ಅಯ್ ಲವ್ ಯು
ಆ ಹುಡುಗಿ ಬಂದು
ನನಗೆ! ’ಅಯ್ ಲಯಿಕ್ ಯು,
ಅಯ್ ಲವ್ ಯು
ಯು ಆರ್ ಸೋ ನಯಿಸ್,
ಮಾಯ್ಸ!!’ ಎಂದಳು...
ಅಬ್ಬಾ!! ಎಲಾ ಹುಡುಗಿ
ಬಲು ಜಾಣೆ ನೀನು.
ನಿನ್ನೀ ಸಿಹಿಯುಲಿ ಕೇಳಿ
ಎನಗೆ ಮಾತು ಬರುತ್ತಿಲ್ಲ’
’ಕಾಳಿದಾಸನ ಶಕುಂತಲೆಯೋ
ಶೂದ್ರಕನ ವಸಂತಸೇನೆಯೋ
ಭಾಸನ ವಾಸವದತ್ತೆಯೋ
ನಾನು ಇವರಾರನ್ನೂ ನೋಡಿಲ್ಲ
ದಂಡಿ..................
.......ನಿನ್ನ ರೂಪಲಾವಣ್ಯ...
........................
...............ಮನಮೋಹಕ
..........................
..........................
.......ಅಪ್ಸರೆ.............
..........................
ಬ್ರಹ್ಮನ....................
...................ಸೃಷ್ಟಿ
.......................
......................
......................
.....................
.....................
.................ನಿನ್ನ ಕಣ್ಣು
.........................
........................
..........................
..................ಮೂಗು
.........................
...........................
........................
.....................ಬಾಯಿ
........................
........................
.......................
......................ಹಲ್ಲು
.........................
.........................
.........................
......................ವಸಡು
.........................
.........................
.........................
.......................ದವಡೆ
.........................
.........................
.........................
......................ಕೋರೆ
ಅಯ್ಯೋ ಕವಿ. ಸಾಕು. ಸಾಕು...( ತಲೆ ಚಚ್ಚಿಕೊಳ್ತಾ
)
ಬಲು ಬೋರು ನೀನು...
ಮಾತು ಬರುತ್ತಿಲ್ಲ ಎಂದು
ಸುಮ್ಮನಿದ್ರೆ ಎಶ್ಟು ಚಂದವಿತ್ತು
ಈಗ ನನಗೆ ಹೊತ್ತಾಯ್ತು
ನಿನ್ನ ಕಟ್ಟಿಕೊಂಡು
ಜೀವನವಿಡೀ ಕೊರೆತ ಕೇಳಲಾರೆ
ಟಾಟಾ ಬಾಯ್ ಟೆಕ್ ಕೇರ್!! ![]()

- mahesha ರವರ ಬ್ಲಾಗ್
- Login or register to post comments
- 941 hits
- Email this blog





RSS:
ಪ್ರತಿಕ್ರಿಯೆಗಳು
ಉ: ಅಯ್ ಲವ್ ಯು
"ನಿನ್ನೀ ಸಹಿಯುಲಿ ಕೇಳಿ"
ಸಿಹಿಯುಲಿ ಆಗ್ಬೇಕಿತ್ತೇನೋ ಅಲ್ವಾ? ಹಾಗೆಯೇ
"’ಕಾಳಿದಾಸನ ಶಾಕುಂತಲೆಯೋ"
ಶಕುಂತಲೆಯೋ
"ಏರಿದವನು ಚಿಕ್ಕವನಿರಬೇಕು"
ಉ: ಅಯ್ ಲವ್ ಯು
ಹವುದು
=====================================
ಮಾಯ್ಸ!
ಉ: ಅಯ್ ಲವ್ ಯು
ಇಂಡಿಯ ಹುಡ್ಗಿನಾ?
ಉ: ಅಯ್ ಲವ್ ಯು
ಹುಂ ರೀ..
ಅಶ್ಟೊಂದು ಇಂಗ್ಲೀಶ್ ಮಾತಾಡ್ತಾಳೆ ಅಂದ್ರೆ. ಆಕಿ ಕನ್ನಡದ್ ಹುಡುಗೀನೇ ಇರಬೇಕು..
ಕನ್ನಡ ಹುಡುಗೀರ್‌ಗೆ ಅದೇನೋ ಇಂಗ್ಲೀಶ್ ಹುಚ್ಚು.... ( ಅದೂ ಬರೀ ತಪ್ಪಿಂಗ್ಲೀಶು
)
=====================================
ಮಾಯ್ಸ!
ಉ: ಅಯ್ ಲವ್ ಯು
ಹಹ್ಹ, ಅಂತೂ ಈ ನೆಪ ಮಾಡಿಕೊಂಡು ಸಂಸ್ಕೃತ ಕವಿಗಳನ್ನೂ ಅಭಿಮಾನಿಗಳನ್ನೂ ಚೆನ್ನಾಗಿ ಕಿಚಾಯ್ಸಿದೀರಿ ಮಯೇಸ್
"ಏರಿದವನು ಚಿಕ್ಕವನಿರಬೇಕು"
ಉ: ಅಯ್ ಲವ್ ಯು
ಸಂಸ್ಕೃತದೋರಿಗೆ ಹೃದಯಾನೇ ಇಲ್ಲ..
ಸಂಸ್ಕೃತ ನೆತ್ತಿಗೆ ಏರಿದ್ರೆ.. ಹೃದಯ ಸತ್ ಹೋಗ್ತದೆ..
ಸಂಸ್ಕೃತ ಅನ್ನೋದು ನಿಮ್ಮ ಒಳ್ಳೆಯ ಮನಸ್ಸನ್ನು ಕೂಳ ಮಾಡ್ತದೆ...
ಸಂಸ್ಕೃತ ಒಂದು ಪ್ಯಾರಸಯ್ಟು.. ವಯ್ರಸ್ಸು,
.
.
.
.
.
.
.
ಹೀಗೆಲ್ಲ ಹೇಳಬೇಕು ಅನ್ನಿಸ್ತದೆ .. ಆದ್ರೆ ಹೇಳಲ್ಲ.. ಪಾಪಾ ಸಂಸ್ಕೃತದೋರಿಗೆ ಬೇಜಾರ್ ಆಗ್ತದೆ..
=====================================
ಮಾಯ್ಸ!
ಉ: ಅಯ್ ಲವ್ ಯು
ಅಣ್ಣ,
ಇದು ಯಾಕೋ ವಸಿ ಜಾಸ್ತಿನೇ ಆಯ್ತು ಕಣಣ್ಣ! ಇಂತ ಮಾತ್ಗುಳ್ನಾಡಿದ್ರೆ ನನ್ನಂತವ್ರೂ ನೊಂದ್ಕೋತೀವಿ. ಸಂಸ್ಕೃತ ಕಲ್ತರೂ ನಾನು ನನ್ನಂತವ್ರು ನಾವು ಕನ್ನಡ್ದವ್ರೇ ಅಂದ್ಕಂಡಿದೀವಿ. ಓಗ್ಲಿ ಬುಡಣ್ಣ, ನಮ್ಮಂತೋರೆಲ್ಲ ಇಲ್ಲಿದ್ರೆ ನಿಮ್ಗೆ ಇರ್ಸುಮುರ್ಸಾಯ್ತದೆ. ನಾವೇ ಜಾಗಬುಟ್ಟೋಯ್ತೀವಿ. ಆಯಾಗಿರಿ ನೀವು ಅಪ್ಪಟಕನ್ನಡ್ದೋರೆಲ್ಲ. ಅಂದಂಗೆ ಇದ್ರ ಕೂಟೆ ಬೇಡ ಅಂದ್ರೆ ಕ್ಯಾನ್ಸಲ್ ಮಾಡದೆಂಗೆ? ಕಡೆದಪ ಇದೊಂದೇಳಿ ಸಆಯ ಮಾಡು.
ಸರಣು
"ಏರಿದವನು ಚಿಕ್ಕವನಿರಬೇಕು"
ಉ: ಅಯ್ ಲವ್ ಯು
ರಮೇಶ್ ರವರೇ
ಇಷ್ಟಕ್ಕೆ ಗಂಡನ ಮನೆ ಬಿಟ್ಟು ಹೋಗ್ತೀನಿ ಅಂತ ಹೇಳೊ ಹೆಂಗಸಿನ ತರಹ ಕೋಪ ಮಾಡ್ಕೊತ್ತೀರಲ್ಲಾ.
ನಿಮ್ಮ ಮಾತು ನಿಮ್ಮದು.
ಅವರ ಅಭಿಪ್ರಾಯ ಅವರದು.
ನೀವು ಕನ್ನಡದವರೇ ಅಲ್ಲವಾ? ಹಾಗಾಗಿ ಸಂಪದ ನಿಮ್ಮದೇ.
ಸಂಪದ ಬಿಟ್ಟು ಹೋಗುವ ಮಾತೇಕೆ
ರೂಪ
ಉ: ಅಯ್ ಲವ್ ಯು
ರೂಪಾ,
ನಿಮ್ಮ ಹೋಲಿಕೆ ನನಗೆ ಹಿಡಿಸಲಿಲ್ಲ
ನನ್ನ ಮಾತಲ್ಲಿ ಕೋಪವೆಲ್ಲಿ ಕಂಡಿರಿ? ಅಲ್ಲಿರುವುದು ಕೇವಲ ನೋವು ಮತ್ತು ಬೇಸರ ಅಷ್ಟೆ. ಸಂಪದವನ್ನು ತಾನೇ ಬಿಟ್ಟುಹೋಗುತ್ತಿರುವುದು? ಕನ್ನಡವನ್ನಾಗಲಿ ಕನ್ನಡನಾಡನ್ನಾಗಲೀ ಅಲ್ಲ. ಯಾವುದೇ ಅತಿಯಾದರೂ ಚೆಂದವಲ್ಲ ಅಲ್ಲವೆ? ದಿನದಿನಕ್ಕೆ ಇದೇ ಹಾಡಾದರೆ ನನ್ನ ಪಾಡು ನಾನು ನೋಡಿಕೊಳ್ಳಬಾರದೆ? ಅಲ್ಲದೆ ಸಂಪದವಲ್ಲದೆ ಕನ್ನಡದ ಬೇರೆ ಪೋರ್ಟಲ್‌ಗಳೂ ಇವೆ. ನೀವು ಗಟ್ಟಿಗಿತ್ತಿ. ಇರಿ. ಯಾವುದೇ ವಿಷಯದಲ್ಲಿ ಚರ್ಚೆ, ಭಿನ್ನಾಭಿಪ್ರಾಯ ಸಹಜ. ಆದರೆ ಗುಂಪುಗಾರಿಕೆ ವ್ಯಕ್ತಿಗತ ನಿಂದನೆ ಇವುಗಳು ನನಗೆ ನೋವುಂಟು ಮಾಡುತ್ತವೆ.
"ಏರಿದವನು ಚಿಕ್ಕವನಿರಬೇಕು"
ಉ: ಅಯ್ ಲವ್ ಯು
ರಮೇಶರೇ,
ಕೆಲವರದ್ದು ಇದ್ದದ್ದೇ ಬಿಡಿ . ಕನ್ನಡವನ್ನಾಗಲೀ ಸಂಸ್ಕೃತವನ್ನಾಗಲೀ ಯಾರೂ ಗುತ್ತಿಗೆ ತೆಗೆದುಕೊಂಡಿಲ್ಲ ಅಥವಾ ಯಾರ ಸ್ವಂತದ್ದಲ್ಲ ಅದು.
ಅವನ್ಯಾವನಿಂದಲೋ ನಾವು ಕನ್ನಡಿಗರೆಂದು ಸರ್ಟಿಫಿಕೇಟು ತಗೋಬೇಕಾಗಿಲ್ಲ. ಬಿಡುವ ಯೋಚನೆಯೆಲ್ಲ ಬೇಡ. ನಿಮ್ಮ ಮನಸು ನೋಯಿಸಿದವರಿಂದ ದೂರವಾಗಿ ಅಷ್ಟೆ.
ಉ: ಅಯ್ ಲವ್ ಯು
ನನ್ನ ಹೋಲಿಕೆಯಿಂದ ನಿಮಗೆ ಬೇಸರವಾಗಿದ್ದರೆ ಕ್ಶಮಿಸಿ
ಪರಿಸ್ಠಿತಿಯನ್ನು ತಿಳಿಗೊಳಿಸುವ ಉದ್ದೇಶವೊಂದೇ ಅಲ್ಲಿದ್ದುದು
ತಮಗೆ ಅಪಾರ್ಥವಾಗಿದ್ದರೆ ಮತ್ತೊಮ್ಮೆ ಕ್ಷಮಿಸಿ
ರೂಪ
ಉ: ಅಯ್ ಲವ್ ಯು
ಆತ್ಮೀಯ ರೂಪಾ,
ಕ್ಷಮೆ ಕೇಳುವಂಥ ತಪ್ಪನ್ನೇನೂ ನೀವು ಮಾಡಿಲ್ಲ. ಮರೆತುಬಿಡಿ ಆ ವಿಷಯ. ಮನಸ್ಥಿತಿ ಕಿರಿಕಿರಿಯನ್ನನುಭವಿಸುವ ಸ್ಥಿತಿಯಲ್ಲಿದ್ದಾಗ ನಿಮ್ಮ ಹೋಲಿಕೆ ನನಗೆ ಬೇಸರ ತರಿಸಿದುದು ಸಹಜವಲ್ಲವೇ? ನಿಮ್ಮ ಉದ್ದೇಶ ಒಳ್ಳೆಯದಿತ್ತೆಂಬ ಬಗ್ಗೆ ನನಗೆ ಎಳ್ಳಷ್ಟೂ ಸಂಶಯವಿಲ್ಲ
"ಏರಿದವನು ಚಿಕ್ಕವನಿರಬೇಕು"
ಉ: ಅಯ್ ಲವ್ ಯು
ಭೋ ರಮೇಶಾರ್ಯ,
ಕ್ಷಮ್ಯತಾಮ್ ಮಮ ಅಸಾಧುಚೇಷ್ಟಾಮ್ !! ಹಾಸ್ಯೇನೋಕ್ತಮ್||
ಅವಾಮ್ ಮಿಲಾವಃ!
ಇತಿ ಭವತಃ ಕ್ಷಮಾಕಾಂಕ್ಷೀ
ಮಹೇಶಃ
=====================================
ಮಾಯ್ಸ!
ಉ: ಅಯ್ ಲವ್ ಯು
ಪ್ರೀತಿಯ ಮಹೇಶ್,
ದೊಡ್ದ ಮಾತಾಡಿದ್ದೀರಿ. ನಾನೂ ಕ್ಷಮಿಸುವಷ್ಟು ದೊಡ್ಡವನೇನಲ್ಲ. ಆದರೂ ಕ್ಷಮಿಸಿದ್ದೀನಿ ಎಂದರೆ ನಿಮಗೆ ಸಂತೋಷವಾದರೆ ಸರಿ. ದಯವಿಟ್ಟು ಇನ್ನು ಮುಂದೆ ಇಂತಹ ಹಾಸ್ಯ ಮಾಡಬೇಡಿ ಎಂದು ನಿಮ್ಮನ್ನು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ. ನನ್ನ ಅಭಿಪ್ರಾಯದಲ್ಲಿ ಸಂಸ್ಕೃತವಾಗಲಿ, ಸಂಸ್ಕೃತಾಭಿಮಾನಿಗಳಾಗಲಿ ಕನ್ನಡದ್ವೇಷಿಗಳಲ್ಲ. ನಿಮ್ಮ ಕನ್ನಡಾಭಿಮಾನ ಮೆಚ್ಚುವಂಥದ್ದೇ! ಆದರೆ ಅದು ವೈಯಕ್ತಿಕ ಮಟ್ಟದಲ್ಲಿ ದ್ವೇಷದ ರೂಪ ತಾಳಬಾರದಲ್ಲ!! ಸಂಸ್ಕೃತಬಲ್ಲವರು ಬೇಸರಪಟ್ಟುಕೊಂಡರೆ ನಿಮಗೆ ಸಂತೋಷವೆ? ದಯವಿಟ್ಟು ಹಿಂಸಾನಂದಿಗಳಾಗಬೇಡಿ. ನಾವೆಲ್ಲರೂ ಸೇರಿ ಕನ್ನಡದ ಹಿತ ಕಾಯೋಣ. ಇಲ್ಲಿಗೆ ಈ ಪ್ರಕರಣ ಮುಗಿಯಲಿ. ಆಗಿರುವ ತಪ್ಪನ್ನು ತಿದ್ದಿಕೊಳ್ಳುವ ನಿಮ್ಮ ದೊಡ್ಡಗುಣಕ್ಕೆ ನನಗೆ ನಿಜಕ್ಕೂ ಸಂತೋಷವಾಗಿದೆ. "ವಾದೇ ವಾದೇ ಜಾಯತೇ ತತ್ತ್ವಬೋಧ:" ಎಂಬ ಮಾತು ನಿಜವಾಗಲಿ. ನನ್ನ ಬಗ್ಗೆ ಕಳಕಳಿ ತೋರಿಸಿದ ಎಲ್ಲರಿಗೂ ಧನ್ಯವಾದಗಳು. ನನ್ನ ಮಾತು ಮತ್ತು ನಿಲುವಿನಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮಿಸಿ.
"ಏರಿದವನು ಚಿಕ್ಕವನಿರಬೇಕು"
ಉ: ಅಯ್ ಲವ್ ಯು
ರಮೇಶರವರೆ,
ಸಂಸ್ಕೃತ ನನ್ನ ಶಾಲಾದಿನಗಳ ಅಚ್ಚುಮೆಚ್ಚಿನ subject ಆಗಿತ್ತು. ಈಗ ಬಿಟ್ಟು ಹೋಗಿದೆ. ದಯವಿಟ್ಟು ಸಂಸ್ಕೃತ ಕವಿ, ಕೃತಿಗಳ ಬಗ್ಗೆ ಕನ್ನಡದಲ್ಲಿ ಇಲ್ಲಿ ಬರೆಯಿರಿ. ನಾನು englishನಲ್ಲಿ ಓದಿದ್ದೆ, ಆದರೆ ನಮ್ಮ ಮೇಸ್ಟ್ರು ಸಹ ಹೇಳುತ್ತಿದ್ದುದ್ದು, ಅದರ ಸೊಗಡು ಇಂಗ್ಲೀಷಿನಲ್ಲಿ ಸರಿಯಾಗಿ ಭಾಷಾಂತರಿಸಲಾಗುವುದಿಲ್ಲ, ಎಂದು.
ಉ: ಅಯ್ ಲವ್ ಯು
http://www.iskconbangalore.org/contents/kannadabg/files/chapter_01.pdf
ನನಗೆ ಹಿಡಿಸಿದೆ! ನಿಮಗೆ ಹಿಡಿಸಲಿ..
=====================================
ಮಾಯ್ಸ!
ಉ: ಅಯ್ ಲವ್ ಯು
ಸರ್..
ನಿಮಗಿದಿಶ್ಟೊಂದು ಖೇದತರವಾಯಿತೇ| ಹತ ಭೋ!
ಹೀಗೆ ನೀವು ಶರಶಸ್ತ್ರತ್ಯಕ್ತ ಅರ್ಜನವಿಷಾದಕ್ಕೆ ಜಾರುವುದೇ! ಹಂತ ಭೋ! ಅಲಂ ವಿಷಾದೇನ ಎಂದು ಸಂತೈಸಲೂ ಆರದೇ!
ಆದರೂ ನಾನು ಮುನ್ನ ಹೇಳಿದ್ದರಲ್ಲಿ ದಿಟವಿದ್ದೇ ಇದೆ. ಕೆಲವು ಸಂಸ್ಕೃತನೆತ್ತಿಗೇರಿಸಿಕೊಂಡ ಮಂದಿಯ ಕನ್ನಡ-ಅವಹೇಳನ-ವಚನಗಳ ಬಗ್ಗೆ ಈ ಸಂಪದದೊಳು ವಾದಾತಿವಾದಗಳೇ ನಡೆದು ತೀರಿದೆ. ಇದು ಅವುಗಳ ಮುಂದೆ ಬಭ್ರುವಾಹನದ ’ತೃಣಕ್ಕೆ ಸಮಾನ’.
ಸಂಸ್ಕೃತದವರು ಅರಿಷಡ್ವರ್ಗಗಳೆಂದು ಕಾಮ-ಕ್ರೋದ-ಮೋಹ-ಮದ-ಮತ್ಸರ-ಲೋಭಗಳಿಂದ ಸಮಾಜಕ್ಕೆ ವ್ಯಕ್ತಿಗೆ ಕಂಟಕವೆಂದುರು.
ನಮ್ಮ ಹಿರಿಗನ್ನಡಿಗ ಕವಿರಾಜಮಾರ್ಗಕಾರ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಸಪ್ತರಿಪುವರ್ಗ ಎಂದು ’ವಿಷಾದ’ವೂ ಸಮಾಜಕ್ಕೆ,, ವ್ಯಕ್ತಿಗೆ ನಮ್ಮೊಳಗಿನ ರಿಪು, ಕಂಟಕವೆಂದರು;
ನೋಡಿ ಈಗ ನೀವು ವಿಷಾದಪಟ್ಟುಕೊಳ್ಳುವವರಾಗಿ, ಕನ್ನಡಿಗರಾಗಿ ಸಮಾಜಕಂಟಕರಾಗ್ತಾ ಇದ್ದೀರ!! ( ಬರೀ ಸಂಸ್ಕೃತ ಸಮಾಜದಲ್ಲಿ ವಿಷಾದ ಕಂಟಕವಲ್ಲ. ಆದರೆ ನಮ್ಮದು ಕನ್ನಡಸಮಾಜ )
ಹೇಗೆ ಭಗವದ್ಗೀತೆಯ ಮೊದಲ ಅಧ್ಯಾಯವೇ ವಿಷಾದವೋ.. ಹಾಗೆ ಎಲ್ಲ ಹೋರಾಟಗಳ ಮೊದಲ ಹಂತ ವಿಷಾದ, ಬೇಸರ, ಬೇಜಾರು, ಹೇಸಿಗೆ, ರೇಜಿಗೆ, ಇರಿಟೇಶನ್ನು.
ಈಗ ಆ ಹಂತ ದಾಟಿ ಬಿಡೋಣ.. ಇಬ್ಬರು ಒಂದೇ ತೆಕ್ಕೆಯಡಿ ಕನ್ನಡಕುಲವೈರಿಗಳಗೆ ಸುಡುವಂಬುಣಿಸೋಣ! ಒಡನೆಯೇ ಸಕಲ ಶಸ್ತ್ರಾಸ್ತ್ರಂಗಳಂ ಕವಚ ಱವಕೆಗಳಂ ಓಜಿಸಿ ಅಣಿಯಾಗಲಿ.. ಸ್ಪೆಶಲ್ ಎಪೆಕ್ಟ ಅಂತ ಬೇಕಾದರೇ ಕೊಂಬುಕಹಳೆಗಳಂ ಊದಿಸಿ, ನಗಾರಿ ಭೇರಿಗಳಂ ’ಭಾ’ರಿಸಿ, ಘೋಷಗಳಂ ಕೂಜಿಸಣ.
ಇತಿ ಸಂಪದೇ, ’ಅಯ್ ಲವ್ ಯೂ’ ಅಧ್ಯಾಯೇ, ಕರ್ಣಾಟಕಸಂಸ್ಕೃತಸರಸಕಲಹವಿಷಯೇ,.........................
ಸಕಲ ದುರಿತಸಮನಾರ್ಥಂ
ಕೃಷ್ಣಾರ್ಪಣ ’ಮಾ’ಸ್ತು!
=====================================
ಮಾಯ್ಸ!
ಉ: ಅಯ್ ಲವ್ ಯು
ಸರ್ ಪ್ಲೀಸ್ ವಿಷಾದದ ಮೂಡಿಂದ ವಿನೋದದ ಮೂಡಿಗೆ ಬನ್ರಿ.. ಅಂತ ಸವಿಷಾದವಿನಂತಿ!
=====================================
ಮಾಯ್ಸ!
ಉ: ಅಯ್ ಲವ್ ಯು
ಸಾಧಾರಣವಾಗಿ ಸಂಸ್ಕೃತಬಲ್ಲವರಲ್ಲವೆಂದುಕೊಂಡವರಲ್ಲೂ ಸ್ವಲ್ಪ ಜ್ಞಾನವಾದರೂ ಇದ್ದೇ ಇರುತ್ತದೆ. ತೀರಾ ಸಂಸ್ಕೃತ ಬಾರದವರಿಗಾಗಿ
ಮೇಲಿನ ತರ್ಜುಮೆ
ನಾನು ಬುದ್ಧನ ಹಾದಿಯಲ್ಲಿ ಹೋಗುವವನು. ಏನಾದರೂ ಆದರೆ ಅದು ಸಹಜವೆಂದು ತೆಗೆದುಕೊಳ್ಳುತ್ತೇನೆ. ಪ್ರಪಂಚದಲ್ಲಿ ವಿಷಾದವೂ ಸಹಜವೆಂದು ನನ್ನ ಮತ. ಕೊನೆಯಲ್ಲಿ ಒಳಿತಾದದ್ದೆಲ್ಲ ಒಳಿತು
"ಏರಿದವನು ಚಿಕ್ಕವನಿರಬೇಕು"
ಉ: ಅಯ್ ಲವ್ ಯು
ಭೋ ಬುದ್ಧಮಾರ್ಗಿನ್
ಸಾಧುವಚನಾನಿ! ಧನ್ಯೋsಸ್ಮ್ಯಹಂ!
ಭವಾನ್ ಬುದ್ಧರಿವ, ಅಹಮಞ್ಗುಲಿಮಾಲರಿವ ಅಭವತ್ ಕಿಲಾತ್ರ!?
ವಿಸ್ಮೃತಂ ಮಯಾ ಸಂಸ್ಕೃತವ್ಯಾಕರಣಸೂತ್ರಾಣ್ಯನೇಕಾನಿ!! ದೋಷಾನ್ ಕ್ಷಮ್ಯತಾಂ|
=====================================
ಮಾಯ್ಸ!
ಉ: ಅಯ್ ಲವ್ ಯು
"ಭವಾನ್ ಬುದ್ಧರಿವ, ಅಹಮಞ್ಗುಲಿಮಾಲರಿವ ಅಭವತ್ ಕಿಲಾತ್ರ!? "
ಉಪರಿತನಂ ವಾಕ್ಯಂ ಭವತಾಮೇವ, ನ ಮಮ. ಅಹಂ ತು ಸಮ್ಯಗ್ಜಾನಾಮಿ ಯತ್ ಕೇವಲಂ ಮಾರ್ಗಾನುಸರಣೇನ ನ ಕೋsಪಿ ಗುರೋ: ಸಮ: ಸದೃಶೋ ವಾ ಭವತೀತಿ. ಪ್ರಾಯಶ: ಯ: ಕೋsಪಿ ವದೇತ್ "ಭವಾನ್ ಅಙ್ಗುಲಿಮಾಲ ಇವ ಇತಿ" ಅಹಂ ಕೇವಲಂ ಕುತ್ಸಿತಾಂ ಭಾವನಾಂ ಪ್ರತಿ ಖೇದಾಮಿ ನ ಕಮಪಿ ಮಾನುಷಂ ನಿಂದಾಮಿ.
ಭವಾಂಸ್ತು ಸಂಸ್ಕೃತಂ ಸಮ್ಯಗ್ಜಾನಾತಿ. ತತ್ರ ತತ್ರ ದೋಷಾ: ಭವೇಯು: ಕನ್ನಡ ಭಾಷಾ ಇವ ತಾವತೀ ವ್ಯಾವಹಾರಿಕೀ ಭಾಷಾ ನೈವ ಕಿಲ! ಅತ ಏವ ಮಮಾಪಿ ತ್ರುಟಯ: ಭವೇಯು:. ನಾಹಮ್ ಅತ್ರ ನಿಪುಣ:
ಏಕಂ ತು ಸುಸ್ಪಷ್ಟಂ ಭವಾನ್ ಶಿಶುಂ ರೋದಯಿತುಂ ಜಾನಾತಿ ತಥಾ ಶಿಶೋ: ಲಾಲನಮಪಿ.
ಉಪಸಂಹಾರರೂಪೇಣ- ಕ್ರುದ್ಧಸ್ಯ ಹರಿಪ್ರಸಾದ ನಾಡಿಗ ಮಹೋದಯಸ್ಯ ಪ್ರಹಾರ-ನಿಷ್ಕಾಸನಾದಿ ಕರ್ಮಣ: ಪೂರ್ವಮೇವ ಕನ್ನಡೇ ಏವ ವ್ಯವಹರಿಷ್ಯಾವ:
"ಏರಿದವನು ಚಿಕ್ಕವನಿರಬೇಕು"
ಉ: ಅಯ್ ಲವ್ ಯು
ತಥಾಸ್ತು.. !
ಹಾಗೇ ಆಗಲಿ.
"ಏಕಂ ತು ಸುಸ್ಪಷ್ಟಂ ಭವಾನ್ ಶಿಶುಂ ರೋದಯಿತುಂ ಜಾನಾತಿ ತಥಾ ಶಿಶೋ: ಲಾಲನಮಪಿ."
ವಿವಾಹವಯೋsಹಂ ಅರ್ಹಮಿದಾನೀಂ ತಾತೋ ಭವಿತುಂ ಖಲು !
ನನ್ನಿ... ನನ್ನ ಜೀವಕ್ಕೆ ಈಗ ತುಸು ನೆಮ್ಮದಿಯಾಯ್ತು!
ಹರಿ
ನಮ್ಮೀ ಕನ್ನಡೇತರ ಸಂಭಾಷಾಣೆಯನ್ನು ಮನ್ನಿಸಪ್ಪ..
ಕುಪಿತನಾಗಬೇಡ
ಸಂಪದರಾಜ್ಯರಮಾರಮಣ
ನಿನ್ನೀ ಬಕುತರ ಮೇಲೆ
ಕರುಣೆಯಿರಲೆಂದೂ ಹರಿ ಹರಿ!
=====================================
ಮಾಯ್ಸ!
ಉ: ಅಯ್ ಲವ್ ಯು
ಸಂಸ್ಕೃತವನ್ನು ಬೈದರೆ ಮಾತ್ರ ಕನ್ನಡದವನು ಅನ್ನುವ ವಾತಾವರಣ ಉಂಟಾಗಬಾರದಲ್ಲವೇ. ಅವರವರ ಇಷ್ಠ ಅವರವರಿಗೆ ಇದ್ದರೇನು ಕಷ್ಟ?
ಉ: ಅಯ್ ಲವ್ ಯು
ಮಾಯ್ಸ, ನೀನು ಸಪ್ತರಿಪುವರ್ಗವನ್ನು ಸರಿಯಾಗಿ ಅಳವಡಿಸಿಕೊಂಡಿದ್ದೀಯಾ ಕಣೋ. ಚಾಂಗು ಕಾಳ. ಈ ಚರ್ಚೆಯಲ್ಲಿ ಪ್ರಸ್ತಾಪವಾದ ಮತ್ತೊಂದು ಅಂಶವೆಂದರೆ, ಸಂಸ್ಕೃತದ ಸೊಗಡನ್ನು ಇಂಗ್ಲೀಷಿನಲ್ಲಿ ಹೇಳುವ ವಿಚಾರ (ಬಹುಶಃ ಕಲ್ಪನ ಅವರು ಎತ್ತಿದ್ದಿರಬೇಕು). ಇಲ್ಲಿ ಎರಡು ವಿಚಾರ.
೧. ಹೌದು. ಒಂದು ಭಾಷೆಯ ಸೊಗಡನ್ನು ಮತ್ತೊಂದು ಭಾಷೆಯಲ್ಲಿ ಹೇಳುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತೆ ಕಷ್ಟವೇ ಹೌದು. ಕೆಲವೊಮ್ಮೆ ಅಸಾಧ್ಯ ಕೂಡ.
೨. ಆದರೆ, ಪಾಪ್ಯುಲರ್ ನಂಬಿಕೆಗಳಿಗೆ (ನನ್ನನ್ನೂ ಸೇರಿಸಿದಂತೆ), ಮಾರುಹೋಗಿರುವ ನಾವುಗಳು, ಸಂಸ್ಕೃತದ (ಹಾಗು ಕನ್ನಡದ) ವಿಷಯವನ್ನು ಇಂಗ್ಲೀಷಿನಲ್ಲಿ ಹೇಳಕ್ಕೆ ಆಗಲ್ಲ ಅನ್ನೋದು ತಪ್ಪು. ನಾನು ಕೂಡ ಹೀಗೆಯೇ ಅಂದುಕೊಂಡು, ಇಷ್ಟು ವರ್ಷ ಸಂಸ್ಕೃತದ ಗ್ರಂಥಗಳನ್ನು ಕನ್ನಡದಲ್ಲಿಯೇ ಓದುತ್ತಿದ್ದೆ. ಆದರೆ ಕಳೆದ ಒಂದೆರೆಡು ವರ್ಷಗಳಿಂದ, ಸಂಸ್ಕೃತ ಹಾಗು ಕನ್ನಡದ ಪುಸ್ತಕಗಳನ್ನು ಇಂಗ್ಲೀಷಿನಲ್ಲಿ ಓದಕ್ಕೆ ಶುರುಮಾಡಿದಾಗ ಸಂಸ್ಕೃತದ ವಿಷಯದಲ್ಲಿ ನಾನು ಎಷ್ಟು ಮೋಸ ಹೋಗಿದ್ದೆ ಎನ್ನುವುದು ಅರಿವಾಯಿತು.
ಉ: ಅಯ್ ಲವ್ ಯು
ಸಪ್ತರಿಪುವರ್ಗ ನನಗೆ ತಿಳಿದ್ದು ನೀನೇ ಫಸ್ಟು... !
ನಾನು ಕವಿರಾಜಮಾರ್ಗದ ಹೊತ್ತಗೆ ಕೊಂಡಾಗ ಆ ಪದ್ಯ ಮೊದಲು ಹುಡುಕಿ ಓದಿರಬೋದು!!
ಲೋ ಕವಿರಾಜಮಾರ್ಗ ಅಂದ್ರೆ ನನಗೆ ಮೊದಲು ನೀನೇ ನೆನೆಪಾಗೋದು.........
ನೀನು ಎಶ್ಟೊಂದು ಕರಾಮಾ ಬಗ್ಗೆ ಬರಹಗಳನ್ನ ಇಲ್ಲಿ ಬರೆದ್ದಿದ್ದೀಯ!
ನನಗೆ ವಿಷಾದವೂ ಒಂದು ರಿಪು ಅನ್ನೋ ಯೋಚನೆ ತುಂಬಾ ಹಿಡಿಸಿ, ನನ್ನ ಎದೆಯೊಳಗೆ ಸೇರಿದೆ.
ನೋಡು ತುಂಬಾ ವಿಷಾದವಿರುವ ಮಂದಿ ತಮ್ಮನ್ನು ತಾವೆ ಹಿಂಸಿಸಿಕೊಳ್ತಾರೆ, ಹಾಗೆ ಇತರನ್ನು.. ಅವರು sadist ಅನ್ನೋ ಕಾನ್‌ಸೆಪ್ಟ್ ಅನ್ನು ಆಗಲೇ ಹೇಳಿದ್ರು.
ಇನ್ನೊಂದು ಸರತಿ ಓದಬೇಕು!
=====================================
ಮಾಯ್ಸ!
ಉ: ಅಯ್ ಲವ್ ಯು
"ನೋಡು ತುಂಬಾ ವಿಷಾದವಿರುವ ಮಂದಿ ತಮ್ಮನ್ನು ತಾವೆ ಹಿಂಸಿಸಿಕೊಳ್ತಾರೆ, ಹಾಗೆ ಇತರನ್ನು.. ಅವರು sadist ಅನ್ನೋ ಕಾನ್‌ಸೆಪ್ಟ್ ಅನ್ನು ಆಗಲೇ ಹೇಳಿದ್ರು. "
ಇದು ಯಾರ ಪರಿಕಲ್ಪನೆಯೋ? ಯಾರದೇ ಆಗಿದ್ದರೂ ಈ ವಿಷಯ ಅಂತಿಮವೇನಲ್ಲ ಅಂತ ನನ್ನ ಭಾವನೆ. ಮೇಲಿನದನ್ನು ನೀವು ನನ್ನ ಕುರಿತೇ ಬರೆದಿದ್ದರೆ ("ಅವರು= ರಮೇಶ್?) ಮಾತ್ರ ಮುಂದಿನ ಸಾಲುಗಳನ್ನು ಓದಿ, ಇಲ್ಲದಿದ್ದರೆ ಉದಾಸೀನ ಮಾಡಿ.
ನಾನೇ ಆಗಲಿ ನೀವೇ ಆಗಲಿ ಅಭಿಪ್ರಾಯದ ಮಟ್ಟದಲ್ಲಿರುವ ಸಂಗತಿಗಳನ್ನು finalityಇಂದ ಬಿಂಬಿಸೋದಕ್ಕೆ ಹೋದಾಗ ಘರ್ಷಣೆಗಳಾಗುತ್ತವೆ. ನಾನು ನನ್ನನ್ನು ಹಿಂಸಿಸಿಕೊಳ್ಳುವ ಪ್ರಮೇಯವೇ ಇಲ್ಲ. ಇನ್ನು ಸಾಂದರ್ಭಿಕವಾಗಿ ನಿಮ್ಮನ್ನು ಹಿಂಸಿಸುವ ಇರಾದೆ ನನ್ನ sub-conscious mindನಲ್ಲೂ ಅಪ್ಪಿತಪ್ಪಿಯೂ ಸುಳಿದಿರಲಾರದು ಎಂದುಕೊಳ್ಳುತ್ತೇನೆ. ಸಂಪದದಲ್ಲಿ ನಡೆಯುವ ಚರ್ಚೆಗಳಲ್ಲಿ ನಾನು ಗಮನಿಸಿದಂತೆ ನಾವು ಅಭಿಪ್ರಾಯ ಪ್ರಕಟಿಸುವುದು ಮತ್ತು ವಿನಿಮಯ ಮಾಡಿಕೊಳ್ಳುವುದು ಮಾತ್ರ. ಯಾರಾದರೂ ನನ್ನದೇ ಕೊನೆಯ ಮಾತು ಅಂದುಕೊಂಡರೆ ಅದು ತಪ್ಪೇ! some arguments may buy more adherants. ಸಂಸ್ಕೃತ ಮತ್ತು ಕನ್ನಡಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆದಾಗಲೆಲ್ಲ ಮತ್ತು ಕೆಲವು ಸಾರಿ cross reference ಮೂಲಕವೂ ನೀವು ಬರಹಗಾರರನ್ನು ಮೂದಲಿಸುವುದನ್ನು ನಾನು ಗಮನಿಸಿದ್ದೇನೆ. ಕೆಲವು ಸಾರಿ ಇದು ಸಾಮಾನ್ಯ ಉಲ್ಲೇಖದ ಮಟ್ಟವನ್ನೂ ಮೀರಿ generalise ಮಾಡೋ ಮಟ್ಟದಲ್ಲೂ ಕೂಡ. ಒಬ್ಬರು comment ಮಾಡಿರುವಂತೆ ನೀವು ನಿಮ್ಮ ಕನ್ನಡ ಪ್ರೇಮದ expressionಗೆ ಸಂಸ್ಕೃತ ದ್ವೇಷದ ರೂಪ ಕೊಡುವುದೇಕೆ? ಮೂದಲಿಕೆ, ನಿಂದನೆ ("fascist")ಗಳಿಲ್ಲದ ಚರ್ಚೆ ಸಾಧ್ಯವಿಲ್ಲವೆ? ಹೆಚ್ಚಿನ ಜನರು ಭಾವಿಸುವಂತೆ ನಾವು dispaasionate ಚರ್ಚಿಸಿದಾಗ ಮಾತ್ರ ಚರ್ಚೆ ಉಪಯುಕ್ತವಾಗುತ್ತದೆ. ಇಲ್ಲದಿದ್ದರೆ ಕೇವಲ ನಮ್ಮೆಲ್ಲರ ಅಹಮಿಕೆಯ ಪ್ರದರ್ಶನ ಮಾತ್ರ.
ನಾನು ನೀವು ಗಮನಿಸಿರುವಂತೆ ಕೆಲವು ಚರ್ಚೆಗಳಾದಾಗ ಇಬ್ಬಣಗಳಾಗುತ್ತವೆ. ಕೆಲವರು ಲೇಖನ ಬರೆದಾಗ ಕೆಲವರ ಪ್ರಶಂಸೆ ವ್ಯಕ್ತವಾಗುತ್ತದೆ. ಉಳಿದವರೂ ಅದನ್ನು ವಿರೋಧಿಸುತ್ತಾರೆ. ಆದರೆ ಹೆಚ್ಚಿನವರು ಅದನ್ನು ಉದಾಸೀನ ಮಾಡುತ್ತಾರೆ.-ಎಲ್ಲರೂ ಎಲ್ಲರ ಲೇಖನಗಳನ್ನು ಓದುವುದಕ್ಕೆ ಆಗುವುದಿಲ್ಲ ಮತ್ತು ಎಲ್ಲರ ಲೇಖನಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಲಾಗುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡೇ ಈ ಮಾತನ್ನು ಹೇಳುತ್ತಿದ್ದೇನೆ. ಮೇಲೆ ತಿಳಿಸಿದ patternಗಳು ಈ portalನ ಅನಾರೋಗ್ಯದ ಸಂಕೇತ ಎಂದೇ ಭಾವಿಸುತ್ತೇನೆ- ಚರ್ಚೆ,ವೈಚಾರಿಕ ಘರ್ಷಣೆಗಳು ಪ್ರಜಾಪ್ರಭುತ್ವದ ನೆಲೆಗಟ್ಟುಗಳು ಎಂಬುದನ್ನು ತಿಳಿದೂ.
"ಹಿಂಸಾನಂದ" ಎಂಬ ನನ್ನ ಮಾತಿನ ಹಿಂದೆ ಇವೆಲ್ಲ ಯೋಚನೆಗಳಿವೆ. ಹದತಪ್ಪಿ ಕೇವಲ ನಿಮ್ಮನ್ನು sadist ಅನ್ನುವ ಯೋಚನೆ ನನಗಿಲ್ಲ. ನಾನು ತೂಕತಪ್ಪಿದಂದು ಆ ಪದ ನನಗೂ ಅನ್ವಯವಾಗುತ್ತದೆ
"ಏರಿದವನು ಚಿಕ್ಕವನಿರಬೇಕು"
ಉ: ಅಯ್ ಲವ್ ಯು
ರಮೇಶರೆ, ನಿಮಗೆ ಈ ಬ್ಲಾಗು ಜಾಗಗಳು ಇವೆಲ್ಲ ಹೊಸದು ಅನ್ಸುತ್ತೆ. ಇಲ್ಲೆಲ್ಲಾ ಇಂತಹ ಜಗಳಗಳು ಮಾಮೂಲು. ಇಲ್ಲಿ ಎಲ್ಲಾ ತರಹದ ಜನರಿರುತ್ತಾರೆ. ಇದಕ್ಕೆ ನೀವು ಇಷ್ಟೊಂದು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ.
ತರ್ಕಬಧ್ಧವಾದ ವಾದಗಳಿಗೆ ಮಾತ್ರ ಉತ್ತರಿಸುವ ಗೋಜು ತಗೊಳ್ಳಿ ಅಷ್ಟೆ !
ಉ: ಅಯ್ ಲವ್ ಯು
ಮಾಧ್ವವರೆ,
ನಿಮ್ಮ ಕಾಳಜಿಗೆ ಧನ್ಯವಾದಗಳು. ನೀವು ತಿಳಿದಂತೆ ನಾನು ಇಂಧದ್ದಕ್ಕೆ ಹೊಸಬನೂ ಅಲ್ಲ, ತಲೆ ಕೆಡಿಸಿಕೊಂಡೂ ಇಲ್ಲ. ಆದರೆ ಒಂದು ವ್ಯವಸ್ಥೆ ಚೆನ್ನಾಗಿರಲಿ ಅಂತ ಹಾರೈಸೋದೂ ತಪ್ಪೆ? ನೀವೇ ಹೇಳಿ.
"ಏರಿದವನು ಚಿಕ್ಕವನಿರಬೇಕು"
ಉ: ಅಯ್ ಲವ್ ಯು
ರಮೇಶಬಳಗಂಚಿ ಅವರೆ, ಕನ್ನಡದಲ್ಲಿ ಈವರೆಗೆ ಸಿಕ್ಕಿರುವ ಹಳೆಯ ಕೃತಿಯಾದ ಕವಿರಾಜಮಾರ್ಗದಲ್ಲಿ "ಅಂತರಂಗ ಸಪ್ತರಿಪುವರ್ಗ" ಎಂಬ ವಿಚಾರವನ್ನು ಹೇಳಲಾಗಿದೆ. ಈ ಕಾಮೆಂಟ್ ಓದಿ. ಅರಿಷಡ್ವರ್ಗಗಳು v/s ಸಪ್ತರಿಪುವರ್ಗ. ಈ ಪದ್ಯವನ್ನು ನಾನು ಮೊದಲ ಬಾರಿ ಓದಿದಾಗ, ತುಂಬಾ ಅಂದ್ರೆ ತುಂಬಾ ಆಶ್ಚರ್ಯವಾಗಿತ್ತು. ಏಕೆ ಎಂಬುದನ್ನೂ ಅಲ್ಲಿಯೇ ವಿವರಿಸಿದ್ದೇನೆ. ಆಸಕ್ತಿಯಿಂದ ಓದಿ ನಿಮಗೇನನ್ನಿಸಿತೋ ಹೇಳಿ.
ಉ: ಅಯ್ ಲವ್ ಯು
ಸುನೀಲರೆ,
ಈ ತಿಳುವಳಿಕೆಗೆ ಧನ್ಯವಾದ. ನನ್ನ ಸಹೋದ್ಯೋಗಿಗಳಿಗೆ ಹೇಳಿದ್ದೇನೆ. ಇನ್ನೆರಡು ಮೂರು ದಿನಗಳಲ್ಲಿ ಪುಸ್ತಕ ಕೈಸೇರಲಿದೆ. ಓದಿ, ನನಗಾದ ಅನುಭವ ವಿಶಿಷ್ಟವೆನ್ನೆಸಿದರೆ ನಿಮಗೆ ತಿಳಿಸುತ್ತೇನೆ.
"ಏರಿದವನು ಚಿಕ್ಕವನಿರಬೇಕು"
ಉ: ಅಯ್ ಲವ್ ಯು
ಅಯ್ಯೋ ಸಾರ್..
ನಾನು ಜನರಲ್ ಆಗಿ ಬರೆದುದು....
ನೀವು ವಿಷಾದಪ್ರಿಯರೆಂದು ನಾನು ಕನಸಲ್ಲೂ ಎಣಿಸಿಲ್ಲ.......................
ಪ್ರಸನ್ನರಾಗಿದೇವ.....
ಇಲ್ಲ ಬರೆಯೋದನ್ನ ಜನರಲ್ಲಾಗ್ ತಗೋಬೇಕು..
ನಾನು ಸುನಿಲ ಕರಾಮಾದ ಈ ಸಪ್ತರಿಪುವರ್ಗದ ಕುರಿತು ಒಂದು ಸಾವಿರ ಸರತಿ ಮಾತಾಡಿದ್ದೀವಿ. ಅದು ನಮ್ ಹರಟೆಯ ಪೇವರೇಟ್ ಟಾಪಿಕ್ಕುಗಳಲ್ಲಿ ಒಂದು!
"ಯಾಞ್ಚಾ ಮೋಘಾ ವರಮಧಿಗುಣೇ ನಾಧಮೇ ಲಭ್ದಕಾಮಾ" ( ಕಾಳಿದಾಸ ಮೇಘದೂತದಾಗೆ ಹೇಳಿದ್ದು.. ಮೇಘರಾಜನನ್ನು ಹೀಗೆ ಹೊಗಳ್ತಾನೆ ಯಕ್ಷ;ಇದು ನನ್ನ ಇನ್ನೊಂದು ಪೇವರೆಟ್ ಹೇಳಿಕೆ)
=====================================
ಮಾಯ್ಸ!
ಉ: ಅಯ್ ಲವ್ ಯು
ಧನ್ಯೋಸ್ಮಿ- ನೀವು ಹೇಳಿದ ಉಕ್ತಿ ನಂಗೂ ಇಷ್ಟವಾದ್ದು.
"ಏರಿದವನು ಚಿಕ್ಕವನಿರಬೇಕು"
ಉ: ಅಯ್ ಲವ್ ಯು
ಮಾಯ್ಸ, ಈ ಕಾಳಿದಾಸನ "ಯಾಞ್ಚಾ ಮೋಘಾ"ಕ್ಕೆ ಸೇರಿಗೆ ಸವ್ವಾಸೇರು, ಚಾಪೆಗೆ ರಂಗೋಲಿ ಎನ್ನುವಂತಹ ಒಂದು ಕನ್ನಡ ಗಾದೆಯನ್ನು ಶ್ರೀಕಾಂತ ಮಿಶ್ರಿಕೋಟಿಗಳು ನೆನಪಿಸಿಕೊಳ್ತಾರೆ. ಏನು ಗೊತ್ತಾ. "ಸಗಣಿಯವನೊಡನೆ ಸ್ನೇಹಕ್ಕಿಂತ ಗಂಧದವನ ಜೊತೆ ಗುದ್ದಾಟ ಮೇಲು"
ಉ: ಅಯ್ ಲವ್ ಯು
ರೀ ಸುನೀಲ,
ಸಂಸ್ಕೃತ-ಇಂಗ್ಲೀಷ್ ಅಥವ ಸಂಸ್ಕೃತ-ಕನ್ನಡ ಹೊತ್ತಗೆಗಳು ಆನ್ಲೈನ್ ಇದ್ದರೆ, ದಯವಿಟ್ಟು ದಾರಿ ತೋರಿ.
ಮತ್ತು, ನೀವು ಓದಿರುವ ಪುಸ್ತಕಗಳು ಯಾವುವು, ಇವು ಎಲ್ಲಿ ದೊರಕುತ್ತವೆ, ತಿಳಿಸುವ ಕೃಪೆ ಮಾಡಿ. ನನಗೆ ಬೆಂಗಳೂರಲ್ಲಿ, ಅಂಕಿತ, ಟೋಟಲ್ ಕನ್ನಡ, ಸಪ್ನ, ವೇದಾಂತ ಬುಕ್ ಹೌಸ್ ಗೊತ್ತು.
ಉ: ಅಯ್ ಲವ್ ಯು
ಕಲ್ಪನ ಅವರೆ, ಈ ಬ್ಲಾಗನ್ನು ನೋಡಿ, Digital Library Of India. ಬಿಡುವಿನ ಸಮಯ ಸಿಕ್ಕಾಗ ನಾನು ಇಲ್ಲಿಂದ ಇಳಿಸಿಕೊಂಡಿರುವ ಪುಸ್ತಕಗಳನ್ನು ಓದುತ್ತಾ ಇರುತ್ತೇನೆ. ಹಾಗೆಯೇ ಗೂಗಲ್ ಬುಕ್ಸ್ ತಾಣದಲ್ಲಿಯೂ ಕನ್ನಡದ ತುಂಬಾ ಪುಸ್ತಕಗಳಿವೆ. ಇವಲ್ಲದೆ, ಸಂಸ್ಕೃತ ಪುಸ್ತಕಗಳನ್ನು ಓದಬೇಕಿದ್ದರೆ, Sanskrit Documents Collectionಗೆ ಎಡತಾಕಿ. ಸಂಪದದಲ್ಲಿ ನಡೆದಿರುವ ಎಷ್ಟೋ ಚರ್ಚೆಗಳಲ್ಲಿ ಈ ಕೊಂಡಿಗಳಲ್ಲಿರುವ ಪುಸ್ತಕಗಳಿಂದ ಆಯ್ದ ಪುಟಗಳನ್ನು ಅನೇಕರು ಉದ್ಧಿರಿಸಿದ್ದಾರೆ.
ಉ: ಅಯ್ ಲವ್ ಯು
ಧನ್ಯವಾದಗಳು ಸುನೀಲರೆ!
ಉ: ಅಯ್ ಲವ್ ಯು
ಮಹೇಶ, ಈಚೆಗೆ ಗೋಖಲೆಯಲ್ಲಿ ಕುಮಾರವ್ಯಾಸ ಭಾರತದ ಬಗ್ಗೆ "ಪ್ರಸನ್ನ ದಂಪತಿಗಳು" ಗಮಕವಾಚನ ನಡೆಸಿಕೊಟ್ಟರು ಕಣೋ. ಎಷ್ಟು ಸೊಗಸಾಗಿತ್ತು ಗೊತ್ತಾ. ಈಗ ಯೋಚಿಸು, ಇವತ್ತಿನ ದಿನ ಯಾರಾದರು ತನ್ನ ಗರ್ಲಫ್ರೆಂಡಿಗೆ, "ನಾನು ಕುಮಾರವ್ಯಾಸ ಭಾರತ ಕಾವ್ಯ ವಾಚನ ಕೇಳಕ್ಕೆ ಹೋಗಿದ್ದೆ", ಅಂತ ಹೇಳಕ್ಕೆ ಧೈರ್ಯ ಮಾಡ್ತಾರಾ ?
ಭೈರಪ್ಪನವರ ಒಂದು ಕಾದಂಬರಿ (ನೆಲೆ ಅಂತ ಕಾಣತ್ತೆ) ಈ ಕಾವ್ಯ ವಾಚನದ ಮೋಹದಿಂದಾಗಿ ಒಂದು ಲವ್ ಅಫೇರ್ ನಡೆಯತ್ತೆ
ಕಾದಂಬರಿಯಲ್ಲಿ ಸಾಧ್ಯವಾಗಿದ್ದು ನಿಜ ಜೀವನದಲ್ಲಿ ಸಾಧ್ಯವಾಗಬೇಕೆಂದರೆ, ಸರಿಯಾದ ವೇವಲೆಂತು ಮ್ಯಾಚ್ ಆಗಬೇಕು. ನೀನು ಈ ಪದ್ಯದಲ್ಲಿ ಹೇಳಿದಂತೆ ಆ ವೇವಲೆಂತು ಮ್ಯಾಚೋದು ತುಂಬಾ ಕಷ್ಟ.
ಉ: ಅಯ್ ಲವ್ ಯು
ಅಯ್ಯೋ..
ನಾನ್ ಮಿಸ್ ಮಾಡಿಕೊಂಡೆ!
ನನಗೆ ಕುಮಾರವ್ಯಾಸ ಭಾರತ ಕಾವ್ಯವಾಚನ ಅಂದ್ರೆ ತುಂಬಾ ಇಶ್ಟು... ನನಗೆ ಜಿಲ್ಲಮಟ್ಟದ ಬಹುಮಾನ ಬೇರೆ ಬಂದಿತ್ತು ಇದ್ರಾಗೆ... ದೊಡ್ಡ ಶೀಲ್ಡು ಸಿಕ್ಕತ್ತು...
’ಕದಳಿಯೊಳ್ ಮದಾನೆ ಹೊಕ್ಕಂದಲಿ’ ಇದಕ್ಕೆ ನಮ್ ಗಮಕದ ಗುರುಗಳು ಎಶ್ಟು ಚನ್ನಾಗಿ ರಾಗ ಹಾಕಿದ್ರು.. ಅದರ ಕೊನೆಯಲ್ಲಿ ನನಗೆ ಹಲವು ಸರತಿ.. ಅಯ್ಯೋ ಅಭಿಮನ್ಯು ಸತ್-ಹೋಗ್ತೀಯಲ್ಲೋ ಅಂತ ಕಣ್ಣೀರು ಬರಬೇಕು.. ಹಾಗೆ.. ಅದನ್ನು ಹಯ್ ಪಿಚ್ಚಲ್ಲಿ ಹಾಡಿ ನನ್ ಗಂಟಲು ಹರಿದರೂ, ಏನೋ ಆನಂದ!!
ಗಮಕದಲ್ಲಿ ಭಾವಕ್ಕೆ ಏಶ್ಟು ಇಂಪಾರ್‍ಟೆನ್ಸು... !!
ನಮ್ ಮಂಡ್ಯದಲ್ಲಿ ಪ್ರತೀವರ್ಶ ಗಮಕದ ಸ್ಪರ್ಧೆ ಇರತ್ತೆ.. ನಾನು ಮತ್ತು ನನ್ ತಮ್ಮ ಇಬ್ರೂ ಅದರಲ್ಲಿ ಬಹುಮಾನ ಹೊಡೆದ್ದೀವಿ..
ಯಾಕೆ ಅಂದ್ರೆ ನಮ್ಮ ಚಿಕ್ಕಮ್ಮ, ಅವರ ಅಪ್ಪ ಗಮಕದ ಗುರುಗಳು...
ಒಂದು ಅಚ್ಚರಿ ಅಂದ್ರೆ ನಾನು ಇದು ವರೆಗೂ ನನ್ ತಮ್ಮ ಹಾಡಿರೋದೇ ಕೇಳಿಲ್ಲ..!
ನನಗೆ ಭೀಮ್-ಪಲಾಸ್(ಭೀಮ್ ಪಾಲಸಿ?) ರಾಗ ಅಂದ್ರೆ ತುಂಬಾ ಇಶ್ಟ ಇತ್ತು.!
ಈಗೀಗ ಗಮಕಿಗಳು ಬಲು ಕಡಮೆ..
ಗಮಕದ ಸಂಗತಿ ನೆನೆಸಿದ್ದಕ್ಕೆ ನನ್ನಿ
=====================================
ಮಾಯ್ಸ!
ಉ: ಅಯ್ ಲವ್ ಯು
ಸಂಪದದಲ್ಲಿ, ಹಂಸಾನಂದಿ ಎಂಬ ನಗ್ಗಳ(*)
ಹೆಸರಿನಿಂದ ಬರೆಯುತ್ತಿರುವ ಮತ್ತೊಬ್ಬರು ಗಮಕಿಗಳು ಇದ್ದಾರೆ!! ನಗ್ಗಳ - ನಲ್ + ಕಳ್ಳ
ಉ: ಅಯ್ ಲವ್ ಯು
ಅವರು ಗಮಕಿಗಳಿಗಿಂತ ಸಂಗೀತಗಾರರು.. !
ಸಿಂಧುಭೈರವಿ.. ಬಗ್ಗೆ ಕಾಯ್ತಾ ಇದ್ದೀನಿ...
ಭೈರವಿ, ಸಿಂಧುಭೈರವಿ, ಆನಂದಭೈರವಿ, ಆಹಿರ್ ಭೈರವಿ.. ಎಶ್ಟು ಭೈರವಿಗಳು!
=====================================
ಮಾಯ್ಸ!
ಉ: ಅಯ್ ಲವ್ ಯು
ಮಿ.ಮಹೇಶ್,
ಸರಿ ಕಣ್ರಿ. ಪದ್ಯ ಫಿಲ್ ಅಪ್ ದ ಬ್ಲಾಂಕ್ಸ್ ಮಾಡಿ ಯಾವಾಗ ಪೂರ್ತಿ ಮಾಡ್ತೀರ? ಅದು ಹೇಳಿ.
ಉ: ಅಯ್ ಲವ್ ಯು
ರೀ ಅದನ್ನ ಯಾರ್ ತುಂಬ್ತಾರೆ.. ಬೋರು!
=====================================
ಮಾಯ್ಸ!
ಉ: ಅಯ್ ಲವ್ ಯು
ಮಹೇಶ....
ಇಲ್ಲೊಂದು ವಾಸ್ತವ ವಿಷವನ್ನು ನೀವು ತುಂಬ ಚೆನ್ನಾಗಿ ಹೊರತಂದಿದ್ದೀರಿ.
ಕೆಲವೊಂದು ಜನಗಳೇ ಹಾಗೆ.... ತುಂಬ ಕೊರಕರು. "They always talk right thing in the wrong place". ಅಂತವ್ರನ್ನು ಅನೇಕರನ್ನು ನಮ್ಮ ಸುತ್ತ ಮುತ್ತ ಕಾಣಬಹುದು. ಒಂದು ಸನ್ನಿವೇಶವನ್ನು / ಸಮಯವನ್ನು ಆನಂದಿಸುವ ಬದಲು, ಅದು ಒಳ್ಳೇದೇ.. ಕೆಟ್ಟದೇ ...ನಮ್ಮ ಸಂಸ್ಕೃತಿ ಹಾಳಾತು... ಅಂತ ಏನೇನೋ ಬಡಬಡಿಸುತ್ತ ಇರುತ್ತಾರೆ. . . ಅಂತವರು ನಿಜಕ್ಕೂ ತುಂಬಾ ಬೋರು!
ಲಲನಾಮಣಿ.. ಸುಂದರಿ.. ಯುವತಿ ಎದುರಿಗೆ ಯಾರಾದ್ರೂ ಹೀಂಗೆ ಕೊರೆದ್ರೆ ಪಾಪ.... ಬೈ ಅನ್ನದೇ ಇರ್ತಾಳೆಯೇ?!
( ಸೂಚನೆ : ಈ ಕವಿತೆಯಲ್ಲಿ (ಈ ) ಕವಿ ಕಾವ್ಯದ ನಾಯಕ ಅಲ್ಲ ಅನ್ನುವ ಅರಿವು ಇದೆ!!
)
ಸವಿತೃ
ಉ: ಅಯ್ ಲವ್ ಯು
"ಈ ಕವಿತೆಯಲ್ಲಿ (ಈ ) ಕವಿ ಕಾವ್ಯದ ನಾಯಕ ಅಲ್ಲ ಅನ್ನುವ ಅರಿವು ಇದೆ"
=====================================
ಮಾಯ್ಸ!