ಇಪ್ಪತ್ತಯ್ದಾಗ್ತಾ ಇದೆ!
ಇನ್ನು ಕೆಲವು ದಿನಗಳಲ್ಲಿ ನನಗೂ, ಹರಿಯಂತೆ ಇಪ್ಪತ್ತಯ್ದು ಆಗುವುದು..
ಹರಿ ಹೇಳಿಕೊಂಡಿರುವ ಎಲ್ಲ ಬೇಸರಗಳ ಜೊತೆ ಹಲವು ಹೇಳಲಾಗದ ನಲಿವುಗಳೂ ಉಂಟು..
ನನಗೆ ಇಪ್ಪತ್ತಾದಾಗ ಬಲು ಬೇಸರವಾಗಿದ್ದು.. ಟೀನ್ ಏಜ್ ಹೋಯ್ತಲ್ಲ.. ಇನ್ನು ಮನೆಯವರೆಲ್ಲ ’ಹುಡುಗಾಟಿಕೆ ಸಾಕು’ ಒಂದು ಕತ್ತೆ ವಯಸ್ಸಾಯ್ತು ಎಂದು ಕಟ್ಟುನಿಟ್ಟು ಮಾಡ್ತಾರೆ ಅಂತ. ಇಪ್ಪತ್ತಾದ ಮೇಲೇ ಗೆಳೆಯರು, ದಿಟವಾದ ಗೆಳಯರು ಸಿಕ್ಕಿದ್ದು.
ಈ ಇಪ್ಪತ್ತಯ್ದನ್ನು ಮುಟ್ಟುವ ಮುನ್ನ, ಉಳಿದಿರುವ ಗೆಳೆಯರೇ ಇನ್ನು ಮಿಕ್ಕ ಬಾಳಿಗೆ. ಈಗ ಹೊಸ ಗೆಳೆಯರನ್ನು ಮಾಡಿಕೊಂಡು, ಹತ್ತಿರವಾಗಿಸಿಕೊಳ್ಳೋದು ಬಲು ಕಶ್ಟವೇ. ನಮ್ಮ ಕಾಲೇಜಿನ ದಿನಗಳಲ್ಲಿ, ಕೆಲಸಕ್ಕೆ ಸೇರಿದ ಹೊಸತರಲ್ಲಿ ಹೊಸಬರ ಜೊತೆ ಇದ್ದ ಸಲಿಗೆಯ ಮಾತು ಈಗ ಮೆಲ್ಲಗೆ ಮಾಯವಾಗ್ತಾ ಇದೆ ಅನ್ನಿಸ್ತದೆ.
ಹಲವು ಗೆಳೆಯರು ಹೆಂಗೆಳತಿಯರನ್ನು ಪಡೆದು ತಮ್ಮ ಜೀವನ ಸಾರ್ಥಕ ಮಾಡಿಕೊಂಡರು. ಈಗ ತಿಂಗಳಿಗೊಮ್ಮೆ ಕೂಡ ಅವರ ಜೊತೆ ಮಾತಾಡೋದು ದೊಡ್ಡ ಸಾಹಸ. ಕೆಲವರು ಗೆಳತಿರನ್ನು ಕಳೆದುಕೊಂಡು ನೊಂದ-ಹೃದಯಿಗಳಾಗಿದ್ದಾರೆ;ಅವರ ರಿಪೀರಿ ಮಾಡವ ಹೊಣೆಹೊತ್ತ ಗೆಳಯರೂ ಇದ್ದಾರೆ. ಕೆಲವರು ಮದುವೆಯಾಗೂ ಇದ್ದಾರೆ. ಮಿಕ್ಕ ನಮ್ಮಂತ ಬಡಪಾಯಿಗಳು ಮಾತ್ರ ದಿನಾ ಪೋನಿನಲ್ಲಿ ಮಾತಾಡಿಕೊಂಡು, ವೀಕೆಂಡು ಮಾಲುಗಳಲ್ಲಿ ಅಲೆದಾಡಿಕೊಂಡು ಇದ್ದೀವಿ.
ನಮ್ಮಗಳ ಮನೆಗಳಲ್ಲಾಗಲೇ ಮದುವೆಯ ಮಾತುಗಳ ಗುಲ್ಲು ಎದ್ದಿದೆ. ಬೆಂಗಳೂರು ಬಲು ಕೆಟ್ಟ ಊರು. ಯಾವುದೋ ಭಾಷೆಜಾತಿಕುಲದ ಹುಡುಗಿಯ ಹಿಂದೆ ನಮ್ಮ ಹುಡುಗರು ಬಿದ್ದು ಹಾಳಾಗುವ ಮೊದಲು, ಅವರಿಗೊಂದು ನಮ್ಮ ಜಾತಿ ಒಳ್ಳೆ ಮನೆಯ ಹುಡುಗಿಯನ್ನು ಗಂಟು ಹಾಕಬೇಕೆಂದು ಅಮ್ಮ-ಅಪ್ಪಂದಿರಿಗೆ ಚಿಂತೆ ಎದ್ದಿದೆ. ಒಟ್ಟಿನಲ್ಲಿ ನಮ್ಮ ಸ್ವಾತಂತ್ರ್‍ಯ ಹರಣಕ್ಕೆ ಹೊಂಚು.
ಇನ್ನು ಮುಂದಿನ ವಿದ್ಯಾಭ್ಯಾಸ,
ಎಮ್. ಟೆಕ್. .. ಮುಂತಾದವು ಈಗ ಮನಸ್ಸಿನಲ್ಲಿ ಇದ್ರೂ, ಅದು ಒಂದು ತರ ಕಷಾಯ. ಕುಡಿದರೆ ಒಳ್ಳೇದು ಆದ್ರೆ ರುಚಿಸಲ್ಲ.
ಒಟ್ಟಿನಲ್ಲಿ.. ಮುಂದೆ ಏನು ಎಂಬ ದೊಡ್ಡ ಪ್ರಶ್ನೇ, ದಿನೇ ದಿನೇ ದೊಡ್ಡದಾಗ್ತಾ ಇದೆ. ಅದಕ್ಕೆ ಉತ್ತರ ಅಂತ ಹಲವರು ಹೊರದೇಶಕ್ಕೆ ಹಾರುವ ತಯಾರಿ ಮಾಡಿದ್ದಾರೆ, ಇನ್ನು ಕೆಲವರು ಕೆಲಸ ಬದಲಾಯಿಸ್ತಾ ಇದ್ದಾರೆ. ಇನ್ನು ಕೆಲವರು ಬೀಚುಗಳು, ದೇವಳಗಳು ಹೀಗೆ ಪ್ರವಾಸ ಮಾಡುತ್ತಾ ಉತ್ತರ ಹುಡುಕ್ತಾ ಇದ್ದಾರೆ.
ನನ್ನ ಇಪ್ಪತ್ತಯ್ದನೇ ಹುಟ್ಟುಹಬ್ಬಕ್ಕೆ ನಾವು ಗೆಳೆಯರೆಲ್ಲ ಸೇರೋಣ, ಅಂತ ಈಗಲೇ ಮಿನ್ನೋಲೆಗಳನ್ನು, ಪೋನುಗಳನ್ನು ಹಚ್ಚಬೇಕು.. ಎಲ್ಲರು ಬಿಜಿ.. ೧೦ ಮಂದಿಗೆ ತಿಳಿಸಿದರೆ ೪ ಜನ ಬರ್ತಾರೆ. ![]()
ಹಾಗೆ ಇಪ್ಪತ್ತಯ್ದು ತುಂಬಿದವರಿಗೆ ಒಳ್ಳೆಯ ಹಾರೈಕೆ.
ಆದ್ರೆ ತಲೆ-ಬುದ್ದಿ-ಹೃದಯ ಜೋಪಾನ
![]()

- mahesha ರವರ ಬ್ಲಾಗ್
- Login or register to post comments
- 565 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಇಪ್ಪತ್ತಯ್ದಾಗ್ತಾ ಇದೆ!
ಚಂದಾಗೈತ್ರೀ
ಉ: ಇಪ್ಪತ್ತಯ್ದಾಗ್ತಾ ಇದೆ!
ನಿಮ್ಮ ಚುಟುಕು ಲೇಖನಗಳು, ಕುಹಕಿಡಿಗಳು, ಘನ ಮತ್ತು ಗಹನವಾದ ಪ್ರತಿಕ್ರಿಯೆಗಳು ಎಲ್ಲಾ ಓದಿ ಯಾರೋ ಭಾರೀ ವಯಸ್ಸಾದವರಿರಬೇಕು ಅಂದ್ಕೊಂಡಿದ್ದೆ
ನೀವು ಇಷ್ಟು ಚಿಕ್ಕೋರು ಅಂತ ಗೊತ್ತಾಗಿದ್ದು ಇವತ್ತೇ. ನನ್ನ ಇಬ್ಬರು ಗಂಡು ಮಕ್ಕಳೂ ಕೂಡ ನಿಮಗಿಂತ ದೊಡ್ದವರು.
ಅಡ್ವಾನ್ಸಾಗಿ ಹುಟ್ಟುಹಬ್ಬದ ಶುಭಾಶಯಗಳು ಹಾಗೂ ನಾನು ನಿಮಗಿಂತ ಹೆಚ್ಚು ವಯಸ್ಸಾದವನಾದ್ದರಿಂದ ಆಶೀರ್ವಾದ ಕೂಡಾ!
ನವರತ್ನ ಸುಧೀರ್
ಅರವತ್ತರ ತಪ್ಪಲಲ್ಲಿರುವ ಯುವಕ.
ಉ: ಇಪ್ಪತ್ತಯ್ದಾಗ್ತಾ ಇದೆ!
ನವರತ್ನ ಸುಧೀರರೇ,
ತುೞಿಲು
ನಿಮ್ಮ ಆಶೀವಾದಕ್ಕೆ, ಶುಭಾಶಯಗಳಿಗೆ ಮತ್ತು ಒಲುಮೆಗೆ ನನ್ನೀ ನಲ್ಮೆಯ ನನ್ನಿ.
ಇಂತೀ ತಲೆವಾಗಿ,
ಮಹೇಶ
ಉ: ಇಪ್ಪತ್ತಯ್ದಾಗ್ತಾ ಇದೆ!
ಒಳ್ಳೆಯದಾಗಲಿ
ಮುಂಬರುವ ದಿನಗಳಲ್ಲೆಲ್ಲ.
ಹುಟ್ಟುಹಬ್ಬದ ನಲ್ವಾರೈಕೆಗಳು.
-ಹಂಸಾನಂದಿ
ಉ: ಇಪ್ಪತ್ತಯ್ದಾಗ್ತಾ ಇದೆ!
ಧನ್ಯವಾದಗಳು!
ಉ: ಇಪ್ಪತ್ತಯ್ದಾಗ್ತಾ ಇದೆ!
ಹ್ಯಾಪಿ ಬರ್ತಡೇ ಟೂ ಯೂ. ಹ್ಯಾಪಿ ಬರ್ತಡೇ ಟೂ ಯೂ...ಹ್ಯಾಪಿ ಬರ್ತಡೇ ಟೂ ಡಿಯರ್ ಮಹೇಶ, ಹ್ಯಾಪಿ ಬರ್ತಡೇ ಟೂ ಯೂ.
ಆದರೂ ಇದು ತುಂಬಾ ಅನ್ಯಾಯ. ಇನ್ನೂ ಇಪ್ಪತ್ತೈದು ತುಂಬದವರಿಗೆ ಏಕೆ ಒಳ್ಳೆಯ ಹಾರೈಕೆ ಇಲ್ಲ.
ಉ: ಇಪ್ಪತ್ತಯ್ದಾಗ್ತಾ ಇದೆ!
ನಿಂಗೆ ಗೊತ್ತು ನಂಗೆ ಏವೊತ್ತು ೨೫ ತುಂಬ್ತದೆ ಅಂತ..
ಆವೊತ್ತು ಒಂದು ದೊಡ್ಡ ಉಡುಗೊರೆ ತಗೊಂಡು ಬಾ.. ಪಾರ್ಟಿ..ಇಇಇಇಇ!!
ಕನ್ನಡದಲ್ಲಿ ಹಾರೈಸಿದ್ರೆ ನನ್ನಿ...
ಇಂಗ್ಲೀಸಲ್ಲಿ ಹೇಳಿದ್ದಿ. ಅದಕ್ಕೆ ತ್ಯಾಂಕ್ಸು!
ಆದ್ರೆ ಇನ್ನು ೧೧ ನಾಳುಗಳವೆ!
ಉ: ಇಪ್ಪತ್ತಯ್ದಾಗ್ತಾ ಇದೆ!
ಕನ್ನಡದ ಯುವ ಮನಸ್ಸುಗಳಿಗೆ ಶುಭಾಶಯಗಳು , ಇಷ್ಟೊಂದು ಹುಮ್ಮಸ್ಸಿನ ನಿಮ್ಮಂತಹ ಯುವ ಪಡೆ ಕನ್ನಡಕ್ಕಿರುವಾಗ ಇನ್ನೇನು ಚಿಂತೆ ?ಸಂತಸದ ಅಭಿನಂದನೆಗಳು .
ಉ: ಇಪ್ಪತ್ತಯ್ದಾಗ್ತಾ ಇದೆ!
ನನ್ನಿ!
ಉ: ಇಪ್ಪತ್ತಯ್ದಾಗ್ತಾ ಇದೆ!
ಹರೆಯ ಹೊರಸೂಸುತ ತಂದಿಹ ಸವಿಯ ನಸುನಾಚದೆ ದೋಚುವ ಸಮಯ ಈ ಜನುಮದಿನ ಅಪೂರ್ವ ಅಮೂಲ್ಯ ಮಹಾದಿನ!
ಪಿ.ಬಿ. ಹಾಡಿರುವ ಹಳೆಯ ಹಾಡೊಂದು ಈ ರೀತಿಯಲ್ಲಿದೆ. ತಮ್ಮ ಜನುಮದಿನಕ್ಕೂ ಇದೇ ಹಾರೈಕೆ.
______
ಬೊಳುಂಬು
ಉ: ಇಪ್ಪತ್ತಯ್ದಾಗ್ತಾ ಇದೆ!
ನೀವು ಹೇಳಿದ್ದೆಲ್ಲ ಸರಿಯಾಗಿದೆ. ೨೫ ಓಡ್ತಾ ಇರೊ (ಎಲ್ಲಿಗೆ ಅಂತ ಗೊತ್ತಿಲ್ಲ) ನಂಗೆ ನೀವು ಬರ್ದಿರೊ ಪ್ರತಿಯೊಂದೂ ನನ್ನ ತಲೆ ಒಳ್ಗೆ ಕೈ ಹಾಕಿ ಅಲ್ಲಿ ಇರೊ ಯೋಚನೆಗಳನ್ನೆಲ್ಲ ತೆಗೆದು ಇಲ್ಲಿ ಇಟ್ಟಿದಿರೇನೋ ಅನ್ನೊ ಹಾಗಿದೆ
ಹುಟ್ಟುಹಬ್ಬದ ಶುಭ ಹಾರೈಕೆಗಳು, ಒಳ್ಳೆದಾಗಲಿ ನಿಮ್ಗೆ.
ಉ: ಇಪ್ಪತ್ತಯ್ದಾಗ್ತಾ ಇದೆ!
ಬರ್ದಿರೋ = ಬರ್ದು( ಸಾವು)
ಇರಲಿ..!
ಒಮ್ಮೆ ಸಿಕ್ಕಿ.. ಹರಟೋಣ...
ನಿಮಗೆ ಲಕ್ಕಿರಲಿ!
ಉ: ಇಪ್ಪತ್ತಯ್ದಾಗ್ತಾ ಇದೆ!
ಮಹೇಶ,
)
೨೫ ತಲುಪುತ್ತಿರುವುದಕ್ಕೆ ಶುಭಾಶಯಗಳು.
(ನನಗೂ ೨೪ ವರ್ಷ ಆಗಿ ೩೦೦ ತಿಂಗಳು ಆಗುತ್ತಿದೆ.
ನಿಮ್ಮ ಆಸೆಗಳೆಲ್ಲಾ ಈಡೇರಲಿ ಎಂದು ಹಾರೈಸುವ
ಗಣೇಶ.
ಉ: ಇಪ್ಪತ್ತಯ್ದಾಗ್ತಾ ಇದೆ!
ಅಣ್ಣ ನನ್ನಿ...
೨೪ ವರುಶ + ೨೫(೩೦೦ / ೧೨) = ೪೯ ವರುಶ ..
ನಿಮಗೂ ಒಳ್ಳೇದಾಗಲಿ!
ಉ: ಇಪ್ಪತ್ತಯ್ದಾಗ್ತಾ ಇದೆ!
ತಲೆ-ಬುದ್ದಿ-ಹೃದಯ ಜೋಪಾನ ಇಟ್ರಾಗ್ಲಿಲ್ಲ. ಸ್ವಲ್ಪ ಬಳಕೆನೂ ಮಾಡ್ತಾ ಇರು
೨೫ರ ಸುಬಾಸಯ.
ಉ: ಇಪ್ಪತ್ತಯ್ದಾಗ್ತಾ ಇದೆ!
ಜೋಪಾನ ಅಶ್ಟೇ...
ಬಳಸೋದು, ಬಿಡೋದು.. ಬಳಸಿ ಜೋಪಾನ ಕೆಡಿಸಿಕೊಳ್ಳೋದು.. ಇದೆಲ್ಲ ಯಾವ ನಾಯಿ ಪಾಡು..!!