ನಂನ ಎಂಗೇಜ್ಮೆಂಟು!
ನೆಂನೆ ಜೂನ್ ೨೦ಕ್ಕೆ ನನ್ನ ಎಂಗೇಜ್ಮೆಂಟು(ಮದುವೆ ಕರೆಯೋಲೆ ಬರೆಯುವ ಒಸಗೆ) ನಲ್‌ಜರುಗಿತು ಎಂದು ಹೇಳಿಕೊಳ್ಳೋದೇ ಒಂದು ನಲಿವು.
ಹುಡುಗಿಯ ಹೆಸರು, ಕೆಲಸ ಮುಂತಾದ ಅರಿಮೆಗಳು ಈಗಾಗಾಲೇ ನನ್ನ ಗೆಳೆಯರ ಒಳಬಳಗಕ್ಕೆ ತಿಳಿದು ಹೋಗಿವೆ. ಆ ಸಂಗತಿ ಹಾಗೇ ಬಾಯಿಂದ ಕವಿಗೆ ತಲುಪಿ ಹರಡಲೆಂದೇ ನನ್ನ ಪದಪು.
ಈ ಎಂಗೇಜುಮೆಂಟು ಎಂಬುದು ನಂಮ ಮನೆಯ ಸಂಪ್ರದಾಯದಲ್ಲಿ ಇರದ ಸಂಗತಿ. ನಮ್ಮ ಮನೆಯಾಚಾರದಲ್ಲಿ ’ಲಗ್ನ ಪತ್ರಿಕೆ’ ಎಂಬ ಒಂದು ಸಣ್ಣ ಒಸಗೆಯುಂಟು. ಅದನ್ನು ಎರಡೂ ಮನೆಯ ಅನಿಬರು ಸೇರಿ, ಒಬ್ಬ ಪುರೋಹಿತರ ಕಯ್ಯಲ್ಲಿ ಮದುವೆಯ ನಾಳು, ಹೊತ್ತು, ಮುಂದಾದ ಅರಿಮೆಗಳಂನು ಒಂದು ಸಂಪ್ರದಾಯದ ಬರಹದಲ್ಲಿ ಬರೆಸಿ, ಓದಿಸುವುದು.
ಆದರೆ ಈಗ ಮಾರ್ಪಾದ ಕಾಲದ ಕಾರಣ ನಮ್ಮದು ಬರೀ ಲಗ್ನ-ಪತ್ರಿಕೆಯಾಗಿರದೇ ’ಎಂಗೇಜುಮೆಂಟ್’ ಆಯಿತು. ಅದರ ಸಲುವಾಗಿ ಉಂಗುರ ತೊಡೆಸುವುದು ನಡೆಯಿತು. ಅದಕ್ಕಾಗಿ ನಮಗೆ ನಿಬ್ಬರದ ಉಡುಗೆಗಳೂ ಕೂಡ ಇದ್ದುವು. ಹುಡುಗ ಕಸೂತಿಯ ನೀಳನಿಲುವಂಗಿ(ಶೇರ್ವಾನಿ) ಮತ್ತು ಪಯಿಜಾಮ, ಮತ್ತು ಹುಡುಗಿ ರೇಸಿಮೆ ಸೀರೆ-ರವಕೆ ತೊಟ್ಟು;ಇಬ್ಬರು ಜೊತೆಯಲ್ಲಿ ಬರೀ ಮದುವೆಯಲ್ಲೇ ಹಸೆಮಣೆಯ ಮೇಲೆ ಮೊದಲು ಕುಳಿಯಬೇಕೆಂಬ ನೇಮವನ್ನು ಉಳಿಸಿಕೊಂಡು, ನಿಂತೇ ಒಬ್ಬರಿಗೊಬ್ಬರು ಉಂಗುರಗಳನ್ನು ತೊಡೆಸಿದೆವು.
ಎರಡುನಾಳುಗಳಿಂದ ಜ್ವರದ ತತ್ತರದಿಂದ ದಣಿದಿದ್ದ ನಾನು ಯಾವ ಒಬ್ಟಟ್ಟು, ಮಿಟಾಯಿ, ಬೋಂಡಗಳಂನು ತಿನ್ನಲಾರದೇ ಬರೀ ಅನ್ನಸಾರಲ್ಲಿ ಊಟ ಮುಗಿಸಿದಕ್ಕೆ ’ನನ್ನ ಹುಡುಗಿ’ ಬೇಸರಪಟ್ಟಕೊಂಡು ’ಇಶ್ಟೇನ ಊಟ’ ಅಂದರು. ಅದಕ್ಕೆ ನಾನು ’ಯೋಚನೇ ಮಾಡಬೇಡ, ಮದುವೆಗೆ ಒಂದು ವಾರ ಮುಂಚೆಯೇ ಸಕ್ಕತಾಗಿ ರೆಡಿಯಾಗ್ತೀನಿ.. ಭೌಮದೂಟದಲ್ಲಿ ಒಂದೂ ಬಿಡದೆ ಉಂಡೆ ಚಕ್ಕುಲಿಗಳನ್ನು ಕಬಳಿಸುವೆನು’ ಎಂದು ಮನಸ್ಸಿನಲ್ಲೇ ಹೇಳಿಕೊಂಡು;’ಅಯ್ಯೋ ಇರಲಿ, ನೀವು ಬೇಜಾರ್ ಮಾಡಿಕೊಬೇಡಿ’ ಅಂದು ಬಳಿಕ ಎರಡು ಲೋಟ ಕಾಪಿ ಕುಡಿದು ದಣಿವಿಳಿಸಿದೆ.
ನನ್ನ ಹತ್ತಿರದ ಹಲಗೆಳೆಯರು ಬಂದು ಒಂದು ಹೂವಿನ ಗೊಂಚಲನ್ನು ಕೊಟ್ಟು ನಮಗೆ ನಲಿವು ತಂದರು. ಅವರಿಗೆಲ್ಲ ನನ್ನಿಗಳು. ಬಂದಿದ ಹಲಹರಿಯರು ನಮ್ಮನ್ನು ಹರಸಿದರು ಅವರಿಗೆ ತುಳಿಲುಗಳು. ಹಾಗೇ ನನ್ನ ಇಬ್ಬರು ಗೆಳೆಯರು ಬೆಳಿಗ್ಗಿನಿಂದ ನನ್ನ ಕೂಟೇ ಇದ್ದು ಎಲ್ಲದಕ್ಕೂ ನೆರವಾದರು, ಅವರಿಗೆ ಹೆನ್ನನ್ನಿಗಳು.
ಮನೆಗೆ ಬಂದ ಬಳಿಕ ಎರಡು ಮನೆಯಿಂದ ಪೋನ್ ಕರೆಗಳು ಬಂದು ಮೊದಲು ’ದ್ರುಶ್ಟಿ ತೆಗೆ’ಸಿಕೋ ಮೊದಲೇ ನಿನಗೆ ಕಣ್ಣೆಸರಾಗುವುದು ಬೇಗ ಅಂದರು. ಇರಬೋದು.. ಇವೊತ್ತು ತುಸು ಸುಸ್ತು, ಗಂಟಲ ನೋವು ಇದ್ದೇ ಇದೆ..
ಇನ್ನು ಒಂದು ಚೆಲುವಾದ ’ಮದುಗರೆಯೋಲೆ’ ಬರೆಯಬೇಕು.. !! ಅತ್ತ ನನ್ನ ಗಮನ!!
’ಸ್ವಸ್ತಿ ಶ್ರೀ ವಿಜಯಾಭ್ಯುದಯ’ದ ಬದಲು ’ನಲವು ಗೆಲವು ಸಿರಿ ಏಳಿಗೆ’ ಎಂದು ಬರೆಯೋಣ ಅಂತ ಇದ್ದೀನಿ ![]()

- mahesha ರವರ ಬ್ಲಾಗ್
- Login or register to post comments
- 698 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ನಂನ ಎಂಗೇಜ್ಮೆಂಟು!
ನಲ್ ಗೆಳೆಯನೆ ಮಾಯ್ಸ,
ನಿನ್ನ ಹಾಗು 'ನಿನ್ನ ಹುಡುಗಿ' ಇಬ್ಬರಿಗೂ ತುಂಬು ಗುಂಡಿಗೆಯ ಸವಿಯೊದಗುಗಳು.
ನಿನ್ ಮದುವೆಗೆ ಮುಂಚೆಯ ನಲ್ ಸವಿಯೊದಗುಗಳು.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ನಂನ ಎಂಗೇಜ್ಮೆಂಟು!
ಎಂತಹ ಖುಷಿಯ ಸುದ್ದಿ ಮಹೇಶ್ , ನಿಮ್ಮಲೇಖನಗಳನ್ನು ಓದುತ್ತಾ ಹೋದಂತೆ ಮುಖ ಅರಳಿ ನಗು ಬರುತ್ತದೆ . ಅಲ್ಲರೀ ಪುಣ್ಯಾತ್ಮ ನಿಮ್ಮ ಭಾಷೆ , ನಿಮ್ಮ ಭಾವಿ ವಧುವಿಗೆ ಅರ್ಥವಾಗಬೇಕಲ್ಲಪ್ಪಾ .
ಉ: ನಂನ ಎಂಗೇಜ್ಮೆಂಟು!
ಮತ್ತೊಮ್ಮೆ Congratulations ಮಾರಾಯ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ನಂನ ಎಂಗೇಜ್ಮೆಂಟು!
ನಮಗೂ ತುಂಬಾ ಸಂತೋಷವಾಗಿದೆ ಮಹೇಶ್,
. ನಿಮ್ಮ ನಲಿವನ್ನು ಸಂಪದಿಗರ ಜೊತೆಗೆ ಹಂಚಿಕೊಳ್ಳಿ. ನಾವು ಅದನ್ನೇ ಮದುವೆಯ ಒಬ್ಬಟ್ಟು ಎಕ್ಸೆಟ್ರಾ ಎಕ್ಸೆಟ್ರಾ ಅಂದ್ಕೋತೀವಿ. ನಿಮ್ಮ ಎಂಗೇಜ್ಮೆಂಟಿನ ಒಂದಾದರೂ ಫೋಟೋ ಹಾಕಿದ್ದರೆ ನಮಗೂ ಖುಷಿಯಾಗುತ್ತಿತ್ತಲ್ಲ!!

ಸುದ್ದಿ ಮತ್ತು ಮದುವೆಯ ಇತರ ವಿಷಯಗಳು ಬರಿ ನಿಮ್ಮ ಒಳಗೆಳೆಯರಿಗೆ ಮಾತ್ರವೇ? ಸಂಪದಿಗರ ಹಾರೈಕೆಗಳು ಬೇಡವೆ?
ಸರಿ, ಬಾಕಿ ಏನೇ ಇರಲಿ ಮದುವೆಗೆ ಉಳಿದ ದಿನಗಳನ್ನು ಸುಂದರ ಕನಸುಗಳನ್ನುಕಾಣುತ್ತಾ ಫೋನ್ ನಲ್ಲಿ ಹುಡುಗಿಯೊಡನೆ ಹರಟುತ್ತಾ ಕಳೆಯಿರಿ. ಸಂಪದ, ಬರಹ, ಪ್ರತಿಕ್ರಿಯೆ, ವಾದ ವಿವಾದಗಳನ್ನು ಸ್ವಲ್ಪ ದಿನ ಹುಡುಗಿಗಾಗಿ ಬಿಟ್ಟಿರಿ.
ಮದುವೆ ಮತ್ತು ಮುಂದಿನ ಬದುಕು ನಿಮಗಿಬ್ಬರಿಗೂ ಸಂತೋಷ ಮತ್ತು ನಿಮ್ಮೆರಡು ಕುಟುಂಬಕ್ಕೂ ನೆಮ್ಮದಿ ತರಲಿ ಎಂದು ಸಂಪದಿಗರಲ್ಲಿ ಒಬ್ಬನಾಗಿ ಹಾರೈಸುತ್ತೇನೆ
ಅಂದ ಹಾಗೆ ಹುಡುಗಿ ಸಂಪದದ ಸದಸ್ಯರೆ? ಅಥವಾ ಅದೂ ಸಸ್ಪೆನ್ಸೋ?
"ಏರಿದವನು ಚಿಕ್ಕವನಿರಬೇಕು"
ಉ: ನಂನ ಎಂಗೇಜ್ಮೆಂಟು!
ನಿಮ್ಮ ಎಂಗೇಜ್ಮೆಂಟಿಗೆ ನನ್ನ ಶುಭಾಷಯಗಳು ಮಹೇಶ್ ರವರೆ
-ಯುವಪ್ರೇಮಿ
ಉ: ನಂನ ಎಂಗೇಜ್ಮೆಂಟು!
ಮಹೇಶ್
ನಿಮ್ಮ ಎಂಗೇಜ್ಮೆಂಟಿಗೆ ನನ್ನ ಶುಭಾಷಯಗಳು
ಫೋಟೊವೊಂದನ್ನು ಹಾಕಿದರೆ ನಾವು ನೋಡಿ ಖುಶಿ ಪಡುತ್ತೇವೆ.
ಮದುವೆ ಯಾವಾಗ ? ಎಲ್ಲಿ ?

ಹುಡುಗಿ ಎಲ್ಲಿಯವರು? (ಯಾವ ಊರಿನವರು?)
http://thereda-mana.blogspot.com/
ರೂಪ
ಉ: ನಂನ ಎಂಗೇಜ್ಮೆಂಟು!
ತಪ್ಪುಗಳಂನು ತಿದ್ದಿದೆ.
ಶುಭಾಶಯ ಕೋರಿದವರಿಗೆಲ್ಲ ನಂನಿಗಳು.
ಕಶ್ಟ ಪಟ್ಟು ಈ ಬ್ಲಾಗಿನೊಂದು ಸಸಂಸ್ಕೃತಾವೃತ್ತಿ ಬರೆದೆನು..
http://sampada.net/blog/mahesha/21/06/2008/9384
ತಿಳಿಸದ ಸಂಗತಿಗಳು, ಪೋಟೊಗಳು ಬರುವುವು..
’ತಾಂತ್ರಿಕ ಅಡಚಣೆಯಿಂದ ಅದು ಸಾಧ್ಯವಾಗಿಲ್ಲ ಎಂದು ಹೇಳಲು ವಿಷಾದಿಸುತ್ತೇನೆ.’
=====================================
ಮಾಯ್ಸ!
ಉ: ನಂನ ಎಂಗೇಜ್ಮೆಂಟು!
ಹಾಗೆ ಮಿಂನೋಲೆ ಕಳುಹಿದವರಿಗೂ ನಂನಿಗಳು!
=====================================
ಮಾಯ್ಸ!
ಉ: ನಂನ ಎಂಗೇಜ್ಮೆಂಟು!
ಶುಭಾಶಯಗಳು
, (ಕನ್ನಡದಲ್ಲಿ ಏನೋ? - ನಲ್ವೊದಗು?)
ಉ: ನಂನ ಎಂಗೇಜ್ಮೆಂಟು!
ಮಾಯ್ಸ ಅವರೆ,
ಎಲ್ಲಾ ಒಳ್ಳೆಯದಾಗುತ್ತೆ!
ಶುಭಾಶಯಗಳು! ಮದುವೆ ಯಾವಾಗ? ಒಳ್ಳೆಯ ಗಂಡ ಹೇಗಿರಬೇಕೆಂದು ಕೇಳಿದ್ರಿ ಅಲ್ವ? ಈಗಿನಿಂದಲೇ "ಕ್ಷಮಿಸು ಚಿನ್ನ" ಮತ್ತು "ಸರಿ ಬಂಗಾರ" ಇವೆರಡನ್ನು ಹೇಳಲು ಚೆನ್ನಾಗಿ ಅಭ್ಯಾಸ ಮಾಡಿ
ಉ: ನಂನ ಎಂಗೇಜ್ಮೆಂಟು!
ಕಲ್ಪನಾ ಮ್ಯಾಡಮ್,
ಹೀಗೆ ಹೇಳ್ತೀನಿ ಅಂತ ಬೇಜಾರ್ ಮಾಡ್ಕೊಬೇಡಿ.
ನವ ವಧುವಿಗೆ "ಕ್ಷಿಮಿಸು ಚಿನ್ನ" , "ಸಾರಿ ಬಂಗಾರ" ಅಂತ ಚಿನ್ನ, ಬಂಗಾರದ ಹೆಸರಿನಲ್ಲಿ ಕರೆದರೆ ಮಹೇಶ್ ರವರಿಗೆ ಮುಂದಿನ ಜೀವನದಲ್ಲಿ ಬಹಳ ತೊಂದರೆಗಳಾಗೊಲ್ವೆ ?
ಮೊದಲೆ ಚಿನ್ನದ ಬೆಲೆ ಎಟುಕಲಾರದ ಅಟ್ಟಕ್ಕೇರಿದೆ, ಅದರ ಮೇಲೆ ಮಹೇಶ್ ರವರು ಅವರ ಭಾವಿ ಹೆಂಡತಿಯನ್ನು ಚಿನ್ನ, ಬಂಗಾರ ವೆಂದು, ಅವರು ಅದನ್ನು ಬಹಳ ಸೀರಿಯಸ್ ತೆಗೆದುಕೊಂಡು "ಚಿನ್ನ, ಬಂಗಾರ ಅನ್ನೊದಕ್ಕೆ ಮುಂಚೆ ನನಗೆ ಚಿನ್ನದ ಒಡವೆ ತಂದುಕೊಡಿ" ಅಂತ ಅಂದ್ರೆ ಏನು ಗತಿ ??
ಮಹೇಶ್ ರವರೆ...., ಚಿನ್ನ , ಬಂಗಾರ ಜಾಸ್ತಿ ಉಪಯೋಗಿಸ್ಬೇಡಿ. ಅಲ್ಲಲ್ಲಿ ಬೆಳ್ಳಿ, ತಾಮ್ರನು ಉಪಯೋಗಿಸಿ.
ಜೀವನ ಜೇನಂತೆ, ಜೇಬಲಿದ್ರೆ ಜೋಪಾನ...!
-ಯುವಪ್ರೇಮಿ
ಉ: ನಂನ ಎಂಗೇಜ್ಮೆಂಟು!
"ಬ್ರಹ್ಮಚಾರಿ ಶರಣಾದ ಪ್ರೇಮದೇವಿಗೆ ಸೆರೆಯಾದ". ಸವಿ ಸವಿ ಹಾರೈಕೆಗಳು, ಮಿ|ಮಾಯ್ಸ್.
ಉ: ನಂನ ಎಂಗೇಜ್ಮೆಂಟು!
ಶುಭಾಶಯಗಳು ಮಾಯ್ಸ ಅವರಿಗೆ!!
-ಸುಶೀಲ್.
ಉ: ನಂನ ಎಂಗೇಜ್ಮೆಂಟು!
ಕಂಗ್ರಾಟ್ಸು ಮಾಯ್ಸ!
ಉ: ನಂನ ಎಂಗೇಜ್ಮೆಂಟು!
ಗುಱುಱಾಜ
www.kannadaguru.blogspot.com
ಶುಭಾಶಯ ಶುಭಾಶಯ
"ಎ೦ಗೆಜ್ಮೆ೦ಟಿ"ನ ಶುಭಾಶಯ
ಸ೦ತಸದಿ ಬಾಳಿರಿ ನೀವು
ಇದೇ ನಮ್ಮ ಆಶಯ
cograts ಮಾಯ್ಸಣ್ಣ. ಅ೦ದಹಾಗೆ ಒಬ್ಬಟ್ತು ಯಾವಾಗ ..?
ಉ: ನಂನ ಎಂಗೇಜ್ಮೆಂಟು!
Congratulations ಮಾಯ್ಸರಿಗೆ!
ಉ: ನಂನ ಎಂಗೇಜ್ಮೆಂಟು!
veena.
ಶುಭಾಶಯಗಳು. ನನ್ನ ತಮ್ಮನ ಮದುವೆ ನಿಶ್ಚಯವಾದಷ್ಟೇ ಖುಷಿಯಾಗುತ್ತಿದೆ. ಆ ಅದೃಷ್ಟವಂತೆಯ ಬಗ್ಗೆ ವಿವರಗಳಿದ್ದರೆ ನಮಗಿನ್ನೂ ಹೆಚ್ಚು ಸಂತೋಷವಾಗುತ್ತಿತ್ತು.
ಉ: ನಂನ ಎಂಗೇಜ್ಮೆಂಟು!
congratulations ಮಾಯ್ಸ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ನಂನ ಎಂಗೇಜ್ಮೆಂಟು!
Congratulations Maheshravare
Best of luck,
krishna
ಉ: ನಂನ ಎಂಗೇಜ್ಮೆಂಟು!
ನಿಮಗೆ ಇಂಗ್ಲೀಶಲ್ಲಿ ನನ್ನಿ!
=====================================
ಮಾಯ್ಸ!
ಉ: ನಂನ ಎಂಗೇಜ್ಮೆಂಟು!
congrats ಮತ್ತು ಆಲ್ ದಿ ಬೆಸ್ಟ್ !
ಸವಿತೃ
ಉ: ನಂನ ಎಂಗೇಜ್ಮೆಂಟು!
ಮಹೇಶರೇ, ತುಂಬಾ ಸಂತೋಷಾರೀ.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ನಂನ ಎಂಗೇಜ್ಮೆಂಟು!
ಮಾಯ್ಸ,... ಮತ್ತೊಮ್ಮೆ ಮನಮುಟ್ಟಿ ಸವಿ ಹಾರೈಕೆಗಳು...
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ನಂನ ಎಂಗೇಜ್ಮೆಂಟು!
ಕಂಗ್ರಾಡ್ಸ್ ಸರ್
ನಂದನ್