ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › mahesha ರವರ ಬ್ಲಾಗ್

ದೇವರ ದರುಶನ, ಪೂಜೆಗಿಂತ ಚರುಪೇ ಮುಕ್ಯವಾದಾಗ!

April 23, 2007 - 8:35pm — mahesha

ಈ ವೀಕೆಂಡು ನಮ್ಮೂರಿನ ಶಂಕರ ಮಟಕ್ಕೆ ಹೋಗಿದ್ದೆ. ಶಂಕರ ಜಯಂತಿಯ ಯಾವುದೋ ಕಾರ್ಯಕ್ರಮಕ್ಕೆ ನನ್ನಮ್ಮನಂನು ಬಿಡಲು. ಅವಳೋ "ಇಲ್ಲಿಗೆ ಬಂದಾಗಿದೆಯಲ್ಲ, ಇನ್ನೇನು ಮಂಗಳಾರತಿ ಇರೋ" ಅಂದಳು. ಸರಿ ಆಯ್ತು ಇದ್ದೇ. ಏನು ಒಂದು ಇಪ್ಪತ್ತರಿಂದ ಮುವ್ವತ್ತು ಮಂದಿ. ಹೆಂಗಸರೇ ಮೆಜಾರಿಟಿ. ನಮ್ಮ ಹಣ್ಣೂಕಾಯಿ ಆಯಿತು. ಮಂಗಳಾರತಿಯೂ ಆಯಿತು.

ಮಂಗಳಾರತಿ, ತೀರ್ತ ಪಡೆದು ಚರುಪು(ಪ್ರಸಾದ) ತಿಂನದೇ ಹೋಗಕ್ಕೆ ಆಗುತ್ಯೇ? ಅಂತ ಪ್ರಸಾದ ಸಾಲಿಗೆ ಹೋದರೆ, ಅದೆಲ್ಲಿದ್ರಪ್ಪ ಜನ, ಇಲ್ಲಾ ಅಂದ್ರು ನೂರು ಮಂದಿ ಬಂದು ಮುತ್ತಿಕೊಂಡಿ ಇದ್ರು. ಇದನ್ನ ನೋಡಿ ನಾನು ನನ್ನಮ್ಮ ಸೀದಾ ಮನೆಗೆ ಹೋದ್ವು.

ಇಲ್ಲಿ ನಂಗೆ ಚರುಪು ಸಿಗನಿಲ್ಲ ಅಂತ ಬೇಜಾರಿಲ್ಲ. Smiling

ಆದ್ರೆ ಯಾವಾಗಲೂ ಹಿಂಗೇ, ಎಲ್ಲ ಗುಡಿಗಳಲ್ಲೂ ಹಿಂಗೆ, ಪೂಜೆಗೆ, ಸಂಗೀತೋತ್ಸವಕ್ಕೆ, ಅದ್ಯಾಕೆ ಹರಿಕತೆಗೂ ಜನ ಇರುಲ್ಲ. ಆದರೆ ಚರುಪಿಗೆ ಮಾತ್ರ ನೂಕುನುಗ್ಗಲು.

  • ಉಂಕು
~.~
  • mahesha ರವರ ಬ್ಲಾಗ್
  • Login or register to post comments
  • 640 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 23, 2007 - 11:51pm — ವೈಭವ

ಉ: ದೇವರ ದರುಶನ, ಪೂಜೆಗಿಂತ ಚರುಪೇ ಮುಕ್ಯವಾದಾಗ!

ವೈಭವ's picture

ನನಗೆ ಈ ದಾಸರ ಪದ ನೆನಪಿಸಿತು Smiling

"ಎಲ್ಲರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ..." - ಪುರಂದರ ದಾಸರು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 24, 2007 - 1:18am — hamsanandi

ಉ: ದೇವರ ದರುಶನ, ಪೂಜೆಗಿಂತ ಚರುಪೇ ಮುಕ್ಯವಾದಾಗ!

hamsanandi's picture

Quote:
ನನಗೆ ಈ ದಾಸರ ಪದ ನೆನಪಿಸಿತು Smiling

"ಎಲ್ಲರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ..." - ಪುರಂದರ ದಾಸರು

ಇದನ್ನು ಹೇಳಿದ್ದು ಕನಕದಾಸರು ..

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 24, 2007 - 3:35am — anivaasi

ಉ:

anivaasi's picture

Quote:
ಇದನ್ನು ಹೇಳಿದ್ದು ಕನಕದಾಸರು .. -ಹಂಸಾನಂದಿ
ಇಲ್ಲ, ಪುರಂದರ ದಾಸರೇ. ಅಂಕಿತ ಸಾಲು "ಸಿರಿ ಪುರಂದರನ ಧ್ಯಾನವು ಮುಕ್ತಿಗಾಗಿ" ಅಂತಿದೆ.

ಹಾಗೆ ಕನಕದಾಸರು ಬರೆದಿರಲಿಕ್ಕಿಲ್ಲ ಅಲ್ಲವೆ? Smiling
  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 24, 2007 - 4:54am — ವೈಭವ

ಉ:

ವೈಭವ's picture

ಅನಿವಾಸಿಗಳೆ,

ಪದ ಜೋಡಿಕೆ ನೋಡಿದರೆ ಪುರಂದರ ದಾಸರೇ ಅಂತ ನನಗೂ ಅನ್ನಿಸುತ್ತಿದೆ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 24, 2007 - 7:06am — anivaasi

ಉ:

anivaasi's picture

ಹಂಸಾನಂದಿಯವರು ಹೇಳಿದ ಹಾಗೆ ಈ ಕೆಳಗಿನ ಪ್ರಸ್ತುತಿಯ ಕಡೆಯಲ್ಲಿ ಕನಕದಾಸರ ಅಂಕಿತವಿದೆ!

http://www.kannadaaudio.com/Songs/Devotional/BhakthiSowrabha/Ellaaru.ram

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 24, 2007 - 11:34pm — hamsanandi

ಉ:

hamsanandi's picture

ವೈಭವ ಮತ್ತು ಅನಿವಾಸಿ ಅವರೆ, ಮೊದಲು ನಾನು ಬರೆದ ಮಾತನ್ನು ಸ್ವಲ್ಪ ಬದಲಾಯಿಸಬೇಕಾಗುತ್ತೆ Smiling ನೀವು ಹೇಳಿದ್ದೂ ಸರಿ, ನಾನು ಹೇಳಿದ್ದೂ ಸರಿ!

ಎಲ್ಲ ಹರಿದಾಸರ ಮೂಲಭೂತ ಮೌಲ್ಯಗಳು ಒಂದೇ ಆದುದ್ದರಿಂದ, ಒಂದೇ ತರಹದ ರಚನೆಗಳನ್ನು ಅವರು ಮಾಡಿದ್ದರೂ ಆಶ್ಚರ್ಯವಿಲ್ಲ. ನಾನು ಇಲ್ಲಿಯವರೆಗೆ ತಿಳಿದಿದ್ದ ಎಲ್ಲರು ಮಾಡುವುದು ಎಂಬ ರಚನೆ ಕನಕದಾಸರದ್ದು. ಆದರೆ, ಸ್ವಲ್ಪ ಹುಡುಕಿ ನೋಡಲಾಗಿ, ಪುರಂದರ ದಾಸರದ್ದೂ ಆ ರೀತಿ ಒಂದು ರಚನೆ ಇದೆ ಎಂದು ತಿಳಿದುಬಂತು.

ಎಲ್ಲರಿಗೂ ಅನುಕೂಲವಾಗಲಿ ಎಂದು ಎರಡನ್ನೂ ಇಲ್ಲಿ ಬರೆದ್ದೇನೆ. ನನಗೆ ತಿಳಿದ ಮಟ್ಟಿಗೆ, ಕನಕದಾಸರ ರಚನೆ ಸ್ವಲ್ಪ ಹೆಚ್ಚಾಗಿ ಪ್ರಚಲಿತದಲ್ಲಿದೆ. (ಸಾಧಾರಣವಾಗಿ, ಎಲ್ಲಾ ಚರಣಗಳನ್ನೂ ಹಾಡುವುದಿಲ್ಲ)

ಎಲ್ಲರು ಮಾಡುವುದು ಹೊಟ್ಟೆಗಾಗಿ - ಕನಕದಾಸರು
  
ಪಲ್ಲವಿ:

ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ತುತ್ತು ಹಿಟ್ಟಿಗಾಗಿ

ಚರಣಗಳು:

ವೇದಶಾಸ್ತ್ರ ಪಂಚಾಂಗ ಓದಿಕೊಂಡು ಪರರಿಗೆ
ಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ

ಅಂಗಡಿಗಳನ್ನೆ ಹೂಡಿ ವ್ಯಂಗ್ಯ ಮಾತುಗಳನ್ನಾಡಿ
ಭಂಗಬಿದ್ದು ಗಳಿಸುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ

ಬೆಲ್ಲದಂತೆ ಮಾತನಾಡಿ ಎಲ್ಲರನು ಮರಳುಮಾಡಿ
ಸುಳ್ಳು ಬೊಗಳಿ ತುಂಬುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ

ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿ
ನಾನಾ ವೇಷಂಗಳೆಲ್ಲ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ

ಹಳ್ಳದಲ್ಲಿ ಕುಳಿತುಕೊಂಡು ಕಲ್ಲು ದೊಣ್ಣೆ ಹಿಡಿದುಕೊಂಡು
ಕಳ್ಳತನವ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ

ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್‍ಬಲಗೂಡಿ
ಚಂದದಿಂದ ಮೆರೆವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ

ಉನ್ನತ ನೆಲೆಯಾದಿ ಕೇಶವನ ಧ್ಯಾನವನ್ನು
ಮನಮುಟ್ಟಿ ಮಾಡುವುದು ಮುಕ್ತಿಗಾಗಿ ಆನಂದಕ್ಕಾಗಿ

 ಎಲ್ಲರೂ ಮಾಡುವುದು ಹೊಟ್ಟೆಗಾಗಿ - ಪುರಂದರದಾಸರು

ಪಲ್ಲವಿ:

ಎಲ್ಲರು ಮಾಡುವುದು ಹೊಟ್ಟಗಾಗಿ ಗೇಣು ಬಟ್ಟೆಗಾಗಿ
ಅನುಪಲ್ಲವಿ:

ಸಿರಿ ವಲ್ಲಭನ ಭಜಿಸುವುದು ಮುಕ್ತಿಗಾಗಿ

ಚರಣಗಳು:
ಪಲ್ಲಕ್ಕಿಯ ಹೊರುವುದು ಹೊಟ್ಟೆಗಾಗಿ ದೊಡ್ಡ ಮಲ್ಲರೊಡನಾಡುವುದು ಹೊಟ್ಟೆಗಾಗಿ
ಸುಳ್ಳಾಗಿ ಪೊಗಳುವುದು ಹೊಟ್ಟೆಗಾಗಿ ಸಿರಿ ವಲ್ಲಭನ ಧ್ಯಾನವು ಮುಕ್ತಿಗಾಗಿ

ದೊರೆತನ ಮಾಡುವುದು ಹೊಟ್ಟೆಗಾಗಿ ಕರಿ ತುರಗವೇರುವುದು ಹೊಟ್ಟೆಗಾಗಿ
ದುರಿತವ ಮಾಡುವುದು ಹೊಟ್ಟೆಗಾಗಿ ಸಿರಿ ಹರಿಯ ಭಜಿಸುವುದು ಮುಕ್ತಿಗಾಗಿ 

ಬೆಟ್ಟವ ಹತ್ತುವುದು ಹೊಟ್ಟೆಗಾಗಿ ಗಟ್ಯಾಗಿ ಕೂಗುವುದು ಹೊಟ್ಟೆಗಾಗಿ
ದಿಟವಾಗಿ ನಮ್ಮ ಶ್ರೀ ಪುರಂದರ ವಿಠಲನ್ನ ಧ್ಯಾನವು ಮುಕ್ತಿಗಾಗಿ 

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 24, 2007 - 11:38pm — ವೈಭವ

ಉ:

ವೈಭವ's picture

ವಾವ್.. ಪುರಂದರರ ಮತ್ತು ಕನಕದಾಸರ ಎರಡು ರಚನೆ ಹುಡುಕಿ ತಿಳಿಸಿಕೊಟ್ಟಿದ್ದಕ್ಕೆ ನನ್ನಿ.  ಹಾಗದರೆ ನನಗೆ ಇದುವರೆವಿಗೂ ಗೊತ್ತಿದ್ದು ಕನಕದಾಸರ "...ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 25, 2007 - 12:05am — ASHOKKUMAR

ಉ:

ASHOKKUMAR's picture

"ಮಲಯಮಾರುತ" ಚಿತ್ರದಲ್ಲಿ ಇರುವ ಹೊಟ್ಟೇಗಾಗಿ..ಹಾಡೂ ಕನಕದಾಸರದ್ದೇ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 25, 2007 - 2:55am — anivaasi

ಉ:

anivaasi's picture

ಶ್ರೀ ಬಿ.ವಿ.ಕಾರಂತರು ಜಡಭರತರ 'ಸತ್ತವರ ನೆರಳು' ನಾಟಕದ ತಮ್ಮ ಆಟದಲ್ಲಿ ಪುರಂದರ ದಾಸರ ಪದವನ್ನು ಬಳಸಿದ್ದಾರೆ. ನಾಟಕದಾದ್ಯಂತ, ಮಠದ ಆಗುಹೋಗುಗಳನ್ನು ಟೀಕಿಸುವುದಕ್ಕೆ ಪುರಂದರದಾಸರ ಹಾಡುಗಳನ್ನು ಬಳಸಿ ಎಪ್ಪತ್ತರ ದಶಕದಲ್ಲಿ ಒಂದು ಕೃತಿಯ ರಂಗದ ಅಳವಡಿಕೆಯ ಬಗ್ಗೆ ಅಲೆಯನ್ನೇ ಎಬ್ಬಿಸಿದ್ದರು. ಬಿ.ಜಿ.ಎಲ್.ಸ್ವಾಮಿಯವರು ಪುರಂದರದಾಸರ ಪದಗಳ ಬಳಕೆ ಮತ್ತು ಅಳವಡಿಸಿದ ರಾಗಗಳ ಬಗ್ಗೆ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಪುಟವಿಡೀ ಬರೆದು ವಿಮರ್ಶೆ ಮಾಡಿದ್ದನ್ನು ನೋಡಿದ್ದು ನೆನಪಿದೆ (ಓದಿದ್ದಲ್ಲ!). ಅಲ್ಲಿ ಬಳಸಿದ ರಾಗಗಳು ನಾಟಕೀಯವಾಗಿದ್ದು, ಶಾಸ್ತ್ರೀಯ ಪದ್ಧತಿ ಪಕ್ಕಕ್ಕಿಟ್ಟು, "ಜನಪದ" ಬಳಸುವ ಮಟ್ಟುಗಳನ್ನು ಹಾಕಿಕೊಂಡಿದ್ದರು. ಅದಕ್ಕಾಗಿ ಕಾರಂತರು ಬೆಂಗಳೂರಿನ ಅಜ್ಜಿಯಂದಿರು ಆ ಪದಗಳನ್ನು ಹಾಡುವ ಪರಿಯನ್ನು ಅವರ ಮನೆಗಳಿಗೆ ಹೋಗಿ ರೆಕಾರ್ಡ್ ಮಾಡಿಕೊಂಡು ಅವರ ಏರಿಳಿತಗಳನ್ನು ಅಭ್ಯಾಸ ಮಾಡಿದ್ದರು ಎಂದು ಕೇಳಿ ರೋಮಾಂಚನಗೊಂಡಿದ್ದೆ! ಬಿ.ವಿ.ಕಾರಂತರ ಸಂಗೀತ ಶೈಲಿಯನ್ನೇ ಅಭ್ಯಾಸಮಾಡುವ ಅಗತ್ಯವಿದೆ ಎಂದು ನನ್ನ ಯೋಚನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 26, 2007 - 5:43pm — ಶಿವ

ಉ:

ಶಿವ's picture

Quote:
ಶ್ರೀ ಬಿ.ವಿ.ಕಾರಂತರು ಜಡಭರತರ 'ಸತ್ತವರ ನೆರಳು' ನಾಟಕದ ತಮ್ಮ ಆಟದಲ್ಲಿ ಪುರಂದರ ದಾಸರ ಪದವನ್ನು ಬಳಸಿದ್ದಾರೆ.

ಈ ನಾಟಕದ ಹಾಡುಗಳ ಆಡಿಯೋ ಕ್ಯಾಸೆಟ್ ನನ್ನಲ್ಲಿದೆ..ಹಾಡುಗಳನ್ನು ಬಿ ವಿ ಕಾರಂತರೇ ಹಾಡಿದ್ದಾರೆ.ಹಾಡುಗಾರಿಕೆಯಲ್ಲಾಗಲೀ ಸಂಗೀತದಲ್ಲಾಗಲಿ ಯಾವುದೇ ಆಡಂಬರವಿಲ್ಲ.ಅದಕ್ಕೇ ಅದು ಇಷ್ಟವಾಗುತ್ತದೆ..ಈ ನಾಟಕವನ್ನು ಇನ್ನೂ ನೋಡ್ಲಿಲ್ಲ. ನೋಡ್ಬೇಕು.

ಇತ್ತೇಚೆಗೆ 'ಮ್ಯೂಸಿಕ ವರ್ಲ್ದ್'ನಲ್ಲಿ ಸಿ ಅಶ್ವಥ್ ಸಂಗೀತದಲ್ಲಿರುವ ರಂಗಗೀತೆಗಳ ಸಿಡಿ ನೋಡಿದ್ದೆ..ಅದರಲ್ಲಿ ಕಾಕನಕೋಟೆಯ 'ನೇಸರ ನೋಡು' ಮತ್ತು 'ಬೆಟ್ಟದಾ ತುದಿಯಲ್ಲಿ..' ಹಾಡುಗಳಿವೆ..ಇನ್ನೊಮ್ಮೆ ಹೋದಾಗ ಅದನ್ನು ತೆಗೆದುಕೊಳ್ಳಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 27, 2007 - 12:28pm — shreekant.mishrikoti

ಉ:

shreekant.mishrikoti's picture

'ಸತ್ತವರ ನೆರಳು' ನಾಟಕದ ಕ್ಯಾಸೆಟ್ಟು ನಿಮ್ಮಲ್ಲಿದೆ ಎಂದಿದ್ದೀರಿ. ಅದರಲ್ಲಿ ಬಿ.ವಿ.ಕಾರಂತರ 'ಗಿಳಿಯು ಪಂಜರದೊಳಿಲ್ಲಾ ' ಹಾಡು ಇದೆಯೇ? . ಅದೊಂದು ಅದ್ಭುತ ಹಾಡು . ಯಾರಾದರೂ ಮಹಾನುಭಾವರು ತೀರಿಕೊಂಡಾಗ ಆಕಾಶವಾಣಿಯಲ್ಲಿ ಸರಕಾರೀ ಸೂತಕ ಇರುವಾಗ ಈ ಹಾಡು ಕೇಳಿ ಬರುತ್ತದೆ. ಶೋಕರಸ ತುಂಬಿ ಹಾಡಿದ್ದಾರೆ . ನನಗೆ ಬಹಳ ಮೆಚ್ಚಿಗೆ ಯಾದ ಹಾಡು ಅದು.

(ಆದರೆ ನಮ್ಮ ಮನೆಯಲ್ಲಿ ಈ ಹಾಡು ನಿಷಿದ್ಧ ಯಾಕೆಂದರೆ ನನ್ನ ಅಕ್ಕ ಚಿಕ್ಕಂದಿನಲ್ಲಿ ತೀರಿಕೊಂಡಿದ್ದು ನನ್ನವ್ವನಿಗೆ ನೆನಪಾಗಿ . ದುಃಖಪಡುತ್ತಾಳೆ).

ಈ ಹಾಡು ನಿಮ್ಮ ಹತ್ತಿರ ಇರುವ ಕ್ಯಾಸೆಟ್ಟಿನಲ್ಲಿದ್ದರೆ . ಕ್ಯಾಸೆಟ್ಟಿನ ವಿವರ ತಿಳಿಸಿ . - ಹೆಸರು , ಕಂಪನಿ ಇತ್ಯಾದಿ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 27, 2007 - 1:29pm — mahesha

ಉ:

mahesha's picture

"ಗಿಳಿಯು ಪಂಜರದೊಳಿಲ್ಲ" ಈ ಹಾಡು ಅಮೃತಧಾರೆ ಸಿನಿಮಾಡಲ್ಲೂ ಇದೆ.

ಅದರ ಹಾಡನ್ನು ನೀವು ಕನ್ನಡಾಡಿಯೋ.ಕಾಂ ಇಲ್ವೇ musicindiaonline.com ಅಲ್ಲಿ ಕೇಳಬೋದು!
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 27, 2007 - 9:40pm — ಶಿವ

ಉ:

ಶಿವ's picture

ನನ್ನ ಹತ್ತಿರ ಇರುವುದು 'ಸತ್ತವರ ನೆರಳು' ಹಾಡುಗಳ ಕ್ಯಾಸೆಟ್..'ಸ ರಿ ಗ ಮ(sa re ga ma) ' ಆಡಿಯೊ ಕಂಪೆನಿ ..ಕ್ಯಾಸೆಟ್‍ನ ಹೆಸರು 'ಬಿ ವಿ ಕಾರಂತ್ ನಿರ್ದೇಶನದ ಸತ್ತವರ ನೆರಳು ನಾಟಕದ ಹಾಡುಗಳು;ಪುರಂದರ ದಾಸರ ಪಧ್ಯಗಳು' ಎಂದು..

ನಿಜ. ಆ ಕ್ಯಾಸೆಟ್‍ನಲ್ಲಿ ಗಿಳಿಯು ಪಂಜರದೊಳಿಲ್ಲ ಹಾಡಿದೆ..ಅಮೃತಧಾರೆ ಸಿನೆಮಾದಲ್ಲಿ ಆ ಹಾಡನ್ನು ಸಿ ಅಶ್ವಥ್ ಚೆನ್ನಾಗಿ ಹಾಡಿದ್ದಾರೆ..ಆದರೆ ಬಿ ವಿ ಕಾರಂತ್ ಹಾಡಿರುವುದು ನಂಗೆ ಹೆಚ್ಚು ಇಷ್ಟವಾಯಿತು..ಕೃಷ್ಣನ ಕುರಿತಾದ ಹಾಡೊಂದಿದೆ..ಅದೂ ಚೆನ್ನಾಗಿದೆ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 11, 2007 - 6:11pm — veena

ಉ: ದೇವರ ದರುಶನ, ಪೂಜೆಗಿಂತ ಚರುಪೇ ಮುಕ್ಯವಾದಾಗ!

veena's picture

veena.
ನಾನು ದೇವಸ್ಠಾನಕ್ಕೆ ಹೋದಾಗ ಹಾಕುವ ಮಾಮೂಲಿ ಅರ್ಜಿಗಳ ಜೊತೆಗೆ ಕೇಳುವುದೇನು ಗೊತ್ತ, ದೇವರೆ ಹೊರಗೆ ನಾನು ಬಿಟ್ಟು ಬಂದಿರುವ ಚಪ್ಪಲಿಯನ್ನು ಕಾಪಾಡು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 11, 2007 - 6:15pm — mahesha

ಉ: ದೇವರ ದರುಶನ, ಪೂಜೆಗಿಂತ ಚರುಪೇ ಮುಕ್ಯವಾದಾಗ!

mahesha's picture

ವೀಣಾರೆ

ನಾನು ಹಿಂದೊಂದು ಡುಂಡಿರಾಜರ ನಾಟಕ ಓದಿದ್ದೆನು. ಅದರ ಹೆಸರು ನೆಪ್ಪಿಲ್ಲ.

ಆದರಲ್ಲಿ ಚಪ್ಪಲಿಯೂ ದೇವರು. Smiling

ದೇವರು ಕಾಪಾಡುವವನು ಅಲ್ವಾ! ಚಪ್ಪಲಿಯೂ ನಮ್ಮ ಕಾಪಾಡುವುದು, ಆದುದರಿಂದ ಅದರಲ್ಲೂ ದೇವನಿದ್ದಾನಂತೆ!
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭಾರತೀಯ ಹಿಂದೂ ದೇವಸ್ಥಾನ ---- ಕೊಲಂಬಸ್
  • ಸಾಮಾನ್ಯ ತಿಳುವಳಿಕೆ
  • ಕನ್ನಡ ರಸಪ್ರಶ್ನೆ - ೬
  • ವೋಲ್ವೋ ಇಲ್ಲದ ಹೆಬ್ಬಾಳ
  • ಬಿಟ್ಟಿ ಉಪದೇಸದಿಂದ ತುಟ್ಟಿಯಾದವರು!
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 10:00am
  • kannadakanda
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:54am
  • madhava_hs
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 8, 2008 - 9:54am
  • kannadakanda
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:51am
  • anil.ramesh
    ಉ: ಮೊದಲ ಚಿತ್ರ
    September 8, 2008 - 9:43am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:28am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:15am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:05am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 8:40am
  • srinivasps
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 8:38am
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 210 ಅತಿಥಿಗಳು ಆನ್ಲೈನ್ ಇರುವರು.


ಕವಿತೆಯೆಂದರೆ ಶಬ್ದಗಳ ಹಂದರವಲ್ಲ, ಜೀವನದೆಡೆಗಿನ ಅನುಸಂಧಾನದ ದೃಷ್ಟಿಕೋನ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator