ಲೇಟಾಗೆದ್ದು ಐಟಿಗಣ್ಣ
"ಮುಂಜಾನೆದ್ದು ಕುಂಬಾರಣ್ಣ" ಹಾಡು ನೆಪ್ಪಾಗಿ..
ಲೇಟಾಗೆದ್ದು ಐಟಿಗಣ್ಣ
ಬ್ರಡ್ಡು ಬನ್ ತಿಂದ್ಯಾನ,
ಹಾರ್ಯಾಡಿ keyboard ಕುಟ್ಯಾನ. ( ಈ ಹಾರಾಟ ಬೇರೆ
)
ಹಾರಿ ಹಾರ್ಯಾಡಿ keyboard ಕುಟ್ಟುತ್ತ ಮಾಡ್ಯಾನ
ನೂರಾರು ಬಗ್ಗುಗಳ ಸಾಪ್ಟವೇರಾ..
ದಿನಕ್ ನಾಲ್ಕು ಮೀಟಿಂಗ್
ವಾರಕ್ ಎರಡು ಕಾನ್ಪೊರೆನ್ಸು
ತಿಂಗಳಿಗೊಂದು roadmap ಮಾಡ್ಯಾನ
ತಿಂಗಳ್ಗೊಂದು roadmap ಮಾಡ್ಯಾನ ಹಾರ್ಯಾಡಿ
ಅದ್ರೂನೂ deadline ಮುಟ್ಟಕ್ಕಾಗಲ್ಲ
ಮುಂದೆ ಹೊಳೀತಿಲ್ಲ ![]()

- mahesha ರವರ ಬ್ಲಾಗ್
- Login or register to post comments
- 536 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಲೇಟಾಗೆದ್ದು ಐಟಿಗಣ್ಣ
ನಡು ನಡುವೆ ಸಂಪದ ಸೈಟನ್ನು ವಿಸಿಟ್ ಮಾಡ್ತಾನಾ...
*ಅಶೋಕ್
ಉ: ಲೇಟಾಗೆದ್ದು ಐಟಿಗಣ್ಣ
ಸೊಗಸಾಗಿದೆ ನಿಮ್ಮ ಕಲ್ಪನೆ,ಇದು ಹೀಗೆ ಮುಂದುವರೆದರೆ ಹೇಗೆ...
ಲೇಟಾಗಿ ಮನೆಗೆ ಬಂದು ಐಟಿಗಣ್ಣ
ಮನೆಯವರ ನಿದ್ದೆ ಕೆಡಿಸ್ಯಾನ
ಮನೆಯವರ ನಿದ್ದೆಯಾ ಕೆಡಿಸ್ಯಾನ ಹಾರ್ಯಾಡಿ
ಮನೇಲಿದ್ದು ಇಲ್ಲದಹಂಗ ಬದಿಕ್ಯಾನ
ಅಮರ್
ಉ: ಲೇಟಾಗೆದ್ದು ಐಟಿಗಣ್ಣ
ಬೊಂಬಾಟ್..
ಏನ್ ಮಾಡೋದು ಸಾರ್.. ನಾವು ಬದುಕ್ವೇಕಲ್ಲ

- ಮಾಯ್ಸ
ಉ: ಲೇಟಾಗೆದ್ದು ಐಟಿಗಣ್ಣ
ಯಾವ್ಯಾವ ಜಾವ್ದಲ್ಲೋ
ಕಣ್ಗೆಣ್ಣೆ ಬಿಟ್ಗೊಂಡು
ಜಾವಾದ ಕೋಡು ಬರೆದಾನ,
ಜಾವಾದ ಕೋಡು ಬರೆದಾನ ಐಟಿಗಣ್ಣ
ಕಂಪೈಲೇ ಆಗದೆ ಕಂಪಿಸ್ಯಾನ.
ಉ: ಲೇಟಾಗೆದ್ದು ಐಟಿಗಣ್ಣ
ಐಟಿಗಿತ್ತಿಯಮ್ಮ ( ತಮಾಷೆ )
ಸೂಪರ್.
- ಮಾಯ್ಸ
ಉ: ಲೇಟಾಗೆದ್ದು ಐಟಿಗಣ್ಣ
ಮಹೇಶರೇ,
ಮಾಯ್ಸ ಎಂದರೇನು? - ಮಹೇಶನೆಂದೇ
ಅಚ್ಚಗನ್ನಡದ ಪದಭಂಡಾರವಾದ ನೀವು "ಸೂಪರ್" ಎಂದದ್ದು ಸೋಜಿಗ !
(ತಮಾಷೆ)
ಉ: ಲೇಟಾಗೆದ್ದು ಐಟಿಗಣ್ಣ
ನನ್ ಕುಟೇ ಇರೋ ಸುಮಾರ್ ಎಲ್ರೂ ನನ್ ಮಾಯ್ಸಾ ಅಂತವೇ ಕರೇಯೋದು. ಅದೇ ನಂಗೂ ಶಾನೆ ಇಸ್ಟ.
'ಸೂಪರ್'.. ಇದು ಸುಮ್ನೇ ಹಿಂಗೇ ಬೆಂಗಳೂರುಗೆ ಬಂದು ಕಲ್ತಿದ್ದು.
ಬೇಡಬುಡಿ, ನಿಮ್ ಸಾಲುಗೊಳು 'ಬೊಂಬಾಟಾಗವೆ'
- ಮಾಯ್ಸ
ಉ: ಲೇಟಾಗೆದ್ದು ಐಟಿಗಣ್ಣ
ಮಹೇಶ ಈ ಪದ್ಯವನ್ನು ಇನ್ನೂ ಬೆಳೆಸುತ್ತಾನೆಂದೆಣಿಸಿದ್ದೆ. ಆದರೆ ಯಾಕೋ ಕಳೆದೆರೆಡು ದಿನಗಳಿಂದ ಸಿಕ್ಕಾಪಟ್ಟೆ ಕೆಲಸದಲ್ಲಿ ಸಿಕ್ಕಿಹಾಕಿಕೊಂಡಿರಬೇಕು. ಈ ಐಟಿಯಣ್ಣ ಧಾಟಿಯಲ್ಲಿ, ಐಟಿಯಕ್ಕ, ಐಟಿಯಮ್ಮ, ಐಟಿಯಪ್ಪ ಇವರುಗಳು ಹೇಗೆ ಸ್ಪಂದಿಸಬಹುದು ?
ಉ: ಲೇಟಾಗೆದ್ದು ಐಟಿಗಣ್ಣ
ಕೆಲ ಆಯದ ಕೆಲಸಗಳಿದ್ದುವು.!
ಆಯ=private
ನಾನಿಲ್ಲದಿದ್ದರೇನಂತೇ ಹಾಡು ಮುಂದುವರಿದೆ.. ಎಲ್ಲರಿಗೂ ನಲ್ಮೆ.!
- ಮಾಯ್ಸ
ಉ: ಲೇಟಾಗೆದ್ದು ಐಟಿಗಣ್ಣ
ಮೇಲ್ ಮೇಲೆ ಮಾತಾಡ್ಕಮ್ದ್
ಮೋಬೈಲ್ಗೆ ಮುತ್ ಕೊಟ್ಕಮ್ದ್
ಮೂರೊತ್ತು ಗೂಗಲ್ಗೆ ನೇತಾಡ್ಕಮ್ಡು||ಐಟಿಯಣ್ಣ
ಲೋಕಾನೆ ಸುತ್ಟೌನೆ ಕೂತಕಡೆನೇ
ಉ: ಲೇಟಾಗೆದ್ದು ಐಟಿಗಣ್ಣ
- ಮಾಯ್ಸ
ಉ: ಲೇಟಾಗೆದ್ದು ಐಟಿಗಣ್ಣ
ಸಕತ್ತಾಗ್ ಬರ್ದಿದ್ದೀಯ ಕಣಣ್ಣೋ ಪಾಯ್ಸಣ್ಣ!!
ಉ: ಲೇಟಾಗೆದ್ದು ಐಟಿಗಣ್ಣ
ನಾನು ಪಾಯ್ಸಣ್ಣ ಅಲ್ಲ, ಬುದ್ದಿ!
- ಮಾಯ್ಸ