೧೨ ಊರುಗಳ ಹೆಸರು ಸರಿಪಡಿಸಿಕೆಗೆ ಅಂತೂ ಕೊನೆ ಬಂತು!
ಅಂತು ನಮ್ಮ ಇಂಡಿಯದ ರೈಲವೆ, ಈ ಹೆಸರು ಪಡಿಸಿಕೆಗೆ ಒಪ್ಪಿಗೆ ಕೊಟ್ಟೇ ಬಿಟ್ಟಿತು. ಚನ್ನೈ ಆದಾಗ ಈ ರೈಲವೇ ಅದೇಸ್ಟು ಬಿರಬಿರ ಒಪ್ಪಿತ್ತು ಎಂದು ನೋಡಿದರೆ, ಈ ತಡಕ್ಕೆ ಓಸುಗರ/ಕಾರಣ ತಿಳಿಯಾಗಿ ತಿಳಿಯುವುದು.
ಇನ್ನು ನಮ್ಮ ಕನ್ನಡ "ವೃತ್ತಪತ್ರಿಕೆ" ಪೇಪರುಗಳಲ್ಲಿ ಒಸಗೆ/ವರದಿಗಳಲ್ಲಿ ಬಳಸಿದ ಒರೆಗಳನ್ನು ಗಮನಿಸಿ
೧) "ನಗರಗಳ ಮರುನಾಮಕರಣ". ಇದು ಸರಿಯೇ? ನಾವು ಬೆಂಗಳೂರನ್ನು ಕನ್ನಡದಲ್ಲಿ ಬೆಂಗಳೂರೇ ಅನ್ನೋದಲ್ವಾ, ಹಾಗೆ ಇಂಗ್ಲೀಶಲ್ಲೂ ಹಾಗೆ ಬರೆಯೋಣ ಎನ್ನೋದು "ಮರುನಾಮಕರಣ", "ಮತ್ತೆ ಹೊಸ ಹಸರಿಡಿಕೆಯೇ?
. ಇಲ್ಲಿ ಇವರು ಹೇಳುವುದು ನಮ್ಮ ಕನ್ನಡ ಸರಕಾರ ಹನ್ನೆರಡು, ಒಂದೆರಡಲ್ಲ, ಹನ್ನೆರಡು ಊರುಗಳ ಹೆಸರು ಮಾರ್ಪಡಿಸಿ ಬಿಡುವುದು ಎಂಬ ಅನಿಸು ತರುವುದಲ್ಲ!!
೨) ಇನ್ನೊಂದು ಬಗೆ ಪೇಪರುಗಳು "೧೨ ನಗರಗಳಿಗೆ ಕನ್ನಡದ ಹೆಸರು. ಹೆಸರ ಕನ್ನಡೀಕರಿಣ". ಇದು ಸರಿಯೇ? ಈಸು/ಇಷ್ಟು ನಾಳು/ದಿನ ಏನು ಇಂಗ್ಲೀಸ್ ಹೆಸರಿತ್ತೇ, ಕನ್ನಡಕ್ಕೆ ಮಾರ್ಪಡಿಸಲು? ಇಲ್ಲವೇ ಏನು "ಹೆಸರ ಕನ್ನಡೀಕರಣ" ಅಂದರೆ? ಇಲ್ಲೇನಾರ ಕನ್ನಡಕ್ಕೆ ನುಡಿಮಾರ್ಪಾಟು/ತರ್ಜುಮೆ ನಡೆದಿದೆಯೇ? ![]()
ನನಗೆ ಬೇಸರ ತಂದುದು, ನಮ್ಮ ’ಕನ್ನಡ’ ಪೇಪರುಗಳ ಇಂತ ಒಸಗೆ/ವರದಿಗಳು ಏನೋ ನಮ್ಮ ಸರಕಾರ ಕೆಲಸಕ್ಕೆ ಬಾರದ, ಇಲ್ಲವೇ ಕನ್ನಡ chauvinism ಇಂದ ಹೀಗೆ ಮಾಡಿದೆ ಅಂತ ಅನ್ನಿಸುವ ಹಾಗೆ ಮಾಡೋಲ್ವೇ?ಹಾಗೆ ಮಾಡಿಲ್ಲ ಅಂತ ಆದರೆ ನನಗೆ ನಲಿವೇ.
ಇಲ್ಲಿ ನಮ್ಮ ಹೆಸರನ್ನು, ಈ ಬೆಂಗಳೂರು ಅನ್ನೋದು ಏಸು ಹಳೆಯ ಹೆಸರು. ಬೇಗೂರ ಗಂಗರ ಹೊತ್ತಿನ ೯ನೇ ಶತಮಾನದ ’ವೀರಗಲ್ಲು’ಅಲ್ಲಿ ಇದೆ. ಇಂಗ್ಲೀಶರು ಬೆಂಗಳೂರಿಗೆ ಬಂದುದು ಯಾವಾಗ, ಅದಕ್ಕೂ ಮುನ್ನ ಏಸು ನೂರು-ಏಡು/ವರುಷಗಳಿಂದ ಬೆಂಗಳೂರು ಬೆಂಗಳೂರೇ ಆಗಿತ್ತು. ಈ ಇಂಗ್ಲೀಶರು ಬಂದ ಮೇಲೂ ಕನ್ನಡದ ಬಾಯಿಯಿಲ್ಲ ಬೆಂಗಳೂರಾಗೇ ಇತ್ತು, ಇದೆ, ಇರುವುದು.
ಹೀಗೆ ’ಬೆಳಗಾವೆ’, ಬೆಳಗಾಂ ಆದುದು ಈ ಹಾಳು ಇಂಗ್ಲೀಶರಿಂದೇ!!
ನಮಗೆ ಈ ಇಂಗ್ಲೀಶರ ಅಡಿಮೆ/ಗುಲಾಮತನದಿಂದ ಬಿಡುಗಡೆ ಸಿಕ್ಕಿ ೬೦ ಏಡು/ವರುಷದ ಬಳಿಕವಾದರೋ, ಅವರ ನುಡಿ ಇಂಗ್ಲೀಶಿಗೆ ತುಳಿಲು/servitude ನಿಲ್ಲದಿದ್ದರೂ, ಅಬ್ಬ!! ನಮ್ಮ ನಮ್ಮ ಊರುಗಳು. ನಾವು ಕನ್ನಡ-ನಾಲಗೆಗಳು ಸಾವಿರಾರು ಏಡುಗಳಿಂದ ಹೇಳಿಕೊಂಡ ಬಂದಂತೆ, ಕನ್ನಡದ ಸೊಗಡನ್ನು ಮರುಹೊಂದಿದ್ದು, ಇದು ನಲಿವೆ ಸಂಗತಿಯೇ!!
ಇಂತ ನಮ್ಮ ಸೊಗಡುಳಿಸುವ ಕೆಲಸಕ್ಕೆ ಗೆಲುವಾಗಲಿ, ಅಂತಹ ದುಡಿಮೆಗೆ ನಾವು ಒಬ್ಬಬ್ಬ ಕನ್ನಡಿಗನ ಬೆವರೂ ಬೀಳಲಿ ಎಂಬುದು ಒಳಹಾರೈಕೆ.
ಇದಕ್ಕೆ, ದರಂ ಸಿಂಗರು, ಮತ್ತು ಕುಮಾರಸ್ವಾಮಿಗಳಿಗೆ ಕೈ ಮುಗಿದು ನನ್ನಿ!!
ಕನ್ನಡ(ನಾಡು+ನುಡಿ)ಯಲ್ಲಿ ಕನ್ನಡತನವಿರಲಿ!!
======================================================
http://www.indiatogether.org/2005/dec/rgh-bengaluru.htm ಇದನ್ನ ನೋಡಿರಿ.

- mahesha ರವರ ಬ್ಲಾಗ್
- Login or register to post comments
- 395 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ೧೨ ಊರುಗಳ ಹೆಸರು ಸರಿಪಡಿಸಿಕೆಗೆ ಅಂತೂ ಕೊನೆ ಬಂತು!
ಬೆಳಗಾಂ ಅನ್ನು ಬೆಳಗಾಮ ಅಥವಾ ಬೆಳಗಾವ/ಬೆಳಗಾವಿ ಎಂದರೂ ಕನ್ನಡವೇ. ಅದು ಇಂಗ್ಲಿಷರಿಂದಾದದ್ದಲ್ಲ. ಎಲ್ಲೊ ಹೞೆಯ ಶಾಸನ ಗ್ರಂಥದಲ್ಲಿ ಬೆಳಗಾಮ/ಬೆಳಗಾಮೆ ಪದ ದೊರಕಿರಬಹುದು. ಶಿವಮೊಗ್ಗದ ಶಿಕಾರಿಪುರದಲ್ಲೊಂದು ಹಳ್ಳಿ ಗಾಮ. ಇದು ಸಕ್ಕದದ ಗ್ರಾಮದ ಕನ್ನಡೀಕರಣ. ಅದು ಗ್ರಾಮ->ಗಾಮ->ಗಾವ ಕೂಡ ಆಗಬಹುದು.
ಉ: ೧೨ ಊರುಗಳ ಹೆಸರು ಸರಿಪಡಿಸಿಕೆಗೆ ಅಂತೂ ಕೊನೆ ಬಂತು!
ಅಲ್ಲ
ಬೆಳ್ಳಕಾವೆ => ಬೆಳಗಾವಿ
ಕಾವೆ => ಕಾವಲು ಹೊಂದಿದ್ದು...!
ಉ: ೧೨ ಊರುಗಳ ಹೆಸರು ಸರಿಪಡಿಸಿಕೆಗೆ ಅಂತೂ ಕೊನೆ ಬಂತು!
ಆಧಾರ ನಿಮಗೆ ಗೊತ್ತೆ? ಕಾವೆ=ಕಾವಲು ಅರ್ಥದಲ್ಲಿ ನಾನು ತಿಳಿದಂತೆ ಇಲ್ಲ.
ಉ: ೧೨ ಊರುಗಳ ಹೆಸರು ಸರಿಪಡಿಸಿಕೆಗೆ ಅಂತೂ ಕೊನೆ ಬಂತು!
ಗ್ರಾಮದಿಂದಲೇ ಗಾವಿ ಬಂದಿದೆ ಎನ್ನೋದಕ್ಕೆ ಆದಾರ ಏನು?
ಕಾ = ಕಾಪಾಡು
ಕಾಮೆ = ಕಾಪಾಡುವುದು
ಕಾಮೆ => ಕಾವೆ..
ಗ್ರಾಮದ ಮೂಲ ಎನು?
ಉ: ೧೨ ಊರುಗಳ ಹೆಸರು ಸರಿಪಡಿಸಿಕೆಗೆ ಅಂತೂ ಕೊನೆ ಬಂತು!
ಕಾಮೆ ಪದವಿಲ್ಲ. ಕಾಯ್ಮೆ ಇರುವುದಕ್ಕೂ ಪುರಾವೆಯಿಲ್ಲ. ನಿಮ್ಮ ವಾದ ನಮಗಂತೂ ಒಪ್ಪಲಾಗದು. ಗ್ರಾಮ->ಗಾಮ->ಗಾಂವ(ಮರಾಠಿ)->ಗಾವ->ಗಾವಿ ವಾದ ಒಪ್ಪಿದಾಗ ಗಾವ ಕೂಡ ಕನ್ನಡದಲ್ಲಿರಲು ಸಾಧ್ಯ.
ಉ: ೧೨ ಊರುಗಳ ಹೆಸರು ಸರಿಪಡಿಸಿಕೆಗೆ ಅಂತೂ ಕೊನೆ ಬಂತು!
"ನಮಗಂತೂ ಒಪ್ಪಲಾಗದು."
ನೀವು ಒಪ್ಪುವುದು ಬೇಕಿಲ್ಲ..
ಬೆಳ ಕನ್ನಡ, ಗಾವಿ ಸಕ್ಕದ ಹೀಗೆ ಬರೆಕೆ.!
ಹಾಯ್ದು => ಹಾದು ಇಲ್ವೇ!!
ಬೆಳಗಾವಲ್ ಇಲ್ಲ ಲ್ ಬಿದ್ದು ಹೋಗಿಬೋದು..
ಇನ್ನು ಬೆಳಗಾವಿ ವೇಣುಗ್ರಾಮದಿಂದ ಬಂದಿದು ಅಂದುದು ದೊಡ್ಡಸುಳ್ಳು..!
ಉ: ೧೨ ಊರುಗಳ ಹೆಸರು ಸರಿಪಡಿಸಿಕೆಗೆ ಅಂತೂ ಕೊನೆ ಬಂತು!
ಹಾದಿ ಇದೆ. ಹಾದು=ಹಾಯ್ದು ಇದಱ ಆಡುರೂಪ.
ಉ: ೧೨ ಊರುಗಳ ಹೆಸರು ಸರಿಪಡಿಸಿಕೆಗೆ ಅಂತೂ ಕೊನೆ ಬಂತು!
ಆಡುರೂಪ ಅಂತೆಲ್ಲ ಇಲ್ಲ...
ಮಾಂಬಳ್ಳಿ,ಮಾವಳ್ಳಿ,ಮಾವುಹಳ್ಳಿ ಎಲ್ಲ ಒಂದೆ
ಉ: ೧೨ ಊರುಗಳ ಹೆಸರು ಸರಿಪಡಿಸಿಕೆಗೆ ಅಂತೂ ಕೊನೆ ಬಂತು!
ಗಾವ ಸಿಂಗ ಎಂದರೆ ಕನ್ನಡದಲ್ಲಿ ನಾಯಿ.
ಗಾವ ಸಿಂಗ = ಗ್ರಾಮ ಸಿಂಹ.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ೧೨ ಊರುಗಳ ಹೆಸರು ಸರಿಪಡಿಸಿಕೆಗೆ ಅಂತೂ ಕೊನೆ ಬಂತು!
ಇದ ಬಳಕೆ ಎಲ್ಲಿದೆ?
ಉ: ೧೨ ಊರುಗಳ ಹೆಸರು ಸರಿಪಡಿಸಿಕೆಗೆ ಅಂತೂ ಕೊನೆ ಬಂತು!
ಗಾಮ=ಹಳ್ಳಿ(ಗ್ರಾಮ) ನಾನು ಕೊಟ್ಟ ಉದಾಹರಣೆಯಿದೆ. ಕಾಪು, ಕಾವಲ್=ಕಾಯುವುದು