ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › mahesha ರವರ ಬ್ಲಾಗ್

ಒಲವು ಬೆಸುಗೆ ಬಾಳು

November 22, 2007 - 10:50am — mahesha

ಒಂದಾನೊಂದು ದಿನ ಇಲಿಯೊಂದು ಬಲು ಬೇಸರಗೊಂಡು ಅಂದುಕೊಂಡಿತು

"ನಾನ್ ಎಷ್ಟೇ ಆದರೂ ಒಂದು ಮಾಮೂಲಿ. ನನ್ನನ್ನು ಯಾವುದಾದ್ರು ಬೆಕ್ಕೂ, ಹದ್ದೂ, ತಿಂದು ತೀರಿಸುವುದು. ನನ್ನ ಬಾಳಿಗೇನಾರ ಹುರುಳುಂಟೇ, ನಾನು ಬದುಕಿದ್ರೂ ಒಂದೇ, ಇಲ್ಲದಿದ್ರೂ ಒಂದೇ, ನನ್ನಂದೆಂತಹ ಬದುಕು. ಹೀಗೆ ಬದುಕುವುದಕ್ಕಿಂತ ಸಾಯುವುದೇ ಒಳ್ಳೇದು"

ಹೀಗಂದುಕೊಂಡು, ಸಾಯಲೆಳಸಿ, ಒಂದು ಕೆರೆಯ ಬಳಿ ಹೋಯ್ತು. ಅಲ್ಲಿ ಒಂದು ನಾಯಿ ಅಳ್ತಾ ಏನೋ ಗೊಣಗ್ತಾ ಇದ್ದುದ್ದನ್ನು ಕಂಡು, ಅದರ ಮಾತನ್ನಾಲಿಸಲು ಅಲ್ಲೇ ಅವಸಿಕೊಂಡ್ತು.

ಆ ನಾಯಿ ಹೀಗೆ ಹೇಳಿಕೊಳ್ತಾ ಇದ್ತು.

"ನಾನ್ ಎಷ್ಟೇ ಆದ್ರು ಒಂದು ಮಾಮೂಲಿ ಬೀದಿನಾಯಿ. ಬರೀ ಎಂಜಲು-ಪಂಜಲು ತಿಂದು ಬದುಕೋದು. ನಾನು ಬದುಕಿದ್ರೂ, ಸತ್ರೂ, ಯಾವ ವತ್ಯಾಸ ಇಲ್ಲ. ಹೀಗೆ ಬದುಕುವುದಕ್ಕಿಂತ ಸಾಯುವುದೇ ಒಳ್ಳೇದು". ಎಂದು ಅದು ಇನ್ನೇನು ಕರಗೆ ಹಾರಿಕೊಬೇಕು,

ಆಗ ಇಲಿ "ನಾಯಣ್ಣ, ತಡೆ" ಎಂದಿತು....

ಇಲಿಯ ದನಿಯನ್ನು ಕೇಳಿ ನಾಯಿ "ನಾನು ಸತ್ತು, ಈ ಇಲಿಯ ಉಣಿಸಾಗುವುದೆಂತು, ಚೇ ಚೇ" ಎಂದು ಎಣಿಸಿ, ಒಂದು ಕಮ್ಮರಿಯ ಮೊನೆಯ ಕಡೆ ಓಡಿತು.... ಇಲಿಯೂ ಈ ನಾಯಿ ಏನು ಮಾಡ್ತದೆಂದು ಅರಿಯಲು ಹಿಂದೋಡಿತು..

ಆ ಕಮರಿಯ ತುದಿಯಲ್ಲೊಬ್ಬ ಮನ್ಸ ನಿಂತು ಹೀಗೆ ಹೇಳಿಕೊತಾ ಇದ್ದ.
"ಅಯ್ಯೋ.. ನಾನೆಂತು ಬದುಕಿರಲಿ. ನನಗೆ ನನ್ನವರು ಅಂತ ಯಾರೂ ಇಲ್ಲ. ನನ್ನ ಪ್ರೀತಿಸೋ ಒಂದು ಜೀವವೂ ಇಲ್ಲ. ಈ ಸಮಾಜದ ಕಯ್ಯಲ್ಲೊಂದು ಗೊಂಬೆ ನಾನು. ನನ್ನದು ಅಂತ ಏನೂ ಇಲ್ಲ. ನನಗೆ ಅಂತ ಏನು ಇಲ್ಲ. ಇನ್ನು ನನಗೆ ಸಾವೇ ಸುಖ, ಜೀವತಕ್ಕಿನ್ನ" ಎಂದು ಕಮ್ಮರಿಯಿಂದ ಬೀಳ ಹೊರಟಾಗ,

ಆ ನಾಯಿ ಓಡಿ ಬಂದು ಅವನ ಕಾಲುಡುಗೆಯನ್ನ ಕಚ್ಚಿ ಜಗ್ಗಿ ಎಳೆದು, ಹೀಗೆ ಹೇಳಿತು "ಅಯ್ಯೋ, ಮನ್ಸ.. ನೀನು ಹಿಂಗೆ ಸಾಯೋದು ಸರಿಯಿಲ್ಲ. ನಿನ್ನ ಕಂಡ್ರೆ ನಂಗೆ ನನಗೆ ಅನ್ನ ಹಾಕ್ತಾ ಇದ್ದ ಮನ್ಸ ನೆನೆಪಾಗ್ತನೆ. ಇರು" ಎಂದಿತು.

ಇದನ್ನು ಕೇಳಿ ಆ ಮನ್ಸ ಅಲ್ಲೇ ಮಣಕಾಲುಕುಳಿತು ಅಳಹತ್ತಿದ್ದನು. ಆ ನಾಯಿ ಅವನ ಕೆನ್ನಗಳನ್ನು ನೆಕ್ಕಿ ಅವನ ಕಣ್ಣೀರು ಒರೆಸಿತು. ಅವನು ಅದನ್ನು ತಬ್ಬಿ ಇನ್ನೂ ಚೋರಾಗಿ ಒರಲಿದನು.

ಆಗ ಇದನ್ನು ಗಮನಿಸ್ತಾ ಇದ್ದ ಇಲಿ ಬಂದು, ಮನ್ಸನ ಹೆಗಲೇರಿ ಹೇಳಿತು. "ಅಯ್ಯಾ, ಮನ್ಸ.. ಇಷ್ಟೊಂದು ಮಾತಾಡ್ತಿರೋ, ಈ ನಾಯಣ್ಣ ಕೂಡ, ಕರೆಗೆ ಹಾರಿಕೊಂಡು ಸಾಯಲು, ಹೊರಟಿತ್ತು, ನನ್ ಕಂಡು ಇಲ್ಲಿ ಬಂತು." ಅಂದಿತು.

ಮನ್ಸ ಅಳುವನ್ನು ಕಡಮೆ ಮಾಡಿ, ನಾಯಿಯನ್ನು ನೋಡಿದನು. ಇದರಿಂದ ಇರುಸು-ಮುರುಸಾದ ನಾಯಿ, ಇಲಿಯನ್ನು "ಲೇ, ಸಾಕು ಬಾಯಿ ಮಚ್ಚು. ಏನೇನೋ ಹೇಳಬೇಡ, ನಾನು ಸುಮ್ನೆ ಅಲ್ಲಿ ನಿಂತು ನೇಸರ ಮುಳುಗೋದನ್ನ ನೋಡ್ತಿದ್ದೆ" ಸುಳ್ಳು ಹೇಳ್ತಿರೋದನ್ನು ತೋರಿಸ್ತು.

ಇದನ್ನು ಕಂಡು ಮನ್ಸ "ನಾನೇಕೆ, ಈ ನಾಯಿಯನ್ನೇ ನನ್ನ ಜೊತೆ ಎಂದು ಅಂದುಕೊಂಡು ಬದುಕಬಾರದು." ಅವನಿಗೆ ಅದೇ ಸರಿ, "ತನಗೆ ಯಾರು ಇಲ್ಲದಿದ್ರೂ, ತಾನೇ ಯಾರನ್ನಾದ್ರು, ಯಾವುದನ್ನಾದ್ರು ನನ್ನದು ಎಂದು ಮಾಡಿಕೊಂಡ್ರಾಯ್ತು. ಅದೇ ಬದುಕು."
ಎಂದು ಅಂದಕೊಂಡು, ಆ ನಾಯಿ, ಇಲಿಗಳ ಕೂಟ ಮರಳಿದ.

  • ಕತೆ
~.~
  • mahesha ರವರ ಬ್ಲಾಗ್
  • Login or register to post comments
  • 272 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸತ್ತ ನಾಯಿಗಾಗಿ...!!!
  • ಒಂದು ನಾಯಿ ಕತೆ
  • ಒಂದು ಕಥೆ, ಒಂದುವ್ಯಥೆ
  • ನಾಯಿ
  • ವಿಚಿತ್ರವಾದರೂ ನಿಜ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಪರಿಚಯ

ನನಗೆ ಎಲ್ಲ ಗೊತ್ತಿಲ್ಲ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 25 ಅತಿಥಿಗಳು ಆನ್ಲೈನ್ ಇರುವರು.


ಧರ್ಮವಿಲ್ಲದ ವಿಜ್ಞಾನ ಹೇಗೆ ಕುಂಟೋ ಹಾಗೆಯೇ ವಿಜ್ಞಾನವಿಲ್ಲದ ಧರ್ಮ ಕುರುಡು.

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator