ಆ ಈ ಊ ಏ
ಊ ಎಳೆಯಲ್ಲಿ ಬೊಳುಂಬು ಅವರ ಕೇಳ್ಮೆಗಾಗಿ ಬರೆದಿರುವೆನು
ಆ = thatಗೆ ನಂಟಾದ. [ ದೂರ ನಿಕ್ಕುವವಾದ; far and determinate ]
ಆ, ಅದು, ಅವನು, ಅವಳು, ಅವರು, ಅಲ್ಲಿ, ಅಂದು, ಅತ್ತ, ಅವೊತ್ತು, ಅಂತು, ಅಪ್ಪಗೆ/ಅಹಗೆ/ಹಾಗೆ......
ಈ = thisಗೆ ನಂಟಾದ, [ ಹತ್ತಿರ ನಿಕ್ಕವವಾದ; near and determinate ]
ಈ, ಇದು, ಇವನು, ಇವಳು, ಇವರು, ಇಲ್ಲಿ, ಇಂದು, ಇತ್ತ, ಇವೊತ್ತು, ಇಂತು, ಇಪ್ಪಗೆ/ಇಹಗೆ/ಹೀಗೆ
ಏ = where/which/who ಗೆ ನಂಟಾದ [ query;ಕೇಳ್ಮೆ]
ಏ, ಎದು, ಎವನು, ಎವಳು, ಎವರು, ಎಲ್ಲಿ, ಎಂದು, ಎತ್ತ, ಎವೊತ್ತು, ಎಂತು, ಎಪ್ಪಗೆ/ಎಹಗೆ/ಹೇಗೆ [ ಗಮನ ಎದು, ಎವನು, ಎವಳು, ಎವರು ಇವು ತೆಲುಗು-ತಮಿಳಲ್ಲಿ ಇಂದೂ ಬಳಕೆಯಲ್ಲಿದೆ ]
ಊ = something/somewhere/someoneಗೆ ನಂಟಾದ [ undeterminate, ನಿಕ್ಕುವವಲ್ಲದ ]
ಊ, ಉದು, ಉವನು, ಉವಳು, ಉವರು, ಉಲ್ಲಿ, ಉಂದು, ಉತ್ತ, ಉವೊತ್ತು, ಉಂತು, ಉಪ್ಪಗೆ/ಉಹಗೆ/ಹೂಗೆ [ ಇವು ಇಂದು ಬಳಕೆ ತಪ್ಪಿವೆ; ಹೂಗೆ ಬಗ್ಗೆ ಗೊತ್ತಿಲ್ಲ ].
=========================================
ಮಾದರಿ:
ಉವರುವರ ಮಾತು ಕೇಳಬೇಡ = ಯಾರಯಾರೋ ಮಾತು ಕೇಳಬೇಡ
ಉಲ್ಲಿ ಇದ್ದೆ = ಎಲ್ಲೋ ಇದ್ದೆ
ಊ ರಾಮ = ಯಾರೋ ಒಬ್ಬ ರಾಮ
ಏ ರಾಮ = ಯಾವ ರಾಮ?
ಎವರು = ಯಾರು[ ಹಲವು ]
ಎದನು = ಯಾವನು
ಗಮನ: ಸಕ್ಕದದ ಯಃ/ಯಾ/ಯತ್ರ/ಯದಾ ಇವಕ್ಕೆ ಉವನು/ಉವಳು/ಉಲ್ಲಿ/ಉಂದು ಇವು ಸಮವಾಗಬಹುದು. ಆದರೆ
ಕಃಚಿತ್/ಕಃಚನ/ಕಿಂಚಿತ್/ಕಾಚಿತ್/ಕಿಂಚನ/ಕಾಚನ = ಉವನು/ಉವಳು/ಉವರು
ಕದಾಚಿತ್ = ಉಂದು
ಕ್ವಚಿತ್ = ಉಲ್ಲಿ ಇವು ಇವೆ.
ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ
ಉಲ್ಲಿ ( ಎಲ್ಲೋ ಒಂದು ಕಡೆ ) ಹೆಂಗಸರಿಗೆ ತುಳಿಲು ಅಲ್ಲಿ ಬಿಡುಗಣ್ಣರು ತಿರುಗುವರು.
ಯಾನಿ ಕಾನಿ ಚ ಪಾಪಾನಿ
ಉವು( ಯಾವುವೋ) ಎವು ( ಯಾವುವು ) ಪಾಪಗಳು!!
ಕೆಲವು ಇಂನೂ ಬಳಕೆಯಲ್ಲಿವೆ.
ಮಾಡುವುದು = ಮಾಡುವ + ಉದು = ಯಾವುದು ಮಾಡುವ ಅದೋ ಅದು;
ಯಾವುದು = ಯಾವ + ಉದು
ಮುಂದುಂದು ದಿನ = ಮುಂದೇ ಯಾವುದೋ ದಿನ

- mahesha ರವರ ಬ್ಲಾಗ್
- Login or register to post comments
- 381 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಆ ಈ ಊ ಏ
ಎವನು, ಎವಳು ಎದು ಅಲ್ಲ. ಕ್ರಮವಾಗಿ ಆ(ಯಾ)ವನು ಆ(ಯಾ)ವಳು ಹಾಗೂ ಆ(ಯಾ)ವುದು.
ಉ: ಆ ಈ ಊ ಏ
ಎವನು ಎವಳು ಇದು ತೆಲುಗು, ತಮಿಳಲ್ಲಿದೆ...
ಬಳ್ಳಾರಿಯವರು ಇಂದಿಗೂ ’ಎದು’ ಎಂದು ಹೇಳ್ತಾರೆ.
ಕನ್ನಡದಲ್ಲಿ ಎಲ್ಲಿ, ಎಂತು, ಏಕೆ, ಎಂದು, ಎಪ್ಪಗೆ, ಎಂತ ಇವೆಲ್ಲ ಈ ಎ ಇಂದ ಕೂಡಿರುವುದು...
ಆರು? ಆವ? ಈಗೆ ಆ ಯಿಂದ ಸುರುವಾಗುವುದು ಮಳಯಾಳಂ ಮತ್ತು ಕರಾವಳಿ ಕನ್ನಡದಲ್ಲಿ ಆಯಿತು ಎಂದು ನನ್ನ ಅನಿಸಿಕೆ..
ಆವನು => ಯಾವನು ಅಂತ ಎಂದು ಅನಿಸಿಕೆಯಾದರೆ
ಎವನು => ಯವನು =? ಯಾವನು ಎಂಬುದು ಇನ್ನು ಅನಿಸಿಕೆ...
ಆಪ್ತಮಿತ್ರ ಸಿನಿಮದಲ್ಲಿ ’ಎವರು ’ =ಯಾರಯ ಎಂದು ಗಂಗಾ ಹೇಳ್ತಾಲ್ಲ.!!
=====================================
ಮಾಯ್ಸ!
ಉ: ಆ ಈ ಊ ಏ
ಇನ್ನೂ ಬಱೀ ’ಏ’ ಬಳಕೆಯೂ ಇದೆ ತೆಲುಗಲ್ಲಿ/ಕನ್ನಡದಲ್ಲಿ
- ಅಂಗಿ ಕೊಡು
-ಏ( ಯಾವುದು )
-ನೀಲೀದು
=====================================
ಮಾಯ್ಸ!
ಉ: ಆ ಈ ಊ ಏ
ಏ ಇದು ಏಂ(ನ್) ಅನುಸ್ವಾರ ಬಿಟ್ಟ ಅಥವಾ ’ನು’ ಬಿಟ್ಟ ಏಂ(ನ್)(ನು) ಶಬ್ದ. ಉದಾಹರಣೆಗೆ ನಾನೀ ಕೆಲಸ ಮಾಡಲೇ? ನಾನೀ ಕೆಲಸ ಮಾಡಲೇನು? ಆದರೆ ಈ ’ಏನು’ ಪದ ’ಯಾವುದು’ ಎಂಬುದಱ ಬದಲು ಬೞಕೆಯಾಗಿಲ್ಲ. ಹಾಗೆಯೇ ಶಬ್ದಮಣಿದರ್ಪಣದ ಪ್ರಕಾರ ’ಏಂ’ ಶಬ್ದಕ್ಕೆ ಬಱಿ ಪ್ರಥಮಾ ದ್ವಿತೀಯಾ ವಿಭ್ಹಕ್ತಿಗಳೆರಡೇ ಇರುವುದು. ಉೞಿವುದಕ್ಕೆ ಏತರ್ಕೆ(ಏತಕ್ಕೆ) ಯಾತಕ್ಕೆ (ಯಾತರ್ಕೆ) ಬೞಸಬೇಕು. ಏನಕ್ಕೆ ಇದು ಶುದ್ಧ ತಪ್ಪು.