ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › mahesha ರವರ ಬ್ಲಾಗ್

Pre-modern languages. ಒಂದು ನೋಟ

May 14, 2007 - 5:06pm — mahesha

http://ccat.sas.upenn.edu/~haroldfs/public/

ಈ ಮೇಲಿನ ತಾಣದಲ್ಲಿ ನುಡಿಗಳ ಬಗ್ಗೆ ಹಲವು ಹುಬ್ಬೇರಿಸುವಂತ ಅರಿಕೆಗಳು, ತಿಳಿವುಗಳಿವೆ. ಕನ್ನಡದ ಬಗ್ಗೆ ಒಂದು ವಿಶೇಶ ಕಡತವೂ ಇದೆ.

ಕನ್ನಡವನ್ನು UNISCO ಯಾಕೆ Endangered ನುಡಿಯಂದು ಪಟ್ಟಿಸಿದೆ. ಅದಕ್ಕೆ ಕಾರಣಗಳು ಇವೆ.

ಮಿಕ್ಕ ಕಡತಗಳಲ್ಲಿ, ಹೇಗೆ ಹಲವು ನುಡಿಗಳು pre-modern ಆಗಿ ಸಾಯುತ್ತಿವೆ. ಅದಕ್ಕೆ ಕಾರಣ/ಓಸುಗರಗಳಾವುವು ಮುಂತಾದವು ಹೇಳುತ್ತವೆ.

ಮುಕ್ಯವಾಗಿ diglossia, triglossia ಬಗ್ಗೆ ಮಾಹಿತಿ ಚೆನ್ನಾಗಿದೆ.

H ನುಡಿ ಮತ್ತು L ನುಡಿಗಳು ಹತ್ತಿರ ಬರದೇ ಹೋದರೆ ಏನೇನು ತೊಂದರೆ ಎಲ್ಲ ಬಿಡಿಬಿಡಿಯಾಗಿ ತಿಳಿಸಿದ್ದಾರೆ.

ಹೇಗೆ ಹಲವು ನುಡಿಗಳು ಒಂದು ಹೊರನುಡಿಯಿಂದ ಒರೆಗಳನ್ನು ಕೊಂಡು ಕೊಂಡು ಹಾಳಾದವು, ಹಾಗೆ
ತಮಿಳಂತೆ ಹೇಗೆ ಹಲವು ನುಡಿಗಳು ಸಿಕ್ಕಾಬಟ್ಟೆ pure ಮಾಡಲು ಹೋಗಿ, ಸಂಕಟಕ್ಕೆ ಸಿಕ್ಕವೂ ಇದೂ ಇದೆ.

ಒಂದು ನುಡಿಯು ಬದುಕಬೇಕಾದರೆ ಹೇಗೆ ಅದಕ್ಕೆ language-engineering, language-planning ಇಂದು ಬೇಕಾಗಿದೆ ಎಂದು ತಿಳಿಸುವುದು ( ಮಾದರಿ Indonesia, France )

ಹುರುಪಿರುವವರು ಓದಿಕೊಳ್ಳಬೇಕು!!!

~.~
  • mahesha ರವರ ಬ್ಲಾಗ್
  • Login or register to post comments
  • 832 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 15, 2007 - 8:31pm — ismail

ಉ: Pre-modern languages. ಒಂದು ನೋಟ

ismail's picture

ಓಸುಗರಗಳೇವಾವುವು, ಒರೆಗಳನ್ನು

ಅಂದರೇನು ಎಂಬುದನ್ನು ಕನ್ನಡದಲ್ಲಿ ವಿವರಿಸಿದ್ದರೆ ಒಳ್ಳೆಯದಿತ್ತು. ಹಾಗೆಯೇ 'ಹಲವು ನುಡಿಗಳು ಸಿಕ್ಕಾಬಟ್ಟೆ pure ಮಾಡಲು ಹೋಗಿ, ಸಂಕಟಕ್ಕೆ ಸಿಕ್ಕವೂ ಇದೂ ಇದೆ.' ಎಂಬ ನಿಮ್ಮ ಅಭಿಪ್ರಾಯವನ್ನು ನಾನು ಪೂರ್ಣವಾಗಿ ಒಪ್ಪುತ್ತೇನೆ. ಈ ಬಗೆಯ ಪ್ರಯತ್ನವೊಂದು ಈಗ ಸಂಪದದಲ್ಲಿಯೂ ನಡೆಯುತ್ತಿರುವುದರಿಂದ ಅದನ್ನು ಕನ್ನಡವನ್ನು ಸಂಕಟಕ್ಕೆ ಸಿಲುಕಿಸುವ ಪ್ರಯತ್ನ ಎಂದು ನಾನು ಭಾವಿಸಿದರೆ ತಪ್ಪಾಗುತ್ತದೆಯೇ?

ಇಸ್ಮಾಯಿಲ್

ನನ್ನ ಬ್ಲಾಗ್: http://ismail.sampada.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2007 - 9:14pm — mahesha

ಉ: Pre-modern languages. ಒಂದು ನೋಟ

mahesha's picture

ಓಸುಗರಗಳೇವಾವುವು,

ಇದನ್ನು ಸರಿಪಡಿಸಿದ್ದೇನೆ.

ಈ ಬಗೆಯ ಪ್ರಯತ್ನವೊಂದು ಈಗ ಸಂಪದದಲ್ಲಿಯೂ ನಡೆಯುತ್ತಿರುವುದರಿಂದ ಅದನ್ನು ಕನ್ನಡವನ್ನು ಸಂಕಟಕ್ಕೆ ಸಿಲುಕಿಸುವ ಪ್ರಯತ್ನ ಎಂದು ನಾನು ಭಾವಿಸಿದರೆ ತಪ್ಪಾಗುತ್ತದೆಯೇ?

೧) ಇದು ನಾನು/ನಾವು ಹೆಚ್ಚು "ಅಣ್ಣೆಗನ್ನಡದ" ಒರೆಗಳನ್ನು ಬಳಸುವುದರ ಬಗ್ಗೆ ಮಾತಾದರೆ , ಕೆಲವು ಸಂಗತಿ ತಿಳಿಯಾಗಲಿ:
ನನಗೆ/ನಮಗೆ ನಮ್ಮ ಕನ್ನಡದಲ್ಲಿ ಅಡಗಿರುವ ಒರೆಗಳನ್ನು ತಿಳಿಯಲು ಹಂಬಲವಿದೆ. ಅದಕ್ಕೆ ನಾವು ಒರೆಗಳನ್ನು ಹುಡುಕಿಕೊಂಡು ನಮ್ಮ ತಲೆಯಲ್ಲಿ, ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದೇವೆ/ನೆ. ಇದು ನಮ್ಮ ಸ್ವಂತ/ಆಯದ ಇಂಗಿತ. ನಮ್ಮ ಬರಹಗಳು ಹಿಡಿಸದಿದ್ದರೆ ಅಡ್ಡಿಯಿಲ್ಲ.

ಹೀಗೆ ಕನ್ನಡದ, ಆದರೆ ಹೆಚ್ಚು ಬಳಕೆಯಲ್ಲಿರದ ಒರೆಗಳನ್ನು ಬಳಸಲೇ ಬಾರದು ಎಂಬ ಕಟ್ಟುನಿಟ್ಟಾದ ಕಟ್ಟಳೆ ಸಂಪದಲ್ಲಿಲ್ಲ. ಇದೆಯೇ? !!

೨) ಎಲ್ಲಿಯೂ ನಾನು "pure" ಕನ್ನಡದ ಬಗ್ಗೆ ಮಾತು ಆಡೇ ಇಲ್ಲ. ಬದಲಿಗೆ( ಬದಲು ಉರ್ದು ), ಆಡುಮಾತಿನಲ್ಲಿರುವ ಒರೆಗಳಿಗೆ ಹತ್ತಿರವಾಗಿ ಬರಹ ಇರಬೇಕು ಎಂದು ಹೇಳಿದ್ದೇವೆ.

ಪ್ರಯತ್ನಕ್ಕೆ ಅಣ್ಣೆಗನ್ನಡದಲ್ಲಿ 'ಮೊಗಸು' ಅಂತ ಇದೆ, ಅಂದಾಗ, ನಾನು ತಿಳಿಸಬಯಸಿದ ಸಂಗತಿ, ನಮ್ಮ ಕನ್ನಡದಲ್ಲೇ 'ಮೊಗಸು' ಅಂತ ಒರೆ ಇದೆ, ಆದರೆ ಪ್ರಯತ್ನ ಕನ್ನಡದಲ್ಲ, ಎರವಲು ಬಂದುದು ಎಂದೇ ಹೊರತು,

ಎಲ್ಲರೂ ಕಟ್ಟುನಿಟ್ಟಾಗಿ "ಪ್ರಯತ್ನ"ದ ಬದಲಿಗೆ "ಮೊಗಸು"ಅನ್ನೇ ಬಳಸಲೇಬೇಕೆಂದು ಎಲ್ಲಿಯೂ ಹೇಳಿಲ್ಲ.

ಕೆಲವರಿಗೆ ಎಸ್ಟೇ ಆದರೂ "ಭಾಷೆಯೊಂದು ಸಂವಹನ ಮಾಧ್ಯಮ" ಅಸ್ಟೇ. ಆದರೆ ಹಲವರಿಗೆ ತಾಯ್ನುಡಿ ಬರಿ ಒಂದು ಸರಕಲ್ಲ! ಅದಕ್ಕೆ ಈ ಎರಡು ಬಗೆಯ ಮಂದಿಯಲ್ಲಿ 'ಭಾವನೆಗಳ'/ಅನಿಸಿಕೆಗಳ ಅಂತರ ಇದ್ದೇ ಇರುತ್ತದೆ.

ಕೊನೆಗೆ
ನೀವು "ಭಾವಿಸಿದರೆ"/"ಅಂದುಕೊಂಡರೆ" ಅದು ಸರಿಯೋ ತಪ್ಪೋ ಎಂದು ಹೇಗೆ ನನಗೆ ಹೇಳಲಾಗುವುದು? ಅದು ಒಂದು ಭಾವನೆ. ಒಂದು fact ಅಲ್ಲ!!! ಅವರವರ ಭಾವಗಳಿಗೆ/ಅನಿಸುಗಳಿಗೆ ಅವರೇ ಹೊಣೆ!

ಇದು ಹೇಗಾಯಿತು ಅಂದರೆ "ನನಗೆ ನೋವು/ದು:ಖವಾಗಿದೆ, ಇದು ದಿಟವೇ?" ಎಂದು ಕೇಳಿದಂತೆ!
=============================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2007 - 9:45pm — ismail

ಉ: Pre-modern languages. ಒಂದು ನೋಟ

ismail's picture

ತಮ್ಮ ಅಭಿಪ್ರಾಯವನ್ನು ಕನ್ನಡದಲ್ಲಿ ಬರೆಯಬೇಕಾಗಿ ವಿನಂತಿಸುತ್ತೇನೆ.

ಇಸ್ಮಾಯಿಲ್ ನನ್ನ ಬ್ಲಾಗ್: http://ismail.sampada.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2007 - 9:48pm — ASHOKKUMAR

ಉ: Pre-modern languages. ಒಂದು ನೋಟ

ASHOKKUMAR's picture

ಬರಹ ಕನ್ನಡದಲ್ಲೇ ಇದೆಯಲ್ಲ! font ಸಮಸ್ಯೆ ಏನಾದರೂ ಇದೆಯೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2007 - 9:49pm — mahesha

ಉ: Pre-modern languages. ಒಂದು ನೋಟ

mahesha's picture

Smiling
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2007 - 6:31pm — Khavi

ಉ: Pre-modern languages. ಒಂದು ನೋಟ

Khavi's picture

ಅರ್ಥವಾಗದೆ ಇದ್ದವರಿಗೆಲ್ಲಾ ಸುಮ್ಮನೆ ಯಾಕೆ ಇದೆಲ್ಲಾ ವಾದ.
ಅವರವರ ಆಸಕ್ತಿಗೆ ತಕ್ಕಂತೆ ಎಲ್ಲರೂ ಬರೀತಾನೆ ಇದಾರಲ್ಲ.
ಮಹೇಶ, ಸುನೀಲ, ಸಂಗನ, ವೈಭವ... ಇವರೆಲ್ಲರಿಗೂ ಕನ್ನಡದ ನುಡಿ ಬಗ್ಗೆ ಅಪಾರ ಆಸಕ್ತಿ, ಪ್ರೀತಿ ಇದೆ ಅದಕ್ಕೆ ಬರೀತಾರೆ.
ಹಾಗೆನೆ ಅದನ್ನು ಓದಲಿಕ್ಕೆ ಆಸಕ್ತಿ ಇರುವಂತಹ ನನ್ನಂತೋರು ಓದಿಕೊಳ್ಳುತ್ತೀವಿ.. ಬಿಡುವಾದರೆ ನಾವು ಕೂಡ ದನಿಗೂಡಿಸುತ್ತೀವಿ.
ನಿಮಗೂ ಇಷ್ಟವಾದರೆ ಬರೀರಿ, ಇಲ್ಲವಾದರೆ ನಿಮಗೆ ಯಾವುದು ಇಷ್ಟವಾಗುವುದೋ ಆ ಬ್ಲಾಗಿಗೆ ಹೋಗಿ ಚರ್ಚೆ ಮಾಡಿ..
ಅದು ಬಿಟ್ಟು ಉಳಿದವರಿಗೆ ತೊಂದರೆ ಆಗುತ್ತೆ ಅಂತ ಮಾತ್ರ ಹೇಳಬೇಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2007 - 11:49pm — ವೈಭವ

ಉ: Pre-modern languages. ಒಂದು ನೋಟ

ವೈಭವ's picture

ಎಲ್ಲ ಕನ್ನಡದಲ್ಲೇ ಇದಿಯಲ್ಲ.... Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2007 - 4:52pm — ismail

ಉ: Pre-modern languages. ಒಂದು ನೋಟ

ismail's picture
ಕನ್ನಡದಲ್ಲಿ ಅಲ್ಲ ಕನ್ನಡ ಅಕ್ಷರಗಳಲ್ಲಿದೆ ಎಂಬುದು ಹೆಚ್ಚು ಸರಿಯಾಗಬಹುದೇನೋ?
 
ಇಸ್ಮಾಯಿಲ್
ನನ್ನ ಬ್ಲಾಗ್: http://ismail.sampada.net
  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2007 - 10:22am — mahesha

ಉ: Pre-modern languages. ಒಂದು ನೋಟ

mahesha's picture

ಚಂದಾಗಿರಿ ಅಣ್ಣಾವ್ರೆ,

ನೋಡ್ರಪ್ಪೋ, ನಾನ್ ಬರೆದುದು ಈಟ್ ಮಂದಿಯ ತಲೆಗಳಿಗೆ ಸಲೀಸಾಗಿ ಇಳಿದೈತೆ, ಆದರೆ ಪಾಪ ಇವ್ರುಗೆ ಯಾಕೆ ಅರ್ತ ಆಗ್ನಿಲ್ವೋ, ನಂಗ್ ತಿಳೀದು.

ಇರಲಿ ಬುಡಿ. !
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2007 - 3:12pm — ಶ್ಯಾಮ ಕಶ್ಯಪ

ಉ: Pre-modern languages. ಒಂದು ನೋಟ

ಶ್ಯಾಮ ಕಶ್ಯಪ's picture

ಇವರೊಬ್ಬರೇ ಅಲ್ಲ ಸ್ವಾಮಿ.
ಸುಮಾರು ಜನರಿಗೆ ಅರ್ಥವಾಗಿಲ್ಲ. ಆದರೆ ಸುಮ್ಮನೆ ವಿಷಯವನ್ನೇ ಬಿಟ್ಟು ಈ ಪದ ಪ್ರಯೋಗ ಸರಿಯಲ್ಲ ಆ ಪದ ಪ್ರಯೋಗ ಸರಿಯಲ್ಲ ಅಂತ ವಾದ ಮಾಡುತ್ತಾ ಕೂತರೆ ಮೂಲ ವಿಷಯ ಮರತೇ ಹೋಗಿಬಿಡಬಹುದೆಂಬ ಕಾರಣಕ್ಕೆ ಬೇರೆಯವರು ಬೇರೆ ಜಾಗಗಳಲ್ಲಿ ಮಾತಾಡಿಲ್ಲ, ಮಾತಾಡಿದರೂ ಸುಮ್ಮನಾಗಿಬಿಟ್ಟಿದ್ದಾರೆ ಅಷ್ಟೆ. ಭಾಷೆಗಿಂತ ವಿಷಯ ಮುಖ್ಯವಾದ ಲೇಖನಗಳಲ್ಲಿ ಭಾಷೆಯ ವಿಷಯ ತಂದು ವಿಷಯದ ಚರ್ಚೆಯೇ ಆಗಿರದೇ ಉಳಿಯುವುದನ್ನು ನೀವೇ ನೋಡಿದ್ದೀರಿ. ಅದಕ್ಕೆ ಸುಮಾರಾಗಿ ನೀವೂ ಕಾರಣರೇ. ಇದು ಸಂಪದದಲ್ಲಿ ಸಹೃದಯಿಗಳು ಭಾಗಿಯಾಗುವುದಕ್ಕೇ ಕುಂದಾಗುತ್ತದೆ ಎಂದು ಮಾತ್ರ ಮರೆಯಬೇಡಿ.

ಸಧ್ಯದ ನಿಮ್ಮ ಈ ಲೇಖನ ಹಾಗು ವಿಷಯ ಸೂಕ್ತ ಜಾಗದಲ್ಲಿದೆ. ಇನ್ನುಮೇಲೆ ನಿಮಗೆ ಯಾರದ್ದಾದರೂ ಲೇಖನದಲ್ಲಿನ ಭಾಷೆಯಲ್ಲಿ ಕೊರತೆ ಕಂಡುಬಂದರೆ ಈ ರೀತಿ ಬೇರೆಯೇ ಲೇಖನ ಬರೆದು ಪ್ರತಿಸ್ಪಂದಿಸಿದಿರಿ.
--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2007 - 3:28pm — mahesha

ಉ: Pre-modern languages. ಒಂದು ನೋಟ

mahesha's picture

ನೋಡೀ,

ಸಧ್ಯದ ನಿಮ್ಮ ಈ ಲೇಖನ ಹಾಗು ವಿಷಯ ಸೂಕ್ತ ಜಾಗದಲ್ಲಿದೆ. ಇನ್ನುಮೇಲೆ ನಿಮಗೆ ಯಾರದ್ದಾದರೂ ಲೇಖನದಲ್ಲಿನ ಭಾಷೆಯಲ್ಲಿ ಕೊರತೆ ಕಂಡುಬಂದರೆ ಈ ರೀತಿ ಬೇರೆಯೇ ಲೇಖನ ಬರೆದು ಪ್ರತಿಸ್ಪಂದಿಸಿದಿರಿ.

೧. ಇದನ್ನೇ ನೀವು ಮಾಡಿ, ಒಂದು ಹೊಸ ಬರಹದಲ್ಲಿ ಹಾಕಿದ್ದರೆ, ನಮಗೆ ಮಾದರಿಯಾಗುತ್ತಿದ್ದಿರಿ. ಆದರೆ ನೀವು ಹಾಗೆ ಮಾಡಲಿಲ್ಲ.
ಬದನೇಕಾಯಿ ಮತ್ತು ಪಂಡಿತರ ಕತೆ ನೆನಪಾಯ್ತು.
೨. ಈ ಎಳೆಯಲ್ಲಿ ಇಲ್ಲದ ಸಲ್ಲಾಪ ಎತ್ತಿದ ದೊಡ್ಡಬುದ್ದಿಗಳು ಯಾರು? ಅದಕ್ಕೆ ಒತ್ತುಕೊಡುತ್ತಿರುವವರು ಯಾರು ಅಂತ ಅವರವರೇ ನೋಡಿಕೊಳ್ಳಬೇಕು.

ನಾವು ಎಲ್ಲಿ ಮಾತಾಡಬೇಕೋ ಅಲ್ಲೇ ಮಾತಾಡುತ್ತಾ ಇದ್ದೀವಿ. ತುಸು ನೀವೇ ನೋಡಿ!

ಸುಮಾರು ಜನರಿಗೆ ಅರ್ಥವಾಗಿಲ್ಲ.

ಕುಂತಲ್ಲೇ statistics, survey. Smiling. ಅದರೂ ಇದು ಬರೆದುದು ಎಲ್ಲರಿಗೂ ಅಲ್ಲ!!

ಬ್ಲಾಗಿನ ಮೊದಲಲ್ಲಿರುವ ಈ ಸಾಲನ್ನು ಗವನಿಸಿ.

ಹುರುಪಿರುವವರು ಓದಿಕೊಳ್ಳಬೇಕು!!!

ಅದಕ್ಕೆ ಸುಮಾರಾಗಿ ನೀವೂ ಕಾರಣರೇ. ಇದು ಸಂಪದದಲ್ಲಿ ಸಹೃದಯಿಗಳು ಭಾಗಿಯಾಗುವುದಕ್ಕೇ ಕುಂದಾಗುತ್ತದೆ ಎಂದು ಮಾತ್ರ ಮರೆಯಬೇಡಿ.

Smiling ನೋಡಿ ನೀವು ಕೂಡ ಇಲ್ಲದ ಸಲ್ಲಾಪಕ್ಕೆ ಕಾರಣರಾದಿರಿ ಈ ಎಳೆಯಲ್ಲಿ. ನಾವು "Pre-modern languages" ಬಗ್ಗೆ ಮಾತಾಡ್ತಾ ಇದ್ವು.
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2007 - 7:19pm — ಶ್ಯಾಮ ಕಶ್ಯಪ

ಉ: Pre-modern languages. ಒಂದು ನೋಟ

ಶ್ಯಾಮ ಕಶ್ಯಪ's picture

ಮೇಲೆ ಹೇಳಿದ ಮಾತುಗಳನ್ನು ತಮಗೆ ವೈಯುಕ್ತಿಕ ಈಮೈಲ್ ಮಾಡಬಹುದಾಗಿತ್ತು.. ಆದರೆ ಮುಖ್ಯ ವಿಷಯದಲ್ಲಿ ಪರಿಣತಿಯೂ ಇಲ್ಲದೆ, ಸುಮ್ಮನಿರಲಾರದೆ ವಾದ ಮಾಡಲೇ ಬೇಕು ಎಂಬ ತಮ್ಮ ನಿರ್ಧಾರ ಬೇರೆಯವರಿಗೆಷ್ಟು ಕಿರಿಕಿರಿ ಮಾಡುತ್ತದೆ ಎಂಬುದು ತಮಗೆ ಈಗಲಾದರೂ ಅರ್ಥವಾಗಲಿ ಎಂದು ಬಯಸಿಯೇ, ಈ ವಾದವೇ ಅಸಂಬದ್ಧ ಎಂದು ಗೊತ್ತಿದ್ದೂ ವಾದಿಸುತ್ತಿರುವುದು ನಾನಿಲ್ಲಿ, ತಾವುಗಳು ಹಲವೆಡೆ ಮಾಡಿದಂತೆ.

ಸುಮಾರು ಜನಕ್ಕೆ ಅರ್ಥ ಆಗ್ಲಿಲ್ಲ ಅಂತ ಸರ್ವೇ ಮಾಡಿ ಅಂಕಿ ಅಂಶಗಳೊಂದಿಗೇ ನಾನು ಮಾತಾಡಿತ್ತಿರುವುದು ಸ್ವಾಮಿ.

೪ ಜನ ಬಹಳ ಚೆನ್ನಾಗಿದೆ ಎಂದು ಹೇಳಿದ ತಕ್ಷಣ
" ನೋಡ್ರಪ್ಪೋ, ನಾನ್ ಬರೆದುದು ಈಟ್ ಮಂದಿಯ ತಲೆಗಳಿಗೆ ಸಲೀಸಾಗಿ ಇಳಿದೈತೆ, ಆದರೆ ಪಾಪ ಇವ್ರುಗೆ ಯಾಕೆ ಅರ್ತ ಆಗ್ನಿಲ್ವೋ, ನಂಗ್ ತಿಳೀದು." ಅಂದ್ರಲ್ಲ, ತಮ್ಮ ಸರ್ವೆ ಎಷ್ಟು ವಿಸ್ತಾರವಾಗಿತ್ತು ಎಂಬುದನ್ನು ನಾನೂ ಊಹಿಸಬಲ್ಲೆ.

ತಾವು ಕನ್ನಡವನ್ನು ಸಂಕಟಕ್ಕೆ ಸಿಲುಕಿಸುತ್ತಿದ್ದೀರೋ ಅಲ್ಲವೋ ನಾನರಿಯೆ. ನನಗೆ ಅದರಲ್ಲಿ ಆಸಕ್ತಿಯೂ ಇಲ್ಲ. ನನ್ನಂತಹ ಸಂಪದಿಗರನ್ನು ಸಂಕಟದಲ್ಲಿ ಸಿಲುಕಿಸುತ್ತಿರುವುದಂತೂ ನಿಜ.

--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2007 - 7:56pm — mahesha

ಉ:

mahesha's picture

ನನ್ನಂತಹ ಸಂಪದಿಗರನ್ನು ಸಂಕಟದಲ್ಲಿ ಸಿಲುಕಿಸುತ್ತಿರುವುದಂತೂ ನಿಜ.

ದಿಟವಲ್ಲ. ನೀವೇ ಸಂಕಟದಲ್ಲಿ ಸಿಲುಕಿಕೊಂಡಿರುವಿರಿ. ನನ್ನನ್ನು ಸುಮ್ನೆ ದೂರಿದರೆ ನಾನೇನು ಮಾಡಲಾಗುದು. ನಾನು ಮೊದಲೇ ಹೇಳಿಕ್ಕಿದ್ದೇನೆ "ಹುರುಪಿರುವವರು ಓದಿಕೊಳ್ಳಬೇಕು" ಎಂದು.

ತಾವು ಕನ್ನಡವನ್ನು ಸಂಕಟಕ್ಕೆ ಸಿಲುಕಿಸುತ್ತಿದ್ದೀರೋ ಅಲ್ಲವೋ ನಾನರಿಯೆ. ನನಗೆ ಅದರಲ್ಲಿ ಆಸಕ್ತಿಯೂ ಇಲ್ಲ.

ಇಲ್ಲಿ ತಲೆಹಾಕಿಕೊಂಡವರು ನೀವೇ. ನಾನು ಸೆಳೆದೆನೇ? ಆಸಕ್ತಿ ಇಲ್ಲದೆಡೆ ಯಾಕೆ ತಮ್ಮ ಮಾತು? ನಿಮ್ಮ ಈ ಸಂಗತಿಗೆ ನಂಟಿಲ್ಲ ಮಾತಿಂದ "pre-modern language" ಬಗ್ಗೆ ಮಾತಾಡಕ್ಕೆ ಆಗದೇ, ಮಾತು ಎಲ್ಲೆಲ್ಲೋ ಹೋಗ್ತಾದೆ.

ಸುಮಾರು ಜನಕ್ಕೆ ಅರ್ಥ ಆಗ್ಲಿಲ್ಲ ಅಂತ ಸರ್ವೇ ಮಾಡಿ ಅಂಕಿ ಅಂಶಗಳೊಂದಿಗೇ ನಾನು ಮಾತಾಡಿತ್ತಿರುವುದು ಸ್ವಾಮಿ.

ನಿಮಗೆ ಅರ್ತ ಆಗನಿಲ್ಲ ಅಂತ ಹೇಳಿದೋರುಗೆ ಕೂಡ ಅದೇ ಮಾತು. "premodern-languages" ಬಗ್ಗೆ ಎಲ್ಲರಿಗೂ ಆಸಕ್ತಿ ಇರಬೇಕೆಂದು ನಾನು/ವು ಬಯಸುವುದಿಲ್ಲ. ಅವರ ಇಸ್ಟಕಸ್ಟ ಅವರವರಿಗೆ.

Khavi ಹೇಳಿದಂತೆ ಅವರವರ ಆಸಕ್ತಿ ಇರುವ ಕಡೆ ಮಾತಾಡಬೇಕು

ಮತ್ತೊಮ್ಮೆ.
ಈ ಎಳೆ "premodern languages" ಬಗ್ಗೆ ಇರೋದು. !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 17, 2007 - 2:54am — gangadharg

ಉ:

gangadharg's picture

ಮಹೇಶಾ ಸಾರ್... ನಿಮ್ಮ ಕಾಮೆಂಟುಗಳ್ನ ಓದಿ ನೀವು ಭುದ್ಧಿವಂತರು ಅಂತಂದ್ಕೊಂಡಿದ್ದ ನಮ್ಗೆ.... ನಿಮ್ ಅಹಂಕಾರ.. ಅಸಲೀ ಬುದ್ಧಿ ತೋರಿಸುವುದು ಎಲ್ಲ ಬೇಕಾ..??
ನಿಮ್ಮ ಮರ್ಯಾದೆ ನೀವೇ ಕಳ್ಕೋಬ್ಯಾಡಿ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 17, 2007 - 10:24am — mahesha

ಉ:

mahesha's picture

ನಿಮ್ಮ ಕಾಮೆಂಟುಗಳ್ನ ಓದಿ ನೀವು ಭುದ್ಧಿವಂತರು ಅಂತಂದ್ಕೊಂಡಿದ್ದ ನಮ್ಗೆ.

ನೀವು ಅಂದುಕೊಳ್ಳಿ ಅಂತ ನಾನು ಬೇಡಿದ್ದೆನೆ. ಇದೊಳ್ಳೆ ಕತೆಯಾಯ್ತು, ನಿಮ್ಮಿಸ್ಟದಂತೆ ನಾನೇ ಇರಬೇಕು.

"ಭುದ್ದಿವಂತ":) ಅನ್ನೋ ಬಿರುದು, "ಅಹಂಕಾರ" ಅನ್ನೋದೆಲ್ಲ ನನಗೆ ಹೇಳಕ್ಕೆ ಹೋಗಿ ನಿಮ್ಮ ಮರ್ಯಾದೆಯನ್ನು(ಮರ್ಯಾದೆ ಅಂದರೆ ಎಲ್ಲೆ) ಮೀರಬೇಡಿ. ಬಿಟ್ಟಿ ಹೊಗಳಿಕೆ, ಬಿಟ್ಟಿ ಬೈಗುಳಕ್ಕೆ ಬಲೆಯಿಲ್ಲ.!

ನಿಮ್ಮ ಮರ್ಯಾದೆಯನ್ನು ಕಳೆದುಕೊಳ್ಳಬೇಡಿ. ನಮ್ಮ ದೇಶದಲ್ಲಿ ಬಿಟ್ಟಿ ಬೋದನೆಗೆ ಯಾವ ಕೊರತೆಯಿಲ್ಲ.
ನನಗೆ ನನ್ನ ಮೇಲೆ ಸುಮ್ನೆ ಎಗಾರಾಡಿದರೆ ಹಿಡಿಸಲ್ಲ. ಅದನ್ನು ಸುಮ್ನೆ ಬಿಟ್ಟುಬಿಡುವ ತಾಳುಮೆಯೂ ಇಲ್ಲ.!!

ಇಲ್ಲೀ ಈ ಗದ್ದಲ ಎಬ್ಬಿಸಿದವರನ್ನು ಹೇಳಿರಿ. ನಮ್ಮ ಪಾಡಿಗೆ ನಾವು "pre-modern languages" ಬಗ್ಗೆ ಮಾತಾಡ್ತಾ ಇದ್ದೀವಿ.

ಇಲ್ಲಿ ನಾವು "premodern languages" ಬಗ್ಗೆ ಮಾತಾಡ್ತಾ ಇದ್ದೀವಿ. ಒಸಿ ಅದರ ಬಗ್ಗೆ ಮಾತಾಡಕ್ಕೆ ಬಿಡಿ.

- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 17, 2007 - 12:23pm — ಶ್ಯಾಮ ಕಶ್ಯಪ

ಉ:

ಶ್ಯಾಮ ಕಶ್ಯಪ's picture

ಅಂತೂ ಬಂತಲ್ಲ ತಮ್ಮಿಂದ, ನಮ್ಮ ಪಾಡಿಗೆ ನಾವು ಮಾತಾಡ್ಕೋತಾ ಇದೀವಿ, ಅದರ ಬಗ್ಗೆ ಮಾತಾಡಿ ಅಂತ, ಇದೇ ತಮಗೂ ತಮ್ಮಂಥವರಿಗೂ ಅನ್ವಯವಾಗತ್ತೆ ಅಂತ ತಾವು ಅರ್ಥಮಾಡಿಕೊಳ್ಳುವಷ್ಟು ಸಜ್ಜನರು ಅಂತ ಅನ್ಕೋತೀನಿ. (ಅಶೋಕ್-ಕುಮಾರ್ ಅವರ ಲೇಖನ, ನರೇಂದ್ರ ಅವರ ಲೇಖನದ ತಮ್ಮ ಜನರಲ್ ಮಾತುಗಳಿಗೂ ಇದು ತಟ್ಟಬೇಕು).
ಇದನ್ನು ನಾನು ಎಷ್ಟು ಸಲ ಹೇಳಿದರೂ ತಮಗೆ ತಿಳಿದಂತಿರಲಿಲ್ಲ. ಈಗ ಅನುಭವಿಸಿ ಹೇಳ್ತಿದೀರ.
ಸಾಕು, ಬೇಡದಿದ್ದರೂ ಇಷ್ಟು ಹೊತ್ತು ಈ ವಾದಕ್ಕಿಳಿದದ್ದು ಸಾರ್ಥಕವಾಯಿತು. ಇನ್ನು ನಾನು 'ತಮ್ಮ ಕನ್ನಡ ಭಾಷೆಯ ಚರ್ಚೆಯ' ವಿಷಯಕ್ಕೆ ಬರುವುದಿಲ್ಲ. ತಾವೂ ಕೂಡ ತಮಗೆ ಆಸಕ್ತಿಯಿಲ್ಲದ, ಮಾಹಿತಿಯಿಲ್ಲದ ವಿಷಯದಲ್ಲಿ 'ಜನರಲ್' statements ಕೊಡುವುದಿಲ್ಲ ಅಂತ ಅನ್ಕೋತೀನಿ.
--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 17, 2007 - 1:21pm — mahesha

ಉ:

mahesha's picture

ಸರಿ.. ತಾವು ಎಲ್ಲಿ ಹೇಳಬೇಕೋ ಅಲ್ಲಿ ಹೇಳಿ, ಅನ್ವಯವನ್ನು ತೋರಿಸಿರಿ.

"ಅಶೋಕ ಕುಮಾರ್‍"ಅವರ ವಿಷಯ ಬೇರೆ. ಮೊದಲು ಅವರಿಗೆ ಹೇಳೇ ನಾನು ಅಲ್ಲಿ ಬರೆದುದು. ಅದು ಅವರ ಒಂದು ಹಳೆಯ ಬ್ಲಾಗು! ಅಶೋಕ ಕುಮಾರರಿಗೆ ಅಲ್ಲಿ ಬರೆದು, ತರುವಾಯ ಒಂದು "ಕನ್ನಡದಲ್ಲಿ science ಓದೋದು ಸಿಕ್ಕಾಪಟ್ಟೆ ಕಸ್ಟ" ಎಂದು ಹೊಸ ಬ್ಲಾಗ ಮಾಡಿ, ಅಲ್ಲಿ ಮಾತಾಡ್ತಾ ಇದ್ವು. ಅದನ್ನು ನೀವು ಗಮನಿಸಿದಂತೆ ಕಾಣಲಿಲ್ಲ.

ಇನ್ನು ನರೇಂದ್ರ ಅವರ ವಿಷಯದಲ್ಲಿ ನನ್ನ ಮಾತನ್ನು ಸರಿಯಾಗಿ ನೋಡಿರಿ. ನೀವು 'ವೈಬವ'ರ ಗೊಂದಲಕ್ಕೆ ಸರಿಯಾಗಿ ಮರುನುಡಿಯದೇ, ಏನೇನೋ ಹೇಳಹತ್ತಿದ್ದರು ಎಂದು ಅನ್ಸಿತು. ಅದೂ ಅಲ್ಲದೇ ನಾನೇ

"ಇದು ಸಿಕ್ಕಾಪಟ್ಟೆ ಕೊರೆತ ಅಂತ ಅನ್ನಿಸಿದರೆ, ಇದನ್ನು ಕಡೆಗಣಿಸಬವುದು."

ಎಂದು ಹೇಳಿಬಿಟ್ಟಿದ್ದೇನೆ.

ತುಸು ನೋಡಿhttp://sampada.net/blog/narendra/13/05/2007/4000#comment-7081.

ನೀವು ಸುಮ್ನೆ ನನ್ನ ಮೇಲೆ ಮುನಿಸಿಕೊಂಡಿಹಿರಿ. ನನಗೆ ನಿಮ್ಮ ಮೇಲೆ ಯಾವ ಕೋಪವಿಲ್ಲ. ವಿಶಯವನ್ನು ವಿಶಯವಾಗಿ ತಗೋಳ್ಳಿ.

ಒಂದು ಎಳೆಯಲ್ಲಿ ಸಲ್ಲದ ಕಮೆಂಟು ಬಂದರೆ, ಅದನ್ನು ನೀವು ಕಡೆಗಣಿಸಿ ಮುನ್ನಡೇಬೋದು ಅಲ್ವಾ!! ನಾನು ಬರೆದುದಕ್ಕೆಲ್ಲ, ಓದಕೋಬೇಕು , ಉತ್ತರ ಬರೇಬೇಕು ಅಂದ ರೂಲ್ ಇದ್ಯಾ? ನೀವೇ ಓದಿಕೊಂಡು ನನ್ನ ಮೇಲೆ ಮುನಿಸಿಕೊಂಡರೆ ಅದಕ್ಕೆ ನಾನು ಹೇಗೆ ಹೊಣೆ?

ನಾನು ಇದುವರೆಗೂ ಯಾರ ಮೇಲೆ personal attack ಮಾಡಿಲ್ಲ, ಸುರುವಂತೂ ಮಾಡೋನಲ್ಲ( ಆದರೆ ನನ್ನ ಮೇಲೆ ಮಾಡಿದವರನ್ನು ಬಿಟ್ಟಿಲ್ಲ ).

ನಾನು ಹೇಳಿದ ವಿಸಯದ ಮೇಲೆ ಆಸಕ್ತಿ ಇರೋರು ಮಾತಾಡ್ತಾರೆ ಅದಕ್ಕೆ ನಿಮ್ಮದೇನು ತೊಂದರೆ?

ನೀವು ಇಲ್ಲೆ ಯಾಕೆ ಬಾಯಿ ಹಾಕಿದಿರಿ, ಯಾರನ್ನು ಕಾಯಾಲು ಹಾಕಿದಿರೋ ಗೊತ್ತಿಲ್ಲ.!!
ಒಟ್ಟಿನಲ್ಲಿ ನೀವು ನನ್ನ ಮೇಲೆ ಹೇರಿಸಿದ "ದೂರುಗಳು" ಅಪ್ಟಟ ಸುಳ್ಳು. ನೀವು ಸಂಗತಿಯನ್ನು ಸರಿಯಾಗಿ ಅರಿಯದೇ ಎಗಾಡಿದರ ಫಲ!

ಮನ್ನಿಸಿರಿ, ನಿಮ್ಗೆ ನನ್ನ ಮಾತು ಹಿಡಿಸುವುದಿಲ್ಲ ಅಂತ ಗೊತ್ತಿದ್ದರೂ ನಾನು ಬರೆದೆನು. ನನಗೆ ಸುಮ್ನೆ ಅನ್ನಿಸಿಕೊಳ್ಳೊ ಅಲುವಾಟವಿಲ್ಲ. !

- ಮಾಯ್ಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 17, 2007 - 12:42am — ಸಂಗನಗೌಡ

ಉ: Pre-modern languages. ಒಂದು ನೋಟ

ಸಂಗನಗೌಡ's picture

"ವಿನಂತಿಸುತ್ತೇನೆ" ಅಂದರೆ ಏನು ಇಸ್ಮಾಯಿಲ್‍ರೇ? ’ಕೇಳಿಕೊಳ್ಳುತ್ತೇನೆ’ ಅಂತಾನೋ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2007 - 11:10pm — Sunil Jayaprakash

ಉ: Pre-modern languages. ಒಂದು ನೋಟ

Sunil Jayaprakash's picture

ismail wrote:
ಈ ಬಗೆಯ ಪ್ರಯತ್ನವೊಂದು ಈಗ ಸಂಪದದಲ್ಲಿಯೂ ನಡೆಯುತ್ತಿರುವುದರಿಂದ ಅದನ್ನು ಕನ್ನಡವನ್ನು ಸಂಕಟಕ್ಕೆ ಸಿಲುಕಿಸುವ ಪ್ರಯತ್ನ ಎಂದು ನಾನು ಭಾವಿಸಿದರೆ ತಪ್ಪಾಗುತ್ತದೆಯೇ?

ಪ್ರಿಯ ಇಸ್ಮಯಿಲ್, ಓಸುಗರದ ಬಗ್ಗೆ ನೀವು ಎತ್ತಿದ ಮಾತು ಸರಿಯಿದ್ದರೂ, ನಿಮ್ಮ ಮೇಲಿನ ಮಾತಿನ ಬಗ್ಗೆ ನನ್ನದು ತೀವ್ರ ಆಕ್ಷೇಪವಿದೆ

. ಈ ಕಾಮೆಂಟನ್ನು ನಾನು ನನಗೆ ಅನ್ವಯಿಸಿಕೊಂಡು ಬರೆಯುತ್ತಿಲ್ಲ ಎಂಬುದನ್ನು ಗಮನಿಸಿ. ಅಲ್ಲ, ಕನ್ನಡವನ್ನು pure ಮಾಡುವ ಪ್ರಯತ್ನ ಸಂಪದದಲ್ಲಿ ಯಾರು ಮತ್ತು ಹೇಗೆ ಮಾಡುತ್ತಿದ್ದಾರೆ ? ತೇಲಿಸುವಂತಹ ಮಾತನ್ನು ಬದಿಗಿಟ್ಟು ದಯವಿಟ್ಟು ನಿಮ್ಮ ಮಾತಿಗೆ ತೂಕದ ಆಧಾರವನ್ನು ನೀಡಿ ಎಂದು ವಿನಮ್ರವಾಗಿ ಕೇಳಿಕೊಳ್ಳುತ್ತೇನೆ.

೧. ಈ ಬಗೆಯ ಪ್ರಯತ್ನ - ಯಾವುದಾ ಪ್ರಯತ್ನ ? ೨. ಯಾರು ಮಾಡುತ್ತಿರುವುದು ? ೩. ಹೇಗೆ ಮಾಡುತ್ತಿರುವುದು ?

"ನಾನು ಭಾವಿಸಿದರೆ ತಪ್ಪಾಗುತ್ತದೆಯೇ ?" ಎನ್ನುತ್ತಾ ಪ್ರಶ್ನಾರ್ಥಕವಾದ ಮಾತನ್ನು ಮುಂದಿಟ್ಟು, "ಕನ್ನಡವನ್ನು pure ಮಾಡುವ ಪ್ರಯತ್ನ ನಡೆಯುತ್ತಿರುವುದರಿಂದ" ಎನ್ನುತ್ತಾ, ಓದುಗರನ್ನು ತಪ್ಪುದಾರಿಗೆ ತಳ್ಳುವ ಬಗೆ ಒಂಚೂರೂ ಸರಿಯಿಲ್ಲ. ಮತ್ತೊಮ್ಮೆ ಕೇಳುತ್ತೇನೆ ಕನ್ನಡವನ್ನು pure ಮಾಡುವಂತಹ ಪ್ರಯತ್ನ ಯಾರು ಮತ್ತು ಹೇಗೆ ಮಾಡುತ್ತಿದ್ದಾರೆ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2007 - 11:52pm — ವೈಭವ

ಉ: Pre-modern languages. ಒಂದು ನೋಟ

ವೈಭವ's picture

ಮಹೇಶ,
ಈ ವಿಷಯ ತಿಳಿಸಿಕೊಟ್ಟಿದ್ದಕ್ಕೆ ತಮಗೆ ನನ್ನಿ,

ನಮ್ಮ ಕನ್ನಡಕ್ಕೆ ತುರ್ತಾಗಿ language-planning ಆಗಬೇಕಿದೆ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2007 - 4:21am — ಸಂಗನಗೌಡ

ಉ: Pre-modern languages. ಒಂದು ನೋಟ

ಸಂಗನಗೌಡ's picture

ನನ್ನಿ ಮಹೇಶರೇ,
ನೀವು ಕೊಟ್ಟಿರುವ ಕೊಂಡಿಯಲ್ಲಿರುವ presentation ನನ್ನು ನಾನು ಬಹಳ ಹಿಂದೆಯೇ ಓದಿದ್ದೆ.
ಇದರಲ್ಲಿ ಕೆಲವು ಉಂಕಿಸಬೇಕಾದ ಮಾತುಗಳೆಂದರೆ,
೧) "9 factors ಮತ್ತು ಕನ್ನಡ"ದಲ್ಲಿ ಐದನೇ ಪಾಯಿಂಟ್, Response to new domains and media: Attempts to control media, e.g. language in cinema

ನಾನು ಹಿಂದೊಮ್ಮೆ ಸಂಪದದಲ್ಲಿ ಕನ್ನಡ ಚಿತ್ರರಂಗದ ಮಂದಿಯಿಂದಾಗಿ ಹೇಗೆ ಇಡೀ ಕನ್ನಡ ನುಡಿಯೇ ಉಸಿರುಗಟ್ಟಿ ಒದ್ದಾಡುತ್ತಿದೆ ಅಂತ ಬರೆದಿದ್ದೆ. ಅದು ಇದೇ ಕಾರಣದಿಂದ. (http://sampada.net/forum/1906)

೨) ೪ನೇ ಪಾಯಿಂಟ್, Shifts in domains of language use: English in the higher registers? ಕನ್ನಡಿಗರು ಇಂಗ್ಲಿಷ್ ಮಾದ್ಯಮದ ಕಡೆ ವಾಲುತ್ತಿರುವದು.

೩) Community member’s attitudes towards their own language: Attitudes seen as problem, especially of women.

ತಮ್ಮ ಮಕ್ಕಳು ಇಂಗ್ಲೀಷಿನಲ್ಲಿ ಮಾತನಾಡಿದರೆ ದೊಡ್ಡವನೆನಿಸಿಕೊಳ್ಳುತ್ತಾರೆ ಎಂಬ ತಪ್ಪು ತಿಳಿವಳಿಕೆ, ಮುಕ್ಯವಾಗಿ ಹೆಂಗಳೆಯರಲ್ಲಿ.

ಇನ್ನು ಕರ್ನಾಡಿನ ಪ್ರತಿ ಹತ್ತು ಸಾವಿರ ಮಂದಿಯಲ್ಲಿ ಬೇರೆ ಬೇರೆ ನುಡಿಗಳಲ್ಲಿ ಮಾತಾಡುವವರ ಸಂಕೆ,
ಪ್ರತಿ ಹತ್ತು ಸಾವಿರ ಮಂದಿಯಲ್ಲಿ ಸುಮಾರು ಒಂದು ಸಾವಿರ ಮಂದಿ ಉರ್ದು, ಹೆಚ್ಚು ಕಡಿಮೆ ಅಸ್ಟೇ ಮಂದಿ (739) ತೆಲುಗಿನಲ್ಲಿ ಮಾತಾಡುವವರಿದ್ದಾರೆ. ಇದೊಂದು ಮೇಜರ್ ತೊಂದರೆ.

ನಮ್ಮ ಕೊಲಿಗ್ ಒಬ್ಬ ಹುಟ್ಟಿ ಬೆಳೆದದ್ದು ಬೆಂಗಳೂರಂತೆ, ಕನ್ನಡ ಮಾತಾಡೋಕೆ ಬರಲ್ಲಾ(ನಾಟಕ ಇದ್ದೀತು:-)). ಆತ ಮುಸಲ್ಮಾನ. ಕನ್ನಡದ ಬಗ್ಗೆ ಮುಸಲ್ಮಾನರಿಗೆ ಈಗಿನ ದಿನಗಳಲ್ಲಿ ಒಲುಮೆ ಕಡಿಯಾಗಿದೆಯೇ ಅಂತ ಐಬು ನನಗೆ.

ಬಳ್ಳಾರಿ, ರಾಯಚೂರಿಂದ ಹಿಡಕೊಂಡು ಕೋಲಾರತನಕ A.Pಗೆ ಹೊಂದಿಕೊಂಡಿರುವ ಎಲ್ಲಾ ಜಿಲ್ಲೆಗಳಲ್ಲಿ ಹೆಚ್ಚಿನ ಮಂದಿ ತೆಲುಗು ಮಾತಾಡೋರೆ. ಅದೇ ಕರ್ನಾಡಿಗೆ ಹೊಂದಿಕೊಂಡ APಯಲ್ಲಿ ಇಷ್ಟೊಂದು ಕನ್ನಡ ಮಾತಾಡೋರು ಇದಾರಾ?

ಕರ್ನಾಡಿನಲ್ಲಿ ತೆಲುಗು ಸಿನಿಮಾಗಳ ಭರಾಟಿ ಇಗೀಗ ಇನ್ನೂ ಹೆಚ್ಚಾಗಿದೆ. ಕನ್ನಡಿಗರು ತೆಲುಗಿನಲ್ಲಿ ಮಾತಾಡೋಕೆ ಹಿಂದೇಟು ಹಾಕಲ್ಲಾ, ಅದೇ ತೆಲುಗರು ತೆಲುಗಲ್ಲೇ ಮಾತಾಡೋಕೆ ನೋಡ್ತಾರೆ. >>ಇದು ಸಿನಿಮಾದ ನೆರಳು<<.

ಕರ್ನಾಡಿನಲ್ಲಿ ಡಬ್ ಸಿನಿಮಾಗಳನ್ನು ಬಿಡುಗಡೆ ಮಾಡಗೊಡುವದರಿಂದ ಕನ್ನಡಕ್ಕೆ ಹೊಸ ಜೀವಕಳೆ ಮೂಡುವದೆಂಬುದು ನನ್ನ ನಂಬಿಕೆ. ಅದು ಯಾವಾಗ ಆಗುವದೋ?

ಇನ್ನೊಂದು, ಕೊಂಕಣಿ-ತುಳು ಕನ್ನಡಕ್ಕೆ ಮತ್ತು ಕನ್ನಡ ಇವುಗಳಿಗೆ ಪೂರಕವಾಗಿದೆ ಅನ್ನೋದು ಈ presentation ದಿಂದ ತಿಳಿಯುತ್ತೆ. ತನ್ನನ್ನು ತಾನು ಕಾಯ್ದುಕೊಳ್ಳುವುದರೊಂದಿಗೆ ಅವುಗಳನ್ನೂ ಕಾಯುವ ಹೊಣೆ ಕನ್ನಡಕ್ಕಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2007 - 10:18am — mahesha

ಉ: Pre-modern languages. ಒಂದು ನೋಟ

mahesha's picture

ನಲ್ವಗಲು ಸಂಗನ,

ಆ ತಾವಿನ ಸಂಗತಿಗಳನ್ನು ಓದಿಕೊಂಡು ಅದನ್ನು ಬಿಡಿಬಿಡಿಯಾಗಿ ಅರಹಿದಕ್ಕಾಗಿ ನನ್ನಿ!

ತೊಂದರೆಗಳಿಗೆ/ಸಮಸ್ಯೆಗಳಿಗೆ ಒಂದಲ್ಲ ಒಂದು ದಾರಿ ಇದ್ದೇ ಇದೆ. ಅಲ್ಲೇ ನಮಗೆ ಹಾದಿಗಳು ಕಾಣುತ್ತವೆ.

ಆದರೆ ಕಂಡುಕೊಂಡ ದಾರಿಯಲ್ಲಿ ನಡೆದು ಗುರಿಮುಟ್ಟುವವರು ಕನ್ನಡಕ್ಕೆ ಇಂದು ಬೇಕು. ಈ ದಿಸೆಯಲ್ಲಿ ಕೆಲಸಗಳು ನಡೇತಾ ಇವೆ. ಹಲವು ಕನ್ನಡ ಗ್ರಾಮರ್‍ ಪಂಡಿತರು ಇದ್ದಾರೆ ಅಲ್ಲಿ.

ನಿಮಗೆ ಈ ಸಂಗತಿಯಲ್ಲಿ ಹುರುಪಿದ್ದರೆ, ನನಗೆ ಒಂದು ಮಿಂಚೋಲೆ ಹಾಕಿ, ಮುಂದೆ ನೋಡೋಣ!

ನನ್ನಿ
ಮಾಯ್ಸ!
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2007 - 8:11pm — mahesha

ಉ: Pre-modern languages. ಒಂದು ನೋಟ

mahesha's picture

ಸಂಗನ ಮತ್ತು ಇದರಲ್ಲಿ ಹುರುಪಿರುವವರು,

diglossia, triglossia ಬಗ್ಗೆ ಏನು ಹೇಳೀರಿ?
ಕನ್ನಡಕ್ಕೂ ಈ diglossia, triglossiaದ ಬೇನೆ ಇದೆಯಂತೆ. ನಂಗೇನು ಇದು ಕಡಮೆ ಆಗಬೇಕು ಅಂತ ಅನ್ಸಿದೆ.

ಈ diglossia ಬಗ್ಗೆ, ಮೈಸೂರಲ್ಲಿರೋ, Indian Institure of Indian language ತಾಣದಲ್ಲಿ ಒಬ್ಬರ ಒಂದು ಬರವಣಿಗೆ ಇದೆ. ಅದರಾಗೆ ಕನ್ನಡ, ತಮಿಳು ಮತ್ತು ಸಿಂಗಳ ನುಡಿಗಳನ್ನು ಎತ್ಕೊಂಡು ಅದರಲ್ಲಿ ಹೇಗೆ ಈ diglossia, triglossia ಅವೆ ಅಂತ ಹೇಳವ್ರೆ. ನೋಡಬೋದು.
.
.
.

ಇನ್ನೋ ಕೊಂಕಣಿ-ತುಳು-ಕೊಡವ ಬಗ್ಗೆ ಹೇಳಬೇಕಂದ್ರೆ. ಕೊಂಕಣಿಗೆ ಆಟು ಕುತ್ತಿಲ್ಲ. ಗೊವದಲ್ಲಿ ಆರಾಮಾಗಿದೆ. ನಮ್ಮ ಕರ್ನಾಡಲ್ಲೂ ಇಸ್ಕೂಲ್ಲಿ ಹೇಳ್ಕೊಡ್ತಾರೆ.

ಆದರೆ ತುಳು, ಕೊಡವ, ಬಡಗ, ಸೋಲಿಗ, ತೊದ ಇವಕ್ಕೆ ಸ್ಯಾನೆ ತೊಂದರೆ ಇರೋದು. ಇವಕ್ಕೆ ಹೆಚ್ಚು ರೊಕ್ಕವೂ ಸಿಕ್ಕಲ್ಲ, ಇಸ್ಕೂಲಲ್ಲೂ ಕಲಿಸಲ್ಲ.!!

- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2007 - 9:00pm — mahesha

ಉ: Pre-modern languages. ಒಂದು ನೋಟ

mahesha's picture

http://www.ciil-ebooks.net/books.htm
Indian Institute of Indian languages ಮೈಸೂರು ಇಲ್ಲಿರುವ ಮಿ-ಹೊತ್ತಗೆಗಳು.[

ಅದರಲ್ಲಿ diglossia ಬಗ್ಗೆ:
[http://www.ciil-ebooks.net/html/diglossia/index.html]

- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 17, 2007 - 11:19am — mahesha

ಉ: Pre-modern languages. ಒಂದು ನೋಟ

mahesha's picture

ಸಂಗನ!

೩) Community member’s attitudes towards their own language: Attitudes seen as problem, especially of women.

ನಮ್ಮ ಹೆಂಗೆಳತಿಯರಿಗೆ ಇಂಗ್ಲೀಸ್ ಅಕ್ಕರೆ ಬಗ್ಗೆ ಆವಯ್ಯಂಗೂ ಗೊತ್ತಾಗಿ ಹೋಗಿದೆ ಅಂತ ಕಾಣತೈತೆ. Smiling

Endangered language ಅಂದರೆ ಮುದುಕರ ನುಡಿ, ಅದನ್ನು ಮಾತಾಡುವ ಹುಡುಗರು ಪಡ್ಡೆ-ಪಡತಿಯರು ಇಲ್ಲ, ಇಲ್ವೇ ಕಡಮೆ. ಮೆಕ್ಸಿಕೋ ನಾಡಿನ ಹಲವು "ಮಾಯ"ನುಡಿಗಳಿಗೆ ಈ ಪಾಡೇ ಬಂದಿದೆ. ಅಲ್ಲಿ ಸ್ಪೇನಿಷ್ ಜಾಸ್ತಿಯಾಗಿ, ಹುಡುರೆಲ್ಲ ಸ್ಪೇನಿಷ್ ಕಲಿತು, ಬರೀ ಮುದುಕರು ಆ "ಮಾಯ" ನುಡಿಗಳನ್ನು ಆಡ್ತಾರಂತೆ. ಹುಡುಗರು ಆ ನುಡಿಯನ್ನು ಆಡಿದರೂ, ಅದರಲ್ಲಿ ಸ್ಪೇನಿಷ್ಷೇ ಹೆಚ್ಚಿರುತ್ತಂತೆ.

ಅವರ ಮಾತಿನಂತೆ, ಕನ್ನಡಕ್ಕೂ ಈ ಪಾಡು ಬಂದು ಬಿಟ್ಟಿದೆ. ಮಾತಾಡೋರು ಕಡಕಡಮೇ ಆಗ್ತಾ ಇದ್ದಾರೆ ಅಂತ. ಕನ್ನಡದ ಈ ಪಾಡಿಗೂ ಹೊರನುಡಿಯ ಹೆಚ್ಚು ಬಳಕೆಯೇ ಮುಕ್ಯ ಕಾರಣ. ಒಂದು ಪಂಗಡ ಇಂಗ್ಲೀಸು, ಒಂದು ಪಂಗಡ ಸಕ್ಕದ, ಒಂದು ಪಂಗಡ ಉರ್ದು, ಒಂದು ಪಂಗಡ ಮರಾಟಿ, .... ಒರೆಗಳನ್ನ ಕನ್ನಡಕ್ಕೆ ಸುರಿದು ಸುರಿದು ಹಾಕಿದ್ರೆ, ಕನ್ನಡ ಎಲ್ಲಿ ಉಳೀತೈತೆ?

"Response to new domains" ಈ ಸಂಗತಿಯಲ್ಲೂ ಕನ್ನಡದ ಪಾಡು ಚೆನ್ನಾಗಿ. ಎಲ್ಲ ಹೊಸ ಹೊಸ ಸರಕು-ಸಂಗತಿಗಳಿಗೆ ನಾವು ಬೇರೆ ನುಡಿಯಿಂದಲೇ ಒರೆಗಳನ್ನು ಮಾಡುತ್ತಿರುವುದು. ಇಲ್ಲಿ ದಿಟವಾಗಿ ನೋಡಿದರೆ "Response to new domains" ಕನ್ನಡದಿಂದ ಏನೂ ಇಲ್ಲ, ಸೊನ್ನೆ!!

ಅವರ ಒಂಬತ್ತು ಪಾಯಿಂಟಗಳೂ ಸರಿ ಎಂದು ಅನ್ಸಲ್ವಾ?

- ಮಾಯ್ಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ತುಳು(ತುಲು) ಬಗ್ಗೆ ಹಲವು ಮಾಹಿತಿ ಬೇಕು
  • ಕನ್ನಡದ ಬಗ್ಗೆ ಹತ್ತು ಕಣಸುಗಳು
  • ಅಯ್ಯೋ!! ಸಾಯುತ್ತಿವೆ, ಒರಿಯಾ, ಮಣಿಪುರಿ, ಡೋಗ್ರಿ, ಬಡಗ ಕನ್ನಡ....................
  • ಆಟೋ ನುಡಿ - ೩
  • ತಮಿಳು ಕ್ಲಾಸಿಕಲ್ ನುಡಿ ಅನ್ನೋದಕ್ಕೆ ಹಾರ್ಟ ಕೊಟ್ಟ ಓಲೆ.!!! ಇದರಲ್ಲಿ ಕನ್ನಡದ ಬಗ್ಗೆ ಕೆಲವು ತಪ್ಪು ಅರಿಕೆಗಳಿವೆ.
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
  • ಮಿಂಚಿನ ಓಟ
  • ಸಿಟಿಯ ಮೇಲಣ ಗುಳ್ಳೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ನನ್ನ ಅನುನಾಯಿ
    July 24, 2008 - 7:51pm
  • mahesha
    ಉ: ನನ್ನ ಅನುನಾಯಿ
    July 24, 2008 - 7:51pm
  • rameshbalaganchi
    ಉ: ನನ್ನ ಅನುನಾಯಿ
    July 24, 2008 - 7:34pm
  • mahesha
    ಉ: ತೆರೆ, ತೆಱೆ
    July 24, 2008 - 7:32pm
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 6:41pm
  • madhava_hs
    ಉ: ಕುಮಾರವ್ಯಾಸ ಭಾರತ
    July 24, 2008 - 6:41pm
  • mahesha
    ಉ: ಸ್ತ್ರೀಸೌಂದರ್ಯ
    July 24, 2008 - 6:04pm
  • roshan_netla
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:38pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 14 ಅತಿಥಿಗಳು ಆನ್ಲೈನ್ ಇರುವರು.


ಶಾಂತ ಮನಸ್ಸಿನಿಂದ ಕಾಯುವವನಿಗೆ ಹಿಪ್ಪುನೇರಳೆಯ ಎಲೆಯೂ ಕೂಡ ರೇಶಿಮೆಯಾಗುತ್ತದೆ.

— ಚೀನೀ ಗಾದೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator