ಹಳಗನ್ನಡ ಸಾಹಿತ್ಯವೆಂದರೆ ಬರಿ ಅನುವಾದ?
ಕನ್ನಡಕ್ಕೆ ಶಾಸ್ತ್ರೀಯಭಾಷಾಸ್ಥಾನಮಾನ ಸಿಕ್ಕಬೇಕೆಂದು ನಾವೆಲ್ಲ ಕನ್ನಡಿಗರ ಹೆಬ್ಬಯಕೆ.
ಈ ಎಲ್ಲ ಹೆಬ್ಬಯಕೆ ಮೊಳಕೆಯಿಟ್ಟಿದ್ದು ತಮಿಳನ್ನು ಶಾಸ್ತ್ರೀಯಭಾಷಾಸ್ಥಾನಕ್ಕೆ ಕೇಂದ್ರ ಸರಕಾರವು ಅಲಂಕರಿಸಿಸಿದ ನಂತರ.
ತಮಿಳು ಈ ಒಂದು ಮೆಟ್ಟಿಲೇರಿ, ಇನ್ನೇನು ತಮಿಳು ಸಿಂಗಪುರ, ಮಲಯೇಷಿಯಾ ಮತ್ತು ತೆಂಗಣಾಫ್ರಿಕಾ ದೇಶಗಳಿಂದಲೂ, UNESCO ಬಾಗಿಲು ತಟ್ಟಿ, ಅಲ್ಲಿಯೂ "classical langauge" ಅನ್ನಿಸಿಕೊಳ್ಳಲು ತಯಾರಾಗಿದೆ. ಅದೂ ಆಯಿತೆಂದರೆ ಅಲ್ಲಿ ತಮಿಳು ಗ್ರೀಕ್, ಲ್ಯಾಟಿನ್ ಮೊದಲಾದ ಹಳೆಯ ಶಾಸ್ತ್ರೀಯ ಮಟ್ಟವನ್ನು ಪಡೆಯುವುದು.
ತಮಿಳಿಗೆ ಆ ಸ್ಥಾನ ತರಲು ನೆರವಾದುದು George L. Hart, Professor of Tamil, Chair in Tamil Studies, University of California Berkeley ಅವರು ಬರೆದ ಈ ಸ್ಟೇಟ್ಮೆಂಟು
ಈಗ ನಮ್ಮ ಕನ್ನಡದ ಕತೆಗೆ ಬರೋಣ.
ಕನ್ನಡವೂ "ಶಾಸ್ತ್ರೀಯ ಭಾಷಾ" ಆಗ ಬೇಕಾದರೆ...
To qualify as a classical tradition, a language must fit several criteria:
1. it should be ancient,
2. it should be an independent tradition that arose mostly on its own not as an offshoot of another tradition,
3. it must have a large and extremely rich body of ancient literature.
ಕನ್ನಡಕ್ಕೆ ೧ ಮತ್ತು ೩ನೇ ಷರತ್ತಿನಲ್ಲಿ ಯಾವ ಭಾದೆ ಇಲ್ಲ. ಆದರೆ ಕನ್ನಡಕ್ಕೆ ಅಡ್ಡಿಯಿರುವ ಷರತ್ತು ೨ನೆಯದಂತೆ.
ಅಂದರೆ ಕನ್ನಡಕ್ಕೆ ಸ್ವತಂತ್ರವಾದ ಸಾಹಿತ್ಯ ಪರಂಪರೆ ಇಲ್ಲ. ಹಳಗನ್ನಡ ಎಲ್ಲ ಕೃತಿಗಳು ಅನುವಾದಗಳು ಇಲ್ಲವೇ, ಇನ್ನೊಂದು ಸಾಹಿತ್ಯ ಪರಂಪರೆಯ ಪ್ರಭಾವದಿಂದ ಆದವು.
ಕವಿರಾಜಮಾರ್ಗವೂ ಕೂಡ ಒಂದು ಪ್ರಭಾವಿತ ಕೃತಿ. ಏಕೆಂದರೆ ಅದು ಸಂಸ್ಕೃತ ಛಂದಸ್ಸು, ಅಲಂಕಾರ ಮುಂತಾದ ಸಂಸ್ಕೃತ ಸಾಹಿತ್ಯ ಪರಂಪರೆಯನ್ನು ಅನುಸರಿಸುವುದಂತೆ.
ಹೀಗೆ ವಡ್ಡಾರಾದನೆ, ಆದಿಪುರಾಣಗಳೂ ಕೂಡ ಅಂತೆ.
ಆದುದರಿಂದ ಕನ್ನಡ, ಸಂಸ್ಕೃತ ಸಾಹಿತ್ಯ ಪರಂಪರೆಯ ಕವಲು ಅಂತ ವಾದವಿದೆಯಂತೆ. ಇದೇ ವಾದವನ್ನು ತೆಲುಗಿಗೂ ಹೇಳಿದ್ದಾರೆ.
ಹಳಕನ್ನಡದಲ್ಲಿ ಕನ್ನಡದ್ದೇ ಆದ ಕಾವ್ಯ ಶೈಲಿಯಲ್ಲಿ, ಸ್ವತಂತ್ರವಾದ ವಿಷಯದ ಮೇಲೆ ಬರೆದ ಕೃತಿ ಇಲ್ಲವೇ ಇಲ್ಲವೇ?

- mahesha ರವರ ಬ್ಲಾಗ್
- Login or register to post comments
- 727 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಯಾಕಿಲ್ಲ ...ಇದೆ
ಚಾಮರಸನ 'ಪ್ರಭುಲಿಂಗಲೀಲೆ' ನಮ್ಮ ಸ್ವಂತ ಕನ್ನಡದ್ದು. ಈ ಹಿಂದೆ ಇಲ್ಲಿ ಬ್ಲಾಗಿದ್ದೆ. ಇದನ್ನು ತೆಲುಗು, ಮರಾಟಿಗೆ ಅನುವಾದ ಮಾಡಲಾಗಿದೆ.
ಪ್ರಭುಲಿಂಗಲೀಲೆ
ಇದರ ಛಂದಸ್ಸು ಯಾವುದು?ಇದು ಯಾವುದಾದರು ಮೊದಲೇ ಸಂಸ್ಕೃತದಲ್ಲಿ ಬಳಕೆಯಾದ ಛಂದಸ್ಸು, ಕಾವ್ಯ ಶೈಲಿ ಬಳಸುವುದೇ?
ಇದು ಶಿವಪುರಾಣದ ಕತೆಯನ್ನು ಹೇಳುವುದೇ? ಇಲ್ಲವೇ ಪುರಾಣದ ಕತೆಗಳು, ಪಾತ್ರಗಳಿವೆಯೇ? ಇದಕ್ಕೂ ಮುನ್ನ ಇಂತಹ ಶೈವ ಕೃತಿ ಸಂಸ್ಕೃತದಲ್ಲಿ ಬಂದಿರಲಿಲ್ಲವೇ?
ಅಂದರೆ is it conceptually original?
ಚಾಮರಸ, ಕುಮಾರವ್ಯಾಸನ ಕಾಲದವನು, ಅಂದರೆ ನಡುಗನ್ನಡದ ಕಾಲ ತಾನೆ? ಆಗ ಹೆಚ್ಚು ಸಾಹಿತ್ಯ ವೈದಿಕ ಸಂಪ್ರದಾಯದಂತೆ, ಅಂದರೆ ಸಂಸ್ಕೃತದ ಪುರಾಣ, ರಾಮಾಯಣ, ಮಹಾಭಾರತವನ್ನು ಹಿನ್ನೆಲೆಯಲ್ಲಿ ಇಟ್ಟು ಆದವು ಎಂದು ತಿಳಿವು.
’ಕಬ್ಬಿಗ ಕಾವನ್’ ಇದು ಕೂಡ ಕಾಮದಹನ ಕತೆ ಹೇಳುವುದು ಅಲ್ಲವೇ?
ನನಗೆ ತಿಳಿದಂತೆ "ರಗಳೆ" ಇದು ಕನ್ಡಡದ್ದೇ ಆದ ಕಾವ್ಯ ಶೈಲಿ.
ಕಬ್ಬಿಗರ ಕಾವನ್ ಮತ್ತು ಕಾಮದಹನ
@ಎಲ್ಲರಗೂ,
ನಾನು ಕಳೆದ ಮಂಗಳವಾರವಷ್ಟೇ "ಕಬ್ಬಿಗರ ಕಾವನ್" ಕಾವ್ಯವನ್ನು ಪೂರ್ಣವಾಗಿ ಓದಿದೆನು. "ಕಬ್ಬಿಗರ ಕಾವನ್" ಕಾವ್ಯದಲ್ಲಿ ಕಾಮದಹನದ ಕತೆ ಇಲ್ಲವೇ ಇಲ್ಲ. ಹಾಗೆಯೇ ಅದರಲ್ಲಿ ಬರುವ ಮನ್ಮಥ (ನನೆವಿಲ್ಲ, ನನೆಯಂಬ, ಅವನಿಗೆ ನನ್ನಿ ಎಂದೂ ಕರೆಯುತ್ತಾರೆ, ಹಾಗೆಯೇ ಅಲ್ಲಿರುವ ಪ್ರತಿಯೊಬ್ಬ ಪಾತ್ರಧಾರಿಯ ಹೆಸರೂ ಹೂವು, ಮರ ಇವುಗಳಿಗೆ ಸಂಬಂಧ ಪಟ್ಟಿರುತ್ತದೆ) ಸಾಯುವದೇ ಇಲ್ಲ. ಅವನಿಗೂ ಶಿವನಿಗೂ ಆಗುವ ಜಗಳವು ಬೇರೆ ರೀತಿಯದು.
ಕಬ್ಬಿಗರ ಕಾವನ್ ಕಾವ್ಯದಲ್ಲಿ, ವಿಶೇಷವಾಗಿ ಮನ್ಮಥನ ಲೀಲೆ ಇದ್ದರೂ, ಆ ಕಾವ್ಯದ ತಿರುಳಿರುವುದು "ಶಿವನು ಏಕೆ ಮತ್ತು ಹೇಗೆ ಅರ್ಧನಾರೀಶ್ವರನಾದ" ಎಂಬುದರಲ್ಲಿ. ಸಾಧ್ಯವಾದಾಗ ಇದರ ಬಗ್ಗೆ ಹೆಚ್ಚು ವಿವರಗಳನ್ನು ನೀಡುವೆ. ಅಂದ ಹಾಗೆ ನಿಮಗೆ ಯಾರಿಗಾದರೂ ಈ ಪುಸ್ತಕ ಬೇಕಿದ್ದರೆ, ನನ್ನ ಐ.ಡಿ.ಗೆ ಒಂದು ಮೇಯ್ಲ್ ಕಳುಹಿರಿ. ಕನ್ನಡ ಸಾಹಿತ್ಯ ಪರಿಷತ್ತಿನವರೂ ಇದನ್ನು ಕುವೆಂಪು ಶತಮಾನೋತ್ಸವದ ವರ್ಷ ಇದನ್ನು ಪ್ರಕಟಿಸಿದ್ದಾರೆ. Digital Library of India ಇಂಡಿಯಾದಲ್ಲಿಯೂ ಆ ಪುಸ್ತಕವಿದೆ. ನೇರವಾಗಿ ಅಲ್ಲಿಂದಲೇ ಓದಲು ಕೆಳಗಿನ ಕೊಂಡಿಗಳನ್ನು ನೆಗಳ್ಚಿ.
Interface 1,
Interface 2.
"ಶಿವನು ಏಕೆ ಮತ್ತು ಹೇಗೆ ಅರ್ಧನಾರೀಶ್ವರನಾದ"
ಧನ್ಯವಾದ,
ಇದು ಅದನ್ನು ಬರೆದವನ ಸ್ವಂತ ಆಲೋಚನೆಯೇ. ಇಲ್ಲವೇ ಆ ಕೃತಿಗೂ ಮುನ್ನ ಬೇರೆ ಭಾಷೆಯಲ್ಲಿ ""ಶಿವನು ಏಕೆ ಮತ್ತು ಹೇಗೆ ಅರ್ಧನಾರೀಶ್ವರನಾದ"" ಎನ್ನುವ ಸಂಗತಿಯ ಕುರಿತು ಬರೆದಿರುವ ಕೃತಿ ಇದೆಯೇ?
ಇದು ಆ ಬೇರೆ ಭಾಷೆಯ ಕೃತಿಯಿಂದ ವಿಷಯಗಳನ್ನು ಪಡೆದಿದ್ದರೆ, independent tradition ಆಗಲ್ಲ. ಕುಮಾರವ್ಯಾಸರು ಹೇಗೆ ಸಂಸ್ಕೃತದ ವ್ಯಾಸರ ಭಾರತವನ್ನು ಆಧಾರಿಸಿ "ಗದುಗಿನ ಭಾರತ" ಬರೆದನೋ, ಹಾಗೆ.
ನಾನು ಬಹಳಷ್ಟು ಕೃತಿಗಳನ್ನು ಹುಡುಕುತ್ತಿದ್ದೇನೆ.
Re: ಪ್ರಭುಲಿಂಗಲೀಲೆ---ಕನ್ನಡದ ಗರ್ವ
ಇದರ ಶೈಲಿ ಭಾಮಿನಿ ಷಟ್ಪದಿ...ಆದರೆ ಇಲ್ಲಿ ಅಲಂಕಾರಗಳಿಗೆ ಬೆಲೆ ಕೊಟ್ಟಿಲ್ಲ. ಆದರೆ ಮುಖ್ಯವಾದದ್ದು ಇಲ್ಲಿನ ಕಥಾವಸ್ತು ಸ್ವಂತ ಕನ್ನಡದ್ದೆ. ಈ ಕೃತಿಗೂ ಮೊದಲೆ ಬೇರೆ ಯಾರು ಈ ಕಥೆಯನ್ನು ಬೇರೆ ಭಾಷೆಯಲ್ಲಿ ಬರೆದಿಲ್ಲ.
ಇದನ್ನು ಸಂಸ್ಕೃತ, ತಮಿಳು, ತೆಲುಗು ಮತ್ತು ಮರಾಟಿಗೆ ಅನುವಾದಿಸಲಾಗಿದೆ. ಇತರ ಭಾಷೆಗಳ ಅನುವಾದಕರು ಇದು ಚಾಮರಸನು ಕನ್ನಡದಲ್ಲಿ ಬರೆದ ಕೃತಿಯ ಅನುವಾದ ಅಂತ ತಮ್ಮ ತಮ್ಮ ಕೃತಿಗಳಲ್ಲಿ ತಿಳಿಸಿದ್ದಾರೆ.
Re: ಪ್ರಭುಲಿಂಗಲೀಲೆ---ಕನ್ನಡದ ಗರ್ವ
ಪ್ರಭುಲಿಂಗಲೀಲೆಯ ವಸ್ತು ಏನು? ಅದು ಯಾವುದರ ಕುರಿತು ಬರೆದುದು?
"The 'Prabhulingaleele' of Chamarasa (1430 ) tells the story of Allama or Prabhudeva, a great mystic poet of the Basava age and leader in the Virasaiva movement"
ಅಂತ http://www.kamat.com/kalranga/kar/literature/epics.htm ಹೇಳುತ್ತದೆ.
ಭಾಮಿನಿ ಷಟ್ಪದಿಯಲ್ಲಿ ಬರೆದ ಜಗತ್ತಿನ ಮೊದಲ ಕೃತಿಯೇ?( ನನಗೆ ನಿಜವಾಗಲು ಇದು ತಿಳಿದಿಲ್ಲ
). ಅಂದರೆ ೧೪೩೦ಕ್ಕೆ ಮುಂಚೆ ಭಾಮಿನಿ ಷಟ್ಪದಿಯಲ್ಲಿ ಯಾವ ಕೃತಿಯೂ ಇರಲಿಲ್ಲವೇ?
ಇದೇ ಕಾರಣವನ್ನು ಮುಂದೊಡ್ಡಿ, ಕನ್ನಡಕ್ಕೆ independent literary tradition ಇಲ್ಲ ಅಂತ ವಾದ ಮಾಡುತ್ತಾ ಇದ್ದಾರೆ.
ಅವರ ವಾದದ ತಿರುಳು ಹೀಗಿದೆ.
೧) ಹಳಗನ್ನಡದಲ್ಲಿರುವ ಎಲ್ಲ ಕೃತಿಗಳು ವೈದಿಕ, ಇಲ್ಲವೇ ಜೈನ ಗ್ರಂಧಗಳನ್ನು ಅಂದರೆ, ಸಂಸ್ಕೃತ ಇಲ್ಲವೇ ಪ್ರಾಕೃತದ ಗ್ರಂಥದಿಂದ ವಿಷಯಗಳನ್ನು ತಗೆದು ಆದವು.
೨) ಸ್ವಂತವಿಷಯವಿದ್ದರೂ ಕಾವ್ಯ ಶೈಲಿ, ಸ್ವಂತದ್ದಲ್ಲ. ಕಾವ್ಯಶೈಲಿ ಸಂಸ್ಕೃತ ಇಲ್ಲವೇ ಪ್ರಾಕೃತ ಛಂದೋಭದ್ಧ ಶೈಲಿಯಲ್ಲಿವೆ. ಅಂದರೇ ಸಂಸ್ಕೃತ/ಪ್ರಾಕೃತದ ಛಂದಸ್ಸಿನಿನ ಗ್ರಂಥಗಳು ಹೇಳುವ ಶೈಲಿಗಳು, ಇದರಲ್ಲಿ ತ್ರಿಪದಿ, ಷಟ್ಪದಿ, ಚಂಪೂ, ಮುಂದಾವು ಇದೆ,.
ಅಂದರೆ ನಾವು ಹುಡುಕುತ್ತಿರುವ ಕೃತಿ
೧) conceptually independent. ವಿಷಯವಸ್ತುವಿನಿಂದ ಸ್ವತಂತ್ರ. ಅದರಲ್ಲಿ ಏನೂ ಬೇರೆ ಭಾಷೆಯ ಕೃತಿಯಿಂದ ಬಂದಿಲ್ಲ, ಅದರ ಪ್ರಭಾವವಿಲ್ಲ.
೨)Independent tradition. ಶೈಲಿಯಲ್ಲಿ ಸ್ವತಂತ್ರ. ಅಂದರೆ ಕಾವ್ಯದ ಶೈಲಿ, ಬೇರೆ ಯಾವ ಭಾಷೆಯ ಶೈಲಿಯ ಅನುಕರಣೆಯಲ್ಲ.
ಕನ್ನಡದ Independent tradition ಅಂದರೆ ಅದು ’ರಗಳೆ’ ಎನ್ನುವ ಕಾವ್ಯಶೈಲಿ ಅಂತೆ. ಈ ರಗಳೆ ಶೈಲಿಯಲ್ಲಿ ಬರೆದ ಕಾವ್ಯಗಳಲ್ಲಿ ಸ್ವತಂತ್ರವಿಷಯದ ಮೇಲಿನ ಕೃತಿ ಹುಡುಕಬೇಕು.
ಉತ್ತರ: ಪ್ರಭುಲಿಂಗಲೀಲೆ---ಕನ್ನಡದ ಗರ್ವ
ಕನ್ನಡದಲ್ಲಿ ಸ್ವತಂತ್ರ ಕೃತಿಗಳು ಇವೆ ಎಂಬುದಕ್ಕೆ ವಚನಗಳು ಅತ್ಯುತ್ತಮ ಸಾಕ್ಷಿಗಳಾಗಿವೆ. ವಚನಗಳು ಯಾವುದೇ ಅನ್ಯಭಾಷೆಯ ಪ್ರಭಾವಗಳಿನಂದಾಗಿಲ್ಲ. ಅವು ಸ್ವಂತ ಜೀವನಾನುಭವಗಳಿಂದ ಬಂದುವು.. ಅದಕ್ಕಾಗಿಯೇ ಅಲ್ಲವೇ ಬಸವಾದಿ ಶರಣರು "ಅನುಭವ ಮಂಟಪ"ವನ್ನು ನಿರ್ಮಿಸಿದ್ದು. ಅಲ್ಲಿ ವಚನ ಸಾಹಿತ್ಯದ ಮರ್ಜವೇ ಆಗುತ್ತಿತ್ತು... ಹೀಗೆ ಸೃಷ್ಟಿಸಿದ ವಚನಗಳು ಸರ್ವ ಸ್ವತಂತ್ರವಾಗಿವೆ.... ವಚನಗಳು ಆಗಲೇ ಅತಿಯಾಗಿ ಬಳಕೆಯಲ್ಲಿದ್ದ ಸಂಸ್ಕೃತದ ಪದಗಳನ್ನು ಒಳಗೊಂಡಿವೆಯಂಬುದನ್ನು ಬಿಟ್ಟರೆ ಉಳಿದುದೆಲ್ಲ ಕನ್ನಡದಲ್ಲೇ ರಚಿತಗೊಂಡ ಸ್ವತಂತ್ರ ಕೃತಿಗಳು. Dr. Rice ಅನ್ನೋ ಕನ್ನಡವನ್ನು ಅಭ್ಯಸಿಸಿದ ಪಾಶ್ಚಾತ್ಯರೊಬ್ಬರು ಪ್ರಥಮಬಾರಿಗೆ ಆಂಗ್ಲ ಭಾಷೆಯಲ್ಲಿ ಕನ್ನಡದ ಬಗ್ಗೆ ಬರೆದರು. ಆದರೆ ಕೊನೆಯಲ್ಲಿ ಬರೆದ ತಾತ್ಪರ್ಯ ಅಥವಾ ಸಾರಾಂಶದಲ್ಲಿ "ಕನ್ನಡ ಸ್ವತಂತ್ರವಲ್ಲದ" ಭಾಷೆಯಂದು ಬರೆದು ಬಿಟ್ಟರು.. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಹೋರಾಟ ಪ್ರಾರಂಭವಾದ ಆ ಕಾಲದಲ್ಲಿ ಇದರಿಂದ ಹಿನ್ನಡೆಯುಂಟಾಯಿತು. ಇದಕ್ಕೆ ಸವಿವರವಾಗಿ, ಡಾ|| ರೈಸ್ ಮಾಡಿದ ಆಪದನೆಗಳಿಗೆ ಡಾ|| ರಂ. ಶ್ರೀ. ಮುಗಳಿಯವರು ತಮ್ಮ ಧೀರ್ಘವಾದ "ಕನ್ನಡ ಸಾಹಿತ್ಯ ಚರಿತ್ರೆ" ಪುಸ್ತಕದಲ್ಲಿ ಬರೆದಿದ್ದಾರೆ. ಬೇಕಿದ್ದರೆ ಒಂದು ಸಾರಿ ಅದನ್ನು .. ಓದಿ... ಇದರಿಂದ ಹೆಚ್ಚು ಮಾಹಿತಿ ಹೊರಬೀಳಬಹುದು..
ಧನ್ಯವಾದಗಳೊಂದಿಗೆ,
ವಿನಾಯಕ ಖವಾಸಿ.
RBIN/ECD1 Mailto:Vinayak.Khavasi@in.bosch.com or Khavasi.Vinayak@boschrexroth.de
“ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುವುದು, ಕನ್ನಡಕ್ಕಾಗಿ ಧ್ವನಿ ಎತ್ತು, ಅಲ್ಲಿ ಪಾಂಚಜನ್ಯ ಮೊಳಗುವುದು.“
– ಕುವೆಂಪು.
ವಚನ
ಇದು ಹನ್ನೆರಡನೇ ಶತಮಾನ ಸಾಹಿತ್ಯ
ಇದನ್ನು ಪರಿಗಣಿಸಬಹುದು.
ಇದರ ಶೈಲಿ? ತ್ರಿಪದಿಗಳಿವೆ, ಅಂಕಿತದಿಂದ ಕೊನೆಗೊಳ್ಳುವುದು, ಶೈವ ಸಂಪ್ರದಾಯ. ಇವುಗಳ ಕುರಿತು ನೋಡಬೇಕು.
ಆದರೆ...
ನಮ್ಮ ಭಾರತ ಸರಕಾರ "ಶಾಸ್ತ್ರೀಯಭಾಷೆ" ಕನಿಷ್ಠ 1500 ವರುಷದ ಸಾಹಿತ್ಯ ಪರಂಪರೆ ಹೊಂದಿರಬೇಕು ಅನ್ನುತ್ತೆ.
Khavi ಅವರಿಗೆ ಧನ್ಯವಾದ!
ಮುಗಳಿ ಅವರ ಹೊತ್ತಗೆ ಓದ್ತೇನೆ ಬಿಡುವಾದಾಗ!
ಆದರೆ ಅದೇ ಸಾರ್ ಸಮಸ್ಯೆ ನಮ್ಮ ಭಾರತ ಸರಕಾರ ನಮ್ಮ ಕನ್ನಡದ ಪಂಡಿತರಿಗಿಂತ, ಹೊರಗಿನ ಪಡುವಣದ ಪಂಡಿತರನ್ನು ಹೆಚ್ಚು ನಂಬುವಂತಿದೆ. ತಮಿಳಿಗೆ ಹಾರ್ಠರ statement ದೊಡ್ಡ ಅಸ್ತ್ರವಾಯಿತು.
==========================================================
==========================================================
ಹೆಚ್ಚು ಜನ ನಂಬಿರುವುದೇ ಧರ್ಮ, ನ್ಯಾಯ, ಸತ್ಯ, ನೀತಿ, ಸಭ್ಯತೆ, ಸದಾಚಾರ, ಸರಿ!
ಉತ್ತರ: ಪ್ರಭುಲಿಂಗಲೀಲೆ---ಕನ್ನಡದ ಗರ್ವ
ಕನ್ನಡದಲ್ಲಿ ಸ್ವತಂತ್ರ ಕೃತಿಗಳು ಇವೆ ಎಂಬುದಕ್ಕೆ ವಚನಗಳು ಅತ್ಯುತ್ತಮ ಸಾಕ್ಷಿಗಳಾಗಿವೆ. ವಚನಗಳು ಯಾವುದೇ ಅನ್ಯಭಾಷೆಯ ಪ್ರಭಾವಗಳಿನಂದಾಗಿಲ್ಲ. ಅವು ಸ್ವಂತ ಜೀವನಾನುಭವಗಳಿಂದ ಬಂದುವು.. ಅದಕ್ಕಾಗಿಯೇ ಅಲ್ಲವೇ ಬಸವಾದಿ ಶರಣರು "ಅನುಭವ ಮಂಟಪ"ವನ್ನು ನಿರ್ಮಿಸಿದ್ದು. ಅಲ್ಲಿ ವಚನ ಸಾಹಿತ್ಯದ ಮರ್ಜವೇ ಆಗುತ್ತಿತ್ತು... ಹೀಗೆ ಸೃಷ್ಟಿಸಿದ ವಚನಗಳು ಸರ್ವ ಸ್ವತಂತ್ರವಾಗಿವೆ.... ವಚನಗಳು ಆಗಲೇ ಅತಿಯಾಗಿ ಬಳಕೆಯಲ್ಲಿದ್ದ ಸಂಸ್ಕೃತದ ಪದಗಳನ್ನು ಒಳಗೊಂಡಿವೆಯಂಬುದನ್ನು ಬಿಟ್ಟರೆ ಉಳಿದುದೆಲ್ಲ ಕನ್ನಡದಲ್ಲೇ ರಚಿತಗೊಂಡ ಸ್ವತಂತ್ರ ಕೃತಿಗಳು. Dr. Rice ಅನ್ನೋ ಕನ್ನಡವನ್ನು ಅಭ್ಯಸಿಸಿದ ಪಾಶ್ಚಾತ್ಯರೊಬ್ಬರು ಪ್ರಥಮಬಾರಿಗೆ ಆಂಗ್ಲ ಭಾಷೆಯಲ್ಲಿ ಕನ್ನಡದ ಬಗ್ಗೆ ಬರೆದರು. ಆದರೆ ಕೊನೆಯಲ್ಲಿ ಬರೆದ ತಾತ್ಪರ್ಯ ಅಥವಾ ಸಾರಾಂಶದಲ್ಲಿ "ಕನ್ನಡ ಸ್ವತಂತ್ರವಲ್ಲದ" ಭಾಷೆಯಂದು ಬರೆದು ಬಿಟ್ಟರು.. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಹೋರಾಟ ಪ್ರಾರಂಭವಾದ ಆ ಕಾಲದಲ್ಲಿ ಇದರಿಂದ ಹಿನ್ನಡೆಯುಂಟಾಯಿತು. ಇದಕ್ಕೆ ಸವಿವರವಾಗಿ, ಡಾ|| ರೈಸ್ ಮಾಡಿದ ಆಪದನೆಗಳಿಗೆ ಡಾ|| ರಂ. ಶ್ರೀ. ಮುಗಳಿಯವರು ತಮ್ಮ ಧೀರ್ಘವಾದ "ಕನ್ನಡ ಸಾಹಿತ್ಯ ಚರಿತ್ರೆ" ಪುಸ್ತಕದಲ್ಲಿ ಬರೆದಿದ್ದಾರೆ. ಬೇಕಿದ್ದರೆ ಒಂದು ಸಾರಿ ಅದನ್ನು .. ಓದಿ... ಇದರಿಂದ ಹೆಚ್ಚು ಮಾಹಿತಿ ಹೊರಬೀಳಬಹುದು..
ಧನ್ಯವಾದಗಳೊಂದಿಗೆ,
ವಿನಾಯಕ ಖವಾಸಿ.
RBIN/ECD1
Mailto:Vinayak.Khavasi@in.bosch.com or Khavasi.Vinayak@boschrexroth.de
“ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುವುದು,
ಕನ್ನಡಕ್ಕಾಗಿ ಧ್ವನಿ ಎತ್ತು, ಅಲ್ಲಿ ಪಾಂಚಜನ್ಯ ಮೊಳಗುವುದು.“
– ಕುವೆಂಪು.
Re: ಪ್ರಭುಲಿಂಗಲೀಲೆ---ಕನ್ನಡದ ಗರ್ವ
ಪ್ರಭುಲಿಂಗಲೀಲೆ ಖಂಡಿತವಾಗಿಯು conceptually independent. ಮೊದಲೆ ಹೇಳಿದಂತೆ ಇದರ ಕಥಾವಸ್ತು ಹೊಸದು. ಆದರೆ ಶೈಲಿಯು(ಛಂದಸ್ಸು) ಸಂಪೂರ್ಣವಾಗಿ ಹೊಸತು ಎಂದು ಹೇಳಲಾಗದು (ಅಂದರೆ ೧೦೦% indpendent traidtion ಅಲ್ಲ). ಆದರೂ ಕೆಳಗಿನ ಅಂಶಗಳನ್ನು ಗಮನಿಸಿ
೧) ಇದರಲ್ಲಿ ಬಹಳ ಅಚ್ಚ ಕನ್ನಡ ಪದಗಳನ್ನು ಬಳಸಲಾಗಿದೆ ಉದಾ: ಅಕ್ಕಜ - ಅಸೂಯೆ, ಅಚ್ಚುಗ - ಮೋಹ, ಇಕ್ಕೆ - ಸ್ಥಾನ, ಅಳಬಳ-ಶಕ್ತಿ, ಅಣ್ಣೆ-ಶುದ್ಧ. ಇತ್ಯಾದಿ
೨) ಗದುಗಿನ ಭಾರತಕ್ಕೆ ಸಂಸ್ಕೃತದ ಮಹಾಭಾರತ ಆಕರ ಕೃತಿ. ಇದಕ್ಕೆ ಯಾವ ಆಕರ ಕೃತಿಯಿಲ್ಲ. ಇದು ಸ್ವಂತ ಕಥಾವಸ್ತು ( ಇದೇ ಕಥಾವಸ್ತು ಕನ್ನಡದ ಇನ್ನೊಬ್ಬ ಕವಿ ಹರಿಹರದೇವನ 'ಪ್ರಭುದೇವರ ರಗಳೆ' ಕೃತಿಯಲ್ಲಿ ಕೂಡ ಇದೆ. ಆದರೆ ಇದೇ ಮೊದಲು ಎಂಬುದು ಹೇಳಿದರೂ ಕಥಾವಸ್ತುವಿನಲ್ಲಿ ಅಂತರವಿದೆ)
೩) ಪ್ರಭುಲಿಂಗಲೀಲೆಯ ವಿಶೇಷ ಇದರ ಸರಳತೆ ಮತ್ತು ಶ್ರವಣತೆ
೪) ಅನಗತ್ಯವಾಗಿ ಅಲಂಕಾರಗಳನ್ನು ಬಳಸಿಲ್ಲ. ಕಥಾಪ್ರವಾಹಕ್ಕೆ ಒತ್ತು ನೀಡಲಾಗಿದೆ.
೫) ಎಷ್ಟೊ ಬಳಕೆ ತಪ್ಪಿದ ಹಳಗನ್ನಡ ಶಬ್ದಗಳು ಇದರಲ್ಲಿ ಸಿಗುತ್ತವೆ.
೬) ಅಧ್ಯಾತ್ಮ ಮತ್ತು ತಾತ್ವಿಕ ವಿಚಾರಗಳ ಸರಳ, ಸುಲಭ ವಿವೇಚನೆ ಇಲ್ಲಿ ಸಿಗುತ್ತದಂತೆ.
ಹೆಚ್ಚಿನ ಓದಿಗೆ ಇಲ್ಲಿ ನೋಡಿ ೧, ೨
Re: ಪ್ರಭುಲಿಂಗಲೀಲೆ---ಕನ್ನಡದ ಗರ್ವ
ಧನ್ಯವಾದ!
ನಿಜವಾಗಲೂ ಓದಬೇಕಾದುದು.
"ಅಧ್ಯಾತ್ಮ ಮತ್ತು ತಾತ್ವಿಕ ವಿಚಾರಗಳ ಸರಳ, ಸುಲಭ ವಿವೇಚನೆ ಇಲ್ಲಿ ಸಿಗುತ್ತವೆ." ಇದೇ ವಚನಕಾರರ ಮಹಾಸಾಧನೆ. ಸಾಮಾನ್ಯರಿಗೂ, ಅವರ ಮಾತಾದ ಕನ್ನಡದಲ್ಲಿ ಇಂತಹ ಜ್ಞಾನಕೊಟ್ಟಿದ್ದು.
===================================================
===================================================
ಹೆಚ್ಚು ಜನ ನಂಬಿರುವುದೇ ಧರ್ಮ, ನ್ಯಾಯ, ಸತ್ಯ, ನೀತಿ, ಸಭ್ಯತೆ, ಸದಾಚಾರ, ಸರಿ!
ಲಿಂಗದೇವರು ಹಳೆಮನೆಯವರ ಹೊತ್ತಗೆ
classical language ಕುರಿತ ಲಿಂಗದೇವರು ಹಳೆಮನೆಯವರ "ಶಾಸ್ತ್ರೀಯ ಭಾಷಾ ಪರಿವೀಕ್ಷಣ....."(ಕನ್ನಡ ಸಾಹಿತ್ಯ ಪರಿಷತ್ತು ಹೊರತಂದಿದೆ) ಎನ್ನುವ ಹೊತ್ತಗೆ ಓದಿದೆನು.
ಅವರೂ ಕೂಡ ಕನ್ನಡಕ್ಕೆ "independent literary tradition" ಇದೇ ಎಂದು ಹೇಳುವುದು ಈಗಿರುವ ಮಾಹಿತಿಯಿಂದ ಆಗಲ್ಲ, ಎಂದು ಹೇಳಿದ್ದಾರೆ.
ಓದಿ ನೋಡಿರಿ
ಧನ್ಯವಾದ!