ಏನೀ ಸ್ಲೋಕದ ತಿರುಳು( ಅರ್ಥ )
ನಮ್ ಮನೇ ಹತ್ರ ಒಂದು ಕೋದಂದ-ರಾಮ-ದೇವರ ಗುಡಿ ಐತೆ. ಅಲ್ಲಿ ಬೆಳ್‌ಬೆಳಿಗ್ಗೆ ಹೊತ್ತಾರೆ ಐದುವರೆ, ಆರಕ್ಕೆಲ್ಲ ಜೋರಾಗಿ ಸುಪ್ಪಬಾತ, ಮುಂತಾದನ್ನ ಹಾಕ್ತಾರೆ. ನನಗೆ ಅದರಿಂದ ಯಾವ್ ತೊಂದರೆ-ಇಂದರೆ ಇಲ್ಲ. ನಾನು ದಿನಾ ಆಪೀಸ್ಗೆ ಬರೋ ಮುನ್ನ ರಾಮಂಗೆ ಒನ್ ಸರ್ತಿ ಕೈಮುಕ್ಕೊಂಡು ಬತ್ತೀನಿ.
ಆದರೆ ಅವರು ದಿನಾ ಹಾಕೋ, ಒಂದು ಶ್ಲೋಕಾನ ಬಿಡಿಸಕ್ಕೆ ಹೋಗಿ ನಂಗೆ ಸಾನೆ ಗಲಿಬಿಲಿ, ಅವಕ್ಕು ಆಯ್ತು. ಏನಪ್ಪ ಇದು ಈ ಸ್ಲೋಕದ ಅರ್ತ ದಿಟವಾಗ್ಲೂ ಹಿಂಗೈತಾ ಅಂತ ಅನ್ನಿಸ್ತು.
ಆ ಸ್ಲೋಕ ಹಿಂಗೈತೆ.
==========================
ಕಮಲಾಕುಚಚೂಚುಕಕುಂಕುಮತೋ
ನಿಯತಾರುಣಿತಾತುಲನೀಲತನೋ
ಕಮಲಾಯತಲೋಚನಲೋಕಪತೇ
ವಿಜಯೀಭವ ವೇಂಕಟಶೈಲಪತೇ
===========================
ಇಲ್ಲಿ ಮೊದಲನೇ ಸಾಲು ನಂಗೆ ಏನೇನೋ ಗಬ್ಬರ್ತ ಕೊಡತೈತೆ.
ಈ ಸ್ಲೋಕಾನ ಕನ್ನಡ "ಖುಶಿ" ಸಿನಿಮಾದಾಗೆ ಒಂದು ಹಾಡಲ್ಲಿ ಕಲೆಸೌರೆ.
ಇದರ ಸರಿಯಾದ ಅರ್ತ ತಿಳಿದಿರೋರು ಪೇಳಿ.

- mahesha ರವರ ಬ್ಲಾಗ್
- Login or register to post comments
- 523 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
Re: ಏನೀ ಸ್ಲೋಕದ ತಿರುಳು( ಅರ್ಥ )
ಅದರ ಅರ್ಥ ನೀವು ತಿಳಿದ ಹಾಗೇ ಇದೆ!.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
Re: ಏನೀ ಸ್ಲೋಕದ ತಿರುಳು( ಅರ್ಥ )
’ಗಬ್ಬ’ ಅರ್ಥ ಗೊತ್ತಾಗ್ಲಿಲ್ಲ. ’ಗಬ್ಬು’ = ಕೆಟ್ಟ? ಅಲ್ಲ ಗಬ್ಬ = ಗೂಢ (ಗರ್ಭ) inner ?
Re: ಏನೀ ಸ್ಲೋಕದ ತಿರುಳು( ಅರ್ಥ )
ಇಲ್ಲಿ ನೋಡಿ:
http://www.ibiblio.org/sripedia/oppiliappan/sva/v/index.html
-ಹಂಸಾನಂದಿ
Re: ಏನೀ ಸ್ಲೋಕದ ತಿರುಳು( ಅರ್ಥ )
ನೋಡ್ರಣ್ಣ, ಯಾರು ನೊಂದುಕೊಬ್ಯಾಡಿ.
ನಂಗೆ ಯಾರಂನೋ ನೋಯ್ಸಕ್ಕೆ ಬಯಕೆ ಇಲ್ಲ!
ನಂಗೆ ಬರೋ ಸಕ್ಕದ, ನಂಗೆ ಗೊತ್ತಿರೋರ್‍ನೆಲ್ಲ ಕೇಳಿದ ಮ್ಯಾಕೆ ಇಲ್ಲಿ, ಇದರ ಬಿಡಿ ಅರ್ತ ಬರೆತಿವ್ನಿ.
ಕಮಲಾ = ಸಿರಿಲಕುಮಿ, ತಾವರೆಯಮ್ಮ,
ಕುಚ = ಮೊಲೆ, bosom
ಚೂಚುಕ = ಕೊಕ್ಕು, ತೊಟ್ಟು, nipple
ಕುಂಕುಮತಃ = because of the redness, ಕೆಂನತದಿಂದ, ಕೆಂಪಿನ ದೆಸೆಯಿಂದ
ನಿಯತ = he who is engaged, ತೊಡಗಿರುವವನು, ನಾಟಿರುವ
ಅರುಣಿತ = like raising sun, ಮೂಡುತ್ತಿರುವ ನೇಸರನಂತೆ
ಅತುಲ = unweighable, ತೂಗಲಾಗದ
ನೀಲ = blue, ನೀಲಿ
ತನು = body, ಮೈ
ಕಮಲ ಆಯತ = as board as a lotus, ಅರಳಿದ ತಾವರೆಯನಿತ್ತು ಅಗಲವಾದುದು
ಲೋಚನ = eye, ಕಣ್ಣು
ಲೋಕಪತೇ = ಲೋ, ಏಲೈ, ಜಗದೊಡೆಯ
ವಿಜಯೀ = ಗೆದ್ದವನು,
ಭವ = ಆಗು
ವೇಂಕಟ-ಶೈಲ-ಪತೇ = ಎಲೈ ವೆಂಕಟ-ಬೆಟ್ಟದೊಡೆಯ
"ಸಿರಿಲಕುಮಿಯ ಮೊಲೆ-ತೊಟ್ಟಿನ ಕೆಂಪಿನ ದೆಸೆಯಿಂದ engage ಆಗಿರುವ, ಮೂಡುವ ನೇಸರನಂತೆ ತೂಗಲಾರದ ನೀಲಿಮೈಯ, ತಾವರೆಯಗಲದ ಕಣ್ಣ, ಎಲೈ ಜಗದೊಡೆಯ, ಗೆದ್ದವನಾಗು, ವೆಂಕಟಬೆಟ್ಟದೊಡೆಯ"
"Oh Lord of VenkatAchalam ! Oh Lord of the Universe ! Oh Lord with
long eyes reaching almost to Your ears and reminding us of the softeness
and beauty of lotus flower ! Oh Lord whose matchless dark hued body is
renderd red always with the vermillion (Kumkumam) marks from the front portions of the breasts of MahA Lakshmi ! Victory be always to Thee!"
- ಹಂಸಾನಂದಿ ಕೊಟ್ಟ ಸೈಟು ಹಿಂಗೆ ಹೇಳತ್ತೆ.
ಒಟ್ಟಿನಲ್ಲಿ ಮೊದಲನೇ ಸಾಲು ಕೆಟ್ಟರ್ತ ನೀಡುತ್ತೆ. ಇರಲಿ.. ಬಿಡಿ.
ನಂನಿ!
=====================================