ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › mahesha ರವರ ಬ್ಲಾಗ್

ನನ್ನ ನಿಶ್ಚಿತಾರ್ಥ - ಸಸಂಸ್ಕೃತಾವೃತ್ತಿ

June 21, 2008 - 7:46pm — mahesha

ನೆನ್ನೆ ಜೂನ್ ೨೦ಕ್ಕೆ ನನ್ನ ನಿಶ್ಚಿತಾರ್ಥವು(ವಿವಾಹಾಹ್ವಾನಪತ್ರಿಕಾಲೇಖನಸಮಾರಂಭ) ಶುಭ‌ವಾಗಿ ಜರುಗಿತು ಎಂದು ಹೇಳಿಕೊಳ್ಳೋದೇ ಒಂದು ನಲಿವು.

ಹುಡುಗಿಯ ಹೆಸರು, ಕೆಲಸ ಮುಂತಾದ ವಿಷಯಗಳು ಈಗಾಗಾಲೇ ನನ್ನ ಗೆಳೆಯರ ಒಳಬಳಗಕ್ಕೆ ತಿಳಿದು ಹೋಗಿವೆ. ಆ ವಿಷಯವು ಹಾಗೇ ಬಾಯಿಂದ ಕವಿಗೆ ತಲುಪಿ ಹರಡಲೆಂದೇ ನನ್ನ ಆಕಾಂಕ್ಷೆ.

ಈ ಎಂಗೇಜುಮೆಂಟು ಎಂಬುದು ನಮ್ಮ ಮನೆಯ ಸಂಪ್ರದಾಯದಲ್ಲಿ ಇರದ ಸಂಗತಿ. ನಮ್ಮ ಮನೆಯಾಚಾರದಲ್ಲಿ ’ಲಗ್ನ ಪತ್ರಿಕೆ’ ಎಂಬ ಒಂದು ಸಣ್ಣ ಸಮಾರಂಭವುಂಟು. ಅದನ್ನು ಎರಡೂ ಮನೆಯ ಸರ್ವರು ಸೇರಿ, ಒಬ್ಬ ಪುರೋಹಿತರ ಕಯ್ಯಲ್ಲಿ ಮದುವೆಯ ದಿನ, ಮುಹೂರ್ತ ಮುಂದಾದ ವಿಷಯಗಳನ್ನು ಒಂದು ಸಂಪ್ರದಾಯದ ಬರಹದಲ್ಲಿ ಬರೆಸಿ, ಓದಿಸುವುದು.

ಆದರೆ ಈಗ ಬದಲಾದ ಕಾಲದ ಕಾರಣ ನಮ್ಮದು ಬರೀ ಲಗ್ನ-ಪತ್ರಿಕೆಯಾಗಿರದೇ ’ಎಂಗೇಜುಮೆಂಟ್’ ಆಯಿತು. ಅದರ ಸಲುವಾಗಿ ಉಂಗುರ-ತೊಡೆಸುವುದು ನಡೆಯಿತು. ಅದಕ್ಕಾಗಿ ನಮಗೆ ವಿಶೇಷವೇಶಗಳೂ ಕೂಡ ಇದ್ದುವು. ಹುಡುಗ ಕಸೂತಿಯ ನೀಳನಿಲುವಂಗಿ(ಶೇರ್ವಾನಿ) ಮತ್ತು ಪಯಿಜಾಮ, ಮತ್ತು ಹುಡುಗಿ ರೇಷ್ಮೆ ಸೀರೆ-ರವಕೆ ತೊಟ್ಟು;ಇಬ್ಬರು ಜೊತೆಯಲ್ಲಿ ಬರೀ ಮದುವೆಯಲ್ಲೇ ಹಸೆಮಣೆಯ ಮೇಲೆ ಮೊದಲು ಆಸೀನರಾಗಬೇಕೆಂಬ ನೇಮವನ್ನು ಉಳಿಸಿಕೊಂಡು, ನಿಂತೇ ಒಬ್ಬರಿಗೊಬ್ಬರು ಉಂಗುರಗಳನ್ನು ತೊಡೆಸಿದೆವು.

ಎರಡುದಿನಗಳಿಂದ ಜ್ವರದ ತತ್ತರದಿಂದ ದಣಿದಿದ್ದ ನಾನು ಯಾವ ಒಬ್ಟಟ್ಟು, ಮಿಟಾಯಿ, ಬೋಂಡಗಳನ್ನು ತಿನ್ನಲಾರದೇ ಬರೀ ಅನ್ನಸಾರಲ್ಲಿ ಊಟ ಮುಗಿಸಿದಕ್ಕೆ ’ನನ್ನ ಹುಡುಗಿ’ ಬೇಸರಪಟ್ಟಕೊಂಡು ’ಇಶ್ಟೇನ ಊಟ’ ಅಂದರು. ಅದಕ್ಕೆ ನಾನು ’ಯೋಚನೇ ಮಾಡಬೇಡ, ಮದುವೆಗೆ ಒಂದು ವಾರ ಮುಂಚೆಯೇ ಸಕ್ಕತಾಗಿ ರೆಡಿಯಾಗ್ತೀನಿ.. ಭೌಮದೂಟದಲ್ಲಿ ಒಂದೂ ಬಿಡದೆ ಉಂಡೆ ಚಕ್ಕುಲಿಗಳನ್ನು ಕಬಳಿಸುವೆನು’ ಎಂದು ಮನಸ್ಸಿನಲ್ಲೇ ಹೇಳಿಕೊಂಡು;’ಅಯ್ಯೋ ಇರಲಿ, ನೀವು ಬೇಜಾರ್‍ ಮಾಡಿಕೊಬೇಡಿ’ ಅಂದು ಬಳಿಕ ಎರಡು ಲೋಟ ಕಾಪಿ ಕುಡಿದು ದಣಿವಿಳಿಸಿದೆ.

ನನ್ನ ಹತ್ತಿರದ ಹಲಗೆಳೆಯರು ಬಂದು ಒಂದು ಹೂಗುಚ್ಚವನ್ನು ಕೊಟ್ಟು ನಮಗೆ ನಲಿವು ತಂದರು. ಅವರಿಗೆಲ್ಲ ಧನ್ಯವಾದಗಳು. ಬಂದಿದ ಹಲಹರಿಯರು ನಮ್ಮನ್ನು ಹರಸಿದರು ಅವರಿಗೆ ವಂದನೆಗಳು. ಹಾಗೇ ನನ್ನ ಇಬ್ಬರು ಗೆಳೆಯರು ಬೆಳಿಗ್ಗಿನಿಂದ ನನ್ನ ಕೂಟೇ ಇದ್ದು ಎಲ್ಲದಕ್ಕೂ ನೆರವಾದರು, ಅವರಿಗೆ ಪ್ರೇಮದ ಧನ್ಯವಾದಗಳು.

ಮನೆಗೆ ಬಂದ ಬಳಿಕ ಎರಡು ಮನೆಯಿಂದ ಪೋನ್ ಕರೆಗಳು ಬಂದು ಮೊದಲು ’ದೃಷ್ಟಿ ತೆಗೆ’ಸಿಕೋ ಮೊದಲೇ ನಿನಗೆ ಕಣ್ಣೆಸರಾಗುವುದು ಬೇಗ ಅಂದರು. ಇರಬೋದು.. ಇವೊತ್ತು ತುಸು ಸುಸ್ತು, ಗಂಟಲ ನೋವು ಇದ್ದೇ ಇದೆ..

ಇನ್ನು ಒಂದು ಚೆಲುವಾದ ’ವಿವಾಹಾಹ್ವಾನಪತ್ರಿಕೆ’ಯನ್ನು ಬರೆಯಬೇಕು.. !! ಅತ್ತ ನನ್ನ ಗಮನ!! Smiling

’ಸ್ವಸ್ತಿ ಶ್ರೀ ವಿಜಯಾಭ್ಯುದಯ’ದ ಬದಲು ’ನಲವು ಗೆಲವು ಸಿರಿ ಏಳಿಗೆ’ ಎಂದು ಬರೆಯೋಣ ಅಂತ ಇದ್ದೀನಿ

====
ನನ್ನಿಗಳು

  • ಸ್ವಂತ
~.~
  • mahesha ರವರ ಬ್ಲಾಗ್
  • Login or register to post comments
  • 420 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 22, 2008 - 9:16am — ASHOKKUMAR

ಉ: ನನ್ನ ನಿಶ್ಚಿತಾರ್ಥ - ಸಸಂಸ್ಕೃತಾವೃತ್ತಿ

ASHOKKUMAR's picture

ಮದುವೆ ಯಾವಾಗ?
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 22, 2008 - 1:02pm — pallavi.dharwad

ಉ: ನನ್ನ ನಿಶ್ಚಿತಾರ್ಥ - ಸಸಂಸ್ಕೃತಾವೃತ್ತಿ

pallavi.dharwad's picture

ಅಂತೂ ತುಂಟನಿಗೊಂದು ಲಗಾಮು ಬಿತ್ತು!

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 22, 2008 - 1:18pm — pallavi.dharwad

ಉ: ನನ್ನ ನಿಶ್ಚಿತಾರ್ಥ - ಸಸಂಸ್ಕೃತಾವೃತ್ತಿ

pallavi.dharwad's picture

ಇನ್ನು ಆಗುವನು ಮಹೇಶ ಮದುವೆ
ಎಲ್ಲರ ಬದುಕಿನ ಸೊಗಸು ಇದುವೆ
ತಾಳಿ ಕಟ್ಟಿದ ವಾರಕ್ಕೆ
ಬರುವುದು ತರಕಾರಿ ಚೀಲ ಕೈಗೆ

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 22, 2008 - 2:03pm — rameshbalaganchi

ಉ: ನನ್ನ ನಿಶ್ಚಿತಾರ್ಥ - ಸಸಂಸ್ಕೃತಾವೃತ್ತಿ

rameshbalaganchi's picture

ಮಹೇಶರದಾಯಿತು ಮುಂದಾರದು ಪಲ್ಲವಿ?
ನಿನ್ನ* ಸರದಿ ಬಂದಿಲ್ಲವೆ? ಯಾರ ಮನ ಗೆಲ್ಲುವಿ?
ಗಂಡಸರಿಗೆ ತರಕಾರಿ ಚೀಲ, ಹೆಂಗಸರಿಗೇನು?
ಹೊರಕೆಲಸವಿಲ್ಲದಿರೆ ಮನೆಯೆ ಇಲಿಬೋನು.

(* ಪ್ರಾಸಕ್ಕಾಗಿ ಅಷ್ಟೆ! ನಿಮ್ಮನ್ನು ಏಕವಚನದಲ್ಲಿ ಕರೆಯುವ ಧಾರ್ಷ್ಟ್ಯ ಮಾಡಿಲ್ಲ. ಕ್ಷಮಿಸಿ)

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 22, 2008 - 6:28pm — pallavi.dharwad

ಉ: ನನ್ನ ನಿಶ್ಚಿತಾರ್ಥ - ಸಸಂಸ್ಕೃತಾವೃತ್ತಿ

pallavi.dharwad's picture

ಈಗ ನಾನಿನ್ನೂ ’ಪಲ್ಲವಿ’
’ನುಡಿ’ಗೆ ಇದೆ ಸಮಯ
ಗಂಡಸು ತರಕಾರಿ ತಂದರಾಯಿತೆ?
ಹೆಣ್ಣು ಮಾಡಬೇಕಲ್ಲ ಅಡಿಗೆಯ

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 22, 2008 - 8:48pm — ಗಣೇಶ

ಉ: ನನ್ನ ನಿಶ್ಚಿತಾರ್ಥ - ಸಸಂಸ್ಕೃತಾವೃತ್ತಿ

ಗಣೇಶ's picture

ಮಹೇಶ್‌ಗೆ ಶುಭಾಶಯಗಳು,

ಸದ್ಯಕ್ಕೆ ತಮ್ಮ ಪ್ರಿಯತಮೆಯೊಂದಿಗೆ 'ಮೇಲಿನ ಸಂಸ್ಕೃತದಲ್ಲೇ' Smiling ಮಾತನಾಡಿ,

ಮದುವೆಯ ನಂತರ ನಮ್ಮ ಕನ್ನಡ ಸುರುಮಾಡಿ.
-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 23, 2008 - 9:35am — mahesha

ಉ: ನನ್ನ ನಿಶ್ಚಿತಾರ್ಥ - ಸಸಂಸ್ಕೃತಾವೃತ್ತಿ

mahesha's picture

ಈ ಬ್ಲಾಗಿಗೂ ಕಮೆಂಟು ಸಲ್ಲಿಸಿದ ಮಹನೀಯರಿಗೆ ಹೃನ್ಮನಸಾ ಅಭಿವಾದನೆಗಳು.

ಶೇಷ ವಿವರಗಳು ಶೀಘ್ರವೇ ಸಂದೇಶಿಸಲಾಗುವುದು.!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಂನ ಎಂಗೇಜ್ಮೆಂಟು!
  • ಲಾಟರಿಯ ಗುಟ್ಟು ಜಾಲಾಡಿದಾಗ-ರಘೋತ್ತಮ್ ಕೊಪ್ಪರ
  • ಅರಳೀ ವೃಕ್ಷದ ವಾತಾನುಕೂಲ ಕಕ್ಷ
  • ’ಕಾಲಿ ರಿಂಗ್ ರೋಡು’ ಮತ್ತು ’ಐದನೇ ಗೇರು’ ಮತ್ತು ’ಪೆಟ್ರೋಲ್ ಕೊರತೆ’
  • ಕನಸು
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ವಾಪಾಸ್ ಬಂದುಬಿಟ್ಟೆ...!
  • ಸ್ವಲ್ಪ ಖುಷಿ... ಸ್ವಲ್ಪ ದುಃಖ... ಈ ಬ್ಲಾಗ್‌ಗಳು....
  • ಕನಸು ಕದ್ದ ಹುಡುಗಿ...
  • ಚೌರದವನ ಕಷ್ಟ ಸುಖ
  • ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
  • ಹನ್ನೊಂದು ಅಡಿ ಎತ್ತರದ ತಂಬೂರಿ!
  • ಓದಿದ್ದು ಕೇಳಿದ್ದು ನೋಡಿದ್ದು-46 ಅರ್ಥಶಾಸ್ತ್ರದಲ್ಲಿ ನೋಬೆಲ್ ವಿಜೇತ,ಪ್ರಶಸ್ತಿಯ ಹಣವನ್ನು ಎಲ್ಲಿ ಹೂಡಲಿದ್ದಾರೆ?
  • ಗುರುದತ್ ಎಂಬ ದುರಂತ ನಾಯಕ
  • ಸ್ವಲ್ಪನಗಿ
  • ಮೈಸೂರು ದಸರಾ ೨೦೦೮ ವೆಬ್ಕಾಸ್ಟ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 10:14pm
  • ಚನ್ನಬಸವಪುತ್ತೂರ್ಕರ್
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 9:40pm
  • rajeshnaik111
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 9:25pm
  • vijayp
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 9:20pm
  • mowna
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 7:04pm
  • hpn
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:29pm
  • anivaasi
    ಉ: ಪತನದ ಕತೆ
    October 11, 2008 - 6:06pm
  • anivaasi
    ಉ: ಪತನದ ಕತೆ
    October 11, 2008 - 6:05pm
  • anivaasi
    ಉ: ಪತನದ ಕತೆ
    October 11, 2008 - 5:50pm
  • venkatesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 5:00pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 51 ಅತಿಥಿಗಳು ಆನ್ಲೈನ್ ಇರುವರು.


ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ ।
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।।
ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ ।
ಆತ್ಮಋಣವದು ಜಗಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator