ಮಾತು ಎಂಬ ಹೊಳೆಯ ನೀರು ಬರೀ ತೀರ್ತಕ್ಕೆ ಸಾಕೇ?
ಈಗ ಏನಪ್ಪ ಅಂದ್ರೆ ನೀರಿನ ಬಳಕೆ ಎಲ್ಲೆಲ್ಲಿಗೆ ಬೇಕು ಯಾತ್ಯಾತಕ್ಕೆ ಬೇಕು ಅಂತ ಗೊತ್ತಿದೆ..
ಹೊಳೆಯ ನೀರು ಅಂತ ಬರೀ ತೀರ್ತಕ್ಕೆ ಬಳಸಲು ಆಗುವುದೇ, ತೊಳೆಕ್ಕೂ ಬೇಕೂ.. ![]()
ಹಾಗೇ ಹೊಳೆ ಹರಿಯತ್ತೆ ಅಂತ ಹರಿದುಕೊಂಡು ಇರಕ್ಕೆ ಬಿಟ್ರೇ ಹೊಲಕ್ಕೆ, ಗದ್ದೆ, ಮನೆಯ ಬಚ್ಚಲಿಗೆ ಹೇಗೆ ಹಾಯಿಸೋದು. ಅದಕ್ಕೆ ಅಡ್ಡ ಅಣೆಕಟ್ಟಬೇಕಲ್ಲ.. ಅಣೆಕಟ್ಟಿದರೂ ಒಂದು ಅಂಕೆಯಲ್ಲಿ ನೀರು ಹರಿಯತ್ತೆ..! ಅಣೆಯಲ್ಲೂ, ಕರೆಯಲ್ಲೂ ಆಗಾಗ ಹೂಳು ತಗೀಬೇಡಿ, ಏರಿ ರಿಪೇರಿ ಮಾಡಬೇಕು..
ಹಾಗೆ ನುಡಿಹೊಳೆ ಹರಿಯುವುದರ ಜತೆ ಅಣೆಯಲ್ಲಿ ತುಸು ನಿಂತರೇ, ಆ ಅಣೆಯಿಂದ ಹೂಳು ತೆಗೆದು, ಏರಿ ರಿಪೇರಿ ಮಾಡಿ, ಕಾಲುವೆಯಲ್ಲಿ ಹರಿಸಿದರೇ ಹೆಚ್ಚು ಲಾಬ! ಹೂಳು ತೆಗೆಯದೇ ಇದ್ದರೇ ನೀರು ತನ್ನತನ ಕಳಕೊಂಡು ಬಗ್ಗಡ ಕೆಸರಾಗುವುದು. ಆಗ ಅದನ್ನು ನೀರು ಎಂದು ಕರೆಯುವುದಕ್ಕಿಂತ ಕೆಸರು ಎಂಬುದು ಸಯ್.

- mahesha ರವರ ಬ್ಲಾಗ್
- Login or register to post comments
- 187 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಮಾತು ಎಂಬ ಹೊಳೆಯ ನೀರು ಬರೀ ತೀರ್ತಕ್ಕೆ ಸಾಕೇ?
ನಮಸ್ಕಾರ ಮಯೇಸಣ್ಣೋರ್ಗೆ. ಏನು ಬೆಳಗ್ನಿಂದ ಏನೇನೋ ಬರೀತಾನೇ ಇದಾರಲ್ಯ ಏನ್ ಸಮಾಚಾರ ಅಂತೀನಿ?
ಸುಮ್ಕೆ ಬರೀತಾನೇ ಇದ್ರೂ ಒಂದ್ ರೀತಿನಾಗೇ ನೀವು ಏಳೋದೆಲ್ಲ ದಿಟವಾಗೇ ಅದೆ ಕಣ್ ಬುಡಿ.
ಆದ್ರೆ ಆಗ್ಲೆ ಒಂದ್ಕಡೆ ಬರ್ದಿದ್ದರಲ್ಯಾ ದೊಡ್ಡ್ ದೊಡ್ಡ್ ದಾಗೆ ಬರುದ್ರೆ ಓದಕೆ ಸ್ಯಾನೆ ಕಶ್ಟ ಆಯ್ತದೆ ಅದ್ಕೆ ಕಾರಂತ್ರ್, ತೇಜಸ್ವಿಯವರಂಗೆ ಚಿಕ್ ಚಿಕ್ದಾಗೆ ಬರೀಬೇಕು ಅಂತ. ಆದ್ರೆ, ಒಬ್ಬೊಬ್ರುದು ಒಂದೊಂದ್ ಸ್ಟೇಲ್ ಇರ್ತದಲ್ವ? ಕುವೆಂಪು ಅವ್ರು ದೊಡ್ಡ್ದಾಗೆ ಬರೇಯೋದ್ರಲ್ಲಿ ಎತ್ತಿದ್ ಕೈ ಅಂಗಂತ ಅವ್ರ್ಗೆ ಸರಿಯಾಗೆ ಬರೀಯಾಕೆ ಬರಾಕಿಲ್ಲ ಅಂದ್ರೆ ಆಯ್ತದ? ಅಂಗೆ ದ್ಯಾವನೂರ ಮಹಾದೇವ್ರುದು ಸಣ್ಣ್ದಾಗೆ ಬರೆಯೋದ್ರಲ್ಲಿ ನಿಸ್ಸೀಮ್ರು. ಇಲ್ಲೀವರ್ಕೆ ಬರೆ ಸುಮಾರ್ 182 ಪುಟ ಬರ್ದು ಅಶ್ಟೋಂದು ಎಸ್ರು ಮಾಡವ್ರೆ. ಆದ್ರು ಈಗಿನ್ ಕಾಲಕ್ಕೆ ಚಿಕ್ಕ್ದಾಗೆ ಬರುದ್ರೆ ಓದೋರ್ಗೆ ಸುಲ್ಬ ಆಯ್ತದೆ ಅನ್ನಾದ್ರಲ್ಲಿ ಎಲ್ಡ್ ಮಾತಿಲ್ಲ ಕಣ್ರಪ್ಪೋ ಆದ್ರೆ, ಚಿಕ್ಕ್ದಾಗೆ ಬರುದ್ಬುಟ್ಟು ಅರ್ತವಾಗ್ದಂಗೆ ಬರುದ್ರೆ ಮಾತ್ರ ಸ್ಯಾನೆ ಕಷ್ಟ್ವಾಯ್ತದೆ. ಚೆಂದಾಕಿದ್ರೆ ಎಂಗಿದ್ರೂ ಚೆಂದಾಕೆ ಇರ್ತದೆ ಕನ ಯಾಳಿ. "ಟೈಟಾನಿಕ್" ಆಪಾಟಿ ದೊಡ್ ಸಿನ್ಮಾ ಆದ್ರೂನೂವೆ ಪರ್ಪಂಚದಾಗೇ ಬೋಲ್ ಜನ ನಾ ಮುಂದು ತಾ ಮುಂದು ಅಂತ ನೋಡ್ನಿಲ್ವೆ? ದೊಡ್ದಾಗ್ಲಿ, ಚಿಕ್ಕ್ದಾಗ್ಲಿ ಚೆಂದಾಕಿರ್ಬೇಕಷ್ಟೇಯಾ ಅನ್ನಾದು ನನ್ ಅಬಿಪ್ರಾಯ ಕನ್ರಪ್ಪೋ!
ದ್ಯಾವ್ರು ನಿಮ್ನ ಚಂದಾಗ್ ಮಡುಗ್ಲಿ
ವಿಸ್ವಾಸ್ದಾಗೆ,
ಸಸಿ
ಉ: ಮಾತು ಎಂಬ ಹೊಳೆಯ ನೀರು ಬರೀ ತೀರ್ತಕ್ಕೆ ಸಾಕೇ?
ಯಂಡ ಕುಡಿದಿದ್ದೀರ?
ಎಲ್ಲೋ ಆಕದನ್ನ ಎಲ್ಲೋ ಆಕಿದ್ದೀರ!!
ತಮಾಸೆ..!
ನನ್ನಿ!
ಉ: ಮಾತು ಎಂಬ ಹೊಳೆಯ ನೀರು ಬರೀ ತೀರ್ತಕ್ಕೆ ಸಾಕೇ?
ನಮಸ್ಕಾರ ಮಯೇಸಣ್ಣೋರ್ಗೆ.,
"ಮನ್ಸ ಸದಾ ಕುಡಿದ ಸ್ತಿತೀಲೇ ಇರ್ಬೇಕು" ಅಂತಾನೆ ಫ್ರೆಂಚ್ ನ ಬೋಲ್ ದೊಡ್ಡ್ ಕವಿ ಬೋದಿಲೇರ. ಅದ್ಕೆ ನಾ ವಸಿ ಅಂಗೆ. ಯಾವಾಗ್ಲೂ ಟೈಟು. ಕುಡಿದ ಸ್ತಿತೀನೆ ಒರ್ತು ಕುಡ್ಕಂಡಿರ್ಬೇಕು ಅಂತಲ್ಲ ಗೆಪ್ತಿಯಿರ್ಲಿ. ಅ+ಪಾರ ಅರ್ತ ತಗಂದ್ಬುಡ್ಬೇಡಿ.
"ಏನನ್ನಾದ್ರೂ ಕುಡಿ. ವೈನನ್ನಾದ್ರೂ ಕುಡಿ, ಕಾವ್ಯನಾದ್ರೂ ಕುಡಿ, ಋಜುತ್ವನಾದ್ರೂ ಕುಡಿ" ಅಂತಾನೆ ಕನ್ರಪ್ಪೋ ಅವ್ನು. ಅದ್ಕೆ ನಾನೂವೆ...!
ಇಂಗೆ,
ಸಸಿ
ಉ: ಮಾತು ಎಂಬ ಹೊಳೆಯ ನೀರು ಬರೀ ತೀರ್ತಕ್ಕೆ ಸಾಕೇ?
ಸರಿ ಸಿವ..
ಪುಜಾರಿ ಒಳ್ಳೇದು ಮಾಡಲಿ!