November 20, 2008 - 7:34pm
ಪ್ರಮಾಣ ಹೊಂದಿಸಿಕೊಳ್ಳಿರಿ
೧) ನಾಲ್ಕು ತೊಳೆದ ಆಲುಗೆಡ್ಡೆಗಳನ್ನು ಹುಳಿಗೆ ಹೋಳುಗಳನ್ನಾಗಿ ಹೆಚ್ಚಿರಿ. [ ಸಿಪ್ಪೆ ತೆಗೆಯದೇ ]
೨ಅ) ತೊಳೆದ ರಾಜೀರುಳ್ಳಿಯ ಸಿಪ್ಪೆ ಸುಲಿದು ಇಟ್ಟುಕೊಳ್ಳಿರಿ. ಒಂದು ಆಲೂಗೆಡ್ಡೆಗೆ ಆರು ಈರುಳ್ಳಿಯಂತೆ ನಾಲ್ಕು ಗುಣಿಸು ಆರು, ಒಟ್ಟು ೨೪ ಈರುಳ್ಳಿಗಳು.
೨ಆ) ದೊಡ್ಡ ಈರುಳ್ಳಿಯಾದರೆ ತೊಳೆದ ನಾಲ್ಕು ಈರುಳ್ಳಿಗಳನ್ನು ಸಿಪ್ಪೆ ಸುಲಿದು ಹುಳಿಯ ಹೋಳುಗಳನ್ನಾಗಿ ಹೆಚ್ಚರಿ.
೩) ಅರ್ಧ ಚಟಾಕು ಬೇಳೆಯನ್ನು ತೊಳೆದುಕೊಳ್ಳಿ.
೪) ಆಲುಗೆಡ್ಡೆ, ಈರುಳ್ಳಿ ಮತ್ತು ಬೇಳೆಗಳನ್ನು ಒಟ್ಟಿಗೆ ಕುಕ್ಕರಿನಲ್ಲಿ ಎರಡು ದೊಡ್ಡಲೋಟ ನೀರುಹಾಕಿ ಬೇಯಿಸಿರಿ
೫) ಕುಕ್ಕರ್ ಆರಿದ ಬಳಿಕ ಆಲುಗೆಡ್ಡೆ, ಈರುಳ್ಳಿ, ಬೇಳೆಯಿರುವ ಬಟ್ಟಲನ್ನು ಹಚ್ಚಿದ ಒಲೆಯ ಮೇಲಿಡಿ.[ ತುಸು ಕುದಿಯುವಂತೆ]
೬ಅ) ಉಪ್ಪು[ರುಚಿಗೆ ತಕ್ಕಷ್ಟು] ಹಾಕಿ, ಹುಳಿಪುಡಿ[ MTR ಮುಂತಾದ ಸಾಂಬಾರ್ ಪುಡಿ ]ಯನ್ನು ರುಚಿಗೆ ತಕ್ಕಷ್ಟು ಹಾಕಿ. ( ರುಚಿಗೆ ತಕ್ಕಷ್ಟು ಎಷ್ಟು ಎಂಬುದನ್ನು ಕುದಿಯುತ್ತಿರುವ ಹುಳಿಯನ್ನು ಒಂದು ಚಮಚ ಕುಡಿದು ಪತ್ತೆ ಮಾಡಬಹುದು], ಚೂರು ಬೆಲ್ಲ, ಹುಣಸೇ ಹಣ್ಣು ಹಿಂಡಿ, ತುಸು ತೊಳಸುತ್ತಾ ಕುದಿಸಿರಿ
೬ಆ)ತೆಂಗಿನಕಾಯಿ ಇದ್ದರೆ, ಕಾಯಿ, ಉಪ್ಪು, ಹುಳಿಪುಡಿ,ಬೆಲ್ಲ, ಹುಣಸೇಹಣ್ಣು ಇಷ್ಟನ್ನು ರುಬ್ಬಿ ಹಾಕಬಹುದಂತೆ[ ಇದನ್ನು ನಾನು ಮಾಡಿಲ್ಲ], ತುಸು ತೊಳಸುತ್ತಾ ಕುದಿಸಿರಿ
೭) ಪಕ್ಕದ ಒಲೆಯಲ್ಲಿ ಇಲ್ಲವೇ, ಕುದಿಯುತ್ತಿರುವ ಹುಳಿಯನ್ನು ಇಳಿಸಿ, ಒಂದು ಸಣ್ಣ ಬಾಂಡಲಿ/ದೊಡ್ಡ ಸೌಟಿಗೆ ಸ್ವಲ್ಪ ಎಣ್ಣೆ ಹಾಕಿ ಕಾಯಿಸಿರಿ
೮) ಕಾದ ಎಣ್ಣೆಗೆ ಸ್ವಲ್ಪ ಸಾಸಿವೆ, ಎರಡು ಮುರಿದ ಒಣಮೆಣಸಿನ ಕಾಯಿ, ಚೂರು ಇಂಗು ಹಾಕಿ
೯) ಆ ಒಗ್ಗರಣೆಯನ್ನು ಹುಳಿಗೆ ಹಾಕಿ ಕಲಿಸಿ.
ಮುಕ್ತಾಯ.
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:

ಪ್ರತಿಕ್ರಿಯೆಗಳು
ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು