ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು
++++++ ಇದು ಬ್ಲಾಗು+++++++ಇದು ದಿಟ ಎಂದು ಹೇಳ್ತಾ ಇಲ್ಲ+++++++ಇದು ಅನಿಸಿಕೆಯಶ್ಟೇ+++++++
ಈ ಹಯ್-ಕೋರ್ಟು ತೀರ್ಪು ಬಂದ ಬಳಿಕ ಮತ್ತು ನಮ್ಮ ವೆಬ್ಬಲ್ಲಿರುವ ಕೆಲವು ತಾಣಗಳಲ್ಲಿ ಕನ್ನಡ ಮೀಡಿಯಮ್ಮಲ್ಲಿ ಕಲೀಬೇಕು ಬ್ಯಾಡ ಅಂತ ಬರಹಗಳು ಬಂದ ಬಳಿಕ ನನಗೆ ಹಲವರು ಈ ಬಗ್ಗೆ ತಲೆತಿಂದುದು ದಿಟ. ಪುರುಸೊತ್ತಿಲ್ಲದರಿಂದ ಮತ್ತೆ ಮತ್ತೆ ಹೇಳಿದನ್ನೇ ಹೇಳುವ ಬದಲು ಒಂದು ಬ್ಲಾಗ್ ಎಸಗಿ ಬಿಡುವುದು ಒಳ್ಳೇದು.
ನನಗೆ ಈ ಬಗ್ಗೆಯ ಬರಹಗಳಲ್ಲಿ ರವಿಬೆಳಗರೆಯವರ ಬರಹ ಅದ್ಯಾಕೋ ತುಂಬಾ ಹಿಡಿಸಿತು..
ನನ್ನ ಮಗು ನನ್ನ ಹಾಗೇನೇ ಎಲ್.ಕೇ.ಜಿ ಇಂದಲೇ ಅಪ್ಪಟ ಇಂಗ್ಲೀಶ್ ಮೀಡಿಯಮ್ಮಲ್ಲೇ ಓದೋದು.. ನಾನು ಪಸ್ಟ್ ಲ್ಯಾಂಗ್ವೇಜ್ ಕನ್ನಡ ಓದಿದ್ದೆ, ಅದು ಇಂಗ್ಲೀಶ್ ಇಲ್ಲ ಸಂಸ್ಕ್ರುತವನ್ನೇ ಓದೋದು. ಕನ್ನಡವನ್ನ ಒಂದು ವೇಳೆ ಸ್ಕೂಲಲ್ಲಿ ಕಲಿಯದಿದ್ದರೂ ಅಡ್ಡಿಯಿಲ್ಲ.
ಯಾಕೆ ಹಿಂಗೆ?
೧) ನಮ್ಮ ಸ್ಕೂಲ್ಗಳಲ್ಲಿ ಹೇಳಿಕೊಡುವ ಕನ್ನಡವು ೫೦-೬೦% ಸಂಸ್ಕ್ರುತ ಮಯ. ಹಾಗೇ ಕನ್ನಡವ್ಯಾಕರಣವೂ ಕೂಡ. ಈ ವ್ಯಾಕರಣ ಹೇಗೆ ಕನ್ನಡದ ದಿಟಸ್ವರೂಪವನ್ನು ತಿಳಿಸುವುದೇ ಇಲ್ಲ ಎಂದು ಶಂಕರಬಟ್ಟರ, ಕೇ.ವಿ.ನಾರಾಯಣರ ಬರಹಗಳು ಸಾರಿವೇ. ಮಕ್ಕಳು ಒಂದು ಬಾಶೆಯ ವ್ಯಾಕರಣವನ್ನಾದರೂ ಸರಿಯಾಗಿ ಕಲಿಯಬೇಕು. ಹೀಗೆ ಅರೆಬರೆ ವ್ಯಾಕರಣ ಕಲಿತರೆ ಯಾವ ನುಡಿಯೂ ನೆಟ್ಟಗೆ ಬರಲ್ಲ.. ಅದಕ್ಕೆ ಶುದ್ದಸಂಸ್ಕ್ರುತವ್ಯಾಕರಣವನ್ನು ಮತ್ತು ಇಂಗ್ಲೀಶನ್ನು ಕಲಿಯಲಿ.. ಬಳಿಕ ಶಂಕರಬಟ್ಟರ ಹೊತ್ತಗೆಗಳನ್ನು ಓದಿಸಿ ನೋಡಪ್ಪ.. ನಮ್ಮ ತಾಯಿನುಡಿ ಕನ್ನಡ ಹೀಗೆ ಹೀಗೆ ಸಂಸ್ಕ್ರುತವಲ್ಲ ಎಂದು ತಿಳಿಸಲು ಸುಲಬವಾಗುವುದು.
೨) ಇಂಗ್ಲೀಶ್ ಮೀಡಿಯಮ್ಮಲ್ಲೇ ಓದಬೇಕು... ಮುಂದೆ ಅದು ಓದೋದು ಸಯ್ನಸೋ, ಕಾಮರ್ಸೋ, ಆರ್ಟ್ಸೋ, ಇಂಜಿನಿಯರಿಂಗ್, ಮೆಡಿಸಿನ್ನೋ, ಮುಂತಾದವನ್ನಾ ಹೊರತು ಬರೀ ಕನ್ನಡ, ಇಂಗ್ಲೀಶನ್ನಲ್ಲ.. ಹಲವು ವಿಶಯಗಳ ಮುಂದಿನ-ಓದು ಕನ್ನಡದಲ್ಲಿ ಇಲ್ಲವೇ ಇಲ್ಲವಲ್ಲ.. ಅವು ಬರೀ ಕೆಲವು ಬ್ಲಾಗು ಮತ್ತು ಬರಹಗಾರರ ಹೊತ್ತಗೆಯೊಳಗಿನ ಕನಸು. ನಮ್ಮ ಮಗುವಿಗೆ ನನ್ನ ಹಾಗೇ ಕನ್ನಡದಲ್ಲಿ ಆಸಕ್ತಿ ಇರಲೇ ಬೇಕು ಎಂದು ಒತ್ತಾಯ ಮಾಡುವಂತವನು ನಾನಲ್ಲ.. ಒತ್ತಾಯ ಮಾಡಿದರೂ ಅದು ಕೇಳುವುದು ಎಂಬ ಗ್ಯಾರೆಂಟಿಯಿಲ್ಲ. ಅದಕ್ಕೆ ಏನು ಬೇಕೋ, ಬೇಡವೋ, ಓದಿ ಹೊಟ್ಟೆಹೊರೆಯಲಿ.. ನಮಗೆ ದುಡ್ಡಿಗೆ ಕಾಟ ಕೊಡದಿದ್ದರೆ ಸರಿ ![]()
೩) ಅಪ್ಪ ಸಂಸ್ಕ್ರುತ ಪಂಡಿತ ಅಂತ ತಕ್ಶಣ ಅವನ ಮಗುವಿಗೂ ಪಾಂಡಿತ್ಯ ಹಾಗೇ ನೆತ್ತರಲ್ಲಿ ಬಂದು ಬಿಡಲ್ಲ.. ನನಗೆ ಕನ್ನಡ ಬಂದ ಹಾಗೆ ನಮ್ಮ ಮಗುವಿಗೆ ಬರದೇ ಇರಬೋದಲ್ಲ.. ಅದಕ್ಕೆ ವ್ಯಾಕರಣ ಅಂದರೇ ಅಲರ್ಜಿಯಾಗೀ ಬರೆವಣಿಗೆ ಅಂದರೆ ವಾಂತಿ ಬಂದರೆ? ಹೋಗಿ ಆಟಗಾರನೋ ಇನ್ನೇನೋ ಆಗಬೋದಲ್ಲ.. ಆಗ ಇಂಗ್ಲೀಶ್ ಬೇಕು.
ಯಾವಾಗ ಕನ್ನದಲ್ಲೇ ಓದಬೇಕು ಎಂದು ಅನ್ನಿಸ್ತದೆ ಅಂದರೆ
೧) ಏನು ಬೇಕಾದರೂ ಕನ್ನಡದಲ್ಲೇ ಓದಬೋದು.. ಹಾಗು ಅದರಿಂದ ಸಲೀಸಾಗಿ ಇಶ್ಟವಾದ ಕೆಲಸ ಪಡೆಯಬೋದು.
೨) ಸ್ಕೂಲ್ಗಳಲ್ಲಿ ನಮ್ಮ ಆಡುಮಾತಿನ ಕನ್ನಡ ಹೇಗಿದೆ ಅದರ ಸೊಗಡೇನು.. ಕನ್ನಡ ದಿಟವಾದ ಸ್ವರೂಪ ಏನು? (ಮಾದರಿ : ಹೇಗೆ ಕನ್ನಡದಲ್ಲಿ ನಾಲಕ್ಕು ಲಿಂಗಗಳಿವೆ.. ಅವರು ಇದು ಯಾವ ಲಿಂಗ.. ಯಾವಾಗ ಏಕವಚನ, ಯಾವಗದು ಬಹುವಚನ ) ಎಂದು ತಿಳಿಸಿದಾಗ...
ಒಂದು ಮಣ ಹೊತ್ತಗೆಗಳನ್ನು ಓದಿ ಕೊನೆ ಕೆಲಸಕ್ಕೆ ಬರದವರಾದರೇ ಏನು ಬಂತು ಬಾಗ್ಯ.!!
ಕೆಲವರಿದ್ದಾರೆ ಕನ್ನಡ ಮೀಡಿಯಮ್ಮಲ್ಲಿ ಓದದೇ ಇರೋರು ಕನ್ನಡಿಗರೇ ಅಲ್ಲವಂತೆ.. ಇದು ಹೇಗೆ ಅಂದ್ರೆ ಒಂದು ಡೆಪೆನಿಶನ್ನು ಇದೆ...
"ಕನ್ನಡಿಗ ಅಂದರೆ ಯಾವುದದಾರೂ ಒಂದು ಕನ್ನಡ ಸಂಗದ ಮೆಂಬರು" ಅಂದ
ಹಾಗಾಯ್ತು...
ಕನ್ನಡಿಗ ಆಗೋದು ಕನ್ನಡ ಓದೋದ್ರಿಂದಲೂ ಅಲ್ಲ ಬರೆಯೋದ್ರಿಂದಲೂ ಅಲ್ಲ ಕನ್ನಡ ಮಾತಾಡೋದ್ರಿಂದಲೂ ಅಲ್ಲ..
ಕನ್ನಡಿಗ ಆಗೋದು ಹುಟ್ಟಿನಿಂದ.... ಕನ್ನಡ ಅನ್ನೋದು ಅದೊಂದು ತಳಿ..

- mahesha ರವರ ಬ್ಲಾಗ್
- Login or register to post comments
- 414 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ನನ್ನ ಮಗು ಇಂಗ್ಲೀಶ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ ತಗೊಂಡೇ ಓದೋದು
ಮಾಯ್ಸರೆ!! ನನಗೆ ಕೊನೇ ವಾಕ್ಯ ಇಸ್ಟ ಆಯ್ತು.. ಸಕತಾಗ್ ಹೇಳಿದೀರ ಗುರುವೇ!!
ಉ: ನನ್ನ ಮಗು ಇಂಗ್ಲೀಶ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ ತಗೊಂಡೇ ಓದೋದು
ಉ: ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು
’ಕನ್ನಡಿಗ ಆಗೋದು ಹುಟ್ಟಿನಿಂದ’ - ಇದು ಹೇಗೆ?
ಯಾವುದೋ ಭಾಷೆಯಿಂದ ಬಂದು ಕನ್ನಡ ಕಲಿತು ಕನ್ನಡ ನಿಘಂಟು ರಚಿಸಿದ ಕಿಟ್ಟೆಲ್ ಕನ್ನಡಿಗನಲ್ಲವೇ?
ಹುಟ್ಟಿನಿಂದ ಕನ್ನಡಿಗರಾಗಿದ್ದು ಮನೆಯಲ್ಲಿ ಮಗು ಕನ್ನಡ ಮಾತನಾಡಿದರೆ ಹೊಡೆದು ಬಡಿದು ಮಾಡುವ ’ಕಾನ್ವೆಂಟ್ ಪೋಷಕರು’ ಕನ್ನಡಿಗರೇ?
ಉ: ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು
ನನ್ನಿ ನನ್ನ ಬ್ಲಾಗನ್ನು ಓದಿದಕ್ಕೆ..!!
ಉ: ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು
ಮಹೇಶ, ದೊಡ್ಡ ದೊಡ್ಡ ಅಕ್ಷರಗಳ ಹಾಗೂ ಕೆಂಪು ಬಣ್ಣದ ಬಳಕೆ ಬೇಡ.
ಅಂತಹ ಬಳಕೆಯಿರುವ ಪುಟಗಳನ್ನು ಅಳಿಸಿಹಾಕಲಾಗುವುದು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು
ಅಂಗೇ ಮಾಡು ಗುರುವೇ... ಸಕ್ಕದವೇ ಪರಮ ಪಾವನ ಅನ್ನೋದು ಒಂದು ತುದಿ ಆದರೆ ಈ ಬಗೆಯ ನಿಲುವು ಇನ್ನೊಂದು ತುದಿ... ಇಂತ ಇಬ್ಬರಿಂದಲೂ ಕನ್ನಡ ಉದ್ದಾರ ಆಗಲ್ಲ...
೧)ಏನು ಬೇಕಾದರೂ ಕನ್ನಡದಲ್ಲೇ ಓದಬಹುದು - ಅದನ್ನೇನು ದೇವರೇ ಬೂಮಿಗೆ ಇಳಿದು ಬಂದು ಮಾಡಬೇಕೇನು? ತಿಳಿದುಕೊಂಡಿದ್ದನ್ನು ಕನ್ನಡದಲ್ಲಿ ತಿಳಿಯಪಡಿಸುವದು ಕನ್ನಡಿಗನಾಗಿ ಕನ್ನಡಿಗನ ಹೊಣೆ.
೨)ಅದರಿಂದ ಸಲೀಸಾಗಿ ಇಶ್ಟವಾದ ಕೆಲಸ ಪಡೆಯಬೋದು - ಕನ್ನಡ ಮೀಡಿಯಮ್‍ಅಲ್ಲೇ ಓದಿ, ತಮಗಿಸ್ಟವಾದ ಕೆಲಸ ಪಡೆದ, ಪಡೆಯುತ್ತಿರುವ, ಪಡೆಯುವಂತ ಬಲ ಇರುವ ಎಸ್ಟು ಮಂದೀನ ತೋರಿಸಲಿ?
೩)ಸ್ಕೂಲ್ಗಳಲ್ಲಿ ನಮ್ಮ ಆಡುಮಾತಿನ ಕನ್ನಡ ಹೇಗಿದೆ ಅದರ ಸೊಗಡೇನು.. ಕನ್ನಡ ದಿಟವಾದ ಸ್ವರೂಪ ಏನು? (ಮಾದರಿ : ಹೇಗೆ ಕನ್ನಡದಲ್ಲಿ ನಾಲಕ್ಕು ಲಿಂಗಗಳಿವೆ.. ಅವರು ಇದು ಯಾವ ಲಿಂಗ.. ಯಾವಾಗ ಏಕವಚನ, ಯಾವಗದು ಬಹುವಚನ ) ಎಂದು ತಿಳಿಸಿದಾಗ... - ಈಗಿನ ಕನ್ನಡ ಸಾಲೆಗಳಲ್ಲಿ ಕನ್ನಡದ ಹಿರಿತನ, ಕನ್ನಡತನದ ಬಗೆಗೆ ಹೆಮ್ಮೆ ಹುಟ್ಟಿಸುವ, ಕನ್ನಡದ ಸೊಗಡನ್ನು ತಿಳಿಸುವ ಯಾವ ಇಚಾರವನ್ನು ಹೇಳುತ್ತಿಲ್ಲ ಅಂದವರು ಯಾರು? ಬೇರೆತನ ಜಗತ್ತಿನ ನೇಮ, ಕನ್ನಡದ ಸೊಗಡೇನು ಅಂಬುದು ಹೆಚ್ಚು ಮಂದಿಗೆ ತಿಳಿಯುತ್ತ ಹೋದಂತೆ,,. ಇಂದಿಲ್ಲ ನಾಳೆ ಹೊತ್ತಿಗೆಗಳಲ್ಲೂ ಅದು ಮೂಡುತ್ತದೆ...
ಕನ್ನಡ ಮೀಡಿಯಮ್ಮಲ್ಲಿ ಓದದವರಿಗೆ ಕನ್ನಡದಲ್ಲಿ ಓದುವದರ ರುಚಿ ಆಗಲಿ, ಕನ್ನಡ ಬಗೆಗೆ ಒಳ ತುಡಿತ, ಹೆಮ್ಮೆ ಎಲ್ಲಾ ಮೂಡೋದು ತುಸು ತ್ರಾಸು...
ಕನ್ನಡಿಗ ಆಗೋದು ಕನ್ನಡ ಓದೋದ್ರಿಂದಲೂ ಅಲ್ಲ ಬರೆಯೋದ್ರಿಂದಲೂ ಅಲ್ಲ ಕನ್ನಡ ಮಾತಾಡೋದ್ರಿಂದಲೂ ಅಲ್ಲ..
ಇದನ್ನು ಇನ್ನೊಮ್ಮೆ ಸರಿಯಾಗಿ ಓದಿ... ನಿಮಗೇ ಅದು ಸರಿ ಅನಿಸುತ್ತ?
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು
ಸಂಗನಣ್ಣ
ನಂಗೆ ಮತ್ತೆ ಇಂಜಿನಿಯರಿಂಗನ್ನ ಕನ್ನಡ ಮೀಡಿಯಮ್ಮಲ್ಲಿ ಓದಕ್ಕೆ ಆಸೆಯಾಗಯ್ತೆ.. ಯಾವ ಕಾಲೇಜು ಸೇರಿಕೊಳ್ಳಲಿ?
ಈಗ ಅರ್ತ ಆಯ್ತ?
ಇರಲಿ.. ಓದಿದಕ್ಕೆ ನನ್ನಿ!
ದಯವಿಟ್ಟು ನಿಮ್ಮ ಮಗನನ್ನು ಪೂರ್ತಿ ಕನ್ನಡ ಮೀಡಿಯಮ್ಮಲ್ಲೇ ೨ನೇ ಪಿಯುಸಿ ತನಕ ಓದ್ಸಿ ಅಂತ ಹೇಳ್ತೀನಿ.. ಯಾಕಂದರೆ ನಮ್ಮ ಮಕ್ಕಳಿಗೆ ಕಾಂಪಿಟೇಶನ್ನು ಕಡಮೆ ಆಯ್ತದೆ..
ವಸಿ ಒಳರ್ತ ತಿಳಿದುಕೊಳ್ಳಣ್ಣ! 
ಉ: ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು
ಮಹೇಶರೆ,
"ಕನ್ನಡಿಗ ಆಗೋದು ಕನ್ನಡ ಓದೋದ್ರಿಂದಲೂ ಅಲ್ಲ ಬರೆಯೋದ್ರಿಂದಲೂ ಅಲ್ಲ ಕನ್ನಡ ಮಾತಾಡೋದ್ರಿಂದಲೂ ಅಲ್ಲ..
ಕನ್ನಡಿಗ ಆಗೋದು ಹುಟ್ಟಿನಿಂದ.... ಕನ್ನಡ ಅನ್ನೋದು ಅದೊಂದು ತಳಿ.."
ನಾನು ಹುಟ್ಟಿನಿಂದ ಹಿಂದು, ಆದ್ರೆ ಹಿಂದುತ್ವದ ಬಗ್ಗೆ ಹೆಚ್ಚಿಗೆ ಗೊತ್ತಿಲ್ಲ. ಬೇರೆ ಮತದವರು ಹಿಂದುತ್ವದ ಬಗ್ಗೆ ಕೇಳಿದರೆ ಕಣ್ಣು ಬಾಯಿ ಬಿಡುತ್ತೇನೆ. ಹುಟ್ಟಾ ಕನ್ನಡಿಗರಾದರೆ ಸಾಕು, ಕನ್ನಡ ಓದೋದು, ಬರೆಯೋದು ಬೇಕಾಗಿಲ್ಲಾಂದ್ರೆ, ಹೀಗೆ ಆಗುತ್ತೆ. ತಾನು ಕನ್ನಡಿಗಾಂತ ಗೊತ್ತಿರತ್ತೆ, ಇನ್ನೇನೂ ಇಲ್ಲ!
~ಕಲ್ಪನ
ಉ: ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು
ನಿಮ್ಮ ಪ್ರಶ್ನೆಗೆ ನೀವು ಉತ್ತರ ಹೇಳಿದ್ದೀರಲ್ಲ ಅಮ್ಮ...!!
ಗಮನಿಸಿರಿ..
"ನಾನು ಹುಟ್ಟಿನಿಂದ ಹಿಂದು, ಆದ್ರೆ ಹಿಂದುತ್ವದ ಬಗ್ಗೆ ಹೆಚ್ಚಿಗೆ ಗೊತ್ತಿಲ್ಲ. ಬೇರೆ ಮತದವರು ಹಿಂದುತ್ವದ ಬಗ್ಗೆ ಕೇಳಿದರೆ ಕಣ್ಣು ಬಾಯಿ ಬಿಡುತ್ತೇನೆ" ಆದರೂ ನಿಮ್ಮನ್ನು ನೀವು ಹಿಂದು ಎಂದು ಕರೆದುಕೊಳ್ಳಲ್ವೇ? ನಿಮಗೆ ನೀವು ಹಿಂದು ಅನ್ನೋದು ಹುಟ್ಟಿನಿಂದ ಎಂದು ಗೊತ್ತು..
ಸೇಮ್ ತಿಯರಿ
"ನಾನು ಹುಟ್ಟಿನಿಂದ ಕನ್ನಡಿಗ, ಆದ್ರೆ ಕನ್ನಡದ ಬಗ್ಗೆ ಹೆಚ್ಚಿಗೆ ಗೊತ್ತಿಲ್ಲ. ಬೇರೆ ನುಡಿಯವರು ಕನ್ನಡದ ಬಗ್ಗೆ ಕೇಳಿದರೆ ಕಣ್ಣು ಬಾಯಿ ಬಿಡುತ್ತೇನೆ" ಆದರೂ ತನ್ನನ್ನು ಕನ್ನಡ ಎಂದು ಕರೆದುಕೊಳ್ಳಬೋದಲ್ಲ..
ನಿಮ್ಮ ಪ್ರಕಾರ ಒಬ್ಬ ಮುಸ್ಮಿಂ ೫ದೊತ್ತು ನಾಮಾಜು ಮಾಡುವವನು, ಬಗವದ್ಗೀತೆ, ವೇದ, ಮುಂತಾದವನ್ನು ಓದಿ ಪಂಡಿತನಾದ ತಕ್ಸಣ ಅವನು ವಯ್ದಿಕನಾಗ್ತಾನ? ಸೇಮ್ ಹಿಯರ್!
ಇರಲಿ.. ಚರ್ಚೆ ಬೇಡ. ಓದಿದಕ್ಕೆ ನನ್ನಿ..!!
ಉ: ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು
ನನಗೆ ರವಿ ಬೆಳಗೆರೆ ಅವರು ಪೂರ ಏನು ಬರೆದಿದ್ದರೆ ಎಂದು ತಿಳಿದಿಲ್ಲ...ಆದ್ರೆ...
ರವಿ ಬೆಳಗೆರೆ ಅವರು ಕ್ರೈಂ ಸ್ಟೋರಿ ಹೇಳ್ತಿದ್ದನ್ನ ಕೇಳಿ ಭಾರಿ ಬೇಜಾರಾಗ್ತಿತ್ತು...
ಕನ್ನಡ ತೀರ ಕಡಿಮೆ ಇಂಗ್ಲಿಷ್ ವಿಪರೀತ....!
--ಶ್ರೀ
-----------------
ಇದನ್ನ ಬರೀತಿದ್ದಾಗ ರಾಜ್ಕುಮಾರ್ ಹಾಡು ಜ್ಞಾಪಕ ಬಂದದ್ದು ನನ್ ತಪ್ಪಲ್ಲ
"ಹೇಳುವುದು ಒಂದು...ಮಾಡುವುದು ಇನ್ನೊಂದು..."
ಉ: ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು
ಹುಂ ರೀ
ಒಬ್ಬರು ಕನ್ನಡ ಕಡಮೆ ಸಂಸ್ಕ್ರುತ ಜಾಸ್ತಿ
ಇನ್ನೊಬ್ಬರು ಕನ್ನಡ ಕಡಮೆ ಇಂಗ್ಲೀಶ್ ವಿಪರೀತ
ಇನ್ನು ಕನ್ನಡ ಜಾಸ್ತಿ ಬೇರೆಯದು ಕಡಮೆ ಮಾಡಿ ಎಂದವರು ಮಾತ್ರುದ್ರೋಹಿಗಳು...
ಆಯ್ಯೋ ಇರಲಿ ಬಿಡ್ರೀ.. ಅದಕ್ಕೇ ಮಾತಾಡದಿದ್ರೂ ಹುಟ್ಟಿನಿಂದ ಕನ್ನಡಿಗ.. ಅನ್ನೋದೇ ಸರಿ..
ಕನ್ನಡಿಗರಿಗೆ ಸಂಸ್ಕ್ರುತ, ಇಂಗ್ಲೀಸು, ಹಿಂದಿ ಇಲ್ಲದೇ ಸಂವಹನೇ ನಡೆಸಕ್ಕೆ ಬರಲ್ವಂತೆ 
ಓದಿದಕ್ಕೆ ನನ್ನಿ!
ಉ: ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು
ಮಹೇಶರೇ,
ಇದು ಅನಿಸಿಕೆಯಷ್ಟೇ ಅಂದಿದ್ದೀರ. ನನಗಂತೂ ಎಲ್ಲವೂ ಒಪ್ಪುವಂತಹುದಲ್ಲ - ಆದರೆ ಬರಹದ ಹಿಂದಿರುವ ಮಾತಿನ ಭಾವ ತಿಳಿಯಿತು. ಆದ್ದರಿಂದಲೇ ಹತಾಶೆ ಒಪ್ಪಿಗೆಯಾಗಲಿಲ್ಲ.
ಅದೆಲ್ಲಾ ಇರಲಿ, ತುಂಬಾ ಮುಂದಾಲೋಚನೆ ಮಾಡುತ್ತಿದ್ದೀರಲ್ಲ ಎಂದು ಹುಬ್ಬೇರಿಸಿದೆ
ಉ: ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು
ಆದರೆ ನನ್ನ ತಲೆಯಲ್ಲಿ ಇರುವ ಮುಂದಾಲೋಚನೆಯ ಪಲವೇ ಇದು.. ನೀವು ತುಸು ಯೋಚಿಸಿ ನಿಮ್ಮ ಮರಿಮಗ ’I am a Kannada. I belong to Kannada ethnicity" ಎಂದು ಇಂಗ್ಲೀಶಲ್ಲಿ ಹೇಳಿದರೂ ನೀವು ಹಲ್ಲಿಲ್ಲದ ಬಾಯಲ್ಲಿ ವಸಡ ಕಿರುದು ನಿಮ್ಮ ಮರಿಮಗನ ಮಾತಗೆ ಮೆಚ್ಚುಗೆ, ಪ್ರೀತಿ ತೋರುವಿರಿ....
ನನ್ನೀ ಮಾತು ನಿಮಗೇ ಹೆಚ್ಚು ಅರ್ತ ಆಗಿರುತ್ತೆ.. ಅಲ್ವ!
ಬರಹ ಓದಿದಕ್ಕೆ ನನ್ನಿ.. ಬರವಣಿಗೆ ನಿಮ್ಮಶ್ಟು ಚನ್ನಾಗಿಲ್ಲ ಬಿಡಿ.. ಮೊದಲೇ ಹೇಳಿದ್ದೀನಲ್ಲ..
ಓಡುವಾಗ ನೀವು ನೋಡಿ ಹೆಜ್ಜೆ ಹಾಕುವಿರಿ ಮತ್ತು ಹೆಜ್ಜೆ ಹಾಕಿ ನೋಡುವರಿ.. ಆದರೆ ನಮ್ಮದು ಹೆಜ್ಜೆಗಿಜ್ಜೆ ಅಂತ ತಲೆಕೆಡಿಸಿಕೊಳ್ಳದೇ ಬರೀ ಓಡೋದು..
ಉ: ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು
ಇಂಗ್ಲೀಶ್ ಮೀಡಿಯಮ್ಮಲ್ಲೇ ಓದಬೇಕು... ಮುಂದೆ ಅದು ಓದೋದು ಸಯ್ನಸೋ, ಕಾಮರ್ಸೋ, ಆರ್ಟ್ಸೋ, ಇಂಜಿನಿಯರಿಂಗ್, ಮೆಡಿಸಿನ್ನೋ, ಮುಂತಾದವನ್ನಾ ಹೊರತು ಬರೀ ಕನ್ನಡ, ಇಂಗ್ಲೀಶನ್ನಲ್ಲ..
ಕನ್ನಡಿಗ ಆಗೋದು ಕನ್ನಡ ಓದೋದ್ರಿಂದಲೂ ಅಲ್ಲ ಬರೆಯೋದ್ರಿಂದಲೂ ಅಲ್ಲ ಕನ್ನಡ ಮಾತಾಡೋದ್ರಿಂದಲೂ ಅಲ್ಲ.
ಚೆನ್ನಾಗಿದೆ ನಿಮ್ಮ ವಿತಂಡವಾದ. ನೀವು ಲಾಯರಿಯಾಗ್ಬೇಕಿತ್ತು. ಬರೀ ಇಂಗ್ಲೀಶಲ್ಲಿ ಓದಿದವರೇ ಡಾಕ್ಟರು ಇಂಜಿನಿಯರು ಆಗಿಲ್ಲ. ಕನ್ನಡದಲ್ಲೇ ಓದಿದ ನಾವೂ ಇದೀವಿ. ನೀವು ಹೇಳ್ದಂಗೆ ಎಲ್ಲಾ ಎಂಗ್ಲೀಶಿನಲ್ಲೇ ಓದ್ತಾ ಇದ್ರೆ ಕನ್ನಡ ಅಂದ್ರೇನು ಅಂತಾನೇ ಮರೆತುಹೋಗ್ತಾರೆ ಜನ. ಈಗಲೇ ಎಷ್ಟೋ ಕನ್ನಡಿಗರು (ಇಂಗ್ಲೀಷಿನಲ್ಲಿ ಓದಿದವರು) ಕನ್ನಡ ಮಾತಾಡದೇ ಇರೋರನ್ನ ನೋಡಬಹುದು. ಆದ್ರೆ ಕನ್ನಡದಲ್ಲೇ ಓದಿ ಕನ್ನಡ ಮಾತಾಡದೇ ಇರೋರು ಯಾರೂ ಇಲ್ಲ.
ಕೀರ್ತಿ ಕಿರಣ್ ಎಂ
ಉ: ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು
ಕೀರ್ತಿ ಕಿರಣ್
ಇದು ವಾದ/ಚರ್ಚೆಯಲ್ಲಪ್ಪ.. ಬ್ಲಾಗು.. ಇಲ್ಲಿ ವಿತಂಡ-ಪತಂಡ ಅಂತ ಸಂಸ್ಕ್ರುತದಲ್ಲಿ ವದರಬಾರದು..
ನಿಮ್ಮ ಪ್ರಶ್ನೆಗಳಿಗೆ ನಾನು ಉತ್ತರ ಹೇಳಲ್ಲ.. ಏಕೆಂದರೆ ಅದಕ್ಕಲ್ಲ ಈ ಬ್ಲಾಗು ಬರೆದುದು..
ನೆನೆಪಿಡಿ: ನಾನು ’ನನ್ನ ಮಗು’ವಿನ ಬಗ್ಗೆ ಬರೆದುದು ’ನಿಮ್ಮ ಮಗು’ವಿನ ಬಗ್ಗೆ ಅಲ್ಲ..
ಈ ಬರಹ ಓದಿದಕ್ಕೆ ನನ್ನಿ!