ಅರಮನೆ - ಮನೆಮಂದಿ ಜೊತೆ
ನಾನ್ ರೂಮಿಗ ನನ್ ಬೆಸಟು ಗೆಳಯನ ಜೊತೆ ಅರಮನೆಯನ್ನ ಬೆಂಗಳೂರಲ್ಲಿ ನೋಡಿದ್ದೆ.
ಮೊನ್ನೆ ಹೋದ ಶುಕುರುವಾರ ನಮ್ ಚಿಕ್ಕಪ್ಪನ ಹೊಸ-ಮನೆ-ಹಬ್ಬ ಅಂತ ಮಂಡ್ಯಕ್ಕೆ ಹೋಗಿದ್ದೆ. ಶುಕುರುವಾರ ರಾತರಿ ನಾನೂ ಮನೆಯೊರನ್ನೆಲ್ಲ ಅರಮನೆ ಸಿನಿಮಕ್ಕೆ ಕರೆದುಕೊಂಡು ಹೋದೆ. ಯಾರು ಯಾರು ಹೋಗಿದ್ವಿ? ಅಂದರೆ ನಾನು, ನನ್ ತಮ್ಮ, ನನ್ ಚಿಕ್ಕಪ್ಪನ ಮಗ, ನನ್ ಸೋದರ ಅತ್ತೆಮಾವ, ನನ್ ದೊಡ್ಡಪ್ಪ ದೊಡ್ಡಮ್ಮ, ನಮ್ ಅಪ್ಪಮ್ಮ. ಒಟ್ಟು ಎಂಟು ಮಂದಿ. ಅದರಲ್ಲೂ ನಮ್ ಸೋದರ ಅತ್ತೆ ಮಾವ ಸಿನಿಮ ನೋಡ ಮಂದಿಯೇ ಅಲ್ಲ.
ಸಿನಿಮ ಎಶ್ಟು ಚನ್ನಾಗಿತ್ತು ಅಂದರೆ, ಸಿನಿಮ ನೋಡಿ ಬಂದ ಎಲ್ಲರೂ ನನ್ ಹೊಗಳಿದ್ದೋ ಹೊಗಳಿದ್ದು. ನಮ್ ಅತ್ತೆಮಾವಂಗೆ ಎಶ್ಟು ಸಂತೋಸ ಅಂದರೆ ’ಲೋ ಮಹೇಶ ಯಾರು ಅವನು, ಅಶ್ಟು ಚನ್ನಾಗಿ ಆಕಟು ಮಾಡಿದ್ದಾನೆ. ತುಂಬಾ ಚನ್ನಾಗಿ ಇದ್ದಾನೆ’ ಎಂದರು. ನಮ್ಮಮ್ಮ ಗಣೇಶನ್ನ ಹೊಗಳಿದ್ದೋ ಹೊಗಳಿದ್ದು.
ಅವರು ಮನೆಗೆ ಬಂದು ಬಂದಿದ್ದ ನೆಂಟರು ನಿಶಟರಿಗೆಲ್ಲ ಸಿನಿಮ ಕತೆ-ಹಾಡುಗಳ ಬಗ್ಗೆ ಹರಟಿದ್ದೋ ಹರಟಿದ್ದು..
ನೀವು ಹೋಗಿ ನೋಡಿ ಅರಮನೆಯನ್ನ! ಚನ್ನಾಯ್ತೆ!

- mahesha ರವರ ಬ್ಲಾಗ್
- Login or register to post comments
- 252 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: