Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › mahesha ರವರ ಬ್ಲಾಗ್

ಗಾಳಿಪಟ

January 18, 2008 - 10:23pm — mahesha

ಇಪ್ಪತ್ತಯ್ದಾಗ್ತಾ ಇದೆ! ಈ ಬಗೆ ಇಪ್ಪತ್ತಯ್ದರ ಸುತ್ತ ಮುತ್ತನಿನ ಮಂದಿಯ ಮನದ ಕತೆ.

ಸಿನಿಮ ಚನ್ನಾಗಿದೆ.


Ornamental seperator
  • mahesha ರವರ ಬ್ಲಾಗ್
  • Login or register to post comments
  • 757 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 19, 2008 - 3:24pm — ಶಿವ

ಉ: ಗಾಳಿಪಟ

ಶಿವ's picture

ಟಿಕೆಟ್ ಸಿಗ್ತಾ ಇಲ್ವಲ್ಲ..Sad ಪಿವಿಆರ್‍ನಲ್ಲಿ ಬುಧವಾರದವರೆಗೂ ಟಿಕೆಟ್ ಇಲ್ಲ.

ಸಿನೆಮಾ ಚೆನ್ನಾಗಿದೆ ಎಂದು ಎಲ್ಲರು ಹೇಳುತ್ತಿದ್ದಾರೆ.ವಿಜಯ ಕರ್ನಾಟಕದ ಕಿತ್ತೋಗಿರುವ ರಿವ್ಯೂ ಒಂದನ್ನು ಬಿಟ್ಟು.

  • Login or register to post comments
  • link
  • Email this ಪ್ರತಿಕ್ರಿಯೆ
January 19, 2008 - 5:34pm — kpbolumbu

ಉ: ಗಾಳಿಪಟ

kpbolumbu's picture

ಇದೊಂದು ಕಿತ್ತುಹೋದ ಪ್ರಿವ್ಯೂ. ವಿಷಯ ತಿಳಿಯದೆ ವರದಿ ಮಾಡುವ ಕ್ರಮ.
______
ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ
January 19, 2008 - 7:12pm — ವೈಭವ

ಉ: ಗಾಳಿಪಟ

ವೈಭವ's picture

ವಿಜಯ ಕರ್ನಾಟಕದಲ್ಲಿ ಬರೆದಿರೋದು ಆ ದೇವಶೆಟ್ಟಿ ಮಹೇಶ್.
http://www.vijaykarnatakaepaper.com/pdf/2008/01/19/20080119a_001101007.j...

ಇವರ ಕೆಲಸ, ಕನ್ನಡ ಸಿನಿಮಾಗಳಲ್ಲಿ ಕುಂದು ಹುಡುಕುವುದು. ಇವರೇ ವಿ.ಕ.ದಲ್ಲಿ ತಮಿಳಿನ 'ಶಿವಾಜಿ'ಯನ್ನು ಭಾರಿ 'ಮಹೋನ್ನತ' ಸಿನಿಮ ಅಂತೆಲ್ಲ ಹೊಗಳಿದ್ದರು.
ಇವರಿಗೆ 'ಗಾಳಿಪಟ'ದಲ್ಲಿ ಕಾಣಿಸಿದ 'ಸ್ಟುಪಿಡಿಟಿ' ಶಿವಾಜಿಯ ಎಳಸು ಸ್ಟಂಟ್ಗಳಲ್ಲಿ ಕಾಣಲಿಲ್ಲವೇನೋ ಪಾಪ ? Smiling
ಇದಕ್ಕೆಲ್ಲ ಮಣೆ ಹಾಕಿತ್ತಿರುವ ವಿ.ಕ. 'ಸಮಸ್ತ ಕನ್ನಡಿಗರ ಹೆಮ್ಮೆ' Sad

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
January 19, 2008 - 7:28pm — ಶಿವ

ಉ: ಗಾಳಿಪಟ

ಶಿವ's picture

ನಂಗೆ ನೆನಪಿದೆ, ಆತ ಶಿವಾಜಿಯ ಬಗ್ಗೆ ಬರೆದಿದ್ದು.'ಅನಾಥರು' ಬಂದಾಗ, 'ರಿಮೇಕ್ ಮಾಡಿದ್ರೆ ಹೀಗೆ ಮಾಡಬೇಕು' ಎಂದು ಬರೆದಿದ್ರು!

'ಗಾಳಿಪಟ' ಚೆನ್ನಾಗಿಲ್ಲ ಅಂದರೆ ಪರ್ವಾಗಿಲ್ಲ.ಪ್ರತಿಯೊಬ್ಬರಿಗು ತಮ್ಮದೇ ಆದ ಅಭಿಪ್ರಾಯಗಳಿರುತ್ತಾವೆ. ಆದರೆ ರಿವ್ಯೂವಿನಲ್ಲಿ, ಭಟ್ಟರಿಗೆ ಸಿನೆಮಾ ಮಾಡೋಕೆ ಬರುವುದಿಲ್ಲ ಎಂದರೆ ಒಪ್ಪಿಕೊಳ್ಳೋದು ಕಷ್ಟ!

ಅಲ್ಲದೇ ವಿಜಯಕರ್ನಾಟಕದಲ್ಲಿ, ಸಿನೆಮಾದ ಬಗ್ಗೆ ಬರೆಯುವುದು ಆದಿತ್ಯವಾರ.ಅದು ಒಳಗಿನ ಪುಟಗಳಲ್ಲಿ..ಮೊದಲಿನ ಪುಟದಲ್ಲಿ, ಶನಿವಾರವೇ ಗಾಳಿಪಟದ ಬಗ್ಗೆ ಬರೆಯುವ ಅಗತ್ಯವೇನಿತ್ತೋ!ನಿನ್ನೆ ಬಿಡುಗಡೆಯಾದ ಇನ್ನೊಂದು ಸಿನೆಮಾ'ಹೊಂಗನಸು' .ಅದರ ಬಗ್ಗೆ ನಾಳೆ ಬರಿತಾರ?

  • Login or register to post comments
  • link
  • Email this ಪ್ರತಿಕ್ರಿಯೆ
January 19, 2008 - 6:58pm — ವೈಭವ

ಉ: ಗಾಳಿಪಟ

ವೈಭವ's picture

ಮಾಯ್ಸ,

ನೀನೇ ಪುಣ್ಯ ಮಾಡಿದ್ದೆ ಅನ್ಸುತ್ತೆ
ಟಿಕೆಟ್ ಸಿಗ್ತ ಇಲ್ಲ. ಕಾಳಸಂತೆಯಲ್ಲಿ ೧೫೦/- ಟಿಕೆಟುಗಳನ್ನು ಮಾರುತ್ತಿದ್ದಾರೆ.

ಬೊಳುಂಬು, ಶಿವ,
ಈ ಕಿತ್ತೋದ ರಿವ್ಯೂಗಳನ್ನ ಕಟ್ಕೊಂಡ್ ನಮ್ಗೇನು. ಸಿನಿಮ ಚನ್ನಾಗಿಲ್ದೇದ್ರೆ ಈ ತರ ಟಿಕೆಟ್ಗೆ ಪರದಾಡಬೇಕಾಗಿತ್ತಾ?
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
January 19, 2008 - 7:53pm — kpbolumbu

ಉ: ಗಾಳಿಪಟ

kpbolumbu's picture

ವಿಜಯಕರ್ನಾಟಕದಲ್ಲಾದ್ರೆ ಪರ್ವಾಗಿಲ್ಲ, ಚಿತ್ರ ಬಿಡುಗಡೆಯಾದ ನಂತರ ವಿಮರ್ಶೆ ಪ್ರಕಟವಾಗಿದೆ. ಅವರಿಗೆ ಅನ್ನಿಸಿದ್ದನ್ನು ಅವರು ಬರೆದಿದ್ದಾರೆ. ಲಂಕೇಶ್ ಪತ್ರಿಕೆಯಲ್ಲಿರುವಂತೆ ಬಿಡುಗಡೆಯಾಗುದಕ್ಕೆ ಮುಂಚಿನ ಹಾಳು ಊಹೆಗಳನ್ನಲ್ಲ.
ಶಿವಾಜಿಯ ಬಗ್ಗೆ ವಿಪರೀತ ಅನ್ನಿಸುವಷ್ಟೇನೂ ಹೊಗಳಿಲ್ಲ .

______
ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ
January 19, 2008 - 8:36pm — ravee...

ಉ: ಗಾಳಿಪಟ

ravee...'s picture

ಸ್ನೇಹಿತರೆ,
ಚಿತ್ರ ನೋಡಿದವರದೆಲ್ಲ್ಲ ಒಂದೇ ಅಭಿಪ್ರಾಯ-ಚಿತ್ರ ಒಳ್ಳೆ ಮನರಂಜನೆ ಕೊಡುತ್ತೆ ಅನ್ನೋದು. ಒಬ್ಬ ಸರ್ವೆ ಸಾಮಾನ್ಯ ಪ್ರೇಕ್ಷಕನಿಗೆ ಇದಕ್ಕಿಂತ ಇನ್ನೇನು ಬೇಕು. ಇಷ್ಟಕ್ಕೂ ಚಿತ್ರವನ್ನು ಮುಂಗಾರು ಮಳೆಯ ಜೊತೆಗೆ ಹೋಲಿಕೆ ಮಾಡುವುದೇಕೋ ತಿಳೀತಿಲ್ಲ. ಮುಂಗಾರು ಮಳೆ ಅಂಥಾ ಬಿಗಿ ಕಥಾಹಂದರದ ಚಿತ್ರವೂ ಆಗಿರಲಿಲ್ಲ. ಅದರ ಗೆಲುವಿಗೂ ಅದರದೇ ಆದ ಹಲವಾರು ಸಾಂದರ್ಭಿಕ ಕಾರಣಗಳನ್ನು ಕೊಡುತ್ತಾರಾದರೂ ಕೊನೆಗೂ ಪ್ರೇಕ್ಷಕನೇ ಅದರ ಯಶಸ್ಸಿನ ಸೂತ್ರದಾರ. ಯೋಗರಾಜ ಭಟ್ಟರಿಗೂ ವಿಜಯ ಕರ್ನಾಟಕದವರಿಗೂ ಅದೇನು ಮನಸ್ತಾಪ ಬಂತೋ ವಿಜಯ ಕರ್ನಾಟಕ ಮುಖಪುಟದಲ್ಲಿ ’ಗಾಳಿಪಟ’ವನ್ನು ಅಸಂಬದ್ಧ ಸಿನಿಮ ಅಂತ ಓದುಗರೆದುರು ಅಲವತ್ತುಕೊಂಡಿದ್ದಾರೆ. ಓದುಗರು ಈ ಮಟ್ಟದ ಮೂಢರೇನೂ ಅಲ್ಲ. ’ಗಜ’ ಎಂಬ ತೆಲುಗಿನ ’ಭದ್ರ’ದ ಹಳಸಲನ್ನು ಸ್ವಮೇಕ್ ಎಂಬಂತೆ ಬಿಂಬಿಸಿ ಬರೆದ ದೇವಶೆಟ್ಟಿ ಮಹೇಶ್‍ರಂತವರ ಪ್ರಾಮಾಣಿಕತೆಯೂ ಪ್ರಶ್ನಾರ್ಹ. ಕನ್ನಡದ ಸಿನಿಮ ವರದಿಗಾರರು ಅದೆಷ್ಟು ಭ್ರಷ್ಟರಾಗಿ ಹೋಗಿದ್ದಾರೆಂಬುದಕ್ಕೆ ಇದು ಸಾಕ್ಷಿ. ಇದೆಲ್ಲ ಬಿಟ್ಟು ಯೋಗರಾಜ ಭಟ್ಟರ ಗಾಳಿಪಟವನ್ನು ಎಲ್ಲ ಚಿತ್ರಗಳಂತ ವಿಮರ್ಶಿಸಿದರೆ ಸಾಕಲ್ಲವೆ...? ಮುಖಪುಟದಲ್ಲಿ ಕನ್ನಡ ಚಿತ್ರವೊಂದನ್ನು ಬೈಯ್ಯಲು ಬಳಸುವ ಏಕೈಕ ಪತ್ರಿಕೆ ವಿ ಕ ಒಂದೇ ಇರಬೇಕು. ವಿಶ್ವೇಶ್ವರ ಭಟ್ಟರಿಗೆ ವಿವೇಚಿಸುವ ಸಮಚಿತ್ತತೆ ಬರಲಿ. ದೇವಶೆಟ್ಟಿ ಮಹೇಶ್ ಬರೆದದ್ದನ್ನು ಇನ್ನೊಂದು ಹೆಸರಲ್ಲಿ ಪ್ರಕಟಿಸಿದ ದಟ್ಸ್-ಕನ್ನಡ ಶ್ಯಾಂ ಬೇಸ್ತು ಬಿದ್ದರಾ...? ಅವರನ್ನೇ ಕೇಳಬೇಕು.

ವಂದನೆಗಳೊಂದಿಗೆ..
ರವಿ

  • Login or register to post comments
  • link
  • Email this ಪ್ರತಿಕ್ರಿಯೆ
January 19, 2008 - 11:16pm — kpbolumbu

ಉ: ಗಾಳಿಪಟ

kpbolumbu's picture

ನೋಡುವವರ ಮನರಂಜಿಸುವಲ್ಲಿ 'ಗಾಳಿಪಟ' ಗೆದ್ದಿದೆ ಎನ್ನಬಹುದು. ಕನ್ನಡತನ ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದಾರೆ.ರತ್ನವೇಲು ಕ್ಯಾಮರಾ ಕೆಲಸ ಅದ್ಭುತ. ಕನ್ನಡಕ್ಕೆ ಸಹಜವಾದ ಮಾತುಕತೆಗಳು, ಕನ್ನಡದಲ್ಲಿ ಇಲ್ಲಿಯವರೆಗೆ ಬಳಕೆಯಾಗದ ಸೂಪರ್ ೩೫ ಎಂಎಂ, ಸಂದರ್ಭಕ್ಕೆ ತಕ್ಕಂತಹ ಹಾಡುಗಳು,ಅತಿಯೆನಿಸದ ನಟನೆ, ಹೀಗೆ ಹಲವಾರು ಒಳ್ಳೆಯ ಅಂಶಗಳಿವೆ.( ಹಾಡಿನಲ್ಲಿ ಉದಿತ್ ನಾರಾಯಣ್ ಕಾಟ.)

ಮುಂಗಾರುಮಳೆಯ ಮಾತಿನ ಶೈಲಿಯನ್ನೇ ಮುಂದುವರಿಸಿದಂತೆ ಕಾಣುವುದೂ ನಿಜ. ಆದರೆ ಈ ಚಿನಕುರಳಿ ಮಾತುಗಳು ನಾಯಕರ ಪೈಕಿ ಗಣೇಶಂಗೆ ಮಾತ್ರ. ಉಳಿದವರಿಬ್ಬರು ಬೆದರುಬೊಂಬೆಗಳು. ಒಬ್ಬ ಶ್ರೇಷ್ಠ ಹಾಡುಗಾರನನ್ನು ಬದಿಗಿಟ್ಟುಕೊಂಡು ಆತನಿಂದ ಒಂದು ಹಾಡನ್ನಾದರೂ ಹಾಡಿಸಬಾರದಿತ್ತೇ? ಜಾಗಟೆಗೆ ಗುಂಡು ಮೊದಲು ಬಡಿಯಿತು ಎನ್ನುತ್ತಾರೆ, ಆದರೆ ವಿರಾಮಕ್ಕೆ ಮುಂಚಿನ ದೃಶ್ಯದಲ್ಲಿ ಗುಂಡೇಟು ಬಿದ್ದ ಜಾಗಟೆ ಕಾಣಿಸುವುದೇ ಇಲ್ಲ.ಗುಂಡು ನೇರವಾಗಿ ಬಡಿಯುವಂತೆಯೇ ಕಾಣಿಸುತ್ತದೆ.ಜಾಗಟೆಯಲ್ಲಿ ತೂತಿದೆ-ಹಾಗಿದ್ದರೆ ಗುಂಡು ಹಿಂದಕ್ಕೆ ಬಡಿಯುವುದು ಹೇಗೆ? Smiling ನಧೀಂ ಧೀಂ ತನಾ ಹಾಡಿನಲ್ಲಿ ಯಕ್ಷಗಾನದ ವೇಷಗಳೂ ಕುಣಿಯುತ್ತವೆ, ಆದರೆ ಆಹಾ ಎಂಬಂತಹ ಒಂದು ದೃಶ್ಯಸಂಯೋಜನೆ ಸಾಧ್ಯವಾಗಲಿಲ್ಲ. ಹಂದಿ ಹೊಡೆಯಲು ಹೋಗಿ ಹಂದಿಯಿಂದ ಏಟು ತಿಂದು, ಹೋದ ಕಾಲಿನ ಶಕ್ತಿ ಮರಳಿ ಸಿಗುವ ಸನ್ನಿವೇಶ 'ಮುರಿಯದ ಮನೆ' ಚಿತ್ರದಲ್ಲಿ ಚಿಕ್ಕಂದಿನಲ್ಲಿ ವಿದ್ಯುತ್ ಶಾಕ್ ತಗುಲಿ ಒಂದು ಕಯ್ಯ ಶಕ್ತಿಯನ್ನು ಕಳೆದುಕೊಳ್ಳುವ ರಾಜ್‍ಕುಮಾರ್ ಇನ್ನೊಮ್ಮೆ ವಿದ್ಯುತ್ ಶಾಕ್ ತಗುಲಿದಾಗ ಪುನಃ ಮೊದಲಿನಂತಾಗುವುದನ್ನು ನೆನಪಿಸುತ್ತದೆ. ('ಸ್ಪೈನಲ್ ಕಾರ್ಡ್ ಫೈಲ್ಯೂರ್' ಅಂತೆ ಅದು.) ಇಂತಾದರೂ ಇದಕ್ಕಾಗಿಯೇ ಅಲ್ಲದೆ ಇನ್ನೂ ಹಲವು ಕಾರಣಗಳಿಗಾಗಿ ಭಟ್ಟರು ಅಭಿನಂದನೆಗೆ ಅರ್ಹರು.

ಇತ್ತೀಚೆಗೆ ಬಂದ ಸತ್ಯವಾನ್ ಸಾವಿತ್ರಿ ಚಿತ್ರದ ಸಂಭಾಷಣೆಗಳು(ರಾಜೇಂದ್ರ ಕಾರಂತ್) ಒಂದು ರೀತಿಯಲ್ಲಿ ಮಾದರಿಯಾಗಬಹುದಿತ್ತು. ಯೋಗರಾಜ ಭಟ್ಟರಂತಹ ನಿರ್ದೇಶಕರು ಹೆಚ್ಚಲ್ಲದಿದ್ದರೂ ಹತ್ತು ಮಂದಿ ಕನ್ನಡದಲ್ಲಿ ಇರಬೇಕು.

ಗಾಳಿಪಟದ ಬಗ್ಗೆ ಪ್ರಕಟವಾದ ಮೊದಲ ವಿಮರ್ಶೆ ಹೀಗೆನ್ನುತ್ತದೆ .
ನನಗೆ ಹಿಡಿಸಿದ ಇನ್ನೊಂದು ವಿಮರ್ಶೆ

ತಮ್ಮನ್ನು ವಿಮರ್ಶಕರೆಂದುಕೊಳ್ಳುವವರ ಬಗ್ಗೆ ಯೋಗರಾಜ ಭಟ್ ಹೀಗೆನ್ನುತ್ತಾರೆ

ಎಲ್ಲರೂ ಒಳ್ಳೆಯ ವಿಮರ್ಶೆಯನ್ನೇ ನೀಡಬೇಕೆಂದೇನೂ ಇಲ್ಲ.ವಿಜಯಕರ್ನಾಟಕದಲ್ಲಾದರೆ ಪರ್ವಾಯಿಲ್ಲ, ಚಿತ್ರ ಬಿಡುಗಡೆಯಾದ ನಂತರ ವಿಮರ್ಶೆ ಪ್ರಕಟವಾಗಿದೆ. ಅವರಿಗೆ ಅನ್ನಿಸಿದ್ದನ್ನು ಅವರು ಬರೆದಿದ್ದಾರೆ; ಲಂಕೇಶ್ ಪತ್ರಿಕೆಯಲ್ಲಿರುವಂತೆ ಬಿಡುಗಡೆಯಾಗುವುದಕ್ಕೆ ಮುಂಚಿನ ಹಾಳು ಊಹೆಗಳನ್ನಲ್ಲ. ಅವರು ಹೇಳುವಂತೆ ಕಾಡುಹಂದಿ ಎಂಬ ಕಲ್ಪನೆಯೇ ಇಂಗ್ಲಿಷ್ ಚಿತ್ರದಿಂದ ಬಂದದ್ದಂತೆ.

ವಿಜಯಕರ್ನಾಟಕದ ಲೇಖನಗಳು ಸುಲಭವಾಗಿ ಜಾಲಿಸಲು ಸಿಗುವುದರಿಂದ ಧಾರಾಳವಾಗಿ ಟೀಕಿಸಬಹುದು. ಆದರೆ ಈ ಕೆಳಗಿನ ಅಂಶಗಳು ಬಂದಿರುವುದು ಲಂಕೇಶ್ ಪತ್ರಿಕೆಯಲ್ಲಿ:
೧.ತನಗೆ ಸರಿಸಾಟಿ ಯಾರೂ ಇಲ್ಲ ಎಂದು ಬೀಗುವ ನಿರ್ದೇಶಕ ಯೋಗರಾಜ ಭಟ್.
೨.ಜೊತೆಗೆ ದುಡಿದವರೊಂದಿಗೆ ಗೆಲುವು ಹಂಚಿಕೊಳ್ಳಬಾರದೆಂಬ ಕಾರಣಕ್ಕಾಗಿ ತಾಂತ್ರಿಕ ವರ್ಗದಲ್ಲಿ ಬದಲಾವಣೆ ಮಾಡಿಕೊಂಡರು.
೩.ಹರಿಕೃಷ್ಣ ಅವರ ಸಂಗೀತ ಸಪ್ಪೆಯಾಗಿದೆ.
೪.ದಿಲ್ ಚಾಹ್‍ತಾ ಹೈ ಚಿತ್ರದ ನೆರಳು ಗಾಳಿಪಟದಲ್ಲಿದೆ, ಇನ್ನೂ ಕೆಲವು ಚಿತ್ರಗಳ ನೆರಳಿದೆ.
೫.ಐದುಕೋಟಿ ಕನ್ನಡಕ್ಕೆ ಆಪತ್ತು: ಐದುಕೋಟಿಗಿಂತ ಹೆಚ್ಚಿಗೆ ಬಜೆಟ್ಟಿನಲ್ಲಿ ತಯಾರಾದುದರಿಂದ ಚಿತ್ರ ಸೋತೇ ಸೋಲಲಿದೆ.
______
ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ
January 20, 2008 - 1:31pm — uniquesupri

ಉ: ಗಾಳಿಪಟ

uniquesupri's picture

ಸಿನೆಮಾ ಬಿಡುಗಡೆಯಾದ ಮರುದಿನದ ಪತ್ರಿಕೆಯಲ್ಲಿ ಜನ ಓದಬಯಸುವುದು ಒಂದು ಸ್ಥೂಲವಾದ ವಿಮರ್ಶಾ ಅಭಿಪ್ರಾಯ. ಭಾರಿ ಪ್ರಚಾರ ಗಿಟ್ಟಿಸಿಕೊಂಡ ಚಿತ್ರಗಳು ಗುಣಮಟ್ಟದಲ್ಲಿ ಆ ನಿರೀಕ್ಷೆ ಮುಟ್ಟಿಲ್ಲ ಎಂಬುದು ಒಬ್ಬ ‘ಪತ್ರಿಕಾ ವಿಮರ್ಶಕ’ ಸೂಚಿಸಬಹುದಾದ ಏಕೈಕ ಅಂಶ. ಆ ಎಲ್ಲೆಯನ್ನು ಮೀರಿ ವಿಜಯ ಕರ್ನಾಟಕ ವಿಮರ್ಶೆಯನ್ನು ಪ್ರಕಟಿಸುವುದು ಸಂಶಯಕ್ಕೆ ಎಡೆಮಾಡಿಕೊಡುತ್ತದೆ.
ವಿಜಯ ಕರ್ನಾಟಕವನ್ನು ಸಮರ್ಥಿಸಿಕೊಳ್ಳುವ ನಿಮ್ಮ ಪಡಿಪಾಟಲು ಕಂಡು ನಗು ಬರುತ್ತದೆ. ವಿಜಯ ಕರ್ನಾಟಕ್ಕೂ ಲಂಕೇಶ್ ಪತ್ರಿಕೆಗೂ ಎಲ್ಲಿಂದೆಲ್ಲಿಯ ಹೋಲಿಕೆ? ಒಂದು ನಾಡಿನ ನಂಬರ್ ಒನ್ ದಿನಪತ್ರಿಕೆ, ಮತ್ತೊಂದು ಅಪ್ಪಟ ಟ್ಯಾಬಲಾಯ್ಡ್. ನಿಮ್ಮ ಸಮರ್ಥನೆಯಿಂದ ಮತ್ತೊಂದು ಅಂಶದ ಬಗ್ಗೆ ತಿಳಿವು ಮೂಡಿತು... ಇತ್ತೀಚೆಗೆ ಪ್ರತಾಪ್ ಸಿಂಹರ ಬರಹ, ಅವುಗಳ ಹೆಡ್ಡಿಂಗು ಗಮನಿಸಿದರೆ ಅದು ಸತ್ಯವೂ ಅನ್ನಿಸುತ್ತಿದೆ. ವಿಜಯ ಕರ್ನಾಟಕ ಹೊಸತೊಂದು ಮೈಲುಗಲ್ಲು ಮುಟ್ಟುವತ್ತ ಧಾವಿಸುತ್ತಿದೆ. ‘ದೈನಂದಿನ ಟ್ಯಾಬಲಾಯ್ಡ್’ ಆಗಿ ಪತ್ರಿಕೆ ಮಾರ್ಪಾಡಾಗುತ್ತಿದೆ. ‘ಇದು ಕನ್ನಡಿಗರ ಹೆಮ್ಮೆ!’

_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com

  • Login or register to post comments
  • link
  • Email this ಪ್ರತಿಕ್ರಿಯೆ
January 21, 2008 - 12:43am — ಸಂಗನಗೌಡ

ಉ: ಗಾಳಿಪಟ

ಸಂಗನಗೌಡ's picture

ಎಂದಿಗೆ ಸಂಕೇಸ್ವರ್ ಪ್ಯೂರ್ ಬಿಜಿನೆಸ್ ಮೈಂಡೆಡ್ ಆಗಿ ವಿಜಯ ಕರ್ನಾಟಕಾನ ಹೋಗಿ ಹೋಗಿ ಟಿ.ಓ.ಐ ಗೆ ಮಾರಿಕೊಂಡನೋ ಅಂದೇ ಅದು ಸತ್ತು ಹೋಯಿತು. ಈಗೇನಿದ್ದರು ಅದರ ದೇಹ, ಒಳಗಿರುವದು ಕನ್ನಡಕ್ಕೆ ಮಾರಕವಾದ ದೆವ್ವ ಅನಿಸುತ್ತೆ. ನನ್ನ ಮಾತು ನಿಮಗೆ ಅತೀ ಅನಿಸಬಹುದು. ಆದರೆ ವಿ.ಕ ಮಾರಾಟವಾದ ಮರುದಿನದಿಂದಲೇ ಕನ್ನಡದ ಹಿತ ಬಯಸುವ ಸುದ್ದಿಗಳು ಒಳಪುಟದ ಯಾವುದೋ ಮೂಲೆ ಸೇರತೊಡಗಿದವು. ಕನ್ನಡವನ್ನು ಲೋಕಸಭೆಯಲ್ಲಿ ಮಹಾರಾಸ್ಟ್ರದ ಕಿತಾಪತಿಯಿಂದ ತೆಗೆದದ್ದು, ಮುಕಪುಟದಲ್ಲಿ ಬರ್ತಾ ಇತ್ತು. ಅದೇ ಹೊತ್ತಲ್ಲೇ ಸಂಕೇಸ್ವರ್ ತಮ್ಮ ಪೇಪರನ್ನು ಮಾರಿಕೊಳ್ಳುವ ತುರಾತುರಿ ನಡೆಸಿದ್ದರು. ಮಾರಾಟವಾದ ಮರುದಿನಾನೇ ಆ ಸುದ್ದಿ ಒಳಪುಟ ಸೇರಿತು, ಅದೂ ಅರ್ದಂಬರ್ದ!

ವಿ.ಕ.ದ ವರದಿಗಾರರನ್ನು ತುರ್ಜಮೆಗಾರನ್ನಾಗಿ ಬಳಸಿಕೊಳ್ಳಲು ಮುಂದಾದ ಟಿ.ಓ.ಐ ಪಾಲಿಗೆ ಟೈಮ್ಸ್ ಕನ್ನಡ ವರದಿಗಾರರು ಬರೀ ಇಂಗ್ಲೀಸಿನಲ್ಲಿ ಬರೆದದ್ದನ್ನು ಕನ್ನಡಕ್ಕೆ ತರುವ ಮಶೀನುಗಳಸ್ಟೇ. ಕನ್ನಡ ಪೇಪರುಗಳಲ್ಲಿ ಮೊದಲು ಕನ್ನಡ ಸಿನಿಮಾಗಳ ಬಗ್ಗೆ ಅಸ್ಟೇ ಬರ್ತಾ ಇತ್ತು. ಈಗ ನಮ್ಮ ಸಂಕೇಸ್ವರರ ಒಂದು ಎಡವಟ್ಟಿನಿಂದ ಹಿಂದಿ ಸಿನಿಮಾ ಸುದ್ದಿಗಳದೇ ಅಬ್ಬರ. ಕನ್ನಡ ಪೇಪರುಗಳಲ್ಲಿ ಹಿಂದಿ ಸಿನಿಮಾ ಸುದ್ದಿಗಳು ಇಸ್ಟು ದೊಡ್ಡ ಬಗೆಯಲ್ಲಿ ಬರತೊಡಗಿದ್ದು ಇದೇ ಪೇಪರಿನಲ್ಲಿ.

ಶನಿವಾರ ವಿ.ಕ ದಲ್ಲಿ ಬಂದ ತಿಕ್ಕಲುತನದ ರಿವೀವ್ ನೋಡಿಯೇ ನಾನು ಹೆಂಗೋ ಕಸ್ಟಪಟ್ಟು ಟಿಕೆಟ್ "ಗಳಿಸಿಕೊಂಡು"(Laughing out loud)) ಸಿನಿಮಾ ನೋಡಿದೆ. ನೋಡಿದ ಮೇಲೆ ನನಗನಿಸಿದ್ದು, ಆ ಬರಹವನ್ನು ಬರೆದ ದೇವಶೆಟ್ಟಿ ಮತ್ತು ಮುಕಪುಟದಲ್ಲಿ ಹಾಕಿದ ವಿ.ಕ ಎಡಿಟರ್ರು ಇಬ್ಬರೂ ದೊಡ್ಡ ಸ್ಯಾಡಿಸ್ಟಗಳೆಂದು Sad

ಸಿನಿಮಾ ಸಕ್ಕಾತ್ತಾಗಿದೆರೀ, ಇಂತ ಸ್ಯಾಡಿಸ್ಟ್ ಗಳ ಕೆಟ್ಟ ರಿವೀವ್ ಓದಿಕೊಂಡು ತುಂಬಾ conscious ಆಗಿ ನೋಡದೇ, ತಿಳಿ ಮನಸ್ಸಿ(ಪ್ರಾಂಜಲ ಮನಸ್ಸು)ನಿಂದ ಸಿನಿಮಾ ನೋಡಿ. ನನಗಂತೂ ಸಿನಿಮಾ ತುಂಬಾ ಹಿಡಿಸಿತು.
ಆ ಈ ರಿವೀವ್ ಗಳನ್ನು ತಲೆಗೆ ಹಾಕೊಳ್ಳದೇ ನೋಡಿದ್ರೆ ಯಾರಿಗಾದ್ರೂ ಇಸ್ಟ ಆಗುತ್ತೆ ಈ ಸಿನಿಮಾ, ನನಗನಿಸುವಂತೆ ಇದು ಮತ್ತೊಂದು ಮುಂಗಾರು ಮಳೆನೇ. Smiling

  • Login or register to post comments
  • link
  • Email this ಪ್ರತಿಕ್ರಿಯೆ
January 21, 2008 - 4:34pm — ಹರೀಶ್

ಉ: ಗಾಳಿಪಟ

ಹರೀಶ್'s picture

ಗಾಳಿಪಟದ ಬಗ್ಗೆ ಕೆಟ್ಟದಾಗಿ ಬರೆದ ವಿ.ಕ ಗೆ ದಿಕ್ಕಾರವಿರಲಿ......ಗಾಳಿಪಟ ಒ೦ದು ಅತ್ಯುತ್ತಮ ಚಿತ್ರ ....
ಪ್ರೀತಿ,ಸ್ನೇಹ,ಭಾವನೆಗಳ ಅಡಿಪಾಯದಲ್ಲಿ ಮೂಡಿ ಬ೦ದಿರುವ ಗಾಳಿಪಟ ಪ್ರೇಕ್ಶಕನಿಗೆ ಮನರ೦ಜನೆ ಕೊಡುತ್ತದೆ...
ನಕ್ಕು ನಗಿಸುವ ಹಾಸ್ಯ, ಮೈನವಿರೇಳಿಸುವ ಛಾಯಗ್ರಹಣ,ಇ೦ಪಾದ ಹಾಡುಗಳು,ಹಾಡುಗಳಿಗೆ ತಕ್ಕ ಸಾಹಿತ್ಯ ಎಲ್ಲರ ಮನ ಸೂರೆಗೊಳ್ಳುತ್ತದೆ..
ಒ೦ದು ಸಾಮಾನ್ಯವೆನಿಸುವ೦ತ ಕತೆಯನ್ನು ಪ್ರೆಕ್ಷಕನ ಮನದ ಮುಗಿಲಿಗೆ ತಲುಪಿಸುವಲ್ಲಿ ಭಟ್ಟರು ಸಫಲರಾಗಿದ್ದಾರೆ..
ಹಾಡುಗಳ ಸಾಹಿತ್ಯವ೦ತೂ ಅತ್ಯದ್ಭುತ ಎನ್ನಬೇಕು..

ಜೀವ ಕಳೆವ ಅಮೄತಕೆ ಒಲುವೆ೦ದು ಹೆಸರಿಡಬಹುದೆ
ಪ್ರಾಣ ಉಳಿಸೊ ಖಾಯಿಲೆಗೆ ಪ್ರೀತಿಯೆ೦ದೆನ್ನಬಹುದೆ

  • Login or register to post comments
  • link
  • Email this ಪ್ರತಿಕ್ರಿಯೆ
January 21, 2008 - 5:39pm — ASHOKKUMAR

ಉ: ಗಾಳಿಪಟ

ASHOKKUMAR's picture

ಹಾಗೆಂದು TOI ಗಾಳಿಪಟಕ್ಕೆ ಒಳ್ಳೆಯ ರೇಟಿಂಗ್ ಕೊಟ್ಟಿದೆ!
*ಅಶೋಕ್

  • Login or register to post comments
  • link
  • Email this ಪ್ರತಿಕ್ರಿಯೆ
January 21, 2008 - 6:16pm — ಸಂಗನಗೌಡ

ಉ: ಗಾಳಿಪಟ

ಸಂಗನಗೌಡ's picture

ಹೂಂ, ಟಿ.ಓ.ಐ ಕನ್ನಡ ಸಿನಿಮಾಗಳ ಬಗ್ಗೆ ಕೆಟ್ಟದಾಗಿ ಬರಿಯೋ ದೈರ್ಯ ಮಾಡಿಲ್ಲ Laughing out loud ... ಯಾಕೋ ಗೊತ್ತಿಲ್ಲ.

  • Login or register to post comments
  • link
  • Email this ಪ್ರತಿಕ್ರಿಯೆ
January 21, 2008 - 6:16pm — ಸಂಗನಗೌಡ

ಉ: ಗಾಳಿಪಟ

ಸಂಗನಗೌಡ's picture

ಹೂಂ, ಟಿ.ಓ.ಐ ಕನ್ನಡ ಸಿನಿಮಾಗಳ ಬಗ್ಗೆ ಕೆಟ್ಟದಾಗಿ ಬರಿಯೋ ದೈರ್ಯ ಮಾಡಿಲ್ಲ Laughing out loud ... ಯಾಕೋ ಗೊತ್ತಿಲ್ಲ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದ ಸತ್ಯನ ಲವ್ವು ತಮಿಳುನಾಡು, ಆಂದ್ರ, ಮಾರಾಶ್ಟ್ರ, ಡೆಲ್ಲಿಯಾಗೆ
  • ಪತ್ರ ಬರೆಯಲಾ?ಇಲ್ಲ ಚಿತ್ರ ಬಿಡಿಸಲಾ? - ಅರಮನೆ
  • ಏ ಆರ್‍ ರೆಹಮಾನ್ ಹಾಡಿರುವ ಕನ್ನಡ ಹಾಡು - ಗಬ್ಬಾಗಿದೆ.
  • ಆಶ್ಡೆನ್ ಪ್ರಶಸ್ತಿ
  • ಕನ್ನಡ ಕಂಠೀರವ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 14 ಅತಿಥಿಗಳು ಆನ್ಲೈನ್ ಇರುವರು.

ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ

— ಶಿಶುನಾಳ ಷರೀಫ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator