ನಮಗಾದ ಆಘಾತಗಳನ್ನು ಮತ್ತು ಗಾಯಗಳನ್ನು ತಿರಸ್ಕರಿಸಿದರೆ, ಅವು ತಾವಾಗಿಯೇ ಮಾಯವಾಗುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಹೆಣ್ಣಿನ ಚೆಲುವು

ನೋಡುವ ಗಂಡಿನ ಕಣ್ಣಿನ ನೋಟದ ಹಿಂದಿನ ಪುಳಕದ ಮನಸ್ಸು.
ನೋಡುವ ಗಂಡಿನ ಗಂಡುತನ
ನೋಡುವ ಗಂಡಿನ ಒಂಟಿತನ
ನೋಡುವ ಗಂಡಿನ ಜಂಟಿತನದ ಬಯಕೆ
ಒಟ್ಟಿನಲ್ಲಿ ಹೆಣ್ಣಿನ ಚಲುವಿಗ ಓಸುಗರ ಗಂಡೇ!

ನಾಚುರಲಿ ನೋಡಿ
ನವಿಲ(ಗಂಡ ನವಿಲು) ನವಿಲೆಗಿಂತ ಚಲುವ.(ಪುಕ್ಕ)
ಸಿಮ್ಮ , ಸಿಮ್ಮಣಿಗಿಂತ ಚೆಲುವ(ಕೊರಳ ಕೇಸರಿ)
ಕೋಣ ಎಮ್ಮೆಗಿಂತ(ಕೊಂಬುಗಳು)
ಗೂಳಿ ಹಸುವಿಗಿಂತ(ಕೊಂಬು, ಮತ್ತು ಹಗಲ ಉಬ್ಬು)
ಗಂಡಾನೆ ಹೆಣ್ಣಾನೆಗಿಂತ( ದಂತ )
ಗಂಡುಗಬ್ಬಿ ...

ಹೆಣ್ಣಿನದ ಹುಸಿಚೆಲುವು.. ಬರೀ ಗಂಡು ಹೊಗಳೀ ಹೊಗಳೀ ಅಟ್ಟಕ್ಕೆ ಏರಿಸಲು ಇರುವ ದಾರಿ.! :)

[ ನನ್ನ ಬಗ್ಗೆ ತಪ್ಪು ತಿಳಿಯಬೇಡಿ.. ನನಗೆ ರಕ್ಷಿತ, ರಮ್ಯ, ಅಂದ್ರೆ ಪ್ರಾಣ.. ನಮ್ಮ ಮನೆ ಕ್ಯಾಲೆಂಡರು ಇವರದೇ, ಬೆಳಬೆಳಗ್ಗೆ ಎದ್ದು ಮೊದಲು ನೋಡೋದು ಈ ತಿಂಗಳೆಲ್ಲ ತೋಳಿಲ್ಲದ ಕಪ್ಪುಡುಪಿನ ದೀಪಿಕಾ ಪಡುಕೋಣೆಯನ್ನ :) ]

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಹೆಣ್ಣಿನ ಚೆಲುವು

roopablrao's picture

ಮಹೇಶರವರೇ
ನೀವು ಕೊಟ್ಟಿರುವ ಉದಾಹರಣೆಗಳೆಲ್ಲ್ಲಾ ಪ್ರಾಣಿ ಪ್ರಭೇದಕ್ಕೆ ಸೇರಿರುವುದು.
ಐಶ್‌ಗಿಂತ ಅಭಿಶೇಕ್ ಚೆಂದ ಅಂತ ಹೇಳಲಾಗುತ್ತಾ?
ರಕ್ಶಿತಾಗಿಂತ ಪ್ರೇಮ್ ಚೆಂದ ಅಂತ ಹೇಳಾಲಾಗುತ್ತಾ.
ಮಾನವ ಜಾತಿಯಲ್ಲಿ ಹೆಣ್ಣಿನ ಚೆಲುವನ್ನು ವರ್ಣಿಸುತ್ತಾರೆ ವಿನಹ ಗಂಡಿನ ಚೆಲುವನ್ನಲ್ಲ.

ಉ: ಹೆಣ್ಣಿನ ಚೆಲುವು

vinayudupa's picture

ರೂಪರವರೆ,
ಒಂದು ಸಾರಿ ನಾನೂ ಹಾಗೇ ಯೋಚಿಸಿದೆ. ಆದ್ರೆ ಆ ರೀತಿ ಹೊಗಳೋರಲ್ಲಿ ಹೆಚ್ಚಿನೋರು ಗಂಡಸರೇ. ನಮ್ಮನ್ನು ನಾವೇ ಬಣ್ಣಿಸಿಕೊಳ್ಳೋದು ಅಷ್ಟೊಂದು ಸರಿ ಕಾಣೋಲ್ವೇನೋ ಅಂತ ಅನಿಸಿಕೆ.

ಉ: ಹೆಣ್ಣಿನ ಚೆಲುವು

mahesha's picture

ರೂಪ ಅವರೆ ( ನೋಡಿ ನಿಮ್ಮ ಹೆಸರಲ್ಲೇ ರೂಪವಿದೆ :) )

ನಾನ್ ಬರೆದದ್ನ ನೀವ್ ಪೂರ್ತಿ ಓದ್ಲಿಲ್ಲ..

ಕೊನೇಲಿ
+++++
[ ನನ್ನ ಬಗ್ಗೆ ತಪ್ಪು ತಿಳಿಯಬೇಡಿ.. ನನಗೆ ರಕ್ಷಿತ, ರಮ್ಯ, ಅಂದ್ರೆ ಪ್ರಾಣ.. ನಮ್ಮ ಮನೆ ಕ್ಯಾಲೆಂಡರು ಇವರದೇ, ಬೆಳಬೆಳಗ್ಗೆ ಎದ್ದು ಮೊದಲು ನೋಡೋದು ಈ ತಿಂಗಳೆಲ್ಲ ತೋಳಿಲ್ಲದ ಕಪ್ಪುಡುಪಿನ ದೀಪಿಕಾ ಪಡುಕೋಣೆಯನ್ನ Smiling ]
+++++

ಅಂತ ಬರೆದಿದ್ದೀನಿ....

ಗಂಡಸಾದ ನಂಗೆ ಹೆಣ್ಣಿಗೇ ಗಂಡಿಗಿಂತ ಚೆಲುವ್ ಹೆಚ್ಚು.. ಆದರೆ ಅದೂ ನಾನ್ ಹಸಿರ್‍-ಗಣ್ಣಡಕ ಹಾಕ್ಕೊಂಡ್ ಜಗವೆಲ್ಲಾ ಹಸಿರ್‍-ಹಸಿರು ಅಂದಂಗೆ! ನನ್ ಕಣ್ಗೆ ಹುಟ್ತಾನೆ ಗಂಡಸು ಎಂಬ ಕಣ್ಣಡಕ ಇದೆ.!

ನೀವ್ ಹೇಳಿ..... ಗಾಳಿಪಟದ ದಿಗಂತ್, ಗಣೇಶರನ್ನ ಕ್ಯೂಟ್, ಹ್ಯಾಂಡ್‌ಸಮ್ ಅನ್ನೋದು ಗಂಡಸ್ರಾ ಹೆಂಗಸ್ರಾ? ಹೆಣ್ಗಳು ತಾನೆ.!!

ಬರೆಯೋರು.ಓದೋರು[ಈಗೀಗ ಹೆಂಗಸ್ರು ಓದ್ತಾ ಇದ್ದಾರೆ] ಯಾವಾಗಲೂ ಗಂಡಸ್ರು ಜಾಸ್ತಿ.. ಅದಕ್ಕೆ ಕವಿತೆ-ಕವನ-ಕಾವ್ಯದ ತುಂಬೆಲ್ಲ ಹೆಣ್ಣೇ-ಚುಂದರಿ-ಚಲುವೆ-ಚಂದುಳ್ಳೀ.. :)

ಒಂದ್ ವೇಳೆ ಗಂಡಸ್ರಿಗಿಂತ ಹೆಂಗವಿ(ಹೆಣ್‌ಕವಿ)ಗಳೇ ಹೆಚ್ಚಿದ್ರೆ... ಆಗ ಕವನ-ಕಾವ್ಯದ ತುಂಬೆಲ್ಲಾ ಗಂಡೇ - ಚುಂದರ, ಚಲುವ, ಚಲುವಾಂತ !!

"ಮಾನವ ಜಾತಿಯಲ್ಲಿ ಹೆಣ್ಣಿನ ಚೆಲುವನ್ನು ವರ್ಣಿಸುತ್ತಾರೆ ವಿನಹ ಗಂಡಿನ ಚೆಲುವನ್ನಲ್ಲ."
ನೋಡಿ.. ಮಾನವ ಜಾತಿ/Man-kind ಅನ್ನೋವಾಗ ಮಾನವ/Man ಪುಲ್ಲಿಂಗ. :)

ಯಾಕಪ್ಪ.. ಜಗಳ.. ಗಂಡಸ್ರು ಹೆಂಗಸ್ರು ಇಬ್ರೂ ಚಂದಾಗಿದ್ದಾರೆ ಅಂತ ಹೇಳಿಬಿಡೋಣ! :)

ಉ: ಹೆಣ್ಣಿನ ಚೆಲುವು

savithru's picture

ರೂಪ ಅನ್ನೋದು ಯಾವಾಗಲೂ "relative term". ಬಹುಶ ನೀವು ಹೆಣ್-ವಾನರರು ಸೀತೆಯನ್ನು ಮೊದಲ ಬಾರಿಗೆ ನೋಡಿದಾಗ ಅವರು ವ್ಯಕ್ತ ಪಡಿಸಿದ ಅನಿಸಿಕೆಗಳ ಕಥೆಯನ್ನು ಕೇಳಿರಬಹುದು.

ಹೆಣ್ಣಿನ ಚೆಲುವು ಇರೋದು ಗಂಡಿನ ಕಣ್ಣಿನಲ್ಲಿ!

ಸವಿತೃ

ಉ: ಹೆಣ್ಣಿನ ಚೆಲುವು

kannadakanda's picture

ನೀಮುಂ ಪಂಪನ ’ಸ್ತ್ರೀರೂಪಮೆ ರೂಪಂ’ ದಾರಿ ಪಿಡಿದಿರಲ್ತೇ?

ಉ: ಹೆಣ್ಣಿನ ಚೆಲುವು

madhava_hs's picture

ವವ್...ವಾಟ್ ಎ ಬ್ಯೂಟಿಪುಲ್ ಆರ್ಗ್ಯುಮೆಂಟ್ !!

ಹೆಂಗಸಿಗೆ ಚೆಲುವು..ಗಂಡಸಿಗೆ ಶರೀರ ದಾರ್ಡ್ಯತೆ..ಲಕ್ಷಣವಂತೆ..

ಗಂಡಸರು ಭಾವನೆಗಳನ್ನು ಎಕ್ಸ್ ಪ್ರೆಸ್ ಮಾಡುವುದು ಜಾಸ್ತಿ. ಹಾಗಾಗಿ ಬಂದ ಭಾವನೆಗಳನ್ನೆಲ್ಲವನ್ನೂ ಕಾವ್ಯಕ್ಕಿಳಿಸಿಬಿಡುತ್ತಾರೆ..

ಉ: ಹೆಣ್ಣಿನ ಚೆಲುವು

mahesha's picture

"ಗಂಡಸರು ಭಾವನೆಗಳನ್ನು ಎಕ್ಸ್ ಪ್ರೆಸ್ ಮಾಡುವುದು ಜಾಸ್ತಿ." :)

ಯಪ್ಪ.. ಉಲ್ಟ!!

ಸುಯಿಸಯ್ಡ್ ಮಾಡಿಕೊಳ್ಳೋದು ಗಂಡಸರು ಜಾಸ್ತಿ.. ಏಕೆಂದರೆ ಅವರು ಹೆಚ್ಚು ತಮ್ಮೊಳಗಿನ ನೋವನ್ನಾಗಲಿ, ಒದ್ದಾಟವನ್ನಾಗಲಿ ಹೆಂಗಸಿನಂತೆ ಎಲ್ಲರ ಮುಂದೆ ಅತ್ತು, ಜೋರಾಗಿ ನಕ್ಕು ತೋರಿಸಲ್ಲ..!!

ಗಂಡಸರು ತಮ್ಮ ಭಾವನೆಗಳನ್ನು ಬರೆಯಬಲ್ಲರಿರಬೋದು, ಆದರೆ ಅದನ್ನು ಎಕ್ಸ್‌ಪ್ರೆಸ್‌ ಎಕ್ಸ್‌ಪ್ರೆಶನಿಂದ ಮಾಡಲಾರರದು.!