ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
ಕನ್ನಡ ಅತಿ ಪುರಾತನ ಸುಂದರ ಸಂಪನ್ನ ಭಾಷೆ. ಅಂತಹ ಭಾಷೆಯನ್ನು ನಮ್ಮ ಮಾತೃಭಾಷೆಯಾಗಿ, ಇಲ್ಲವೇ ಅಂತಹ ಭಾಷೆಯನ್ನು ಅತಿಪ್ರೇಮದಿಂದ ನಮ್ಮ ಭಾಷೆಯೆಂದು ಆಲಂಘಿಸಿಕೊಂಡು ಕನ್ನಡಿಗರಾಗಿರುವ ನಾವೇ ಧನ್ಯತಮರು. ಇಂತಹ ಪುಣ್ಯಭೂಮಿಯಲ್ಲಿ ಜನಿತರಾದ ನಾವು ಅದೆಷ್ಟು ಜನ್ಮಾಂತರಗಳ ಪುಣ್ಯಫಲದ ಸುಖವನ್ನು ಇಂದು ಅನುಭವಿಸುತ್ತಿರುವೆವೋ ಎಂಬ ಗೆರಿಮೆ ಹಿರಿಮೆ ಪ್ರತಿಯೊಬ್ಬ ಕನ್ನಡಿಗನಿಗೂ ಇರಬೇಕಾದುದು ಅತ್ಯಗತ್ಯವಾದ ಕರ್ತವ್ಯ.
ಇಂದು ನಮ್ಮ ಶ್ರೇಷ್ಠಭಾಷೆಗೆ ಆಪತ್ತು ಈ ಇಂಗ್ಲೀಷೆಂಬ ಪರದೇಶದ ಆಕ್ರಮಣಕಾರಿಗಳ ಭಾಷೆಯಿಂದ ಸಂಭವಿಸುತ್ತಿದೆ. ಮಹಾನಗರಗಳ ಬಹುಕನ್ನಡಿಗರು ಲಜ್ಜಾಹೀನರಾಗಿ ಮಾತೃಭಾಷಾನಿರಭಿಮಾನಿಗಳಾಗಿ ಆಂಗ್ಲವ್ಯಾಮೋಹದಿಂದ ತಮ್ಮ ಶಿಶುಗಳನ್ನು ಆಂಗ್ಲಮಾಧ್ಯಮಕ್ಕೆ ದಾಖಲಿಸಿ, ಮಾತೃದ್ರೋಹಿಗಳಾಗುತ್ತಿದ್ದಾರೆ. ಇಂತಹ ನೀಜರು ಅನನುಕರಣೀಯರು ಮತ್ತು ಅಲಕ್ಷಯೋಗ್ಯರು.
ನಮ್ಮ ಶ್ರೇಷ್ಠ ಪುರಾತನ ಸುಂದರ ಸಂಪನ್ನ ಸಹಸ್ರವರ್ಷೇತಿಹಾಸಭರಿತ ಕನ್ನಡಭಾಷೆಯ ರಕ್ಷಣೆಗಾಗಿ ಕಟಿಬದ್ಧರಾಗಿ ’ನೀವು’ ’ನಿಮ್ಮ’ ಶಿಶುಗಳನ್ನು ಕನ್ನಡ ಮಾಧ್ಯಮದಲ್ಲೇ ವ್ಯಾಸಂಗಿಸಿರಿ.
ಕನ್ನಡ ಮಾಧ್ಯಮದಲ್ಲಿ ಅಭ್ಯಾಸಿಸಿದ ಎಂಥೆಂಥಾ ಮಹನೀಯರು ಇಂದು ಅಮೆರಿಕ ಮುಂತಾದ ವಿದೇಶದಲ್ಲೂ ಉನ್ನತೌನ್ನತ್ಯಸ್ಥಾನಮಾನಾಲಂಕಾರಭೂಷಿತರಾಗಿ ಅತಿಶೋಭೆಯಿಂದ ರಾರಾಜಿಸುತ್ತಿದ್ದಾರೆ. ಅಂತಹ ಮಹನೀಯರ ಮಾರ್ಗಗಾಮಿಗಳಾಗಿ ನೀವು ಖಂಡಿತವಾಗಿಯೂ ನಿಮ್ಮ ಪುತ್ರಪುತ್ರಿಪೌತ್ರಪೌತ್ರಿಯರನ್ನು ಕನ್ನಡ ಮಾಧ್ಯಮದಲ್ಲಿ ಸೇರಿಸಿ, ಅವರಿಗೆ ಆಂಗ್ಲದ ಗಾಳಿ ಸೋಕಿಸಂತೆ ಲಕ್ಷವಹಿಸುವುದು ಆದ್ಯಕರ್ತವ್ಯ.
ಅಭಿವಾದನಾಪೂರ್ವಕಾಭಿನಂದನೆಗಳೊಂದಿಗೆ
ಮಹೇಶ ಕರ್ಣಾಟಪುತ್ರ...
ಜಯ ಹೇ ಕರ್ಣಾಟಮಾತೆ!

- mahesha ರವರ ಬ್ಲಾಗ್
- Login or register to post comments
- 383 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
ಹಾಸ್ಯ ಬರಹ ತಾನೇ?

*ಅಶೋಕ್
ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
ನಗೆ ಬರಹ !
*ಅಶೋಕ್
ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
ಮಾನ್ಯರೇ,
ಲೇಖನವು ನಿಮ್ಮಲ್ಲಿ ಉದ್ಭವಿಸಿಸಿದ ಭಾವನೆಯ ಆಧಾರದಲ್ಲಿ ಅದರ ವರ್ಗಗಣಿತವಾಗುವುದು.
ನಿಮಗೆ ಹಾಸ್ಯಲೇಖನವೆನ್ನಿಸಿದ್ದರೆ ಅಭ್ಯಂತರವಿಲ್ಲ
ಅನಾದ್ಯನಂತಧನ್ಯವಾದಗಳು
ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
ನನ್ನ ಬಾಳಿಂದ ಹುರುಳು-ತುಂಬಿದುದಾಯ್ತು..!
ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
ನಿಮ್ಮ ಲೇಖನ ಪಠಿಸಿ ನೇತ್ರಾನಂದವಾಯಿತು....
--ಸಿರಿ
ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
ಲೇಖನಪಠಣಾನಂದಿತ ನಿಮ್ಮ ನೇತ್ರಯುಗಳಕ್ಕೆ(ಕಣ್ಣಡಕ ಧರಿಸಿದ್ದರೆ ಅದಕ್ಕೂ) ಅನಂತಾನಂತಾನಾದಿಧನ್ಯಾವಾದಾಪಾರಗಳು
ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
ಪ್ರಿಯ ಮಾಯ್ಸರವರೇ,
ತಮ್ಮ ಚರಣಕಮಲಪಾದಾರವಿಂದಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರ ಎಂದು ನಾನು ಖಂಡಿತ ಹೇಳುವುದಿಲ್ಲ. ಯಾಕೆಂದರೆ, ತಾವು ನನ್ನ ಸಮಕಾಲೀನರೆಂದು ಅಂದುಕೊಂಡಿದ್ದೇನೆ. ತಾವು ಈ ಲೇಖನವನ್ನು "ಸಂಸ್ಕೃತಭೂಯಿಷ್ಟ" ಕನ್ನಡದಲ್ಲಿ ಬರೆದಿರುವ ಹಿಂದಿನ ಘನ ಉದ್ದೇಶವನ್ನು ತಿಳಿಯಬಹುದೇ? ನಮಗೆ ಮೃತ ಭಾಷೆ ಸಂಸ್ಕೃತಕ್ಕಿಂತ ಜೀವಂತ ಸಾಂಕ್ರಾಮಿಕ ಭಾಷೆ ಇಂಗ್ಲೀಶ್ ನಿಂದ ಹೆಚ್ಚು ಆಪತ್ತು ಎಂದು ನಿಮಗನಿಸುದಿಲ್ಲವೇ? ನನಗನಿಸುವ ಹಾಗೆ ಇದು ವಿಡಂಬನೆಯ ದೄಷ್ಟಿಯಿಂದ ಬರೆಯಲಾಗಿದೆ ಎಂದು ಭಾವಿಸುತ್ತೇನೆ.
ನಾನು ಕಂಡಿರುವ ಹಾಗೆ ಕನ್ನಡ ಮಾಧ್ಯಮದಲ್ಲಿ ಓದಿರುವ ನನ್ನ ಎಷ್ಟೋ ಮಂದಿ ಗೆಳೆಯರಿಗಿಂತ ಇಂಗ್ಲೀಶ್ ಮಾಧ್ಯಮದಲ್ಲಿ ಓದಿದ ನನ್ನ ಕನ್ನಡಾಭಿಮಾನ, ತಿಳುವಳಿಕೆ ದೊಡ್ಡದಾಗಿಯೇ ಇದೆ ಎಂದು ಹೇಳಿಕೊಳ್ಳಲು ಅಭಿಮಾನಿಸುವೆ. ಇದರರ್ಥ ಇಂಗ್ಲೀಶ್ ಮಾಧ್ಯಮವನ್ನ ಪ್ರೋತ್ಸಾಹಿಸುತ್ತಿದ್ದೇನೆ ಎಂದರ್ಥವಲ್ಲ. ಆದರೆ, ಕನ್ನಡದಲ್ಲಿ ಸರಿಯಾಗಿ ಆಲೋಚಿಸುವ, ಓದುವ, ಬರೆಯುವ ಕಲಿಕೆಯನ್ನ ನಮ್ಮ ಕನ್ನಡ ಶಿಕ್ಷಣ ವ್ಯವಸ್ಥೆಸರಿಯಾಗಿ ಮಾಡುತ್ತಿಲ್ಲ ಅಥವಾ ನನ್ನ ಕನ್ನಡ ಮಾಧ್ಯಮ ಮಿತ್ರರು ಸರಿಯಾಗಿ ಕನ್ನಡ ಕಲಿಯುತ್ತಿಲ್ಲ ಎಂದರ್ಥ! ಮೊದಲು ಕನ್ನಡ ಮಾಧ್ಯಮ ವ್ಯವಸ್ಥೆಯನ್ನ ಸರಿಗೊಳಿಸಬೇಕಲ್ಲವೇ?
ಸಿರಿಗನ್ನಡಂ ಗೆಲ್ಗೆ
ನಿಮಗೆ ಎಲ್ಲವೂ ಒಳ್ಳೆಯದಾಗಲಿ.
ವಿಶ್ವಾಸದಿಂದ,
ಶಶಿ
ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
ಆಮ್
ಮೃತಸಂಸ್ಕೃತದಿಂದ ನಮ್ಮ ಕನ್ನಡಕ್ಕೆ ಕಿಂಚಿತ್ತು ಆಪತ್ತಿಲ್ಲ ಎಂಬುದನ್ನು ನಿಮ್ಮ ಪ್ರತಿಕ್ರಿಯೆಯಿಂದ ನಿದರ್ಶನಿಸಿದ್ದೀರಿ.
ಸಾಂಕ್ರಾಮಿಕ ಆಂಗ್ಲಭಾಷೆಯಿಂದ ಹೆಚ್ಚು ಆಪತ್ತು ಎಂಬುದೂ ಸಹ ಒಂದೂ ಆಂಗ್ಲಪದವಿಲ್ಲ ನನ್ನ ಲೇಖನ ಮತ್ತು ನಿಮ್ಮ ಪ್ರತಿಕ್ರೆಯೇ ಸ್ಪಷ್ಟವಾಗಿ ದರ್ಶಿಸಿದೆ.
ಕನ್ನಡ ಮಾಧ್ಯಮಶಿಕ್ಷಣವ್ಯವಸ್ಥೆಯ ಸ್ಥಿತಿಗತಿಗಳನ್ನು ಉದ್ದೇಶಿಸಿ ಅಭಿಪ್ರಯಿಸಲು ನಾನು ಅರ್ಹನಲ್ಲ. ಏಕೆಂದರೆ ದುರಾದೃಷ್ಟವಶಾತ್ ಆಂಗ್ಲಮಾಧ್ಯಮದಲ್ಲಿ ವ್ಯಾಸಂಗಿಸಿದ ಮಾತೃಭಾಷಾದ್ರೋಹಿ ನಾನು ಹಾಗೂ ಸಂಕ್ರಾಮಿಕ ಆಂಗ್ಲಭಾಷೆಯನ್ನೇ ಆಪ್ರಾತಃಸಾಯಂ ಸಂಭಾಷಿಸಿ ಉದರಪೋಪೀಸುವ ಜ್ಯೇಷ್ಠ ತಂತ್ರಾಂಶ ನಿಷ್ಣಾತನು ಸಹ.
ಮಹದೀಯರ ವಚನಾತಿಶಯಕ್ಕೆ ನನ್ನ ಹಸ್ತಾರವಿಂದದ ದಳಾಂಗುಲಿಗಳಿಂದ ಟೈಪಿಸಿ ರಚಿಸಿದ ಬೃಹದಭಿನಂದನಾಪೂರ್ವಕ ಅತ್ಯಾದರದ ಧನ್ಯವಾದಾನಂತಗಳು.
ಸಂಕ್ರಾಮಿಕಆಂಗ್ಲಭಾಷಾವಲಂಬಿ ತಂತ್ರಾಂಶೋದ್ಯಗಿಮಾತ್ರ
ಮಹೇಶ
ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
ಕನ್ನಡ ಮಾಧ್ಯಮದಲ್ಲಿ ವ್ಯಾಸಂಗಿಸಿದ ಉದ್ಯೋಗಾರ್ಥಿಗಳ ಇಷ್ಟಾರ್ಥಗಳನ್ನು ಸರಕಾರ ಅನುಗ್ರಹಿಸಲಿ ಎನ್ನುತ್ತಾ...
ಶುಭಮಸ್ತು..
ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
ತಥಾಸ್ತು.
ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
ಯಪ್ಪಾ!!!!!!
ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
ಜೋಕು ಮಾಡೀರ ಜೋಕೆ, ನಮ್ಮ ಕನ್ನಡ ಜೋಕಾಲೆ ಮುರಿದುಬಿದ್ದಲ್ಲಿ ನಿಮ್ಮ ಸೊಂಟೆ ಮುರಿದೀತು...!! :x
-ಯುವಪ್ರೇಮಿ
ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
ನಲಿವಾಯಿತು ಮಾಯ್ಸ!! ನನ್ನಿಗಳು.
.ಬೇಕಿರುವುದು ಮಾತೃ ಭಾಷೆಯ ಬಗ್ಗೆ ಅರಿವು. ಅದು ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯ.
ಅದರ ಜೊತೆ ನನ್ನದೊಂದು ಸೇರ್ಪಡೆ.. ನಮ್ಮ ಮಾತೃಭಾಷೆಯ ಬಗ್ಗೆ ಎಲ್ಲರೂ ಮಕ್ಕಳಿಗೆ ತಿಳಿವಳಿಕೆ ನೀಡುವುದು ಅತ್ಯಗತ್ಯ.ನಾನೋದಿದ್ದು ಇಂಗ್ಲೀಷ್ ಮೀಡಿಯಂ ಆದರೂ ಕನ್ನಡದ ಬಗ್ಗೆ ಎಲ್ಲಿಲ್ಲದ ಆಸಕ್ತಿ ಮೂಡಿಸಿದ್ದು ತಂದೆ ತಾಯಿ.ಶಾಲೆಯ ಪುಸ್ತಕಗಳಿಗಿಂತ ಇತರೆ ಕನ್ನಡ ಪುಸ್ತಕಗಳು ಯಾವತ್ತೂ ನನ್ನ ಸಂಗಾತಿಗಳು. ಕನ್ನಡ ಮೀಡಿಯಂನಲ್ಲಿ ಓದಿರುವ ನನ್ನ ಸ್ನೇಹಿತರಿಗೆ ಗೊತ್ತಿರದ ಇಂಗ್ಲೀಷ್ ಪದದ ಕನ್ನಡ ಅರ್ಥ ಕೇಳಿ ಕೇಳಿ ತಲೆ ತಿನ್ನುತ್ತಿದ್ದೆ
-ಸುಶೀಲ್.
****************************
ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ..
ಜಲವೆಂದರೆ ಕೇವಲ ನೀರಲ್ಲ ಅದು ಪಾವನತೀರ್ಥ!!
****************************
ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
ಮಹೇಶರವರೆ,
ನೀವು ತಮಾಷೆಗೆ ಬರೆದಿರುವಿರಿತಾನೆ? ಭಯ ಆಗುತ್ತೆ ಎಲ್ಲಿ ನೋಡಿದರೂ ಇಂಗ್ಲಿಷ ಬರುತ್ತಾ? ಅಂಥಾ ಕೇಳುತ್ತಾರೆ. ಆಂಗ್ಲದ ಗಾಳಿ ಸೋಂಕಿಸದಿರಿ, ಅಂದರೆ ಅವರ ಭವಿಷ್ಯ. ಎಲ್ಲ ಕನ್ನಡ ಹೋರಾಟಗಾರರ ಮಕ್ಕಳು ಆಂಗ್ಲ ಮಾದ್ಯಮದಲ್ಲಿಯೆ ಓದುತ್ತಾರೆ. ನಾನು ನನ್ನ ಮಕ್ಕಳನ್ನು ಆಂಗ್ಲ ಮಾದ್ಯಮಕ್ಕೆ ಸೇರಿಸುತ್ತೇನೆ. ನಾನು ಕನ್ನಡ ಮಾದ್ಯಮದಲ್ಲಿ ಓದಿ ನಂತರ ಪಟ್ಟ ಪಾಡು, ನನ್ನ ಮಕ್ಕಳಿಗೆ ಬೇಡ. ಕನ್ನಡದ ಬಗ್ಗೆ ಅಭಿಮಾನವಿದೆ, ಅವರಲ್ಲಿ ಆ ಪ್ರೀತಿ ಬೆಳೆಸುತ್ತೇನೆ.
- ರೇಖಾ ಚಾಮರಾಜ
ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
ರೇಖಾ ಮಾನ್ಯೆಯರೆ,
ನೀವು ಈ ದೊಡ್ಡದೊಡ್ಡ ಮಾತುಗಳನ್ನು ಭಾಷಣಗಳಲ್ಲಿ ಕೇಳಿಲ್ಲವೇ, ನಾನು ಒಂದು ಭಾಷಣ ಬಿಗಿದಿದ್ದೀನಿ...
ನಿಮ್ಮ ಮಗುವನ್ನು ಹೇಗೆ ಓದಿಸಿದರೆ ಒಳಿತು ಎಂಬುದಕ್ಕೆ ನಿಮ್ಮ ಅನಿಸಿಕೆ ನನ್ನ ಬೆಂಬಲವೂಇದೆ.. ರೂಪ ಅವರ ಈ ಕುರಿತ ಬರಹ ಓದಿ, ಚನ್ನಾಗಿ ಹೇಳಿಕೊಂಡಿದ್ದಾರೆ ಒಬ್ಬಳು ತಾಯಿಯಾಗಿ.
ನಲ್ವಾರಯ್ಕೆಗಳು/good wishes
ಮಾಯ್ಸ,