ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › mahesha ರವರ ಬ್ಲಾಗ್

ಕನ್ನಡದ ಆಡು ಮಾತಿಗೂ, ಬರೆಯುವ ಮಾತಿಗೂ ಏಕೆ ಬಹಳ ಅಂತರ???

March 15, 2007 - 12:24am — mahesha

ಕನ್ನಡದ ಆಡು ಮಾತಿಗೂ, ಬರೆಯುವ ಮಾತಿಗೂ ಏಕೆ ಬಹಳ ಅಂತರ??

ಇದಕ್ಕೆ ಇಂಗಲೀಷಲ್ಲಿ ಏನೋ ಅಂತಾರೆ, ಏನದು ಅಂತ ನೆನೆಪಿಲ್ಲ.

ಆದರೆ ಈ ಪಜೀತಿ ಹಿಂದಿ, ಸಂಸ್ಕೃತ ಮತ್ತು ಇಂಗಲೀಷಿಗೆ ಅಷ್ಟಿಲ್ಲ.

ಇದರಿಂದ ನಾವು ಕನ್ನಡದವರು ಎರಡು ಕನ್ನಡಗಳನ್ನು ಕಲಿಯುವೆವು.

೧) ಎಲ್ಲರ ಜೊತೆ ಮಾತಾಡುವ ಕನ್ನಡ. ಇದನ್ನು ಪರೀಕ್ಷೆಯಲ್ಲಿ ಬರೆದರೆ, ಮಾರ್ಕು ಕೊಡಲ್ಲ. ಪಂಡಿತರು ’ಶಿಷ್ಟಭಾಷೆ’ ಅಲ್ಲ ಅಂತಾರೆ.

೨) ಮಾರ್ಕು ಪಡೆಯಲು ಕಲಿಯಲೇ ಬೇಕಾದ ಬುಕ್ಕಿಷ್ ಕನ್ನಡ, ಇದನ್ನು ನಾವು ಶಾಲೆ ಬಳಿಕ ಮಾಮೂಲಿ ಮಂದಿ ( ರೇರಾಗಿ ಬರೆಯುವವರು ) ಬಳಸುವುದೇ ಇಲ್ಲ. ಈ ಕನ್ನಡದಲ್ಲಿ ಹಾಲಮ್ಮ, ತರಕಾರಿವಯ್ಯ, ಅವರೇಕೆ ನಮ್ಮ ಅಮ್ಮನೊಡ ಮಾತಾಡಿದರೂ ಅವಳಿಗೂ ತಿಳಿಯಲ್ಲ. ಎರಡೆರಡು ಸರತಿ ಹೇಳಬೇಕು.Smiling

ಇನ್ನು ಸರಕಾರಿ ಕನ್ನಡವಂತೂ ಇವೆರೆಡಕ್ಕಿಂತ ಬೇರೆ. ಅದು ಯಾವುದೋ ಶತಮಾನದಾಗೆ ನಿಂತು ಹೋದಂತೆ ಇದೆ.!!

ಅದಕ್ಕೆ ಕನ್ನಡ ಕಲಿಯುವುದು ಮತ್ತು ಕಲಿಸುವುದು ಸಿಕ್ಕಾಪಟ್ಟೆ ಪಜೀತಿ ಕೆಲಸ!!

Diglossia

~.~
  • mahesha ರವರ ಬ್ಲಾಗ್
  • Login or register to post comments
  • 755 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 15, 2007 - 2:49am — Shyam Kishore

ಪ್ರತಿಕ್ರಿಯೆ: ಕನ್ನಡದ ಆಡು ಮಾತಿಗೂ...ಸರ್ಕಾರೀ ಕನ್ನಡ

Shyam Kishore's picture

ಆಡುವ ಮಾತು ಹೇಗಿದ್ದರೂ ಬಳಕೆಯಲ್ಲಿ ಹಾಸು ಹೊಕ್ಕಾಗಿದೆ ಅಲ್ಲವೇ? ಅದರೆ ಜತೆಗೆ ಸ್ವಲ್ಪ ವ್ಯಾಕರಣ ಬದ್ಧ ಮತ್ತು ಪುಸ್ತಕದ ಕನ್ನಡವನ್ನೂ ನಾವು ಬಳಸುವುದರ ಮೂಲಕ ಅದನ್ನೂ ಉಳಿಸಿ, ಬೆಳಸಬಹುದು ಅಲ್ಲವೇ? ಹಾಗಾಗಿ ಎರಡೂ ಇದ್ದರೆ ಚೆನ್ನ ಅನ್ನಿಸುತ್ತದೆ. ಇದು ನನ್ನ ಅನಿಸಿಕೆ. ಹೌದು, ಕೆಲವೊಮ್ಮೆ ಬಹಳ ತಾರತಮ್ಯ ತೋರಿದಾಗ (ಆಡು ಮಾತು ಭಾಷೆಯೇ ಅಲ್ಲವೇನೋ ಎಂಬಂತೆ) ಬೇಸರವಾಗುತ್ತದೆ.

ನೀವು ಬಹಳ ಒಳ್ಳೆಯ ಅಂಶದತ್ತ ಗಮನ ಹರಿಸಿದಿರಿ. ಸರ್ಕಾರೀ ಕಡತಗಳಲ್ಲಿನ ಕನ್ನಡ. ಅಬ್ಬಾ! ಈಗ ಉದಾಹರಣೆ ಸಮೇತ ಬರೆಯೋಣವೆಂದರೆ ನನ್ನ ಬಳಿ ಆ ಕಡತಗಳಿಲ್ಲ. ಬೆಂಗಳೂರಿನಲ್ಲಿ ಸುಮಾರು ಇಪ್ಪತ್ತಕ್ಕೂ ಮಿಕ್ಕಿ ಈ ರೀತಿಯ ಸರ್ಕಾರೀ ಕಡತಗಳನ್ನು, ಅರ್ಜಿಗಳನ್ನು ಸಂಗ್ರಹಿಸಿ ಇಟ್ಟಿದ್ದೀನಿ. ಅಯ್ಯಪ್ಪ, ಕೆಲವೊಂದರಲ್ಲಿನ ಕನ್ನಡವಂತೂ, ಬೇಡ ಬಿಡಿ. ಅದನ್ನು ಸ್ವತಃ ಓದಿದರೇ ಚೆನ್ನ. ಅತ್ಯಂತ ಸರಳವಾದ ಉದಾಹರಣೆ ಎಂದರೆ, "ಮನೆ ನೋಂದಾವಣಿ" ಮಾಡುವ ಅರ್ಜಿಯನ್ನು ತೆಗೆದುಕೊಂಡು ಬಂದು ಓದಿ ನೋಡಿ. ನೀವು ಹೆಜ್ಜೆಗೊಮ್ಮೆ ನಿಘಂಟು ತೆಗೆಯಲಿಲ್ಲ ಎಂದಲ್ಲಿ ಆಶ್ಚರ್ಯವೇ ಸರಿ! ನಿಮ್ಮಲ್ಲಿ ಯಾರ ಬಳಿಯಲ್ಲಾದರೂ ಆ ರೀತಿಯ ಅರ್ಜಿಗಳಿದ್ದಲ್ಲಿ ಅದರ ಬಗ್ಗೆ ಬರೆಯಿರಿ. ನಲವತ್ತು ವರ್ಷಗಳ ಹಿಂದೆಅಆ ರೀತಿಯ ಭಾಷೆಯಿತ್ತು ನಿಜ. ಅದನ್ನು ಸ್ವಲ್ಪವಾದರೂ ಇಂದಿನ ಕಾಲಕ್ಕೆ ತಕ್ಕಂತೆ ತಿದ್ದಿ, ಹೊಸತಾಗಿ ರೂಪಿಸಬಾರದೇ? ಸ್ವಲ್ಪ ಮಟ್ಟಿಗೆ ಕನ್ನಡದಲ್ಲಿ ಆಸಕ್ತಿಯಿರುವವರಿಗೂ ಅವನ್ನು ನೋಡಿ, "ಕನ್ನಡ ಅಂದ್ರೆ ಇಷ್ಟು ಕಷ್ಟಾನಾ?" ಎನ್ನುವ ಭಾವನೆ ಬರುವಂತಹ ಸ್ಥಿತಿಯಲ್ಲಿ ಆ ಕಡತಗಳನ್ನು ಏಕಿಡಬೇಕು? ಈ ಬಗ್ಗೆ ನನ್ನ ಅಭಿಪ್ರಾಯ ತಪ್ಪಿದ್ದಲ್ಲಿ, ತಿಳಿದವರು ದಯವಿಟ್ಟು ತಿದ್ದಿ.

- ಶ್ಯಾಮ್ ಕಿಶೋರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 15, 2007 - 9:02am — mahesha

ಸ್ವಲ್ಪ ವ್ಯಾಕರಣ ಬದ್ಧ

mahesha's picture

"ಬದ್ಧ" ಅಂದರೆ ತಡೆದ ( ಮಲಬದ್ಧತೆಯನ್ನು ನೆನೆಪಿಸಿಕೊಳ್ಳಿ Smiling )

ವ್ಯಾಕರಣ ಒಂದು ನುಡಿಯ ಹರಿವಿಗೆ ದಾರಿಯಾಗಿರಬೇಕು. ಆದರೆ ಇಂದು ವ್ಯಾಕರಣವೇ ಕನ್ನಡವು ಬೆಳೆಯಲು ’ಬದ್ಧ’/’ತಡೆಯಾದಂತಿದೆ.

ಅದೂ ಅಲ್ಲದೆ, ಕನ್ನಡವೂ ೧೦೦% ಸಂಸ್ಕೃತದಂತೆ ವ್ಯಾಕರಣದಿಂದ ’ಬದ್ಧ’ವಾಗಿರಬೇಕೇ?? ಹೇಗೆ ಕನ್ನಡ ಕಾಲದಿಂದ ಕಾಲಕ್ಕೆ ತನ್ನನ್ನು ಹೊಂದಿಸಿಕೊಂಡು ಬೆಳೆದಿದೆಯೋ, ಅಂತು ಹೊಂದಿಸಿಕೊಳ್ಳುವ ಹೊತ್ತಿನಲ್ಲಿ ಹಲ ಹಲವು ಹಳೆಯ ವ್ಯಾಕರಣವನ್ನು ಕಡೆಗಣಿಸಿದೆ.

ಮಾದರಿ: "ನನ್ನ ಬಳಿ ಎರಡು ಹಣ್ಣಿದೆ" ಇದನ್ನು ಹೆಚ್ಚು ಮಂದಿ "ನನ್ನ ಬಳಿ ಎರಡು ಹಣ್ಣುಗಳಿವೆ" ಎಂದು ಬರೆಯಲೇ ಬೇಕು ಎನ್ನುವರು. ಆದರೆ ಏನೇ ಬರೆದರು ನಾವು ಮಾತಿನಲ್ಲಿ ಎಂದೂ ಹೇಳುವುದು "ನನ್ನ ಬಳಿ ಎರಡು ಹಣ್ಣಿದೆ/ಐತೆ" ಎಂದೇ.

ನಾವು "ನನ್ನ ಬಳಿ ಎರಡು ಹಣ್ಣಿದೆ" ಇದು ಕೂಡ ಸರಿ, "ಎರಡು" ಈ ವಚನವನ್ನು ತೋರಿಸುವ ಪದವಿದೆ, ಎಂದು ಒಂದು ಹೊಸ ರೂಲು ಮಾಡಿಕೊಂಡರಾಯಿತು.

ಮಾಡದಿದ್ದರೂ ಜನರ ಮಾತಿನಲ್ಲಿ ಅಂದು ಎಂದೂ ಸರಿಬಳಕೆಯಾಗಿ ಹೋಗಿದೆ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 15, 2007 - 10:21am — Shyam Kishore

ಅಯ್ಯೋ! ಸ್ವಲ್ಪ ವ್ಯಾಕರಣ ಬದ್ಧ

Shyam Kishore's picture

ಇಲ್ಲಾರೀ, ನನಗಂತೂ "ಬದ್ಧ" ಅಂದ ತಕ್ಷಣ, ಎಲ್ಲಾ ಬಿಟ್ಟು ನೀವು ಉದಾಹರಿಸಿದ "--ಬದ್ಧತೆ"ಯನ್ನು ನೆನಪಿಗೆ ತಂದುಕೊಳ್ಳಲು ಸ್ವಲ್ಪ ಹಿಂಸೆಯೆನಿಸುತ್ತೆ! Wink

"ಬದ್ಧ" ಅನ್ನುವುದನ್ನು ಗುಣವಾಚಕವಾಗಿ ಉಪಯೋಗಿಸಿದಾಗ "ಶ್ರೇಷ್ಠ" ಎನ್ನುವ ಅರ್ಥ ಕೊಡುತ್ತದೆ. ನಿಜ ಒಂದು ಪದಕ್ಕೆ ಹಲವಾರು ಅರ್ಥಗಳಿವೆ, ಇಲ್ಲವೆಂದಲ್ಲ. ಆದರೆ ವ್ಯಾಕರಣ ಬದ್ಧತೆಗೂ ಮತ್ತು ಇನ್ನೊಂದು ಬದ್ಧತೆಗೂ, ಅಜಗಜಾಂತರವಿದೆ. ಇದೊಂಥರ "ವ್ಯಾಕರಣ" ಅನ್ನುವ ಪದದಲ್ಲಿ "ವ್ಯಾ" ಇದೆ, ಅದು ಇನ್ಯಾವುದೋ ಶಬ್ದವನ್ನು ನೆನಪಿಸೋದಿಲ್ವೇ ಅಂದ ಹಾಗಾಯಿತು. Laughing ಇದು "ಭಯಂಕರ" ಹೋಲಿಕೆಯಾಯಿತು ಅನಿಸಿದಲ್ಲಿ ಬೇಜಾರಾಗಬೇಡಿ ಸ್ವಾಮೀ.

ಸಂಸ್ಕೃತ ಅಂತಲ್ಲ, ಯಾವುದೇ ಭಾಷೆಗಾದರೂ ವ್ಯಾಕರಣ ಬೇಕೇ ಬೇಕು ಅಲ್ಲವೇ? ೧೦೦% ವ್ಯಾಕರಣಕ್ಕೆ ಬದ್ಧವಾಗಿರುವುದು ಖಂಡಿತಾ ಸಾಧುವೂ ಅಲ್ಲ, ಸಾಧ್ಯವೂ ಅಲ್ಲ. ನಾನೂ ಒಪ್ಪುತ್ತೀನಿ. ಹೊಸತನವನ್ನು ಮೈಗೂಡಿಸಿಕೊಳ್ಳಲಿಲ್ಲ ಅಂದ್ರೆ ಭಾಷೆ ನಿಂತ ನೀರಾಗುತ್ತದೆ. ಹಾಗಂತ ಇರುವ ಎಲ್ಲವನ್ನೂ ಕಿತ್ತೊಗೆದರೆ ಅದರಿಂದ ಉಂಟಾಗುವ "ವೇಗದ ಹರಿವೂ" ಒಂದು ರೀತಿ ಒಡ್ಡು ಕಿತ್ತ ಪ್ರವಾಹದ ತರಹ; ಅಷ್ಟೇ ಕೆಡುಕನ್ನು ಮಾಡುತ್ತದೆ. ಹಾಗಾಗಿ ಈ ಎರಡು ಅತಿಗಳ (ಸಂಪೂರ್ಣ ವ್ಯಾಕರಣ ಬದ್ಧ v/s ವ್ಯಾಕರಣದ ಹಂಗೇ ಇಲ್ಲದ) ನಡುವೆ ಒಂದು ಹಿತವಾದ ಮಿತಿಯನ್ನು ಕಾಯ್ದುಕೊಳ್ಳುವುದು ಒಳ್ಳೆಯದು ತಾನೇ? ಮಾತನಾಡುತ್ತಾ "ಎರಡು ಹಣ್ಣಿದೆ" ಅನ್ನೋದು ಸರಿ. ಆದರೆ ಬರೆಯುತ್ತಾ "ಎರಡು ಹಣ್ಣುಗಳಿವೆ" ಎನ್ನುವ ಪ್ರಯೋಗವೂ ಇದೆಯೆನ್ನುವುದು ತಿಳಿದಿರುವುದು ನಮಗೇ ಒಳ್ಳೆಯದು ತಾನೇ?

- ಶ್ಯಾಮ್ ಕಿಶೋರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 15, 2007 - 10:49am — mahesha

Re: ಅಯ್ಯೋ! ಸ್ವಲ್ಪ ವ್ಯಾಕರಣ ಬದ್ಧ

mahesha's picture

ಒಂದು ಪದಕ್ಕೆ ಹಲವರ್ತಗಳಿರುತ್ತವೆ.
ನಾನು ಸುಮ್ಮನೆ ನಗೆಗೆ ನನಗೆ ಬೇಕಾದುದನ್ನು ಹಿಡಿದೆನು Smiling

ಇನ್ನು

Quote:

""ಎರಡು ಹಣ್ಣಿದೆ" ಅನ್ನೋದು ಸರಿ. ಆದರೆ ಬರೆಯುತ್ತಾ "ಎರಡು ಹಣ್ಣುಗಳಿವೆ" ಎನ್ನುವ ಪ್ರಯೋಗವೂ ಇದೆಯೆನ್ನುವುದು ತಿಳಿದಿರುವುದು ನಮಗೇ ಒಳ್ಳೆಯದು ತಾನೇ?"

ಇದನ್ನೇ ನಾನು ಹೇಳಿದುದು. ಎರಡೆರಡು ಕನ್ನಡವನ್ನು/ಕನ್ನಡಗಳನ್ನು ಕಲಿತಿರಬೇಕು.

ಈಗ

'ಎರಡು ಹಣ್ಣಿದೆ' ಇದು ಒಂದು ಕನ್ನಡ.
'ಎರಡು ಹಣ್ಣುಗಳಿವೆ' ಇದೊಂದು ಕನ್ನಡ.

ನನಗೆ ಇಲ್ಲವೆ ನಿಮಗೆ, ಹುಟ್ಟಿನಿಂದ ಕನ್ನಡ ಉಲಿದು ಉಲಿದು, ಬರೆದು ಬರೆದು ಅಲುವಾಟವಿರೋರಿಗೆ ಓಕೆ ಎಲ್ಲ ಅರ್ಥ ಆಗುತ್ತೆ. ಆದರೆ ಹೊಸತಾಗಿ ಕಲಿಯೋರಿಗೆ ಇದು ಬಹಳ ಗೊಂದಲ.

ಪಾಪ ಅವರು ಅಲ್ಲಿ ಏಕೆ ಹೀಗೆ, ಇಲ್ಲಿ ಏಕೆ ಹಾಗೆ ಅಂತ ತಲೆಗೆಡಿಸಿಕೋಬೇಕು.

ಅದಕ್ಕೆ ಇರಬೇಕು ಬೆಂಗಳೂರಲ್ಲಿ ಹತ್ತಾರು ಇಯರುಗಳಿಂದ ನೆಲೆಸಿರೋ ಬೇರೆರಾಜ್ಯದವರಿಗೆ ಕನ್ನಡ ಕಲಿಯೋದು ಅಂದರೆ ತಲೆನೋವು. ಇದಕ್ಕೇ ಬೆಂಗಳೂರಲ್ಲೂ ಎಲ್ಲೆಲ್ಲೂ ಎಲ್ಲೆಯಿಲ್ಲದಂತೆ ಇಂಗಲೀಷು.

ಇರಲಿ ಬಿಡಿ ಸಾರ್‍. ಇದು ಒಂದು ಥಾಟು ಅಷ್ಟೆ. ಬಹಳ ಸೀರಿಯಸ್ಸಾಗಿ ಮನಸ್ಸಿಗೆ ಹಾಕಿಕೋಬೇಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 15, 2007 - 9:08am — ವೈಭವ

Re: ಕನ್ನಡದ ಆಡು ಮಾತಿಗೂ, ಬರೆಯುವ ಮಾತಿಗೂ ಏಕೆ ಬಹಳ ಅಂತರ???

ವೈಭವ's picture

ಆದರೆ ಹಿಂದಿ ಮತ್ತು ತಮಿಳಿನಲ್ಲಿ ಪದಗಳನ್ನು ಬರೆದಂತೆ ಉಲಿಯುವುದಿಲ್ಲ.

ಉದಾ: ತಮಿಳಿನಲ್ಲಿ  'ಸಂಘ' ವನ್ನು 'ಚಂಕ' ಅಂತ ಬರೆದು 'ಚಂಗ' ಎಂದು ಉಲಿಯುತ್ತಾರೆ. ( ತುಂಬ ಪಜೀತಿ ಕೆಲಸ) ('ತಮಿಳು ತಲೆಗಳ ನಡುವೆ' ಪುಸ್ತಕದಲ್ಲಿ ಓದಿದ್ದು)Smile

       ಹಿಂದಿಯಲ್ಲಿ 'ಮೈ' (ನಾನು) ಅಂತ ಬರೆದು 'ಮೇ' ಅಂತ ಉಲಿಯುತ್ತಾರೆ. ಆದ್ದರಿಂದಲೆ ಹಿಂದಿಗರು 'ಮೈಸೂರು' ನ್ನು 'ಮೇಸೂರ್' ಅಂತಲೆ ಉಲಿಯುತ್ತಾರೆ(ಇನ್ನೂ ಪಜೀತಿ).Smile

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 15, 2007 - 11:10am — mahesha

ತಮಿಳು ಚಂಗ

mahesha's picture

ಒಂದು ನೋಟದಲ್ಲಿ ತಮಿಳಿನ ಕೊರತೆಗಳೇ ಅದರ ಬಲ..

ತಮಿಳಲ್ಲಿ ಕಡಮೆ ಲೆಟರುಗಳ ಇರುವುದರಿಂದ ಹೊರದೇಶದವರು ಅದನ್ನು ಆರಾಮಾಗಿ ಕಲಿತಾರೆ. ತಮಿಳಿನ ಕುರಿತೋದು( ಅಧ್ಯಯನ ) ಕನ್ನಡಕ್ಕಿಂತ ಹೆಚ್ಚು ದೇಶಗಳಲ್ಲಿ, ಹೆಚ್ಚು ಪಾಟಿಯಲ್ಲಿ( quantity ) ನಡೆಯುತ್ತದೆ.

ಅದಲ್ಲದೆ ಅದೀಗ ಕೇಂದ್ರ ಸರಕಾರದಿಂದ "ಶಾಸ್ತ್ರೀಯ ಭಾಷಾ" ಎಂದು ಪುರಸ್ಕೃತ/ಬಿರುದು ಹೊತ್ತಿದೆ. ವರ್ಷವರ್ಷ ಅದಕ್ಕೆ ಐದು ಕೋಟಿ ಸಿಕ್ಕತ್ತೆ. Smiling

ತಮಿಳು, ಬರಿ ತಮಿಳಿಗೆ ಬೇಕಾದ ಸೌಂಡುಗಳನ್ನು ಇಟ್ಟುಕೊಂಡಿದೆ. ಬೇರೆ ಭಾಷೆಯ ಪದ ಬರೆಯಲು ಬೇಕು ಅಂತ ಅದು ಯಾವ ಸೌಂಡನ್ನು ಸೇರಿಸಿಕೊಳ್ಳಲ್ಲ. ಬದಲಿಗೆ ಆ ಹೊರಪದವನ್ನೇ ತನ್ನ ಹದಕ್ಕೆ ಮಾಡಿಕೊಂಡು ಬಿಡುತ್ತದೆ.

ಅಂದರೆ ಯಾವುದೇ ಹೊಸಪದ ತಮಿಳಿಗೆ ಬಂದರೂ ಮೊದಲು ಅದು ತಮಿಳೀಕರಣ Smiling / ತಮಿಳಿಸುವಿಕೆ ಆಗಬೇಕು. ಆಗಲೇ ಅದಕ್ಕೆ ತಮಿಳಲ್ಲಿ ಜಾಗ!!!

ನಮ್ಮ ಕನ್ನಡ ಹಂಗಲ್ಲ. ನಾವು ಬೇರೆ ಭಾಷಾಪದಗಳನ್ನು ಬರೆಯಲೆಂದೇ ಸೌಂಡುಗಳನ್ನು ಶುದ್ಧಗೆಯಲ್ಲಿ ಇಟ್ಟುಕೊಂಡಿದ್ದೇವೆ. ಕನ್ನಡಕ್ಕೆ ಬರುವ ಯಾವ ಪದವನ್ನು ನಾವು ಕನ್ನಡೀಕರಣ/ಕನ್ನಡಿಸುವಿಕೆ ಎಂದು ಮಾರ್ಪಾಟು ಮಾಡದೇ, ಹಾಗೆ ಬಳಸುವೆವು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 15, 2007 - 11:17am — Shyam Kishore

ದನಿಗೂಡು: ತಮಿಳು ಚಂಗ...ಇಂಗ್ಲೀಷು ಕೂಡಾ ಹಾಗೇ ಅಲ್ವಾ?

Shyam Kishore's picture

ಹೌದು ಮಹೇಶ್, ಕೆಲವೊಂದು ರೀತಿಯಲ್ಲಿ ಯೋಚಿಸಿದಾಗ ತಮಿಳಿನಲ್ಲಿನ ಅಕ್ಷರದ ಕೊರತೆಯೇ ಅದರ ಬಲವಾಗಿಯೂ ಕಂಡು ಬರುತ್ತದೆ. ಈಗ ಇಂಗ್ಲೀಷನ್ನೇ ನೋಡಿ, ನಿಜವಾಗಿಯೂ ಇಪ್ಪತ್ತಾರೇ ಅಕ್ಷರಗಳು ಇವೆ ಮತ್ತು ಒತ್ತಕ್ಕರಗಳ ಹಂಗೇ ಇಲ್ಲ. ಹಾಗಾಗಿ ಇಂಗ್ಲೀಷನ್ನು ಕಲಿಯೋದು ಬಹಳ ಸುಲಭ ಅನ್ನಿಸುತ್ತೆ ಅಲ್ವಾ?

ಆದರೆ ಅಕ್ಕರಗಳು ಹೆಚ್ಚಾಗಿ ಇರುವುದನ್ನೇ ನಾವೇಕೆ ಒಂದು ಪ್ರಬಲ ಅಸ್ತ್ರವನ್ನಾಗಿಸಿಕೊಂಡು ಕನ್ನಡವನ್ನು ಇನ್ನಷ್ಟು ಬಲಪಡಿಸಬಾರದು ಅನ್ನಿಸುತ್ತೆ. ಏಕೆಂದರೆ ಪ್ರತೀ ನಾಣ್ಯಕ್ಕೂ ಎರಡು ಮುಖಗಳಂತೂ ಇರಲೇ ಬೇಕಲ್ಲ. ಹೆಚ್ಚು ಅಕ್ಕರಗಳಿಂದ ಉಂಟಾಗುವ ಕಷ್ಟ (ಗೊಂದಲ) ಒಂದು ಮುಖವಾದರೆ, ಆ ಹೆಚ್ಚು ಅಕ್ಕರಗಳನ್ನೇ ನಮ್ಮ ಅನುಕೂಲಕ್ಕೆ ಉಪಯೋಗಿಸುವ ರೀತಿ ಇನ್ನೊಂದು ಮುಖ ಆಗಬಹುದು ಅಲ್ಲವೇ? ಹಾಗಂತ ನನಗನ್ನಿಸಿತು. ನನಗೆ ಭಾಷಾವಿಜ್ಞಾನದಲ್ಲಿ ಏನೇನೂ ತಿಳುವಳಿಕೆಯಿಲ್ಲ. ಈ ಬಗ್ಗೆ ಹೆಚ್ಚು ತಿಳಿದವರು, ಅಧ್ಯಯನ ಮಾಡಿದವರು, ಬೆಳಕು ಚೆಲ್ಲಿದರೆ ಎಲ್ಲರಿಗೂ ಉಪಯೋಗವಾಗುತ್ತದೆ.

- ಶ್ಯಾಮ್ ಕಿಶೋರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 15, 2007 - 11:37am — hamsanandi

Re: ತಮಿಳು ಚಂಗ

hamsanandi's picture

 

Quote:
ತಮಿಳು, ಬರಿ ತಮಿಳಿಗೆ ಬೇಕಾದ ಸೌಂಡುಗಳನ್ನು ಇಟ್ಟುಕೊಂಡಿದೆ. ಬೇರೆ ಭಾಷೆಯ ಪದ ಬರೆಯಲು ಬೇಕು ಅಂತ ಅದು ಯಾವ ಸೌಂಡನ್ನು ಸೇರಿಸಿಕೊಳ್ಳಲ್ಲ. ಬದಲಿಗೆ ಆ ಹೊರಪದವನ್ನೇ ತನ್ನ ಹದಕ್ಕೆ ಮಾಡಿಕೊಂಡು ಬಿಡುತ್ತದೆ.

ಇದು ಅರ್ಧ ಸತ್ಯ ರೀ! ಪಾಪ ಸಂಸ್ಕೃತ ಪದಗಳನ್ನು ಬರೆಯಲೆಂದೇ ಅವರು ಗ್ರಂಥ ವರ್ಣಮಾಲೆಯ ಐದು ಅಕ್ಷರಗಳನ್ನು ಉಪಯೋಗಿಸುತ್ತಾರೆ (ಜ, ಸ, ಹ , ಶ್ರೀ ಮತ್ತ್ತು ಹ), ಮನಸ್ಸಿಲ್ಲದ ಮನಸ್ಸಿನಿಂದ!

ಅದೇನೇ ಇರಲಿ. ತಮಿಳನ್ನು ಕಲಿತರೆ, ತಮಿಳು ಭಾಷೆಯನ್ನು ಬರೆಯಲು ಆ ಲಿಪಿ ಸಾಕು, ಬೇರೆ ಭಾಷೆಯ ಶಬ್ದಗಳನ್ನು ಬರೆಯಲು ಸಾಲದು ಎಂಬುದು ತಿಳಿಯುತ್ತದೆ. ಹಾಗಾಗಿ, ಚಂಕ ಎಂದು ಬರೆದು, ಚಂಗ ಎಂದು ಓದಬೇಕು ಎನ್ನುವುದು ಅಷ್ಟು ಸರಿಯಾದ ಮಾತಲ್ಲ. ಏಕೆಂದರೆ, ಪದದ ಆರಂಭದಲ್ಲಿ ಮಾತ್ರ ಕ ಚ ಟ ತ ಪ ಗಳು ಬರಬಹುದು. ನಡುವೆ (ಅಥವಾ ಕೊನೆಯಲ್ಲಿ ) ಬಂದಾಗ ಅದು ಗ ಜ ಡ ದ ಬ ಗಳೇ ಆಗಿಹೋಗುತ್ತವೆ. ಹಾಗಾಗಿ ತಮಿಳು ಬಲ್ಲವರಿಗೆ, ಓದಲು ಫಜೀತಿ ಆಗದು.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 15, 2007 - 11:03am — H.S.R.Raghavend...

Re: ಕನ್ನಡದ ಆಡು ಮಾತಿಗೂ, ಬರೆಯುವ ಮಾತಿಗೂ ಏಕೆ ಬಹಳ ಅಂತರ???

H.S.R.Raghavendra Rao's picture

ಪ್ರೀತಿಯ ಮಹೇಶ್ ಅವರೇ, ನಿಮ್ಮ ವಿಚಾರಗಳು ಖಂಡಿತವಾಗಿಯೂ ಬಹಳ ಗಂಭೀರವಾದವು ಮತ್ತು ಆಳವಾದ ಚರ್ಚೆಗೆ ಯೋಗ್ಯವಾದವು. ಹಳೆಯ ಕಾಲದ ವ್ಯಾಕರಣ ಪಂಡಿತರ ಸಾಮ್ರಾಜ್ಯವು ಪಠ್ಯಪುಸ್ತಕ ಮತ್ತು ಪರೀಕ್ಷೆಗಳಲ್ಲಿ ಇನ್ನೂ ನಡೆಯುತ್ತಿದೆ. ಅಂತೆಯೇ ಬರವಣಿಗೆಯ ಭಾಷೆಯಿಂದ ಕೆಲವು ಪ್ರಯೋಜನಗಳೂ ಇವೆ. ವಿದ್ವಾಂಸರಾದ ಡಿ.ಎನ್.ಶಂಕರಭಟ್ ಮತ್ತು ಕೆ.ವಿ.ನಾರಾಯಣ ಅವರು ಈ ಬಗ್ಗೆ ಸಾಕಷ್ಟು ಕೆಲಸ ಮಾಡಿದ್ದಾರೆ, ಬರೆದಿದಾರೆ. ನಾನು ಕೆಲಕಾಲದ ನಂತರ ಇನ್ನಷ್ಟು ವಿವರವಾದ ಪ್ರತಿಕ್ರಿಯೆ ಕೊಡುತ್ತೇನೆ. ಈಗ ಇಷ್ಟನ್ನಾದರೂ ಬರೆಯಲೇ ಬೇಕೆನಿಸಿತು.

H .S.Raghavendra Rao

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 15, 2007 - 11:25am — hamsanandi

Re: ಕನ್ನಡದ ಆಡು ಮಾತಿಗೂ, ಬರೆಯುವ ಮಾತಿಗೂ ಏಕೆ ಬಹಳ ಅಂತರ???

hamsanandi's picture

ಒಂದು ಮಾತು - ಆಡು ಮಾತಿಗೂ, ಬರವಣಿಗೆಗೂ ವ್ಯತ್ಯಾಸವಿರುವುದು ಬರೀ ಕನ್ನಡಕ್ಕೆ ಸೀಮಿತವಲ್ಲ. ಇಂಗ್ಲಿಷ್, ಹಿಂದಿ, ತಮಿಳು ಎಲ್ಲ ಭಾಷೆಗಳಲ್ಲೂ ಅದು ಇದ್ದೇ ಇದೆ. ಕನ್ನಡದಲ್ಲಿ ಮಾತ್ರ ಹೆಚ್ಚು ಅಂತರ್ ಎಂದು ಹೇಳಲಾಗದು.

ನಾವು ಮತ್ತೊಂದು ಭಾಷೆಯನ್ನು ಹೊಸದಾಗಿ ಶಾಲೆಯಲ್ಲಿ ಕಲಿತಾಗ (ಉದಾಹರಣೆಗೆ, ನಾವು ಇಂಗ್ಲಿಷ್ ಅಥವ ಹಿಂದಿಯನ್ನು ಕಲಿಯುವಾಗ) ಬಹುಪಾಲು ಶಿಷ್ಟ ಭಾಷೆಯನ್ನೇ ಕಲಿಯುತ್ತೀವಾಗಿ, ನಮಗೆ ಬರೆಯುವುದಕ್ಕೂ ಮಾತಾಡುವುದಕ್ಕೂ ಹೆಚ್ಚು ವ್ಯತ್ಯಾಸವಿಲ್ಲ ಎಂದೆನ್ನಿಸುತ್ತೆ. ಅದೇ ನೀವು ಬೇರೊಂದು ಭಾಷಿಕರಿರುವಲ್ಲಿ ವಾಸಿಸಿ, ಕೇವಲ ಕೇಳುವಿಕೆಯ ಬಲದಿಂದ ಆ ಭಾಷೆಯನ್ನು ಕಲಿತರೆ, ಅದೇ ಭಾಷೆಯ ಇನ್ನೊಂದು ರೂಪ ಅರಿಯದೇ ಹೋಗುತ್ತೇವೆ).

ಮದರಾಸಿನಲ್ಲಿ ನಾನು ಇದ್ದಾಗ, ನಮ್ಮ ಪಕ್ಕದ ಮನೆಯಲ್ಲಿದ್ದ ತೆಲುಗರಿಗೆ ಟಿವಿಯಲ್ಲಿನ ತೆಲುಗು ವಾರ್ತೆಗಳು ಸರಿಯಾಗಿ ಅರ್ಥವಾಗದಿದ್ದುದಕ್ಕೂ, ಅಲ್ಲೇ ಆರೇಳು ವರ್ಷ ಕಳೆದ ನನ್ನ ಸಹೋದರನಿಗೆ ತಮಿಳು ವಾರ್ತೆಗಳು ಕಬ್ಬಿಣದ ಕಡಲೆಯಾಗಿದ್ದುದ್ದನ್ನು ನಾನು ಉದಾಹರಣೆಯಾಗಿ ಕೊಡಬಲ್ಲೆ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 13, 2007 - 11:03pm — kishorpatwardhan

ಉ: ಕನ್ನಡದ ಆಡು ಮಾತಿಗೂ, ಬರೆಯುವ ಮಾತಿಗೂ ಏಕೆ ಬಹಳ ಅಂತರ???

kishorpatwardhan's picture

ಹಿಂದೀ ಭಾಷೆಯಲ್ಲೂ ದೇಸೀ ಮತ್ತು ಖಡೀ / ಖರೀ ಎಂಬ ಎರಡು ಭೇದಗಳು ಇವೆ.
ಮಾಯಾವತಿ ಮಾತಾಡುವಾಗ ’ಉತ್ತರ್ ಪರ್ ದೇಸ್’ ಅನ್ನುತಾಳಲ್ಲ? ಹಾಗೆ ಇಲ್ಲೂ ಶ ದ ಬದಲಿಗೆ ಸ ಉಚ್ಚಾರಣೆ ಇದೆ.
ಶಿಷ್ಟ ಹಿಂದೀಯಲ್ಲಿ ನಾನು ಅನ್ನುವುದಕ್ಕೆ मैं ಅನ್ನುವುದು; ದೇಸಿಯಲ್ಲಿ ಹಮ್ ಅನ್ನುವುದು.

ಹಿಂದಿಯೂ ಸಂಸ್ಕೃತ ಮತ್ತು ಉರ್ದು ಭಾಷೆಗಳ ಆಕ್ರಮಣಕ್ಕೆ ತುತ್ತಾಗಿದೆ ಎನ್ನುತ್ತಾರೆ ಹಿಂದೀ ಬಲ್ಲ ನನ್ನ ಕೆಲ ಬನಾರಸೀ ಮಿತ್ರರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 14, 2007 - 10:53am — mahesha

ಉ: ಕನ್ನಡದ ಆಡು ಮಾತಿಗೂ, ಬರೆಯುವ ಮಾತಿಗೂ ಏಕೆ ಬಹಳ ಅಂತರ???

mahesha's picture

ಕಿಶೋರ್‍..

ಹಿಂದಿಯಲ್ಲಿ ಕಡಿಬೊಲಿ, ಬನಾರಸೀ, ಬೋಜಪುರಿ/ಬಿಹಾರಿ, ಮೈಥಿಲಿ( ಇದು ಹಿಂದಿಯೇ ಅಲ್ಲ ಅಂತಾರೆ ಕೆಲವರು ), ರಾಜಸ್ತಾನಿ, ಮಾಗಧಿ, ಬಾರಕ್ಕಡಿ, ಪಾಹಾಡೀ, ಇನ್ನೂ ಹಲವು ಬಗ್ಗೆಯವಿವೆ.

ಅಲ್ಲೂ ಈಗ ಮೈಥಿಲಿಗೆ recongised statusಗಾಗಿ ಹೋರಾಟ ಒಡರಿದೆ. "ಮಿಥಿಲಾಂಜಲ ಅಂನೋ ರಾಜ್ಯ ಮಾಡಿ ಅಲ್ಲಿಗೆ ಮೈಥಿಲಿಯನ್ನು ರಾಜ್ಯದ ನುಡಿ ಮಾಡಿ ಅಂದ ಅವರ ಬೇಡಿಕೆ."

ಇನ್ನೋ ಭೋಜಪುರಿ ಸಿನಿಮಾಗಳು ಈಗ ಜೋರಾಗಿ ನಡೇತಾ ಇವೆ ಅಲ್ವಾ!!! ಈ ನುಡಿಗೂ status ಗಾಗಿ ಹೋರಾಟ ನಡೇಬಹುದು.

ಈ ೪೮ ಹಿಂದಿಯವರಲ್ಲೀ ಕಿತ್ತಾಟ ನಮ್ಮದು ಸರಿಯಾದ ಹಿಂದಿ, ಇವರದು ಸರಿ ಎಂದು. ದೂರದರ್ಶನದಲ್ಲಿ ಒಮ್ಮೆ "ಹಿಂದಿ ದಿವಸ" ಒಂದು ಪ್ರೋಗ್ರಾಮ್ ಬಂದಿತ್ತು. ಹಿಂದಿಯ ಕೊರತೆ ಬಗ್ಗೆ..

ಅದರಲ್ಲಿ ನೀವು ಹೇಳಿದಂತೆ ಸಕ್ಕದ ಮತ್ತು ಉರ್ದುಗಳ ಮಾತು ಎದ್ದುವು. ಆದರೆ ಹಲವು ಹೇಳಿದು ಉರ್ದು ಓಕೆ. ಉರ್ದು ಇನ್ನೂ ನಮ್ಮ ಸುತ್ತಲ ಮಂದಿ ಮಾತಾಡ್ತಾರೆ. ಜೊತೆಗೆ ಉರ್ದು ಸರಳವಾಗಿದೆ.

ಆದರೆ ಉರ್ದು ಎಂದು ನೇರ ಪಾರಸೀ ಒರೆಗಳನ್ನು ಸುರಿಯುವದನ್ನು ಸರಿಯಲ್ಲ ಅಂದರೆ. ಹಾಗೆ

ಸಕ್ಕದದ ಬಗ್ಗೆಯಂತೂ ಒಬ್ಬರು "ನೀವು ಹೆಚ್ಚು ನೇರ ಸಂಸ್ಕೃತ ಹಾಕಿ ಬರೆದ ಯಾವ ಹಿಂದಿ ಹೊತ್ತಗೆಗಳನ್ನು ಮಂದಿ ಓದದೇ, ಉರ್ದು ಹೊತ್ತಗೆಗಳನ್ನೇ ಹೆಚ್ಚು ಹೆಚ್ಚು ಓದಲು ಹತ್ತಿದ್ದಾರೆ. ತುಸು ಸಂಸ್ಕೃತ ತಗ್ಗಿಸಿ" ಎಂದು ಹೇಳಿದರು.

ಆದರೆ ಇಲ್ಲಿ ವಿಸಯ ಅದಲ್ಲ. ಬರವಣಿಗೆಯ ಹಿಂದಿ, ಒಂದು ಆಡುಹಿಂದಿಗೆ ಹತ್ತಿರವಾಗಿಯೇ ಇದೆ. ಖಡಿಬೊಲಿಗೆ ಅಲ್ವಾ!!

ಆದರೆ ಕನ್ನಡದಲ್ಲಂತೂ ಬರೆದಂತೆ ಮಾತಾಡೋ ಮಂದಿ ಕಡಮೇ ಅಂದ್ರೆ ಕಡಮೇ.

===========================================================

ಮಂಗಳೂರಿನ ಕಡೆಯವರು ಕನ್ನಡವನ್ನು ಬರೆದಂತೆ ಮಾತಾಡ್ತಾರೆ ಅಂತ ಬಹಳ ಮಂದಿ ಅಂದುಕೊಂಡಿದ್ದಾರೆ. ಆದರೆ ಅದು ಹಾಗಿಲ್ಲ. ಅವರ ಮಾತು ಬರೆವಣಿಗೆಗೆ ತುಸು ಹತ್ತಿರವಿರಬಹುದು, ಆದರೆ ಹೆಚ್ಚಿಲ್ಲ.!!!

( ಅಲ್ಲಿ ಹೆಚ್ಚು ಮಂದಿಯ ಮನೆಮಾತು ತುಳು, ಕೊಂಕಣಿ, ಬ್ಯಾರಿ, ಮುಂತಾದವು, ಕನ್ನಡ ಕಡಮೆ ಅದಕ್ಕೆ. ಕನ್ನಡದ ಬಳಕೆ ಹೆಚ್ಚು ಆಪೀಸುಗಳಿಗೆ , ಸ್ಕೂಲ್ಗಳಿಗೆ ಅಸ್ಟೆ. ಅಲ್ಲಿ ಹಲವೆಡೆ ಆಟೋದೋರು ತುಳುವಲ್ಲೇ ಮಾತಾಡೋದು )

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಂಗಳೂರು ಕನ್ನಡ
  • ಕನ್ನಡ ನುಡಿಗೆ ಮುಂದಿನ ದಿಕ್ಕು
  • ಮುತ್ತಿನ ಎದುರು ಕೇಸು.
  • ಕನ್ನಡ: ನಮಗಿರುವ ಆಯ್ಕೆಗಳು
  • ಕನ್ನಡ 'ಆಟ'ದ/sportive ನುಡಿಯಂತೆ ?
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸ್ನೇಹ ಬ೦ಧನ
  • ಓದಿದ್ದು ಕೇಳಿದ್ದು ನೋಡಿದ್ದು-51 (kann)ADIGA
  • "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
  • ದೊಡ್ಡವರ ದೊಡ್ಡತನ
  • ಕೈ ಕೊಟ್ಟ ಜೆಟ್ ಏರ್
  • ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
  • ಈ ರೀತಿ ನಿಮ್ಮ ಮನೇಲಿ ಆದರೆ ನೀವು ಏನು ಮಾಡ್ತೀರಿ?
  • ನೂರು ಕನ್ನಡಿಗಳ ದೇಗುಲ
  • ಇವತ್ತು ಕೈ ತೊಳೆಯುವ ದಿನವಂತೇ...!!!
  • ನಿಮ್ಮ ಬ್ರೌಸರ್‌ನಲ್ಲಿಯೇ ಬಿಸಿ ಬಿಸಿ ಸುದ್ದಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 16, 2008 - 5:53am
  • ASHOKKUMAR
    ಉ: " ಮನಸ್ಸುಗಳ ಏಕತೆ " -ಕಲಾಂ ಮೇಷ್ಟ್ರು-ಲೇಖಕರು : ಪ್ರೊ. ಎಚ್. ಆರ್. ರಾಮಕೃಷ್ಣರಾವ್,
    October 16, 2008 - 5:06am
  • venkatesh
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 16, 2008 - 5:03am
  • createam
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 4:56am
  • imunde
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 4:55am
  • venkatesh
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 16, 2008 - 4:50am
  • createam
    ಉ: ಕೈ ಕೊಟ್ಟ ಜೆಟ್ ಏರ್
    October 16, 2008 - 4:49am
  • hamsanandi
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 3:33am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:12am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:06am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 98 ಅತಿಥಿಗಳು ಆನ್ಲೈನ್ ಇರುವರು.


ಸೂರ್ಯನ ಎಳೆಬಿಸಿಲಿನಲ್ಲಿ ಬದುಕಿರಿ, ಸಮುದ್ರವನ್ನೇ ಈಜಿರಿ, ಕಾನನದ ತಂಗಾಳಿಯನ್ನು ಸೇವಿಸಿರಿ...

— ಎಮರ್ಸನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator