ಅಮೆರಿಕ ಅಮೆರಿಕ ಅಮೆರಿಕ
ಈಗ ಕತೆ ಏನಾಗಿದೆ ಅಂದ್ರೆ, ಇಪ್ಪತ್ತಯ್ದಾಗ್ತಾ ಇದೆ ಅಂತಲೇ ಇಪ್ಪತ್ತಯ್ದಾಗಿ ಹೋಯ್ತು. ಇನ್ನು ನಂಮಪ್ಪ-ಅಂಮಂದಿರಿಗೆ, ತಂಮ ಬಲು ದಿನಗಳ ಕನಸಾದ ಮಗನ ಮದುವೆಯಂನು ನನಸು ಮಾಡಿಕೊಳ್ಳುವ ಹೊತ್ತು ಬಂದಾಯ್ತು. ಈಗ ನಾವ್ ಪಡ್ಡೆ ಹಯಿದರು, ನಮ್ ಪಡ್ಡೆತನ ಇಮೀಡಿಯಟ್ಟಾಗಿ ಬಿಟ್ಟು ತುಸು ಡೀಸೆಂಟಾಗಿ ಇರಬೇಕಾದ ಕಶ್ಟ-ವಕ್ಕರಿಸಿದೆ. ನಮ್ಮ ಅಮ್ಮಂದಿರೋ ಇರುಳುವಗಲು ನಮ್ಮ ಮದುವೆಯ ಚಿಂತೆಯಲ್ಲೇ ಅಜ್ಜಿಯರಾಗ್ತಾ ಇದ್ದಾರೆ, ದಿನವೂ ಪೋನುಗಯ್ದು ನಾವ್ ಪಡ್ಡೆಗಳ ತಲೆ ತಿಂತಾ ಇದ್ದಾರೆ.
ಇಶ್ಟೆಲ್ಲ ಸಂಕಶ್ಟಗಳಂನು ದಿಟ್ಟತನದಿಂದ ತಾಳಿಕೊಂಡು, ಸುಂಮನಿದ್ದ ಮನಕ್ಕೆ ಮದುವೆ ಹುಚ್ಚು ಏರಿಸಿಕೊಂಡು, ನಂಮ ಆಪೀಸಿನ ಕೆಲಸಗಳಾದ ಕೋಡ್-ಕೊಟ್ಟುವುದು, ಮೀಟಿಂಗ್ ಹರಟುವುದು, ಬಗ್-ಪಿಕ್ಸುವುದು, ಇವೆಲ್ಲವಂನು ಎಚ್ಚರದಿಂದ ನಡೆಸೋದು ಬಲು ಕಶ್ಟವಾದರೂ, ಇಶ್ಟವಿಲ್-ದಿದ್ರೂ, ಮಾಡಿಕೊಂಡು ಬದುಕಿದ್ದೀವಿ.
ಹೀಗೆಲ್ಲ ಪರಿಪರಿ ಪಿರಿಪಿರಿ ಸಂಕಶ್ಟದಲ್ಲಿದ್ದ ಪಡ್ಡೆಗಳಲ್ಲೊಬ್ಬನಾದ ನಂನಂನು ಈ ನಂನ ಕೂಳ ಕಂಪೆನಿಯು ಕರುಣೆಯಿಲ್ಲದೇ, ಈ ಅತಿ ಚಂಚಲ, ಐಲು, ಚಳಿವಳಿ, ಬಿಕನಿ ತುಂಡುಬಟ್ಟೆ, ಸ್ಮೂಚುಗಳ ನಾಡಾದ ಈ ಅಮೇರಿಕಕ್ಕೆ ಕಳಿಸಿತು. ಅದರಲ್ಲೂ ಈ ಪಡುವಣ ಅಮೆರಿಕೆಯ ಕ್ಯಾಲಿಪೋರ್ನಿಯೆಗೆ.
( ಎಲ್ಲೋ ಓದಿದ್ದು, ಯಾರೂ ನಂಮ ಇಂಡಿಯದೇಶ ಬಿಡದ ಸಮುಸುಕುರುತ ಪಂಡಿತ, ಕ್ಯಾಲಿಪೋರ್ನಿಯಾ ಕಪಿಲಾರಣ್ಯದ ಅಪಭ್ರಂಶ. ಅದು ಕಪಿಲಮುನಿಗಳ ತಪಃಕ್ಶೇತ್ರ ಅಂತ ಬರೆದಿದ್ರೂ; ಮೊದಲ ಸರತಿ ಇಲ್ಲಿಗೆ ಬಂದಾಗ ಇಲ್ಲಿ ಪಡತಿಯರಂನು ಕಂಡು.. ಭಲಾ ಕಪಿಲರ್ಷಿ ಎಂದು ಅಂದುಕೊಂಡಿದ್ದು ದಿಟಕ್ಕೆ ದಿಟ
).
ಇಲ್ಲೀಗ ಸ್ಪಿಂಗ್..! ಇದು ಸುರುಳಿ-ತಂತಿಯಲ್ಲ, ನಂಮ ವಸಂತ ರುತಿವಿಗೆ ಸಮನಾದ ಕಾಲವೆಂತೆ. ಎಂತಹ ವೆದರ್ರು ಎಂದು ಇಲ್ಲಿ ಮಂದಿ ಗಳಿಗೆಗೊಮ್ಮೆ ಕೇಳಿಕೊಂಡು ನಲೀತಾರೆ. ಅದಕ್ಕೆ ಇಲ್ಲಿ ಶೂದ್ರಕನ ಮೃಚ್ಛಕಟಿಕದ ವಸಂತೋತ್ಸವದಂತ ಉತುಸವ.
ಬೇ ಏರಿ-ಯದ ಗ್ರುಹಸ್ತ ಮಂದಿ, ಏನಪ್ಪ ಅಂದುಕೊಳ್ಳಬೋದು.. ಸ್ವಾಮಿ ಒಮ್ಮೆ ನಿಂಮ ಸನ್-ಪ್ರಾನ್‌ಸಿಸ್ಕೋದ ಒಂದು ಹಾಸ್ಟೆಲ್ಲಿನಲ್ಲೋ, ಹೋಟೆಲ್ಲಿನಲ್ಲೋ ಇದ್ದು ನೋಡಿ, ನಾನಿರುವ ಹೋಟೆಲ್ ತುಂಬ ಹುಡುಗಹುಡುಗಿಯರೇ. ಸಂಜೆಯಾಯ್ತು ಆಂದ್ರೆ ಈಜುಕೊಳದ ಹತ್ರ ಕಣ್ಣುಕೋರಯಿಸುವ ಕಾಣುಪುಗಳು.. ಕ್ರಿಶ್ಣಕ್ರಿಶ್ಣ. ಈ ಕಂನಡಿಗನ ಕಾಮಪರೀಕ್ಶೆಯೋ ಎಂದು ನಾನು ಆಸ್ತಿಕನಾಗಿದ್ರೆ ಅಂದುಕೊಳ್ಳುತ್ತಿದ್ದೆನೇನೋ.
ನನ್ನ ಹೊಟೆಲಿನ ಮುಂದಿನ ಮಾಲ್‌ಅಲ್ಲಿ ಕಾಪಿಕುಡಿಯಕ್ಕೆ ಸ್ಟಾರ್‍ಬಕ್ಸ್‌ಗೋ, ಒಂದು ಕಿತ್ತಳೆಪಾನಕ ಕುಡಿಯಣ ಅಂತ ಜಾಂಬಾ ಜ್ಯೂಸಿಗೋ, ಹೋದ್ರೆ ಸಾಕ್ ಪುಣ್ಯವಂತರ-ಕಣ್ಣು-ಹೊರ್‍ಟು ಹೋಗೋ ನೋಟಗಳು.. ಸದ್ಯ ನನ್ ಪುಣ್ಯ ತಕ್ಕ ಮಟ್ಟಿನ ಪಾಪಿ ನಾನು. ![]()
ನಾನು ಅಮೆರಿಕೆಗೆ ಬಂದುದು ಇದು ಮೂರನೇ ಸಲ. ನಾನಿರುವ ಕಂಪೆನಿಗೆ ವರ್ಶಕ್ಕೊಂಮೆ ಹೀಗೆ ತುರಿತುಪಾಡಾಳು( ಪಾಜೆಸ್ಟ್ ಎಕ್ಕುಟ್ಟು ಹೋಗಿ, ರಿಲೀಸ್ ಟಯಿಂಮು ಎರಡು ಮೂರು ಸರತಿ ಮುಂದಕ್ಕೆ ಹೋಗಿ, ಮೇಲಿನವರು ನಂಮ ಮ್ಯಾನೆಜರುಗಳಂನು ಸಕ್ಕತ್ ಜಾಡಿಸಿದಾಗ ). ಮೊದಲ ಸರತಿ ಬಂದಾಗ ಏನು ಚಂದ ಅಂನಿಸಿತ್ತು. ಎರಡನೆ ಸರತಿ ಪರವಾ ಇಲ್ಲ.. ಈಗ ಯಾಕಾದ್ರು ಈ ಕೆಲಸಕ್ಕೆ ಸಿಕ್ಕಿ ಹಾಕಿಕೊಂಡನಪ್ಪ! ನಂನ ಕೆಲಸ ಏನಿದ್ರೂ ಮೂರುವಾರ/ಒಂದು ತಿಂಗಳಿದ್ದು ಇರುವ ಯಾರೂ ಮುಟ್ಟದ ಬಗ್-ಗಳಂನು ಪಿಕ್ಸಿ ವಾಪಸ್ಸಾಗೋದು.
ಈ ಬಾರಿ ಬಂದ ಮೊದಲನೇ ವೀಕೇಂಡು ಹೊಟ್ಟೆಬೇನೆಯಿಂದ ಹಾಳಾಯ್ತು.. ಹಾಳು ಸಿಂಗಾಪುರ ಎಲರುಪಟ್ಟೆಯ ಬಾನ-ತೇರಿನ ಬಾನಹೆಣ್ಣುಗಳು ಅದೇನು ತಿಂನಿಸಿ ಕುಡಿಸಿದರೋ..!!
ಎರಡನೇ ವೀಕೆಂಡಿಗೆ ಸಕ್ಕತ್ ತಯಾರಾಗಿ ಯೊಸಿಮೀಟಿಬೆಟ್ಟ ಮತ್ತು ಸಾನ್ ಪ್ರಾನ್‌ಸಿಸ್ಕೊ ಹೊಳಲು ಸುತ್ತಿ ಬಂದೆವು.
ಸನ್ ಪ್ರಾನ್‌ಸಿಸ್ಕೋದ ಇನಿಇರುಳ ಮಜವಂನು ಒಂದು ಕುಣಿವಟ್ಟಿ/ಡ್ಯಾನ್ಸ್‌ಕ್ಲಬಲ್ಲಿ ಸವಿದಾಯ್ತು. ಮೊದಲೆ ನನಗೆ ಕುಣಿತವೆಂದ್ರೆ ಸಕ್ಕತ್ ಇಶ್ಟ.. ಅಲ್ಲಿ ಒಬ್ಬ ಗಿಟಾರ್ ಎಶ್ಟು ಚನ್ನಾಗಿ ನುಡಿಸಿದ ಅಂದ್ರೆ ಅಬ್ಬ... ನೋಡ್ತಿದ್ದವರು, ಕೇಳ್ತಿದ್ದವರು, ಕುಣಿಯಲು ನಾಚಿಕೆಪಡುವವರು, ಹೇಸಿಗೆ ಪಡುವವರು ಎಲ್ರೂ ಎದ್ದು ತಕತಕ ಅಂತ ಕುಣೀಬೇಕು ಹಂಗೆ ನುಡಿಸಿದ. ಬಳಿಕ ಮೂವರು ಅರುಚುವೆಣ್ಣುಗಳು ಬಂದ್ರು; ಇವರ ಹಾಡು ಅಂದ್ರೆ ನನಗೆ ಅರಿಯಲಾರದಂತೆ ಇಂಗ್ಲೀಶ್ ಸಾಲುಗಳನ್ನು ಹಿಮ್ಮೇಳಕ್ಕೆ ತಕ್ಕಂತೆ ಯಾವುದೋ ಹದದಲ್ಲಿ ಕಿರುಚುವುದು, ಅರಚುವುದು. ಎಶ್ಟ ಚಂನಾಗಿ ಅರಚಿದ್ರು ಸಕ್ಕತ್!!.. ಆ ಗಿಟಾರ್ ಸಂಗೀತಕ್ಕಿಂತ ಇದು ಇನ್ನೂ ಒಂದುಕಯ್ ಮೇಲು. ಇವರ ಈ ಹಾಡಿಗಂತೂ ಇಡೀ ಕಟ್ಟಡವೇ ಜಿಗಿಜಿಗಿದು ಕುಣಿದಿತ್ತು.
ಈ ವೀಕು ಮತ್ತು ಕಳೆದ ವೀಕು ನಂನ ಕಡೆಯ ಮೀಕುಗಳು ಇಲ್ಲಿ. ಅದಕ್ಕೆ ಒಂದೊಂದು ದಿನ ಒಬ್ಬರ ಜೊತೆ ಲಂಚ್ಗೆ ಡಿಂನರ್‍ಗೆ ಹೋಗೋದು. ಅಲ್ಲಿ ಬಲು ಇಂಟರೆಸ್ಟಿಂಗ್ ಮಾತುಕತೆ ಇರ್ತದೆ.. ಅದನ್ನ ಮುಂದೆ ಬರೆಯಣ...
ಬೆಂಗಳೂರಿಗೆ ವಾಪಸ್ ಬಂದಾಗ ಏನಾರ ಹೆಚ್ಚು ಡುಮ್ಮ ಆಗಿದ್ರೆ, ಅದಕ್ಕೆ ನಾನು ಹೊಣೆಯಲ್ಲ.. ನಾನು ತಿಂತಿರುವ ತಿಂಡಿಗಳು ಹೊಣೆ! ![]()

- mahesha ರವರ ಬ್ಲಾಗ್
- Login or register to post comments
- 734 hits
- Email this blog





RSS:
ಪ್ರತಿಕ್ರಿಯೆಗಳು
ಉ: ಅಮೆರಿಕ ಅಮೆರಿಕ ಅಮೆರಿಕ
ಏ ಏನ್ಗುರು, ಕೇಮಿಲ್ಲ ತಗಿ ನಿಂಗೆ. ಇಲ್ಲೆಲ್ಲ ಮಏಸಣ್ಣನ್ ಛಾನ್ಸೋ ಛಾನ್ಸು ಅಂತ ವಟ್ಟೆ ಉರ್ಕತವ್ರೆ, ನೀನ್ನೋಡಿದ್ರೆ ಊರ್ಗೇ ಬತ್ತೀನಿ ಅಂತೀಯ. ಬೋ ಸಂದಾಗಿ ಬರ್ದಿದೀಯ ಅಲ್ಲಿ ನಡ್ದಿದ್ದ. ಮಂತೆ ಏಜಾಗಿದ್ರೆ ಮದ್ವೆ ಮಾಡ್ಕಳದಪ್ಪ, ಅಪ್ಪ ಅಮ್ಮ ಏಳ್ತವ್ರೆ, ಅಜ್ಜಿ ಅಜ್ಜ ಯೋಚ್ನೆ ಮಾಡ್ತವ್ರೆ ಅನ್ನದೆಲ್ಲ ನೆವ ಬುಡು.
. ಏನಂತಿ?
"ಏರಿದವನು ಚಿಕ್ಕವನಿರಬೇಕು"
ಉ: ಅಮೆರಿಕ ಅಮೆರಿಕ ಅಮೆರಿಕ
ಬರೊಬ್ಬರ್ರಿ ಹೇಳೀರಿ ನೀವ್....!
ನಂಗೆ ಕೇಮೆ ಅಯ್ತೆ ಬುದ್ದಿ... ನಾನು ಬದುಕ್ತಾ ಇದ್ದೀನಿ.. ಹಾಯಾಗಿ.. ಇದೇ ನನ್ ಕೇಮೆ..!!
"ಯಾರವರ್ ದೂರ್ತರ್ ಎನ್ ಪಾಡಂ ಪಾರಿ ಪೊಟ್ಟಿಯಂ ಉರಿದುಕೊಳ್ವರ್.. !!" ಅಂತ ನಾನೆಂದು ಹೇಳಲ್ಲ..
ವಟ್ಟೆ-ಉರ್‍ಕೊಳ್ಳೋರ್ ಹೊಟ್ಗೆ ನೂರ್‍ಕಾಲ ಉರೀತಾ ಇರ್ಲಿ!
"ಮಂತೆ ಏಜಾಗಿದ್ರೆ ಮದ್ವೆ ಮಾಡ್ಕಳದಪ್ಪ, ಅಪ್ಪ ಅಮ್ಮ ಏಳ್ತವ್ರೆ, ಅಜ್ಜಿ ಅಜ್ಜ ಯೋಚ್ನೆ ಮಾಡ್ತವ್ರೆ ಅನ್ನದೆಲ್ಲ ನೆವ ಬುಡು."
ಏನೋ ದೊಡ್ಡಬುದ್ದಿಯೋರು, ಮದ್ವೆ-ಮುಂಜಿ ಮಕ್ಕಳುಗಳ ಅನುವವ ಇರಾರು ಹೇಳಿದ್ದು ಇಲ್ಲ ಅನ್ನಾಕ್ ಆಯ್ತದ ಸಾಮಿಯೋರೆ!
ಮುಂದಿನ್ನೂ ಮದ್ವೆ ಪುರಾಣ ಅಯ್ತೆ.. ಕಾಯ್ತಿರಿ ಬರೆದೇನು...
ನಾಂ ಬರೆದುದು ಸಂದಾಕ್ ಅಯ್ತೆ ಅಂದ್ರಲ್ಲ, ಅದಕ್ಕೆ ನಂಗೆ ಬಲ್ ಸಂತೋಸ! ನಂನಿ.
=====================================
ಮಾಯ್ಸ!
ಉ: ಅಮೆರಿಕ ಅಮೆರಿಕ ಅಮೆರಿಕ
ಏ ಅದೇನ್ಕಪ್ಪ ಅಂಗಂದಿ? ನಿಮ್ಬೆ ಕೇಮೆ ಅಯ್ತೆ ಅನ್ನದು ನಂಗೂ ಗೊತ್ತಯ್ತೆ. ಅಂಗೂ ಒಂದೊಂದಪ ಮಾತಿನ್ ವರ್ಸೆಗೆ ಬಿದ್ದು ಅಂಗನ್ನದು. ಅದ್ನ ದಿಟ ಅನ್ಕಬ್ಯಾಡಿ. ಮದ್ವೆ ಅಯ್ತೆ ಅನ್ನದ ಕೇಳಿ ಆಲು ತುಪ್ಪ ಉಂಡಂಗಾತು ಕಪ್ಪ. ಬಿರ್ನೆ ಮದಿವ್ಯಾಗಿ ಗಂಡ ಎಡ್ತಿ, ಮಕ್ಳು ಎಲ್ಲ ಪಾಡಾಗಿರಿ. ಊಂ, ನಿಜ್ಕೂ ಸಂತೋಸಾನೇ ನೀವ್ಬರ್ದಿದ್ದು ಓದಿ, ಸುಮ್ಗೆ ಅಕ್ಲಾಸುಕ್ಕೆ ಅಂಗೆ ಏಳಿದ್ದಲ್ಲ.
ಯಾರು ಎಂಗನ್ನ ಮಾಡ್ಲಿ ಕಪ್ಪ, ಕಂಡೋರ ಒಟ್ಟೆ ಉರೀಲಿ ಅಂತಾ ಆರೈಸಬಾಡ್ದು. ಅದ್ರಿಂದ ನಮ್ಗೂ ಕೆಟ್ದಾಯ್ತತೆ. ಮಂತೆ ಉಳ್ದ ವಿಸ್ಯ ಎಲ್ಲ ಬಿರ್ನೆ ಬರ್ದು ಆಕಪ್ಪ. ಓದಿ ಕುಸಿ ಪಡನ. ಜತ್ಗೆ ಅಲ್ಲಿ ಆ ದೇಸದ ಪೋಟೋ ಗೀಟೋ ಎಲ್ಲ ಸೇರ್ಸಿ ಆಕಿದ್ರೆ ವೈನ. ಮಂತೆ ಉಸಾರ್ ಕಪ್ಪ, ಆ ದೇಸ್ಚಾಗೆ ಮೋಯಿನೀರ ಕಾಟ ಬಾಳ ಅಂತ ಏಳ್ತರೆ. ಕುಡ್ಚ ನೀರು ಕುಲುಕ್ಚಂಗೆ ಬಾ ಕಪ್ಪ. ಸಿವ ಎಲ್ಲ ವಳ್ಳೇದು ಮಾಡ್ಳಿ. ಬತ್ತೀನಿ.
"ಏರಿದವನು ಚಿಕ್ಕವನಿರಬೇಕು"