು ಓಡಿಸಿರಲಿಲ್ಲವಲ್ಲ.
ಇಂದ್ರನನ್ನು ರಕ್ಷಿಸಲು ಅಂದ್ರೆ ಈ ದೇವತೆಗಳ ನಾಡನ್ನು ಆಕ್ರಮಣದಿಂದ ಕಾಪಾಡಲು ವಿಷ್ಣು ಬಲಿಯನ್ನು ಕೊಂದರೆ ಅದು ವಿಷ್ಣುವಿನ ಪಕ್ಷಪಾತತನವಾಗುವುದಿಲ್ಲವೇ? ( ಇಲ್ಲಿ ವಿಷ್ಣು ದೇವರು ಮತ್ತು ಆತ ಎಲ್ಲರನ್ನೂ ಸರಿಸಮಾನಾವಾಗಿ ಕಾಣಬೇಕು ಎಂಬ ತರ್ಕವನ್ನು ಇಟ್ಟುಕೊಂಡು ಹೇಳುತ್ತಿದ್ದೇನೆ.) ವಿಷ್ಣು ಈ ದೇವತೆಗಳ ಗುಂಪಿನ ( ಅವ್ರು ಎಲ್ಲರೂ ಒಳ್ಳೆಯವ್ರ? ಈ ಇಂದ್ರ ಎಂತ ನೀಚ ಅಂತ ಎಲ್ರೂ ಕಥೆಗಳಲ್ಲಿ ಓದಿಯೇ ಇರ್ತೀವಿ.) ಪಕ್ಷಪಾತಿಯೇ? ಒಳ್ಳೆಯವರ ಪಕ್ಷಪಾತಿಯಲ್ಲವೇ?
ಈ ಇಂದ್ರನಿಗೆ ಮಾತ್ರ ಏಕೆ ಇಂದ್ರ ಪದವಿ? ಅವನಿಗಿಂತ ದಕ್ಷರು ಬಂದ್ರೆ ಯಾಕೆ ಬಿಟ್ಟು ಕೊಡಬಾರದು? ಈ ಇಂದ್ರ ಏನೋ ಮೋಸಗಾರ ಸರಿ.. ಆದ್ರೆ ವಿಷ್ಣು ಸಹಾ ಏಕೆ ಇನ್ತವನ್ನು ಒಲೈಸಬೇಕು?
ನಾನು ಮೂಲ ಪುಸ್ತಕ ಓದಿಲ್ಲ.
ಸವಿತೃ
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
"ಈ ಇಂದ್ರನಿಗೆ ಮಾತ್ರ ಏಕೆ ಇಂದ್ರ ಪದವಿ? ಅವನಿಗಿಂತ ದಕ್ಷರು ಬಂದ್ರೆ ಯಾಕೆ ಬಿಟ್ಟು ಕೊಡಬಾರದು? ಈ ಇಂದ್ರ ಏನೋ ಮೋಸಗಾರ ಸರಿ.. ಆದ್ರೆ ವಿಷ್ಣು ಸಹಾ ಏಕೆ ಇನ್ತವನ್ನು ಒಲೈಸಬೇಕು?"
ನಾನು ನಿಮ್ ಕಡೆನೇ ಈ ವಾದಲ್ಲಿ...ನನ್ಗೂ ನಿಮ್ಮಷ್ಟೇ ಗೊತ್ತು...
ಅದಕ್ಕೆ ನಾನು ವಾಮನನ ಪರವಾಗಿ ಮಾತಾಡಲಿಲ್ವಲ್ಲ
ಹೇಗೆ ವಿಷ್ಣು ಪುರಾಣದಲ್ಲಿ ಸಮರ್ಥನೆ ಆಗಿದೆ ಅಂಥ ತಿಳ್ಕೊಳ್ಳೋಣಾ ಅಂಥಾ...
--ಶ್ರೀ
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ನಾಲ್ಕನೇ ರೀತಿ - ಪುಣ್ಯಕೋಟಿ , ಗಾಂಧಿ , ಬುದ್ಧ ಇವರದ್ದು - ಕೆಟ್ಟವರನ್ನು ದ್ವೇಶಿಸದೆ , ಕೆಡುಕನ್ನು ಕಟ್ಟತನವನ್ನು ಪ್ರೇಮದಿಂದ , ಅಹಿಂಸೆಯಿಂದ ಗೆಲ್ಲುವದು , ಎದುರಾಳಿಯು ತನ್ನ ತಪ್ಪನ್ನು ಅರಿಯುವಂತೆ ಮಾಡುವದು . ಇದು ದ್ವೇಷವನ್ನು ಅಳಿಸಿ ಹಾಕುವದು .
"ಕನ್ನಡದ ಪುಲ್ಲೆನಗೆ ಪರಮ ಪಾವನ ತ
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ಮಹೇಶ ನೀವು ನೋಡುತ್ತಿರುವ ದ್ರಿಷ್ಟಿಕೊನವೂ ಸರಿಯಾಗಿ ಇದೆ!!
ಇದೇ ದೃಷ್ಟಿ ಕೋನದಲ್ಲಿ ನೋಡಿದರೆ ....
ಬಲಿ ಬೇರೆ ಕುಲದವ.. ಅಸುರ ... ಅನಾರ್ಯ ಅಂತ ಕರೀಬಹುದು. ಅಂದ್ರೆ ಅವೈದಿಕ!. ಇನ್ನು ಈ ವಾಮನ ವೈದಿಕ ಸಂಸ್ಕೃತಿಗೆ ಸೇರಿದವ. ( ಇವ್ನು ನಿಜವಾಗ್ಲೂ ವಿಷ್ಣು ವಾ?! ಏನೋ ..ಪುರಾಣಗಳ ರಾಜಕೀಯ ಬಲ್ಲವರು ಹೇಳಬೇಕು!). ಇದನು ನಾವು ಎರಡು ಸಂಸ್ಕೃತಿಗಳ ನಡುವಿನ ಕಲಹ ಅಂತ ಬೇಕಾದ್ರೆ ಅರ್ಥೈಸಬಹುದು.
ನನ್ನ ಓದಿನ ಮಟ್ಟಿಗೆ ಹೇಳಬೇಕು ಅಂದ್ರೆ .. ತನ್ನ ಕುಲವೊಂದೆ ಬಲಿ "ತಪ್ಪು". ಉಳಿದನ್ಟೀವನು ಒಬ್ಬಒಳ್ಳೆಯ ರಾಜ. ಜನಸಾಮಾನ್ಯರ ಹಿತ ಚಿಂತಕ.
ಈತ ಎಷ್ಟು ಒಳ್ಳೆಯ ರಾಜ ಅಂದ್ರೆ ವಿಷ್ಣು ಅವ್ನಿಗೆ ಮುಕ್ತಿ ಕೊಟ್ಟ!!.. ಮುಕ್ತಿಯ ಹೆಸರಲ್ಲಿ ಮೋಸ... ರಾಜ್ಯವನ್ನು ಕಸಿದುಕೊಳ್ಳುವುದು!!!.. ನಂಗೆ ಇದು ಮೋಸ ಅಂತಾನೆ ಅನ್ನಿಸ್ತಾ ಇರೋದು. ಹೋಗ್ಲಿ ಅದಕ್ಕೆ ಮುಕ್ತಿ ಅಂತ ಕರೀತಾರ?... ಪಾತಾಳ ಲೋಕಕ್ಕೆ ದಬ್ಬಿದ... ಹೋಗ್ಲಿ ಬಿಡಿ ದೊಡ್ದೊವ್ರು ಮಾಡಿದ್ದ ನಾವು ಸುಮ್ನೆ ಒಪ್ಪಿಕೊ ಬೇಕು... ...
ಕತೆ ಪ್ರಕಾರ ಬಲಿ ಅಂದು "ಬಲಿ ಪಾಡ್ಯಮಿ" ದಿನ ಮತ್ತೆ ಈ ಭೂಲೋಕಕ್ಕೆ ( ಈ ಒಂದು ದಿನ ಮಾತ್ರ) ರಾಜ
ಆಗ್ತಾನಂತೆ. ಆ "ಒಂದು ದಿನದ" ಸಂತೋಷ ಆ ದಿನದ ಆಚರಣೆ!
ಸವಿತೃ
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ಸವಿತು..
ಇಂಗೇ ನೋಡ್ತಾ ವೋದ್ರೆ.. ಇಂದು ನಾವ್ ಮಾಡೋ ಹೆಚ್ಚೂ ಕಮ್ಮಿ ಮೂರು-ಮುಕ್ಕಾಲು ವಬ್ಬಗಳು ಹಿಂಗೇ ಅವೆ...
ಅದಕ್ಕೇನೇಯ ನಮ್ಕೆ ದಿಟವಾದ ವಬ್ಬ ಅಂದ್ರೆ ಸಂಕ್ರಾಂತಿ ತೆರದವು.!! ಅಂತವಕ್ಕೆ ದಿಟವಾಗಲೂ ಬಲು ಅರಿತಗಳವೆ....
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ಮಹೇಶರೇ,
"ಇಂಗೇ ನೋಡ್ತಾ ವೋದ್ರೆ.. ಇಂದು ನಾವ್ ಮಾಡೋ ಹೆಚ್ಚೂ ಕಮ್ಮಿ ಮೂರು-ಮುಕ್ಕಾಲು ವಬ್ಬಗಳು ಹಿಂಗೇ ಅವೆ..."
ಯಾವುದವು???
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
೧) ವಿಜಯದಶಮಿ
ರಾಮನು ರಾವಣನನ್ನು ಕೊಂದ, ಅಲ್ಲ ಸಂಹಾರ ಮಾಡಿದ ನಾಳು
ಚಾಮುಂಡಿ ಎಮ್ಮೆ-ಅಸುರ/ಮಹಿಷನನ್ನು ಕೊಂದುದು
ಹೀಗೆ ನಮ್ ಸುಮಾರು ದೊಡ್ಡ ಹಬ್ಬಗಳು.
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ರಾವಣ/ಎಮ್ಮೆ-ಅಸುರ ಇಬ್ರೂ ಜನರಿಗೆ ಕಾಟ ಕೊಟ್ಟೊವ್ರು ಅಲ್ವಾ?
ಹಬ್ಬ ಮಾಡೊದ್ರಲ್ ಏನ್ ತಪ್ಪು?
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ನಿಮ್ಮ ಅನಿಸಿಕೆ
"ನಮ್ಮ ಕತೆಗಳಲ್ಲಿ, ಒಬ್ಬರ ಒಳ್ಳೆಯತನವನ್ನು ಬಳಸಿ ಅವರಿಗೆ ಕೇಡು ಬಗೆಯುವ ಹಲವು ಕತೆಗಳುಂಟು(ಮಹಾಬಾರತದ ತುಂಬ ಇದೆ ). ಆದರೆ.. ಅದನ್ನು ವಿಜೃಂಬಿಸಿ ಹಬ್ಬಮಾಡುವುದು, "
ರಾವಣ/ಎಮ್ಮೆ-ಅಸುರ ಕೊಂದದಕ್ಕೆ ಅಲ್ಲ ಅಂದ್ಕೋತೀನಿ...
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ರಾಮ ಯಾರಿಗೆ ಕೆಟ್ಟುದ್ದು ಮಾಡಿದ.. ತುಸು ಬಿಡಿಸಿ ಹೇಳಿ..
ಸೀತಮ್ಮನ್ನ ಹೊತ್ತೊಯ್ದುದು ಅಲ್ಲವೆ.. ಆದರೆ ಸೀತಮ್ಮಗೆ ಅವನು ಕೆಟ್ಟರೀತಿಲಿ ನೋಡಿಕೊಂಡನೆ..ಮೂಗು ಕತ್ತಿರಿಸಿದನೆ?
ಆದರೆ ನಮ್ಮ ರಾಮದೇವರು.. ತಮ್ಮನ್ನ ಬಿಟ್ಟು ಪಾಪ ಆ ರಾವಣನ ತಂಗೆ ಮೂಗು ಕತ್ತರಿಸಲು ಹೇಳಿಲ್ಲವ.. ಇದೆಲ್ಲ ಇವರು ಮಾಡಿದ್ದು ಸರಿ.. ಅವರು ಮಾಡಿದ್ದು ತಪ್ಪು ಅಂದರೆ ಸರಿಕಾಣ್ತದ..
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ಕವಿ...
ಅದಲ್ಲದೇ.. ರಾವಣನ ತಮ್ಮ ವಿಬೀಸಣನಂನೇ ಬುಟ್ಟಿಗೆ ಹಾಕ್ಕೊಂಡು ಮನೆ-ಒಡಕು ಕೆಲಸ ಮಾಡಿದ್ದು? ರಾಮನಿಗೆ ಲಕ್ಸ್ಮಣ ಹೆಂಗೋ ಹಂಗೆ, ರಾವಣಂಗೂ ವಿಬೀಸಣ ಅಲ್ವ...! ಇವನ್ ತಮ್ಮ ಮಾತ್ರ ತಮ್ಮ, ಅವನ್ ತಮ್ಮ ಏನ್ ಗುಮ್ಮನಾ?
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ರಾವಣ ಯಾರಿಗೆ ಕೆಟ್ಟುದ್ದು ಮಾಡಿದ.. ತುಸು ಬಿಡಿಸಿ ಹೇಳಿ..
ಸೀತಮ್ಮನ್ನ ಹೊತ್ತೊಯ್ದುದು ಅಲ್ಲವೆ.. ಆದರೆ ಸೀತಮ್ಮಗೆ ಅವನು ಕೆಟ್ಟರೀತಿಲಿ ನೋಡಿಕೊಂಡನೆ..ಮೂಗು ಕತ್ತಿರಿಸಿದನೆ?
ಆದರೆ ನಮ್ಮ ರಾಮದೇವರು.. ತಮ್ಮನ್ನ ಬಿಟ್ಟು ಪಾಪ ಆ ರಾವಣನ ತಂಗೆ ಮೂಗು ಕತ್ತರಿಸಲು ಹೇಳಿಲ್ಲವ.. ಇದೆಲ್ಲ ಇವರು ಮಾಡಿದ್ದು ಸರಿ.. ಅವರು ಮಾಡಿದ್ದು ತಪ್ಪು ಅಂದರೆ ಸರಿಕಾಣ್ತದ..
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
"ಸೀತಮ್ಮನ್ನ ಹೊತ್ತೊಯ್ದುದು ಅಲ್ಲವೆ."
ಇದು ಕೆಡುಕು...ಮೂಲ ಕೃತಿಯಲ್ಲಿದೆ...
"ನಮ್ಮ ರಾಮದೇವರು.. ತಮ್ಮನ್ನ ಬಿಟ್ಟು ಪಾಪ ಆ ರಾವಣನ ತಂಗೆ ಮೂಗು ಕತ್ತರಿಸಲು ಹೇಳಿಲ್ಲವ"
ಹೀಗೆಂದು ವಾಲ್ಮೀಕಿ ರಾಮಾಯಣದಲ್ಲಿದೆಯೇ?? ಇದು ನಿಜವೇ?? ನಂನ್ಗೆ ಗೊತ್ತಿಲ್ಲ...ಮೂಲ ಕೃತಿ ಓದಿದ್ದವರು, ತುಸಿ ಬಿಡಿಸಿ ಹೇಳಿ....
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ರಾವಣ, ಮಹಿಷ ಜನರಿಗೆ ಕಾಟ ಕೊಟ್ರು ಅಂತ ನೀವು ನೋಡಿದ್ರ?
ರಾವಣನನ್ನು ಹೊಗಳಿ ಹಲವು ರಾಮಾಯಣಗಳಿವೆ.. ಬರೀ ಕತೆ( ಕಟ್ಟುಕತೆ)ಗಳ ಮೇಲೆ ... ಅವರು ಕೆಟ್ಟೊರು ಅನ್ನೋದು ಸರಿಯಾ?
ಹಾಗಾದ್ರೆ ಬಲಿ ಯಾರಿಗೆ ಕಾಟ ಕೊಟ್ಟಿದ್ದ? ಇಂದ್ರ ಗೌತಮ ಹೆಂಡ್ರನ್ನ ಕೆಡಿಸಿದಕ್ಕೆ ವಿಶ್ಣು ಯಾಕೆ ಅವನಿಗೆ ದಂಡನೆ ಮಾಡಲಿಲ್ಲ?
ಇನ್ನು ವಿಶ್ಣುನೇ ಬೆತ್ತಲಾಗಿ ವೋಗಿ, ಒಬ್ಬಯಮ್ಮಂದು ಹದಿಬದೆತನ ಕೆಡಿಸಿದ್ದು.. ಇವೆಲ್ಲ ಸರಿಯಾ?
ಒಂದು ಕಣ್ಣಿಗೆ ಸುಣ್ಣು, ಇನ್ನೊಂದಕ್ಕೆ ಬೆಣ್ಣೆ.. ಇದೇ ಧರ್ಮ!?
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
"ಇಂದ್ರ ಗೌತಮ ಹೆಂಡ್ರನ್ನ ಕೆಡಿಸಿದಕ್ಕೆ ವಿಶ್ಣು ಯಾಕೆ ಅವನಿಗೆ ದಂಡನೆ ಮಾಡಲಿಲ್ಲ?"
ಅಂದ್ರೆ ಇಂದ್ರಂನ ಕೇಡುಗ ಅಂತ ಯಾಕೆ ಕೊಲ್ಲಲಿಲ್ಲ?
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ರಾವಣನ character ಜನರಿಗೆ ತಿಳಿದು ಬಂದಿದ್ದು ವಾಲ್ಮೀಕಿ ರಾಮಾಯಣದಿಂದ ಅಲ್ಲವೇ??

ಅದನ್ನು ಮಾನ ದಂಡವಾಗಿ ಉಪಯೋಗಿಸಬೇಕು...
ವಾಲ್ಮೇಕಿಯಂದಲೇ ರಾಮ ದೇವರ ಅವತಾರ ಎಂದು ನಂಬಿಕೆ...
ನಾನು ನಾಳೆ ಬೇರೆ ರೀತಿ ರಾಮಾಯಣ ಬರೆದು ಇನ್ಯಾರೋHero ಅಂದ್ರೆ...ಅದರಲ್ಲಿ ರಾಮ ದೇವರಲ್ಲ ಅಲ್ವ
ಬೇರೆ ಕಟ್ಟು ಕಥೆ ಬಗ್ಗೆ ಯಾಕೆ ತಲೆ ಕೆಡಿಸ್ಕೋಬೇಕು??? ನೀವು ಅದನ್ನ ನಂಬೋ ಹಾಗಿದ್ರೆ ರಾಮನ್ನ ದೇವರು ಅನ್ನಬೇಡಿ... ದೇವರು ಆಗಿಲ್ಲದಾಗ ಬಯ್ಯೊದ್ಯಾಕೆ???
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ಅಹಾ!!
ಕೊನೆ ಮಾತು..( ಸುಮ್ನೆ ಬೇಜಾರ್ ಮಾಡಕ್ಕೆ ಇಶ್ಟ ಇಲ್ಲ )
ವಾಲ್ಮೀಕಿ ೨೪ ಗಂಟೆ ಸತ್ಯವನ್ನೇ ಹೇಳ್ತಿದ್ರು ಅಂತ ಏನ್ ನಿಕ್ಕುವ/ಗ್ಯಾರಂಟಿ?
ವಾಲ್ಮೀಕಿಯೇ ಮೊದಲು ರಾಮಾಯಣ ಬರೆದುದು ಅನ್ನೋದು ಬರೀ ನಂಬುಗೆ ಹೊರತು absolute ದಿಟ ಅಲ್ಲ.. ವಾಲ್ಮೀಕಿ ಕೂಡ ನಾರದ ಹೇಳಿದಂಗೆ ಬರೆದಿರೋದಂತೆ...
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
"ವಾಲ್ಮೀಕಿ ೨೪ ಗಂಟೆ ಸತ್ಯವನ್ನೇ ಹೇಳ್ತಿದ್ರು ಅಂತ ಏನ್ ನಿಕ್ಕುವ/ಗ್ಯಾರಂಟಿ?"

ಏನು ಇಲ್ಲ...
ನಾನು ಹೇಳಿದ್ದು ಇಷ್ಟೇ...
ರಾಮ ದೇವರ ದರ್ಜೆ ಪಡೆದಿದ್ದು ವಾಲ್ಮೀಕಿ ಕಥೆಯಿಂದ...ನಂಬಿದ್ರೆ ನಂಬಿ ಬಿಟ್ರೆ ಬಿಡಿ...
ಬೇರೆ ಕಥೆಗಳಿದ್ದರೆ, ನಿಮ್ಮ ಅಭಿಪ್ರಾಯವನ್ನು ಆ ಕಥಗೆ ಸೀಮಿತಗೊಳಿಸಿ...ಬೇರೆ ಕಥೆಗೆ ನಂಟು ಹಾಕ್ಬೇಡಿ...
"ವಾಲ್ಮೀಕಿ ಕೂಡ ನಾರದ ಹೇಳಿದಂಗೆ ಬರೆದಿರೋದಂತೆ..."
ಈ ಮಾಹಿತಿ ಎಲ್ಲಿದೇ??
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
"ವಾಲ್ಮೀಕಿ ಕೂಡ ನಾರದ ಹೇಳಿದಂಗೆ ಬರೆದಿರೋದಂತೆ..."
ಈ ಮಾಹಿತಿ ಎಲ್ಲಿದೇ??
ವಾಲ್ಮೀಕಿ ರಾಮಾಯಣದಲ್ಲೇ ಅಲ್ವ!!
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ಲವ ಕುಶರು ಹೇಳಿದಂತೇ ಬರೆದಿರೋದು ಅಲ್ವಾ??!!
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ಮತ್ತೆ ಒಮ್ಮೆ ನೋಡಿದೇ...ಎರಡೂ ಸರಿಯೇ...
ನಾರದ ಹೇಳಿದ್ದೂ, ಲವ ಕುಶ ಹೇಳಿದ್ದೂ...
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ಅದೇ ಸಿವರಾಜ್ಕುಮಾರು ಉಪೇಂದ್ರ ಹೊಸ ಸಿನಿಮಾ, ಲವ-ಕುಸ, ಆ ಲವ-ಕುಸಾನಾ???
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ಗೊತ್ತಿಲ್ಲ ಗುರುವೇ...!
ಉ: ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
ಮಾಯ್ಸ,
ಒಂದು ನೀವು ಅರಿತ ಮಾಡ್ಕೊಳ್ಳಬೇಕು
ಮಬ್ಬಿಗ (ರಕ್ಕಸ)ರು by default ಕೆಟ್ಟವರಂತೆ.
ಈಗ ನೀವು ಪ್ರೂಗ್ರಾಮಿಂಗ್ನಲ್ಲಿ ವೇರಿಯಬಲ್ ಡಿಕ್ಲೇರ್ ಮಾಡಲ್ವ ಅದಕ್ಕೆ ಒಂದು ಡೀಪಾಲ್ಟ್ ಬೆಲೆ ಕೊಡಲ್ವ ಹಂಗೆ 
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು