Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › mahesha ರವರ ಬ್ಲಾಗ್

ಆವರಣಾಭಿಮಾನ

March 16, 2007 - 4:16pm — mahesha

ಭೈರಪ್ಪನವರ 'ಆವರಣ' ಒಳ್ಳೆ ಕಡಲೇ ಪುರಿ ಮಾರಾಟವಾದ ಹಂಗೆ ಮಾರಾಟವಾಯ್ತಾ ಇದೆ.
ಅದನ್ನು ಜಾಸ್ತಿ ಸೇಲ್ ಮಾಡಲೂ ಕೆಲವು ಸಂಸ್ಥೆಗಳು ಟೊಂಕ ಕಟ್ಟಿ ನಿಂತ ಹಂಗೆ ಕಾಣತ್ತೆ.
ಅದರ ಸೇಲ್ ಇನ್ನೂ ಹೆಚ್ಚಿಸಲು ಅದು ರದ್ದಾಗುತ್ತೆ ಅಂತ ಗಾಳಿಮಾತು ಜೋರಾಗಿ ಬೀಸ್ತಾ ಇದೆ.
ಅದನ್ನು ಮೆಚ್ಚಿ ಗೋಷ್ಠಿಗಳು ನಡೈತಾ ಇದೆ.

ಇದನ್ನೆಲ್ಲ ನೋಡಿ, ಭೈರಪ್ಪನವರ ಹಲವು ಕಾದಂಬರಿಗಳನ್ನು ಓದಿದವರು ಹಸಿ ಹಸಿ ಹುಮ್ಮಸ್ಸಿನಿಂದ ಮುನ್ನುಗಿ ಹೋಗಿ ಅದನ್ನು ಓದಿದರೆ, ಇದು ಯಾಕೆ ಇಷ್ಟು ಬೇರೆ ತೆರದಲ್ಲಿದೆ ಎಂದು ಅನ್ನಿಸಬಹುದು.

ನನಗಂತು ಅದರಲ್ಲಿ ಕೆಲವು ವಿಚಾರಗಳು ಚರಿತ್ರೆಯ ಪುಸ್ತಕವನ್ನು ಓದಿಷ್ಟು ಡ್ರೈ ಎನಿಸಿತು.

ಪರ್ವ ಮತ್ತು ಸಾರ್ಥಗಳ ಹದವಿಲ್ಲ. ಈ ಕಾದಂಬರಿ ಅರ್ಜೆಂಟಲ್ಲಿ ಓಡಿ ಓಡಿ ಹೋಗುತ್ತೆ.

ಈ ಕಾದಂಬರಿ ಚೆನ್ನಾಗಿಲ್ಲ ಅಂತ ಅಲ್ಲ. ಆದರೆ ಪರ್ವ ಮತ್ತು ಸಾರ್ಥದ ಹದದಲ್ಲಿಲ್ಲ.

ನಾನು ಓದಿದುವು ಅವರ ಆರುವರೆ ಕಾದಂಬರಿ(ಮಂದ್ರಾ ಇನ್ನು ಬಾಕಿ ಇದೆ) ಮತ್ತು ನೋಡಿದುವು ಅವರ ಕತೆಯ ಮೇಲೆ ಆದ ಎರಡು ಸಿನಿಮಾ.

ಅವಲ್ಲಿ ನನಗೆ 'ಪರ್ವ' ಮತ್ತು 'ತಬ್ಬಲಿ ನೀನಾದೆ ಮಗನೇ'(ಸಿನಿಮಾ) ಬಹಳ ಮೆಚ್ಚು.

'ಪರ್ವ'ವನ್ನು ಬ್ಯಾನಿದ್ದರಂತೆ( ಬ್ಯಾನ್ ಮಾಡಿದ್ದರಂತೆ Smiling ), ಅದೇಕೆ ಅಂತ ನನಗೆ ಗೊತ್ತಿಲ್ಲ.

ಏಕೆ ಅಂತ ಉವರು ತಿಳಿಸಿ!

Ornamental seperator
  • mahesha ರವರ ಬ್ಲಾಗ್
  • Login or register to post comments
  • 736 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 17, 2007 - 12:12am — hamsanandi

Re: ಆವರಣಾಭಿಮಾನ

hamsanandi's picture

ನನಗೆ ತಿಳಿದ್ಂತೆ ಪರ್ವ ಬ್ಯಾನ್ ಆಗಿರಲಿಲ್ಲ .. ಗಿರಡ್ಡಿ ಗೋವಿಂದರಾಜರು ಭೈರಪ್ಪನವರ ಮೇಲೆ ಕೃತಿಚೌರ್ಯದ ಆಪಾದನೆ ಹೊರಿಸಿದ್ದರು..

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ
March 17, 2007 - 3:39pm — ismail

Re: ಆವರಣಾಭಿಮಾನ

ismail's picture

ಹೌದು ಭೈರಪ್ಪನವರ ಯಾವ ಕೃತಿಯೂ ಬ್ಯಾನ್ ಆಗುವಂಥವಲ್ಲ. ಆವರಣ ಬ್ಯಾನ್ ಆಗಲಿ ಎಂದು ಅವರೇ ಆಸೆ ಪಟ್ಟಿದ್ದರೂ ಅದಾಗುತ್ತಿಲ್ಲ.

ಜೈ ಕನ್ನಡ ಭುವನೇಶ್ವರಿ

ಇಸ್ಮಾಯಿಲ್ ನನ್ನ ಬ್ಲಾಗ್: http://ismail.sampada.net

  • Login or register to post comments
  • link
  • Email this ಪ್ರತಿಕ್ರಿಯೆ
March 19, 2007 - 10:50pm — mahesha

ಈ ವರುಷ ಭೈರಪ್ಪನವರ ವರುಷ

mahesha's picture

ಮೊದಲು ಅವರ ನಾಯಿನೆರಳು ಕಾದಂಬರಿ ಚಿತ್ರವಾಗಿ ಬಿಳಿಪರದೆ ಏರಿತಲ್ಲದೆ, ಪಿವಿಆರ್‍ ಅಲ್ಲಿ ಹೌಸ್ ಪುಲ್ ಓಡಿತು.

ತರುವಾಯ ಅವರ "ಆವರಣ" ಸೂಪರ್‍ ಹಿಟ್. ಹಾಟ್ ಕೇಕಂತೆ ಸೇಲಾಯ್ತು.

ಅದಲ್ಲದೆ, ಈಗ ’ಆವರಣ’ದ ಕುರಿತ ಸಂವಾದಗಳು ನಡೆಯುತ್ತಾ ಇವೆ

ಸಂಡೇ ನಡೆದ ಸಂವಾದದಲ್ಲಿ ನಾರಯಾಣಮೂರ್ತಿಗಳು ( the murthys Laughing out loud ) ಬಂದಿದುದು, ಒಂದು ತೆರ ಚೆನ್ನಾಗಿದೆ

http://vijaykarnatakaepaper.com/pdf/2007/03/19/20070319a_004101003.jpg

http://prajavaniepaper.com/pdf/2007/03/19/20070319a_004100002.jpg

  • Login or register to post comments
  • link
  • Email this ಪ್ರತಿಕ್ರಿಯೆ
March 20, 2007 - 1:16am — Vasanth Kaje

(ಈ ವರುಷ ಭೈರಪ್ಪನವರ ವರುಷ) ++;

Vasanth Kaje's picture

ಇನ್ನೂ ಒಂದೆರಡು ಕಾರಣಗಳನ್ನು ಸೇರಿಸಬಹುದು..

ಶಂಕರಮೂರ್ತಿಯವರ ಹೇಳಿಕೆಯ ಬಳಿಕ ಕಾರ್ನಾಡ್ ಅವರಿಂದ ಭೈರಪ್ಪನವರ ಮೇಲೆ ಕೆಸರೆರೆಚುವ ಬಾಲಿಶ ಪ್ರಯತ್ನ. ಅದಕ್ಕೆ ಭೈರಪ್ಪನವರ ವಿದ್ವತ್ಪೂರ್ಣವಾದ ಉತ್ತರಗಳು, ಓದುಗರ ಬೆಂಬಲದ ಸುರಿಮಳೆ ಇತ್ಯಾದಿ ಇತ್ಯಾದಿ..

(ಭೈರಪ್ಪನವರು ಇಲ್ಲಿ ಜನಪ್ರಿಯತೆಯನ್ನು ಉದ್ದೇಶಿಸದೆ ಇರಬಹುದು, ಆದರೆ ವಿಷಯ ತುಂಬಾ ಬಿಸಿ ಇದ್ದುದರಿಂದ ಭೈರಪ್ಪನವರ ಕಾದಂಬರಿಯನ್ನು ಓದದ ’class of people' ಕೂಡ ಭೈರಪನವರ ಬರಹವನ್ನು ಈ ಸಂದರ್ಭದಲ್ಲಿ ಓದಿದರು.)

ವಸಂತ್ ಕಜೆ

  • Login or register to post comments
  • link
  • Email this ಪ್ರತಿಕ್ರಿಯೆ
March 20, 2007 - 4:00pm — mahesha

(ಈ ವರುಷ ಭೈರಪ್ಪನವರ ವರುಷ) +++;

mahesha's picture

ಆ ಶಂಕರಮೂರ್ತಿ ಅವರ ಹೇಳಿಕೆ ಜೊತೆ, ಪೇಪರಲ್ಲಿ ಆದ ಬೈರಪ್ಪ ಮತ್ತು ಕಾರ್ನಾಡರ ನಡುವೆ ಬರೆವಣಿಗಯೆ ಚಕಮಕಿ( ಮಾತಿನ ಚಕಮಕಿ ತೆರ) ಬಹಳ ಮಜಾ ತಂತು. Laughing out loud

ನನಗಂತೂ ದಿನಾ ಅದರ ಬಗ್ಗೆ ಯಾರು ಯಾರನ್ನು ಅಂತಾರೆ ಅಂದ ಓದೋದೇ ಒಂದು ತಪ್ಪದ ಕೆಲಸ!

ಯಾರು ಗೆದ್ದರೋ, ಯಾರು ಬಿದ್ದರೋ, ಆದರೆ ಮಂದಿಗೆ ಟಿಪ್ಪುವಿನ ಎಸ್ಟು ಅಡಗಿಸಿಟ್ಟಿದ ಸುದ್ದಿಗಳೆಲ್ಲ ಬಯಲಾಯಿತು.

  • Login or register to post comments
  • link
  • Email this ಪ್ರತಿಕ್ರಿಯೆ
March 20, 2007 - 4:27pm — Rohith

ಭೈರಪ್ಪನವರ ಅಧಿಕೃತ ಉತ್ತರ

Rohith's picture

ಮಹೆಷರವರೆ,

ನೀವು ಓದಿದ್ದೀನಿ ಅಂದ ಕೆಲವು ಭೈರಪ್ಪನವರ ಉತ್ತರಗಳು ಅಥವ ಅವುಗಳ ಕೊಂಡಿಗಳನ್ನು ನನ್ನೊಂದಿಗೆ ಇಲ್ಲಿ ಹಂಚಿಕೊಳ್ಳುವಿರಾ? ಆ ಕಾಲದಲ್ಲಿ ಈ ಬಗ್ಗೆ ಏನೂ ಓದಿಲ್ಲದಿದ್ದರಿಂದ, ಏನು ನಡೀತು ಎಂದು ತಿಳಿಯಲು ನನಗೆ ಕುತೂಹಲ Smiling

  • Login or register to post comments
  • link
  • Email this ಪ್ರತಿಕ್ರಿಯೆ
March 20, 2007 - 5:15pm — mahesha

ಭೈರಪ್ಪನವರ ಉತ್ತರ

mahesha's picture

ರೋಹಿತ್

ನನ್ನ ಬಳಿ paper cuttings ಇವೆ. ಅದು ಇಲ್ಲಿ ನನ್ನ ಬಳಿಯಿಲ್ಲ. ಊರಲ್ಲಿದೆ.

ನನ್ನ ಹೆಸರು ಮಹೇಶ
ಮಹಿಷ ಅಂದರೆ ಕೋಣ ಅಂತ. Laughing out loud.

ನಿಮ್ಮ ಕೂತುಹಲ ತೀರಿಸುವ ಕೊಕ್ಕೆಗಳನ್ನು ನೀಡಲು ಆರುವರು, ನಿಮಗೆ ನೆರವಾಗಲಿ!

ನನ್ನಿ!

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಂತೂ ಆವರಣವನ್ನು ಓದಿದ್ದಾಯಿತು!
  • ಭೈರಪ್ಪನವರ ಆವರಣವನ್ನು ಓದಿದ ನನ್ನ ಅನುಭವ
  • ಎಸ್. ಎಲ್. ಭೈರಪ್ಪನವರ ’ಆವರಣ’
  • ಈ ಪರ್ವ ಭಾವಸಾಗರ
  • ಆವರಣ ಹೊಸ ದಾಖಲೆ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 19 ಅತಿಥಿಗಳು ಆನ್ಲೈನ್ ಇರುವರು.

ಗುರುವಿನ ವಿಸ್ತರದ | ಪರಿಯ ನಾನೇನೆಂಬೆ
ಮೆರೆವ ಬ್ರಹ್ಮಾಂಡದೊಳಹೊರಗನವ ಬೆಳಗಿ |
ಪರಿಪೂರ್ಣನಿಪ್ಪ ಸರ್ವಜ್ಞ ||

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator