ಕೊಳ್ ಮತ್ತು (ಉ)ತ್ತಾ ಏನು ಎಂತು
ಕೆಲವು ಗಲಿಬಿಲಿಗಳನ್ನು ಬಗೆಹರಿಸಲು ಈ ಕಿರುವರಹ.
ಮೊದಲನೆಯದಾಗಿ...
೧)ಕೊಳ್
ಕನ್ನಡದ ಈ ಬಳಕೆಗಳನ್ನು ನೋಡುಮ
೧) ನಾನು ಅಡುಗೆ ಮಾಡಿದೆನು. ( ಇಲ್ಲಿ ಅಡುಗೆಯನ್ನು ಬೇರೆಯವರಿಗೆ ಮಾಡಿರಬಹುದು )
೨) ನಾನು ಅಡುಗೆ ಮಾಡಿಕೊಂಡೆನು. ( ಇಲ್ಲಿ ಅಡುಗೆಯನ್ನು ತನಗಾಗೇ ಮಾಡಿದ್ದು ಎಂದು ಅರಿತ )
ಹಾಗೆ..
೧) ನಾನು ಓದ್ತಾ ಇದ್ದೀನಿ
೨) ನಾನು ಓದಿಕೊಳ್ತಾ ಇದ್ದೀನಿ
ಇಲ್ಲೂ ಕೂಡ... 'ಕೊಳ್' ತನಗಾಗೇ ಎಂದು ಹೇಳುವುದು....!
"ನಡೆದುಕೊಂಡು ಹೋಗು".. ಇಲ್ಲೆ ’ನಡೆ’ ಕೆಲಸವನ್ನು ತಾನು ತನಗಾಗೇ ಮಾಡಿದುದು ಎಂದು ಅರಿತ.. ಇದನ್ನು ’ನಡೆದು ಹೋಗು’ ಎನ್ನಲೂ ಬಹುದು.
ಸಾಮಾನ್ಯ.. "ಕುಳಿತುಕೊಳ್ಳು" ಅಂದ್ರೆ ತನಗಾಗೇ ಕುಳಿಯುವುದು. ( ಹೀಗೇ ಅರಿತ ಮಾಡೋದು ಅಂತ ನನ್ನ ಅರಿವು )
ಇದನ್ನು ಸಂಸ್ಕೃತದಂತೆ ಆತ್ಮನೇ ರೂಪ ಎಂದು ಕರೆಯುವರು.
ವಂದತೇ = ವಂದಿಸಿಕೊಂಡನು/ಳು/ಇತು
ನಮತಿ = ನಮಿಸಿದನು, ಇಂತವು ಪರಸ್ಮೈ ಪದಗಳು...
ಸಕ್ಕದದಲ್ಲಿ ಹಲವು ಕ್ರಿಯಾಧಾತುಗಳು ಬರೀ ಆತ್ಮನೇ ಇಲ್ವೇ ಪರಸ್ಮೈ ಅಲ್ಲಿ ಬರುವ ಸೂತ್ರವಿದೆ.. ಆದ್ರೆ ಕನ್ನಡದಲ್ಲಿ ಯಾವ ಕ್ರಿಯಾಧಾತುವನ್ನು ’ಕೊಳ್’ ಸೇರಿಸಿ ಆತ್ಮನೇ ಮಾಡಿಕೊಳ್ಳಬೋದು.
ಇದ್ದನು / ಇದ್ದುಕೊಂಡನು
ಬಿದ್ದನು / ಬಿದ್ದುಕೊಂಡನು
ಈ ಸಂಗತಿ ಮಿಕ್ಕ ದ್ರಾವಿಡನುಡಿಗಳಲ್ಲೂ ಇದೆ ಅಂತ ನನ್ನ ಓದು. ( ತೆಲುಗಲ್ಲೂ ಇದೇ ಕಟ್ಟಳೆ )
೨) ಉತ್ತಾ
ಮಾಡ್ + ತಾ = ಮಾಡ್ತಾ ( ಮಾಡ್ + ಉತ್ತಾ = ಮಾಡುತ್ತಾ ಇದು ಬರೀ ಬರವಣಿಗೆ )
ಹೋ + ತಾ = ಹೋಗ್ತಾ
ಇವು ಕನ್ನಡದಲ್ಲಿ ಮುಂದುವರಿಕೆ ರೂಪಗಳು..
ಮಾಡಿಕೊಳ್ + ತಾ = ಮಾಡಿಕೊಳ್ತಾ
ಹೋಗಿಕೊಳ್ + ತಾ = ಹೋಗಿಕೊಳ್ತಾ
ಕನ್ನಡದಲ್ಲಿ ಎಲ್ಲ ಕ್ರಿಯಾರೂಪದಗಳಿಗೂ ಆತ್ಮನೇ, ಪರಸ್ಮೈ ರೂಪಗಳನ್ನು ಮಾಡಲು ಬರುವುದು, ಸಕ್ಕದಲ್ಲಿ ಆಗದು ಎಂದು ನನ್ನ ಅರಿವು ).
ಮಾದರಿ
ಕನ್ನಡ - ಬಂದು, ಬಂದುಕೊಂಡು
ಸಕ್ಕದ - ಆಗಮ್ಯ ( ಇದು ಆತ್ಮನೇ, ಪರಸ್ಮೈ ಎರಡೂ ಅಲ್ಲ )
ಕನ್ನಡ - ಹೋಗ್ತಾ / ಹೋಗಿಕೊಳ್ತಾ
ಸಕ್ಕದ - ? ( ಇಲ್ಲಿ ನಾಮರೂಪಗಳಾದ ಗಚ್ಛನ್, ಗಚ್ಛತೀ ಬಳಕೆ ಮಾಡಬೇಕಲ್ವ? )
ಹಳೆಗನ್ನಡ - ಮಾಡೇ / ಮಾಡಿಕೊಳ್ಳೇ ( ಮಾಡದರೇ/ ಮಾಡಿಕೊಂಡರೇ ) ( ಇದು ಸರಿಯಾ? )
ಸಕ್ಕದ - ಕೃತೇ (ಚೇತ್) ( ಆತ್ಮನೇ-ಪರಸ್ಮೈ ಇಲ್ಲ )///
ಈ ಅರಿಮೆಗಳ ಬಗ್ಗೆ ತಮ್ಮ ತಮ್ಮ ಅನಿಸಿಕೆ ತಿಳಿಸಿರಿ.

- mahesha ರವರ ಬ್ಲಾಗ್
- Login or register to post comments
- 276 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಕೊಳ್ ಮತ್ತು (ಉ)ತ್ತಾ ಏನು ಎಂತು
ಸಂಸ್ಕೃತದಲ್ಲಿ ಆತ್ಮನೇ (ತನಗಾಗಿ) ಮತ್ತು ಪರಸ್ಮೈ(ಬೇಱೆಯವರಿಗಾಗಿ) ಎಂದು ಧಾತುಗಳಿದ್ದರೂ ಎಲ್ಲಾ ಧಾತುಗಳಿಗೆ ಈ ಪರಸ್ಮೈ ಹಾಗೂ ಆತ್ಮನೇ ಬೞಕೆಯಿಲ್ಲ. ಆದರೆ ಕನ್ನಡದಲ್ಲಿ ಕೊಳ್ ಎಂಬ ಸಹಾಯಕ ಧಾತು ಬೞಸಿಕೊಂಡು ಕ್ರಿಯೆಯ ಅರ್ಥಕ್ಕೆ ತಕ್ಕಂತೆ ಆತ್ಮನೇ (ತನಗಾಗಿ) ಪದ ಮಾಡಿಕೊಳ್ಳಬಹುದು.
ಉ: ಕೊಳ್ ಮತ್ತು (ಉ)ತ್ತಾ ಏನು ಎಂತು
ಹವುದು ಅದು ತಿಳಿದಿರುವ ಸಂಗತಿ..
ಆದರೆ ಕನ್ನಡದಲ್ಲೂ ಹಲವು ಕೆಲಸಒರೆಗಳು ’ಕೊಳ್’ ಸೇರೇ ಬರುವುವು..
ಮಾದರಿ ’ಕುೞಿ’(ಕುಳಿ)
ಕುೞಿ ಎಂದು ಯಾರು ಹೇಳದೇ, ಕುೞಿತುಕೊಳ್ಳಿ ಎಂದೇ ಹೇಳೋದು..
ಕು಼ೞಿತು => ಕುಂತು => ಕೂತು
ಹೀಗೆ ಇನ್ನು ಕೆಲವು ಕೆಲಸಒರೆಗಳ ಪಟ್ಟಿ ಮಾಡಬೋದು.
=====================================
ಮಾಯ್ಸ!
ಉ: ಕೊಳ್ ಮತ್ತು (ಉ)ತ್ತಾ ಏನು ಎಂತು
ನಾನು ತಿಳಿದಂತೆ ಅಱಿಯಮೆ=ಅಱಿಯದಿರುವುದು=ಅಜ್ಞಾನ ಎಂಬರ್ಥದಲ್ಲಿರುವುದು ಗೊತ್ತು. ಅಱಿವು=ತಿಳುವಳಿಕೆ=ಜ್ಞಾನ ಎಂಬರ್ಥದಲ್ಲಿದೆ. ಆದರೆ ಅಱಿಮೆ ಎಂಬ ಪದವಿರುವುದಱ ಬಗ್ಗೆ ಅಱಿವಿಲ್ಲ.