ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › mahesha ರವರ ಬ್ಲಾಗ್

ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ

April 14, 2007 - 6:34pm — mahesha

ನೆನ್ನೆಯೊಂದು ಹೊತ್ತಗೆಯಿಲ್ಲಿ ಓದಿದ ಒಂದು ಅರಿವು.

ಹೞಗನ್ನಡದ ಹೊತ್ತಿನಲ್ಲಿ ಕನ್ನಡನೆಲದ ಕರಾವಳಿ/ಕಡಲಂಚಲ್ಲಿ ಹೆಚ್ಚು 'ಬರೆವಣಿಗೆ' ನಡೆಯಿತು. ಅಂದರೆ ಅವೊತ್ತಿನಲ್ಲಿ ಕರಾವಳಿಯ ಕನ್ನಡ ಅರಸರು ಹೆಚ್ಚು ಗಟ್ಟಿಗರು ಮತ್ತು ಆಳುತ್ತಿದ್ದವರು. ಅದಕ್ಕೆ ಇಂದಿಗೂ ಕಡಲಂಚಿನ ಕನ್ನಡಿಗರ ಕನ್ನಡ ಹೞಗನ್ನಡವನ್ನು ಹೋಲುವುದು. ಅದರಲ್ಲೂ ಹವ್ಯಕ-ಕನ್ನಡ ಇಂದಿಗೂ ಹಲವು ಹಳೆಗನ್ನಡದ ಗುಣಗಳನ್ನು ತೋರುವುದು.

ತರುವಾಯ ಆದ ಮಾರ್ಪಾಟುಗಳಿಂದ, ಕನ್ನಡವನ್ನು ಆಳುವ ಅರಸರು ಕೃಷ್ಣೆ-ತುಂಗೆಯರ ಬಯಲಿನವರಾದರು. ಅದೇ ಕಾಲದಲ್ಲಿ ನಡುಗನ್ನಡವು ಬಂತು. ಬಸವಣ್ಣ ಮುಂತಾದ ಶರಣರ ನೆಲೆಯದು. ಆ ನೆಲೆದಲ್ಲೇ ಕನ್ನಡದ 'ಬರವಣಿಗೆ' ಹೆಚ್ಚು ನಡೆಯಿತು. ಅದಕ್ಕೆ ನಡುಗನ್ನಡದಲ್ಲಿ ಆ ಜಾಗದ ಕನ್ನಡದ ನೆರಳು ಎದ್ದು ಕಾಣುವುದು.

ಬಳಿಕ, ಕನ್ನಡದ ಅರಸರೆಂದರೆ 'ಎಮ್ಮೆನಾಡು(ಮೈಸೂರು)'ಇನ ಅರಸರು ಆದರು. ಅಂದರೆ ಕನ್ನಡದ ಆಳ್ವಕೆಯ ಬಿಂದು ಕಾವೇರಿ-ಹೇಮಾವತಿ ಬಯಲಾಯಿತು. ಈ ಜಾಗದಲ್ಲಿ ಕನ್ನಡದ 'ಬರೆವಣಿಗೆ' ಹೆಚ್ಚಿತು. ಅದಕ್ಕೆ ಇಂದು ಹೊಸಗನ್ನಡದಲ್ಲಿ ಎಮ್ಮೆನಾಡಿನ ಕನ್ನಡದ ನೆರಳು ಎದ್ದು ಕಾಣುವುದು.

ಹಾಗೆ ಯಾವ ಕಾಲದಲ್ಲಿ, ಯಾವ ಜಾಗದಲ್ಲಿ ಕನ್ನಡದ 'ಬರೆವಣಿಗೆ' ಹೆಚ್ಚು ನಡೆಯುವುದೋ, ಆ ಜಾಗದ ಕನ್ನಡದ ನೆರಳು ಅಂದಿನ ಕನ್ನಡದ ಮೇಲೆ ಇದ್ದೇ ಇರುವುದು.

ಇದು ಏಟು ಒಳ್ಳೆಯ ಗಮನ!!

ಯಾವ ಹೊತ್ತಗೆ? ಓದಿದವರಿಗೆ ತಟ್ಟನೆ ತಿಳಿಯುವುದು !!! Laughing out loud

=============================================
ಮನದೊಳಗಣ ಕಿಚ್ಚು ಮನೆಯ ಸುಟ್ಟಲ್ಲದೇ, ನೆರೆ ಮನೆಯ ಸುಡದೋ........

~.~
  • mahesha ರವರ ಬ್ಲಾಗ್
  • Login or register to post comments
  • 540 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 15, 2007 - 9:29am — ASHOKKUMAR

Re: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ

ASHOKKUMAR's picture

>>ಯಾವ ಹೊತ್ತಗೆ? ಓದಿದವರಿಗೆ ತಟ್ಟನೆ ತಿಳಿಯುವುದು

ಶಂಕರ ಭಟ್ಟರ ಪುಸ್ತಕವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 15, 2007 - 10:56am — hamsanandi

Re: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ

hamsanandi's picture

ಈ ವಾದದಲ್ಲಿ ಅಷ್ಟೇನೂ ಹುರುಳಿಲ್ಲ. ಕರಾವಳಿಯಲ್ಲಿದ್ದ ಅರಸರು ಯಾರು? ಕದಂಬರು ಇದ್ದರೂ, ಬನವಾಸಿ ಕದಂಬರ ಕಾಲದಲ್ಲಿ ಅಂತಹ ಬರವಣಿಗೆ ಏನೂ ಸಿಕ್ಕಿಲ್ಲವಲ್ಲ? ಮತ್ತೆ ಬಂದ ಚಾಲುಕ್ಯ ರಾಷ್ಟ್ರಕೂಟರ ನಾಡು ಕರಾವಳಿಗೆ ಹತ್ತಿರವಿಲ್ಲ.  ಕವಿರಾಜಮಾರ್ಗ ರಚಿತವಾಗಿರುವುದು ಕರ್ನಾಟಕಾಂಧ್ರ ಗಡಿಯ ಮಳಖೇಡದಲ್ಲಿ (ಅಥವಾ ಈಗಿನ ಮಹಾರಾಷ್ಟ್ರದ ಲಾತೂರಿನಲ್ಲಿರಬಹುದು). ಪಂಪ ಇದ್ದದ್ದು (ಈಗಿನ) ಆಂಧ್ರದ ಮಹಬೂಬನಗರದ ಬಳಿಯ ವೆಂಗಿಯಲ್ಲಿ. ರನ್ನನಿದ್ದದ್ದು ಮುಧೋಳದಲ್ಲಿ. ಚಾಲುಕ್ಯ ರಾಷ್ಟ್ರಕೂಟರ ರಾಜ್ಯಗಳ ರಾಜಧಾನಿಗಳೂ ಕೃಷ್ಣೆ ಗೋದಾವರಿಯರ ಬಯಲಲ್ಲೇ. ಇದೇ ಕಾಲದ ಹೊಯ್ಸಳರೂ ಸಮುದ್ರ ತಡಿಯವರಲ್ಲ ( ರಾಮಚಂದ್ರ ಚರಿತ ಪುರಾಣ)

ಹವ್ಯಕ ಕನ್ನಡ ಹಳೆಗನ್ನಡದ ಗುಣಗಳನ್ನು ಉಳಿಸಿಕೊಂಡಿರುವುದು ನಿಜ. ಆದರೆ ಇಲ್ಲಿ ಹೇಳಿರುವ ಕಾರಣ ಮಾತ್ರ ಸರಿ ಇಲ್ಲ.

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 15, 2007 - 1:48pm — mahesha

Re: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ

mahesha's picture

ಹಂಸಾನಂದೀ

ನಿಮ್ಮ ಮಾತು ಸರಿಯಿರಬಹುದು.... ನೀವು ಹೞಗನ್ನಡ, ನಡುಗನ್ನಡ ಮತ್ತು ಹೊಸಗನ್ನಡವನ್ನು ಚೆನ್ನಾಗಿ ಕುರಿತೋದೇ, ಇದನ್ನು ಹೇಳಿರುತ್ತೀರಿ ಅಂತ ನಾನು ಅಂದುಕೊಂಡಿಹೆನು.

ಆದರೆ ಅವರ ಹೇಳಿದ ಮಾತು ನನ್ನ ತುಸು ಒಪ್ಪೆಯಾಯಿತು. ಅದಕ್ಕೆ ಅವರು ಈಯ್ಯುವ ಕಾರಣಗಳೇ ಓಸುಗರ.

ಆ ಹೊತ್ತಗೆ ಅಶೋಕ ಹೇಳಿದಂತೆ "ಕನ್ನಡ ಬರಹವನ್ನು ಸರಿಪಡಿಸೋಣ". ನೀವು ಒಮ್ಮೆ ನೋಡಬಹುದು. ಅವರ ಮಾತುಗಳನ್ನು ತಪ್ಪೆಂದು ನಮಗೆ ಇನ್ನೂ ಬಿಡಿಸಿ ತೋರಬಹುದು. ( just like a good argument; no personal, sportive ಆಗಿ )

ನನ್ನಿ...
=======================================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 23, 2008 - 12:20pm — kannadakanda

ಉ: Re: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ

kannadakanda's picture

ಆದರೆ ಕದಂಬರ ಕಾಲದ ಹನ್ಮಿಡಿಶಾಸನ (ಹಲ್ಮಿಡಿ) ಸಿಕ್ಕಿರೋದು ಹಾಸನದ ಹನ್ಮಿಡಿಯಲ್ಲಿ. ಕರಾವಳಿಯಲ್ಲಿ ಕನ್ನಡ ಎಂದೂ ಪ್ರಬಲವಾಗಿರಲೇ ಇಲ್ಲ. ಕನ್ನಡನಾಡಿನ ಕರಾವಳಿ ಉತ್ತರಕನ್ನಡ ಮತ್ತು ದಕ್ಷಿಣಕನ್ನಡವಿದ್ದರೂ ದಕ್ಷಿಣಕನ್ನಡದ ಆಡುಭಾಷೆ ತುಳು. ಉತ್ತರಕನ್ನಡದಲ್ಲಿ ಕನ್ನಡ ಪ್ರಬಲವಾಗಿದ್ದ ಬಗ್ಗೆ ಐತಿಹಾಸಿಕ ಪುರಾವೆಗಳಿಲ್ಲ. ಕನ್ನಡ ಬಳೆದಿದ್ದು ಮತ್ತು ಉೞಿದಿದ್ದು ಹೆಚ್ಚಾಗಿ ಘಟ್ಟ ಪ್ರದೇಶ ಮತ್ತು ಒಳನಾಡಿನ ಬಯಲುಸೀಮೆಯಲ್ಲಿಯೇ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 23, 2008 - 12:33pm — mahesha

ಉ: Re: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ

mahesha's picture

ಹೋಲ್ಡ್ ಆನ್..!!

ತುಳು ಬಗ್ಗೆ ದೊಡ್ಡ ಗೊಂದಲ ಇದೆ. ಅದು ತೆಂಕಣದ್ರಾವಿಡನುಡಿಕೂಟಕ್ಕೆ ಸೇರಿಸಕ್ಕೆ ಆಗದೇ, ತೆಲುಗು ಮುಂತಾದ ನಡುದ್ರಾವಿಡಕೂಟಕ್ಕೆ ಹತ್ತಿರವಾಗಿಯಂತೆ...

ಅದಕ್ಕೆ ತುಳುಮಂದಿಯೂ ಒಂದಾನೊಂದು ಕಾಲದಲ್ಲಿ ಕೊಂಕಣಿಗಳಂತೆ ಬಡಗಿನಿಂದ ಕೆಲಸಕ್ಕೆ ವಲಸೆ ಬಂದರು ಎಂಬ ಮಾತೂ ಇದೆ. ( ತುಳು ಕೆಲಸಗಾರರು, ಬೆಂಗಳೂರಲ್ಲಿ ತಮಿಳು ಕೆಲಸಗಾರರಂತೆ ಶಿವಮೊಗ್ಗ ಮುಂತಾದ ಕಡೆ ಕೆಲಸ ಬರ್ತಾರೆ ಎಂದು ಇಲ್ಲವೇ? )

ತುಳು ಶಾಸನಗಳು ಎಲ್ಲಿವೆ?

ಹೀಗೆ ನಿಕ್ಕುವವಾಗಿ ಏನೂ ಹೇಳಲಾಗದೇ ಇರೋದರಿಂದ ತುಳು ಮಂದಿ ಕನ್ನಡನೆಲದವರು ಎಂದೇ ಬಗೆದುಕೊಂಡಿದ್ದೀವಿ.

ಕೊಂಕಣಿಯೂ ಇಂದು ಗೋವೆಯ ಆಡುನುಡಿ ಆದರೆ, ಅಲ್ಲಿಯ ಮೂಲನೆಲಸಿಗರು ಹಾಲಕ್ಕಿ ಮಂದಿಯಂತೆ. ಹಾಗೇ ಮುಂಬಯ್ಯ ಬೇರುನೆಲಸಿಗರು ಕೋಳಿ ಬುಡಗಟ್ಟು ಕನ್ನಡದವರು ಎಂಬ ಮಾತಿದೆ..!!

ಇಲ್ಲಿ ಮಾತಿರೋದು ಕರಾವಳಿ ಕನ್ನಡ ಹಳಗನ್ನಡಕ್ಕೆ ಹತ್ತಿರವಾಗಿದೆ ( ಹವ್ಯಕ ಕುಂದಾಪುರ ಮುಂತಾದವು ).. ಮುಂತಾದವು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 22, 2008 - 4:14pm — kannadakanda

ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ

kannadakanda's picture

ಹೞಗನ್ನಡದ ಹರವು ಕಾವೇರಿಯಿಂದಮಾ ಗೋದಾವರಿವರೆಗಮಿರ್ದತ್ತು. ಬಱಿಯ ಕರಾವಳಿಯಲ್ಲ. ಕವಿರಾಜಮಾರ್ಗಕಾರ, ಪಂಪ, ರನ್ನ, ಪೊನ್ನ, ಜನ್ನ, ನಾಗಚಂದ್ರ ಕರಾವಳಿಯವರಲ್ಲ. ಕವಿರಾಜಮಾರ್ಗಕಾರ ಪಟ್ಟದಕಲ್ಲು, ಪುಲಿಗೆಱೆ, ಕೊಪ್ಪಳ ಮತ್ತು ಒಂಕುಂದ(ಈಗಿನ ಒಕ್ಕುಂದ) ನಡುವಿನ ಕನ್ನಡ ಬೞಸುತ್ತಿದ್ದೇನೆ ಎನ್ನುತ್ತಾನೆ. ಇವಾವುವು ಕರಾವಳಿಯ ಪ್ರದೇಶಗಳಲ್ಲ. ರನ್ನ ಬಾಗಲಕೋಟೆಯ ಮುಧೋಳದವನು. ಪಂಪನ ಕನ್ನಡ ಅವನೇ ಹೇೞುವಂತೆ ಪುಲಿಗೆಱೆಯ ತಿರುಳ್ಗನ್ನಡ (ಈಗಿನ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಈ ಪುಲಿಗೆಱೆ) ಜನ್ನ ಹೊಯ್ಸಳರ ಆಸ್ಥಾನ ಕವಿ (ಹಾಸನ ಜಿಲ್ಲೆ) ನಾಗಚಂದ್ರ ಬಿಜಾಪುರದವನು. ಜನ್ನನೂ ಪಂಪನೂ ಸಂಬಂಧಿಗಳು. ಇವರಾರೂ ಕರಾವಳಿಯವರಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇದೂ ಕನ್ನಡ ಒರೆಗಂಟು
  • ಕನ್ನಡದ ಕಂಪು
  • ಕನ್ನಡ ಕನ್ನಡ ಕನ್ನಡ
  • ಮಂಗಳೂರು ಕನ್ನಡ
  • ಹೊತ್ತಿತೊ ಹೊತ್ತಿತು ಕನ್ನಡದ ದೀಪ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 49 ಅತಿಥಿಗಳು ಆನ್ಲೈನ್ ಇರುವರು.


ಮನುಷ್ಯನ ಉತ್ತಮ ಅಭ್ಯಾಸವೆಂದರೆ ತಮ್ಮ ಅತ್ಮಸಾಕ್ಷಿಯೊಡನೆ ಪ್ರಾಮಾಣಿಕತೆ.

— ಸಿಗ್ಮಂಡ್ ಫ್ರಾಯ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator