ಅನ್ಯಾಯಕ್ಕೆ ದನಿಯೆತ್ತದವರು ಸಬ್ಯರೂ ಅಲ್ಲ, ಮಾದರಿಯೂ ಅಲ್ಲ, ಅವರಿಗೆ ಗವ್ರವವೂ ಸಲ್ಲದು
ನೋಡಿ, ನಾವ್ ಕನ್ನಡ ಜನಾಂಗ. ನಮ್ಮದೇ ಆದ ಬೇರೆ-ವಿಶಿಶ್ಟ-ನಿಬ್ಬರದ ನುಡಿ, ನಡೆ, ನೆಲ, ನಾಡಿದೆ. ಇದನ್ನು ಮರೆತಿರೋರು ಅರಿತುಕೋಬೇಕು.
ನಮ್ ಕನ್ನಡ ಜನಾಂಗಕ್ಕೆ ಏನೇನೆಲ್ಲ ಅನ್ಯಾಯ, ದಬ್ಬಾಳಿಕೆ, ಕೀಳಾಟ ಆಗ್ತಾ ಇದೆ. ಸುಮ್ನೆ ಇದನ್ನೆಲ್ಲ ಸಯ್ಸಿಕೊಂಡು ಇದ್ದು ದೊಡ್ಡಸ್ತಿಕೆ ತೋರಿಸುವ ಮಂದಿ ದಿಟವಾಗ್ಲೂ ಹಿರಿತನದವರಲ್ಲ, ಒಳ್ಳೆಯವರಲ್ಲ, ಅವರು ಎಂದೂ ನಮಗೆ ಮಾದರಿಯಲ್ಲ, ಆದುದರಿಂದ ಅಂತವರಿಗೆ ಗವ್ರವ, ಬೆಲೆ ಕೊಡೋದು, ತಪ್ಪು, ನಮ್ಮ ಜನಾಂಗಕ್ಕೆ ಒಳ್ಳೇದಲ್ಲ.
ನಮ್ಮ ಒಕ್ಕಟ್ಟನ್ನು, ನಮ್ಮ ನೆಲೆ, ನೀರು, ನೆಲ, ನಾಡು, ಕೆಲಸ, ಹೊನ್ನು, ಸಿರಿ, ನಡೆ, ನುಡಿ ಮುಂತಾದವನ್ನು ನಾವು ಕಾಪಾಡಿಕೊಬೇಕಾದ್ರೆ, ನಾವ್ ಕೊಂಚ ನಯ, ನಾಜೂಕು ಬಿಟ್ಟು ಜಗಳಕ್ಕೆ ನಿಲ್ಲೋ ಮಂದಿ ಆಗಬೇಕು.. ಇಶ್ಟು ದಿನ ನಯ-ನಾಜೂಕಿಂದ ಕಳೆದುಕೊಂಡಿದ್ದೇ ಹೆಚ್ಚು, ಪಡೆದುದು ಏನೇನು ಇಲ್ಲ?
ನಮ್ಮದು ನಮ್ಮದರ ಬಗ್ಗೆ ಪಟ್ಟು ಹಿಡಿಯಬೇಕು.. ಪಟ್ಟನ್ನು ಬಿಡದೇ ಸಾದಿಸಬೇಕು. ಇದನ್ನೆ ಬಿಡುಮಾತು, ಬಿಡುನಡೆ, ನಮ್ಮ ಕಡುತನವನ್ನು ತೋರಿಲು ಹಲವು ಕಡೆ ಹೊಡೆಬಡೆಬೇಕೇ ಬೇಕು...
ನಮ್ಮ ಜನಾಂಗಕ್ಕೆ ಎದುರಾಗಿರುವ ಹಗೆಗಳನ್ನು ನಾವು ಸಾಮ ಮತ್ತು ದಾನದಿಂದ ಗೆಲ್ಲಲು ಆಗದು. ಬೇದ ಮತ್ತು ದಂಡದ ಅವಶ್ಯಕತೆ ಇರುವುದು ನಿಕ್ಕುವ...
ಎಣ್ದೆಸೆಯ ಕನ್ನಡಿಗರು ಒಕ್ಕೂಡಿ ಕಟ್ಟಿದ ಕನ್ನಡಿಗರ ಕರ್ನಾಟಕ ಇಂದು ’taken for granted', 'push over' ಆಗ್ತಾ ಇದೆ. ನಮ್ಮ ನೆಲದಲ್ಲಿ ನಮಗೇ ನೆಲೆಯಿಲ್ಲ. ನಮ್ಮ ನೆಲೆದಲ್ಲಿ ಕೆಲಸ ಕೇಳಿದರೆ ನಾವು ಕೀಳೆಂದು ಜರಿಯುವ ಮಂದಿಯೂ ಇದ್ದಾರೆ.
ತುಸು ಯೋಚಿಸಿ..
ಯೋಚಿಸಿ ಸುಮ್ನಿರಬೇಡಿ!! ![]()

- mahesha ರವರ ಬ್ಲಾಗ್
- Login or register to post comments
- 267 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಅನ್ಯಾಯಕ್ಕೆ ದನಿಯೆತ್ತದವರು ಸಬ್ಯರೂ ಅಲ್ಲ, ಮಾದರಿಯೂ ಅಲ್ಲ, ಅವರಿಗೆ ಗವ್ರವವೂ ಸಲ್ಲದು
ಹೈಕಮಾಂಡ್ ದೆಹಲಿಯಲ್ಲಿರುವ ಪಕ್ಷಗಳ ನಾಯಕರು ಕನ್ನಡಪರ ಹೋರಾಟ ಮಾಡುವುದು ಸುಳ್ಳು.
ಹೈಕಮಾಂಡ್ ಇಲ್ಲೇ ಇರುವ ಪಕ್ಷದ ಬಗ್ಗೆ ಏನೂ ಹೇಳುವುದಿಲ್ಲ.
ಇನ್ನುಳಿದ ಸಣ್ಣ ಪುಟ್ಟ ಸಂಘಟನೆಗಳಿಗೆ ರಾಜ್ಯಮಟ್ಟದ ಬೆಂಬಲ ಸಿಗದು. ಜತೆ ಸೇರಿ ಹೋರಾಡಲು ಹೊರಟರೆ, ಪ್ರತಿಯೊಬ್ಬರು ಹೀರೋ ಆಗಲು ಹೊರಟು ತಮ್ಮೊಳಗೆ ಕಾದಾಡುವರು.
ಕಡೇಪಕ್ಷ ಹೋರಾಟ ದಾರಿತಪ್ಪದಂತೆ ನೋಡಿಕೊಳ್ಳುವ ಉತ್ತಮ ನಾಯಕನ ಅಗತ್ಯವಿದೆ. ಇಲ್ಲದಿದ್ದರೆ ಕನ್ನಡ ಪರ ಹೋರಾಟ ಸುರುವಾಗಿ,ಹಿಂದು-ಮುಸ್ಲಿಂ ಕದನದಲ್ಲಿ ಮುಕ್ತಾಯವಾಗಬಹುದು.
ಉ: ಅನ್ಯಾಯಕ್ಕೆ ದನಿಯೆತ್ತದವರು ಸಬ್ಯರೂ ಅಲ್ಲ, ಮಾದರಿಯೂ ಅಲ್ಲ, ಅವರಿಗೆ ಗವ್ರವವೂ ಸಲ್ಲದು
ಪರಿಹಾರ ಕಂಡುಕೊಳ್ಳುವ ಮೊದಲು ಸಮಸ್ಯೆಯನ್ನು ಸರಿಯಾಗರಿತುಕೊಳ್ಳಬೇಕು... !!
ಒಟ್ನಲ್ಲಿ.. ಸುಮ್ನಿರಕ್ಕಾಗದು!