ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › mahesha ರವರ ಬ್ಲಾಗ್

ಮಿಂಬಲೆ, ಎಣಿ, ಗೆಯ್ತರುವಾಯಿ

August 17, 2007 - 10:17pm — mahesha

ಹಲವು ನಾಳುಗಳಿಂದ ಈ ಕಂಪ್ಯೂಟರ್‍ ನಂಟಾದ ಒರೆಗಳಿಗೆ ಅಚ್ಚಗನ್ನಡದಲ್ಲಿ ಒರೆಗಳನ್ನು ಹುಟ್ಟಿಸಬೇಕು, ಕಂಡು ಹುಡಿಯಬೇಕು ಎಂದು ಹಂಬಲಿಸಿ, ಕೊನೆಗೆ ಒಂದು ಪಟ್ಟಿ ಅಣಿಯಾಯಿತು..

ಒರೆವುಟ್ಟಿನ ಹಿಂದಿನ ಹುರುಳನ್ನು ಬಳಿಕ ಹೇಳುವೆನು. ಕಂಡುಹಿಡಿಯುವವರು ಮೊದಲು ಒಂದು ಕೈ ನೋಡಲಿ!

computer = ಎಣಿ/ಎಣೆ
laptop = ಮಡಿಲೆಣಿ, ಚಿಕ್ಕೆಣಿ, ತೊಡೆಯೆಣಿ
super computer = ಹಿರಿಯೆಣಿ, ದೊಡ್ಡೆಣಿ, ಹೆರೆಣಿ
Keyboard = ಅಚ್ಚುಮೆಣೆ
mouse = ಗುರಿಣಿ ( ವಿನಾಯಕ ಅವರ ನೆಗೞ್ಚು Smiling )
Monitor = ತೋರುಗೆ/ತೋರುಣಿ
speaker = ಸದ್ದುಪೆಟ್ಟಿಗೆ

program = ಗೆಯ್ತರುವಾಯಿ
excecute/run = ಓಡಿಸು, ನಡೆಸು
Install = ನೆಲೆಸು, ನೆಲೆಯಿಸು
uninstall = ನೆಲೆತೆರವು

electricity = ಮಿನ್ನಾರ/ಮಿನ್ನಾರ್ಪು/ಮಿಂಚಾರ್ಪು.
electric = ಮಿನ್ನಾರ್ಪಿನ
electronic = ಮಿನ್ಮೆ, ಮಿನ್ಕೆ
e-mail = ಮಿನ್ನೋಲೆ
e-network/internet/e-web = ಮಿಂಬಲೆ
e-site/web-site = ಮಿನ್ನೆಲೆ, ಮಿನ್ನಿಕ್ಕೆ, ಮಿಂದಾಣ

image = ಪಾಪೆ/ಹಾಹೆ
video = ಮಿನ್ನೋಟ
audio = ಮಿನ್ನಿನಿ, ಮಿಂದನಿ, ಮಿಂಗೊರಲು

ಇನ್ನೂ ಸೇರಿಸೋಣ.. ಅಚ್ಚಗನ್ನಡಿಗರೇ ಕೊಡುಗೆ ನೀಡಿ Smiling

~.~
  • mahesha ರವರ ಬ್ಲಾಗ್
  • Login or register to post comments
  • 581 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 18, 2007 - 3:58am — createam

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

createam's picture

ಇದನ್ನ ದಿನಾ ಬಳಸೋದು ಕಷ್ಟಾನೇ.
ಅಷ್ಟೊಂದು ಕಷ್ಟವಾದ ಪದಗಳನ್ನ ಬಳಸಿರೋ ನೀವು mouseಗೆ ಯಾಕೆ ಮವುಸು ಅಂದ್ರೊ ಅರ್ಥ ಆಗ್ಲಿಲ್ಲ. ಇಲಿ ಅನ್ಬೊದಿತ್ತೆನೋ Sticking out tongue

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2007 - 8:26am — mahesha

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

mahesha's picture

ಸ್ವಾಮಿ ತುಸು ತಡಕೊಳಿ...

ಇಲಿ ಅಂತ ಯಾಕೆ ಬರೆಯಲಿಲ್ಲ ಅಂತ ಹೇಳ್ತೀನಿ..!! mouseಗೆ ಕನ್ನಡದಲ್ಲಿ ಇಲಿ ಅಂತ ನಂಗೆ ಗೊತ್ತು. ಆದ್ರು ಹಾಗೆ ಯಾರೂ ಕರೆಯಲ್ಲ ( ಕಷ್ಟ ಆಗ್ತದೆ ಅಂತ ಅಲ್ಲ, ಹೊಂದಿಕೆ ಆಗಲ್ಲ )

ಇವು ದಿನ ಬಳಸಕ್ಕೆ ಯಾಕೆ ಆಗಲ್ಲ? ನಿಮಗೆ ಕಷ್ಟವೇ ಬಿಡಿ...

ಗಣಕ, ಅಂತರಜಾಲ, ವಿದುನ್ಮಾನ ಪತ್ರ ಇವೆಲ್ಲ ಸಲೀಸೇ!! ಓಸುಗರ/ಕಾರಣ ಕೊಡದೇ ಕಸ್ಟ ಅನ್ನೋ ಕನ್ನಡಿಗರ ಗುಂಪು ದೊಡ್ಡದು ಬಿಡಿ.. ಪಾಪಾ ಅವರಿಗೆ ಎಲ್ಲ ಕಷ್ಟ.. Smiling [ ನಿಮಗೆ ನನ್ನ ನೇರವಾದ ಮಾತು ಕಟು ಆದ್ರೆ ನಾನು ಹೊಣೆಯಲ್ಲ ]

( ಅಣ್ಣ, ನಾವು ಸುರು ಹಚ್ಚಿದ ನನ್ನಿ, ಮಿನ್ನೊಲೆ, ಇವೆಲ್ಲ ಆಗಲೇ ಹಲವು ಮಂದಿ ಬಳಸ್ತಾ ಇದ್ದಾರೆ, ನಿಮಗೆ ಇವೆಲ್ಲ ಗೊತ್ತಿಲ್ಲ ಬಿಡಿ, ಗೊತ್ತಾಗೋದು ಕಷ್ಟ ಕಷ್ಟ!! Smiling )
ಅದೂ ಅಲ್‌ದೇ ಇದನ್ನ ನೀವು ಬಳಸಿ ಅಂತ ಹೇಳಿಲ್ಲ.!! Smiling ಪಾಪಾ ನಿಮಗೆ ಕಷ್ಷ.!!

ನಿಮಗೊಂದು ತಮಾಸೆಗೊಂದು ಅವಕಾಸಬೇಕಿತ್ತು ಅಂತ ಆದ್ರೆ ಓಕೆ.

ತುಸು ಕಾದ್ರೆ ಒಳ್ಳೇದು!! ( ನೀವು ಬಳಸದೇ ಇದ್ರೆ ಯಾವ ನಷ್ಟವಿಲ್ಲ, ಬಳಸೋರು ಬಲು ಮಂದಿ ಇದ್ದಾರೆ, ನೋಡ್ತಿರಿ Smiling )

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2007 - 12:58pm — kpbolumbu

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

kpbolumbu's picture

ಚೆನ್ನಾಗಿದೆ....

ಕೃಷ್ಣ ಪ್ರಕಾಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2007 - 12:12pm — mahesha

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

mahesha's picture

ಹೆನ್ನನ್ನಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2007 - 1:16pm — createam

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

createam's picture

ಹೌದು ಸಾರ್, "ನನಗೆ" ಅದು ಕಷ್ಟನೇ, ನಾನೊಬ್ಬ ಸಾಮಾನ್ಯ ಕನ್ನಡಿಗ. ಆದರೆ ನಾನು ಕಷ್ಟ ಅಂದಿದ್ದನ್ನ ನೀವು ಹಿಗ್ಗಾ ಮುಗ್ಗಾ ಎಳೆದಾಡಿ ಈ ನಡವಳಿಕೆಯನ್ನ ಹೆಚ್ಚಿನ ಕನ್ನಡಿಗರ ಗುಂಪಿಗೇ generalise ಮಾಡಿ ಕೊನೆಗೆ ನನಗೆ, "ನೇರವಾದ ಮಾತು ಕಟು ಆದ್ರೆ ನಾನು ಹೊಣೆ ಅಲ್ಲ" ಅಂತ ಹೇಳಿದ್ರಿ, ಆದ್ರೆ ನನ್ನ ಒಂದು ವಾಕ್ಯ ನಿಮಗೆ ಯಾಕೊ ಕಟು ಅನಿಸ್ತು ಅನ್ನಿಸ್ತಾ ಇದೆ. ಕ್ಷಮೆ ಇರಲಿ.

"ಇಲಿ ಅಂತ ಯಾಕೆ ಬರೆಯಲಿಲ್ಲ ಅಂತ ಹೇಳ್ತೀನಿ..!! mouseಗೆ ಕನ್ನಡದಲ್ಲಿ ಇಲಿ ಅಂತ ನಂಗೆ ಗೊತ್ತು. ಆದ್ರು ಹಾಗೆ ಯಾರೂ ಕರೆಯಲ್ಲ ( ಕಷ್ಟ ಆಗ್ತದೆ ಅಂತ ಅಲ್ಲ, ಹೊಂದಿಕೆ ಆಗಲ್ಲ )"
ಅದೂ ನನಗೂ ಗೊತ್ತು ಸಾರ್, ಆದ್ರೆ ಓಡಿಸು, ನೆಲೆಸು ಅನ್ನೋದು ಹೊಂದಾಣಿಕೆ ಆದ್ರೆ ಎಲ್ಲಾ ಪದಗಳೂ ಆಗ್ಬೋದೇನೋ ಅಂದ್ಕೊಡೆ

"ಗಣಕ, ಅಂತರಜಾಲ, ವಿದುನ್ಮಾನ ಪತ್ರ ಇವೆಲ್ಲ ಸಲೀಸೇ!! ಓಸುಗರ/ಕಾರಣ ಕೊಡದೇ ಕಸ್ಟ ಅನ್ನೋ ಕನ್ನಡಿಗರ ಗುಂಪು ದೊಡ್ಡದು ಬಿಡಿ.. ಪಾಪಾ ಅವರಿಗೆ ಎಲ್ಲ ಕಷ್ಟ.. Smiling [ ನಿಮಗೆ ನನ್ನ ನೇರವಾದ ಮಾತು ಕಟು ಆದ್ರೆ ನಾನು ಹೊಣೆಯಲ್ಲ ]"
ನನ್ನ ಪ್ರಕಾರ ಇದು ಕೇವಲ ನೇರ ನುಡಿ ಅಲ್ಲ. ಯಾಕೆಂದ್ರೆ ನೇರ ನುಡಿ ಅನ್ನೋದು ನೇರವಾಗಿ ಹೇಳಬೇಕಾಗಿದ್ದನ್ನು ಹೆಳೋದು, ಆದ್ರೆ ಇಲ್ಲಿ "ಕನ್ನಡಿಗರ ದೊಡ್ದ ಗುಂಪು", "ಪಾಪ", ಅನ್ನೋದು ಯಾಕೋ ನೇರ ನುಡಿಗಿಂತ ಸ್ವಲ್ಪ ಭಿನ್ನವಾಗಿದೆ ಅನ್ನಿಸ್ತಾ ಇದೆ.

"( ಅಣ್ಣ, ನಾವು ಸುರು ಹಚ್ಚಿದ ನನ್ನಿ, ಮಿನ್ನೊಲೆ, ಇವೆಲ್ಲ ಆಗಲೇ ಹಲವು ಮಂದಿ ಬಳಸ್ತಾ ಇದ್ದಾರೆ, ನಿಮಗೆ ಇವೆಲ್ಲ ಗೊತ್ತಿಲ್ಲ ಬಿಡಿ, ಗೊತ್ತಾಗೋದು ಕಷ್ಟ ಕಷ್ಟ!! Smiling )"
ಹೌದು, ಗೊತ್ತಿಲ್ಲ. ನಾನು ಇಲ್ಲಿಗೆ ಹೊಸಬ.

"ಅದೂ ಅಲ್‌ದೇ ಇದನ್ನ ನೀವು ಬಳಸಿ ಅಂತ ಹೇಳಿಲ್ಲ.!! Smiling ಪಾಪಾ ನಿಮಗೆ ಕಷ್ಷ.!!"
ಆದ್ರೆ ಬಳಸೋದು ನನಗೆ ಸೂಕ್ತವಾಗಿದ್ರೆ ಬಳಸೋಕೆ ನನ್ಗೆ ಏನೂ ತೊಂದ್ರೆ ಇಲ್ಲ.

"ನಿಮಗೊಂದು ತಮಾಸೆಗೊಂದು ಅವಕಾಸಬೇಕಿತ್ತು ಅಂತ ಆದ್ರೆ ಓಕೆ."
ಹೌದು, ಅದನ್ನ ನಾನು ligter note ಅಲ್ಲೆ ಹೇಳಿದ್ದು.

"ತುಸು ಕಾದ್ರೆ ಒಳ್ಳೇದು!! ( ನೀವು ಬಳಸದೇ ಇದ್ರೆ ಯಾವ ನಷ್ಟವಿಲ್ಲ, ಬಳಸೋರು ಬಲು ಮಂದಿ ಇದ್ದಾರೆ, ನೋಡ್ತಿರಿ Smiling )"
ಖಂಡಿತಾ ಒಪ್ಕೋತೀನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2007 - 2:34pm — hpn

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

hpn's picture

ಹೌದು ಸಾರ್, "ನನಗೆ" ಅದು ಕಷ್ಟನೇ, ನಾನೊಬ್ಬ ಸಾಮಾನ್ಯ ಕನ್ನಡಿಗ.

ಮನೋಜ್ ರವರ ಮಾತು ಒಪ್ಪಿಗೆಯಾಯಿತು. ನನಗೂ ಅಂಥವು ಕಷ್ಟ.

--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2007 - 2:48pm — ವೈಭವ

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

ವೈಭವ's picture

HPN,
ನೀವು ಕಶ್ಟ ಅನ್ನುವುದಕ್ಕೆ ಓಸುಗರ/ಕಾರಣ ನಿಮ್ಮ ಇಂಗಲೀಸ್ ನುಡಿಯ/ಭಾಶೆಯ ಅರಿವು. ನೀವು ಈಗಾಗಲೆ ಇಂಗಲೀಸ್ನಲ್ಲಿ ಈಗಾಗಲೇ ಈ ಒರೆ/ಪದಗಳನ್ನು ಹಲವು ದಿನಗಳಿಂದ ಬಳಸುತ್ತಿದ್ದೀರ. ಅದಕ್ಕೆ ಅದು ತಮಗೆ ಸಲೀಸು ಅಲ್ಲವೇ?

ನಮ್ಮಲ್ಲಿ ಹೆಚ್ಚು ಜನರಿಗೆ ಸಕ್ಕದ , ಇಂಗಲೀಸ್ ಸರಿಯಾಗಿ ಬರಲ್ಲ. ಅವರು ಹೆಂಗೆ ಈ ಎಣಿ/ಕಂಪೂಟರ್ ಬಗ್ಗೆ ಕಲಿಯುವುದು ?
ಅವರಿಗೆ ಇಂಗ್ಲೀಸ್ ಕಶ್ಟ, ಸಕ್ಕದ ಇನ್ನು ಕಶ್ಟ

ಇಲ್ಲಿ ನಮ್ಮ - ನಿಮ್ಮ ಕಸ್ಟ ಲೆಕ್ಕಕ್ಕೆ ಬರೋಲ್ಲ.. ಈ ಒರೆಗಳನ್ನು( ಮೇಲೆ ಮಹೇಶ ಹೇಳಿರುವ) ನಾವು ನಿಜವಾಗಲೂ ಸಾಮಾನ್ಯ ಮಂದಿಗೆ(ಇಂಗಲೀಸ್, ಸಕ್ಕದ ಸರಿಯಾಗಿ ಗೊತ್ತಿರದ ಮತ್ತು ಬರೀ ಕನ್ನಡ ಗೊತ್ತಿರುವ/ಕಲಿತಿರುವ ) ತೋರಿಸಿ ಅವರ ನಿಲುವು ತಿಳಿದುಕೊಳ್ಳಬೇಕು.

ನಾವು ನಮ್ಮ ಬೇಕು ಬೇಡಗಳನ್ನು ಬದಿಗಿಟ್ಟು ಒಬ್ಬ ಸಾಮಾನ್ಯ ಇಂಗಲೀಸ್, ಸಕ್ಕದ ಸರಿಯಾಗಿ ಗೊತ್ತಿರದ, ಬರೀ ಕನ್ನಡವನ್ನು ಕಲಿತಿರುವವರಿಗೆ ಬಗ್ಗೆ ನಾವು ಉಂಕಿಸ/ಚಿಂತಿಸ ಬೇಕಾಗುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 19, 2007 - 11:47am — mahesha

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

mahesha's picture

ಅಯ್ಯ

ನೀವು ಹೊಸಬರೋ ಹಳಬರೋ, ಅದಿರಲಿ...
ನಿಮಗೆ ನಾವು ಇಲ್ಲಿ ಏನು ಮಾತಾಡ, ಮಾಡ‌ ಹೊರಟಿದ್ದೀವಿ ಅನ್ತ ಇನ್ನೂ ಅರಿತವಾಗಿಲ್ಲ.

ನಿಮಗೆ ಕಷ್ಟ ಸುಲಬದ ಬಗ್ಗೆ ಇಲ್ಲಿ ಮಾತಲ್ಲ.

ಅದಕ್ಕೆ ತುಸು ಕಾಯಿರಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2007 - 3:52pm — ಸಂಗನಗೌಡ

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

ಸಂಗನಗೌಡ's picture

ನನ್ನ ಗೆಳೆಯನ ತಂದೆ ಬಂದಿದ್ರು, ಅವರಿಗೆ ಮೌಸ್ ಅಂದಾಗ ಗೊತ್ತಾಗಲಿಲ್ಲ, ಅದಕ್ಕೆ ನಾನು ’ಮುಳ್ಳು’ ಅಂದೆ ಅವರಿಗೆ ತಟ್ಟನೆ ತಿಳಿಯಿತು. ’ಎಣೆಬಾಣ’ ಅಂದರೂ ಆದೀತು. ಬರೀ ’ಮುಳ್ಳು’ ಅಂದರೂ ಸಾಕಲ್ಲಾ. ಮೌಸ್ ಅಂದರೆ ತೆರೆಯ ಮೇಲೆ ಓಡಾಡುವ ಮುಳ್ಳು ತಾನೆ...

ಮಿನ್ನೋಲೆ, ಮಿಂಚೋಲೆ ಇವೆಲ್ಲಾ ಚೆನ್ನಾಗಿದೆ. ಅಚ್ಚುಮಣೆ ಸಕ್ಕತ್ತಾಗಿದೆ... ಮಣೆ ಅಂದರೆ ಬೋರ್ಡ್ ಅಂತವೇ ಅರಿತ. ಮಿನ್ನೆಲೆ, ಮಿಂದಾಣ, ಮಿಂಬಲೆ... ಮನಗಂಡ....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 19, 2007 - 11:49am — mahesha

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

mahesha's picture

ಮುಳ್ಳು = pointer!

ಮವುಸು ಮುಳ್ಳು = mouse pointer

ನನ್ನಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 19, 2007 - 1:17pm — Rohith

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

Rohith's picture

ಮಹೇಶರವರೆ,

ನನಗೆ ತುಂಬಾ ಇಷ್ಟವಾದದ್ದು "ಮಿನ್ನೋಲೆ". ಬೇರೆಯೆಲ್ಲವೂ ಚನ್ನಾಗಿಯೇ ಇವೆ, ಆದರೆ ಸ್ವಲ್ಪ ತೊಡರು. ನೀವು ಹೇಳಿದ ಹಾಗೆ ಉಪಯೋಗಿಸುತ್ತಾ ಅವು ಸುಲಭವಾಗಬಹುದು.

Mouseಗೆ ಮವುಸು ಎಂದರೆ ಅಷ್ಟು ಸರಿಯಿರುವುದಿಲ್ಲವೇನೊ!? ಅದರ ಬದಲು "ತೋರು ಉಪಕರಣ" ಅಥವ ಅದಕ್ಕೆ ಹೊಂದುವ ಯಾವುದಾದರೂ ಪದವನ್ನು ನೀವು ಹುಡುಕುತ್ತೀರಿ ಎಂದು ನನ್ನ ಅನಿಸಿಕೆ.

ಉ ಸೇರಿಸಿ ಕನ್ನಡಿಯಿಸುವುದು ಸರಿಯಲ್ಲ, ಇವಕ್ಕೆಲ್ಲಾ ಕನ್ನಡದ್ದೇ ಆದ ಪದಗಳನ್ನು ಹುಡುಕಲು ಹೊರಟಾಗ, ಪೂರ್ತಿ ಕನ್ನಡವೇ ಏಕಿರಬಾರದು?

ಇಂತಿ,
ರೋಹಿತ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 19, 2007 - 8:18pm — mahesha

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

mahesha's picture

ರೋಹಿತರೆ

ನಿಮ್ಮ ಮರುಮಾತು ಚನ್ನಾಗಿದೆ...

ನೀವು ಹೇಳಿದಂತೇಏ ನನಗೂ ಕೂಡ ಮೌಸ್ಗೆ ಸರಿಯಾದ ಒರೆ ಹೊಳೆಯಲಿಲ್ಲ. ಇದಕ್ಕೆ ’ಇಲಿ’ ಅಂತ ಕುರುಡು ಕನ್ನಡಯಿಕೆ ನನಗೆ ಸರಿಕಾಣುವುದಿಲ್ಲ. ಎಣಿಯ ಅಂಗಡಿಗೆ ಹೋಗಿ "ಒಂದು ಇಲಿ ಕೊಡಿ" ಎಂದು ಹೇಗೆ ಕೇಳೋದು? ಆದ್ರೆ ಒಂದು ಮವುಸು ಕೊಡಿ ಅನ್ನಬಹುದು. ಏಕೆಂದರೆ ಇಲಿ ಅನ್ನೋದಕ್ಕೆ ನಾವು ಈಗಾಲೇ ಒಂದು ಉಸಿರು ಅಂತ ಅರಿತವಿದೆ.

ನೀವು ಹೇಳಿದಂತೆ "ತೋರುವುದು"Monitor ಅದಕ್ಕೆ ಅದು ತೋರುಗೆ, ತೋರುಣಿ. ಆದ್ರೆ ಮವುಸು point ಮತ್ತು ಕ್ಲಿಕ್ ಮಾಡಲು ಬಳಸುವೆವು.. ತೋರಲು/to show ಅಲ್ಲ.

ಇನ್ನು ಕನ್ನಡದಲ್ಲಿ to point ಅನ್ನೋದಕ್ಕೆ "ಕುಱಿ/ರಿ" ಅನ್ನೋ ಒರೆಬೇರು ಇದೆ.

ಕುರಿತ = one which is pointed at.
ಕುರಿತು = is pointed to.

ಈ ಕುಱಿ ಇಂದಲೇ ಗುರಿ ಬಂದಿರುವುದು. ಆದಕ್ಕೆ ’ಗುರಿ/ಕುಱಿ’ ಇಂದ ಯಾವುದಾದ್ರು ಒರೆವುಟ್ಗಬಹುದು, ನೀವೂ ಒಮ್ಮ ಉಂಕು/ಯೋಚಿನೆ ನಡೆಸಿರಿ, ನಾನು/ವು ಉಂಕಿಸುತ್ತಿರುವೆನು.

ನೀವು ಹೇಳಿದಂತೆ ’ಉ’ ಸೇರಿಸಿ ಕನ್ನಡಯಿಸುವುದು ಸರಿಯಲ್ಲ ಅಂತ ನನಗೂ ಒಪ್ಪಿಗೆ ಇದೆ. ಆದ್ರೆ ಮಾತುಕತೆ/ಚರ್ಚೆ ಇಲ್ಲದೆ ಹಲವು ಗೊಂದಲದ ಕೊನೆ/ಪರಿಹಾರ ಮುಟ್ಟುವುದೆಂತು?

ಇಡಿಯಾಗಿ ಕನ್ನಡ ಇರಬೇಕು ಎಂಬುದೇ ನನ್ನ ಹಂಬಲ.. ಅದಕ್ಕೆ ಈ ಮೊಗಸು/ತೊಡಗು/ಉಂಕು.

ನಿಮ್ಮ ಅನಿಸಿಕೆಗೆ
ನಂನಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2007 - 2:22pm — Rohith

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

Rohith's picture

ವಿಷಯ ಚನ್ನಾಗಿದೆ, ನೀವು ಹೇಳಿದ ತೋರು ಮತ್ತು ಕುರೆ*ಗಳ ವ್ಯತ್ಯಾಸ ಸರಿಯೇ, ಆದರೆ, ನನಗೆ ತಿಳಿದ ಮಟ್ಟಿಗೆ ತೋರುವನ್ನು ಎರಡೂ ರೀತಿ ಬಳಸಬಹುದು. ಉದಾ: ನಾನು ದಾರಿ ತಪ್ಪಿದಾಗ ಒಬ್ಬ ಮಹಾನ್ ವ್ಯಕ್ತಿ ಸರಿಯಾದ ಮಾರ್ಗವನ್ನು ತೋರಿಸಿದನು. ಇದನ್ನು ಆಂಗ್ಲದಲ್ಲಿ ಎರಡು ಬಗೆ ಹೇಳಬಹುದು: When I was lost a wise man showed me the way ಅಥವ When I was lost a wise man pointed to the right direction and helped me. ತೋರು ಎನ್ನುವ ಪದವನ್ನು ಭಾವರ್ಥವಾಗಿ ಅಥವ ಅಕ್ಷರಶಃ ಉಪಯೋಗಿಸಬಹುದು. ನಾವೇಕೆ ಈ ಪದದ ಭಾವಾರ್ಥವನ್ನು ಬಳಸಬಾರದು?

ಅದಿರಲಿ, ನಾನು ಅದೇ ಪದವನ್ನು ಏಕೆ ಬಳಸಿದೆ ಅಂದರೆ, ಆಂಗ್ಲದಲ್ಲಿ Mouseಗೆ ಅಥವ ಅದರ ಜಾತಿಗೆ ಸೇರಿದ ಯಾವುದೇ ಉಪಕರಣಕ್ಕೆ Pointing Device ಎಂದು ಕರೆಯುತ್ತಾರೆ. Mouse ಎನ್ನುವುದು ಆಡುಭಾಶೆ, ಆದರೆ ಇದರ ಸರಿಯಾದ ಹೆಸರು Pointing Device. ಕ್ರಮೇಣ ಆಡುಭಾಶೆಯೇ ಚಾಲತಿಯಲ್ಲಿ ಬಂದು ಇಂದು ನಾವು ಇಲಿಯನ್ನೂ Mouse ಎಂದು, ಕೆಲೆಸಕ್ಕೆ ಬಳಸುವ ಇಲಿಚಪ್ಪನನ್ನೂ Mouse ಎಂದು ಕರೆಯುತ್ತೇವೆ. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2007 - 2:39pm — mahesha

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

mahesha's picture

ರೋಹಿತ್..

ತೋರುವ "ಕೊರಮುಟ್ಟು"/instrument monitor ಅದನ್ನು ತೋರುಣಿ/ತೋರುಗೆ ಅಂತ ಹೇಳಬಹುದು. ತೋರು ಅನ್ನೋದು ಬಳಕೆ ಆಯ್ತು..

mouse a pointing device, ಕುರಿಯುವ ಕೊರಮುಟ್ಟು/ಸಲಕರಣೆ ಅಂತ ಹೇಳಬಹುದು...

ಕನ್ನಡದಲ್ಲಿ to point ಅನ್ನಲು ಹಲವು ಒರೆಗಳಿವೆ..

ಕರು = to point.

ಸರಿ ನೀವೇ ಹೇಳಿ ಮೌಸಿಗೆ ಏನು ಇರಬೇಕು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2007 - 2:46pm — Khavi

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

Khavi's picture

ಮಹೇಶ,
ಎಲ್ಲ ಚೆನ್ನಗಿವೆ..

ನಮ್ಮ ಮನೇಲಿ ನಾನು ಹೊಸದಾಗಿ ಎಣೆ(computer) ತಂದಾಗ, ತಮಾಷೆಗೆ ಮೌಸ್ ಗೆ ಗುಣಿ ಅಂತ ಅಂದೆ. ಅಂದಿನಿಂದ ನಮ್ಮ ಮನೇಲಿ ಚಿಕ್ಕ ಮಕ್ಕಳೆಲ್ಲ ಗುಣಿ ಅಂತಾರೆ... ನಮ್ಮ ಪಕ್ಕದ ಮನೆ ಮಗು ಇದಕ್ಕೆ ಚಿಣಿಮಿಣಿ ಅನ್ತಿತ್ತು.. Smiling

ನಮ್ಮ ಕಡೆ ಬಟ್ಟೆ ನೇಯುವ ಕಸುಬು ಜಾಸ್ತಿ, ಅಲ್ಲಿ ಬಟ್ಟೆ ಮಗ್ಗದಲ್ಲಿ ದಾರ/ನೂಲಿನ ಗುಣಿ ಅಂತ ಬಳಕೆ ಇದೆ... ಗುಣಿಯ ಒಳಗೆ ದಾರ ಸುತ್ತಿರುತ್ತೆ, ಅಲ್ಲದೆ ಅದು ದಾರವನ್ನು ನೇರವಾಗಿ ಗುರಿಇಟ್ಟು ಸೀರೆಯ ಉದ್ದಗೆರೆಗೆ ಅಡ್ಡವಾಗಿ ಓಡಾಡುತ್ತಿರುತ್ತೆ, ಹಾಗೆ ಓಡಾಡುವಾಗ ಒಂದು ಅಡ್ಡ ಎಳೆಯನ್ನು ಬಿಡುತ್ತದೆ. ಆಗ ಸೀರೆಯಾಗಿ ನೇಯುವದು.

ಅದಕ್ಕಾಗಿ ಇದಕ್ಕೆ ಗುಣಿ ಇಲ್ಲ "ಗುರಿಣಿ" ಇಲ್ಲ ಒಟ್ಟಿಗೆ ಸೇರಿಸಿ ಗುರ್ಣಿ ಅಂತ ಏಕೆ ಕರೀಬಾರದು.. ಇದು ಚಿಕ್ಕದಾಗಿದೆ ಅಲ್ಲವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2007 - 2:58pm — mahesha

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

mahesha's picture

ಕವಿ...

ನಿಮ್ಮ ಗುರಿಣಿ ಚನ್ನಾಗಿದೆ!

ಗುರಿಣಿ/ಕುರಿಣಿ ಎರಡು ಹೊಂದುವುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2007 - 3:40pm — ವೈಭವ

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

ವೈಭವ's picture

ಎಲ್ಲೆಲ್ಲಿ "ಯಂತ್ರ"ಗಳು ಬರುತ್ತೊ ಅಲ್ಲೆಲ್ಲ ಈ "ಣಿ" ಬಳಸಬಹುದು ಅನ್ಸುತ್ತೆ.

ನಮ್ಮ ಮಂಡ್ಯದಲ್ಲಿ ಅಕ್ಕಿ ಗಿರಣಿಗಳು ಹೆಚ್ಚು. ನೆಲ್ ನಿಂದ ಅಕ್ಕಿ ಮಾಡುವುದು ಈ ಗಿರಣಿಗಳ ಕೆಲಸ.

----------
ನೆಲ್= ಭತ್ತ ಮಾದರಿ : ನೆಲುಲ್ಲು ಅಂದ್ರೆ ಭತ್ತದ ಹುಲ್ಲು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2007 - 3:48pm — mahesha

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

mahesha's picture

http://dsal.uchicago.edu/cgi-bin/philologic/getobject.pl?c.0:1:1601.burr...

ಗಿಱಿ = whirling,
ಗಿಱ್ಱನೆ/ಗಿರ್ರ‍ನೆ = round round! Smiling

ಗಿರಿಣಿ, ಗಿರ್ರ‍ನೆ ಸುತ್ತದೆ., ಅದಕ್ಕೆ ಅದು ಗಿರಿಣಿ ಆಗಯ್ತೆ!

ಹೀಗೆ

ಕುಟ್ಟಣಿ, ಸುಟ್ಟಣಿ(ಗೆ), ಲಟ್ಟಣಿ(ಗೆ),....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2007 - 3:51pm — mahesha

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

mahesha's picture

ಗಿರಿ = rotation
ಸುತ್ತ = revolution ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2007 - 4:01pm — Rohith

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

Rohith's picture

’ಗುರ್ಣಿ’ ಚಿಕ್ಕದಾಗಿ ಚೊಕ್ಕದಾಗಿ ಚನ್ನಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2007 - 4:13pm — Sunil Jayaprakash

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

Sunil Jayaprakash's picture

ಅರೆ, ಖಾವಿ ನಿಮಗೆ ಗೊತ್ತೆ, ನನಗೆ "ಗುಣಿ" ತುಂಬಾ ಅಂದ್ರೆ ತುಂಬಾ ಇಷ್ಟ ಆಯ್ತು. ಕೆಲವರು ನಕ್ಕಾದ ಮೊಗದಲ್ಲಿ Mark ಏಳುತ್ತಲ್ಲ ಅದನ್ನು ನಾವು ಕುಳಿ ಎನ್ನುತ್ತೇವೆ. ಅದನ್ನೇ ನನ್ನ ಕೆಲವು ಗೆಳೆಯರು ಗುಳಿ/ಗುಣಿ ಅಂತಲೂ ಹೇಳ್ತಿದ್ರು. ನಾನು ಇನ್ನುಮುಂದೆ ಮಕ್ಕಳ ಪರಿಭಾಷೆಯಲ್ಲಿ ಮೌಸಿಗೆ "ಕುಳಿ/ಗುಣಿ" ಎಂಬುದಾಗಿ ಪರಿಗಣಿಸುತ್ತೇನೆ. ನಮ್ಮ ಮನೆಯ ಮಕ್ಕಳಿಗೂ ಅದು ಇಷ್ಟವಾಗಬಹುದು. Mouse Pointer ಎಂಬುದಕ್ಕೆ ಸಂಗನ ಹೇಳಿದ ಹಾಗೆ "ಮುಳ್ಳು" ಅನ್ನುವುದೇ ಸರಳ ಮತ್ತು ಎಲ್ಲರಿಗೂ ತಕ್ಷಣವೇ ಅರ್ಥವಾಗುವಂಥದ್ದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2007 - 4:41pm — Sunil Jayaprakash

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

Sunil Jayaprakash's picture

(ಚೇಷ್ಟೆಗೆ) ಖಾವಿ, ನೀವು ಇಷ್ಟೊಂದು(ಗುಣಿ, ಗುರಿಣಿ, ಗುರ್ಣಿ) ಆಪ್ಶನ್ಸ್ ನೀಡಲೇಬಾರದಿತ್ತು Smiling ಅಂದಹಾಗೆ, ನಿಮ್ಮ ಕಡೆ ಬಟ್ಟೆ ನೂಲಿಗೆ ನಂಟಾದಂತೆ ಯಾವುದನ್ನು ಬಳಸುತ್ತಾರೆ ಅದು ಮುಖ್ಯ. ನಿಮ್ಮ ಕಡೆ "ಗುಣಿ" ಅಂತ ಬಳಕೆ ಇದ್ದರೆ "ಗುಣಿ" ಅಂತಲೇ ನಾವು ಕೂಡ ಬಳಸುತ್ತೀವಿ. ಗುರಿಣಿ, ಗುರ್ಣಿ ಗೊಡವೆಯೇ ಬೇಡ. ಇವೆರಡಕ್ಕಿಂತ ಗುಣಿಯೇ ಸುಲಭವಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2007 - 5:16pm — ಸಂಗನಗೌಡ

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

ಸಂಗನಗೌಡ's picture

ಗುಣಿ ನನಗೂ ಹಿಡಿಸಿತು, ಆದರೆ ಗುರಿಣಿ ಹೆಚ್ಚು ಹೊಂದುವಂತಿದೆ. ’ಗುರಿ ತೋರುವ ಸಲಕರಣೆ’ = ಗುರಿಣಿ. ಇದಕ್ಕೆ ಹತ್ತಿರದ ಒರೆ ’ಗುರಾಣಿ’, ಕಾಳಗದಲ್ಲಿ ಕತ್ತಿಯೊಂದಿಗೆ ಬಳಸುವ ಸಲಕರಣೆ ಗುರಾಣಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2007 - 5:25pm — mahesha

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

mahesha's picture

http://dsal.uchicago.edu/cgi-bin/philologic/getobject.pl?c.0:1:2035.burr...

weapon = ಕಯ್ದು, ಕಯ್ದುವು
ಕಯ್ದುಗಾರ = soldier...

ಕಯ್ದು ( ಇದು ತುಳು, ತೆಲುಗಲ್ಲೂ ಇದೆ )

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2007 - 7:44pm — Khavi

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

Khavi's picture

ಮಹೇಶ, ಸುನೀಲ, ಸಂಗನ ಮತ್ತು ರೋಹಿತರಿಗೆ,
ಗುಣಿ, ಗುರಿಣಿ, ಗುರ್ಣಿ ಹಿಡಿಸಿದ್ದಕ್ಕೆ ತುಂಬಾ ನನ್ನಿ... Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2007 - 4:28pm — mahesha

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

mahesha's picture

video = ಮಿನ್ನೋಟ
audio = ಮಿನ್ನಿನಿ, ಮಿಂಗೊರಲು, ಮಿಂದನಿ

ಇದನ್ನು ಸೇರಿಸಿದೆನು!!

ಕೊರಲು = ದನಿ = sound
ಇನಿ = ಇಂಪಾದುದು
ನೋಟ = visual!

ಇದಕ್ಕೆ ನಿಮ್ಮನಿಸಿಕೆ ಹೇಳ್ರಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2007 - 4:37pm — Sunil Jayaprakash

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

Sunil Jayaprakash's picture

ಕನ್ನಡದಲ್ಲಿ ಪ->ಹ ಆಗಿರುವುದು ಒಂಥರಾ ಒಳ್ಳೆಯದೇ ಆಗಿದೆ. video -> ನೋಟ, audio->ಪಾಟ. ಇಷ್ಟೇ ಸಾಕಲ್ವೇ ? ಮಿನ್ ಏಕೆ ಬೇಕು ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2007 - 4:47pm — mahesha

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

mahesha's picture

electronic audio = ಮಿನ್ನಿನಿ
elelctronic video = ಮಿನ್ನೋಳ್ಪು, ಮಿಂಗಾಣ್ಪು.

ಪಾಟ ಅಂದ್ರೆ ಹಾಡು, poem.

ಆಟ => ಆಡು
ಕೂಟ => ಕೂಡು
ನೋಟ => ನೋಡು
ಪಾಟ => ಪಾಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2007 - 5:04pm — Sunil Jayaprakash

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

Sunil Jayaprakash's picture

ಮಹೇಶ, ಹಳಗನ್ನಡ ಪದಗಳ (ಉದಾ :- ಪ -> ಹ) ಬಳಕೆಗಳನ್ನು ತರುವಾಗ ನಾವು ಒಂದು ಎಚ್ಚರಿಕೆಯನ್ನು ಗಮನಿಸಬೇಕು. ಹಳಗನ್ನಡದ ಪದಗಳಿಗೆ ಡಿಕ್ಷನರಿ ಹಿಡಿದುಕೊಂಡು ಇದೇ ಇದರ ಅರ್ಥ ಎಂದು ಖಡಾಖಂಡಿತವಾಗಿ ಹೇಳಲಾಗುವುದಿಲ್ಲ. ಏಕೆಂದರೆ ನಾವು ಆಗಿರಲಿಲ್ಲ. ಹಾಗಾಗಿ ನಾವು ಪ->ಹವನ್ನು ಯಾವ ರೀತಿ ತೆಗೆದುಕೊಳ್ಳಬೇಕೆಂದರೆ,

ಪಾಟ includes ಹಾಡು (not just ಪಾಟ=ಹಾಡು!!). ಹೊಸಗನ್ನಡದ ಹಾಡು, ಹಳಗನ್ನಡದ ಪಾಟದ ಒಂದು ರೂಪ ಎಂಬುದಾಗಿ ಅಷ್ಟೇ ನೋಡಬೇಕೆ ಹೊರತು, ಹೊಸಗನ್ನಡದ ಹಾಡು = ಹಳೆಗನ್ನಡ ಪಾಟ ಎಂದು ನೋಡಬಾರದು. ಈ ರೀತಿ ನಾವು ಯೋಚಿಸಿದರೆ ಆಗ ಈ ಹಳಗನ್ನಡದ "ಪಾಟ"ದಿಂದ ಅನೇಕ ಪದಗಳನ್ನು ಹುಟ್ಟಿಸಬಹುದು. ನಾವು ಪಾಟ=ಹಾಡು ಎಂದು ಡಿಕ್ಷನರಿಗಳು ಹೇಳುವಂತೆ ನಂಬಿದರೆ ನಮ್ಮ ಕನ್ನಡ ಪದಗಳು ಸೀಮತಿವಾದ ಅರ್ಥದಲ್ಲಿಯೇ ಇದ್ದು ಹೊಸ ಹೊಸ ಬಗೆಯ ಪ್ರಯೋಗಗಳಿಗೆ ಪಕ್ಕಾಗುವುದಿಲ್ಲ. ನುಡಿಯ ಆಳ ಹೆಚ್ಚುವುದಿಲ್ಲ. ಇದೇ ರೀತಿಯ ಮತ್ತೊಂದು ಬಳಕೆಯನ್ನು ಹಿಂದೆ ಕೊಟ್ಟಿದ್ದೆ. ಬೇಕಿದ್ದರೆ ಹೇಳು ನಾನು ಉದಾಹರಣೆಗಳ ಮೂಲಕ ಬೇರೆ ಎಳೆಯಲ್ಲಿ ಇನ್ನಷ್ಟು ವಿವರಿಸಬಲ್ಲೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2007 - 5:22pm — mahesha

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

mahesha's picture

ಬೇರೆಯೊರೆಗಳ ಮಾತಿರಲಿ..

ಪಾಟ = ಹಾಡು ( ತಮಿಳು, ತೆಲುಗು, ಆಡುಮಾತಲ್ಲಿ ಬಳಕೆ ಇದೆ )
ಪಾಟ = ಹಾಡು, ಓಸುಗರ, ಪಾಟ್ = to sing.!!

ಇನಿದನಿ = ಇಂಪಾದ ದನಿ...
ಇನಿ = ಇಂಪಾದುದು.

ನಾನು ಇದನ್ನು ಬಿಟ್ಟು ಮತ್ತೇನು ಹೇಳಿಲ್ಲ.!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2007 - 7:21pm — Sunil Jayaprakash

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

Sunil Jayaprakash's picture

ಸರಿ ಬಿಡು, ನಿನಗೆ ಅರ್ಥ ಆಗಿಲ್ಲ ಅಥವಾ ಅರ್ಥ ಮಾಡಿಕೊಳ್ಳಲು ಇಷ್ಟ ಇಲ್ಲ. ನಾನು ಹೇಳಬೇಕಾದ್ದು ಇಷ್ಟೇ.
ಕನ್ನಡದ ಮಟ್ಟಿಗೆ song = ಹಾಡು, audio = ಪಾಟ (anything related to music in whichever manner thereof be it electronic, digital, HD Quality etc.)

Audio cd ಎನ್ನುವುದಕ್ಕೆ ಪಾಟದ ಸಿಡಿ (ಸಿ.ಡಿಗೆ ಕನ್ನಡ ಪದ ಇನ್ನೂ ಚರ್ಚಿಸದಿರುವುದರಿಂದ) ಎನ್ನುವದು ಸುಲಭ.

@ಗೆಳೆಯರೆ : ನಾನು ಹೇಳುತ್ತಿರುವುದನ್ನು ಮತ್ತೊಮ್ಮೆ ಗಮನವಿಟ್ಟು ಓದಿ. ಪಾಟ(audio) ಎಂಬುದು ಒಂದು ಕಾನ್ಸೆಪ್ಟ್, ಹಾಡು(song) ಎಂಬುದು ಪಾಟದ(audioದ) ಒಂದು ರೂಪ ಮಾತ್ರ. ತಮಿಳು ತೆಲುಗಲ್ಲಿ ಪಾಟ=ಹಾಡು ಎಂಬುದಾಗಿ ಇದ್ದರೆ ಅದು ಅವರವರಿಗೆ ಬಿಟ್ಟಿದ್ದು. ಈಗಿನ ನಮ್ಮ ಕನ್ನಡದಲ್ಲಿ ಪ->ಹ ಹೊರಳಾಟದಿಂದ ಪಾಟ ಇಲ್ಲವಾದ್ದರಿಂದ, ಅದರ ಅರ್ಥದ ಹರಿವನ್ನು ಡಿಕ್ಷನರಿಗಳಂತೆ "ಹಾಡು"(song) ಎಂಬುದಾಗಿ ಸೀಮಿತಗೊಳಸದೆ ಅದರ ಆಳವನ್ನು (audio ಆಗಿ ಬಳಸುವ) ಹೆಚ್ಚಿಸುವ ಸ್ವಾತಂತ್ರ್ಯ ಕನ್ನಡಿಗರಿಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2007 - 7:54pm — mahesha

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

mahesha's picture

ಪಾಟ್ = to sing.. ಇದರಿಂದ ಬಂದವೆ, ಪಾಡು ಹಾಗೆ ಹೊಸಗನ್ನಡದಲ್ಲಿ ’ಹಾಟ’ ಅಂತ ಆಗಬೇಕು( ನೀನೇ ಹೇಳೋ ಪ=>ಹ ಹೊರಳಾಟ ).

ಕನ್ನಡದಲ್ಲಿ ಇನಿ ಅಂತ ಇದೆ. ಇನಿ ಅಂದ್ರೆ ಇಂಪಾದುದು.

Audio ಅಂದ್ರೆ ದನಿ, ಕೊರಲು, sound, ಅಷ್ಟೇ! ಅದು singing/ಹಾಟವಾಗಿರಬೇಕಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 20, 2007 - 8:10pm — ಸಂಗನಗೌಡ

ಉ: ಮಿಂಬಲೆ, ಎಣಿ, ಗೆಯ್ತರುವಾಯಿ

ಸಂಗನಗೌಡ's picture

ಸುನಿಲ್, ಪಾಟ ಅಂದರೆ lesson ಅಂತ ಕನ್ನಡದಲ್ಲಿ ಬಳಕೆಯಲ್ಲಿದೆ, ಅದನ್ನು audio ಅಂತ ಬಳಸುವದು ಹೊಂದಿಕೆಯಾಗದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಲ್ಲು, ಆನು, ಹೆಣೆ, ಹರವು
  • Mobility.. ! ಎಲ್ಲೆಲ್ಲೂ ಇಂಟರ್‍ ನೆಟ್ಟು.
  • ಮೈಕ್ರೊಸಾಫ್ಟ್ ಬಿಲ್ ಗೇಟ್ಸ್ ಗೆ ಬಂಟನ ಪತ್ರ
  • 2007 ಪಾಸ್ ಅವುಟ್ ಬಿ.ಇ. ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್, ಕಂಪ್ಯೂಟರ್‍-ಇನ್ಪೊ ಸಯಿನ್ಸ್ ನಂಗೆ ಮಯ್ಲ್ ಹಾಕಿ
  • Kannada on Windows 98
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹಿಂದೂ ಸಂಸ್ಕ್ೃತಿಯಲ್ಲಿ ಮಣ್ಣಿಗಿರುವ ಮಹತ್ವ
  • ಏನಿದೇನಿದು
  • ಎಲ್ಲೇ ಹೋಗು ಹಿಂಬಾಲಿಸುವೆ...................,
  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • sudhimail
    ಉ: ಏನಿದೇನಿದು?
    September 8, 2008 - 10:12pm
  • hamsanandi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:41pm
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:37pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:35pm
  • smurthygr
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:32pm
  • hamsanandi
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:23pm
  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:12pm
  • ASHOKKUMAR
    ಉ: ವಾರಾಂತ್ಯ ಹೇಗಿತ್ತು?
    September 8, 2008 - 8:10pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 136 ಅತಿಥಿಗಳು ಆನ್ಲೈನ್ ಇರುವರು.


ಕನ್ನಡಕ್ಕೆ ಇಂಗ್ಲೀಷು ಕಿಂಚಿತ್ತು ಬೆರಸಲದ ಸಿನ್ನುಗಳ ಲಿಸ್ಟಿನಲಿ ಹೈಯೆಸ್ಟು ಅದರಿಂದ ಫನ್ನಿಗೂ ಮಿಕ್ಸದಿರು ಸರ್ವಜ್ಞ.

— ನಾ. ಕಸ್ತೂರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator