ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › Sampada Blogs › mahesha ರವರ ಬ್ಲಾಗ್

ಛಾಯಾಚುಂಬನ

July 18, 2008 - 12:17pm — mahesha

ನೆನ್ನೆ ನಾನು ಮತ್ತು ಸಹಕಕ್ಷಕ ಕದಳಿಭಕ್ಷಣೆಗೆಂದು ಒಂದು ವಿಪಣಕ್ಕೆ ಗಮಿಸಿದೆವು. ಅತ್ರ ಕನ್ನಡ ಭಾಷೆಯ ಬಹು ವಿಧದ ಪುಸ್ತಕಗಳನ್ನು ತೋರಣದಂತೆ ವಿಪಣದ ಅಗ್ರದಲ್ಲಿ ಕಟ್ಟಿದ್ದರು. ನಾವು ಕದಳಿಭಕ್ಷಣನಿರತಾಗಿದ್ದಾಲೇ ನಮ್ಮ ನೇತ್ರಗಳ ದೃಷ್ಟಿ ಅಲ್ಲಿದ್ದ ಪುಸ್ತಕೈಕದ ಮೇಲೆ ಬಿದ್ದಿತು. ನನ್ನ ಸಹಕಕ್ಷಕ ಅದರ ನಾಮಧೇಯ "ಆದರ್ಶ ದಂಪತಿ" ಎಂದು ಕನ್ನಡದಲ್ಲಿ ಇರುವದನ್ನು ಕಂಡು ಇಂತು ಸಂಭಾಷಿಸಿದನು..

ಸಹಕಕ್ಷಕ : "ಏಲೈ ಸಹಕಕ್ಷಕ, ಅಕೋ ವೀಕ್ಷಿಸು, ಆ ಕನ್ನಡಪುಸ್ತಕವನ್ನು. ವಿವಾಹಸನ್ನಿಹಿತಸನ್ನಿವೇಶಿಯಾದ ನಿನಗೆ ದಾಂಪತ್ಯಮಾರ್ಗದರ್ಶಿಯಾಗಬಹುದು. ಕ್ರಯಿಸಿ ಪಠಿಸಿ ಜ್ಞಾನಭಾಗ್ಯವನ್ನು ಲಭಿಸಿಕೋ"
ಅಹಂ : "ಭಲೇ ಸಹಕಕ್ಷಕ, ಈಗಲೇ ಕ್ರಯಿಸಿ ಗೃಹಕ್ಕೆ ಒಯ್ಯೋಣ. ತಥಾಸ್ತು" ಎಂದೆನು

ಸಹಕಕ್ಷಕನ ಚತುರಮತಿಯನ್ನು ಪ್ರಶಂಸಿಸುತ್ತಾ ಪುಸ್ತಕವಿಶೇಷದ ಸಹ ನಮ್ಮ ಸದನಕ್ಕೆ ಆಗಮಿಸಿ ವಿಶ್ರಮಿಸ ಹತ್ತಿದೆವು.

ಪುಸ್ತಕಕೊಂಡದ್ದು ಎನಗಾದರೂ ಅದನ್ನು ಓದಲು ಉಪಕ್ರಮಿಸಿದ್ದು ಮಾತ್ರ ನನ್ನ ಸಹಕಕ್ಷಕ. ಎರಡು ಪುಟಗಳನ್ನು ಪಠಿಸಿ ತ್ರಾತನಾಗಿ "ನನಗೆ ತಿಳಿಯುತ್ತಿಲ್ಲ.. ನಿದ್ರಾಕರ್ಷಣನಾಗುತ್ತಿಹೆನು.. ಇಕೋ, ಪಠಿಸಿಕೋ" ಎಂದು ಪುಸ್ತಕಪ್ರದಾನಮಾಡಿ ಶಯನಗೈದನು.

ಇತ್ತ ಪುಸ್ತಕಪ್ರಾಪ್ತಭಾಗ್ಯನಾಗಿ ಓದಹತ್ತಿದೆನು. ಸತ್ಯವಾಗಲೂ ಒಳ್ಳೆಯ ಪುಸ್ತಕ. ದಾಂಪತ್ಯಕ್ಕೆ ಅಗತ್ಯವಾದ ವಿಚಾರ ವಿವರಣಾ ವರ್ಣನೆಗಳನ್ನು ಸುಲಲಿತವಾಗಿ ಉನ್ನತವಾಗಿ ಬರೆದಿದ್ದಾರೆ. ಗರ್ಭನಿರೋಧಕ ವಿಧಾನದಿಂದ ಗರ್ಭಹರಣದ ವರೆಗೂ ಕೊಟ್ಟಿರುವ ಮಾಹಿತಿ ಉಪಯುಕ್ತವಾಗಿದೆ.

ಆದರೆ ಸರ್ವಾಧ್ಯಾಯಗಳಿಗಿಂತ ನನಗೆ ಆಪ್ಯಾಯಮಾನವಾದುದು "ಚುಂಬನ-ಚಂದನ" ಅಧ್ಯಾಯ. ಇದರಲ್ಲಿ ಶ್ರೇಷ್ಠಸಂಸ್ಕೃತಕಾವ್ಯೈಕವಾದ ವಾತ್ಸಾಯನರ್ಷಿಯ ಕಾಮಸೂತ್ರದಿಂದ ಬಹುವಿಧದ ಚುಂಬನಗಳನ್ನು ವರ್ಣಿಸಿದ್ದಾರೆ. ನನಗೆ ಆಕರ್ಷಣೀವೆನಿಸಿದ ಒಂದನ್ನು ಹೇಳುವೆನು

ಛಾಯಾಚುಂಬನ : ಪತಿಯು ದರ್ಪಣವನ್ನು ನೋಡಿಕೊಂಡು ತನ್ನ ದಾಡಿಗಡ್ಡವನ್ನೂ ಮೀಸೆಯನ್ನೋ ಅಲಂಕರಿಸಿಕೊಳ್ಳುತ್ತಿರುತ್ತಾನೆ, ಆಗ ಸತಿಯು ಬಂದುದು ಆ ದರ್ಪಣದಿಂದ ದರ್ಶನವಾಗುತ್ತದೆ. ಆಗ ವಲ್ಲಭನು ಆ ದರ್ಪಣದ ಬಿಂಬಕ್ಕೆ ಛಾಯೆಗೆ ಚುಂಬಿಸುವನು. ಇದನ್ನು ಛಾಯಾಚುಂಬನವೆನ್ನುವರು.

ಎಷ್ಟು ಮನೋಹರವಾಗಿದೆ ಅಲ್ಲವೇ? .............

ನಮ್ಮ ಸಾಹಿತ್ಯದಲ್ಲಿ ಎಂಥೆಂಥಾ ಅಮೂಲ್ಯರತ್ನಗಳಿವೆಯೋ.. !!

~.~
  • mahesha ರವರ ಬ್ಲಾಗ್
  • Login or register to post comments
  • 446 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 18, 2008 - 1:09pm — sudhimail

ಉ: ಛಾಯಾಚುಂಬನ

sudhimail's picture

ನಿಮ್ಮ ಛಾಯಾಚುಂಬನ ಸೂಪರ್!!!!!

ವಂದನೆಗಳೊಂದಿಗೆ,
ಸುಧೀಂದ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 18, 2008 - 1:23pm — mahesha

ಉ: ಛಾಯಾಚುಂಬನ

mahesha's picture

ವಂದನೆಗೆ ಧನ್ಯವಾದ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 18, 2008 - 1:36pm — madhava_hs

ಉ: ಛಾಯಾಚುಂಬನ

madhava_hs's picture

ಅದ್ಭುತ !. ನಿಮ್ಮ ಭಾಷಾ ಪ್ರೌಢಿಮೆ ಪ್ರಶಂಸನಾರ್ಹ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 18, 2008 - 2:03pm — mahesha

ಉ: ಛಾಯಾಚುಂಬನ

mahesha's picture

ಪ್ರಶಂಸಾರ್ಶೀವಾದಕ್ಕೆ ವಂದನೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 18, 2008 - 2:50pm — ಮನಹ್ಪಠಲ

ಉ: ಛಾಯಾಚುಂಬನ

ಮನಹ್ಪಠಲ's picture

ಇದನ್ನಾ ಇ೦ಗಲೀಸಿನಲ್ಲಿ 'virtual kiss' ಅ೦ತಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 18, 2008 - 11:31pm — hamsanandi

ಉ: ಛಾಯಾಚುಂಬನ

hamsanandi's picture

ಸ್ವಾಮೀ ಮಹೇಶರೆ,

ಭವದೀಯರು ಈ ಲೇಖನಕ್ಕುಪಯುಕ್ತವಾದ ಉನ್ನತವಾದ ಭಾಷಾಮರ್ಯಾದೆಯನ್ನು ಅತಿಕ್ರಮಿಸಿ ಲಿಖಿಸಿರಿರುವಿರಲ್ಲ!

ಉದಾಹರಣಾರ್ಥವಾಗಿ ನಿದರ್ಶನೋಕ್ತಿ:

Quote:
ಪುಸ್ತಕಕೊಂಡದ್ದು ಎನಗಾದರೂ ಅದನ್ನು ಓದಲು ಉಪಕ್ರಮಿಸಿದ್ದು ಮಾತ್ರ ನನ್ನ ಸಹಕಕ್ಷಕ.

ಈ ವಾಕ್ಯವನ್ನು " ಪುಸ್ತಕವನ್ನು ವಿಕ್ರಯಿಸಿದ್ದು ಆತ್ಮಸಂತೃಪ್ತಿಗಾದರೂ, ಅದನ್ನು ಓದಲು .... " ಎಂದಿದ್ದರೆ ಲೇಖನದ ಭಾರವು ಇನ್ನೂ ಗುರುತ್ವ ಹೊಂದುತ್ತಿದ್ದುದರಲ್ಲಿ ಆಶ್ಚರ್ಯವಿಲ್ಲ!

Quote:
ಇತ್ತ ಪುಸ್ತಕಪ್ರಾಪ್ತಭಾಗ್ಯನಾಗಿ ಓದಹತ್ತಿದೆನು.

ಇದನ್ನು "ಇತ್ತ ಪುಸ್ತಕಪ್ರಾಪ್ತಭಾಗ್ಯನಾಗಿ ಪಠನಾಮಗ್ನನಾದೆನು" ಎನ್ನಬಾರದಿತ್ತೇ!

Smiling Smiling :) Smiling :)
-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 19, 2008 - 11:28am — mahesha

ಉ: ಛಾಯಾಚುಂಬನ

mahesha's picture

ಗುರುತ್ವದ ಸಾಂ‌ದ್ರತೆಯಲ್ಲಾದ ಮಿತಿಗೆ ಕ್ಷಮೆಯಿರಲಿ.

ಇತಃಪರಂ ಗುರುತ್ವವೃದ್ಧಿಗೆ ಸುಪ್ರಯತ್ನಿಸುವೆನು.

ಧನ್ಯತೆಗಳು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 19, 2008 - 4:37am — anivaasi

ಉ: ಛಾಯಾಚುಂಬನ

anivaasi's picture

ಛಾಯಾಚುಂಬನವೋ ಬಿಂಬಚುಂಬನವೋ? ಅಜಗಜಾಂತರ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 19, 2008 - 12:00pm — mahesha

ಉ: ಛಾಯಾಚುಂಬನ

mahesha's picture

ಗೊತ್ತಿಲ್ಲ.. ಛಾಯೆಯೂ ಒಂದು ಬಿಂಬವಲ್ಲವೇ?

ಏನೋಪ್ಪ... ಬುಕ್ಕಲ್ಲಿ ಹಾಗೆ ಇತ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 21, 2008 - 11:55am — Sunil Jayaprakash

ಉ: ಛಾಯಾಚುಂಬನ

Sunil Jayaprakash's picture

೧೯ ಶತಮಾನದಲ್ಲಿ ಅಥ್ವಾ ೨೦ನೇ ಶತಮಾನದ ಮೊದಲಲ್ಲಿ, ಪ್ರಕಟವಾಗಿರುವ, ಹೆಚ್ಚಾಗಿ ಅಯ್ಯಂಗಾರಿಗಳು ಅಥ್ವಾ ಬೇರೆ ಬ್ರಾಹ್ಮಣರು ಬಳಸುತ್ತಿದ್ದ ಬರವಣಿಗೆಯ ರೀತಿಯಲ್ಲಿ ಇದೆ. ಈ ರೀತಿ ಸಂಸ್ಕೃತಭೂಯಿಷ್ಠವಾಗಿರುವ ನಿಧಿಯೇ ಡಿ.ಎಲ್.ಐನಲ್ಲಿ ಬೇಕಾದಷ್ಟಿದೆ. ಓದುವಾಗ ಎಷ್ಟು ಮಜಾ ಬರುವುದೋ, ಅಷ್ಟೇ "ಕೃತಕ, ಇಂಪ್ರಾಕ್ಟಿಕಲ್ " ಆಗಿರುವುದನ್ನೂ ಕಾಣಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 22, 2008 - 12:24pm — mahesha

ಉ: ಛಾಯಾಚುಂಬನ

mahesha's picture

ಬ್ರಾಹ್ಮಣದೂಷಕ ಸುನಿಲ,

ಶ್ರೇಷ್ಠಭಾಷಾಯಾದ ಸಂಸ್ಕೃತ ಕೃತಕವೇ ಕಾರಣವೆಂದರೆ ಅದನ್ನು ರಚಿಸಿದವನು ಒಬ್ಬ ಪಾಣಿನಿಯೆಂಬ ವಯ್ಯಾಕರಣಿ.

ಕನ್ನಡ ಹಾಗೇ? ಕನ್ನಡವನ್ನು ಯಾರೂ ರಚಿಸಲಿಲ್ಲ.. ಬರೀ ಅದು ಹೀಗಿದೆ ಎಂದು ಹೇಳುವ ಪ್ರಯತ್ನವಷ್ಟೇ ಮಾಡಿಹರು.. ಇನ್ನೂ ಅದರಲ್ಲಿ ಸಫಲರಾಗಿಲ್ಲ ಸಂಪೂರ್ಣವಾಗಿ ಯಾರೂ ಸಹ.

ಕನ್ನಡದ ವ್ಯಾಕರಣವನ್ನು ಇನ್ನು ಬ್ರಹ್ಮನೇ ತಿಳಿಸಬೇಕೇನೋ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 21, 2008 - 12:02pm — Sunil Jayaprakash

ಉ: ಛಾಯಾಚುಂಬನ

Sunil Jayaprakash's picture

ಪ್ರಿಯಮಹೇಶಮಹೋದಯರ ವಿಶ್ವವ್ಯಾಪಿವಿಶೇಷಚಮತ್ಕಾರಭರಿತಛಾಯಾಚುಂಬನಕ್ಕೆ ಯಶಸ್ಸು ಲಭಿಸಲಿ. ಶುಭಮಸ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 23, 2008 - 9:15am — ಗಣೇಶ

ಉ: ಛಾಯಾಚುಂಬನ

ಗಣೇಶ's picture

ಮಹೇಶ್,

ಎನೋ ಹೊಸ ಪ್ರಯೋಗ ಹೇಳಿದಿರಿ ಎಂದು ಬೆಳಗ್ಗೆ ಪ್ರಾಕ್ಟಿಕಲ್‌ಗೆ ಇಳಿದೆ.
ಕನ್ನಡಿಯೆದುರು ಗಡ್ಡ ತೆಗೆಯುತ್ತಿದ್ದೆ(ಉಳಿದ ಟೈಮು ಕನ್ನಡಿ ಎದುರು ನಿಲ್ಲಲು ಅವಕಾಶ ಎಲ್ಲಿದೆ?)
ಉಳಿದದ್ದೆಲ್ಲಾ ಡಿಟ್ಟೋ.ಕೊನೆ ಮಾತ್ರ-
ಛಾಯೆಗೂ ನನ್ನ ಮುಖಕ್ಕೂ ನಡುವೆ ಶೇವಿಂಗ್ ಬ್ಲೇಡ್ ..
ಆಆಆಆ(ಹಾ ಇಲ್ಲ)..
-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 30, 2008 - 12:42pm — savithru

ಉ: ಛಾಯಾಚುಂಬನ

savithru's picture

ಮಹೇಶ...
ಛಾಯ ಚುಂಬನ ತಮಾಶೆಯಾಗಿ ತಗೊಂಡ್ರೆ ಪರವಾಗಿಲ್ಲ... ಸೀರಿಯಸ್ಸಾಗಿ ತೊಗೊಂಡ್ರೆ ಮುಗುದೊಯ್ತು!

ಇರ್ಲಿ...

ಒಮ್ಮೆ ನೀವು ಕಲ್ಯಾಣ ಮಲ್ಲನ "ಅನಂಗರಂಗ" ವನ್ನು ಒಮ್ಮೆ ಓದಿ. ಕೆಲವೊಂದು ಚೆನ್ನಾದ ?! ವಿಷಯಗಳಿದ್ದರೂ
ಹಲವು ಕಾಮದ ಬಗ್ಗೆ ಹಲವು ಬಾಲಿಶ ವಿಷಯಗಳನ್ನು ಬರೆದಿದ್ದಾನೆ.

ನಾಲ್ಕು ವರ್ಣಗಳಂತೆ ನಾಲ್ಕು ರೀತಿಯ ಹೆಣ್ಣು ( ಮತ್ತು ಗಂಡುಗಳನ್ನು) ವಿಭಾಗಿಸಿ... ಅವುಗಳ ಗುಣಗಳನ್ನು ವರ್ಣಿಸಿದ್ದಾನೆ. ಇಲ್ಲಿಯೂ ಸಹ ಪ್ರಥಮ ವರ್ಣವೆ ದೊಡ್ಡದು / ಉತ್ತಮ ಅಂತ ಆಧಾರ ವಾಗಿಟ್ಟುಕೊಂಡು ಬರೆದಿದ್ದಾನೆ.

ತುಂಬಾ ಬಾಲಿಶ ವರ್ಣನೆಗಳು ಕಾಣುತ್ತವೆ.

ಚಿಕ್ಕದೇ ಶ್ರೇಷ್ಠ ಅಂತೆ !

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 30, 2008 - 12:49pm — mahesha

ಉ: ಛಾಯಾಚುಂಬನ

mahesha's picture

Smiling ಅನಂಗರಂಗದ ಒಂದು ಇಣುಕಾಗಿದೆಯೆನಗೆ.

ಇರಲಿ ನಂನಿ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೆರಳ್ಮುತ್ತು
  • ಪುಸ್ತಕಗಳನ್ನು ಯಾಕೆ ಇಟ್ಟುಕೊಳ್ಳಬೇಕು?
  • ಕನ್ನಡದ ಚರ್ಚೆ
  • ನನ್ನನ್ನೂ ಸೇರಿಸ್ಕೋತೀರ ತಾನೆ?
  • ಪುಸ್ತಕಗಳನ್ನು ಓದುವ/ ಇಟ್ಟುಕೊಳ್ಳುವ ಕುರಿತು
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಕ್ಕಾ..ಅಕ್ಕಾ..ನಾನೂ ಬತ್ತೀನಿ...
  • ಮಳೆಯ ಮೇಲೇಕೆ ದೂರು?
  • ಎಲ್ಲ ತುಸುಹೊತ್ತು...
  • ಕನ್ನಡ ತಾಯಿಗೆ ನಮನ
  • ನೋಡಿ ಕಂಡದ್ದು
  • ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ದು ಹೀಗೆ....
  • ‘............’
  • ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
  • ಇನಿಯ
  • ಮಾಯಾಂಗಿನಿ ಮೋಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 25 ಅತಿಥಿಗಳು ಆನ್ಲೈನ್ ಇರುವರು.


ಜಗತ್ತಿನಲ್ಲಿ ಗ್ರಹಿಸಲು ಅತ್ಯಂತ ಕಷ್ಟಕರವಾದ ವಿಷಯವೆಂದರೆ ಆದಾಯ ತೆರಿಗೆ!

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator